ವಿಷಯಕ್ಕೆ ಹೋಗು

ರಾಮಗಿರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶ್ರೀ ಕರಿಸಿದ್ದೇಶ್ವರ ಸ್ವಾಮಿ ಪುಣ್ಯಕ್ಷೇತ್ರ, ರಾಮಗಿರಿ ಹೋಬಳಿ, ಹೊಳಲ್ಕೆರೆ ತಾಲೂಕು ಚಿತ್ರದುರ್ಗ ಜಿಲ್ಲೆಯ.

ರಾಮಗಿರಿ
Ramagiri
ಹೋಬಳಿಗ
Country India
Stateಕರ್ನಾಟಕ
Districtಚಿತ್ರದುರ್ಗ
Area
 • Total೧೨.೨ km (೪.೭ sq mi)
Elevation
೭೧೦ m (೨,೩೩೦ ft)
Population
 (2001)
 • Total೧೪,೫೭೪
 • Density೧,೧೯೪.೫೯/km (೩,೦೯೪�೦/sq mi)
Time zoneUTC+5:30 (IST)
PIN
577 539
Telephone code08191
Vehicle registrationKA-16

ಇತಿಹಾಸ

[ಬದಲಾಯಿಸಿ]

ಶ್ರೀ ಕರಿಸಿದ್ದೇಶ್ವರ ಸ್ವಾಮಿ ರಾಮಗಿರಿ ಪುಣ್ಯಕ್ಷೇತ್ರ. ಬೆಟ್ಟ ಗುಡ್ಡಗಳ ನಡುವಿನ ರಾಮಗಿರಿ ಒಂದು ಸುಂದರ ತಾಣ. ಹಚ್ಚ ಹಸಿರಿನ ಬೆಟ್ಟದಲ್ಲಿ ನೆಲೆ ನಿಂತಿರುವ ದೇವಗೆ ನಿತ್ಯ ಪರಿಸರ ಅಭಿಷೇಕ. ನಿತ್ಯ ಸಹಸ್ರಾರು ಭಕ್ತರ ಭೇಟಿ ಮತ್ತು ಬೆಟ್ಟದ ಮುಂಭಾಗದ ಕಾಣುವ ಕೆರೆಯಿಂದಾಗಿ ಇಲ್ಲಿನ ಸೌಂದರ್ಯ ಮತ್ತಷ್ಟು ಹೆಚ್ಚಿದೆ. ಕೋಟೆಗಳ ನಾಡೆಂದೇ ಖ್ಯಾತಿಗಳಿಸಿರುವ ಚಿತ್ರದುರ್ಗ ಜಿಲ್ಲೆಯಲ್ಲಿ ಸುಪ್ರಸಿದ್ದ ಕ್ಷೇತ್ರವೆಂದೇ ಹೆಸರು ಪಡೆದಿರುವುದೇ ಹೊಳಲ್ಕೆರೆ ತಾಲೂಕಿನ ರಾಮಗಿರಿ ಸುಕ್ಷೇತ್ರ. ಇಲ್ಲಿ ಕನಸುಗಳು ಅರಳುತ್ತವೆ. ಮನಸುಗಳು ಸಂಭ್ರಮಿಸುತ್ತವೆ. ಭಕ್ತಿಯ ಜತೆಗೆ ಇಲ್ಲಿ ಪರಿಸರ ದೇವತೆಯೇ ಎದ್ದು ಬರುತ್ತಾಳೆ ಎಂಬ ಭಾವನೆ ಮೂಡುತ್ತದೆ.


ರಾಮಗಿರಿ ಕ್ಷೇತ್ರ 21 ದೇವಾಲಯಗಳನ್ನು ಒಳಗೊಂಡಿರುವ ಹೋಬಳಿ. ಇಲ್ಲಿ ಚರಂತ ದೇವರ ಮಠ, ವಿರಕ್ತಮಠ, ಮರಿದೇವರ ಮಠ ಇಲ್ಲಿದ. ಇಲ್ಲಿರುವ ಈ ಕರಿಸಿದ್ದೇಶ್ವರ ಸ್ವಾಮಿ ಮತ್ತು ವೀರಭದ್ರಸ್ವಾಮಿ ಬೆಟ್ಟ ಹತ್ತಲು 323 ಮೆಟ್ಟಿಲು ಹತ್ತಬೇಕು. ಬೆಟ್ಟವನ್ನು ಪ್ರವೇಶಿಸಿದಾಗ ಎಡಭಾಗದಲ್ಲಿ ಗಜಾನನ ದೇವಾಲಯ ಬಲಭಾಗದಲ್ಲಿ ಬಸವೇಶ್ವರ ದೇವಾಲಯ. ಮುನ್ನೆಡೆದರೇ ಅಲ್ಲಿ ಪಾದ ಘಟ್ಟ, ನಡುವೆ ಬೈರಸಿದ್ದೇಶ್ವರ ಸ್ವಾಮಿ ಗುಹೆ. ಮೆಲ್ಲನೇ ಏರುತ್ತಲೇ ಶ್ರೀ ಕರಿಸಿದ್ದೇಶ್ವರ ಸ್ವಾಮಿ ದೇವಾಲಯ ಮತ್ತು ಉದ್ಬವಲಿಂಗ ಗೋಚರವಾಗುತ್ತದೆ. ಬಲಭಾಗದಲ್ಲಿ ವೀರಭದ್ರೇಶ್ವರ ದೇಗುಲವೂ ರಾರಾಜಿಸುತ್ತದೆ.

ಪುರಾಣ ಪ್ರಸಿದ್ದ

[ಬದಲಾಯಿಸಿ]

ರಾಮಾಯಣದಲ್ಲಿ ಈ ತಾಣ ದಂಡಕಾರಣ್ಯವಾಗಿತ್ತು. ಶ್ರೀರಾಮ ಅಜ್ಞಾತ ವಾಸದಲ್ಲಿದ್ದಾಗ ಇಲ್ಲಿಗೆ ಬಂದು ತಂಗಿದ್ದ. ಶ್ರೀರಾಮನಿಗೆ ನಿತ್ಯ ಪೂಜೆ ಸಲ್ಲಿಸಲು ಇಲ್ಲಿ ಯಾವುದೇ ವ್ಯವಸ್ಥೆಗಳಿರಲಿಲ್ಲ. ಆಗ ಇಲ್ಲಿಗೆ ಬಂದ ಒಬ್ಬ ಋಷಿಮುನಿಯನ್ನು ಶ್ರೀರಾಮ ಪೂಜೆಗೆ ವ್ಯವಸ್ಥೆ ಮಾಡಿಕೊಡುವಂತೆ ಕೇಳಿಕೊಳ್ಳುತ್ತಾನೆ. ಆಗ ಋಷಿ ಅಲ್ಲಿ ಒಂದು ಲಿಂಗ ಉದ್ಭವವಾಗುವಂತೆ ಮಾಡಿದರು. ಪೂಜೆಗೆ ಬೇಕಾದ ನೀರಿಗಾಗಿ ಬೆತ್ತ (ಊರುಗೋಲು)ದಿಂದ ನೆಲ ಮುಟ್ಟಿ ನೀರು ಚಿಮ್ಮುವಂತೆ ಮಾಡಿ `ತೃಪ್ತಿಯಾಗುವಂತೆ ಪೂಜಿಸು' ಎಂದು ಹೇಳಿದರಂತೆ. ರಾಮ ಹಲವು ದಿನ ಇಲ್ಲಿ ತಂಗಿದ್ದರಿಂದ ಇದು `ರಾಮನಗಿರಿ' ಆಗಿ ಬರಬರುತ್ತ `ರಾಮಗಿರಿ' ಆಯಿತು ಎಂದು ಹಿರಿಯರು ದಂತಕತೆ ಹೇಳುತ್ತಾರೆ.

ದೇವರಿಗೆ ಕರಿಸಿದ್ದೇಶ್ವರ ಅಂತ ಹೆಸರು ಬಂದಿದ್ದಕ್ಕೂ ಒಂದು ಪವಾಡ ಕತೆಯಿದೆ. ಹಿಂದೆ ಹೈದರಾಲಿ ಬಾಗೂರು ಪಟ್ಟಣದ ಮೇಲೆ ಯುದ್ದ ಮಾಡಲು ಸೈನ್ಯ ಸಮೇತ ಇದೇ ಮಾರ್ಗದಲ್ಲಿ ಹೋಗುತ್ತಿದ್ದಾಗ ಇಲ್ಲಿ ಅವರ ಪ್ರೀತಿಯ ಪಟ್ಟದ ಆನೆ ಸಾವನ್ನಪ್ಪಿತು. ಬೆಟ್ಟದ ಮೇಲಿದ್ದ ದೇವರು ಸಾಧುವಿನ ವೇಷದಲ್ಲಿ ಬಂದು `ನಿನ್ನ ಆನೆ ಸತ್ತಿಲ್ಲ, ತಟ್ಟಿ ಎಬ್ಬಿಸು' ಎಂದು ಹೇಳಿತ್ತು. ರಾಜ ಆನೆಯನ್ನು ತಟ್ಟಿದಾಗ ಎದ್ದು ನಿಂತುಕೊಂಡಿತು. ಆನೆ (ಕರಿ)ಯನ್ನು ಬದುಕಿಸಿದ (ಸಿದ್ಧಿಸಿದ)ದೇವರಿಗೆ ಅಂದಿನಿಂದ ಕರಿಸಿದ್ದೇಶ್ವರ ಎಂದು ಹೆಸರು ಬಂತು. ನಂತರ ರಾಜ ಬಾಗೂರು ಪಟ್ಟಣಕ್ಕೆ ಹೇಗೆ ಹೋಗಬೇಕು ಎಂದು ಕೇಳಿದಾಗ ಇಲ್ಲಿನ ಜನ `ಮೂರು ಸಮುದ್ರಗಳನ್ನು (ಚನ್ನ ಸಮುದ್ರ, ಗುಂಡ ಸಮುದ್ರ, ಗಂಗಸಮುದ್ರ ಗ್ರಾಮದ ಹೆಸರುಗಳು) ದಾಟಿ ಹೋದರೆ ಬಾಗೂರು ಸಿಗುತ್ತದೆ ಎಂದರಂತೆ. ಆಗ ರಾಜ ಮೂರು ಸಮುದ್ರ ದಾಟಲಾಗುವುದಿಲ್ಲ ಎಂದು ಹೆದರಿ ವಾಪಸ್ ಹೋದನಂತೆ ಎಂದು ಗ್ರಾಮದ ಹಿರಿಯರು ಪುರಾಣ ಕತೆ ಹೇಳುತ್ತಾರೆ.

ದೇವಾಲಯದ ಒಳಗೆ ಒಂದು ಪುಷ್ಕರಣಿ ಇದೆ. ದೇವರ ಅಪ್ಪಣೆಯಂತೆ ವಿವಿಧ ರೋಗಗಳ ನಿವಾರಣೆಗಾಗಿ ಇಂದಿಗೂ ಇದರ ನೀರನ್ನು ಕೊಡಲಾಗುತ್ತದೆ. ಬರಗಾಲದ ಮುನ್ಸೂಚನೆಗೆ ಇದರಲ್ಲಿನ ನೀರು ಮೇಲೇರುತ್ತದೆ. ಮಳೆ ಬರುವ ಸೂಚನೆ ಇದ್ದರೆ ನೀರು ಕೆಳಕ್ಕೆ ಹೋಗುತ್ತದೆ' ಎಂದು ಅನುಭವಿಗಳು ನುಡಿಯುತ್ತಾರೆ.

ಬೆಟ್ಟದ ಮೇಲಿರುವ ದೇವಾಲಯದೊಳಗೆ ಗಂಗಮ್ಮನ ಬಾವಿ ಇದೆ. ಇದು ಮಳೆ ಬಂದಾದ ನೀರು ತಳ ತಲುಪುತ್ತದೆ. ಮಳೆ ಬಾರದೇ ಬರ ಎದುರಾಗುವ ವೇಳೆ ಬಾವಿ ನೀರು ಮೇಲೆ ಬರುವ ಮೂಲಕ ಮುನ್ಸೂಚನೆ ನೀಡುತ್ತದೆ. ಈ ಬಾವಿ ಕಾಶಿಯಿಂದ ಸಂಪರ್ಕ ಇದೆ ಎಂಬ ನಂಬಿಕೆ. ಈ ನೀರು ಹಲವು ರೋಗಗಳಿಗೆ ಸಂಜೀವಿನಿಯಿದ್ದಂತೆ. ಬೆಟ್ಟದ ತುತ್ತ ತುದಿಯನ್ನ ಮೇಲ್ದುರ್ಗವೆಂದು ಕರೆಯುತ್ತಾರೆ ಇಲ್ಲಿಯೂ ಉದ್ಬವ ಲಿಂಗವಿದೆ. ಅದಕ್ಕೆ ಹರಿಹರೇಶ್ವರ ಎಂಬ ಹೆಸರಿದೆ.

ದೇವಾಲಯಗಳು

[ಬದಲಾಯಿಸಿ]

ಶ್ರೀ ಕರಿಸಿದ್ದೇಶ್ವರ ಸ್ವಾಮಿ ದೇವಾಲಯ.

೨. ಆಂಜನೇಯಸ್ವಾಮಿ ದೇವಾಲಯ.

೩. ಕರಿಯಮ್ಮ ದೇವಿಯನ್ನು. ಊರಿನ ಗ್ರಾಮದೇವತೆ. ಪ್ರತಿ ವರ್ಷವೂ ತೇರು ನಡೆಯುತ್ತದೆ.

೪. ವೀರಭದ್ರಸ್ವಾಮಿ ದೇವಾಲಯ.

೬. ಈಶ್ವರ ದೇವಾಲಯ.

೭. ಗಣಪತಿ ದೇವಾಲಯ

ಮಠಗಳು

[ಬದಲಾಯಿಸಿ]

ಚರಂತ ದೇವರ ಮಠ

೨. ವಿರಕ್ತಮಠ

೩. ಮರಿದೇವರ ಮಠ

ಕಾರ್ತಿಕೋತ್ಸವ

[ಬದಲಾಯಿಸಿ]

ಬಟ್ಟೆಯನ್ನು ಸಿಂಬೆ ರೀತಿ ಸುತ್ತಿ ತಯಾರಾದ ದೀಪಗಳನ್ನು ಬೆಟ್ಟದ ತುಂಬಾ ಮತ್ತು ಬೆಟ್ಟಕ್ಕೆ ಹತ್ತುವ ಪ್ರತಿ ಮೆಟ್ಟಿಲುಗಳ ಎರಡು ಬದಿ ಹಚ್ಚುವ ಮೂಲಕ ದೀಪೋತ್ಸವ & ಕಾರ್ತಿಕ ನಡೆಯುತ್ತದೆ. ಕಾರ್ತಿಕ ದೀಪೋತ್ಸವ ಎಂದೇ ಖ್ಯಾತಿಗಳಿಸಿದೆ.

ಬಾಳೆ ಪರಿಷೆ

[ಬದಲಾಯಿಸಿ]

ಈ ಜಾತ್ರೆಯ ವಿಶೇಷ ಬಾಳೆಹಣ್ಣಿನ ಪರಿಷೆ. ಉತ್ಸವದ ಕೇಂದ್ರ ಬಿಂದುವೆಂದರೇ ಬಾಳೆಹಣ್ಣಿನ ರಾಶಿ. ಭಕ್ತರು ಹರಕೆಯ ಬಾಳೆಹಣ್ಣುಗಳನ್ನು ಬೆಟ್ಟದ ಮುಂಭಾಗದ ದ್ವಾರ ಬಾಗಿಲು ಮುಂಭಾಗ ದೊಡ್ಡ ರಾಶಿ ಹಾಕಿ ಪೂಜೆ ಮಾಡುತ್ತಾರೆ. ಈ ರಾಶಿ ನೋಡಲು ಒಂದು ಸುಂದರ ಹಳದಿ ಬೆಟ್ಟದಂತೆ ಕಾಣುತ್ತದೆ. ನಂತರ ಈ ರಾಶಿ ಬಾಳೆಹಣ್ಣುಗಳನ್ನು ಪ್ರಸಾದವಾಗಿ ಹಂಚಲಾಗುತ್ತದೆ. ಇದರ ಜೊತೆ ಉತ್ಸವ ಹೂವಿನ ಉತ್ಸವ, ಕದಳಿ ಸೇವೆ, ಪಲ್ಲಕ್ಕಿ ಉತ್ಸವ, ವೀರಗಾಸೆ, ಭಜನೆ ಕಾರ್ಯಕ್ರಮಗಳು ನಡೆಯುತ್ತವೆ.

ಬಾಳೆ ಮಂಟಪ

[ಬದಲಾಯಿಸಿ]

ಕರಿಸಿದ್ದೇಶ್ವರ ಸ್ವಾಮಿ, ಆಂಜನೇಯ ಸ್ವಾಮಿ, ಕರಿಯಮ್ಮ ದೇವಿಯನ್ನು ಚರಂತ ದೇವರ ಮಠ ಮುಂಭಾಗ ಬಾಳೆ ದಿಂಡು, ವೀಳ್ಯದ ಎಲೆ ಮತ್ತು ನಾನಾ ರೀತಿ ಹೂಗಳನ್ನು ಬಳಸಿ ಮಂಟಪ ನಿರ್ಮಿಸಲಾಗುತ್ತದೆ. ಅಲ್ಲಿ ದೇವರನ್ನು ಪವಡಿಸಲಾಗುತ್ತದೆ. ಇದು ವಿಶೇಷವಾಗಿ ಬಾಳೆ ದಿಂಡಿನ ಮಂಟಪವಾಗಿರುತ್ತದೆ. ತಾವೂ ಕೂಡ ರಾಮಗಿರಿ ಕ್ಷೇತ್ರಕ್ಕೊಮ್ಮೆ ಭೇಟಿ ಕೊಡಿ. ಪವಾನರಾಗಿ.

ಎರಡು ದಾರಿಗಳು

[ಬದಲಾಯಿಸಿ]

ಇಲ್ಲಿ ಶ್ರಾವಣ ಬಂದರೆ ಸಾಕು ಎಲ್ಲಿಲ್ಲದ ಹಿಗ್ಗು. ಇನ್ನೂ ಕಡೇ ಕಾರ್ತಿಕ ಬಂದ್ರೆ ಊರ ಹಬ್ಬವೇ ನಡೆಯುತ್ತದೆ. ಇನ್ನು ಬೆಟ್ಟವನ್ನು ತಲುಪಲು ಎರಡು ದಾರಿಗಳಿವೆ. ಒಂದು ಮೆಟ್ಟಿಲುಗಳಿಂದ ಹತ್ತುವುದು 323 ಮೆಟ್ಟಿಲು. ಇನ್ನೊಂದು ಸಾಹಸದ ದಾರಿ. ಸಾಹಸ ಪ್ರವೃತ್ತಿಯ ಚಾರಣಿಗಳಿಗೆ ಕಲ್ಲು ಮುಳ್ಳಿನ ದಾರಿ ಇಷ್ಟವಾಗುತ್ತದೆ. ಬೆಟ್ಟದೊಳಗೊಂದು ರಸ್ತೆ ಇದ್ದು ಕಲ್ಲು ಮುಳ್ಳುಗಳ ಹಾದಿಯನ್ನು ಹಾಸುತ್ತದೆ.

ಮಳೆ, ಬೆಳೆ

[ಬದಲಾಯಿಸಿ]

ಇಲ್ಲಿಯ ಮುಖ್ಯ ಬೆಳೆ ಈರುಳ್ಳಿ, ತೆಂಗು, ಬಾಳೆ, ಅಡಿಕೆ, ರಾಗಿ, ಜೋಳಾ, ಮೆಕ್ಕೆಜೋಳ ಮಳೆ ಇಲ್ಲಿ ಬಹಳ ಕಡಿಮೆ. ೨ ವರ್ಷಕ್ಕೊಮ್ಮೆ ಮಳೆ ಆದದ್ದುಂಟು. ಆದಕಾರಣ ನೀರಿನ ಅಭಾವ ಹೆಚ್ಚು. ಮುಖ್ಯ ನೀರಿನ ಮೂಲವಾಗಿ ೩ ಕೆರೆಗಳಿವೆ.

ದೊಡ್ಡಕೆರೆ. ಸುಮಾರು ಒಂದೂವರೆ ಮೈಲಿಗಿಂತ ಹೆಚ್ಚು ವಿಸ್ತೀರ್ಣವಿದೆ. ಒಮ್ಮೆ ತುಂಬಿದರೆ, ವರ್ಷವೆಲ್ಲಾ ತೊಂದರೆ ಇಲ್ಲ.

ಕೇವಲ ಕುಡಿಯುವ ನೀರಿನ ಅಭಾವಕ್ಕಾಗಿಯೇ ಊರನ್ನು ಬಿಟ್ಟು, ವಲಸೆ ಹೋದವರು ಹಲವು ಮಂದಿ.

ಸಂಸ್ಥೆಗಳು

[ಬದಲಾಯಿಸಿ]
  • ಸರ್ಕಾರಿ ಶಾಲೆ
  • ಮಿಡ್ಲಿಸ್ಕೂಲು
  • ಸರ್ಕಾರಿ ಕಾಲೇಜು
  • ಪೋಸ್ಟ್ ಆಫೀಸ್'
  • ಪ್ರಾಥಮಿಕ ಆರೋಗ್ಯ ಕೇಂದ್ರ
  • ಬ್ಯಾಂಕ್

ಬೇರೆ ಯಾವ ದೊಡ್ಡ ಉದ್ಯಮಗಳಿಲ್ಲ. ರೈಲ್ವೆ ಸ್ಟೇಷನ್ ಕಿ.ಮಿ.ದೂರದಲ್ಲಿದೆ. ಪ್ರತಿ ಸೋಮವಾರ ಸಂತೆ ನಡೆಯುತ್ತದೆ. ರಸ್ತೆ ಪಕ್ಕದಲ್ಲೇ ವಾರದ ಸಂತೆ!]

ರಾಮಗಿರಿ ಕಾರ್ಯನಿಷ್ಠರು:

[ಬದಲಾಯಿಸಿ]
"https://kn.wikipedia.org/w/index.php?title=ರಾಮಗಿರಿ&oldid=703312" ಇಂದ ಪಡೆಯಲ್ಪಟ್ಟಿದೆ