ದೇವದುರ್ಗ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು


ದೇವದುರ್ಗ
ರಾಜ್ಯ
 - ಜಿಲ್ಲೆ
ಕರ್ನಾಟಕ
 - ರಾಯಚೂರು
ವಿಸ್ತಾರ
 - ಎತ್ತರ
7.43 km²
 - 398 ಮೀ.
ಸಮಯ ವಲಯ IST (UTC+5:30)
ಜನಸಂಖ್ಯೆ (2001)
 - ಸಾಂದ್ರತೆ
21,994
 - 2,960.16/ಚದರ ಕಿ.ಮಿ.
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - 584111
 - +91-08531
 - KA-36

ದೇವದುರ್ಗವು ರಾಯಚೂರು ಜಿಲ್ಲೆಯ ತಾಲ್ಲೂಕುಗಳಲ್ಲೊಂದು. ಇದರ ಪೂರ್ವದಲ್ಲಿ ರಾಯಚೂರು ತಾಲ್ಲೂಕು, ಪಶ್ಚಿಮದಲ್ಲಿ ಲಿಂಗಸೂಗೂರು ತಾಲ್ಲೂಕು, ಉತ್ತರಕ್ಕೆ ಕೃಷ್ಣಾ ನದಿ (ಗುಲ್ಬರ್ಗ ಜಿಲ್ಲೆ), ದಕ್ಷಿಣದಲ್ಲಿ ಮಾನ್ವಿ ತಾಲ್ಲೂಕುಗಳು ಗಡಿಗಳಾಗಿವೆ. ಡಿ.ಎಂ. ನಂಜುಂಡಪ್ಪ ವರದಿಯ ಪ್ರಕಾರ ದೇವದುರ್ಗವು ಕರ್ನಾಟಕದ ಅತ್ಯಂತ ಹಿಂದುಳಿದ ತಾಲ್ಲೂಕುಗಳಲ್ಲಿ ಒಂದಾಗಿದೆ. ಈ ತಾಲ್ಲೂಕಿನ ಸರಾಸರಿ ಸಾಕ್ಷರತೆಯು ಶೇ. 43 ಆಗಿದ್ದು, ಪುರುಷರ ಸಾಕ್ಷರತೆ ಶೇ. 50 ಹಾಗೂ ಮಹಿಳಾ ಸಾಕ್ಷರತೆ ಕೇವಲ ಶೇ. 36 ಇದೆ. ದೇವದುರ್ಗ ಪಟ್ಟಣದಲ್ಲಿ ಪುರಸಭೆ ಇದೆ.

"https://kn.wikipedia.org/w/index.php?title=ದೇವದುರ್ಗ&oldid=805524" ಇಂದ ಪಡೆಯಲ್ಪಟ್ಟಿದೆ