ಮಾನ್ವಿ
ಮಾನ್ವಿ ಮಾನವಿ | |
---|---|
City | |
ಜನಸಂಖ್ಯೆ (2011) | |
• ಒಟ್ಟು | ೪೬,೬೧೩ |
ಮಾನ್ವಿ ಅಥವಾ ಮಾನುವೆ (ಆಂಗ್ಲ: Manvi ) ನಗರ ಇದು ರಾಯಚೂರು ಜಿಲ್ಲೆಯ ಏಳು ತಾಲೂಕುಗಳಲ್ಲಿ ಒಂದು ತಾಲೂಕು ಕೇಂದ್ರ. ಇದು ದಾಸ ಸಾಹಿತ್ಯದ ಕೀರ್ತನಕಾರ ಜಗನ್ನಾಥದಾಸರು ಹುಟ್ಟಿದ ಊರು. ಮಾನವಿ ನಗರವು ಗುಡ್ಡ ಪ್ರದೇಶದಿಂದ ಸುತ್ತುವರೆಯಲ್ಪಟ್ಟಿದೆ. ಈ ಗುಡ್ಡ ಪ್ರದೇಶವು ಯಾಮಿನಿ ಪರ್ವತ ಶ್ರೇಣಿಗೆ ಸೇರಿದೆ. ಮಾನವಿ ಎಂಬ ಹೆಸರೇ ಸೂಚಿಸುವಂತೆ ಮಾನವೀಯತೆ ಮೆರೆಯುವಂತೆ ಪ್ರತಿಯೊಂದು ಗುಡ್ಡ ಪ್ರದೇಶವು ಪ್ರಮುಖ ಧರ್ಮಗಳನ್ನು ಪ್ರತಿನಿಧಿಸುತ್ತದೆ.ಸಬ್ಜಾಲಿ ಸತ್ತರೆ ದರ್ಗಾ ಬೆಟ್ಟವು ಇಸ್ಲಾಂ ಧರ್ಮವನ್ನು ಸೂಚಿಸಿದರೆ. ಮಲ್ಲಿಕಾರ್ಜುನ ಬೆಟ್ಟ ಹಿಂದೂ ಧರ್ಮವನ್ನು ಮತ್ತು ಕ್ರಿಶ್ಚಿಯನ ಬೆಟ್ಟ ಕ್ರೈಸ್ಟ ಧರ್ಮವನ್ನು ಪ್ರತಿನಿಧಿಸುವ ಮೂಲಕ ಮಾನ್ವಿಯ ಮಾನವೀಯತೆ ಇನ್ನಷ್ಟು ಬಲಪಡಿಸಿದೆ.
ಇತಿಹಾಸ[ಬದಲಾಯಿಸಿ]
ಮಾನುವೆ ಅಥವಾ ಈಗಿನ ಮಾನ್ವಿ ಕಲ್ಯಾಣಿ ಚಾಲುಕ್ಯರ ಕಾಲದ ಒಂದು ಪ್ರಸಿದ್ಧ ಪಟ್ಟಣ.ಇಲ್ಲಿ ಹಳೆಯ ಕೋಟೆಯ ಅವಶೇಷಗಳು ಇವೆ. ಇಲ್ಲಿ ಹಿಂದೆ ಚಿನ್ನದ ಗಣಿಗಾರಿಕೆ ಇತ್ತು ಎಂದು ಹೇಳಲಾಗುತ್ತದೆ.ಇಲ್ಲಿ ಚಾಲುಕ್ಯ ದೊರೆ ಒಂದನೇ ಸೋಮೇಶ್ವರನ ಕಾಲದ ಮಹಾಮಂಡಲೇಶ್ವರ ದೇವರಸನ ಆಳ್ವಿಕೆ ಸೂಚಿಸುವ 1052ರ ಶಾಸನವಿದೆ.ಸೇವನರನ್ನು(ಯಾದವರು) ಬೆನ್ನಟ್ಟಿ ಹೊಯ್ಸಳ ದೊರೆ ಎರಡನೇ ಬಲ್ಲಾಳ ಮಾನುವೆಯವರೆಗೆ ಬಂದಿದ್ದ ಎಂದು 13ನೇ ಶತಮಾನದ ಶಾಸನ ತಿಳಿಸುತ್ತದೆ.
ಹವಾಮಾನ[ಬದಲಾಯಿಸಿ]
ಮಾನವಿ ಬಯಲುಸೀಮೆ ಪ್ರದೇಶವಾದ್ದರಿಂದ ಇಲ್ಲಿಯ ಹವಾಮಾನದಲ್ಲಿ ವ್ಯತ್ಯಯ ಕಂಡುಬರುವುದಿಲ್ಲ. ವರ್ಷಪೂರ್ತಿ ಒಂದೇ ರೀತಿಯ ಹವಾಮಾನ ನಿರೀಕ್ಷಿಸಬಹುದಾಗಿದೆ.
ನೀರಾವರಿ[ಬದಲಾಯಿಸಿ]
ಇಲ್ಲಿ ಕೃಷಿ ಅನುಕೂಲಕ್ಕಾಗಿ ತುಂಗಭದ್ರ ಎಡ ದಂಡೆ ನೀರಾವರಿ ಯೋಜನೆಯ ಸೌಲಭ್ಯವಿದೆ.
ಪ್ರೇಕ್ಷಣೀಯ ಸ್ಥಳಗಳು[ಬದಲಾಯಿಸಿ]
ಮಾನವಿ ನಗರದ ಗುಡ್ಡದ ಮೇಲಿರುವ ಪುರಾತನ ಕೋಟೆ ಮತ್ತು ಮಲ್ಲಿಕಾರ್ಜುನ ದೇವಸ್ಥಾನ ೪೫೦ ವರ್ಷಗಳ ಹಿಂದಿನ ಇತಿಹಾಸ ಹೊಂದಿದೆ ಮತ್ತು ಒಂದೇ ಸ್ಥಳದಲ್ಲಿ ಒಟ್ಟು 5 ದೇವಸ್ಥಾನ ಇದ್ದು ಮಲ್ಲಿಕಾರ್ಜುನ ಪಾರ್ವತಿದೇವಿ ಶಂಕರಲಿಂಗ ಎಮ್ಮೆ ಬಸವಣ್ಣ ಮತ್ತು ಶ್ರೀ ಮಾರುತಿ ದೇವಸ್ಥಾನವು ಈ ನಗರದ ಪ್ರಮುಖ ಪ್ರೇಕ್ಷಣೀಯ ಸ್ಥಳ. ತಾಲೂಕಿನ ನಿರಮಾನವಿಯಲ್ಲಿ ವರ್ಷಕ್ಕೊಮ್ಮೆ ನಡೆಯುವ ಯಲ್ಲಮ್ಮ ದೇವಿಯ ಜಾತ್ರೆ ಪ್ರೇಕ್ಷಣೀಯ ಸ್ಥಳ.
ತಾಲೂಕಿನ ಪ್ರಮುಖರು[ಬದಲಾಯಿಸಿ]
- ಜಗನ್ನಾಥದಾಸರು, ದಾಸ ಸಾಹಿತ್ಯ ಪರಂಪರೆಯ ಪ್ರಮುಖ ಕೀರ್ತನಕಾರರು
- ಚನ್ನಬಸವಪ್ಪ ಬೆಟ್ಟದೂರು, ಹಿರಿಯ ಸ್ವಾತಂತ್ರ ಹೋರಾಟಗಾರರು, ರೈತ ಹೋರಾಟಗಾರರು, ವಿಚಾರವಾದಿಗಳು
- ಶಂಕರಗೌಡ ಬೆಟ್ಟದೂರು, ಹಿರಿಯ ಸ್ವಾತಂತ್ರ ಹೋರಾಟಗಾರರು, ಚಿತ್ರ ಕಲಾವಿದರಾದ *ವಾಜಿದ್ ಸಾಜಿದ* ಇವರ ಶಿಷ್ಯರಾದ *ವೆಂಕೊಬ ದೊಡ್ಡಿ*
- ಎನ್ ಬಿ ಓಡೆಯರಾಜ ಅರೋಲಿ,ಅಯ್ಯಪ್ಪ ಅರೋಲಿ, ಶಾಂತಪ್ಪ ದೊಡ್ಡಿ,ಚಂದ್ರಶೇಖರ ಅರೋಲಿ, ರಾಮಣ್ಣ ಸಿರವಾರ, ದೇವರಾಜ ಗುಡಿ, ಯಲ್ಲಪ್ಪ ನಕ್ಕುಂದಿ, ಭೀಮಣ್ಣ ಕೋನಂಟಿ
- ಶ್ರೀ ಜಿ ಹಂಪಯ್ಯ ನಾಯಕ ಶಾಸಕರು ಮಾನವಿ
- ಅಶೋಕ್ ನೀಲಗಲ್ ಕನಾ೯ಟಕ ರೈತ ಸಂಘ ಜಿಲ್ಲಾ ಅಧ್ಯಕ್ಷರು,
* ಚಂದ್ರಶೇಖರ ಮದ್ಲಾಪೂರು. ಯಂಕೋಬ ನಾಯಕ ಚೀಕಲಪರ್ವಿ, ವಕೀಲರು, ಪತ್ರಕರ್ತರು, ಸಾಹಿತಿಗಳು, ಹಾಗೂ ದಲಿತ ಮುಖಂಡರು ಮಾನವಿ.. ಪಿ ಲಕ್ಷ್ಮಣ್ ಸೀತಿಮಠ ಪಟಕನದೊಡ್ಡಿ.ಪ್ರಗತಿಪರ ರೈತರು, ಸಾಮಾಜಿಕ ಚಳವಳಿಗಾರರು ದಲಿತ ಹಿರಿಯ ಮುಖಂಡರು ಮಾನವಿ..
ಲೊಯೊಲ ಸಂಸ್ಥೆ[ಬದಲಾಯಿಸಿ]
ಕ್ರಿ. ಶ. 1540ರಲ್ಲಿ ಇಗ್ನೇಶಿಯಸ್ ಲೊಯೊಲನಿಂದ ಸ್ಥಾಪಿತವಾದ ಯೇಸು ಸಭೆಯು 2002ರಲ್ಲಿ 'ತಲುಪದವರನ್ನು ತಲುಪುವುದು' ಎಂಬ ಗುರಿಯನ್ನು ಇಟ್ಟು ಕೊಂಡು, ಮಾನವಿ ತಾಲ್ಲೂಕಿನಲ್ಲಿ 'ಲೊಯೊಲ ಸಂಸ್ಥೆ' ಆರಂಭಿಸಿದರು. ಬಡಮಕ್ಕಳಿಗೆ ಮತ್ತು ಸ್ತ್ರೀಯರಿಗೆ ಶಿಕ್ಷಣ ಒದಗಿಸುವಿಕೆ ಇದರ ಪ್ರಮುಖ ಆಶಯ.
ಸಾರಿಗೆ ಸಂಪರ್ಕ[ಬದಲಾಯಿಸಿ]
ಮಾನವಿ ನಗರವು ಜಿಲ್ಲಾ ಕೇಂದ್ರವಾದ ರಾಯಚೂರಿನಿಂದ ಸುಮಾರು ೫೦ ಕಿಲೋಮೀಟರ್ ದೂರವಿದೆ. ರಾಜ್ಯ ಹೆದ್ದಾರಿ ೨೩ ಮಾನವಿ ನಗರದ ಮೂಲಕ ಹಾಯ್ದು ಹೋಗುತ್ತದೆ. ಈ ನಗರವು ರಾಜ್ಯದ ಎಲ್ಲಾ ಪ್ರಮುಖ ನಗರಗಳಿಗೆ ಉತ್ತಮ ರಸ್ತೆ ಸಂಪರ್ಕವನ್ನು ಹೊಂದಿದೆ. ಮಾನವಿ ನಗರದಿಂದ ಹೈದರಾಬಾದ್ , ಮಂತ್ರಾಲಯ ಹಾಗೂ ಹುಬ್ಬಳ್ಳಿ ನಗರಗಳಿಗೆ ನೇರ ಬಸ್ ಸೌಲಭ್ಯವಿದೆ. ರಾಯಚೂರು ರೈಲ್ವೆ ನಿಲ್ದಾಣ ಮಾನವಿಗೆ ಹತ್ತಿರದ ರೈಲ್ವೆ ನಿಲ್ದಾಣವಾಗಿದೆ.
ಬಾಹ್ಯ ಅ೦ತರ್ಜಾಲ ಸ೦ಪರ್ಕಗಳು[ಬದಲಾಯಿಸಿ]
- -ಮಾನವಿ ಪಟ್ಣಣದ ಅಧಿಕೃತ ತಾಣ Archived 2016-03-04 ವೇಬ್ಯಾಕ್ ಮೆಷಿನ್ ನಲ್ಲಿ.