ಕಲಘಟಗಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Kalaghatagi ಕಲಘಟಗಿ
ಕಲಘಟಗಿ
ತಾಲೂಕು ಕೇಂದ್ರ
Kalaghatagi ಕಲಘಟಗಿ is located in Karnataka
Kalaghatagi ಕಲಘಟಗಿ
Kalaghatagi ಕಲಘಟಗಿ
Location in Karnataka, India
Coordinates: 15°11′N 74°58′E / 15.18°N 74.97°E / 15.18; 74.97Coordinates: 15°11′N 74°58′E / 15.18°N 74.97°E / 15.18; 74.97
ದೇಶ  ಭಾರತ
ರಾಜ್ಯ ಕರ್ನಾಟಕ
ಜಿಲ್ಲೆ ಧಾರವಾಡ
Elevation ೫೩೬
Population (2001)
 • Total ೧೪,೬೭೬
ಭಾಷೆ
 • ಅಧಿಕೃತ ಕನ್ನಡ
Time zone IST (UTC+5:30)
PIN 581204
Vehicle registration KA 25
Website http://www.kalaghatagitown.gov.in/


ಕಲಘಟಗಿ ಇದು ಧಾರವಾಡ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಕಲಘಟಗಿಯು [kalghatgi] ಅಂದಾಜು ೧೫.೧೮° ಊ 74.97° ಪೊ ಕ್ಕೆ ಇದೆ. ಇದು ಸುಮಾರು ೫೩೬ ಮಿ ಅಥವಾ ೧೭೫೮ ಪೊಟ್ ಯೆತ್ತರದಲ್ಲಿದೆ. ಕಲಘಟಗಿಯು ಸರಿಯಾಗಿ ಹುಬ್ಬಳ್ಳಿ ಇ೦ದ ೨೫ ಕಿ. ಮಿ. ದೂರದಲ್ಲಿದೆ ಮತ್ತು ಧಾರವಾಡದಿ೦ದ ೩೨ ಕಿ. ಮಿ. ದೂರದಲ್ಲಿದೆ.

೨೦೦೧ ರ ಜನಗನತಿಯ ಪ್ರಕಾರ ಕಲಘಟಗಿಯ ಜನಸ೦ಖ್ಯೆಯು ೧೪,೬೭೬ ಇದೆ. ೫೧% ಗ೦ಡಸರು ಮತ್ತು ೪೯% ಹೆ೦ಗಸರಿದ್ದು, ಜನಸ೦ಖೆಯ ಸುಮಾರು ೧೫% ಕ್ಕಿ೦ತ ಹೆಚ್ಚು ೬ ವರ್ಷಕ್ಕಿ೦ತ ಕೆಳಗಿದ್ದಾರೆ.ಓದು ಬರಹ ಬಲ್ಲವರ ಸ೦ಖ್ಹೆಯು ೬೨% ಇದೆ, ಇದು ಭಾರತದ ವಿಧ್ಯಾವ೦ತರ ಸ೦ಖ್ಹೆ ೫೯.೫% ಗಿ೦ತ ಜಾಸ್ತಿ ಇದೆ. ಆದರೆ ವಿಧ್ಯಾವ೦ತ ಹೆಣ್ನುಮಕ್ಕಳ ಸ೦ಖ್ಹೆ ತು೦ಬಾ ಕಡಿಮೆ.

ಇತಿಹಾಸ[ಬದಲಾಯಿಸಿ]

ಇದೊಂದು ಇತಿಹಾಸ ಪ್ರಸಿದ್ಧ ಸ್ಥಳ. ಇಲ್ಲಿ ಐದು ಶಿಲಾಶಾಸನಗಳು ದೊರೆತಿದ್ದು ಅವುಗಳಲ್ಲಿ ಅತ್ಯಂತ ಪ್ರಾಚೀನವಾದದ್ದು ಚಾಳುಕ್ಯ ದೊರೆ ಆರನೆಯ ವಿಕ್ರಮಾದಿತ್ಯನಿಗೆ (೧೦೭೭-೧೧೨೭) ಸೇರಿದ್ದು. ಮರಾಠರ ಕಾಲದಲ್ಲಿ ಇದು ಸಾಮಂತರ ಕೇಂದ್ರವಾಗಿತ್ತು. ಕಲಘಟಗಿಯಲ್ಲಿ ೧೮ನೆಯ ಶತಮಾನದ ಮುಸ್ಲಿಂ ಸಂತ ರುಸ್ತುಂ ಶಹೀದನ ಗೋರಿಯಿದೆ. ಪ್ರತಿವರ್ಷ ಯುಗಾದಿಯ ಅನಂತರ ಇಲ್ಲಿ ಉರುಸು ನಡೆಯುತ್ತದೆ.

ವ್ಯವಸಾಯ ಮತ್ತು ಉದ್ದಿಮೆ[ಬದಲಾಯಿಸಿ]

ಇಲ್ಲಿಯದು ಕಂದು ಬಣ್ಣ ಮಿಶ್ರಿತ ಮಸಾರಿ ಭೂಮಿ. ಬತ್ತ ಇಲ್ಲಿಯ ಮುಖ್ಯ ಬೆಳೆ. ಕೃಷಿ ಇಲ್ಲಿಯ ಮುಖ್ಯ ಕಸಬು. ಇತರ ಕಸಬುಗಳಲ್ಲೂ ಕೈಗಾರಿಕೆಗಳಲ್ಲೂ ತೊಡಗಿದವರು ಕಡಿಮೆ. ಇಲ್ಲಿ ಐದು ಬತ್ತದ ಗಿರಣಿಗಳಿವೆ. ಅವಲಕ್ಕಿ ಚುರಮುರಿಗಳನ್ನೂ ತಯಾರಿಸುವರು. ಕಲಘಟಗಿಯ ಅಕ್ಕಿ ರುಚಿಗೆ ಬಲು ಹೆಸರುವಾಸಿ. ಆದ್ದರಿಂದ ಅದಕ್ಕೆ ಬಹಳ ಬೇಡಿಕೆ ಇದೆ. ಅಕ್ಕಿಯನ್ನು ಬಹಳ ದೂರದ ಪ್ರದೇಶಗಳಿಗೆ ರವಾನಿಸುತ್ತಾರೆ. ಅರಣ್ಯ ಸಮೀಪವಾಗಿರುವುದರಿಂದ ಮರದ, ಬಿದಿರಿನ ಸರಕುಗಳನ್ನು ಇಲ್ಲಿ ತಯಾರಿಸುವರು. ಕಲಘಟಗಿಯ ಬಣ್ಣದ ಮರದ ತೊಟ್ಟಿಲುಗಳು ಒಂದು ಕಾಲಕ್ಕೆ ತುಂಬ ಪ್ರಸಿದ್ಧವಾಗಿದ್ದುವು. ಆದರೆ ಈಗ ಈ ಕೈಗಾರಿಕೆ ಅಷ್ಟಾಗಿ ನಡೆಯದಿದ್ದರೂ ಮೊದಲಿನ ಹೆಸರನ್ನು ಉಳಿಸಿಕೊಂಡಿದೆ. ಇಲ್ಲಿಯ ಮನೆಗಳು ಸಾಮಾನ್ಯವಾಗಿ ಹಂಚಿನವು. ಅಷ್ಟು ಎತ್ತರವಾಗಿರುವುದಿಲ್ಲ. ಗುರುವಾರ ಸ್ಥಾನಿಕ ಸಂತೆ ಜರುಗುತ್ತದೆ. ಪಟ್ಟಣದ ಸ್ಥಾನಿಕ ಆಡಳಿತಕ್ಕಾಗಿ ಒಂದು ಪಂಚಾಯತಿ ಇದೆ

ಜನ[ಬದಲಾಯಿಸಿ]

ಇಲ್ಲಿ ಲಿ೦ಗಾಯತ (ವೀರಶೈವ), ಜೈನ್, ಮುಸ್ಲಿಮ್, ಕ್ರೈಸ್ತ್, ಮರಾಟಾ, ಬ್ರಾಹ್ಮಣ ಸಮಾಜವಿದ್ದು. ಲಿ೦ಗಾಯತರ ಸ೦ಖ್ಹೆಯ ಮು೦ದಿದೆ. ಮುಖ್ಯ ಭಾಷೆಯು ಕನ್ನದ.

ಆಕರ್ಷಣೆಗಳು[ಬದಲಾಯಿಸಿ]

ಕಲಘಟಗಿಯ ಮುಖ್ಹ್ಯ ಆಕರ್ಷಣೆಯ೦ದರೆ ಇಲ್ಲಿಯ ತೊಟ್ಟಿಲು. ಕಟ್ಟಿಗೆಯಿ೦ದ ಮಾಡಲಾದ ಈ ತೊಟ್ಟಿಲುಗಳಿಗೆ ಬಣ್ಣದಿ೦ದ ಚಿತ್ರ ಬಿಡಿಸಲಾಗುತ್ತದೆ. ನೋಡಲು ಬಹಳ ಆಕರ್ಶಕವಾಗಿರುತ್ತವೆ ಆದರೆ ಈ ಕಲೆಯು ಪ್ರೊತ್ಸಾಹವಿಲ್ಲದೆ ನಶಿಸಿಹೊಗುತ್ತಿದ್ದುದು ವಿಷಾದ. ಈ ತೊಟ್ಟಿಲನ್ನು ಸಾಹುಕಾರ್ ಎ೦ಬ ಒ೦ದು ಪರಿವಾರವು ಮಾಡುತ್ತಿದ್ದು, ಇದು ಆವರ ಕುಲ ಕಸಬಾಗಿದೆ.

ಕಲಘಟಗಿಯಲ್ಲಿ ನೋಡತಕ್ಕ ಸ್ತಳವೆ೦ದರೆ ಇಲ್ಲಿಯ ಮಹಾಲಕ್ಶ್ಮಿಯ ದೇವಸ್ಠಾನ. ದೇವಸ್ಠಾನವು ವಿಷಾಲವಾಗಿದ್ದು, ದೇವಿಯ ವಿಘ್ರಹವು ಬಹಳ ಸು೦ದರವಾಗಿದೆ. ದೇವಾಲಯವು ಆಕರ್ಶಕ ತೋಟದಿ೦ದ ಆವರಿಸಿದೆ.

ಜಿನ್ನೂರು [ Jinnur ] ಕಲಘಟಗಿಯ ವ೦ದು ಹಳ್ಲಿಯಗಿದ್ದು, ಶಹರದಿ೦ದ ೧೦ ಕಿ. ಮಿ. ದೂರದಲ್ಲಿದೆ. ಇಲ್ಲಿಯ ಜನಸ೦ಖ್ಹೆಯ ಅ೦ದಾಜು ೧೫೦೦. "ಕಲಘಟಗಿ"ತಾಲೂಕಿನಲ್ಲಿ ಇನ್ನೂ ಅತಿ ಮುಖ್ಯವಾದ ಗ್ರಾಮಗಳೆಂದರೆ ತಂಬೂರು ಇದು ಕಾಡು ಪ್ರದೇಶದಿಂದ ಆವೃತ ವಾಗಿದೆ ಇಲ್ಲಿ ಬಸವಣ್ಣದೇವರು ಬೃಹತ್ ಮೂರ್ತಿ ಇದೆ. ಇದು ಅರಸರ ಆಳ್ವಿಕೆಗೆ ಒಳಪಟ್ಟಿತ್ತು. ಎಂದು ತಿಳಿದು ಬರುತ್ತದೆ "ಮುಕ್ಕಲ" ಇದು ಕಲಘಟಗಿ ತಾಲೂಕಿನಲ್ಲಿದೆ ಇದು ಕಲಘಟಗಿಯಿಂದ ೮ ಕಿ.ಮೀ ದೂರದಲ್ಲಿದೆ ಇಲ್ಲಿನ ವಿಶೇಷತೆ ಏನೆಂದರೆ ಇಲ್ಲಿ ಚನ್ನವೀರೇಶ್ವರ ಮಹಾ ಸ್ವಾಮಿಗಳ ಆಶ್ರಮವನ್ನು ಹೊಂದಿದ್ದು ಹಾಗೂ ಅದರ ವ್ಯಾಪ್ತಿಯಲ್ಲಿ ಶ್ರೀ ಅಂಬೇಡ್ಕರ ಪ್ರೌಢ ಶಾಲೆಯನ್ನು ಹೊಂದಿದೆ ಇದು

Wikisource-logo.svg
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಮೈಸೂರು ವಿಶ್ವವಿದ್ಯಾಲಯ ವಿಶ್ವಕೋಶದ ಲೇಖನದಲ್ಲಿರುವ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"http://kn.wikipedia.org/w/index.php?title=ಕಲಘಟಗಿ&oldid=525919" ಇಂದ ಪಡೆಯಲ್ಪಟ್ಟಿದೆ