ಮಾಯಕೊಂಡ
ಗೋಚರ
ಮಾಯಕೊಂಡ
ಮಾಯಕೊಂಡ | |
---|---|
Population (2017) | |
• Total | ೧,೪೫,೦೦೦ |
ಮಾಯಕೊಂಡ - ಭಾರತದ ಕರ್ನಾಟಕ ರಾಜ್ಯದ ದಾವಣಗೆರೆ ಜಿಲ್ಲೆಯ ಒಂದು ಊರು ಮತ್ತು ಹೋಬಳಿ ಕೇಂದ್ರ.
ಭೌಗೋಳಿಕ
[ಬದಲಾಯಿಸಿ]ದಾವಣಗೆರೆ ಆಗ್ನೇಯದಲ್ಲಿ 23 ಕಿಮೀ ದೂರದಲ್ಲಿ ಬೆಂಗಳೂರು-ಪುಣೆ ರೈಲು ಮಾರ್ಗದಲ್ಲಿದೆ. ಜನಸಂಖ್ಯೆ 4,642 (1981). ಈ ಊರು ವ್ಯಾಪಾರಸ್ಥಳವಾಗಿ ಅಭಿವೃದ್ಧಿಯಾಗುತ್ತಿದೆ. ಅಂಚೆ, ವಿದ್ಯುಚ್ಛಕ್ತಿ, ಶಾಲೆಗಳು, ಆರೋಗ್ಯ ಕೇಂದ್ರ ಮುಂತಾದ ನಾಗರಿಕ ಸೌಲಭ್ಯಗಳಿವೆ. ಪುರಸಭಾಡಳಿತವಿದೆ. ಈ ಊರಿನಲ್ಲಿ ಕೇಶವ ಮತ್ತು ಓಬಳ ನರಸಿಂಹ ಗುಡಿಗಳಿವೆ.
ಇತಿಹಾಸ
[ಬದಲಾಯಿಸಿ]ನರಸಿಂಹಸ್ವಾಮಿ ಗುಡಿಯ ನವರಂಗಕ್ಕೆ ದ್ರಾವಿಡ ಶಿಲ್ಪ ಶೈಲಿಯ ನಾಲ್ಕು ಕಂಬಗಳಿವೆ. ಈ ಘನಾಕೃತಿಯ ಕಂಬಗಳ ಮೇಲೆ ಗಣೇಶ, ಹನುಮಂತ ಮೊದಲಾದ ದೇವತೆಗಳೂ ಪುರುಷಾಮೃಗ, ನೃತ್ಯಗಾತಿಯರು, ದರ್ಪಣಮೋಹಿನಿ, ಕಾಳಿಂಗ ಮೊದಲಾದ ಉಬ್ಬುಶಿಲ್ಪದ ರಚನೆಗಳೂ ಇವೆ.