ಗುರುಮಠಕಲ್
Gurmatkal
ಗುರುಮಠಕಲ್ Gurmitkal, Gurumathakal | |
---|---|
ನಗರ | |
Coordinates: 16°52′N 77°24′E / 16.87°N 77.4°E | |
Country | ಭಾರತ |
ರಾಜ್ಯ | ಕರ್ನಾಟಕ |
Division | ಗುಲ್ಬರ್ಗಾ ವಿಭಾಗ |
ಜಿಲ್ಲೆ | ಯಾದಗಿರಿ |
ತಾಲೂಕ | ಯಾದಗಿರಿ |
Elevation | ೬೦೮ m (೧,೯೯೫ ft) |
Population (2011)[೧] | |
• Total | ೨೦,೬೧೪ |
ಭಾಷೆ | |
• ಅಧಿಕೃತ | ಕನ್ನಡ |
Time zone | UTC+5:30 (IST) |
Website | www.gurumitkaltown.mrc.gov.in |
ಗುರುಮಠಕಲ್ ಕರ್ನಾಟಕ ರಾಜ್ಯದ ಯಾದಗಿರಿ ಜಿಲ್ಲೆಯ ಪಟ್ಟಣ ಪಂಚಾಯಿತಿ . ಆಡಳಿತಾತ್ಮಕವಾಗಿ, ಇದು ಯಾದಗಿರಿ ತಾಲೂಕಿನಲ್ಲಿದೆ.[೨]
ಗುರುಮಠಕಲ್ ಬಗ್ಗೆ
[ಬದಲಾಯಿಸಿ]ಗುರುಮಠಕಲ್ ತಾಲುಕ್ಕಾವು ಹೈದರಾಬಾದಿನ ನಿಜಾಮನಾ ಅದ್ವಿಕೆ ಯಲ್ಲಿ ಆಗಿತ್ತು ಹೈದರಾಬಾದ್ ಕರ್ನಾಟಕದ ಭಾಗ ಇದು ಲಕ್ಷ್ಮಪ್ಪ ಎಂಬಾ ರಾಜನ ಅದ್ವಿಕೆ ಯಲ್ಲಿ ಆಗಿತ್ತು ಲಕ್ಷ್ಮಪ್ಪ ರಾಜನನ್ನು ಕಾಕಳವರು ದೂರಾ ಎಂದು ಹೇಳು ತಿದ್ದರು. 1957 ರಲ್ಲಿ ಟೌನ್ ಮುನಿಸಿಪಲ್ ಕೌನ್ಸಿಲ್ (ಟಿಎಂಸಿ) ಎಂದು ಸ್ಥಾಪಿಸಲಾಯಿತು. ನಂತರ 1984 ರಲ್ಲಿ ಪಟ್ಟಣ ಪಂಚಾಯತ್ಗೆ ಕೆಳಕ್ಕೆ ಇಳಿಸಲಾಯಿತು. ಯಾಗಿರ್ ಜಿಲ್ಲೆಯ ಪ್ರಧಾನ ಕಛೇರಿಯಿಂದ ನಲವತ್ತೊಂದು ಕಿಲೋಮೀಟರ್ ದೂರದಲ್ಲಿದೆ. ಗುರುಮಠಕಲ್ ರಾಜ್ಯ ರಾಜಧಾನಿ ಬೆಂಗಳೂರಿನಿಂದ 550 ಕಿ.ಮೀ ದೂರದಲ್ಲಿದೆ ಮತ್ತು ಗುಲ್ಬರ್ಗಾ ಪಟ್ಟಣದಿಂದ 100 ಕಿ.ಮೀ ದೂರದಲ್ಲಿದೆ. ಹೈದರಾಬಾದ್ 155 ಕಿಮೀ ದೂರದಲ್ಲಿದೆ. ಹೈದರಾಬಾದ್ ಹತ್ತಿರದ ವಿಮಾನ ನಿಲ್ದಾಣವಾಗಿದೆ. ಯಾದಗಿರಿ ಹತ್ತಿರದ ರೈಲು ನಿಲ್ದಾಣ. ಗುರುಮತ್ಕಲ್ ಒಂದು ಪ್ರವಾಸಿ ಪಟ್ಟಣವಾಗಿದೆ, ನಿವಾಸಿಗಳು ಮುಖ್ಯವಾಗಿ ಕೃಷಿಯನ್ನು ಅವಲಂಬಿಸಿದ್ದಾರೆ.
ಜನಸಂಖ್ಯೆ
[ಬದಲಾಯಿಸಿ]ಗುರುಮಠಕಲ್ ಪಟ್ಟಣ ಪಂಚಾಯತ್ 17 ವಾರ್ಡುಗಳಾಗಿ ನಗರವನ್ನು ವಿಂಗಡಿಸಲಾಗಿದೆ. ಗುರುಮಠಕಲ್ ಪಟ್ಟಣ ಪಂಚಾಯಯಲ್ಲಿ 20,614 ಜನಸಂಖ್ಯೆ ಇದೆ, ಇದರಲ್ಲಿ 10,534 ಪುರುಷರು ಮತ್ತು 10,080 ಜನ ಮಹಿಳೆಯರು ಭಾರತದ 2011 ರ ಜನಗಣತಿ ಪ್ರಕಾರ ವರದಿ ಮಾಡಿದ್ದಾರೆ.[೩]
ಪ್ರವಾಸಿ ತಾಣಗಳು
[ಬದಲಾಯಿಸಿ]- ವಿರಕ್ತಮಠ (ಶಾಂತವೀರ ಮಠ ಖಾಸಾಮಠ)ದಿಂದಾಗಿ ಪ್ರಸಿದ್ಧವಾಗಿದೆ. ಇದು ಸುಮಾರು ೧೫೦ ವರ್ಷಗಳಷ್ಟು ಪ್ರಾಚೀನವಾದ ಕಟ್ಟಡವಾಗಿದ್ದು, ಇಲ್ಲಿ ಚಿತ್ರದುರ್ಗದ ಮುರುಘರಾಜೇಂದ್ರ ಸ್ವಾಮಿಗಳ ಗದ್ದುಗೆಯು ಸೇರಿದಂತೆ ಆರು ಗದ್ದುಗೆಗಳಿದ್ದು ಮಠವು ಆಕರ್ಷಕವಾಗಿದೆ. ಹಲವಾರು ದೇವರ ಗುಡಿಗಳಿವೆ.[೪]
- ಗುರುಮಠಕಲ್ ಜಲಪಾತವು ಯಾದಗಿರಿ ತಾಲೂಕಿಗೆ ಸೇರಿದ ಗುರುಮಠಕಲ್ ಪಟ್ಟಣದಿಂದ ನಚಾರಾಪುರಕ್ಕೆ ಹೋಗುವ ದಾರಿಯಲ್ಲಿ ೪ ಕಿ.ಮೀ. ದೂರದಲ್ಲಿರುವ ನಿಸರ್ಗದತ್ತ ತಾಣವಾಗಿದೆ. ಸುಮಾರು ೨೫-೩೦ ಅಡಿ ಎತ್ತರದಿಂದ ಧುಮುಕುವ ಈ ಜಲಪಾತವನ್ನು ವೀಕ್ಷಿಸಲು ಚಳಿಗಾಲ ಸೂಕ್ತವಾಗಿದೆ.
ಭಾಹ್ಯ ಸಂಪರ್ಕ
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ "Gurmatkal Population Census 2011". Office of the Registrar General & Census Commissioner, India. Archived from the original on 12 December 2016.
{{cite web}}
: Unknown parameter|deadurl=
ignored (help) - ↑ http://www.gurumitkaltown.mrc.gov.in/node/46[ಶಾಶ್ವತವಾಗಿ ಮಡಿದ ಕೊಂಡಿ]
- ↑ http://www.census2011.co.in/data/town/803218-gurmatkal.html
- ↑ ಯಾದಗಿರಿ ತಾಲ್ಲೂಕು ಪ್ರವಾಸಿ ತಾಣಗಳು : ಅಬ್ಬೆ ತುಮಕೂರ, ಗುರುಮಿಠಕಲ್ kanaja.in[ಶಾಶ್ವತವಾಗಿ ಮಡಿದ ಕೊಂಡಿ]
- Pages using gadget WikiMiniAtlas
- Pages with non-numeric formatnum arguments
- CS1 errors: unsupported parameter
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from ಆಗಸ್ಟ್ 2021
- ಶಾಶ್ವತವಾಗಿ ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from ಜನವರಿ 2023
- Articles with invalid date parameter in template
- Short description is different from Wikidata
- Pages using infobox settlement with bad settlement type
- Coordinates on Wikidata
- Pages using infobox settlement with no map
- ಯಾದಗಿರಿ ಜಿಲ್ಲೆಯ ನಗರಗಳು ಮತ್ತು ಪಟ್ಟಣಗಳು