ವಿಷಯಕ್ಕೆ ಹೋಗು

ಕರ್ನಾಟಕ ವಿಧಾನಸಭೆ ಚುನಾವಣೆ, ೨೦೧೮

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕರ್ನಾಟಕ ವಿಧಾನಸಭೆ ಚುನಾವಣೆ, 2018
India
2013 ←
12 May 2018 (222 seats)
28 May 2018 (1 seat)
11 June 2018 (1 seat)
→ 2023

ಕರ್ನಾಟಕ ವಿಧಾನಸಭೆ ಚುನಾವಣೆ, 2018 224 ಸ್ಥಾನಗಳ ಪೈಕಿ 224
ಬಹುಮತಕ್ಕೆ113 ಸ್ಥಾನಗಳು ಬೇಕಾಗಿವೆ
  ಬಹುತೇಕ ಪಕ್ಷ ಅಲ್ಪಸಂಖ್ಯಾತ ಪಕ್ಷ ಮೂರನೇ ಪಕ್ಷ
 
ನಾಯಕ ಬಿ.ಎಸ್. ಯಡಿಯೂರಪ್ಪ ಸಿದ್ದರಾಮಯ್ಯ ಹೆಚ್.ಡಿ.ಕುಮಾರಸ್ವಾಮಿ
ಪಾರ್ಟಿ ಬಿ.ಜೆ.ಪಿ ಕಾಂಗ್ರೆಸ್ ಜನತಾದಳ(ಜಾತ್ಯಾತೀತ)
ನಾಯಕನ ಸೀಟ್ ಶಿಕಾರಿಪುರ ಬಾದಾಮಿ ಚನ್ನಪಟ್ಟಣ
ಮೊದಲು ಆಸನಗಳು 40 122 40
ಸ್ಥಾನಗಳನ್ನು ಗೆದ್ದಿದ್ದಾರೆ 104 80 37 + 1(ಬಿ.ಎಸ್.ಪಿ)
ಸೀಟ್ ಬದಲಾವಣೆ Increase64 Decrease42 Decrease3

Constituencies of the Karnataka Legislative Assembly

ಮುಖ್ಯಮಂತ್ರಿ (ಚುನಾವಣೆಗೆ ಮುನ್ನ)

ಸಿದ್ದರಾಮಯ್ಯ
ಕಾಂಗ್ರೆಸ್

ಚುನಾಯಿತ ಮುಖ್ಯಮಂತ್ರಿ

ಹೆಚ್.ಡಿ.ಕುಮಾರಸ್ವಾಮಿ
ಜನತಾ ದಳ (ಜಾತ್ಯಾತೀತ)

ಕರ್ನಾಟಕ ವಿಧಾನಸಭೆಯು 224 ಸದಸ್ಯರ ಸದಸ್ಯ ಬಲವನ್ನು ಹೊಂದಿದೆ. 224 ಸದಸ್ಯ ಬಲವುಳ್ಳ 15 ನೇ ಕರ್ನಾಟಕ ವಿಧಾನಸಭೆಯ 222ವಿಧಾನಸಭಾ ಕ್ಷೇತ್ರಗಳಿಗೆ 12 ಮೇ 2018 ಶನಿವಾರ ಚುನಾವಣೆ ನೆಡೆಯಿತು. ಜಯನಗರ ಬಿಜೆಪಿ ಶಾಸಕ ವಿಜಯ್ ಕುಮಾರ್ 2-5-2018 ರಂದು ನಿಧನರಾದ್ದರಿಂದ ಮತ್ತು ರಾಜರಾಜೇಶ್ವರಿ ನಗರದಲ್ಲಿ ಮತದಾರರ ವಂಚನೆ ಹಗರಣದ ನಂತರ, ಈ ಎರಡು ಕ್ಷೇತ್ರಗಳ ಚುನಾವಣೆ ಮುಂದೂಡಲ್ಪಟ್ಟಿತು.

ಕರ್ನಾಟಕ

ಮೈಸೂರು ಜಿಲ್ಲ್ರ್

ಹಿಂದಿನ ವಿಧಾನಸಭೆ ಅವಧಿ

[ಬದಲಾಯಿಸಿ]

(14ನೇಯ) ಕರ್ನಾಟಕ ವಿಧಾನಸಭೆಯ ಅಧಿಕಾರಾವಧಿಯು 28ನೇ ಮೇ,2018 ವರೆಗೆ ಇರುವುದಾಗಿತ್ತು.[]

ವೇಳಾಪಟ್ಟಿ

[ಬದಲಾಯಿಸಿ]

ಚುನಾವಣೆಯು ಮೇ 12 ರಂದು ಜರುಗಿದೆ ಮತ್ತು ಚುನಾವಣೆಯ ಮತ ಎಣಿಕೆ ಹಾಗು ಫಲಿತಾಂಶ ಮೇ 15 ಕ್ಕೆ ಹೊರಬಿದ್ದಿದೆ.

  • ವಿವರ:
ನೆಡಾವಳಿ ದಿನಾಂಕ ವಾರ
ನಾಮನಿರ್ದೇಶನಗಳಿಗಾಗಿ ದಿನಾಂಕ 17 ಏಪ್ರಿಲ್ 2018 ಮಂಗಳವಾರ
ನಾಮನಿರ್ದೇಶನಗಳನ್ನು ಸಲ್ಲಿಸಲು ಕೊನೆಯ ದಿನಾಂಕ 24 ಏಪ್ರಿಲ್ 2018 ಮಂಗಳವಾರ
ನಾಮನಿರ್ದೇಶನಗಳ ಪರಿಶೀಲನೆಗೆ ದಿನಾಂಕ 25 ಏಪ್ರಿಲ್ 2018 ಬುಧವಾರ
ಅಭ್ಯರ್ಥಿಗಳ ವಾಪಸಾತಿಗೆ ಕೊನೆಯ ದಿನಾಂಕ 27 ಏಪ್ರಿಲ್ 2018 ಶುಕ್ರವಾರ
ಮತದಾನ ದಿನಾಂಕ 12 ಮೇ 2018 ಶನಿವಾರ
ಎಣಿಕೆಯ ದಿನಾಂಕ 15 ಮೇ 2018 ಮಂಗಳವಾರ
ಚುನಾವಣೆ ಮುಗಿದ ದಿನಾಂಕ ಮುಂಚಿತವಾಗಿ 18 ಮೇ 2018 ಶುಕ್ರವಾರ

ಕರ್ನಾಟಕದಲ್ಲಿ ಮತದಾರರ ಮತ್ತು ಚುನಾವಣೆ ವಿವರ

[ಬದಲಾಯಿಸಿ]
  • ಕರ್ನಾಟಕದಲ್ಲಿ ಮತದಾರರ ಸಂಖ್ಯೆ:
  • ಭಾರತದಲ್ಲಿ ಮತದಾನದ ಕನಿಷ್ಟ ವಯಸ್ಸು 18 ವರ್ಷಗಳು. 2018 ಕರ್ನಾಟಕದಲ್ಲಿ ರಾಜ್ಯ ಚುನಾವಣೆಗಾಗಿ, 18 ರಿಂದ 29 ವರ್ಷ ವಯಸ್ಸಿನ 824,000 ಹೊಸ ಮತದಾರರನ್ನು ನೋಂದಾಯಿಸಲಾಗಿದೆ. ಕಳೆದ 5 ವರ್ಷಗಳಲ್ಲಿ ಮತದಾರರ, ಅನುಪಾತವು ಒಂದೇ ಆಗಿಯೇ ಇದ್ದರೂ, 'ಯುವ ಮತದಾರರ' ಅನುಪಾತವು 2013 ರಲ್ಲಿ 1.16% ರಿಂದ 2.2% ಕ್ಕೆ ಏರಿಕೆಯಾಗಿದೆ.
  • ಈ ಮತದಾರರ ಲಿಂಗ ಅನುಪಾತವು ಇದೇ ಅವಧಿಯಲ್ಲಿ 958 ರಿಂದ 972 ಕ್ಕೆ ಏರಿದೆ.
ವರ್ಗ 2013 2018
ಸ್ತ್ರೀ ಮತದಾರರು 21,367,912 24,471,979
ಟ್ರಾನ್ಸ್ಜೆಂಡರ್ ಮತದಾರರು 2,100 4,552
ಪುರುಷ ಮತದಾರರು 22,315,727 25,205,820
ಯುವ ಮತದಾರರ ಸಂಖ್ಯೆ 718,000 1,542,000
ಮತದಾರರ ಒಟ್ಟು ಸಂಖ್ಯೆ 44,403,739 51,224,351
  • ಹೊಸ ಮತದಾನ ಕೇಂದ್ರಗಳ ಸಂಖ್ಯೆ - 4,662
  • ಒಟ್ಟು ಮತದಾನ ಕೇಂದ್ರಗಳ ಸಂಖ್ಯೆ 2018 - 56,696
  • ಚುನಾವಣೆಗೆ ಅಗತ್ಯವಾಗಿ ಬೇಕಾದ ಅಧಿಕಾರಿಗಳು (ಅಂದಾಜು) -356,552[]

ಅಂತಿಮವಾಗಿ ಚುನಾವಣೆಯಲ್ಲಿ ಉಳಿದ ಅಭ್ಯರ್ಥಿಗಳು

[ಬದಲಾಯಿಸಿ]
  • ಮೇ 12 ರಂದು ನೆಡೆಯುವ ಕರ್ನಾಟಕದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳು ಒಟ್ಟು - 2,655 (ರಾಜ್ಯ ಮುಖ್ಯ ಚುನಾವಣಾ ಆಯುಕ್ತರ ಪ್ರಕಟಣೆ)
  • ದಿ.27-4-2018 ಶುಕ್ರವಾರ ದಂದು ಕೊನೆಯ ದಿನಾಂಕದಂದು 3,509 ಮಂದಿ ನಾಮಪತ್ರ ಸಲ್ಲಿಸಿದ್ದರು. ಶುಕ್ರವಾರದಂದು 583 ಅಭ್ಯರ್ಥಿಗಳನ್ನು ಹಿಂತೆಗೆದುಕೊಂಡರು. ಮತ್ತು 271 ಮಂದಿಯ ನಾಮಪತ್ರ ಬುಧವಾರ ಪರಿಶೀಲನೆ ನಡೆಸಿದ ಬಳಿಕ ತಿರಸ್ಕಾರವಾಯಿತು.
  • ಸಮೀಕ್ಷೆಯ ಸಮಿತಿಯಿಂದ ಬಿಡುಗಡೆಯಾದ ಅಂತಿಮ ಪಟ್ಟಿಯ ಪ್ರಕಾರ ಒಟ್ಟು 219 ಮಹಿಳೆಯರು ಸೇರಿದಂತೆ 222 ಮಂದಿ ಆಡಳಿತ ಕಾಂಗ್ರೆಸ್ ((120); 224 ವಿರೋಧ ಬಿಜೆಪಿ(43); 201 ಜನತಾದಳ ಸೆಕ್ಯುಲರ್ (ಜೆಡಿಎಸ್)-(29), 1,155 ಸ್ವತಂತ್ರರು ಮತ್ತು 800 ಇತರ ರಾಷ್ಟ್ರೀಯ, ಪ್ರಾದೇಶಿಕ ಮತ್ತು ಚಿಕ್ಕ ಪಕ್ಷಗಳು, ಸ್ಪರ್ಧೆಯಲ್ಲಿವೆ. (ಆವರಣದಲ್ಲಿ ಹಾಲಿ ಸದಸ್ಯರ ಸಂಖ್ಯೆ)[] []

ರಾಜರಾಜೇಶ್ವರಿ ಮತ್ತು ಜಯನಗರ ನಗರ ಕ್ಷೇತ್ರದ ಚುನಾವಣೆ ಮುಂದೂಡಿಕೆ

[ಬದಲಾಯಿಸಿ]
  • ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮತದಾರರ ಗುರುತಿನ ಚೀಟಿ ಹಾಗೂ ಟ್ರಕ್‌ನಲ್ಲಿ 95 ಲಕ್ಷ ರೂಪಾಯಿ ಹಣ ಪತ್ತೆಯಾದ ಹಿನ್ನೆಯಲ್ಲಿ ಚುನಾವಣೆಯನ್ನು 2018 ಮೇ ತಿಂಗಳ 28ಕ್ಕೆ ಮುಂದೂಡಲಾಗಿದೆ. ಮೇ 31ರಂದು ಫಲಿತಾಂಶ ಪ್ರಕಟವಾಗಲಿದೆ, ಎಂದು ಚುನಾವಣಾ ಆಯುಕ್ತರು ತಿಳಿಸಿದ್ದಾರೆ.[]

ರಾಜರಾಜೇಶ್ವರಿ ನಗರ ಚುನಾವಣೆ

[ಬದಲಾಯಿಸಿ]
  • 28-5-2018 ರಂದು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ನಿಗದಿಯಾಗಿದ್ದ ಚುನಾವಣೆಯಲ್ಲಿ ಶೇ 54.20 ರಷ್ಟು ಮತದಾನ ನಡೆದಿತ್ತು. ದಿ.31-5-2018 ಎಣಿಕೆ ನಂತರ ಫಲಿತಾಂಶ ಈ ರೀತಿ ಇತ್ತು:[]
  • ಕಾಂಗ್ರೆಸ್‌- ಮುನಿರತ್ನ- 1,08,064
  • ಬಿಜೆಪಿ- ತುಳಸಿ ಮುನಿರಾಜುಗೌಡ – 82,572
  • ಜೆಡಿಎಸ್‌-ಜಿ.ಎಚ್. ರಾಮಚಂದ್ರ- 60,360
  • ಪಕ್ಷೇತರ– ಹುಚ್ಚ ವೆಂಕಟ್- 604
  • ನೋಟಾ- 2,061

ಜಯನಗರ ನಗರ ಕ್ಷೇತ್ರದ ಚುನಾವಣೆ

[ಬದಲಾಯಿಸಿ]
  • ಜಯನಗರ ಬಿಜೆಪಿ ಶಾಸಕ ವಿಜಯ್ ಕುಮಾರ್ (60) ಮೇ 2, 2018.ಗುರುವಾರ ರಾತ್ರಿ ನಿಧನರಾದರು. ಹಲವು ದಿನಗಳಿಂದ ಅವರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. 2008 ಮತ್ತು 2013ರಲ್ಲಿ ಶಾಸಕರಾಗಿ ಆಯ್ಕೆ ಆಗಿದ್ದ ಅವರು, ಈ ಬಾರಿಯೂ ಕಣದಲ್ಲಿದ್ದರು. ಕ್ಷೇತ್ರದಲ್ಲಿ 2-5-2018 ಗುರುವಾರ ಚುನಾವಣಾ ಪ್ರಚಾರ ಮಾಡುವಾಗ ಕುಸಿದು ಬಿದ್ದರು. ಬಿಜೆಪಿ ಅಭ್ಯರ್ಥಿ ವಿಜಯ್ ಕುಮಾರ್ ನಿಧನದ ಹಿನ್ನೆಲೆಯಲ್ಲಿ ಜಯನಗರ ಕ್ಷೇತ್ರದಲ್ಲಿ ಚುನಾವಣೆ ಮುಂದೂಡಿ, ಚುನಾವಣಾ ಪ್ರಕ್ರಿಯೆಯನ್ನು ಹೊಸದಾಗಿ ನಡೆಸಬೇಕಾಗುತ್ತದೆ. []
  • 11-6-2018 ರಂದು ಜಯನಗರ ನಗರ ಕ್ಷೇತ್ರದ ಚುನಾವಣೆ ನಿಗದಿಯಾಗಿದ್ದು,13-06-2018 ಮತ ಎಣಿಕೆ ನಡೆದ ನಂತರದ ಫಲಿತಾಂಶ ಈ ರೀತಿ ಇತ್ತು: []
  • ಕಾಂಗ್ರೆಸ್‌- ಸೌಮ್ಯಾ ರೆಡ್ಡಿ- 54458
  • ಬಿಜೆಪಿ- ಪ್ರಹ್ಲಾದ್ – 51571
  • ಜೆಡಿಎಸ್‌- ಕಾಲೆಗೌಡ- 817
  • ಪಕ್ಷೇತರ– ರವಿ ಕೃಷ್ಣ ರೆಡ್ಡಿ- 1861
  • ನೋಟಾ- 848

ಚುನಾವಣೆಯ ಮತದಾನೋತ್ತರ ಫಲಿತಾಂಶ ಸಮೀಕ್ಷೆ

[ಬದಲಾಯಿಸಿ]
  • ರಾಜ್ಯದಲ್ಲಿ ಶೇ. 70 ಮತದಾನ ಆಗಿದೆ. []
  • ಮತದಾನದ ನಂತರದ ಸಮೀಕ್ಷಯಲ್ಲಿರಾಜ್ಯದಲ್ಲಿ ಅತಂತ್ರ ವಿಧಾನಸಭೆಯ ಸೂಚನೆ ಕಂಡುಬಂದಿದೆ :
  • ಆವರಣದಲ್ಲಿ ಅಂತಿಮ ಸಮೀಕ್ಷೆ:[೧೦]
ಸಮೀಕ್ಷಕರು ಕಾಂಗ್ರೆಸ್‌ ಬಿಜೆಪಿ: Iಜೆಡಿಎಸ್‌ :,ಇತರೆ
ವಿಜಯವಾಣಿ, ದಿಗ್ವಿಜಯ ನ್ಯೂಸ್‌ 24/7 76–80 103–107 31–35 04–08
ಎನ್‌ಡಿಟಿವಿ: 72–78 (86) 102–110 (100) 30–35 (33) 02–05
ನ್ಯೂಸ್‌ ಎಕ್ಸ್‌–ಸಿಎನ್‌ಎಕ್ಸ್‌ 72–78 102–110 35–39 03–04
ಟೈಮ್ಸ್‌ನೌ/ ಚಾಣುಕ್ಯ 90–103(73) 80–93 (120) 31–39 (26) : 02
ಇಂಡಿಯಾ ಟುಡೇ ಆಕ್ಸಿಸ್‌ 106–118 (111) 79–92 (85) - 22–30 (26) 01–04
ಎಬಿಪಿ / ಸಿ ವೋಟರ್ ಸಮೀಕ್ಷೆ 87-99 (93) 97-109 (103) 21-30 (25) 01–08 (1)
ಜನಕೀ ಬಾತ್‌ ಸಮೀಕ್ಷೆ 73-82 95-114 31–39 - 2-4

[೧೧]

ಜಿಲ್ಲಾವಾರು ಮತದಾನ: ಶೇಕಡಾ

[ಬದಲಾಯಿಸಿ]
ಜಿಲ್ಲೆ 2018.ಶೇ 2013.ಶೇ * ಜಿಲ್ಲೆ 2018.ಶೇ 2013.ಶೇ * ಜಿಲ್ಲೆ 2018.ಶೇ 2013.ಶೇ * ಜಿಲ್ಲೆ 2018.ಶೇ 2013.ಶೇ
ಬೆಂಗಳೂರು ನಗರ 55 57.33 ತುಮಕೂರು 73 79.32 ಬೀದರ್ 59 66.43 ರಾಯಚೂರು 61 64.83
ಕೊಪ್ಪಳ - 70 73.48 ದಕ್ಷಿಣ ಕನ್ನಡ 73 74.48 ಬೆಳಗಾವಿ 71 74.67 ಹಾವೇರಿ 76 79.91
ಗದಗ 68 72.90 ದಾವಣಗೆರೆ 70 75.98 ಬೆಂಗಳೂರು ಗ್ರಾಮ 76 57.33 ಹಾಸನ 77 78.77
ಚಾಮರಾಜ ನಗರ 78 78.65 ಧಾರವಾಡ 66 67.16 ಮೈಸೂರು 68 65.83 ಶಿವಮೊಗ್ಗ 73 74.76
ಚಿಕ್ಕಮಗಳೂರು 70 75.47 ಬಳ್ಳಾರಿ 66 73.16 ಮಂಡ್ಯ 78 77.98 ಉಡುಪಿ 75 76.15
ಚಿಕ್ಕಬಳ್ಳಾಪುರ 79 83.50 ಬಾಗಲಕೋಟೆ 68 72.94 ಯಾದಗಿರಿ 60 65.92 ಉತ್ತರ ಕನ್ನಡ 71 73.66
ಚಿತ್ರದುರ್ಗ 76 76.66 ವಿಜಯಪುರ 63 66.43 ರಾಮನಗರ 84 92.94 ಕೊಡಗು 69 73.22

ಫಲಿತಾಂಶ

[ಬದಲಾಯಿಸಿ]
ರ್ನಾಟಕ ವಿಧಾನಸಭಾ ಚುನಾವಣೆ 2018
ಪಕ್ಷ seats
ಬಿ.ಜೆ.ಪಿ
  
104
ಕಾಂಗ್ರೆಸ್
  
78
ಜೆ.ಡಿ.ಎಸ್
  
36
ಇತರರು
  
4
ಒಟ್ಟು ಸ್ಥಾನಗಳು 224; ಚನಾವಣೆ ನೆಡೆದ ಸ್ಥಾನಗಳು 222
ಕರ್ನಾಟಕ ವಿಧಾನಸಭಾ ಚುನಾವಣೆ 2018
  • ಒಟ್ಟು ಸ್ಥಾನಗಳು 224; ಚನಾವಣೆ ನೆಡೆದ ಸ್ಥಾನಗಳು : 222
  • ಜೆಡಿಎಸ್,ನ,ಎಚ್.ಡಿ.ಕುಮಾರಸ್ವಾಮಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಗೆದ್ದಿರುವುದರಿಂದ ಒಂದು ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದಾಗ ಜೆಡಿಎಸ್ ಸದಸ್ಯರ ಸಂಖ್ಯೆ 35 ಆಗುತ್ತದೆ.$
  • 28 ಮೇ, 2018 ರಂದು ಕಾರು ಅಪಘಾತದಲ್ಲಿ ಜಮಖಂಡಿಯ ಕಾಂಗ್ರೆಸ್ ,ಶಾಸಕ ಸಿದ್ದು ನ್ಯಾಮಗೌಡ ಮೃತಪಟ್ಟರು.ಶಾಸಕ ಸಿದ್ದು ನ್ಯಾಮಗೌಡ ಸಾವು[೧೩]
  • ಕುಮಾರಸ್ವಾಮಿ ಖಾಲ ಮಾಡಿದ ರಾಮನಗರ, ಜಮಖಂಡಿ ಖಾಲಿ ಇವೆ; ಒಟ್ಟು ಫಲಿತಾಂಶ: 224 - 2 =222 ಕ್ಷೇತ್ರಗಳು
  • ಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣೆ 11 – 6 -2018 ರಂದು ನೆಡೆದು, ಕಾಂಗ್ರೆಸ್‌ನ ಹಿರಿಯ ಶಾಸಕ ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯಾರೆಡ್ಡಿ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅವರು 54,457 ಮತಗಳನ್ನು ಗಳಿಸಿ, ಒಟ್ಟು 2,889 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಬಿ.ಎನ್. ಪ್ರಹ್ಲಾದ್‌ಬಾಬು 51,568 ವಿರುದ್ಧ ಜಯ ಗಳಿಸಿದ್ದಾರೆ.[೧೪]

ಚುನಾವಣೆ 2018

[ಬದಲಾಯಿಸಿ]

[೧೫]

ಪಕ್ಷ 2018 2013 ರ ಫಲಿತಾಂಶ ಬದಲಾವಣೆ
ಪಕ್ಷ 2018 2013 Change
ಭಾರತೀಯ ಜನತಾ ಪಕ್ಷ 104 40 +64
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 80 122 -42
ಜನತಾ ದಳ (ಸೆಕ್ಯುಲರ್) (36+ 1BSP=37)(**36-1X*35+1)$ 37 40 -3
ಬಿಎಸ್ಪಿ (BSP) (ಜನತಾ ದಳ (ಸೆಕ್ಯುಲರ್)ಕ್ಕೆ ಮೈತ್ರಿ ಪಕ್ಷ) 1 0
ಕರ್ನಾಟಕ ಜನತಾ ಪಾರ್ಟಿ (KJP) 0 4
ಕೆ ಪಿ ಜೆಪಿ (KPJP) 1 0
ಪಕ್ಷೇತರರು 1 9
ಬಡವರ ಶ್ರಮಿಕರರೈತರಕಾಂಗ್ರೆಸ್ (ಶ್ರೀರಾಮುಲು) (ಬಿ.ಎಸ್.ಆರ್.ಸಿ.ಪಿ 4
ಕೆ.ಎಂ.ಪಿ ( KMP) 1
ಎಸ್ ಪಿ ( SP) 1
ಎಸ್ಕೆಪಿ (SKP) 1
ಎಎಪಿ (AAP)
ಎನ್ಸಿಪಿ 0 0
ಇತರೆ 0 (20) -20
ಒಟ್ಟು 224 224

[೧೬] [೧೭] [೧೮]

ಪಕ್ಷಗಳ ಶೇಕಡಾವಾರು ಮತಗಳಿಕೆ

[ಬದಲಾಯಿಸಿ]

ಕರ್ನಾಟಕ ವಿಧಾನಸಭೆ ಚುನಾವಣೆ, 2018

  ಕಾಂಗ್ರೆಸ್ (38%)
  ಬಿಜೆಪಿ (36.2%)
  ಜೆಡಿಎಸ್ (18.4%)
  ಸ್ವತಂತ್ರ (4.00%)
  ಇತರರು (3.4%)
  • ಸೋತರೂ ಬಿಜೆಪಿಗಿಂತ ಹೆಚ್ಚು ಮತ ಪಡೆದ ಕಾಂಗ್ರೆಸ್:
ಪಕ್ಷ ಶೇಕಡಾಗಳಿಕೆ ಗಳಿಸಿದ ಓಟುಗಳು (ಸಮೀಪಸಂಖ್ಯೆ)
1 ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಕಾಂಗ್ರೆಸ್) 38% 1,37,63,500
2 ಭಾರತೀಯ ಜನತಾಪಕ್ಷ (ಬಿಜೆಪಿ) 36.2% 1,31,20,300
3 ಜನತಾದಳ (ಸೆಕ್ಯುಲರ್)(ಜೆಡಿಎಸ್) 18.4% 66,48700
4 ಸ್ವತಂತ್ರ 4.00% 14,34,951
5 ಬಹುಜನ ಸಮಾಜವಾದಿ ಪಕ್ಷ(ಬಿಎಸ್ಪಿ) 0.3% 1,08592
6 ಎ ಐ ಎಮ್ ಇಪಿ 0.33% 97,572
7 ಬಿ ಪಿ ಜೆ ಪಿ 0.2% 83,071
8 ಸಿ ಪಿ ಎಂ 0.2% 81,181
9 ಸ್ವರಾಜ್ 0.2% 94,000
10 ಕೆ ಪಿ ಜಿ ಪಿ 0.2% 74,229
11 ನೋಟಾ 0.9% 3,09573
12 ಇತರರು 1.07
  • ಕರ್ನಾಟಕ ಪ್ರಜಾ ಜನತಾ ಪಕ್ಷ(ಕೆಪಿಜೆಪಿ)- ಬಿಜೆಪಿ ಜೊತೆ ಮೈತ್ರಿ.[೧೯][೨೦]

ವಿಧಾನಸಭೆ ಚುನಾವಣೆಯಲ್ಲಿ ಸ್ಥಾನಗಳು

[ಬದಲಾಯಿಸಿ]
  ಭಾರತೀಯ ಜನತಾ ಪಾರ್ಟೀ
  ಕಾಂಗ್ರೆಸ್
  ಜೆ.ಡಿ.ಎಸ್

ರಾಜ್ಯದ ಪ್ರದೇಶವಾರು ಫಲಿತಾಂಶ

[ಬದಲಾಯಿಸಿ]
ಪ್ರದೇಶ ಒಟ್ಟು ಕಾಂಗ್ರೆಸ್ ಜೆಡಿ(ಎಸ್) ಇತರರು
ಮುಂಬೈ ಕರ್ನಾಟಕ 50 17 2 1
ಹೈದರಾಬಾದ್‌ ಕರ್ನಾಟಕ 40 21 4 0
ಬೆಂಗಳೂರು ನಗರ 26 13 2 0
ಮಧ್ಯ ಕರ್ನಾಟಕ 32 7 4 0
ಕರಾವಳಿ19/ 19 3 0 0
ಹಳೇ ಮೈಸೂರು 55 (- 1) 17 25 (- 1) 2
ಒಟ್ಟು 221 78 37 3

[೧೭] [೨೧]

ಉಪ ಚುನಾವಣೆ ನವೆಂಬರ್ 2018

[ಬದಲಾಯಿಸಿ]
  • ರಾಜ್ಯದ ಮೂರು ಲೋಕಸಭೆ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯನ್ನು ನವೆಂಬರ್ 3,2018 ರಂದು ನಡೆಸುವುದಾಗಿ 06 ಅಕ್ಟೋಬರ್ 2018ರಂದು ಚುನಾವಣಾ ಆಯೋಗ ತಿಳಿಸಿತು. ಸೂಚನೆಯ ಘೋಷಣೆ- 9-10-2018; ನಾಮನಿರ್ದೇಶನಕ್ಕೆ ಕೊನೆಯ ದಿನ 16-10-2018; ವಾಪಸಾತಿಗೆ ಕೊನೆಯ ದಿನ 20-10-2018;ಎಣಿಕೆ,6-11-2018ರಂದು.
  • ಲೋಕಸಭೆ ಕ್ಷೇತ್ರಗಳು:
  • ಶಿವಮೊಗ್ಗ :(ಬಿಜೆಪಿಯ ಬಿ.ಎಸ್.ಯಡಿಯೂರಪ್ಪ ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ),
  • ಬಳ್ಳಾರಿ (ಶ್ರೀರಾಮುಲು ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ)
  • ಮಂಡ್ಯ (ಜಾತ್ಯತೀತ ಜನತಾದಳದ ಸಿ.ಎಸ್.ಪುಟ್ಟರಾಜು ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ)
  • ವಿಧಾನ ಸಭೆ ಕ್ಷೇತ್ರ:
  • ರಾಮನಗರ (ಎಚ್‌.ಡಿ. ಕುಮಾರಸ್ವಾಮಿ ಅವರು ಚನ್ನಪಟ್ಟಣ ಕ್ಷೇತ್ರವನ್ನು ಉಳಿಸಿಕೊಂಡು ರಾಮನಗರ ತೆರವು.)
  • ಜಮಖಂಡಿ (ಕಾಂಗ್ರೆಸ್‌ ಶಾಸಕ ಸಿದ್ದು ನ್ಯಾಮಗೌಡ ಅವರು ರಸ್ತೆ ಅಪಘಾತದಲ್ಲಿ ಸಾವು)
  • ಉಪಚುನಾವಣೆ: ನವೆಂಬರ್ 3,2018.
  • ಫಲಿತಾಂಶ:ನವೆಂಬರ್ 6 2018.[೨೨]

ಸರ್ಕಾರ ರಚನೆ

[ಬದಲಾಯಿಸಿ]
  • ರಾಜ್ಯದಲ್ಲಿ ವಿಶಿಷ್ಟ ಬೆಳವಣಿಗೆ:
  • ಬಿ.ಎಸ್.ಯಡಿಯೂರಪ್ಪ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಸರ್ವಾನುಮತದಿಂದ ಆಯ್ಕೆಯಾದರು. ಅವರು 23ನೇ ಮುಖ್ಯಮಂತ್ರಿಯಾಗಿ ಹಾಗೂ ಮೂರನೇ ಬಾರಿಗೆ ಸಿಎಂ ಆಗಿ ದಿ.17-5-2018 ರಂದು ಬೆಳಿಗ್ಗೆ 9.00ಕ್ಕೆ ಪ್ರಮಾಣವಚನ ಸ್ವೀಕರಿದರು. ರಾಜ್ಯಪಾಲ ವಜುಭಾಯಿ ವಾಲಾ ಅವರು ಪ್ರತಿಜ್ಞಾವಿಧಿ ಬೋಧಿಸಿದರು.[೨೩][೨೪] ವಿಧಾನಸಭೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಸಿಗದಿದ್ದರಿಂದ, ಹದಿನೈದು ದಿನಗಳ ಒಳಗೆ ಸದನದಲ್ಲಿ ಬಹುಮತ ಸಾಬೀತುಪಡಿಸುವಂತೆ ರಾಜ್ಯಪಾಲರು ಸೂಚಿಸಿದ್ದಾರೆ. ಸದನದಲ್ಲಿ ಬಹುಮತವಿಲ್ಲದ ಕರಣ ಯಡಿಯೂರಪ್ಪ ಒಬ್ಬರೇ ಪ್ರಮಾಣ ವಚನ ಸ್ವೀಕರಿಸಿದರು. ಬಹುಮತ ಸಾಬೀತು ಪಡಿಸಿದ ಬಳಿಕ ಸಚಿವ ಸಂಪುಟ ವಿಸ್ತರಣೆ ನೆಡೆಯುವುದು ಎಂದಿದ್ದಾರೆ.[೨೫]
  • ಜೆಡಿಎಸ್ ಹಾಗೂ ಕಾಂಗ್ರೆಸ್ ಒಟ್ಟಾಗಿ ಮೈತ್ರಿ ಮಾಡಿಕೊಂಡು, ಕಾಂಗ್ರೆಸ್‌–ಜೆಡಿಎಸ್‌ ಪಕ್ಷದ ಶಾಸಕಾಂಗ ಸಭೆಯಲ್ಲಿ ತೆಗೆದುಕೊಂಡಿರುವ ನಿರ್ಣಯದಂತೆ ಸರ್ಕಾರ ರಚನೆಗೆ ಎರಡು ಪಕ್ಷದ 117 ಶಾಸಕರ ಸಹಿಯನ್ನು ಒಳಗೊಂಡ ಪಟ್ಟಿಯನ್ನು ರಾಜ್ಯಪಾಲರಿಗೆ ಎಚ್.ಡಿ. ಕುಮಾರಸ್ವಾಮಿ ದಿ. 16.5-2018 ರಂದು ನೀಡಿದ್ದರು.[೨೬]
  • ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣವಚನಕ್ಕೆ ಅವರಿಗೆ ಬಹುಮತವಿಲ್ಲದ ಕಾರಣ ಮತ್ತು ತಮಗೆ 117ಸದಸ್ಯರ ಬೆಂಬಲ ವಿದೆಯೆಂದು ದಿ.16-5-2018 ರಂದು ತಡೆ ಕೋರಿ ಕಾಂಗ್ರೆಸ್ ಮತ್ತು ಜೆಡಿಎಸ್‌ ಪಕ್ಷ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗಿದ್ದ ಅರ್ಜಿಯನ್ನು ಬುಧವಾರ ಮಧ್ಯರಾತ್ರಿ ವಿಚಾರಣೆ ನಡೆಸಿದ್ದು ರಾಜ್ಯಪಾಲರ ಕರ್ತವ್ಯದಲ್ಲಿ ಕೋರ್ಟ್ ಹಸ್ತಕ್ಷೇಪ ಸಾಧ್ಯವಿಲ್ಲ ಎಂದು ಸುಪ್ರೀಕೋರ್ಟ್ ಅಭಿಪ್ರಾಯಪಟ್ಟಿದೆ. [೨೭]
  • ಕರ್ನಾಟಕದಲ್ಲಿ ಯಾವುದೇ ಕಾರಣಕ್ಕೂ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿ ಸರ್ಕಾರ ರಚನೆಗೆ ಅವಕಾಶ ನೀಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ ಬಗೆಗೆ ಕಾಂಗ್ರೆಸ್ ಮತ್ತು ಜೆಡಿಎಸ್, ತಮ್ಮ ಕೂಟಕ್ಕೆ ಬಹುಮತ ಇರುವುದನ್ನು ನಿರ್ಲಕ್ಷಿಸಿದ ಕಾರಣ ವಿಧಾನ ಸೌಧದ ಗಾಂಧಿಪ್ರತಿಮೆಯ ಬಳಿ ಪ್ರತಭಟನೆ ನೆಡೆಸಿದವು.[೨೮][೨೯]

ಸುಪ್ರೀಮ್ ಕೋರ್ಟ್ ಆದೇಶ

[ಬದಲಾಯಿಸಿ]
  • ದಿ.17-5-2018 ಗುರುವಾರ ಬೆಳಿಗ್ಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ಬಿ.ಎಸ್‌. ಯಡಿಯೂರಪ್ಪ ಅವರು ದಿ.19-5-2018 ಶನಿವಾರ ಸಂಜೆ 4ಕ್ಕೆ ವಿಶ್ವಾಸಮತ ಸಾಬೀತುಪಡಿಸಬೇಕು ಎಂದು ಸುಪ್ರೀಂ ಕೋರ್ಟ್‌ ಆದೇಶಿಸಿದೆ. ಸರ್ಕಾರ ರಚಿಸುವಂತೆ ಬಿಜೆಪಿಗೆ ಆಹ್ವಾನ ನೀಡಿರುವ ರಾಜ್ಯಪಾಲ ವಜುಭಾಯಿ ವಾಲಾ ಅವರ ನಿರ್ಧಾರ ಪ್ರಶ್ನಿಸಿ ಬುಧವಾರ ರಾತ್ರಿ ಕಾಂಗ್ರೆಸ್– ಜೆಡಿಎಸ್‌ ಸಲ್ಲಿಸಿದ್ದ ಅರ್ಜಿಯ ಮುಂದುವರಿದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಕೆ. ಸಿಕ್ರಿ ನೇತೃತ್ವದ ತ್ರಿಸದಸ್ಯ ಪೀಠ, ‘ವಿಶ್ವಾಸಮತ ಸಾಬೀತುಪಡಿಸುವ ತನಕ ಯಡಿಯೂರಪ್ಪ ಅವರು ಯಾವುದೇ ಆಡಳಿತಾತ್ಮಕ ತೀರ್ಮಾನ ತೆಗೆದು ಕೊಳ್ಳುವಂತಿಲ್ಲ’ ಎಂದು ತಿಳಿಸಿತು.[೩೦]
  • ವಿಧಾನಸಭೆಗೆ ಹೊಸದಾಗಿ ಆಯ್ಕೆಯಾಗಿರುವ ಎಲ್ಲ ಶಾಸಕರು ಶನಿವಾರ ಪ್ರಮಾಣ ವಚನ ಸ್ವೀಕರಿಸಬೇಕು. ಶಾಸಕರ ರಕ್ಷಣೆಗೆ ಅಗತ್ಯಕ್ರಮ ಕೈಗೊಳ್ಳಬೇಕು ಎಂದೂ ಸುಪ್ರೀಂ ಕೋರ್ಟ್ ಸೂಚಿಸಿದೆ. ವಿಶ್ವಾಸಮತ ಯಾಚನೆಯ ಪ್ರಕ್ರಿಯೆಯನ್ನು ಹಂಗಾಮಿ ವಿಧಾನಸಭಾಧ್ಯಕ್ಷರು ನಡೆಸಿಕೊಡಬೇಕು ಎಂದೂ ಸೂಚಿಸಿದೆ.[೩೧] ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ಹೇಗೆ ನಡೆಯಬೇಕು ಎಂಬುದನ್ನು ಹಂಗಾಮಿ ಸ್ಪೀಕರ್‌ ನಿರ್ಣಯಿಸಬೇಕು ಎಂದು ಸುಪ್ರೀಂಕೋರ್ಟ್‌ ತಿಳಿಸಿದೆ. ಈ ಹಿನ್ನಲೆಯಲ್ಲಿ ರಾಜ್ಯಪಾಲರು ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಅವರನ್ನು ಹಂಗಾಮಿ ಸ್ಪೀಕರ್‌ ಆಗಿ ನೇಮಕ ಮಾಡಲಾಗಿದೆ. ಬೋಪಯ್ಯ ಅವರನ್ನು ಸ್ಪೀಕರ್‌ ಆಗಿ ನೇಮಕ ಮಾಡಿರುವುದಕ್ಕೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದೆ. ಆಯ್ಕೆ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗುವುದಾಗಿ ತಿಳಿಸಿದೆ.[೩೨]
  • ಹಂಗಾಮಿ ಸ್ಪೀಕರ್ ಕರ್ತವ್ಯ:ನೂತನವಾಗಿ ಆಯ್ಕೆಯಾದ ಶಾಸಕರಿಗೆ ಪ್ರತಿಜ್ಞಾ ವಿಧಿ ಬೋಧಿಸುವುದು ಮೊದಲ ಕರ್ತವ್ಯ. ಅದಾದ ಬಳಿಕ ಕಾಯಂ ಸಭಾಧ್ಯಕ್ಷರ ಆಯ್ಕೆಗಾಗಿ ಚುನಾವಣೆ ಮಾಡಲಾಗುತ್ತದೆ. ಆದರೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ಪ್ರಕಾರ, ನೂತನ ಸದಸ್ಯರಿಗೆ ಪ್ರಮಾಣ ವಚನ ಬೋಧಿಸುವುದು ಹಾಗೂ ವಿಶ್ವಾಸ ಮತ ಯಾಚನೆ ಪ್ರಕ್ರಿಯೆ ನಿರ್ವಹಣೆ ಈ ಬಾರಿಯ ಹಂಗಾಮಿ ಸ್ಪೀಕರ್ ಅವರ ಜವಾಬ್ದಾರಿಯಾಗಿದೆ.[[೩೩]
  • ಯಡಿಯೂರಪ್ಪ ರಾಜಿನಾಮೆ: ಬಹುಮತ ಇಲ್ಲದೆಯೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಿ.ಎಸ್‌.ಯಡಿಯೂರಪ್ಪ ದಿ.19-5-2018 ಶನಿವಾರ ಸಂಜೆ 4ಕ್ಕೆ ವಿಶ್ವಾಸಮತ ಯಾಚನೆ ಭಾಷಣ ಆರಂಭಿಸಿದರು. ಆದರೆ ಬಳಿಕ ಅದನ್ನು ಹಿಂಪಡೆದು ರಾಜಭವನಕ್ಕೆ ತೆರಳಿ ರಾಜೀನಾಮೆ ನೀಡಿದರು.[೩೪]

ಸಮ್ಮಿಶ್ರ ಸರ್ಕಾರ ರಚನೆಯ ಕ್ರಿಯೆ

[ಬದಲಾಯಿಸಿ]
  • ಜೆಡಿಎಸ್ ಸರ್ಕಾರ ರಚನೆಗೆ ಕಾಂಗ್ರೆಸ್‌ ಪೂರ್ಣ ಬೆಂಬಲ ಸೂಚಿಸಿ, ಮೇ 15ರಂದೇ ಸಮ್ಮಿಶ್ರ ಸರ್ಕಾರ ರಚನೆ ಸಂಬಂಧ ರಾಜ್ಯಪಾಲರಿಗೆ ಉಭಯ ಪಕ್ಷದ ಮುಖಂಡರು ಮನವಿ ಸಲ್ಲಿಸಿದ್ದರು. ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಿ.ಎಸ್‌.ಯಡಿಯೂರಪ್ಪ ದಿ.19-5-2018 ಶನಿವಾರ ಸಂಜೆ 4ಕ್ಕೆ ವಿಶ್ವಾಸಮತ ಪಡೆಯಲಾರದೆ ರಾಜೀನಾಮೆ ಸಲ್ಲಿಸಿದ ನಂತರ, ಎಚ್.ಡಿ. ಕುಮಾರಸ್ವಾಮಿಯವರಿಗೆ ಹದಿನೈದು ದಿನಗಳಲ್ಲಿ ಬಹುಮತ ಸಾಬೀತು ಪಡಿಸಲು ರಾಜ್ಯಪಾಲರು ಆದೇಶಿಸಿದ್ದು, ಕಾಂಗ್ರೆಸ್‌–ಜೆಡಿಎಸ್‌ ಸಮ್ಮಿಶ್ರ ಸರ್ಕಾರ ರಚನೆಗೆ ಅವಕಾಶ ನೀಡಿದರು. ಕುಮಾರಸ್ವಾಮಿಯವರು ದಿ. 23-5-2018 ಬುಧವಾರ ಪ್ರಮಾಣ ವಚನ ಸ್ವಕರಿಸಲು ನಿರ್ಧರಿಸಿದರು. [೩೫][೩೬]

ಚುನಾಯಿತ ಸದಸ್ಯರ ಜಾತಿವಾರು ಪ್ರಾತಿನಿಧ್ಯ

[ಬದಲಾಯಿಸಿ]
  • ಕರ್ನಾಟಕದಲ್ಲಿ ಜಾತಿ ಪ್ರಾತಿನಿಧ್ಯ ಇರುವ ರೀತಿಯಲ್ಲಿ ಮಂತ್ರಿಮಂಡಲ ರಚನೆಯಾಗುವುದು ಸಾಮಾನ್ಯವಾಗಿದೆ. ಕೆಳಗಡೆ ಚುನಾಯಿತ ಸದಸ್ಯರ ಜಾತಿವಾರು ಪ್ರಾತಿನಿಧ್ಯದ ಪಟ್ಟಿ ಕೊಟ್ಟಿದೆ.
  • ಕುಮಾರಸ್ವಾಮಿಯವರು ಎರಡುಕಡೆ ಸ್ಪರ್ಧಿಸಿ ಗೆದ್ದಿದ್ದು ರಾಮನಗರ ಕ್ಷೇತ್ರಕ್ಕೆ ರಾಜಿನಾಮೆ ನೀಡಿರುವುದರಿಂದ ಒಕ್ಕಲಿಗ ಪ್ರಾತಿನಿಧ್ಯ ಒಂದು ಸ್ಥಾನ ಕಡಿಮೆ ಆಗುತ್ತದೆ.(42 - 1=41)
ಜಾತಿ ಕಾಂಗ್ರೆಸ್ ಬಿಜೆಪಿ ಜಡಿಎಸ್ ಇತರರು ಒಟ್ಟು
ವೀರಶೈವ ಲಿಂಗಾvಯತ 16 38 4 00 58
ಒಕ್ಕಲಿಗ 11 8 23 00 42
ಪರಿಶಿಷ್ಟ (ಎಸ್.ಸಿ ) 12 16 06 02 36
ಇತರರು 5 16 00 00 21
ಪರಿಶಿಷ್ಟ ಪಂಗಡ 09 09 01 00 19
ಬ್ರಾಹ್ಮಣರು 04 10 00 00 14
ಕುರುಬ 09 01 02 01 13
ರೆಡ್ಡಿ 04 04 01 00 09
ಮುಸ್ಲಿಮರು 07 00 00 00 07
ಕೊಡವ 00 02 00 00 02
ಕ್ರಿಶ್ಚಿಯನ್ 01 00 00 00 01
ಒಟ್ಟು 78 104 37 03 222

[೩೭]

ಕುಮಾರಸ್ವಾಮಿಯವರ ಮಂತ್ರಿಮಂಡಲ ರಚನೆ

[ಬದಲಾಯಿಸಿ]
  • ಬಿ.ಎಸ್ ಯಡಿಯೂರಪ್ಪನವರು ಬಹುಮತ ಸಾಬೀತು ಪಡಿಸಲು ವಿಫಲರಾದ ನಂತರ ರಾಜ್ಯ ಪಾಲರ ಆಹ್ವಾನದಂತೆ, ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ದಿ.23 ಮೇ, 2018 ರಂದು ಬುಧವಾರ ಸಂಜೆ 4.30ಕ್ಕೆ, ದೇವರು ಮತ್ತು ಕನ್ನಡ ನಾಡಿನ ಜನರ ಹೆಸರಿನಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು ಮತ್ತು ಕೊರಟಗೆರೆ ಶಾಸಕ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಉಪಮುಖ್ಯಮಂತ್ರಿಯಾಗಿ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಈ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್–ಜೆಡಿಎಸ್ ಮೈತ್ರಿಕೂಟದ ಸರ್ಕಾರ ಅಸ್ತಿತ್ವಕ್ಕೆ ಬಂತು. ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ, ಹಿರಿಯ ನಾಯಕಿ ಸೋನಿಯಾ ಗಾಂಧಿ, ಕೇರಳ ಸಿಎಂ ಪಿಣರಾಯಿ ವಿಜಯನ್‌, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌, ಬಿಎಸ್‌ಪಿ ನಾಯಕಿ ಮಾಯಾವತಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಶರದ್‌ ಯಾದವ್‌, ಗುಲಾಬ್‌ ನಬೀ ಅಜಾದ್‌, ಚಂದ್ರಬಾಬು ನಾಯ್ಡು, ಸೀತಾರಾಂ ಯೆಚೂರಿ ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ದೇಶದ ಹೊಸ ಒಕ್ಕೂಟದ ಆರಂಭಕ್ಕೆ ಸಾಕ್ಷಿಯಾಯಿತು.[೩೮] ವಿಧಾನ ಸಭೆಯಲ್ಲಿ ಬಹುಮತ ಸಾಬೀತು ಅದ ನಂತರ ಮಂತ್ರಿಮಂಡಳದ ವಿಸ್ತರಣೆಮಾಡುವ ಸೋಚನೆ ನೀಡಿದರು. ಬಹುಮತ ಸಾಬೀತುಪಡಿಸಲು ಮೇ, 25 ರಂದು (ಶುಕ್ರವಾರ) ವಿಧಾನಸಭಾ ಅಧಿವೇಶನ ಕರೆಯಲಾಗಿದೆ. [೩೯]
ವಿಧಾನಸಭೆ ಸಭಾಧ್ಯಕ್ಷರ ಆಯ್ಕೆ;
  • ದಿ.25 ಮೇ, 2018 ರಂದು ಬಿಜೆಪಿಯ ಸುರೇಶ್‌ ಕುಮಾರ್‌ ನಾಮಪತ್ರವನ್ನು ವಾಪಸ್ಸು ಪಡೆದಿದ್ದರಿಂದ ಶ್ರೀನಿವಾಸಪುರ ಕ್ಷೇತ್ರದ ಶಾಸಕ ಕೆ.ಆರ್.ರಮೇಶ್‌ ಕುಮಾರ್‌ ರಾಜ್ಯ ವಿಧಾನಸಭೆಯ ಸಭಾಪತಿಯಾಗಿ ಆಯ್ಕೆ ಆದರು. ಸಿದ್ದರಾಮಯ್ಯರ ಸೂಚನೆ ಮತ್ತು ಜಿ.ಪರಮೇಶ್ವರ್ ಅವರ ಅನುಮೋದನೆಯಂತೆ ಸಭಾಧ್ಯಕ್ಷರಾಗಿ ರಮೇಶ್‌ ಕುಮಾರ್‌ ಅವರ ಆಯ್ಕೆ ಪ್ರಸ್ತಾಪವನ್ನು ಹಂಗಾಮಿ ಸಭಾಧ್ಯಕ್ಷರಾಗಿದ್ದ ಬೋಪಯ್ಯ ಅವರು ಧ್ವನಿಮತದ ಮೂಲಕ ರಮೇಶ್‌ ಕುಮಾರ್‌ ಆಯ್ಕೆ ಆಗಿರುವುದನ್ನು ಘೋಷಿಸಿದರು.[೪೦]
ಕುಮಾರಸ್ವಾಮಿಯವರಿಂದ ಬಹುಮತ ಸಾಬಿತು
  • ಕೆ.ಆರ್.ರಮೇಶ್‌ ಕುಮಾರ್‌ ಸಭಾಧ್ಯಕ್ಷರಾಗಿ ಆಯ್ಕೆ ಆದ ಕೂಡಲೆ ಎಚ್‌.ಡಿ.ಕುಮಾರಸ್ವಾಮಿ ವಿಶ್ವಾಸಮತ ಯಾಚನೆ ಪ್ರಸ್ತಾಪವನ್ನು ಸಭೆಯಲ್ಲಿ ಮಂಡಿಸಿದರು. ಬಿ.ಎಸ್‌. ಯಡಿಯೂರಪ್ಪ ತಮ್ಮ ಮಾತು ಮುಗಿಸಿ, ಕಲಾಪವನ್ನು ಬಹಿಷ್ಕರಿಸಿ, ಸನದನದಿಂದ ಹೊರ ನಡೆದರು. ಯಡಿಯೂರಪ್ಪ ಅವರ ಪ್ರಶ್ನೆಗಳಿಗೆ ಉತ್ತರಿಸಿದ ಕುಮಾರಸ್ವಾಮಿ, ಕೊನೆಯಲ್ಲಿ ಸದನದಲ್ಲಿ ವಿಶ್ವಾಸ ಮತ ಕೋರಿದರು. ಸಭಾಧ್ಯಕ್ಷರು ಪ್ರಸ್ತಾವವನ್ನು ಧ್ವನಿಮತಕ್ಕೆ ಹಾಕಿ, ಧ್ವನಿ ಮತದ ಒಪ್ಪಿಗೆ ಮೂಲಕ ಸಭಾಧ್ಯಕ್ಷ ಕೆ.ಆರ್‌. ರಮೇಶ್‌ಕುಮಾರ್‌ ಅವರು ವಿಶ್ವಾಸಮತವನ್ನು ಅನುಮೋದಿಸಿದರು [೪೧]

ಮಂತ್ರಿಮಂಡಲ ರಚನೆ

[ಬದಲಾಯಿಸಿ]
  • ಜೆಡಿಎಸ್‌ ಮತ್ತು ಕಾಂಗ್ರೆಸ್‌ ಪಕ್ಷದ ಮೈತ್ರಿ ಸರ್ಕಾರದ ಸಚಿವರ ಪ್ರಮಾಣವಚನ ಸಮಾರಂಭ ರಾಜಭವನದ ಗಾಜಿನಮನೆಯಲ್ಲಿ ದಿ.6-6-2018 ಬುಧವಾರ ಸರಳವಾಗಿ ನೆರವೇರಿತು. ಕಾಂಗ್ರೆಸ್ ಪಕ್ಷದ 15 ಶಾಸಕರು ಮತ್ತು ಜೆಡಿಎಸ್‌ ಪಕ್ಷದ 10 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. (25 + ಹಿಂದೆ ಇಬ್ಬರ ಪ್ರಮಾಣವಚನ; ಒಟ್ಟು 27 ಜನರ ಮಂತ್ರಿಮಂಡಳ ರಚನೆಯಾಗಿದೆ. (ರಾಜ್ಯದ ಸಮ್ಮಿಶ್ರ ಸರ್ಕಾರದ ಸಚಿವರ ಕಿರುಪರಿಚಯ)[೪೨]

2018ರ ಸಾರ್ವತ್ರಿಕ ಚುನಾವಣೆಯಲ್ಲಿ ಆಯ್ಕೆಯಾದವರು

[ಬದಲಾಯಿಸಿ]
ಕ್ರ.ಸಂ. ವಿಧಾನಸಭಾ ಕ್ಷೇತ್ರ ಆಯ್ಕೆಯಾದ ಸದಸ್ಯರು ಪಕ್ಷ ಮತಗಳು ಹತ್ತಿರದ ಸ್ಪರ್ಧಿ ಪಕ್ಷ ಮತಗಳು
1 ನಿಪ್ಪಾಣಿ ಶಶಿಕಲಾ ಜೊಲ್ಲೆ ಬಿಜೆಪಿ 87006 ಕಾಕಾಸೊ ಪಾಟೀಲ ಕಾಂಗ್ರೆಸ್ 78500
2 ಚಿಕ್ಕೋಡಿ-ಸದಲಗಾ ಗಣೇಶ ಹುಕ್ಕೇರಿ ಕಾಂಗ್ರೆಸ್ 91467 ಅಣ್ಣಾಸಾಹೇಬ್ ಜೊಲ್ಲೆ ಬಿಜೆಪಿ 80898
3 ಅಥಣಿ ಮಹೇಶ ಕುಮಟಳ್ಳಿ ಕಾಂಗ್ರೆಸ್ 82094 ಲಕ್ಷ್ಮಣ ಸವದಿ ಬಿಜೆಪಿ 79763
4 ಕಾಗವಾಡ ಶ್ರೀಮಂತ ಪಾಟೀಲ ಕಾಂಗ್ರೆಸ್ 83060 ಭರಮಗೌಡ ಕಾಗೆ ಬಿಜೆಪಿ 50118
5 ಕುಡಚಿ ಪಿ.ರಾಜೀವ ಬಿಜೆಪಿ 67781 ಅಮಿತ್ ಘಾಟಗೆ ಕಾಂಗ್ರೆಸ್ 52773
6 ರಾಯಭಾಗ ದುರ್ಯೋಧನ ಐಹೊಳೆ ಬಿಜೆಪಿ 67502 ಪ್ರದೀಪಕುಮಾರ ಮಾಳಗೆ ಕಾಂಗ್ರೆಸ್ 50954
7 ಹುಕ್ಕೇರಿ ಉಮೇಶ ಕತ್ತಿ ಬಿಜೆಪಿ 83588 ಎ.ಬಿ.ಪಾಟೀಲ ಕಾಂಗ್ರೆಸ್ 68203
8 ಅರಭಾವಿ ಬಾಲಚಂದ್ರ ಜಾರಕಿಹೊಳಿ ಬಿಜೆಪಿ 96144 ಭೀಮಪ್ಪ ಗಡಾದ ಕಾಂಗ್ರೆಸ್ 48816
9 ಗೋಕಾಕ ರಮೇಶ ಜಾರಕಿಹೊಳಿ ಕಾಂಗ್ರೆಸ್ 90249 ಅಶೋಕ ಪೂಜಾರಿ ಬಿಜೆಪಿ 75969
10 ಯಮಕನಮರಡಿ ಸತೀಶ ಜಾರಕಿಹೊಳಿ ಕಾಂಗ್ರೆಸ್ 73512 ಮಾರುತಿ ಅಷ್ಟಗಿ ಬಿಜೆಪಿ 70662
11 ಬೆಳಗಾವಿ ಉತ್ತರ ಅನಿಲ ಬೆನಕೆ ಬಿಜೆಪಿ 79060 ಫಿರೋಜ್ ಸೇಠ್ ಕಾಂಗ್ರೆಸ್ 61793
12 ಬೆಳಗಾವಿ ದಕ್ಷಿಣ ಅಭಯ ಪಾಟೀಲ ಬಿಜೆಪಿ 84498 ಎಮ್.ಡಿ.ಲಕ್ಷ್ಮಿನಾರಾಯಣ ಕಾಂಗ್ರೆಸ್ 25806
13 ಬೆಳಗಾವಿ ಗ್ರಾಮೀಣ ಲಕ್ಷ್ಮಿ ಹೆಬ್ಬಾಳಕರ ಕಾಂಗ್ರೆಸ್ 102040 ಸಂಜಯ ಪಾಟೀಲ ಬಿಜೆಪಿ 50316
14 ಖಾನಾಪುರ ಡಾ.ಅಂಜಲಿ ನಿಂಬಾಳ್ಕರ ಕಾಂಗ್ರೆಸ್ 36649 ವಿಠ್ಠಲ ಹಲಗೇಕರ ಬಿಜೆಪಿ 31516
15 ಕಿತ್ತೂರು ಮಹಾಂತೇಶ ದೊಡ್ಡಗೌಡರ ಬಿಜೆಪಿ 73155 ಡಿ.ಬಿ.ಇನಾಂದಾರ ಕಾಂಗ್ರೆಸ್ 40293
16 ಬೈಲಹೊಂಗಲ ಮಹಾಂತೇಶ ಕೌಜಲಗಿ ಕಾಂಗ್ರೆಸ್ 47040 ಜಗದೀಶ ಮೆಟಗುಡ್ಡ ಪಕ್ಷೇತರ 41918
17 ಸವದತ್ತಿ ಯಲ್ಲಮ್ಮ ವಿಶ್ವನಾಥ ಮಾಮನಿ ಬಿಜೆಪಿ 62480 ಆನಂದ ಛೋಪ್ರಾ ಪಕ್ಷೇತರ 56189
18 ರಾಮದುರ್ಗ ಮಹಾದೇವಪ್ಪ ಯಾದವಾಡ ಬಿಜೆಪಿ 68349 ಅಶೋಕ ಪಟ್ಟಣ ಕಾಂಗ್ರೆಸ್ 65474
19 ಮುಧೋಳ ಗೋವಿಂದ ಕಾರಜೋಳ ಬಿಜೆಪಿ 76431 ಸತೀಶ ಬಂಡಿವಡ್ಡರ ಕಾಂಗ್ರೆಸ್ 60949
20 ತೇರದಾಳ ಸಿದ್ದು ಸವದಿ ಬಿಜೆಪಿ 87213 ಉಮಾಶ್ರೀ ಕಾಂಗ್ರೆಸ್ 66324
21 ಜಮಖಂಡಿ ಆನಂದ ನ್ಯಾಮಗೌಡ ಕಾಂಗ್ರೆಸ್ 97017 ಶ್ರೀಕಾಂತ ಕುಲಕರ್ಣಿ ಬಿಜೆಪಿ 57537
22 ಬೀಳಗಿ ಮುರುಗೇಶ ನಿರಾಣಿ ಬಿಜೆಪಿ 85135 ಜೆ.ಟಿ.ಪಾಟೀಲ ಕಾಂಗ್ರೆಸ್ 80324
23 ಬದಾಮಿ ಸಿದ್ದರಾಮಯ್ಯ ಕಾಂಗ್ರೆಸ್ 67599 ಶ್ರೀರಾಮಲು ಬಿಜೆಪಿ 65903
24 ಬಾಗಲಕೋಟೆ ವೀರಣ್ಣ ಚರಂತಿಮಠ ಬಿಜೆಪಿ 85653 ಹೆಚ್.ವಾಯ್.ಮೇಟಿ ಕಾಂಗ್ರೆಸ್ 69719
25 ಹುನಗುಂದ ದೊಡ್ಡನಗೌಡ ಪಾಟೀಲ ಬಿಜೆಪಿ 65012 ವಿಜಯಾನಂದ ಕಾಶಪ್ಪನವರ ಕಾಂಗ್ರೆಸ್ 59785
26 ಮುದ್ದೇಬಿಹಾಳ ಎ.ಎಸ್.ಪಾಟೀಲ(ನಡಹಳ್ಳಿ) ಬಿಜೆಪಿ 63512 ಸಿ.ಎಸ್.ನಾಡಗೌಡ ಕಾಂಗ್ರೆಸ್ 54879
27 ದೇವರ ಹಿಪ್ಪರಗಿ ಸೋಮನಗೌಡ ಪಾಟೀಲ ಬಿಜೆಪಿ 48245 ರಾಜುಗೌಡ ಪಾಟೀಲ ಜೆಡಿಎಸ್ 44892
28 ಬಸವನ ಬಾಗೇವಾಡಿ ಶಿವಾನಂದ ಪಾಟೀಲ ಕಾಂಗ್ರೆಸ್ 58647 ಸೋಮನಗೌಡ ಪಾಟೀಲ ಜೆಡಿಎಸ್ 55461
29 ಬಬಲೇಶ್ವರ ಎಂ.ಬಿ.ಪಾಟೀಲ ಕಾಂಗ್ರೆಸ್ 98339 ವಿಜಯಗೌಡ ಪಾಟೀಲ ಬಿಜೆಪಿ 68624
30 ವಿಜಾಪುರ ನಗರ ಬಸನಗೌಡ ಪಾಟೀಲ(ಯತ್ನಾಳ) ಬಿಜೆಪಿ 76308 ಅಬ್ದುಲ್ ಹಮೀದ್ ಮುಶ್ರೇಫ್ ಕಾಂಗ್ರೆಸ್ 69895
31 ನಾಗಠಾಣ ದೇವಾನಂದ ಚವ್ಹಾಣ ಜೆಡಿಎಸ್ 59709 ವಿಠ್ಠಲ ಕಟಕದೊಂಡ ಕಾಂಗ್ರೆಸ್ 54108
32 ಇಂಡಿ ಯಶವಂತರಾಯಗೌಡ ಪಾಟೀಲ ಕಾಂಗ್ರೆಸ್ 50401 ಬಿ.ಡಿ.ಪಾಟೀಲ(ಹಂಜಗಿ) ಜೆಡಿಎಸ್ 40463
33 ಸಿಂದಗಿ ಎಮ್.ಸಿ.ಮನಗೂಳಿ ಜೆಡಿಎಸ್ 70865 ರಮೇಶ ಭೂಸನೂರ ಬಿಜೆಪಿ 61560
34 ಅಫಜಲಪುರ ಎಮ್.ವೈ.ಪಾಟೀಲ ಕಾಂಗ್ರೆಸ್ 71735 ಮಾಲಿಕಯ್ಯ ಗುತ್ತೆದಾರ ಬಿಜೆಪಿ 61141
35 ಜೇವರ್ಗಿ ಅಜಯ ಧರ್ಮಸಿಂಗ್ ಕಾಂಗ್ರೆಸ್ 68508 ದೊಡ್ಡಪ್ಪಗೌಡ ಪಾಟೀಲ ಬಿಜೆಪಿ 52452
36 ಸುರಪುರ ನರಸಿಂಹ(ರಾಜುಗೌಡ) ನಾಯಕ ಬಿಜೆಪಿ 104426 ರಾಜಾ ವೆಂಕಟಪ್ಪ ನಾಯಕ ಕಾಂಗ್ರೆಸ್ 81858
37 ಶಹಾಪುರ ಶರಣಬಸಪ್ಪಗೌಡ ದರ್ಶನಾಪುರ ಕಾಂಗ್ರೆಸ್ 78642 ಗುರು ಪಾಟೀಲ ಶಿರವಾಳ ಬಿಜೆಪಿ 47668
38 ಯಾದಗಿರಿ ವೆಂಕಟ್ ರೆಡ್ಡಿ ಮುದ್ನಾಳ ಬಿಜೆಪಿ 62227 ಡಾ.ಎ.ಬಿ.ಮಲಕಾರೆಡ್ಡಿ ಕಾಂಗ್ರೆಸ್ 49346
39 ಗುರುಮಠಕಲ್ ನಾಗನಗೌಡ ಜೆಡಿಎಸ್ 79627 ಬಾಬುರಾವ್ ಚಿಂಚಣಸೂರ ಕಾಂಗ್ರೆಸ್ 55147
40 ಚಿತ್ತಾಪುರ ಪ್ರಿಯಾಂಕ್ ಖರ್ಗೆ ಕಾಂಗ್ರೆಸ್ 69700 ವಾಲ್ಮೀಕಿ ನಾಯಕ ಬಿಜೆಪಿ 65307
41 ಸೇಡಂ ರಾಜಕುಮಾರ ಪಾಟೀಲ(ತೆಲ್ಕೂರ) ಬಿಜೆಪಿ 80668 ಡಾ.ಶರಣಪ್ರಕಾಶ ಪಾಟೀಲ ಕಾಂಗ್ರೆಸ್ 73468
42 ಚಿಂಚೋಳಿ ಡಾ.ಅವಿನಾಶ ಜಾಧವ ಬಿಜೆಪಿ 69109 ಸುಭಾಸ ರಾಠೋಡ ಕಾಂಗ್ರೆಸ್ 61079
43 ಕಲಬುರಗಿ ಗ್ರಾಮೀಣ ಬಸವರಾಜ್ ಮಟ್ಟಿಮೊಡ ಬಿಜೆಪಿ 61750 ವಿಜಯಕುಮಾರ ಜಿ.ರಾಮಕೃಷ್ಣ ಕಾಂಗ್ರೆಸ್ 49364
44 ಕಲಬುರಗಿ ದಕ್ಷಿಣ ದತ್ತಾತ್ರೇಯ ಪಾಟೀಲ(ರೇವೂರ) ಬಿಜೆಪಿ 64788 ಅಲ್ಲಮಪ್ರಭು ಪಾಟೀಲ ಕಾಂಗ್ರೆಸ್ 59357
45 ಕಲಬುರಗಿ ಉತ್ತರ ಕನೀಜ್ ಫಾತಿಮಾ ಕಾಂಗ್ರೆಸ್ 64311 ಚಂದ್ರಕಾಂತ ಪಾಟೀಲ ಬಿಜೆಪಿ 58371
46 ಆಳಂದ ಸುಭಾಷ್ ಗುತ್ತೆದಾರ ಬಿಜೆಪಿ 76815 ಬಿ.ಆರ್.ಪಾಟೀಲ ಕಾಂಗ್ರೆಸ್ 76118
47 ಬಸವಕಲ್ಯಾಣ ಬಿ.ನಾರಾಯಣ ರಾವ್ ಕಾಂಗ್ರೆಸ್ 61425 ಮಲ್ಲಿಕಾರ್ಜುನ ಕೂಬಾ ಬಿಜೆಪಿ 44153
48 ಹುಮ್ನಾಬಾದ್ ರಾಜಶೇಖರ ಪಾಟೀಲ ಕಾಂಗ್ರೆಸ್ 74945 ಸುಭಾಸ ಕಲ್ಲೂರ ಬಿಜೆಪಿ 43131
49 ಬೀದರ ದಕ್ಷಿಣ ಬಂಡೆಪ್ಪ ಕಾಶಂಪುರ ಜೆಡಿಎಸ್ 53347 ಡಾ.ಶೈಲೇಂದ್ರ ಬಾಲ್ದಳೆ ಬಿಜೆಪಿ 41239
50 ಬೀದರ ರಹೀಮ್ ಖಾನ್ ಕಾಂಗ್ರೆಸ್ 73270 ಸೂರ್ಯಕಾಂತ ನಾಗಮಾರಪಳ್ಳಿ ಬಿಜೆಪಿ 63025
51 ಭಾಲ್ಕಿ ಈಶ್ವರ ಖಂಡ್ರೆ ಕಾಂಗ್ರೆಸ್ 84673 ಡಿ.ಕೆ.ಸಿದ್ರಾಮ ಬಿಜೆಪಿ 63235
52 ಔರಾದ್ ಪ್ರಭು ಚೌಹಾಣ ಬಿಜೆಪಿ 75061 ವಿಜಯಕುಮಾರ ಕಾಂಗ್ರೆಸ್ 64469
53 ರಾಯಚೂರು ಗ್ರಾಮೀಣ ಬಸನಗೌಡ ದದ್ದಲ ಕಾಂಗ್ರೆಸ್ 66656 ತಿಪ್ಪರಾಜು ಹವಾಲದಾರ ಬಿಜೆಪಿ 56692
54 ರಾಯಚೂರು ಡಾ.ಶಿವರಾಜ ಪಾಟೀಲ ಬಿಜೆಪಿ 56511 ಸೈಯದ್ ಯಾಸೀನ್ ಕಾಂಗ್ರೆಸ್ 45520
55 ಮಾನ್ವಿ ರಾಜಾ ವೆಂಕಟಪ್ಪ ನಾಯಕ ಜೆಡಿಎಸ್ 53548 ಡಾ.ತನುಶ್ರೀ ಪಕ್ಷೇತರ 37733
56 ದೇವದುರ್ಗ ಶಿವನಗೌಡ ನಾಯಕ ಬಿಜೆಪಿ 67003 ಎ.ರಾಜಶೇಖರ ನಾಯಕ ಕಾಂಗ್ರೆಸ್ 45958
57 ಲಿಂಗಸೂಗೂರು ಡಿ.ಎಸ್.ಹೂಲಗೇರಿ ಕಾಂಗ್ರೆಸ್ 54230 ಸಿದ್ದು ಬಂಡಿ ಜೆಡಿಎಸ್ 49284
58 ಸಿಂಧನೂರು ವೆಂಕಟರಾವ ನಾಡಗೌಡ ಜೆಡಿಎಸ್ 71514 ಹಂಪನಗೌಡ ಬಾದರ್ಲಿ ಕಾಂಗ್ರೆಸ್ 69917
59 ಮಸ್ಕಿ ಪ್ರತಾಪಗೌಡ ಪಾಟೀಲ ಕಾಂಗ್ರೆಸ್ 60387 ಬಸನಗೌಡ ತುರವಿಹಾಳ ಬಿಜೆಪಿ 60174
60 ಕುಷ್ಟಗಿ ಅಮರೇಗೌಡ ಬಯ್ಯಾಪುರ ಕಾಂಗ್ರೆಸ್ 87567 ದೊಡ್ಡನಗೌಡ ಪಾಟೀಲ ಬಿಜೆಪಿ 69536
61 ಕನಕಗಿರಿ ಬಸವರಾಜ ದಡೇಸೂಗೂರ ಬಿಜೆಪಿ 87735 ಶಿವರಾಜ ತಂಗಡಗಿ ಕಾಂಗ್ರೆಸ್ 73510
62 ಗಂಗಾವತಿ ಪರಣ್ಣ ಮುನವಳ್ಳಿ ಬಿಜೆಪಿ 67617 ಇಕ್ಬಾಲ್ ಅನ್ಸಾರಿ ಕಾಂಗ್ರೆಸ್ 59644
63 ಯಲಬುರ್ಗಾ ಆಚಾರ ಹಾಲಪ್ಪ ಬಿಜೆಪಿ 79072 ಬಸವರಾಜ ರಾಯರೆಡ್ಡಿ ಕಾಂಗ್ರೆಸ್ 65754
64 ಕೊಪ್ಪಳ ಕೆ.ರಾಘವೇಂದ್ರ ಹಿಟ್ನಾಳ ಕಾಂಗ್ರೆಸ್ 98783 ಅಮರೇಶ ಕರಡಿ ಬಿಜೆಪಿ 72432
65 ಶಿರಹಟ್ಟಿ ರಾಮಪ್ಪ ಲಮಾಣಿ ಬಿಜೆಪಿ 91967 ರಾಮಕೃಷ್ಣ ದೊಡ್ಡಮನಿ ಕಾಂಗ್ರೆಸ್ 61974
66 ಗದಗ ಹೆಚ್ ಕೆ ಪಾಟೀಲ ಕಾಂಗ್ರೆಸ್ 77699 ಅನಿಲ ಮೆಣಸಿನಕಾಯಿ ಬಿಜೆಪಿ 75831
67 ರೋಣ ಕಳಕಪ್ಪ ಬಂಡಿ ಬಿಜೆಪಿ 83735 ಗುರುಪಾದಗೌಡ ಪಾಟೀಲ ಕಾಂಗ್ರೆಸ್ 76401
68 ನರಗುಂದ ಸಿ.ಸಿ.ಪಾಟೀಲ ಬಿಜೆಪಿ 73045 ಬಿ.ಆರ್.ಯಾವಗಲ್ ಕಾಂಗ್ರೆಸ್ 65066
69 ನವಲಗುಂದ ಶಂಕರ ಪಾಟೀಲ ಮುನೇನಕೊಪ್ಪ ಬಿಜೆಪಿ 65718 ಎನ್.ಹೆಚ್.ಕೋನರೆಡ್ಡಿ ಜೆಡಿಎಸ್ 45197
70 ಕುಂದಗೋಳ ಕುಸುಮಾವತಿ ಶಿವಳ್ಳಿ ಕಾಂಗ್ರೆಸ್ 77640 ಎಸ್.ಐ.ಚಿಕ್ಕನಗೌಡರ ಬಿಜೆಪಿ 76039
71 ಧಾರವಾಡ ಅಮೃತ ದೇಸಾಯಿ ಬಿಜೆಪಿ 85123 ವಿನಯ ಕುಲಕರ್ಣಿ ಕಾಂಗ್ರೆಸ್ 64783
72 ಹುಬ್ಬಳ್ಳಿ-ಧಾರವಾಡ(E) ಅಬ್ಬಯ್ಯ ಪ್ರಸಾದ ಕಾಂಗ್ರೆಸ್ 77080 ಚಂದ್ರಶೇಖರ ಗೋಕಾಕ ಬಿಜೆಪಿ 55613
73 ಹುಬ್ಬಳ್ಳಿ-ಧಾರವಾಡ(C) ಜಗದೀಶ ಶೆಟ್ಟರ್ ಬಿಜೆಪಿ 75794 ಡಾ.ಮಹೇಶ ನಲವಾಡ ಕಾಂಗ್ರೆಸ್ 54488
74 ಹುಬ್ಬಳ್ಳಿ ಧಾರವಾಡ(W) ಅರವಿಂದ ಬೆಲ್ಲದ ಬಿಜೆಪಿ 96462 ಮಹಮ್ಮದ್ ತಮಟಗಾರ ಕಾಂಗ್ರೆಸ್ 55975
75 ಕಲಘಟಗಿ ಸಿ.ಎಮ್.ನಿಂಬಣ್ಣನವರ ಬಿಜೆಪಿ 83267 ಸಂತೋಷ ಲಾಡ್ ಕಾಂಗ್ರೆಸ್ 57270
76 ಹಳಿಯಾಳ ಆರ್.ವಿ.ದೇಶಪಾಂಡೆ ಕಾಂಗ್ರೆಸ್ 61577 ಸುನಿಲ ಹೆಗಡೆ ಬಿಜೆಪಿ 56437
77 ಕಾರವಾರ ರೂಪಾಲಿ ನಾಯ್ಕ ಬಿಜೆಪಿ 60339 ಆನಂದ ಅಸ್ನೋಟಿಕರ ಜೆಡಿಎಸ್ 46275
78 ಕುಮಟಾ ದಿನಕರ ಶೆಟ್ಟಿ ಬಿಜೆಪಿ 59392 ಶಾರದ ಶೆಟ್ಟಿ ಕಾಂಗ್ರೆಸ್ 26642
79 ಭಟ್ಕಳ ಸುನಿಲ ನಾಯ್ಕ ಬಿಜೆಪಿ 83172 ಮಂಕಾಳ ವೈದ್ಯ ಕಾಂಗ್ರೆಸ್ 77242
80 ಸಿರ್ಸಿ ವಿಶ್ವೇಶ್ವರ ಹೆಗಡೆ ಕಾಗೇರಿ ಬಿಜೆಪಿ 70595 ಭೀಮಣ್ಣ ನಾಯಕ ಕಾಂಗ್ರೆಸ್ 53134
81 ಯಲ್ಲಾಪುರ ಅರೆಬೈಲ್ ಶಿವರಾಮ ಹೆಬ್ಬಾರ ಕಾಂಗ್ರೆಸ್ 66290 ವಿ.ಎಸ್.ಪಾಟೀಲ ಬಿಜೆಪಿ 64807
82 ಹಾನಗಲ್ ಸಿ.ಎಮ್.ಉದಾಸಿ ಬಿಜೆಪಿ 80529 ಶ್ರೀನಿವಾಸ ಮಾನೆ ಕಾಂಗ್ರೆಸ್ 74015
83 ಶಿಗ್ಗಾಂವಿ ಬಸವರಾಜ ಬೊಮ್ಮಾಯಿ ಬಿಜೆಪಿ 83868 ಸೈಯದ್ ಖಾದ್ರಿ ಕಾಂಗ್ರೆಸ್ 74603
84 ಹಾವೇರಿ ನೆಹರು ಓಲೇಕಾರ ಬಿಜೆಪಿ 86565 ರುದ್ರಪ್ಪ ಲಮಾಣಿ ಕಾಂಗ್ರೆಸ್ 75261
85 ಬ್ಯಾಡಗಿ ವಿರೂಪಕ್ಷಪ್ಪ ಬಳ್ಳಾರಿ ಬಿಜೆಪಿ 91721 ಎಸ್.ಆರ್.ಪಾಟೀಲ ಕಾಂಗ್ರೆಸ್ 70450
86 ಹಿರೇಕೇರೂರು ಬಿ.ಸಿ.ಪಾಟೀಲ ಕಾಂಗ್ರೆಸ್ 72461 ಯು.ಬಿ.ಬಣಕಾರ ಬಿಜೆಪಿ 71906
87 ರಾಣಿಬೆನ್ನೂರು ಆರ್.ಶಂಕರ ಕೆಪಿಜೆಪಿ 63910 ಕೆ.ಬಿ.ಕೋಳಿವಾಡ ಕಾಂಗ್ರೆಸ್ 59572
88 ಹಡಗಲಿ ಪಿ.ಟಿ.ಪರಮೇಶ್ವರ ನಾಯ್ಕ ಕಾಂಗ್ರೆಸ್ 54097 ಓದೋ ಗಂಗಪ್ಪ ಸ್ವತಂತ್ರ 44919
89 ಹಗರಿಬೊಮ್ಮನಹಳ್ಳಿ ಎಲ್.ಬಿ.ಪಿ.ಭೀಮನಾಯ್ಕ ಕಾಂಗ್ರೆಸ್ 78337 ನೇಮಿರಾಜ ನಾಯ್ಕ ಬಿಜೆಪಿ 71105
90 ವಿಜಯನಗರ ಆನಂದ ಸಿಂಗ್ ಕಾಂಗ್ರೆಸ್ 83214 ಎಚ್.ಆರ್.ಗವಿಯಪ್ಪ ಬಿಜೆಪಿ 74986
91 ಕಂಪ್ಲಿ ಜೆ.ಎನ್.ಗಣೇಶ ಕಾಂಗ್ರೆಸ್ 80592 ಟಿ.ಹೆಚ್.ಸುರೇಶ ಬಾಬು ಬಿಜೆಪಿ 75037
92 ಸಿರಗುಪ್ಪ ಎಮ್.ಎಸ್.ಸೋಮಲಿಂಗಪ್ಪ ಬಿಜೆಪಿ 82546 ಬಿ.ಮುರಳಿಕೃಷ್ಣ ಕಾಂಗ್ರೆಸ್ 61275
93 ಬಳ್ಳಾರಿ ಬಿ.ನಾಗೇಂದ್ರ ಕಾಂಗ್ರೆಸ್ 79186 ಸಣ್ಣ ಫಕೀರಪ್ಪ ಬಿಜೆಪಿ 76507
94 ಬಳ್ಳಾರಿ ನಗರ ಜಿ.ಸೋಮಶೇಖರ ರೆಡ್ಡಿ ಬಿಜೆಪಿ 76589 ಅನಿಲ ಲಾಡ್ ಕಾಂಗ್ರೆಸ್ 60434
95 ಸಂಡೂರು ಇ.ತುಕಾರಾಮ್ ಕಾಂಗ್ರೆಸ್ 78106 ಡಿ.ರಾಘವೇಂದ್ರ ಬಿಜೆಪಿ 64096
96 ಕೂಡ್ಲಿಗಿ ಎನ್.ವಾಯ್.ಗೋಪಾಲಕೃಷ್ಣ ಬಿಜೆಪಿ 50085 ಎನ್.ಟಿ.ಬೊಮ್ಮಣ್ಣ ಜೆಡಿಎಸ್ 39272
97 ಮೊಳಕಾಲ್ಮೂರು ಶ್ರೀರಾಮಲು ಬಿಜೆಪಿ 84018 ಡಾ.ಬಿ.ಯೋಗೇಶ ಬಾಬು ಸ್ವತಂತ್ರ 41973
98 ಚಳ್ಳಕೆರೆ ಟಿ.ರಘುಮೂರ್ತಿ ಕಾಂಗ್ರೆಸ್ 72874 ರವೀಶಕುಮಾರ ಜೆಡಿಎಸ್ 59335
99 ಚಿತ್ರದುರ್ಗ ಜಿ.ಹೆಚ್.ತಿಪ್ಪಾರೆಡ್ಡಿ ಬಿಜೆಪಿ 82896 ಕೆ.ಸಿ.ವಿರೇಂದ್ರ ಜೆಡಿಎಸ್ 49911
100 ಹಿರಿಯೂರು ಕೆ.ಪೂರ್ಣಿಮಾ ಶ್ರೀನಿವಾಸ ಬಿಜೆಪಿ 77733 ಡಿ.ಸುಧಾಕರ ಕಾಂಗ್ರೆಸ್ 64858
101 ಹೊಸದುರ್ಗ ಗೂಳಿಹಟ್ಟಿ ಶೇಖರ ಬಿಜೆಪಿ 90562 ಬಿ.ಜಿ.ಗೋವಿಂದಪ್ಪ ಕಾಂಗ್ರೆಸ್ 64570
102 ಹೊಳಲ್ಕೆರೆ ಎಂ.ಚಂದ್ರಪ್ಪ ಬಿಜೆಪಿ 107976 ಹೆಚ್.ಆಂಜನೇಯ ಕಾಂಗ್ರೆಸ್ 69036
103 ಜಗಳೂರು ಎಸ್.ವಿ.ರಾಮಚಂದ್ರ ಬಿಜೆಪಿ 78948 ಹೆಚ್.ಪಿ. ರಾಜೇಶ್ ಕಾಂಗ್ರೆಸ್ 49727
104 ಹರಪನಹಳ್ಳಿ ಜಿ.ಕರುಣಾಕರ ರೆಡ್ಡಿ ಬಿಜೆಪಿ 67603 ಎಂ.ಪಿ.ರವೀಂದ್ರ ಕಾಂಗ್ರೆಸ್ 57956
105 ಹರಿಹರ ಎಸ್.ರಾಮಪ್ಪ ಕಾಂಗ್ರೆಸ್ 64801 ಪಿ.ಬಿ.ಹರೀಶ ಬಿಜೆಪಿ 57541
106 ದಾವಣಗೆರೆ ಉತ್ತರ ಎಸ್.ಎ.ರವೀಂದ್ರನಾಥ ಬಿಜೆಪಿ 76540 ಎಸ್.ಎಸ್.ಮಲ್ಲಿಕಾರ್ಜುನ ಕಾಂಗ್ರೆಸ್ 72469
107 ದಾವಣಗೆರೆ ದಕ್ಷಿಣ ಶಾಮನೂರು ಶಿವಶಂಕರಪ್ಪ ಕಾಂಗ್ರೆಸ್ 71369 ಯಶವಂತರಾವ್ ಜಾಧವ ಬಿಜೆಪಿ 55485
108 ಮಾಯಕೊಂಡ ಎನ್.ಲಿಂಗಣ್ಣ ಬಿಜೆಪಿ 50556 ಕೆ.ಎಸ್.ಬಸವರಾಜ ಕಾಂಗ್ರೆಸ್ 44098
109 ಚನ್ನಗಿರಿ ಮಾಡಾಳು ವಿರೂಪಾಕ್ಷಪ್ಪ ಬಿಜೆಪಿ 73794 ವಡ್ನಾಳ ರಾಜಣ್ಣ ಕಾಂಗ್ರೆಸ್ 48014
110 ಹೊನ್ನಾಳಿ ಎಮ್.ಪಿ.ರೇಣುಕಾಚಾರ್ಯ ಬಿಜೆಪಿ 80624 ಡಿ.ಜಿ.ಶಾಂತನಗೌಡ ಕಾಂಗ್ರೆಸ್ 76391
111 ಶಿವಮೊಗ್ಗ ಗ್ರಾಮೀಣ ಕೆ.ಬಿ.ಅಶೋಕಕುಮಾರ ಬಿಜೆಪಿ 69326 ಶಾರದ ಪೂರ್ಯನಾಯಕ ಜೆಡಿಎಸ್ 65549
112 ಭದ್ರಾವತಿ ಬಿ.ಕೆ.ಸಂಗಮೇಶ ಕಾಂಗ್ರೆಸ್ 75722 ಎಂ.ಜೆ.ಅಪ್ಪಾಜಿ ಜೆಡಿಎಸ್ 64155
113 ಶಿವಮೊಗ್ಗ ಕೆ.ಎಸ್.ಈಶ್ವರಪ್ಪ ಬಿಜೆಪಿ 104027 ಕೆ.ಬಿ.ಪ್ರಸನ್ನಕುಮಾರ ಕಾಂಗ್ರೆಸ್ 57920
114 ತೀರ್ಥಹಳ್ಳಿ ಅಗರ ಜ್ಯಾನೇಂದ್ರ ಬಿಜೆಪಿ 67527 ಕಿಮ್ಮನೆ ರತ್ನಾಕರ ಕಾಂಗ್ರೆಸ್ 45572
115 ಶಿಕಾರಿಪುರ ಬಿ.ಎಸ್.ಯಡ್ಯೂರಪ್ಪ ಬಿಜೆಪಿ 86983 ಗೋಣಿ ಮಾಲತೇಶ ಕಾಂಗ್ರೆಸ್ 51586
116 ಸೊರಬ ಎಸ್.ಕುಮಾರ ಬಂಗಾರಪ್ಪ ಬಿಜೆಪಿ 72091 ಎಸ್. ಮಧು ಬಂಗಾರಪ್ಪ ಜೆಡಿಎಸ್ 58805
117 ಸಾಗರ ಹರತಾಳು ಹಾಲಪ್ಪ ಬಿಜೆಪಿ 78475 ಕಾಗೋಡು ತಿಮ್ಮಪ್ಪ ಕಾಂಗ್ರೆಸ್ 70436
118 ಬೈಂದೂರು ಬಿ.ಎಮ್.ಸುಕುಮಾರ ಶೆಟ್ಟಿ ಬಿಜೆಪಿ 96029 ಕೆ.ಗೋಪಾಲ ಪೂಜಾರಿ ಕಾಂಗ್ರೆಸ್ 71636
119 ಕುಂದಾಪುರ ಹಾಲಾಡಿ ಶ್ರೀನಿವಾಸ ಶೆಟ್ಟಿ ಬಿಜೆಪಿ 103434 ರಾಕೇಶ ಮಳ್ಳಿ ಕಾಂಗ್ರೆಸ್ 47029
120 ಉಡುಪಿ ಕೆ.ರಘುಪತಿ ಭಟ ಬಿಜೆಪಿ 84946 ಪ್ರಮೋದ ಮಾದ್ವರಾಜ ಕಾಂಗ್ರೆಸ್ 72902
121 ಕಾಪು ಲಾಲಜಿ ಮೆಂಡನ್ ಬಿಜೆಪಿ 75893 ವಿನಯ ಕುಮಾರ್ ಸೊರಕೆ ಕಾಂಗ್ರೆಸ್ 63976
122 ಕಾರ್ಕಳ ವಿ.ಸುನೀಲಕುಮಾರ ಬಿಜೆಪಿ 91245 ಗೋಪಾಲ ಭಂಡಾರಿ ಕಾಂಗ್ರೆಸ್ 48679
123 ಶೃಂಗೇರಿ ಟಿ.ಡಿ.ರಾಜೇಗೌಡ ಕಾಂಗ್ರೆಸ್ 62780 ಡಿ.ಎನ್.ಜೀವರಾಜ ಬಿಜೆಪಿ 60791
124 ಮೂಡಿಗೆರೆ ಎಮ್.ಪಿ.ಕುಮಾರಸ್ವಾಮಿ ಬಿಜೆಪಿ 58783 ಮೊಟಮ್ಮ ಕಾಂಗ್ರೆಸ್ 46271
125 ಚಿಕ್ಕಮಗಳೂರು ಸಿ.ಟಿ.ರವಿ ಬಿಜೆಪಿ 70863 ಬಿ.ಎಲ್.ಶಂಕರ ಕಾಂಗ್ರೆಸ್ 44549
126 ತರೀಕೆರೆ ಡಿ.ಎಸ್.ಸುರೇಶ ಬಿಜೆಪಿ 44940 ಜಿ.ಹೆಚ್.ಶ್ರೀನಿವಾಸ ಪಕ್ಷೇತರ 33253
127 ಕಡೂರು ಕೆ.ಎಸ್.ಪ್ರಕಾಶ ಬಿಜೆಪಿ 62232 ವೈ.ಎಸ್.ವಿ.ದತ್ತ ಜೆಡಿಎಸ್ 46860
128 ಚಿಕ್ಕನಾಯಕನಹಳ್ಳಿ ಜೆ.ಸಿ.ಮಧುಸ್ವಾಮಿ ಬಿಜೆಪಿ 69612 ಸಿ.ಬಿ.ಸುರೇಶ ಬಾಬು ಜೆಡಿಎಸ್ 59335
129 ತಿಪಟೂರು ಬಿ.ಸಿ.ನಾಗೇಶ ಬಿಜೆಪಿ 61383 ಕೆ.ಷಡಕ್ಷರಿ ಕಾಂಗ್ರೆಸ್ 35820
130 ತುರುವೇಕೆರೆ ಎ.ಎಸ್.ಜಯರಾಮ ಬಿಜೆಪಿ 60710 ಎಂ.ಟಿ.ಕೃಷ್ಣಪ್ಪ ಜೆಡಿಎಸ್ 58661
131 ಕುಣಿಗಲ್ ಎಚ್.ಡಿ.ರಂಗನಾಥ ಕಾಂಗ್ರೆಸ್ 58697 ಡಿ.ಕೃಷ್ಣಕುಮಾರ ಬಿಜೆಪಿ 53097
132 ತುಮಕೂರು ನಗರ ಜಿ.ಬಿ.ಜ್ಯೋತಿಗಣೇಶ ಬಿಜೆಪಿ 60421 ಎನ್.ಗೋವಿಂದ ರಾಜು ಕಾಂಗ್ರೆಸ್ 55128
133 ತುಮಕೂರು ಗ್ರಾಮೀಣ ಡಿ.ಸಿ.ಗೌರಿಶಂಕರ ಜೆಡಿಎಸ್ 82740 ಬಿ.ಸುರೇಶ ಗೌಡ ಬಿಜೆಪಿ 77100
134 ಕೊರಟಗೆರೆ ಡಾ.ಜಿ.ಪರಮೇಶ್ವರ ಕಾಂಗ್ರೆಸ್ 81598 ಪಿ.ಆರ್.ಸುಧಾಕರ ಲಾಲ್ ಜೆಡಿಎಸ್ 73979
135 ಗುಬ್ಬಿ ಎಸ್.ಆರ್.ಶ್ರೀನಿವಾಸ ಜೆಡಿಎಸ್ 55572 ಜಿ.ಎನ್.ಬೆಟ್ಟಸ್ವಾಮಿ ಬಿಜೆಪಿ 46491
136 ಶಿರಾ ಬಿ.ಸತ್ಯನಾರಾಯಣ ಜೆಡಿಎಸ್ 74338 ಟಿ.ಬಿ.ಜಯಚಂದ್ರ ಕಾಂಗ್ರೆಸ್ 63973
137 ಪಾವಗಡ ವೆಂಕಟರಾಮಪ್ಪ ಕಾಂಗ್ರೆಸ್ 72974 ಕೆ.ಎಂ.ತಿಮ್ಮರಾಯಪ್ಪ ಜೆಡಿಎಸ್ 72565
138 ಮಧುಗಿರಿ ಎಮ್.ವಿ.ವೀರಭದ್ರ ಜೆಡಿಎಸ್ 88521 ಕ್ಯಾತಸಂದ್ರ ಎನ್.ರಾಜಣ್ಣ ಕಾಂಗ್ರೆಸ್ 69947
139 ಗೌರಿಬಿದನೂರು ಎನ್‌.ಹೆಚ್.ಶಿವಶಂಕರರೆಡ್ಡಿ ಕಾಂಗ್ರೆಸ್ 69000 ಸಿ.ಆರ್.ನರಸಿಂಹಮೂರ್ತಿ ಜೆಡಿಎಸ್ 59832
140 ಬಾಗೇಪಲ್ಲಿ ಎಸ್.ಎನ್.ಸುಬ್ಬಾರೆಡ್ಡಿ ಕಾಂಗ್ರೆಸ್ 65710 ಜಿ.ವಿ.ಶ್ರೀರಮರೆಡ್ಡಿ ಸಿಪಿಎಂ 51697
141 ಚಿಕ್ಕಬಳ್ಳಾಪುರ ಡಾ.ಕೆ.ಸುಧಾಕರ ಕಾಂಗ್ರೆಸ್ 82006 ಕೆ.ಪಿ.ಬಚ್ಚೇಗೌಡ ಜೆಡಿಎಸ್ 51575
142 ಶಿಡ್ಲಘಟ್ಟ ಎಂ.ಮುನಿಯಪ್ಪ ಕಾಂಗ್ರೆಸ್ 76240 ಬಿ.ಎನ್.ರವಿಕುಮಾರ ಜೆಡಿಎಸ್ 66531
143 ಚಿಂತಾಮಣಿ ಜೆ.ಕೆ.ಕೃಷ್ಣಾರೆಡ್ಡಿ ಜೆಡಿಎಸ್ 87753 ಡಾ.ಎಮ್.ಸಿ.ಸುಧಾಕರ ಬಿಪಿಜೆಪಿ 82080
144 ಶ್ರೀನಿವಾಸಪುರ ಕೆ.ಆರ್.ರಮೇಶಕುಮಾರ ಕಾಂಗ್ರೆಸ್ 93571 ಜಿ.ಕೆ.ವೆಂಕಟಶಿವಾರೆಡ್ಡಿ ಜೆಡಿಎಸ್ 83019
145 ಮುಳಬಾಗಿಲು ಹೆಚ್.ನಾಗೇಶ ಪಕ್ಷೇತರ 74213 ಸಮೃದ್ಧಿ ಮಂಜುನಾಥ ಜೆಡಿಎಸ್ 67498
146 ಕೆಜಿಎಫ್ ರೂಪಕಲಾ.ಎಮ್. ಕಾಂಗ್ರೆಸ್ 71151 ಅಶ್ವಿನಿ ಸಂಪಂಗಿ ಬಿಜೆಪಿ 30324
147 ಬಂಗಾರಪೇಟೆ ಎಸ್.ಎನ್.ನಾರಯಣಸ್ವಾಮಿ ಕಾಂಗ್ರೆಸ್ 70871 ಎಮ್.ಮಲ್ಲೇಶ ಬಾಬು ಜೆಡಿಎಸ್ 49300
148 ಕೋಲಾರ ಕೆ.ಶ್ರೀನಿವಾಸಗೌಡ ಜೆಡಿಎಸ್ 82788 ಸೈಯದ್ ಜಮೀರ್ ಪಾಷಾ ಕಾಂಗ್ರೆಸ್ 38537
149 ಮಾಲೂರು ಕೆ.ವಾಯ್.ನಂಜೇಗೌಡ ಕಾಂಗ್ರೆಸ್ 75677 ಕೆ.ಎಸ್. ಮಂಜುನಾಥಗೌಡ ಜೆಡಿಎಸ್ 57762
150 ಯಲಹಂಕ ಎಸ್.ಆರ್.ವಿಶ್ವನಾಥ ಬಿಜೆಪಿ 120110 ಎ.ಎಮ್.ಹಣುಮಂತೇಗೌಡ ಜೆಡಿಎಸ್ 77607
151 ಕೆ.ಆರ್.ಪುರಂ ಬಿ.ಎ.ಬಸವರಾಜ ಕಾಂಗ್ರೆಸ್ 135404 ಎನ್.ಎಸ್.ನಂದೀಶರೆಡ್ಡಿ ಬಿಜೆಪಿ 102675
152 ಬ್ಯಾಟರಾಯನಪುರ ಕೃಷ್ಣ ಬೈರೇಗೌಡ ಕಾಂಗ್ರೆಸ್ 114964 ಎ.ರವಿ ಬಿಜೆಪಿ 109293
153 ಯಶವಂತಪುರ ಎಸ್.ಟಿ.ಸೋಮಶೇಖರ ಕಾಂಗ್ರೆಸ್ 115273 ಟಿ.ಎನ್.ಜವರಾಯಿಗೌಡ ಜೆಡಿಎಸ್ 104562
154 ರಾಜರಾಜೇಶ್ವರಿನಗರ ಮುನಿರತ್ನ ಕಾಂಗ್ರೆಸ್ 108064 ಪಿ.ಎಮ್.ಮುನಿರಾಜುಗೌಡ ಬಿಜೆಪಿ 82572
155 ದಾಸರಹಳ್ಳಿ ಆರ್.ಮಂಜುನಾಥ ಜೆಡಿಎಸ್ 94044 ಎಸ್.ಮುನಿರಾಜು ಬಿಜೆಪಿ 83369
156 ಮಹಾಲಕ್ಷ್ಮಿ ಲೇಔಟ್ ಕೆ.ಗೋಪಾಲಯ್ಯ ಜೆಡಿಎಸ್ 88218 ಎನ್.ಎಲ್.ನರೇಂದ್ರಬಾಬು ಬಿಜೆಪಿ 47118
157 ಮಲ್ಲೇಶ್ವರಂ ಡಾ.ಸಿ.ಎನ್.ಅಶ್ವಥ ನಾರಾಯಣ ಬಿಜೆಪಿ 83130 ಕೆಂಗಲ ಶೀಪಾದರೇಣು ಕಾಂಗ್ರೆಸ್ 29130
158 ಹೆಬ್ಬಾಳ ಬಿ.ಎಸ್.ಸುರೇಶ ಕಾಂಗ್ರೆಸ್ 74453 ವಾಯ್.ಎ.ನಾರಾಯಣಸ್ವಾಮಿ ಬಿಜೆಪಿ 53313
159 ಪುಲಕೇಶಿನಗರ ಅಖಂಡ ಶ್ರೀನಿವಾಸಮೂರ್ತಿ ಕಾಂಗ್ರೆಸ್ 97574 ಬಿ.ಪ್ರಸನ್ನಕುಮಾರ ಜೆಡಿಎಸ್ 15948
160 ಸರ್ವಜ್ಞನಗರ ಕೇಳಚಂದ್ರ ಜೋಶಫ್ ಜಾರ್ಜ್ ಕಾಂಗ್ರೆಸ್ 109955 ಎಮ್.ಎನ್.ರೆಡ್ಡಿ ಬಿಜೆಪಿ 56651
161 ಸಿ.ವಿ.ರಾಮನ್ ನಗರ ಎಸ್.ರಘು ಬಿಜೆಪಿ 58887 ಎಸ್.ಸಂಪತರಾಜ್ ಕಾಂಗ್ರೆಸ್ 46660
162 ಶಿವಾಜಿನಗರ ಆರ್.ರೋಷನ್ ಬೇಗ್ ಕಾಂಗ್ರೆಸ್ 59742 ಕಟ್ಟಾ ಸುಭ್ರಮಣ್ಯ ನಾಯ್ಡು ಬಿಜೆಪಿ 44702
163 ಶಾಂತಿನಗರ ಎನ್.ಎ.ಹ್ಯಾರೀಸ್ ಕಾಂಗ್ರೆಸ್ 60009 ಕೆ.ವಾಸುದೇವಮೂರ್ತಿ ಬಿಜೆಪಿ 41804
164 ಗಾಂಧಿನಗರ ದಿನೇಶ ಗುಂಡೂರಾವ್ ಕಾಂಗ್ರೆಸ್ 47354 ಎ.ಆರ್.ಸಪ್ತಗಿರಿಗೌಡ ಬಿಜೆಪಿ 37284
165 ರಾಜಾಜಿನಗರ ಎಸ್.ಸುರೇಶಕುಮಾರ್ ಬಿಜೆಪಿ 56271 ಜಿ.ಪದ್ಮಾವತಿ ಕಾಂಗ್ರೆಸ್ 46818
166 ಗೋವಿಂದರಾಜ ನಗರ ವಿ.ಸೋಮಣ್ಣ ಬಿಜೆಪಿ 79135 ಪ್ರಿಯಕೃಷ್ಣ ಕಾಂಗ್ರೆಸ್ 67760
167 ವಿಜಯನಗರ ಎಂ.ಕೃಷ್ಣಪ್ಪ ಕಾಂಗ್ರೆಸ್ 73353 ಎಚ್.ರವೀಂದ್ರ ಬಿಜೆಪಿ 70578
168 ಚಾಮರಾಜಪೇಟ ಬಿ.ಜೆಡ್.ಜಮೀರ್ ಅಹ್ಮದ್‌ಖಾನ್ ಕಾಂಗ್ರೆಸ್ 65339 ಎಮ್.ಲಕ್ಷ್ಮಿನಾರಾಯಣ ಬಿಜೆಪಿ 32202
169 ಚಿಕ್ಕಪೇಟೆ ಉದಯ ಗರುಡಾಚಾರ ಬಿಜೆಪಿ 57312 ಆರ್.ವಿ.ದೇವರಾಜ ಕಾಂಗ್ರೆಸ್ 49378
170 ಬಸವನಗುಡಿ ಎಲ್.ಎ.ರವಿಸುಬ್ರಮಣ್ಯ ಬಿಜೆಪಿ 76018 ಕೆ.ಬಾಗೇಗೌಡ ಜೆಡಿಎಸ್ 38009
171 ಪದ್ಮನಾಭನಗರ ಆರ್.ಅಶೋಕ ಬಿಜೆಪಿ 77868 ವಿ.ಕೆ.ಗೋಪಾಲ ಜೆಡಿಎಸ್ 45702
172 ಬಿ.ಟಿ.ಎಂ.ಲೇಔಟ್ ರಾಮಲಿಂಗಾರೆಡ್ಡಿ ಕಾಂಗ್ರೆಸ್ 67085 ಲಲ್ಲೇಶ ರೆಡ್ಡಿ ಬಿಜೆಪಿ 46607
173 ಜಯನಗರ ಸೌಮ್ಯ ರೆಡ್ಡಿ ಕಾಂಗ್ರೆಸ್ 53411 ಬಿ.ಎನ್.ಪ್ರಲ್ಹಾದ ಬಾಬು ಬಿಜೆಪಿ 49526
174 ಮಹಾದೇವಪುರ ಅರವಿಂದ ಲಿಂಬಾವಳಿ ಬಿಜೆಪಿ 141682 ಎ.ಸಿ.ಶ್ರೀನಿವಾಸ ಕಾಂಗ್ರೆಸ್ 123898
175 ಬೊಮ್ಮನಹಳ್ಳಿ ಎಂ.ಸತೀಶ ರೆಡ್ಡಿ ಬಿಜೆಪಿ 111863 ಸುಶ್ಮಾ ರಾಜಗೋಪಾಲ ರೆಡ್ಡಿ ಕಾಂಗ್ರೆಸ್ 64701
176 ಬೆಂಗಳೂರು ದಕ್ಷಿಣ ಎಂ.ಕೃಷ್ಣಪ್ಪ ಬಿಜೆಪಿ 152469 ಆರ್.ಕೆ.ರಮೇಶ ಕಾಂಗ್ರೆಸ್ 122052
177 ಆನೇಕಲ್ ಬಿ.ಶಿವಣ್ಣ ಕಾಂಗ್ರೆಸ್ 113894 ಎ.ನಾರಾಯಣಸ್ವಾಮಿ ಬಿಜೆಪಿ 105267
178 ಹೊಸಕೋಟೆ ಎಂ.ಟಿ.ಬಿ.ನಾಗರಾಜ ಕಾಂಗ್ರೆಸ್ 98824 ಶರತ ಬಚ್ಚೇಗೌಡ ಬಿಜೆಪಿ 91227
179 ದೇವನಹಳ್ಳಿ ಎಲ್.ಎನ್.ನಾರಾಯಣಸ್ವಾಮಿ ಜೆಡಿಎಸ್ 86966 ವೆಂಕಟಸ್ವಾಮಿ ಕಾಂಗ್ರೆಸ್ 69956
180 ದೊಡ್ಡಬಳ್ಳಾಪುರ ಟಿ.ವೆಂಕಟರಮಣಯ್ಯ ಕಾಂಗ್ರೆಸ್ 73225 ಬಿ.ಮುನೇಗೌಡ ಜೆಡಿಎಸ್ 63280
181 ನೆಲಮಂಗಲ ಡಾ.ಕೆ.ಶ್ರೀನಿವಾಸಮೂರ್ತಿ ಜೆಡಿಎಸ್ 69277 ಆರ್.ನಾರಾಯಣಸ್ವಾಮಿ ಕಾಂಗ್ರೆಸ್ 44956
182 ಮಾಗಡಿ ಎ.ಮಂಜುನಾಥ ಜೆಡಿಎಸ್ 119492 ಹೆಚ್.ಸಿ.ಬಾಲಕೃಷ್ಣ ಕಾಂಗ್ರೆಸ್ 68067
183 ರಾಮನಗರ ಅನಿತಾ ಕುಮಾರಸ್ವಾಮಿ ಜೆಡಿಎಸ್ 125043 ಎಲ್.ಚಂದ್ರಶೇಖರ ಬಿಜೆಪಿ 15906
184 ಕನಕಪುರ ಡಿ.ಕೆ.ಶಿವಕುಮಾರ ಕಾಂಗ್ರೆಸ್ 127552 ನಾರಾಯಣಗೌಡ ಜೆಡಿಎಸ್ 47643
185 ಚನ್ನಪಟ್ಟಣ ಎಚ್.ಡಿ.ಕುಮಾರಸ್ವಾಮಿ ಜೆಡಿಎಸ್ 87995 ಸಿ.ಪಿ.ಯೋಗೇಶ್ವರ ಬಿಜೆಪಿ 66465
186 ಮಳವಳ್ಳಿ ಡಾ.ಕೆ.ಅನ್ನದಾನಿ ಜೆಡಿಎಸ್ 103038 ಪಿ.ಎಂ.ನರೇಂದ್ರಸ್ವಾಮಿ ಕಾಂಗ್ರೆಸ್ 76278
187 ಮದ್ದೂರು ಡಿ.ಸಿ.ತಮ್ಮಣ್ಣ ಜೆಡಿಎಸ್ 109239 ಮಧು ಜಿ.ಮಾದೇಗೌಡ ಕಾಂಗ್ರೆಸ್ 55209
188 ಮೇಲುಕೋಟೆ ಸಿ.ಎಸ್.ಪುಟ್ಟರಾಜು ಜೆಡಿಎಸ್ 96003 ದರ್ಶನ ಪುಟ್ಟಣ್ಣಯ್ಯ ಸ್ವರಾಜ 73779
189 ಮಂಡ್ಯ ಎಮ್.ಶ್ರೀನಿವಾಸ ಜೆಡಿಎಸ್ 69421 ಪಿ.ರವಿಕುಮಾರ ಕಾಂಗ್ರೆಸ್ 47813
190 ಶ್ರೀರಂಗಪಟ್ಟಣ ರವೀಂದ್ರ ಶ್ರೀಕಂಠಯ್ಯ ಜೆಡಿಎಸ್ 101307 ಎ.ಬಿ.ರಮೇಶ ಬಂಡಿಸಿದ್ದೇಗೌಡ ಕಾಂಗ್ರೆಸ್ 57619
191 ನಾಗಮಂಗಲ ಸುರೇಶಗೌಡ ಜೆಡಿಎಸ್ 112396 ಎನ್. ಚೆಲುವರಾಯಸ್ವಾಮಿ ಕಾಂಗ್ರೆಸ್ 64729
192 ಕೃಷ್ಣರಾಜಪೇಟೆ ನಾರಾಯಣಗೌಡ ಜೆಡಿಎಸ್ 88016 ಕೆ.ಬಿ.ಚಂದ್ರಶೇಖರ ಕಾಂಗ್ರೆಸ್ 70897
193 ಶ್ರವಣಬೆಳಗೊಳ ಸಿ.ಎನ್.ಬಾಲಕೃಷ್ಣ ಜೆಡಿಎಸ್ 105516 ಸಿ.ಎಸ್.ಪುಟ್ಟೇಗೌಡ ಕಾಂಗ್ರೆಸ್ 52504
194 ಅರಸೀಕೆರೆ ಕೆ.ಎಂ.ಶಿವಲಿಂಗೇಗೌಡ ಜೆಡಿಎಸ್ 93986 ಜಿ.ಬಿ.ಗಂಗಾಧರ ಕಾಂಗ್ರೆಸ್ 50297
195 ಬೇಲೂರು ಕೆ.ಎಸ್.ಲಿಂಗೇಶ ಜೆಡಿಎಸ್ 64268 ಎಚ್.ಕೆ.ಸುರೇಶ ಬಿಜೆಪಿ 44578
196 ಹಾಸನ ಪ್ರೀತಂಗೌಡ ಬಿಜೆಪಿ 63348 ಹೆಚ್.ಎಸ್.ಪ್ರಕಾಶ ಜೆಡಿಎಸ್ 50342
197 ಹೊಳೆನರಸೀಪುರ ಹೆಚ್.ಡಿ.ರೇವಣ್ಣ ಜೆಡಿಎಸ್ 108541 ಬಿ.ಪಿ.ಮಂಜೇಗೌಡ ಕಾಂಗ್ರೆಸ್ 64709
198 ಅರಕಲಗೂಡು ಎ.ಟಿ.ರಾಮಸ್ವಾಮಿ ಜೆಡಿಎಸ್ 85064 ಎ.ಮಂಜು ಕಾಂಗ್ರೆಸ್ 74411
199 ಸಕಲೇಶಪುರ ಹೆಚ್.ಕೆ.ಕುಮಾರಸ್ವಾಮಿ ಜೆಡಿಎಸ್ 62262 ಸೋಮಶೇಖರ ಜಯರಾಜ ಬಿಜೆಪಿ 57320
200 ಬೆಳ್ತಂಗಡಿ ಹರೀಶ ಪೂಂಜಾ ಬಿಜೆಪಿ 98417 ಕೆ.ವಸಂತ ಬಂಗೇರ ಕಾಂಗ್ರೆಸ್ 75443
201 ಮೂಡುಬಿದಿರೆ ಉಮಾಕಂತ ಕೋತಿನ ಬಿಜೆಪಿ 87444 ಕೆ.ಅಭಯಚಂದ್ರ ಕಾಂಗ್ರೆಸ್ 57645
202 ಮಂಗಳೂರು ನಗರ ಉತ್ತರ ಡಾ.ಭರತ ಶೆಟ್ಟಿ ಬಿಜೆಪಿ 98648 ಬಿ.ಎ.ಮೊಯಿನುದ್ದೀನ್ ಬಾವ ಕಾಂಗ್ರೆಸ್ 72000
203 ಮಂಗಳೂರು ನಗರ ದಕ್ಷಿಣ ಡಿ.ವೇದವ್ಯಾಸ ಕಾಮತ ಬಿಜೆಪಿ 86545 ಜೆ.ಆರ್.ಲೋಬೊ ಕಾಂಗ್ರೆಸ್ 70470
204 ಮಂಗಳೂರು ಯು.ಟಿ.ಖಾದರ್ ಕಾಂಗ್ರೆಸ್ 80813 ಸಂತೋಷಕುಮಾರ ರೈ ಬೊಲಿಯಾರು ಬಿಜೆಪಿ 61074
205 ಬಂಟವಾಳ ಯು.ರಾಜೇಶ ನಾಯ್ಕ ಬಿಜೆಪಿ 97802 ಬಿ.ರಾಮನಾಥ ರೈ ಕಾಂಗ್ರೆಸ್ 81831
206 ಪುತ್ತೂರು ಸಂಜೀವ ಮಠಂದೂರ ಬಿಜೆಪಿ 90073 ಶಕುಂತಲಾ ಶೆಟ್ಟಿ ಕಾಂಗ್ರೆಸ್ 70596
207 ಸುಳ್ಯ ಎಸ್.ಅಂಗಾರ ಬಿಜೆಪಿ 95205 ಡಾ.ಬಿ.ರಘು ಕಾಂಗ್ರೆಸ್ 69137
208 ಮಡಿಕೇರಿ ಎಂ.ಪಿ.ಅಪ್ಪಚ್ಚು(ರಂಜನ್) ಬಿಜೆಪಿ 70631 ಬಿ.ಎ.ಜಿವಿಜಯ ಕಾಂಗ್ರೆಸ್ 54616
209 ವಿರಾಜಪೇಟೆ ಕೆ.ಜಿ.ಬೋಪಯ್ಯ ಬಿಜೆಪಿ 77944 ಸಿ.ಎಸ್.ಅರುಣ ಮಾಚಯ್ಯ ಕಾಂಗ್ರೆಸ್ 64591
210 ಪಿರಿಯಾಪಟ್ಟಣ ಕೆ.ಮಹಾದೇವ ಜೆಡಿಎಸ್ 77770 ಕೆ.ವೆಂಕಟೇಶ ಕಾಂಗ್ರೆಸ್ 70277
211 ಕೃಷ್ಣರಾಜನಗರ ಸಾ.ರಾ.ಮಹೇಶ ಜೆಡಿಎಸ್ 85011 ಡಿ.ರವಿಶಂಕರ ಕಾಂಗ್ರೆಸ್ 83232
212 ಹುಣಸೂರು ಹೆಚ್.ವಿಶ್ವನಾಥ ಜೆಡಿಎಸ್ 91667 ಹೆಚ್.ಪಿ.ಮಂಜುನಾಥ ಕಾಂಗ್ರೆಸ್ 83092
213 ಹೆಗ್ಗಡದೇವನಕೋಟೆ ಸಿ.ಅನಿಲ ಕಾಂಗ್ರೆಸ್ 76652 ಚಿಕ್ಕಣ್ಣ ಜೆಡಿಎಸ್ 54559
214 ನಂಜನಗೂಡು ಬಿ.ಹರ್ಷವರ್ಧನ ಬಿಜೆಪಿ 78030 ಕಳಲೆ ಎನ್.ಕೇಶವಮೂರ್ತಿ ಕಾಂಗ್ರೆಸ್ 65551
215 ಚಾಮುಂಡೇಶ್ವರಿ ಜಿ.ಟಿ.ದೇವೇಗೌಡ ಜೆಡಿಎಸ್ 121325 ಸಿದ್ದರಾಮಯ್ಯ ಕಾಂಗ್ರೆಸ್ 85283
216 ಕೃಷ್ಣರಾಜ ಎಸ್.ಎ.ರಾಮದಾಸ ಬಿಜೆಪಿ 78573 ಎಂ.ಕೆ.ಸೋಮಶೇಖರ ಕಾಂಗ್ರೆಸ್ 52226
217 ಚಾಮರಾಜ ಎಲ್.ನಾಗೇಂದ್ರ ಬಿಜೆಪಿ 51683 ವಾಸು ಕಾಂಗ್ರೆಸ್ 36747
218 ನರಸಿಂಹರಾಜ ತನ್ವೀರ್ ಸೇಠ್ ಕಾಂಗ್ರೆಸ್ 62268 ಎಸ್.ಸತೀಶ ಬಿಜೆಪಿ 44141
219 ವರುಣಾ ಯತೀಂದ್ರ ಸಿದ್ದರಾಮಯ್ಯ ಕಾಂಗ್ರೆಸ್ 96435 ಟಿ.ಬಸವರಾಜು ಬಿಜೆಪಿ 37819
220 ಟಿ.ನರಸೀಪುರ ಎಮ್.ಅಶ್ವಿನಕುಮಾರ ಜೆಡಿಎಸ್ 83929 ಡಾ.ಹೆಚ್‌.ಸಿ.ಮಹದೇವಪ್ಪ ಕಾಂಗ್ರೆಸ್ 55451
221 ಹನೂರು ಆರ್.ನರೇಂದ್ರ ಕಾಂಗ್ರೆಸ್ 60444 ಡಾ.ಪ್ರೀತಂ ನಾಗಪ್ಪ ಬಿಜೆಪಿ 56931
222 ಕೊಳ್ಳೇಗಾಲ ಎನ್.ಮಹೇಶ ಬಿ.ಎಸ್.ಪಿ 71792 ಎ.ಆರ್.ಕೃಷ್ಣಮೂರ್ತಿ ಕಾಂಗ್ರೆಸ್ 52338
223 ಚಾಮರಾಜನಗರ ಸಿ.ಪುಟ್ಟರಂಗಶೆಟ್ಟಿ ಕಾಂಗ್ರೆಸ್ 75963 ಕೆ.ಆರ್.ಮಲ್ಲಿಕಾರ್ಜುನಪ್ಪ ಬಿಜೆಪಿ 71050
224 ಗುಂಡ್ಲುಪೇಟೆ ಸಿ.ಎಸ್.ನಿರಂಜನಕುಮಾರ ಬಿಜೆಪಿ 94151 ಡಾ.ಎಂ.ಸಿ.ಮೋಹನಕುಮಾರಿ(ಗೀತಾ) ಕಾಂಗ್ರೆಸ್ 77467

2019ರ ಉಪಚುನಾವಣೆಯಲ್ಲಿ ಆಯ್ಕೆಯಾದವರು

[ಬದಲಾಯಿಸಿ]
ಕ್ರ.ಸಂ. ವಿಧಾನಸಭಾ ಕ್ಷೇತ್ರ ಆಯ್ಕೆಯಾದ ಸದಸ್ಯರು ಪಕ್ಷ ಮತಗಳು ಹತ್ತಿರದ ಸ್ಪರ್ಧಿ ಪಕ್ಷ ಮತಗಳು
1 ಅಥಣಿ ಮಹೇಶ ಕುಮಟಳ್ಳಿ ಬಿಜೆಪಿ 99203 ಗಜಾನನ ಮಂಗಸೂಳಿ ಕಾಂಗ್ರೆಸ್ 59214
2 ಕಾಗವಾಡ ಶ್ರೀಮಂತ ಪಾಟೀಲ ಬಿಜೆಪಿ 76952 ಭರಮಗೌಡ ಕಾಗೆ ಕಾಂಗ್ರೆಸ್ 58368
3 ಗೋಕಾಕ ರಮೇಶ ಜಾರಕಿಹೊಳಿ ಬಿಜೆಪಿ 87450 ಲಕನ ಜಾರಕಿಹೊಳಿ ಕಾಂಗ್ರೆಸ್ 58444
4 ಯಲ್ಲಾಪುರ ಅರೆಬೈಲ್ ಶಿವರಾಮ ಹೆಬ್ಬಾರ ಬಿಜೆಪಿ 80442 ಭೀಮಣ್ಣ ನಾಯಕ ಬಿಜೆಪಿ 49034

[೧೭] [೨೧]

ಹೆಚ್ಚಿನ ಓದಿಗೆ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "Upcoming Elections in India". Archived from the original on 2015-11-14. Retrieved 2017-03-13.
  2. https://www.karnataka.com/govt/assembly-elections-2018-number-of-voters-in-karnataka/ Assembly Elections 2018 – Number of Voters in Karnataka; MARCH 30, 2018 BY MADUR
  3. http://zeenews.india.com/karnataka/karnataka-assembly-elections-2018-2655-candidates-in-the-fray-2103632.html Karnataka assembly elections 2018: 2,655 candidates in the fray
  4. "Karnataka Assembly Elections: JD(S) and BSP to launch joint campaign". Karnataka Elections 2018. Retrieved 2018-04-19.
  5. ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಚುನಾವಣೆ ಮೇ 28ಕ್ಕೆ ಮುಂದೂಡಿಕೆ; ಪ್ರಜಾವಾಣಿ ವಾರ್ತೆ; 11 May, 2018
  6. ಕಾಂಗ್ರೆಸ್‌ ಅಭ್ಯರ್ಥಿ ಬೆಂಬಲಿಗರ ಸಂಭ್ರಮ1 Jun, 2018
  7. ಜಯನಗರ ಕ್ಷೇತ್ರದಲ್ಲಿ ಚುನಾವಣೆ ಮುಂದೂಡಿಕೆ; ಪ್ರಜಾವಾಣಿ ವಾರ್ತೆ ;4 May, 2018
  8. [೧]
  9. ಜನತಂತ್ರ: ಶೇ 70ಕ್ಕೂ ಹೆಚ್ಚು ಜನರ ಸಂಭ್ರಮ;13 May, 2018
  10. ಮತಗಟ್ಟೆ ಸಮೀಕ್ಷೆ: ಬಿಜೆಪಿ ಮುನ್ನಡೆ?-13 May, 2018
  11. ಮತದಾನೋತ್ತರ ಸಮೀಕ್ಷೆ: ರಾಜ್ಯದಲ್ಲಿ ಅತಂತ್ರ ವಿಧಾನಸಭೆ?--12 May, 2018
  12. ಜನತಂತ್ರ: ಶೇ 70ಕ್ಕೂ ಹೆಚ್ಚು ಜನರ ಸಂಭ್ರಮ
  13. ಶಾಸಕ ಸಿದ್ದು ನ್ಯಾಮಗೌಡ ಸಾವು; 28 May, 2018
  14. "ಜಯನಗರ ವಿಧಾನಸಭಾ ಚುನಾವಣಾ ಕ್ಷೇತ್ರ: ಜಯದ ನಗೆ ಬೀರಿದ ಕಾಂಗ್ರೆಸ್‌ನ |ಸೌಮ್ಯಾರೆಡ್ಡಿ;;13 Jun, 2018". Archived from the original on 2018-06-13. Retrieved 2018-06-14.
  15. 3 ಲೋಕಸಭೆ ಹಾಗೂ 2 ವಿಧಾನಸಭಾ ಉಪಚುನಾವಣೆ ಫಲಿತಾಂಶ Archived 2018-11-10 ವೇಬ್ಯಾಕ್ ಮೆಷಿನ್ ನಲ್ಲಿ.
  16. https://elections.prajavani.net/ Archived 2019-09-13 ವೇಬ್ಯಾಕ್ ಮೆಷಿನ್ ನಲ್ಲಿ. ಕರ್ನಾಟಕ ವಿಧಾನಸಭಾ ಚುನಾವಣೆ 2018
  17. ೧೭.೦ ೧೭.೧ ೧೭.೨ https://elections.prajavani.net/ Archived 2019-09-13 ವೇಬ್ಯಾಕ್ ಮೆಷಿನ್ ನಲ್ಲಿ. ಕರ್ನಾಟಕ ವಿಧಾನಸಭಾ ಚುನಾವಣೆ 2018
  18. https://kannada.oneindia.com/karnataka-assembly-elections/ ಕರ್ನಾಟಕ ವಿಧಾನಸಭೆ ಚುನಾವಣೆ 2018
  19. ಬಿಜೆಪಿಗಿಂತ ಹೆಚ್ಚು ಮತ ಪಡೆದ ಕಾಂಗ್ರೆಸ್!
  20. http://www.prajavani.net/news/article/2018/05/16/573246.html ತೀರ್ಪು ಅತಂತ್ರ: ಸರ್ಕಾರ ರಚನೆಗೆ ತಂತ್ರ; 16 May, 2018
  21. ೨೧.೦ ೨೧.೧ [SK%20Daily%20Samyukta%20Karnataka%20Bengaluru%20,%20Wed,%2016%20May%2018.html#page/1/1 ಜನಾದೇಶ ಜಯಶಿಲರು]
  22. ನ.3ಕ್ಕೆ ರಾಜ್ಯದ 3 ಲೋಕಸಭೆ, 2 ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆ;06 ಅಕ್ಟೋಬರ್ 2018,
  23. "ಯಡಿಯೂರಪ್ಪ ಬಿಜೆಪಿ ಶಾಸಕಾಂಗ ಪಕ್ಷದ ನಾಯಕ 17 May, 2018". Archived from the original on 2018-05-17. Retrieved 2018-05-17.
  24. ದೇವರು, ರೈತರ ಹೆಸರಿನಲ್ಲಿ ಯಡಿಯೂರಪ್ಪ ಪ್ರಮಾಣವಚನ ಸ್ವೀಕಾರ;17 May, 2018
  25. ಯಡಿಯೂರಪ್ಪ ಪ್ರಮಾಣ ವಚನ ಇಂದು;17 May, 2018
  26. ರಾಜ್ಯಪಾಲರಿಗೆ ಕಾಂಗ್ರೆಸ್‌–ಜೆಡಿಎಸ್‌ ಶಾಸಕರ ಮನವಿ; 117 ಶಾಸಕರ ಸಹಿ ಒಳಗೊಂಡ ಪಟ್ಟಿ; 16 May, 2018
  27. "ಯಡಿಯೂರಪ್ಪ ಪ್ರಮಾಣವಚನಕ್ಕೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿ: ಹಸ್ತಕ್ಷೇಪ ಸಾಧ್ಯವಿಲ್ಲ ಎಂದ ಸುಪ್ರೀಂ ಕೋರ್ಟ್‌;17 May, 2018". Archived from the original on 2018-05-17. Retrieved 2018-05-17.
  28. ವಿಧಾನಸೌಧದ ಗಾಂಧಿಪ್ರತಿಮೆ ಮುಂದೆ ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್‌ ಪ್ರತಿಭಟನೆ;17 May, 2018
  29. ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿ ಸರ್ಕಾರ ರಚನೆಗೆ ಅವಕಾಶ ನೀಡುವುದಿಲ್ಲ 16 May, 2018
  30. "ಇಂದೇ ವಿಶ್ವಾಸಮತ: 'ಸುಪ್ರೀಂ' ಆದೇಶ= 19 May, 2018". Archived from the original on 2018-05-20. Retrieved 2018-05-19.
  31. ವಿಶ್ವಾಸಮತ ಯಾಚನೆ ನಿಯಮಾನುಸಾರ ನಡೆಯಲಿ. 19 May, 2018 Archived 2018-05-20 ವೇಬ್ಯಾಕ್ ಮೆಷಿನ್ ನಲ್ಲಿ..
  32. ಹಂಗಾಮಿ ಸ್ಪೀಕರ್‌ ಆಗಿ ಕೆ.ಜಿ.ಬೊಪಯ್ಯ ಪ್ರಮಾಣವಚನ18 May, 2018
  33. http://www.prajavani.net/news/article/2018/05/19/573845.html Archived 2018-05-22 ವೇಬ್ಯಾಕ್ ಮೆಷಿನ್ ನಲ್ಲಿ. ಹಂಗಾಮಿ ಸ್ಪೀಕರ್‌ ಕೆಲಸವೇನು? 19 May, 2018]
  34. ವಿಶ್ವಾಸಮತ ಯಾಚಿಸದೆ ರಾಜೀನಾಮೆ ನೀಡಿದ ಯಡಿಯೂರಪ್ಪ; 19 May, 2018
  35. ಮುಖ್ಯಮಂತ್ರಿಯಾಗಿ ಸೋಮವಾರ ಎಚ್‌.ಡಿ.ಕುಮಾರಸ್ವಾಮಿ ಪ್ರಮಾಣ ವಚನ; 19 May, 2018
  36. ವಿಧಾನಸೌಧ ಮುಂಭಾಗವೇ ಕುಮಾರಸ್ವಾಮಿ ಪ್ರಮಾಣ ವಚನ; 20 May, 2018
  37. "ಲಿಂಗಾಯತರಿಗೆ ಉಪ ಮುಖ್ಯಮಂತ್ರಿ ಹುದ್ದೆ ನೀಡಲು ಆಗ್ರಹ; 21 May, 2018". Archived from the original on 2018-05-22. Retrieved 2018-05-21.
  38. ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ, ಉಪಮುಖ್ಯಮಂತ್ರಿಯಾಗಿ ಪರಮೇಶ್ವರ್ ಪ್ರಮಾಣವಚನ; 23 May, 2018
  39. ಮಹಾಮೈತ್ರಿಗೆ ನಾಂದಿ; 24 May, 2018
  40. ವಿಧಾನಸಭೆ ಸಭಾಧ್ಯಕ್ಷರಾಗಿ ಕೆ.ಆರ್.ರಮೇಶ್‌ ಕುಮಾರ್ ಆಯ್ಕೆ25 May, 2018
  41. ವಿಶ್ವಾಸಮತ ಸಾಬೀತುಪಡಿಸಿದ ‘ಮೈತ್ರಿ’ ಸರ್ಕಾರ; 25 May, 2018
  42. "ರಾಜ್ಯದ ಸಮ್ಮಿಶ್ರ ಸರ್ಕಾರದ ಸಚಿವರ ಕಿರುಪರಿಚಯ;7 Jun, 2018". Archived from the original on 2018-06-11. Retrieved 2018-06-09.

ಹೊರ ಕೊಂಡಿಗಳು

[ಬದಲಾಯಿಸಿ]