ಪಿರಿಯಾಪಟ್ಟಣ

ವಿಕಿಪೀಡಿಯ ಇಂದ
Jump to navigation Jump to search

ಪಿರಿಯಾಪಟ್ಟಣ ಇದು ಮೈಸೂರು ಜೆಲ್ಲೆ ಯ ಒಂದು ತಾಲೂಕು ಕೇಂದ್ರ. ಮಂಗಳೂರು ಮೈಸೂರು ಹೆದ್ದಾರಿಯಲ್ಲಿ ಮೈಸೂರಿನಿಂದ ೭೦ ಕಿ.ಮೀ ದೂರದಲ್ಲಿದೆ. ಸಮುದ್ರ ಮಟ್ಟದಿಂದ ೨೭೬೯ ಆಡಿ ಎತ್ತರದಲ್ಲಿರುವ ಒಂದು ಪಟ್ಟಣ ಪಂಚಾಯತು ಆಗಿದೆ. ಇಲ್ಲಿ ಪ್ರಸಿದ್ಡ ಮಸಣಿಕಮ್ಮ ದೇವಾಲಯವಿದೆ. ಪಿರಿಯಾಪಟ್ಟಣದ ಕಣಗಾಲು ಗ್ರಾಮದಲ್ಲಿ, ಕನ್ನಡದ ಸುಪ್ರಸಿದ್ಧ ನಿರ್ದೇಶಕರಾದ ಪುಟ್ಟಣ್ಣಕಣಗಾಲ ಜನಿಸಿದ್ದು. ಜನಪದ ಲಾವಣಿಗಲ್ಲಿ ಬರುವ ಪಿರಿಪಟ್ಟಣದ ಕಾಳಗ ಸುಪ್ರಸಿದ್ದವಾಗಿದ್ದು, ಕಂಸಾಳೆಯವರ ಪದಗಳಲ್ಲಿ ಹಾಡಲಾಗುತ್ತದೆ. ಚೆಂಗಾಳ್ವರ ದೊರೆ ವೀರರಾಜನಿಗೂ, ಮೈಸೂರಿನ ದಳವಾಯಿಗೂ ನಡೆದ ಯುದ್ಧ ಇದು. ಐತಿಹಾಸಿಕ ದಾಖಲೆಗಳ ಪ್ರಕಾರ, ಮೈಸೂರ ಒಡೆಯರ್ ರಣಧೀರ ಕಂಠೀರವ ರವರ ಕಾಲದಲ್ಲಿ, ಸ್ವಾಂತಂತ್ರ್ಯವಾಗಿದ್ದ ಪಿರಿಯಾಪಟ್ಟಣದ ಚೆಂಗಾಳ್ವರು, ಯುದ್ಧದಲ್ಲಿ ಸೋತು, ಮೈಸೂರಿನ ಸಾಮಂತರಾಗುತ್ತಾರೆ. ಕೊರಟಿ ಶ್ರೀನಿವಾಸರಾಯರ , ಐತಿಹಾಸಿಕ ಕೃತಿಗಳಲ್ಲಿ ಇದರ ಬಗೆಗೆ ಹೆಚ್ಚಬಹುದು ಮಾಹಿತಿ ಲಭ್ಯವಿರುತ್ತದೆ


      -ದೇವರಾಜ್ ಬೀರೇಗೌಡ

ಬೆಳತೂರು ಈ ಗ್ರಾಮವೂ ಪಿರಿಯಾಪಟ್ಟಣ ನಗರದಿಂದ 10 ಕಿ ಮೀ ನಷ್ಠು ದೂರದಲ್ಲಿದೆ

ನೇರಳಕುಪ್ಪೆ ಹಳ್ಳಿಯ ಬಗ್ಗೆ ಮಾಹಿತಿ:[ಬದಲಾಯಿಸಿ]

ನೇರಳಕುಪ್ಪೆ ಎಂಬ ಹಳ್ಳಿಯು, ಪೂನಾಡಾಹಳ್ಳಿ ಪೋಸ್ಟ್, ರಾವoದೂರ್ ಹೋಬಳಿ, ಪಿರಿಯಾಪಟ್ಟಣ ತಾಲೂಕು, ಮೈಸೂರು ಜಿಲ್ಲೆಯಲ್ಲಿದೆ. ಮೈಸೂರಿನಿಂದ 85km ಮತ್ತು ಪಿರಿಯಾಪಟ್ಟಣದಿಂದ 20km ದೂರದಲ್ಲಿದೆ. ಹಾಗೂ ಪ್ರಾಥಮಿಕ ಶಿಕ್ಷಣ ಶಾಲೆಯನ್ನು ಒಳಗೂoಡಿದೆ.

ಪ್ರಮುುಖ ಬೆಳೆಗಳು :[ಬದಲಾಯಿಸಿ]

1 - ಧಾನ್ಯಗಳು

2 - ತಂಬಾಕು

3 - ರಾಗಿ

4 - ಜೋಳ

5 - ಭತ್ತ

6 - ಇತರೆ ಬೆಳೆಗಳು.

ಸಂಗರಶೆಟ್ಟಳ್ಳಿ ಬಗ್ಗೆ ಮಾಹಿತಿ[ಬದಲಾಯಿಸಿ][ಬದಲಾಯಿಸಿ]

ಇತಿಹಾಸ[ಬದಲಾಯಿಸಿ][ಬದಲಾಯಿಸಿ]

ಸಂಗರಶೆಟ್ಟಳ್ಳಿ ಬೆಟ್ಟದಪುರ ಹೋಬಳಿ, ಪಿರಿಯಾಪಟ್ಟಣದಿಂದ (ತಾ ),ಮೈಸೂರು ಜಿಲ್ಲೆಯಲ್ಲಿದೆ. ಮೈಸೂರಿನಿಂದ ಸುಮಾರು 80km,ಮತ್ತು ಪಿರಿಯಾಪಟ್ಟಣದಿಂದ 25 km ದೂರವಾಗುತ್ತದೆ. ಊರಿನಲ್ಲಿ ಪ್ರಾಥಮಿಕ ಶಿಕ್ಷಣ ಶಾಲೆ ಇದೆ. ಉತ್ತಮ ಸಾರಿಗೆ ಸಂಪರ್ಕ ವ್ಯವಸ್ಥೆ ಇದ.


ಪ್ರಮುಖ ಬೆಳೆಗಳು

ಈ ಭಾಗದ ರೈತರು ಅತಿ ಹೆಚ್ಚು ಬೆಳೆಯುವ ಬೆಳೆ ಹೊಗೆಸೊಪ್ಪು,ಏಕೆಂದರೆ ಇಲ್ಲಿ ನೀರಿಗೆ ತುಂಬಾ ಅಭಾವ ಇದೆ, ಹೊಗೆಸೊಪ್ಪು ಬೆಳೆಯಲು ಅತಿ ಹೆಚ್ಚು ನೀರಿನ ಅಗತ್ಯ ಇಲ್ಲ


ಭೌಗೋಳಿಕ ಹಿನ್ನಲೆ[ಬದಲಾಯಿಸಿ]

ಊರು ಸಮತಟ್ಟಾದ ಪ್ರದೇಶದಲ್ಲಿದ್ದು ಅರೆ ಮಲೆನಾಡು ಪ್ರದೇಶವಾಗಿದೆ. ಇಲ್ಲಿನ ಅತಿ ಹೆಚ್ಚು ಭೂಮಿ ಕೃಷಿ ನೀರಾವರಿ ಪ್ರದೇಶವಾಗಿದೆ.ಇಲ್ಲಿನ ಜನತೆ ಹಾರಂಗಿ ಜಲಾಶಯದ ಕಾಲುವೆ ನೀರನ್ನು ಭತ್ತ ಬೆಳೆಯಲು ಅವಲಂಬಸಿದ್ದಾರೆ. ಇಲ್ಲಿ ಮಳೆ ಮತ್ತು ನೀರಾವರಿ ಆಶ್ರಿತ ಬೆಳೆಗಳನ್ನು ಬೆಳೆಯುತ್ತಾರೆ. ಇಲ್ಲಿ ಬೆಳೆಯುವ ಪ್ರಮುಖ ಬೆಳೆಗಳೆಂದರೆ -

1-ಧಾನ್ಯಗಳು

2-ತಂಬಾಕು

3-ರಾಗಿ

4-ಜೋಳ

5-ಭತ್ತ

6-ಇತರೆ ಬೆಳೆಗಳು.

ಜನಸಂಖ್ಯೆ[ಬದಲಾಯಿಸಿ][ಬದಲಾಯಿಸಿ]

ಸುಮಾರು 250 ಮನೆಗಳನ್ನು ಹೊಂದಿರುವ ಈ ಊರಿನಲ್ಲಿ 2000 ಜನರು ವಾಸಿಸುತ್ತಿದ್ದು, 1500 ಕ್ಕಿಂತ ಹೆಚ್ಚಿನ ಮತದಾರರಿದ್ದಾರೆ.

ವಿಶೇಷತೆ[ಬದಲಾಯಿಸಿ][ಬದಲಾಯಿಸಿ]

ಊರಿನಲ್ಲಿ ಪ್ರತಿ ವರ್ಷ ಶ್ರೀ ಬಸವೇಶ್ವರ ಜಾತ್ರೆ ಮತ್ತು ದೊಡ್ಡಮ್ಮ ತಾಯಿ ಉತ್ಸವ ರಮೇ ನಲ್ಲಿ ನಡೆಯುತ್ತದೆ, ಈ ಜಾತ್ರೆ ಎರಡು ದಿನಗಳ ಕಾಲ ನಡೆಯುತ್ತದೆ. ಮತ್ತೆ ಮೂರು ವರ್ಷಗಳಿಗೊಮ್ಮೆ ಕನ್ನಂಬಾಡಿ ಅಮ್ಮನ ಉತ್ಸವ ನಡೆಯುತ್ತೆ. ಇಲ್ಲಿನ ದೊಡಮ್ಮ ವಿಶೇಷ ದೇವತೆ ಆಗಿದೆ.

ಊರಿನ ಪ್ರಮುಖ ದೇವಾಲಯ ಗಳು[ಬದಲಾಯಿಸಿ][ಬದಲಾಯಿಸಿ]

ಊರಿನಲ್ಲಿ ಅನೇಕ ದೇವಾಲಗಳಿವೆ ಅಂತಹ ಪ್ರಮುಖ ದೇವಾಲಯಗಳೆಂದರೆ -

1.ಶ್ರೀ ಗಣಪತಿ ಸ್ವಾಮಿ ದೇವಾಲಯ

2.ಮೈಲಾರಲಿಂಗೇಶ್ವ ದೇವಾಲಯ

3.ದೊಡಮ್ಮ ದೇವಾಲಯ

4.ರಂಗ ಮಂಟಪ.

5.ಬಸವೇಶ್ವರ ದೇವಾಲಯ.

ಊರ ಸುತ್ತಲಿನ ಪ್ರಮುಖ ಪ್ರವಾಸಿತಾಣಗಳು .[ಬದಲಾಯಿಸಿ][ಬದಲಾಯಿಸಿ]

ಸಂಗರಶೆಟ್ಟ ಹಳ್ಳಿ ಸುತ್ತಮುತ್ತ ಅನೇಕ ಪ್ರವಾಸಿತಾಣಗಳಿವೆ ಅವುಗಳೆಂದರೆ -

1.ಚಿಕ್ಕ ಹನಸೋಗೆಯ ತ್ರಿ ಕೂಟ ಜೈನ ಬಸದಿ

2.ಸರಗೂರಿನ ಜಪದ ಕಟ್ಟೆ

3.ಬೆಟ್ಟದಪುರ ಬೆಟ್ಟ

4. ಚುಂಚನಕಟ್ಟೆ ಧನುಶ್ಕೋಟಿ ಜಲಪಾತ

5. ಹೊಸೂರಿನ ರಾಮಲಿಂಗೇಶ್ವರ ದೇವಾಲಯ

6. ರಾಮನಾಥಪುರದ ಸುಬ್ರಮಣ್ಯ ಸ್ವಾಮಿ ದೇವಾಲಯ.

ತಮ್ಮಡಹಳ್ಳಿ ಬಗ್ಗೆ ಮಾಹಿತಿ[ಬದಲಾಯಿಸಿ]

ಬೆಕ್ಕರೆ ಗ್ರಾಮ ಈ ಊರು ಪಿರಿಯಾಪಟ್ಟಣದಿಂದ 15ಕೀಮಿ ದೂರದಲ್ಲಿ ಇರುತ್ತದೆ ಇದು ಒಂದು ಪುಟ್ಟ ಗ್ರಾಮ.ಬಸವ್ವೆಶ್ವರ ದೇವಾಲಯ ತುಂಬಾ ಪ್ರಸಿದ್ಧಿಯನ್ನು ಪಡೆದಿದೆ ವರ್ಷಕ್ಕೊಮ್ಮೆ ನಡೆಯುವ ಓಕಳಿ ಹಬ್ಬ ತುಂಬಾ ಪ್ರಸಿದ್ಧಿಯನ್ನು ಪಡೆದಿದೆ..

ಭೌಗೋಳಿಕ ಹಿನ್ನಲೆ[ಬದಲಾಯಿಸಿ]

       ಊರು ಸಮತಟ್ಟಾದ ಪ್ರದೇಶದಲ್ಲಿದ್ದು ಅರೆ ಮಲೆನಾಡು ಪ್ರದೇಶವಾಗಿದೆ. ಇಲ್ಲಿನ ಜನತೆ ಬೆಳೆ ಬೆಳೆಯಲು ಮಳೆಯನ್ನ ಅವಲಂಬಸಿದ್ದಾರೆ. ಇಲ್ಲಿ ಮಳೆ ಮತ್ತು ನೀರಾವರಿ ಆಶ್ರಿತ ಬೆಳೆಗಳನ್ನು ಬೆಳೆಯುತ್ತಾರೆ. ಇಲ್ಲಿ ಬೆಳೆಯುವ ಪ್ರಮುಖ ಬೆಳೆಗಳೆಂದರೆ -
 1-ಧಾನ್ಯಗಳು 
 2-ತಂಬಾಕು 
 3-ರಾಗಿ 
 4-ಜೋಳ 
 5-ಹಲಸಂದೆ ಮತ್ತು ಅವರೆ ಹಾಗೂ 
ಇತರೆ ಬೆಳೆಗಳು. 

ಜನಸಂಖ್ಯೆ[ಬದಲಾಯಿಸಿ]

     ಸುಮಾರು 300 ಮನೆಗಳನ್ನು ಹೊಂದಿರುವ ಈ ಊರಿನಲ್ಲಿ 3000 ಜನರು ವಾಸಿಸುತ್ತಿದ್ದು, 1500 ಕ್ಕಿಂತ ಹೆಚ್ಚಿನ ಮತದಾರರಿದ್ದಾರೆ. 

ವಿಶೇಷತೆ[ಬದಲಾಯಿಸಿ]

   ಊರಿನಲ್ಲಿ ಪ್ರತಿ ವರ್ಷ ಬಸವೆಶ್ವರ ಜಾತ್ರೆ ನಡೆಯುತ್ತದೆ, ಈ ಜಾತ್ರೆ ಒಂದು ದಿನಗಳ ಕಾಲ ನಡೆಯುತ್ತದೆ. ಮತ್ತೆ ಇಲ್ಲಿನ ದೊಡ್ಡಮ್ಮ ವಿಶೇಷ ದೇವತೆ ಆಗಿದೆ. 

ಊರಿನ ಪ್ರಮುಖ ದೇವಾಲಯ ಗಳು -[ಬದಲಾಯಿಸಿ]

 ಊರಿನಲ್ಲಿ ಅನೇಕ ದೇವಾಲಗಳಿವೆ ಅಂತಹ ಪ್ರಮುಖ ದೇವಾಲಯಗಳೆಂದರೆ -
ದೊಡ್ಡಮ್ಮ ದೇವಾಲಯ 
ಗವಿಸಿದ್ದೇಶ್ವರ ದೇವಾಲಯ 
ಬಸವೇಶ್ವರ ದೇವಾಲಯ 
ರಂಗ ಮಂಟಪ. 

ಊರ ಸುತ್ತಲಿನ ಪ್ರಮುಖ ಪ್ರವಾಸಿತಾಣಗಳು[ಬದಲಾಯಿಸಿ]

    ತಮ್ಮಡಹಳ್ಳಿ ಸುತ್ತಮುತ್ತ ಅನೇಕ ಪ್ರವಾಸಿತಾಣಗಳಿವೆ ಅವುಗಳೆಂದರೆ -
1.ರಾವಂದೂರಿನ ಮಠ 
2.ಬೆಟ್ಟದಪುರ ಬೆಟ್ಟ 
3. ಚುಂಚನಕಟ್ಟೆ ಧನುಶ್ಕೋಟಿ ಜಲಪಾತ 
4. ರಾಮಲಿಂಗೇಶ್ವರ ದೇವಾಲಯ 
5. ರಾಮನಾಥಪುರದ ಸುಬ್ರಮಣ್ಯ ಸ್ವಾಮಿ ದೇವಾಲಯ. 
ಈ ರೀತಿಯಾಗಿ ತಮ್ಮಡಹಳ್ಳಿ ತನ್ನದೇ ಆದ ಇತಿಹಾಸ ಹೊಂದಿದೆ.