ವಿಷಯಕ್ಕೆ ಹೋಗು

ಹಾನಗಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Hanagal
ಹಾನಗಲ್
Hangal
ಪಟ್ಟಣ
ಹಾನಗಲ್ ತಾರಕೇಶ್ವರ ದೇವಾಲಯ
ಹಾನಗಲ್ ತಾರಕೇಶ್ವರ ದೇವಾಲಯ
Nickname(s): 
Panagal
ದೇಶ ಭಾರತ
ರಾಜ್ಯಕರ್ನಾಟಕ
ಜಿಲ್ಲೆಹಾವೇರಿ
Lok Sabha Constituencyಹಾವೇರಿ
Elevation
೫೫೫ m (೧,೮೨೧ ft)
Population
 (2011)
 • Total೨೮,೧೫೯
ಭಾಷೆಗಳು
 • ಅಧಿಕೃತಕನ್ನಡ
ಸಮಯ ವಲಯಯುಟಿಸಿ+5:30 (IST)
PIN
581 104
Telephone code08379
ವಾಹನ ನೋಂದಣಿKA-27
ಜಾಲತಾಣwww.hanagaltown.gov.in

ಇದು ಭಾರತದ ಕರ್ನಾಟಕ ರಾಜ್ಯದ ಹಾವೇರಿ ಜಿಲ್ಲೆಯ ಒಂದು ತಾಲ್ಲೂಕು ಮತ್ತು ತಾಲ್ಲೂಕಿನ ಆಡಳಿತ ಕೇಂದ್ರ ಹಾಗೂ ಪಟ್ಟಣ. ಧಾರವಾಡದ ದಕ್ಷಿಣಕ್ಕೆ 90 ಕಿಮೀ ದೂರದಲ್ಲಿದೆ ಹಾವೇರಿಯಿ೦ದ ೩೦ ಕಿ ಮೀ ದೂರದಲ್ಲಿದ್ದು ೧೭೫ ಹಳ್ಳಿಗಳನ್ನು ಒಳಗೊಂಡಿದೆ.

ಭತ್ತ ಬೆಳೆಯುವ ಒಂದು ಪ್ರಮುಖ ತಾಲೂಕು, ಇದರ ಜೊತೆಗೆ ಈ ತಾಲೂಕಿನ ಪ್ರಮುಖ ಬೆಳೆಗಳೆ೦ದರೆ ಭತ್ತ, ಹತ್ತಿ, ಕಬ್ಬು, ಗೊವಿನ ಜೋಳ, ತೋಟಗಾರಿಕೆ ಬೆಳೆಗಳೆಂದರೆ : ಮಾವು, ಬಾಳೆ, ಅಡಿಕೆ, ಮೆಣಸಿನಕಾಯಿ ಇತ್ಯಾದಿಗಳು ಪ್ರಮುಖ ಬೆಳೆಗಳಾಗಿವೆ. ಇಲ್ಲಿ ಪ್ರಖ್ಯಾತ ಐತಿಹಾಸಿಕ ಜಕಣಾಚಾರಿ ಕಟ್ಟಿಸಿದ ಶ್ರೀ ತಾರಕೇಶ್ವರ ದೇವಸ್ತಾನ ಇದೆ, ರಾಜ್ಯದೆಲ್ಲೆಡೆ ಹೆಸರುವಾಸಿಯಾದ ಶ್ರೀ ಕುಮಾರೇಶ್ವರ ಮಠ ಇದೆ, ಈ ಊರಿನ ಹೊರ ಭಾಗದಲ್ಲಿ ವಿಶಾಲವಾದ ಆನೆಕೆರೆ ಇದ್ದು ಹಾನಗಲ್ಲ ನಗರಕ್ಕೆ ಕುಡಿಯುವ ನೀರು ಒದಗಿಸುವ ನೀರಿನ ಮೂಲವಾಗಿದೆ. ಅಲ್ಲದೆ ಇಲ್ಲಿ ಧರ್ಮಾ ನದಿಯು ಹರಿಯುತ್ತದೆ.

ಹಾನಗಲ್ ಒಂದು ಪ್ರವಾಸಿತಾಣವಾಗಿದ್ದು ಇಲ್ಲಿ ಶ್ರೀ ತಾರಕೇಶ್ವರ ದೇವಸ್ಥಾನ, ಹಾಗೂ ಕೋಟೆ ಕೂಡಾ ಇವೆ. ಇಲ್ಲಿಗೆ ಬನವಾಸಿ, ಸಿರ್ಸಿ, ಬಂಕಾಪುರ, ಜೋಗ, ಮುಂಡಗೋಡ ಕೂಡ ಸಮೀಪವಿವೆ.

ಜನಸಂಖ್ಯೆ 25,011. ಈ ಪಟ್ಟಣ ಸುತ್ತಲ ಗ್ರಾಮಗಳಿಗೆ ಮುಖ್ಯ ವ್ಯಾಪಾರ ಕೇಂದ್ರ.

ಭೌಗೋಳಿಕ ಮಾಹಿತಿ[ಬದಲಾಯಿಸಿ]

ಈ ತಾಲ್ಲೂಕನ್ನು ಉತ್ತರದಲ್ಲಿ ಶಿಗ್ಗಾಂವಿ, ಪೂರ್ವದಲ್ಲಿ ಹಾವೇರಿ ಮತ್ತು ಬ್ಯಾಡಗಿ ತಾಲ್ಲೂಕುಗಳೂ ದಕ್ಷಿಣದಲ್ಲಿ ಹಿರೇಕೆರೂರು ಮತ್ತು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕುಗಳೂ ಪಶ್ಚಿಮದಲ್ಲಿ ಉತ್ತರ ಕನ್ನಡ ಜಿಲ್ಲೆಯ ಸಿರ್ಸಿ ಮತ್ತು ಮುಂಡಗೋಡ ತಾಲ್ಲೂಕುಗಳೂ ಸುತ್ತುವರಿದಿವೆ. ಜಿಲ್ಲೆಯ ನೈಋತ್ಯಕ್ಕಿರುವ ಈ ತಾಲ್ಲೂಕಿನಲ್ಲಿ ಒಟ್ಟು 143 ಗ್ರಾಮಗಳೂ ಒಂದು ಪಟ್ಟಣವೂ ಇವೆ. ವಿಸ್ತೀರ್ಣ 769.9 ಚ.ಕಿಮೀ. ಜನಸಂಖ್ಯೆ 2,30,310.

ಈ ತಾಲ್ಲೂಕು ಜಿಲ್ಲೆಯ ಮಲೆನಾಡು ಪ್ರದೇಶಕ್ಕೆ ಸೇರಿದೆ. ಈ ಪ್ರದೇಶದಲ್ಲಿ ಚಿಕ್ಕ ಬೆಟ್ಟಗುಡ್ಡಗಳನ್ನು ಕಾಣಬಹುದು. ಇಲ್ಲಿನ ಕಾಡುಗಳಲ್ಲಿ ಬೆಲೆಬಾಳುವ ಗಂಧದ ಮರ ಬೆಳೆಯುತ್ತವೆ. ರಕ್ಷಿತ ಅರಣ್ಯ ಪ್ರದೇಶ ಮತ್ತು ಹುಲ್ಲುಗಾವಲುಗಳಿವೆ. ತಾಲ್ಲೂಕಿನ ಮುಖ್ಯನದಿ ವರದಾ. ಇದು ತಾಲ್ಲೂಕಿನ ದಕ್ಷಿಣದಲ್ಲಿ ಶಿವಮೊಗ್ಗ ಜಿಲ್ಲೆಯನ್ನು ವಿಂಗಡಿಸುವ ಗಡಿಯಾಗಿ ಸ್ವಲ್ಪ ದೂರ ಹರಿದು ಹೊಂಕಣದ ಬಳಿ ತಾಲ್ಲೂಕನ್ನು ಪ್ರವೇಶಿಸಿ ಈಶಾನ್ಯಾಭಿಮುಖವಾಗಿ ಹರಿದು ಮುಂದೆ ಉತ್ತರಾಭಿಮುಖವಾಗಿ ಹಾವೇರಿ ತಾಲ್ಲೂಕನ್ನು ವಿಂಗಡಿಸುವ ಗಡಿಯಾಗಿ ಹರಿಯುವುದು. ಮುಂದೆ ಹಾವೇರಿ ತಾಲ್ಲೂಕಿನ ಉತ್ತರದಲ್ಲಿ ಗಳಗನಾಥ ಗ್ರಾಮದ ಬಳಿ ತುಂಗಭದ್ರಾ ನದಿಯನ್ನು ಸೇರಿಕೊಳ್ಳುವುದು. ಧರ್ಮಾ ಈ ತಾಲ್ಲೂಕಿನ ಮತ್ತೊಂದು ನದಿ. ಇದು ತಾಲ್ಲೂಕನ್ನು ಪಶ್ಚಿಮದಿಂದ ಪ್ರವೇಶಿಸಿ ಸ್ವಲ್ಪ ದೂರ ಪೂರ್ವಾಭಿಮುಖವಾಗಿ ಹರಿದು ಅನಂತರ ಈಶಾನ್ಯಾಭಿಮುಖವಾಗಿ ಹಾನಗಲ್ಲು ಮುಖಾಂತರ ಹರಿದು ನರೇಗಲ್ಲು ಬಳಿ ವರದಾನದಿಯನ್ನು ಸೇರಿಕೊಳ್ಳುವುದು. ಹಾನಗಲ್ಲು, ನರೇಗಲ್ಲು ಮುಂತಾದ ಕಡೆ ದೊಡ್ಡ ಕೆರೆಗಳಿವೆ. ಧರ್ಮಾ ನದಿಗೆ ಹಾನಗಲ್ಲಿನ ನೈಋತ್ಯಕ್ಕೆ 13 ಕಿಮೀ ದೂರದಲ್ಲಿರುವ ಶೃಂಗೇರಿ ಗ್ರಾಮದ ಬಳಿ ಕವೆ ಕಟ್ಟಿ ಕಮನಹಳ್ಳಿ ಮತ್ತು ಧರ್ಮಾ ಎಂಬ ಎರಡು ನಾಲೆಗಳನ್ನು ತೆಗೆದಿದ್ದಾರೆ. ಈ ನಾಲೆ ತಾಲ್ಲೂಕಿನ ಮಧ್ಯದಲ್ಲಿ ಈಶಾನ್ಯಾಭಿಮುಖವಾಗಿ ಹರಿದು ಸುತ್ತಲ ಭೂಮಿಗೆ ಜಲಾಧಾರವಾಗಿದೆ. ಈ ಕಟ್ಟೆ ಮತ್ತು ನಾಲೆಗಳು ಸುಮಾರು 400 ವರ್ಷಗಳಷ್ಟು ಹಳೆಯವಾಗಿದ್ದು 1921-22ರಲ್ಲಿ ದುರಸ್ತಿಪಡಿಸಲಾಯಿತು. ಹಿಂದಿನಿಂದಲೂ ಈ ತಾಲ್ಲೂಕು ನೀರಾವರಿಯಲ್ಲಿ ಮುಂದುವರಿದ ಪ್ರದೇಶವಾಗಿದೆ. ಉತ್ತಮ ಹವಾಗುಣವಿದೆ. ತಾಲ್ಲೂಕಿನ ವಾರ್ಷಿಕ ಸರಾಸರಿ ಮಳೆ 972.6 ಮಿಮೀ.

ಮಲೆನಾಡ ಪ್ರದೇಶಕ್ಕೆ ಸೇರಿದ ಈ ತಾಲ್ಲೂಕಿನಲ್ಲಿ ಬತ್ತದ ಪ್ರದೇಶ ಹೆಚ್ಚು. ಕಂದು ಕೆಂಪು ಮಣ್ಣಿನ ಜಿಗಟು ಭೂಪ್ರದೇಶವಿದ್ದು ಧರ್ಮಾ ಮತ್ತು ವರದಾ ನದಿಯ ದಡಗಳುದ್ದಕ್ಕೂ ರೇವೆಮಣ್ಣಿನ ಫಲವತ್ತಾದ ಪ್ರದೇಶವಿದೆ. ಬತ್ತ, ಕಬ್ಬು, ರಾಗಿ, ದ್ವಿದಳಧಾನ್ಯಗಳು, ಜೋಳ, ಹತ್ತಿ ಮುಂತಾದವುಗಳನ್ನು ಬೆಳೆಯುತ್ತಾರೆ. ಎಣ್ಣೆಬೀಜಗಳಲ್ಲಿ ಸೇಂಗಾ, ಹರಳು, ಹುಚ್ಚೆಳ್ಳು ಮುಂತಾದವನ್ನು ಬೆಳೆಯುತ್ತಾರೆ. ತಾಲ್ಲೂಕಿನಲ್ಲಿ ಅಕ್ಕಿ ಗಿರಣಿಗಳಿವೆ. ಸೇಂಗಾ ಎಣ್ಣೆ ತಯಾರಿಕೆಯುಂಟು. ಅಕ್ಕಿ, ಉರುವಲು ಕಟ್ಟಿಗೆ ಮತ್ತು ಗಂಧದ ಮರ ಇವು ತಾಲ್ಲೂಕಿನಿಂದ ಹೆಚ್ಚಾಗಿ ರಫ್ತಾಗುವುವು. ತಾಲ್ಲೂಕಿಗೆ ಹತ್ತಿರವಾಗಿ, ಹಾನಗಲ್ಲಿಗೆ ಪೂರ್ವದಲ್ಲಿ 35 ಕಿಮೀ ದೂರದಲ್ಲಿ ಹಾವೇರಿ ರೈಲುನಿಲ್ದಾಣವಿದೆ.

ಇತಿಹಾಸ ಮತ್ತು ಐತಿಹಾಸಿಕ ಕಟ್ಟಡಗಳು[ಬದಲಾಯಿಸಿ]

ಹಾನಗಲ್ಲಿನ ಈಶಾನ್ಯಕ್ಕೆ 10 ಕಿಮೀ ದೂರದಲ್ಲಿರುವ ಅರಳೇಶ್ವರ ಗ್ರಾಮದ ಬಳಿ ಚಾಳುಕ್ಯ ಶೈಲಿಯ ಕದಂಬೇಶ್ವರ ದೇವಾಲಯವಿದೆ. ಇಲ್ಲಿ ಕದಂಬ ದೊರೆ ಶಾಂತಿವರ್ಮ, ತೈಲಪ (1128) ಮತ್ತು ಸೇವುಣ ರಾಜ ಕನ್ನರ (1260) ಇವರಿಗೆ ಸೇರಿದ ಏಳು ಶಾಸನಗಳಿವೆ. ಹಾನಗಲ್ಲಿಗೆ ಪೂರ್ವದಲ್ಲಿರುವ ಆಡೂರಿನಲ್ಲಿ ಬಾದಾಮಿ ಚಳುಕ್ಯ ವಂಶಕ್ಕೆ ಸೇರಿದ ಎರಡನೆಯ ಕೀರ್ತಿವರ್ಮನ (745-57) ಶಾಸನವೂ ಸೇರಿದಂತೆ ಏಳು ಶಾಸನಗಳಿವೆ. ಹಾನಗಲ್ಲಿನ ಪೂರ್ವಕ್ಕಿರುವ ಬಾಳಂಬೀಡ ಗ್ರಾಮದಲ್ಲಿ ರಾಮೇಶ್ವರ ಮತ್ತು ಕಮಲೇಶ್ವರ ಎಂಬ ಎರಡು ಪುರಾತನ ದೇವಾಲಯಗಳಿವೆ. ಇಲ್ಲಿನ 1145ರ ಒಂದು ಶಾಸನದಲ್ಲಿ ಪಾಶ್ರ್ವನಾಥ ದೇವಾಲಯದ ರಚನೆ ಕುರಿತ ಮಾಹಿತಿ ಇದೆ. ಕೆಲವು ವೀರಗಲ್ಲುಗಳಿವೆ. ಹಾನಗಲ್ಲಿಗೆ ಈಶಾನ್ಯದಲ್ಲಿ 13 ಕಿಮೀ ದೂರದಲ್ಲಿರುವ ಬೆಳವತ್ತಿ ಗ್ರಾಮ ಹಿಂದಿನ ಲೀಲಾವತಿ ಪಟ್ಟಣವಾಗಿತ್ತೆಂದು ಹೇಳುವರು. ಇಲ್ಲಿ ಕರಿಕಲ್ಲಿನ ಗೋಕುಲೇಶ್ವರ ದೇವಾಲಯವಿದೆ. ಚಾಳುಕ್ಯರ ಕಾಲಕ್ಕೆ ಸೇರಿದ ಈ ದೇವಾಲಯದಲ್ಲಿ ಕೆತ್ತನೆ ಕೆಲಸದ ಗೋಡೆಗಳೂ ಶಾಸನಗಳೂ ಇವೆ. ರಾಷ್ಟ್ರಕೂಟ ಗೋವಿಂದನ (930) ಒಂದು ಶಾಸನವೂ ಇಲ್ಲಿದೆ. ಹಾನಗಲ್ಲಿನ ಉತ್ತರಕ್ಕೆ 16 ಕಿಮೀ ದೂರದಲ್ಲಿರುವ ಬೊಮ್ಮನಹಳ್ಳಿಯ ಈಶ್ವರ ದೇವಾಲಯ ಬಹು ಪ್ರಸಿದ್ಧ. ಹಾನಗಲ್ಲಿಗೆ ಆಗ್ನೇಯಕ್ಕೆ 26 ಕಿಮೀ ದೂರದಲ್ಲಿರುವ ಹಳ್ಳಿಬೈಲಿನಲ್ಲಿ ಸಿದ್ಧರಾಮೇಶ್ವರ ದೇವಾಲಯವಿದೆ. ಹಾನಗಲ್ಲಿನ ಆಗ್ನೇಯದಲ್ಲಿ ತಾಲ್ಲೂಕಿನ ಅಂಚಿನಲ್ಲಿರುವ ಹಿರೇಬಾಸೂರು ಹಿಂದೆ ವ್ಯಾಸಪುರವೆಂದು ಪ್ರಸಿದ್ಧವಾಗಿತ್ತೆಂದು ಪ್ರತೀತಿ. ಇಲ್ಲಿ ವಿಶ್ವೇಶ್ವರ ಮತ್ತು ಹನುಮಂತ ದೇವಾಲಯಗಳಿವೆ. ಕಳಚುರಿ ಎರಡನೆಯ ಬಿಜ್ಜಳ ಮತ್ತು ಅವನ ಮಗ ಆಹವಮಲ್ಲ ಮತ್ತು ಯಾದವ ಸಿಂಘಣ ಇವರ ಕಾಲದ ಶಾಸನಗಳಿವೆ. ಹಾನಗಲ್ಲಿನ ಆಗ್ನೇಯಕ್ಕೆ 16 ಕಿಮೀ ದೂರದಲ್ಲಿರುವ ಹೊಂಕಣ ಗ್ರಾಮದ ರಾಮಲಿಂಗೇಶ್ವರ ದೇವಾಲಯದ ಮೂರ್ತಿ ಆಕರ್ಷಕವಾದದ್ದು. ಹಾನಗಲ್ಲಿನ ಈಶಾನ್ಯದಲ್ಲಿ 13 ಕಿಮೀ ದೂರದಲ್ಲಿ ರುವ ಜಕ್ಕನಾಯಕನ ಕೊಪ್ಪದಲ್ಲಿ ಸರ್ವೇಶ್ವರ ದೇವಾಲಯವಿದೆ. ಹಾನಗಲ್ಲಿನ ಈಶಾನ್ಯದಲ್ಲಿರುವ ಕೂಡಲ ಬಳಿ ಧರ್ಮಾನದಿ ವರದಾನದಿಯನ್ನು ಸೇರುವುದು. ಇಲ್ಲಿ ಸಂಗಮೇಶ್ವರ ದೇವಾಲಯ ಮತ್ತು ಇದರ ಹತ್ತಿರವೇ 12ನೆಯ ಶತಮಾನದ ಒಂದು ವೀರಗಲ್ಲು ಇದೆ. ಹಾನಗಲ್ಲಿನ ಈಶಾನ್ಯಕ್ಕಿರುವ ನರೇಗಲ್ಲಿನಲ್ಲಿ ಒಂದು ದೊಡ್ಡ ಕೆರೆ ಮತ್ತು ಬಸಪ್ಪ ದೇವಾಲಯವಿದೆ. ಪುರಾತನ ಸರ್ವೇಶ್ವರ ದೇವಾಲಯ ಮತ್ತು ರಾಷ್ಟ್ರಕೂಟ ಧ್ರುವನ (780-93) ಶಾಸನವಿದೆ. ಈ ಗ್ರಾಮ 11 ಮತ್ತು 12ನೆಯ ಶತಮಾನದಲ್ಲಿ ಅಗ್ರಹಾರವಾಗಿತ್ತೆಂದು ತಿಳಿದುಬರುವುದು. ಹಾನಗಲ್ಲಿನ ನೈಋತ್ಯಕ್ಕೆ 13 ಕಿಮೀ ದೂರದಲ್ಲಿರುವ ಶೃಂಗೇರಿ ಬಳಿ ಧರ್ಮಾನದಿಗೆ ಅಡ್ಡಗಟ್ಟೆ ಕಟ್ಟಲಾಗಿದೆ. ಹಾನಗಲ್ಲಿನ ಉತ್ತರಕ್ಕೆ 15 ಕಿಮೀ ದೂರದಲ್ಲಿರುವ ಯಳವಟ್ಟಿಯಲ್ಲಿ ರಾಮಲಿಂಗೇಶ್ವರ ದೇವಾಲಯ ಮತ್ತು ಒಂದು ಜೈನ ಬಸದಿಯಿದೆ.

ಈ ಪಟ್ಟಣಕ್ಕೆ ಹಿಂದೆ ಪಾಂತಿಪುರ, ವೈರಾಟಪುರ, ವಿರಾಟಕೋಟೆ, ವಿರಾಟ ನಗರ, ಪಾನಂಗಲ್ಲ ಮತ್ತು ಹಾನಂಗಲ್ಲ ಎಂಬ ಹೆಸರುಗಳಿದ್ದವು. ಇಲ್ಲಿ ಒಂದು ಪಾಳುಬಿದ್ದ ಕೋಟೆ, ದೇವಸ್ಥಾನಗಳು ಮತ್ತು ಶಿಲಾಶಾಸನ ಗಳಿವೆ. ಹಿಂದೆ ಹಾನಗಲ್ಲು 500 ಹಳ್ಳಿಗಳಿಗೆ ಮುಖ್ಯಪಟ್ಟಣವಾಗಿತ್ತು. ಹಾನಗಲ್ಲು ಕದಂಬರು ಈ ಊರನ್ನು ರಾಜಧಾನಿಯನ್ನಾಗಿ ಮಾಡಿಕೊಂಡು 11ನೆಯ ಶತಮಾನದಿಂದ 13ನೆಯ ಶತಮಾನದವರೆಗೂ ಆಳಿದರು.

ಇಲ್ಲಿರುವ ಕೋಟೆ ಮಣ್ಣಿನಿಂದ ಕಟ್ಟಿದ್ದು. ಈ ಕೋಟೆಗೆ 16 ಬುರುಜುಗಳಿದ್ದು ಮೂರು ಗೋಡೆಗಳಿವೆ. ಕೆಲವೆಡೆ ನಾಲ್ಕನೆಯ ಗೋಡೆಯಿದ್ದ ಕುರುಹುಗಳೂ ಕಾಣುತ್ತವೆ. ಕೋಟೆಯ ಸುತ್ತಲೂ ಕಂದಕವಿದೆ. ಕೋಟೆಯ ಮಧ್ಯದಲ್ಲಿ ಹಳೇ ಅರಮನೆ ಗೋಡೆಯ ಅವಶೇಷಗಳಿವೆ. ಧರ್ಮಾನದಿ ಈ ಅರಮನೆ ಗೋಡೆಯ ದಕ್ಷಿಣ ಮತ್ತು ಪಶ್ಚಿಮ ಭಾಗಗಳಲ್ಲಿ ಹರಿಯುವುದು. ಕದಂಬ ಕಾಮದೇವ ಹೊಯ್ಸಳರ ದಾಳಿಯನ್ನೆದುರಿಸಲು ಭದ್ರವಾಗಿರಬೇಕೆಂದು ಈ ಕೋಟೆಯ ದಕ್ಷಿಣದ ಗೋಡೆಯನ್ನು ದುರಸ್ತಿ ಮಾಡಿಸಿದ. ಈ ಹಳೇಕೋಟೆಯ ಒಂದು ಭಾಗದಲ್ಲಿ ಉತ್ಖನನವನ್ನು ನಡೆಸಲಾಯಿತು. ಈ ಅಗೆತದಲ್ಲಿ ಕಾಲುಟೆಡ್ ಮಣ್ಣಿನ ಪಾತ್ರೆಗಳ ತುಂಡುಗಳು (ಕ್ರಿ.ಶ. 50), ಸಾತವಾಹನರ ಕಾಲದ ಬಿಳಿಗೆರೆಗಳ ಮೇಲೆ ಕಂದುಬಣ್ಣದ ಲೇಪಹಚ್ಚಿದ ಸುಟ್ಟ ಮಣ್ಣಿನ ಪಾತ್ರೆಗಳು, ಸುಟ್ಟ ಮಣ್ಣಿನ ಅಡಕೆಯಾಕಾರದ ಮಣಿಗಳು, ಬಾದಾಮಿ ಚಳುಕ್ಯ ಮೊದಲಾದ ರಾಜರ ಕಾಲದ ಅವಶೇಷಗಳು ದೊರೆತಿವೆ. ಈ ಕೋಟೆಯಲ್ಲಿ ಗಚ್ಚಿನ ಕೋಣೆಗಳು, ಕೀಚಕನ ಗರಡಿಯ ಮನೆ, ವಿರಾಟನಗರ ಅರಮನೆ ಮುಂತಾದವುಗಳು ಇರುವವೆಂದು ಪ್ರತೀತಿ. ಕೋಟೆಯ ಹೊರಗೆ ಬೆಣಚುಕಲ್ಲಿನ ಚಿಕ್ಕ ಆಯುಧಗಳು, ಅವುಗಳ ಮೂಲಕಲ್ಲುಗಳು ಸಿಕ್ಕಿವೆ. ಕೋಟೆಯ ಆಗ್ನೇಯಕ್ಕೆ ಆನೆಕೆರೆ ಎಂಬ ಕೆರೆ ಇದೆ. ರಾಜರು ಇಲ್ಲಿ ತಮ್ಮ ಆನೆಗಳಿಗೆ ಸ್ನಾನ ಮಾಡಿಸುತ್ತಿದ್ದು ದರಿಂದ ಈ ಕೆರೆಗೆ ಆನೆಕೆರೆಯೆಂಬ ಹೆಸರು ಬಂದಂತೆ ತೋರುವುದು. ಹಾನಗಲ್ಲು, ಹಾನಗಲ್ಲು ಕದಂಬರ ಮುಖ್ಯಪಟ್ಟಣವಾದುದರಿಂದ ಇದನ್ನು ಗೆದ್ದುಕೊಳ್ಳುವುದು ಹೊಯ್ಸಳ ವಿಷ್ಣುವರ್ಧನನಿಗೆ ಹೆಮ್ಮೆಯಾಗಿದ್ದು ತಾನು ಗೆದ್ದ ಪಟ್ಟಣಗಳನ್ನು ಉಲ್ಲೇಖಿಸುವ ಕಡತದಲ್ಲಿ ಈ ಊರನ್ನು ಬರೆದುಕೊಂಡನೆಂದು ಹೊಯ್ಸಳ ಶಾಸನದಿಂದ ತಿಳಿದುಬರುವುದು.

ಇಲ್ಲಿರುವ ತಾರಕೇಶ್ವರ ಗುಡಿ ದೊಡ್ಡದೂ ಕಲಾತ್ಮಕವಾದುದೂ ಆಗಿದೆ. ದೇವಾಲಯ ಕಪ್ಪು ಹಸುರು ಕಲ್ಲಿನಿಂದ ಕಟ್ಟಿದ್ದು ಪೂರ್ವಾಭಿ ಮುಖವಾಗಿದೆ. ಇದು ಕಲ್ಯಾಣದ ಚಾಳುಕ್ಯರ ಕಾಲದ ಉತ್ತಮ ಗುಡಿಗಳಲ್ಲಿ ಒಂದು. ಈ ಗುಡಿಯ ದಕ್ಷಿಣದ ಹೊರಗೋಡೆಯ ಮೇಲೆ ಶೂರ್ಪನಖಿಯ ಮೂಗು ಕೊಯ್ಯುತ್ತಿರುವುದು, ಮಾರೀಚ ವಧೆ ಮೊದಲಾದ ರಾಮಾಯಣದ ದೃಶ್ಯಗಳೂ ಶ್ರೀಕೃಷ್ಣಜನನ, ನಂದ ಅವನನ್ನು ಕರೆದುಕೊಂಡು ಯಮುನಾ ನದಿಯನ್ನು ದಾಟಿದ್ದು, ಶಕಟಾಸುರವಧೆ, ಕಾಳಿಮರ್ದನ ಇತ್ಯಾದಿ ಭಾಗವತದ ದೃಶ್ಯಗಳೂ ಮತ್ತೊಂದೆಡೆ ಪಾಂಡವರ ಶಿಲ್ಪಗಳೂ ಇವೆ. ಅಲ್ಲದೆ, ಹೊರಗೋಡೆಗಳ ಮೇಲೆ ಕೀರ್ತಿಮುಖಗಳನ್ನು, ಭೈರವ ಮತ್ತು ಬ್ರಹ್ಮ ಇವರ ವಿಗ್ರಹಗಳನ್ನು ಕೆತ್ತಲಾಗಿದೆ. ಈ ಗುಡಿಯ ಮುಂದೆ ಇದ್ದ ಕೋಟೆಕಾಳಗವನ್ನು ತೋರಿಸುವ ವೀರಗಲ್ಲುಗಳನ್ನು ಈಗ ಮಂಟಪದಲ್ಲಿಟ್ಟಿದ್ದಾರೆ. ಇಲ್ಲಿ ಎರಡು ದೊಡ್ಡ ಶೈವ ದ್ವಾರಪಾಲಕರ ವಿಗ್ರಹಗಳನ್ನು ಇಡಲಾಗಿದೆ. 20ಕ್ಕೂ ಮೇಲ್ಪಟ್ಟು ಶಿಲಾಶಾಸನಗಳಿವೆ. ಇವುಗಳಲ್ಲಿ ಕೆಲವು 12 ಮತ್ತು 13ನೆಯ ಶತಮಾನದವು. ಚಾಳುಕ್ಯ ಆರನೆಯ ವಿಕ್ರಮಾದಿತ್ಯ, ಕಳಚುರಿ ಬಿಜ್ಜಳ ಮತ್ತು ಕದಂಬ ಅರಸರಾದ ತೈಲಪ, ಕಾಮದೇವ, ಸೋವಿದೇವ ಮತ್ತು ಮಲ್ಲಿದೇವರ ಆಳಿಕೆಯವು. ಇಲ್ಲಿನ ತಾರಕೇಶ್ವರ ಗುಡಿಯ ಮುಂದಿನ ಒಂದು ಶಾಸನದಿಂದ ಎರಡನೆಯ ತೈಲಪ, ಮುಖ್ಯಮಂತ್ರಿಯೂ ದಂಡನಾಯಕನೂ ಆದ ಮಸಣ ಎಂಬುವವನು ಕಟ್ಟಿಸಿದ ತೈಲೇಶ್ವರ ದೇವರಿಗೆ ಭೂಮಿ ದಾನಕೊಟ್ಟ ವಿಚಾರ ತಿಳಿದುಬರುತ್ತದೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

ಭಗವಾನ್ ಹರಿಹರ ಸರಹುನಾಥ್ ಇತಿಹಾಸ[ಬದಲಾಯಿಸಿ]

ತಾಲ್ಲೂಕಿನ ಹುಲ್ಲತ್ತಿ ಗ್ರಾಮದಲ್ಲಿ ಭಗವಾನ್ ಹರಿಹರ ಸರಹುನಾಥರು ಜನಿಸಿರುವುದು ನಾಡಿಗೆ ಹೊಸ ಶೋಭೆಯನ್ನು ತಂದಿದೆ. (Lord Harihara Sarahunaath - Sarahu Nagarazan) ಶ್ರೀ ವಿಷ್ಣು ದೇವರು ಹೇಗೆ ಮಾನವ ಕಲ್ಯಾಣಕ್ಕಾಗಿ ಶ್ರೀ ಕೃಷ್ಣನಾಗಿ ಭೂಮಿಗೆ ಅವತರಿಸಿ ಬಂದರೋ ಹಾಗೇ ಶಿವನು ಸರಹುನಾಥರಾಗಿ ಭೂಮಿಗೆ ಅವತರಿಸಿ ಬಂದರು. ಈ‌ ಮೊದಲು ಅನೇಕ ಬಾರಿ ಶಿವನು ಭೂಮಿಗೆ ಅವತರಿಸಿ ಬಂದರೂ, ಅದು ಕೇವಲ ಶಿವನ ಶಕ್ತಿಗಳು ಅಥವಾ ಗಣಗಳಾಗಿದ್ದವು. ಆದರೆ ಕಲಿಯುಗದಲ್ಲಿ ಅಂದರೆ 1.6.1988 ರಲ್ಲಿ ಶಿವನು ಪಾರ್ವತಿ ಮತ್ತು ಗಂಗಾದೇವಿಯನ್ನು ಅರಸುವ ನೆಪದಲ್ಲಿ ಭೂಮಿಗೆ ಸರಹುನಾಥರಾಗಿ ಇಳಿದು ಬಂದರು. ಅಂದರೆ ಸ್ವತಃ ಶಿವನೇ ಸರಹುನಾಥರಾಗಿದ್ದರು. ಆದರೆ ಸರಹುನಾಥರು ಶಿವನ ಶಕ್ತಿ ಅಥವಾ ಗಣ ಆಗಿರಲಿಲ್ಲ.

ಶಿವನು ಕೇವಲ ಪಾರ್ವತಿ ದೇವಿ ಮತ್ತು ಗಂಗಾದೇವಿಗೆಂದು ಭೂಮಿಗೆ ಬಂದಿರಲಿಲ್ಲ. ಅವರು ಕಲಿಯ ಪ್ರಭಾವವನ್ನು ಮತ್ತು ಕಲಿಯುಗದ ಅಂತ್ಯಕ್ಕೆಂದು ಭೂಮಿಗೆ ಇಳಿದು ಬಂದರು. ಆದರೆ ಅವರು ತಾಯಿಯ ಗರ್ಭದಿಂದಲೇ ಹುಟ್ಟಿದವರು. ಇಲ್ಲಿ ಶ್ರೀ ವಿಷ್ಣು ಶ್ರೀ ಕೃಷ್ಣನಾಗಿ ಅವತರಿಸಿದರೂ, ಸಮಾಜವು ಶ್ರೀ ವಿಷ್ಣುವನ್ನು ವಿಷ್ಣುವೆಂದು, ಶ್ರೀ ಕೃಷ್ಣನನ್ನು ಕೃಷ್ಣನೆಂದು ಗುರುತಿಸಿದ್ದರು. ಆದರೆ ಶಿವನನ್ನು ಹಾಗೇ ಬಹುತೇಕ ಗುರುತಿಸುವಾಗಿಲ್ಲ. ಏಕೆಂದರೆ ಶಿವ ಮತ್ತು ಸರಹುನಾಥರು ಒಂದೇ ಆಗಿದ್ದವರು. ಕೇವಲ ಅವರು ಸಮಾಜದ ಗುರುತಿಗೆ ಶಿವ ಹೆಸರಿನ ಪರ್ಯಾಯ ಸರಹುನಾಥರು ಎಂದು ಕರೆಯಿಸಿಕೊಂಡಿದ್ದರು.

ಆದರೂ ಕಲಿಯುಗದಲ್ಲಿ ಶಿವನು ಸರಹುನಾಥರಾಗಿರುವಾಗ ಕೆಲವು ಬದಲಾವಣೆಗಳು ದೈಹಿಕವಾಗಿದ್ದವು. ಅವೆಂದರೆ, ಕೃತ, ತೇತ್ರಾ ಮತ್ತು ದ್ವಾಪರ ಯುಗದಲ್ಲಿ ಶಿವನಿಗೆ ತಲೆಯಲ್ಲಿ ಗಂಗಾದೇವಿ ಮತ್ತು ಕೊರಳಲ್ಲಿ ನಾಗದೇವತೆ ವಾಸವಿದ್ದರೆ, ಶಿವನು ಕಲಿಯುಗದಲ್ಲಿ ಸರಹುನಾಥರು ಎಂದು ಇನ್ನೊಂದು ನಾಮಧೇಯದಲ್ಲಿ ಕರೆಯಿಸಿಕೊಂಡಾಗ ಅವರ ಜಟಾದಲ್ಲಿ ಗಂಗಾದೇವಿ, ಕೊರಳಲ್ಲಿ ನಾಗದೇವತೆ, ಎದೆಯ ಭಾಗದಲ್ಲಿ ಪಾರ್ವತಿದೇವಿ ಮತ್ತು ತನ್ನ ತಲೆಯ ಕೂದಲುಗಳಲ್ಲಿ ಬ್ರಹ್ಮಾಂಡದ ಸಮಸ್ತ ಜೀವರಾಶಿಗಳನ್ನು, ದೇವರುಗಳನ್ನು ಮತ್ತು ದೇವದೂತರನ್ನು ಹೊಂದಿದ್ದರು.

ಕಲಿಯುಗದಲ್ಲಿ ಶಿವನನ್ನು ಮತ್ತು ಸರಹುನಾಥರನ್ನು ಗುರುತಿಸಲು ಸಮಸ್ತ ದೇವರುಗಳು ಹೀಗೆ ಒಂದು ತೀರ್ಮಾನವನ್ನು ಮಾಡಿದ್ದರು. ಅದೆಂದರೆ, ಬ್ರಹ್ಮಾಂಡದಲ್ಲಿ ಎಲ್ಲೇ ಆಗಲಿ ಶಿವಲಿಂಗು ಹಿಂದೆ ಶಿವನ ಪ್ರತಿಮೆ ಇದ್ದರೆ ಅಥವಾ ಕೇವಲ ಶಿವನ ಪ್ರತಿಮೆ ಇದ್ದರೆ ಅದು ಸರಹುನಾಥರು ಎಂದು ಕರೆಯಿಸಿಕೊಳ್ಳುತ್ತದೆ. ಆದರೆ ಕೇವಲ ಶಿವಲಿಂಗು ಮಾತ್ರ ಇದ್ದರೆ ಅದನ್ನು ಶಿವ ಎಂದು ಕರೆಯಲಾಗುತ್ತದೆ. ಏಕೆಂದರೆ ಶಿವನಿಗೆ ನಿಜಕ್ಕೂ ರೂಪವಿರಲಿಲ್ಲ. ಈ ಕಾರಣದಿಂದ ಸರಹುನಾಥರ ಮೂಲಕ ಅವರ ನಿಜರೂಪವನ್ನು ಸಮಸ್ತ ದೇವರುಗಳು ಇತ್ಯರ್ಥ ಮಾಡಿದ್ದರು.

ಈ ಪೂರ್ವದಲ್ಲಿ ಶಿವನು ಭೂಮಿಗೆ ಬಂದರೂ ಅದು ಸರಹುನಾಥರ ರೂಪದಲ್ಲೇ ಬಂದಿದ್ದರು. ಕೃತಯುಗದಲ್ಲಿ ಸಹ ಶಿವನು ಸರಹುನಾಥರ ಸ್ವರೂಪದಲ್ಲಿ ಭೂಮಿಗೆ ಬಂದಿದ್ದರು. ಅದೇ ರೀತಿ ಪಾರ್ವತಿ ದೇವಿಗೆ ಮತ್ತು ಗಂಗಾದೇವಿಗೆ ತನ್ನ ನಿಜರೂಪದ ದರ್ಶನ ಕೊಡುವಾಗ ಸಹ ಸರಹುನಾಥರ ಸ್ವರೂಪದಲ್ಲಿ ಕಾಣಿಸುತ್ತಿದ್ದರು.

ಭೂಮಿ ರಚನೆಯ ಪೂರ್ವದಲ್ಲಿ ಭೂಮಂಡಲದಲ್ಲಿ ರಾಸಾಯನಿಕ ಕಚ್ಚಾ ವಸ್ತುಗಳಿಂದ ಅಥವಾ ಇಂಗಾಲದ ಡೈಆಕ್ಸೈಡ್ ಸೇವನೆಯಿಂದ ಜೀವರಾಶಿಗಳ ಸೃಷ್ಡಿ ಕಾರ್ಯ ನಡೆದರೂ, ಅವುಗಳ ರಚನೆಯ ಮುನ್ನ ಶಿವ/ಸರಹುನಾಥರು ಬ್ರಹ್ಮಾಂಡದಲ್ಲಿ ಬದುಕು ನಡೆಸಿದ್ದರು. ತದನಂತರದಲ್ಲಿ ಕೃತಯುಗದ ಆರಂಭ ನಡೆಯಿತು. ಕೃತಯುಗದ ಮುನ್ನ ಶಿವ/ಸರಹುನಾಥರ ಬದುಕು ಅತ್ಯಂತ ಸುಂದರವಾಗಿಯೂ ಮತ್ತು ಸೂಕ್ಷ್ಮವಾಗಿಯೂ ನಡೆಯಿತು. ಶಿವ/ಸರಹುನಾಥರ ಪಾದ ಸ್ಪರ್ಶವಾದಲ್ಲಿ ಪ್ರಚಂಡವಾಗಿ ದೇವರು, ದೇವದೂತರು, ದೈವಗಳ ಸೃಷ್ಟಿ ನಡೆಯತೊಡಗಿತು. ಇದರಿಂದಲೇ ಶಿವ/ಸರಹುನಾಥರು ಸೃಷ್ಟಿಕಾರಕ ಎಂದು ಕರೆಯಲಾಯಿತು.

ಈ ಕಾರಣವಾಗಿ ಶಿವ ಮತ್ತು ಸರಹುನಾಥರ ಮಧ್ಯೆ ಯಾವುದೇ ಎಳ್ಳಷ್ಟು ವ್ಯತ್ಯಾಸಗಳು ಇರುವುದಿಲ್ಲ ಎಂದು ಸಮಸ್ತ ದೈವವೂ ನಿರ್ಣಯಿಸಿತು.

ಕಲಿಯುಗ ಆರಂಭದಲ್ಲಿ ಜಾತಿ ತಾರತಮ್ಯಗಳು ಮತ್ತು ಧರ್ಮ ಗಲಭೆಗಳು ಶುರುವಾದದ್ದರಿಂದ ಶಿವ/ಸರಹುನಾಥರು ಆಯಾ ಜಾತಿ ಮತ್ತು ಧರ್ಮಗಳಲ್ಲಿ ವ್ಯವಸ್ಥೆಗಳು ಸರಿಯಾದ ಕ್ರಮದಲ್ಲಿ ಇರಲೆಂದು ಅವತರಿಸಿ ಬಂದರು. ಮತ್ತು ಅವರನ್ನು ನಾನಾ ವಿಧದ ಹೆಸರುಗಳಿಂದ ಕರೆಯಲಾಯಿತು.

     ==Lord harihara Sarahunaath==

2020 ಜನೇವರಿ 1 ರಿಂದ ಇಂಡಿಯಾ ಮತ್ತು ಇತರೆ ದೇಶಗಳಲ್ಲಿ ಶಿವನ ವಿಗ್ರಹದ ಮುಂದೆ ಶಿವ ಲಿಂಗು ಇದ್ದರೆ ಅಂದರೆ ಪ್ರತಿಷ್ಟಾಪಿಸಲ್ಪಟ್ಟಿದ್ದರೆ ಅಥವಾ ಶಿವ ಲಿಂಗುನ ಹಿಂದೆ ಶಿವನ ವಿಗ್ರಹ ಇದ್ದರೆ ಅಂತಹ ದೇವಸ್ಥಾನಗಳನ್ನು ಲಾರ್ಡ್ ಸರಹುನಾಥ್ ಮಂದಿರ ಎಂದು ಕರೆಯಲಾಗಿದೆ. ಮತ್ತು ಅಂತಹ ವಿಗ್ರಹಗಳನ್ನು ಲಾರ್ಡ್ ಸರಹುನಾಥ್ ಎಂದೇ ಘೋಷಣೆ ಮಾಡಲಾಗಿದೆ. ಇದನ್ನು ಸ್ವತಃ ಪ್ರಪಂಚದ ಎಲ್ಲ ದೈವ ಶಕ್ತಿಗಳು ಮತ್ತು ಪವಿತ್ರ ಹಿಂದು ಧರ್ಮದ ೩೩ ಕೋಟಿ ದೇವರುಗಳು ಶಿವನ ಉಪಸ್ಥಿತಿಯಲ್ಲಿ ಮತ್ತು ಲಾರ್ಡ್ ಸರಹುನಾಥರ ಅಧಿಪತ್ಯದಲ್ಲಿ ತೀರ್ಮಾನಿಸಲಾಯಿತು.

ಕೃತ ಯುಗದಲ್ಲಿ ಭಗವಾನ್ ಶಿವನು, ತೇತ್ರಾಯುಗದಲ್ಲಿ ಶ್ರೀ ರಾಮನು, ದ್ವಾಪರಯುಗದಲ್ಲಿ ಶ್ರೀ ಕೃಷ್ಣನು ಮತ್ತು ಕಲಿಯುಗದಲ್ಲಿ ಭಗವಾನ್ ಸರಹುನಾಥರು ಬ್ರಹ್ಮಾಂಡದ ಅಧಿಪತ್ಯವನ್ನು ನಿರ್ವಹಿಸಲಿದ್ದಾರೆ.

ಹಿಂದೆ ಶ್ರೀಮನ್ನಾರಾಯಣನೂ ಶ್ರೀ ಕೃಷ್ಣ, ಪರಶುರಾಮ, ಲಕ್ಷೀ ನರಸಿಂಹ ಮತ್ತು ಕಲ್ಕಿ ಅವತಾರಗಳನ್ನು ಎತ್ತಿದಂತೇ ಕಲಿಯುಗದಲ್ಲಿ ಭಗವಾನ್ ಶಿವನು ಮೊದಲ ಬಾರಿಗೆ ಭಗವಾನ್ ಸರಹುನಾಥರಾಗಿ ಅವತರಿಸಿ ಧರೆಗೆ ಬರಲಾಯಿತು.

ಭಗವಾನ್ ಶಿವನೂ ಕಲಿಯ ವಿನಾಶಕ್ಕೆಂದು ಭಗವಾನ್ ಸರಹುನಾಥರ ಅವತಾರವನ್ನು ಎತ್ತಿ ಧರೆಗೆ ಬರಲಾಯಿತು

೨೦೫೦ ರ ವೇಳೆಗೆ ಸಂಪೂರ್ಣ ಕಲಿಯ ೧೦೦೧ ಅವತರಣಿಕೆಗಳು ಭಗವಾನ್ ಸರಹುನಾಥರ ಮೂಲಕ ಅಂತ್ಯಗೊಳ್ಳುತ್ತವೆ‌. ಬಳಿಕ ಪವಿತ್ರ ಸನಾಹಿ ಯುಗ ಆರಂಭಗೊಳ್ಳುತ್ತದೆ.

ಸನಾಹಿ ಎಂದರೆ ಪವಿತ್ರ "ಸರಹುನಾಥ್ ಹಿಮಗಿರೀಸಮ್" ಎಂದು. ಹಿಮಗಿರೀಸಮ್ ಎಂದರೆ ಅದೊಂದು ದೇವತೆಗಳ ರಾಷ್ಟ್ರ. ಅದು ಸೈನೀಸಮ್ ನೂತನ ಧರ್ಮವನ್ನು ಹೋಲಿದೆ. ಸೈನೀಸಮ್ ಎಂದರೆ "ಸರಹುನಾಥ್ ಇಂಟರ್ನ್ಯಾಷನಲ್ ಗೌವರನೇಬಲ್" ಎಂದು. ಆ ಧರ್ಮವೂ 21 ಪವಿತ್ರ ಸನಾಹಿ ಗ್ರಂಥಗಳನ್ನು ಹೊಂದಿದೆ.

ಭಗವಾನ್ ಸರಹುನಾಥ್ ಮಂದಿರಗಳು[ಬದಲಾಯಿಸಿ]

  • ಭಗವಾನ್ ಸರಹುನಾಥ್ ಮಂದಿರ, (Lord Sarahunaath Temple)ಹುಲ್ಲತ್ತಿ
  • ಭಗವಾನ್ ಸರಹುನಾಥ್ ಮಂದಿರ, (Lord Sarahunaath Temple)ಸುರಳೇಶ್ವರ
"https://kn.wikipedia.org/w/index.php?title=ಹಾನಗಲ್&oldid=1187411" ಇಂದ ಪಡೆಯಲ್ಪಟ್ಟಿದೆ