ಗಂಗಾವತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗಂಗಾವತಿ

ಗಂಗಾವತಿ
ರಾಜ್ಯ
 - ಜಿಲ್ಲೆ
ಕರ್ನಾಟಕ
 - ಕೊಪ್ಪಳ
ನಿರ್ದೇಶಾಂಕಗಳು 15.43° N 76.53° E
ವಿಸ್ತಾರ
 - ಎತ್ತರ
16.53 km²
 - 406 ಮೀ.
ಸಮಯ ವಲಯ IST (UTC+5:30)
ಜನಸಂಖ್ಯೆ (2001)
 - ಸಾಂದ್ರತೆ
93,249
 - 5641.2/ಚದರ ಕಿ.ಮಿ.
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - 583 227
 - +08533
 - KA-37

ಗಂಗಾವತಿ[ಬದಲಾಯಿಸಿ]

ಕೊಪ್ಪಳ ಜಿಲ್ಲೆಯ ಒಂದು ತಾಲೂಕು ಕೇಂದ್ರ.ಇದು ಜಿಲ್ಲೆಯ ಒಂದು ದೊಡ್ಡ ವಾಣಿಜ್ಯ ನಗರ, ಅಕ್ಕಿ ಬೆಳೆಗಾರಿಕೆಗೆ ಬಹಳ ಪ್ರಸಿದ್ಧವಾದ ಸ್ಥಳ. ಕೊಪ್ಪಳ ಜಿಲ್ಲೆಯ ಯಾವುದೇ ಪಟ್ಟಣಗಳಿಗೆ ಹೋಲಿಸಿದರೆ ಇದು ವಿಸ್ತೀರ್ಣ ಮತ್ತು ಜನಸಂಖ್ಯೆ ದೃಷ್ಟಿಯಿಂದ ದೊಡ್ಡ ನಗರವಾಗಿದೆ.ಇದು ಒಂದು ವಾಣಿಜ್ಯ ಕೇಂದ್ರವಾಗಿ ಮತ್ತು ಸಾಮಾನ್ಯವಾಗಿ ಕರ್ನಾಟಕ ಅನ್ನದ ಪಾತ್ರೆ ನಗರವೆಂದು ಪರಿಚಿತವಾಗಿದೆ.

ಇತಿಹಾಸ[ಬದಲಾಯಿಸಿ]

ಸ್ವಾತಂತ್ರ್ಯ ಪೂರ್ವದಲ್ಲಿ ಈ ಪ್ರದೇಶವು ಹೈದರಾಬಾದ್ ನಿಜಾಮರ ಆಡಳಿತಕ್ಕೆ ಒಳಪ್ಪಟ್ಟಿತ್ತು, ಭಾರತಕ್ಕೆ ಸ್ವಾತಂತ್ರ್ಯ ೧೫ ನೇ ಆಗಸ್ಟ್ ೧೯೪೭ ರಲ್ಲಿ ದೊರಕಿತು, ಕೊಪ್ಪಳ ಹೈದರಾಬಾದ್ ಪ್ರದೇಶದ ಭಾಗವಾಗಿದ್ದರಿಂದ ಪ್ರದೇಶದ ಜನರು ಹೈದರಾಬಾದ್ ನಿಜಾಮ್ ಹಿಡಿತದಿಂದ ಸ್ವಾತಂತ್ರ್ಯವನ್ನು ಗಳಿಸಲು ಮತ್ತಷ್ಟು ಹೋರಾಟ ಮಾಡಬೇಕಾಯಿತು. ೧೭ ಸೆಪ್ಟೆಂಬರ್ ೧೯೪೮ ರಲ್ಲಿ, ಹೈದರಾಬಾದ್-ಕರ್ನಾಟಕಕ್ಕೆ ನಿಜಾಮರಿಂದ ಸ್ವಾತಂತ್ರ್ಯ ಸಿಕ್ಕಿತು. ೦೧-೦೪-೧೯೯೮ ರವರೆಗೆ ಗಂಗಾವತಿಯು ಗುಲ್ಬರ್ಗಾ ಕಂದಾಯ ವಿಭಾಗದ ಅವಿಭಜಿತ ರಾಯಚೂರು ಜಿಲ್ಲೆಯ ಭಾಗವಾಗಿತ್ತು.೦೧-೦೪-೧೯೯೮ ರಂದು ಕೊಪ್ಪಳವು ನಾಲ್ಕು ತಾಲ್ಲೂಕುಗಳನ್ನು ಒಳಗೊಂಡಿರುವ ಜಿಲ್ಲೆಯಾಗಿ ಬೆರ್ಪಟ್ಟಿತು. ಆ ಸಂದರ್ಭದಲ್ಲಿ ಗಂಗಾವತಿಯು ಕೊಪ್ಪಳದ ಒಂದು ತಾಲೂಕಾಯಿತು.

ಭೂಗೋಳ[ಬದಲಾಯಿಸಿ]

೨೦೧೦-೨೦೧೧ ರ ಪ್ರಕಾರ ೧೩೨,೧೩೧ ಹೆಕ್ಟೇರ್ ಭೂಪ್ರದೇಶ ಹೊಂದಿದ್ದು ೧೪,೪೮೨ ಹೆಕ್ಟೇರ್ ಅರಣ್ಯ ಪ್ರದೇಶವನ್ನು ಹೊಂದಿದೆ. ೭,೭೧೦ ಹೆಕ್ಟೇರ್ ಕೃಷಿಯೇತರ ಹಾಗೂ ೪,೬೫೧ ಹೆಕ್ಟೇರ್ ಬರಡು ಭೂಮಿ ಹೊಂದಿದೆ. ೫೬೦ ಹೆಕ್ಟೇರ್ ಕೃಷಿ-ತ್ಯಾಜ್ಯ ಪ್ರದೇಶ. ೭,೧೯೩ ಹೆಕ್ಟೇರ್ ಹಸಿರು ಹುಲ್ಲು ಪ್ರದೇಶವನ್ನು ಹೊಂದಿದೆ. ೪೫ ಕಿ.ಮೀ ಉದ್ದ ಕಾಲುವೆ ೭೪೫೦೧ ಕಿ.ಮೀ ಒಟ್ಟು ನೀರಾವರಿ ಪ್ರದೇಶದ ಮತ್ತು ಹತ್ತಿರದಲ್ಲಿ ತುಂಗಭದ್ರ ಅಣೆಕಟ್ಟು ಸ್ಥಾಪಿತವಾಗಿದೆ.

ಆರ್ಥಿಕ[ಬದಲಾಯಿಸಿ]

ಗಂಗಾವತಿಯು ಜಿಲ್ಲೆಯ ಪ್ರಮುಖ ವಾಣಿಜ್ಯ ಕೇಂದ್ರವಾಗಿದ್ದು ಗ್ರಾಮೀಣ ಪ್ರದೇಶಗಳಲ್ಲಿ ಭತ್ತದ ಬೆಳೆ ಪ್ರಮುಖವಾಗಿದೆ ಹಾಗೂ ಅಕ್ಕಿ ಉದ್ಯಮ ಸಕ್ಕರೆ ಉತ್ಪಾದನೆಗೆ ಪ್ರಸಿದ್ಧವಾಗಿದೆ. ಸಕ್ಕರೆ ಕಾರ್ಖಾನೆ ಗಂಗಾವತಿ ಶುಗರ್ ಲಿಮಿಟೆಡ್(ಈಗ ಸ್ಥಗಿತಗೊಳಿಸಿಲಾಗಿದೆ) ಗಂಗಾವತಿಯಿಂದ ೧೦ ಕಿ.ಮೀ ದೂರದಲ್ಲಿ ಇದೆ ಅದು ಏಷ್ಯಾದ ಎರಡನೇ ಅತಿ ದೊಡ್ಡ ಸಕ್ಕರೆ ಕಾರ್ಖಾನೆ ಆಗಿತ್ತು.

ಜನಸಂಖ್ಯೆ[ಬದಲಾಯಿಸಿ]

೨೦೦೧ ರ ಭಾರತೀಯ ಜನಗಣತಿಯ ಪ್ರಕಾರ,ಗಂಗಾವತಿ ೯೩,೨೪೯ ಜನಸಂಖ್ಯೆಯನ್ನು ಹೊಂದಿತ್ತು. ಜನಸಂಖ್ಯೆಯಲ್ಲಿ ಪುರುಷರು ೫೧% ಮತ್ತು ಮಹಿಳೆಯರು ೪೯% .ಪುರುಷರ ಸಾಕ್ಷರತೆ ೬೭% ಮತ್ತು ಮಹಿಳೆಯರ ಸಾಕ್ಷರತೆ ೪೮%, ಒಟ್ಟು ೫೭% ರಾಷ್ಟ್ರೀಯ ಸರಾಸರಿ(೫೯.೫%)ಗಿಂತ ಕಡಿಮೆ ಸಾಕ್ಷರತಾ ಪ್ರಮಾಣವನ್ನು ಹೊಂದಿತ್ತು. ಗಂಗಾವತಿ ಜನಸಂಖ್ಯೆಯ ೧೫% ರಷ್ಟು ೬ ವರ್ಷ ವಯೋಮಿತಿಗಿಂತ ಕೆಳಗಿನವರು ಇದ್ದಾರೆ.

ಶಿಕ್ಷಣ[ಬದಲಾಯಿಸಿ]

ಇದು ಜಿಲ್ಲೆಯ ಪ್ರಮುಖ ಶಿಕ್ಷಣ ಕೇಂದ್ರವಾಗಿದೆ. ಕೆ,ಎಲ್,ಇ ಸೊಸೈಟಿಯ ಪದವಿಪೂರ್ವ ವಿಜ್ಞಾನ ಕಾಲೇಜುಗಳು, ಸಂಕಲ್ಪ ಸ್ವತಂತ್ರ ಪದವಿಪೂರ್ವ ಕಾಲೇಜ್ ಬಸ್ ನಿಲ್ದಾಣ ಹಿಂದುಗಡೆ, ಕೆ,ಎಲ್,ಇ ವಾಣಿಜ್ಯ ಕಾಲೇಜ್(ಬಿ.ಕಾಮ್) ಕೊಪ್ಪಳ ರಸ್ತೆ ಗಂಗಾವತಿ. ಅಕ್ಷರ ಪಬ್ಲಿಕ್ ಸ್ಕೂಲ್, ಚೈತನ್ಯ ಟೆಕ್ನೋ ಸ್ಕೂಲ್, ಅಶ್ಫ಼ಕುಲ್ ಉಲೂಂ ಅಶ್ರಫ಼ಿಯ (ಅರೇಬಿಕ್ ಸ್ಕೂಲ್); ಬೆತಲ್ ಹೈಸ್ಕೂಲ್; ಸರ್ಕಾರಿ ಪ್ರಥಮ ದರ್ಜೆ ಕಾಲೇಜು; ಜಿ,ಹೆಚ್,ಎನ್. ಕಮ್ಯೂನಿಟಿ ಕಾಲೇಜ್; ಹೆಚ್,ಆರ್,ಎಸ್,ಎಮ್ ಕಾಲೇಜ್ ಆಫ್ ಆರ್ಟ್ಸ್; ಜ್ಞಾನ ಗಂಗೋತ್ರಿ ಕಾಲೇಜ್; ಜೆಎಸ್ಎಸ್ ವಿಜ್ಞಾನ ಕಾಲೇಜ್; ಕಲ್ಮಟ ಶ್ರಿ ಚನ್ನಬಸವ ಸ್ವಾಮಿ ಮಹಿಳೆಯರ ಆರ್ಟ್ಸ್ ಅಂಡ್ ಕಾಮರ್ಸ್ ಕಾಲೇಜ್; ಎಮ್,ಎನ್,ಎಮ್ ಸರ್ಕಾರಿ ಕಾಲೇಜ್; ಸರೋಜಮ್ಮ ಮಹಿಳಾ ಕಾಲೇಜ್; ಶ್ರೀ ಕೊಲ್ಲಿ ನಾಗೇಶ್ವರ ರಾವ್ ಗಂಗಯ್ಯ ಪ್ರಥಮ ದರ್ಜೆ ಸರ್ಕಾರಿ ಕಾಲೇಜು; ಟಿ,ಎಮ್,ಇ ಬಿಬಿಎಂ ಕಾಲೇಜ್; ವಿಶ್ವ ಭಾರತಿ ವಿದ್ಯಾ ಕೇಂದ್ರ ಇಂಗ್ಲೀಷ್ ಮಾಧ್ಯಮ ಶಾಲೆ; ಲಾಯನ್ಸ್ ಕ್ಲಬ್ ಪ್ರೌಢಶಾಲಾ ಗಂಗಾವತಿ; ಮತ್ತು ವೆಂಕಟರಾಮಣ್ಣ ಶೆಟ್ಟಿ ಪದ್ಮಾವತಮ್ಮ ಪ್ರಥಮ ದರ್ಜೆ ಸರ್ಕಾರಿ ಕಾಲೇಜು; ಎಮ್,ಎಸ್,ಎಮ್,ಎಸ್ ಗ್ರಾಮೀಣ ಕಾಲೇಜು; ವಿವೇಕ ಭಾರತಿ ವಿಧ್ಯಾ ಕೆಂದ್ರ ಪ್ರೌಢ ಶಾಲೆ.

ಐತಿಹಾಸಿಕ ಸ್ಥಳಗಳು[ಬದಲಾಯಿಸಿ]

ಗಂಗಾವತಿಯ ಬಳಿ ಐತಿಹಾಸಿಕ ಮಹತ್ವವುಳ್ಳ ಪ್ರಸಿದ್ಧ ಸ್ಥಳಗಳಿವೆ. ವಿಜಯನಗರದ ರಾಜಧಾನಿಯಾಗಿದ್ದ ಹಂಪೆ, ಅ ಯುನೆಸ್ಕೊ ವರ್ಲ್ದ್ ಹಾರಿಟೆಜ್ ಸೈಟ್ ಗಂಗಾವತಿಯ ನೈಋತ್ಯ ದಿಕ್ಕಿನಿಂದ ೧೪ ಕಿಲೋಮೀಟರ್ ದೂರದಲ್ಲಿದೆ. ಹಂಪೆಯ ವಿರೂಪಾಕ್ಷ ದೇವಾಲಯ ಪ್ರಸ್ಸಿದ್ಧವಾಗಿದೆ, ಕನಕಗಿರಿಯ ವೆಂಕಟಛಲಪತಿ ದೇವಾಲಯ 'ದೇವಾಲಯದ ಚಕ್ರವರ್ತಿ' ಎಂದು ಕರೆಯುತ್ತಾರೆ. ಗಂಗಾವತಿ ತಾಲೂಕಿನ ಹಿರೇಬೆಣಕಲ್ ಗ್ರಾಮದಲ್ಲಿ ಪ್ರಾಗತಿಹಾಸಕಾಲದ ಅಂದರೆ ನವಶಿಲಾಯುಗ ಕಾಲದ ಕುರುಹುಗಳು ಪತ್ತೆಯಾಗಿವೆ. ವಿಜಯನಗರ ಸಾಮ್ರಾಜ್ಯದ ಮೊದಲ ರಾಜಧಾನಿ ಆನೆಗುಂದಿ ಇದೇ ತಾಲೂಕಿನ ವ್ಯಾಪ್ತಿಗೆ ಬರುತ್ತದೆ. ಶ್ರೀ ಚನ್ನಬಸವಸ್ವಾಮಿ ಮಠ ಬಹಳ ಪ್ರಸಿದ್ಧವಾಗಿದೆ.ರಾಘವೇಂದ್ರ ದೇವರ ನವ ಬೃಂದಾವನ, ಹೇಮಗುಡ್ಡ ೧೪ ನೇ ಶತಮಾನದ ಸುರಕ್ಷಿತ-ಧಾಮವಾದ ಕೋಟೆ ಮತ್ತು ದಸರಾ ಆಚರಣೆಗಳ ತಾಣವಾಗಿತ್ತು. ಶ್ರೀ ಕನ್ನಿಕ ಪರಮೇಶ್ವರಿ ದೇವಸ್ಥಾನ ೧೪ ನೇ ಶತಮಾನದಲ್ಲಿ ನಿರಮಿಸಿದ ಪ್ರಸಿದ್ಧ ಶ್ರೀ ಪ್ರಸನ್ನ ಪಂಪಾ ವಿರೂಪಾಕ್ಷೇಶ್ವರ ದೇವಸ್ಥಾನ ಹಿರೇಜಂತಕಲ್ ಗಂಗಾವತಿ, ಶ್ರೀ ಮುಡ್ಡಾಣ್ಣೆಶ್ವರ ಹಿರೇಜಂತಕಲ್ ಗಂಗಾವತಿ, ಶ್ರೀ ನೀಲಕಂಠೇಶ್ವರ ದೇವಸ್ಥಾನ ನಗರದ ವ್ಯಾಪ್ತಿಯೊಳಗೆ ಬರುತ್ತದೆ.

ಸಾರಿಗೆ[ಬದಲಾಯಿಸಿ]

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆ,ಎಸ್,ಆರ್,ಟಿ,ಸಿ) ಗಂಗಾವತಿಯನ್ನು ಅನೇಕ ಪ್ರಮುಖ ನಗರಗಳಿಗೆ ಸೇರಿಸುತ್ತದೆ, ಗಿಣಿಗೇರಾ - ರಾಯಚೂರು ರಯ್ಲು ಮಾರ್ಗದ ಬಾಗವಾಗಿ ಗಂಗಾವತಿ ನಗರದ ಸಿಂದನೂರು ಮುಕ್ಯ ರಸ್ತೆಯಲ್ಲಿ ಗಂಗಾವತಿ ರಯ್ಲು ನಿಲ್ದಾಣವಿದೆ. ಹೊಸಪೇಟೆ,ಕಾರಟಗಿ ಹಾಗೂ ಕೊಪ್ಪಳ ಇತರೆ ಹತ್ತಿರದ ಪ್ರಮುಕ ರಯ್ಲುನಿಲ್ದಾಣಗಳಾಗಿವೆ. ಕಾರಟಗಿಯಿಂದ ಗಂಗಾವತಿ ಮೂಲಕ ಬೆಂಗಳೂರಿನ ಯಶವಂತಪುರ ಹಾಗೂ ಹುಬ್ಬಳ್ಳಿ ನಗರಗಳಿಗೆ ನೇರ ರಯ್ಲು ಸಂಪರ್ಕವಿದೆ.. ಹಾಗೂ ಇತ್ತೀಚಿಗೆ ಗಂಗಾವತಿ ರಯ್ಲು ನಿಲ್ದಾಣಕ್ಕೆ ಬಾರತೀಯ ರಯ್ಲವೇಯಿಂದ ಹಾಲ್ಟ್ ಸ್ಟೇಶನ್ ಬದಲಾಗಿ NSG6 ಸ್ಟೇಶನ್ ಆಗಿ ಬಡ್ತಿಹೊಂದಿದೆ.

ಇದನ್ನೂ ನೋಡಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. ಕೊಪ್ಪಳ ಜಿಲ್ಲೆ
  2. ಭಾರತ ಸರ್ಕಾರದ ಪಂಚಾಯತಿ ರಾಜ್ ಸಚಿವಾಲಯ Lua error in ಮಾಡ್ಯೂಲ್:Webarchive at line 127: attempt to compare number with nil.
  3. ಭಾರತದ ಜನಗಣತಿ ಆಯೋಗ, ಮೂಲ ದಾಖಲೆಯನ್ನು 2004-06-16 ಹಾಗೂ 2008-11-01 ರಂದು ಮರುಸಂಪಾದಿಸಲಾಗಿದೆ.
  4. "ಕೆ,ಎಲ್,ಇ ಸೊಸೈಟಿಯ ಪದವಿಪೂರ್ವ ವಿಜ್ಞಾನ ಕಾಲೇಜು, ಕೊಪ್ಪಳ ರಸ್ತೆ,ಗಂಗಾವತಿ"
  5. "ಕೊಪ್ಪಳ ಜಿಲ್ಲೆಯಲ್ಲಿರುವ ಮಹಾವಿದ್ಯಾಲಯಗಳು" Archived 2015-03-14 ವೇಬ್ಯಾಕ್ ಮೆಷಿನ್ ನಲ್ಲಿ.
  6. ಸೇಫ಼್ ಸಾಂಕ್ಟುರಿ ಡೆಕ್ಕನ್ ಹೆರಾಲ್ಡ್ Lua error in ಮಾಡ್ಯೂಲ್:Webarchive at line 127: attempt to compare number with nil.

ಭಾಹ್ಯ ಸಂಪರ್ಕಗಳು[ಬದಲಾಯಿಸಿ]

  1. ಕರ್ನಾಟಕ ಸರ್ಕಾರ Archived 2012-01-19 ವೇಬ್ಯಾಕ್ ಮೆಷಿನ್ ನಲ್ಲಿ.
  2. ಕೃಷಿ ಮತ್ತು ತೋಟಗಾರಿಕೆ Archived 2016-03-04 ವೇಬ್ಯಾಕ್ ಮೆಷಿನ್ ನಲ್ಲಿ.
  3. ಗಂಗಾವತಿ ಪ್ರಾಣೇಶ್ Archived 2018-01-09 ವೇಬ್ಯಾಕ್ ಮೆಷಿನ್ ನಲ್ಲಿ.
"https://kn.wikipedia.org/w/index.php?title=ಗಂಗಾವತಿ&oldid=1211658" ಇಂದ ಪಡೆಯಲ್ಪಟ್ಟಿದೆ