ಕಾರಟಗಿ
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
ಕಾರಟಗಿ ಪಟ್ಟಣವು ಕೊಪ್ಪಳ ಜಿಲ್ಲೆಯ ನೂತನ ತಾಲೂಕು ಕೇಂದ್ರ. ಇದು ಜಿಲ್ಲಾಕೇಂದ್ರ ಕೊಪ್ಪಳ ಯಿಂದ ಸರಿಸುಮಾರು 71.2Km ಇದೆ
ಇದು ಸುಮಾರು ೩೫೦೦೦ ಕ್ಕೂ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿದೆ. ಇಲ್ಲಿ ಭತ್ತ ಪ್ರಮುಖ ಬೆಳೆಯಾಗಿದೆ. ಇದನ್ನು ಕೊಪ್ಪಳದ ಭತ್ತದ ಕಣಜ ಎಂದು ಕರೆಯಲಾಗಿದೆ. ಇಲ್ಲಿ ೬೮ ಕ್ಕೂ ಹೆಚ್ಚಿನ ರೈಸ್ ಮಿಲ್ ಇವೆ. ಇಲ್ಲಿ ಏಷಿಯಾದಲ್ಲಿಯೇ ೨ ನೇ ಅತಿದೊಡ್ಡ ರೈಸ್ ಟೆಕ್ನಾಲಜಿ ಪಾರ್ಕ್ ಇಲ್ಲಿ ಸ್ತಾಪಿತವಾಗಿದೆ ಇದೆ.ಈ ಪಟ್ಟಣವು ರಾಯಚೂರು - ಗಿಣಿಗೇರಾ ರಾಜ್ಯ ಹೆದ್ದಾರಿ ೨೩ರ ಲ್ಲಿದೆ.ಕಾರಟಗಿ ತಾಲೂಕು ಸಿಂದನೂರು, ಗಂಗಾವತಿ, ಕನಕಗಿರಿ ಮತ್ತು ಸಿರುಗುಪ್ಪ ತಾಲೂಕುಗಳಿಂದ ಸುತ್ತುವರಿದಿದೆ. ಕಾರಟಗಿ ನಗರವು ಒಳ್ಳೆಯ ಸಾರಿಗೆ ಸಂಪರ್ಕವನ್ನು ಹೊಂದಿದೆ, ಇಲ್ಲಿಂದ ರಾಜ್ಯದ ರಾಜದಾನಿ ಬೆಂಗಳೂರು, ಹುಬ್ಬಳ್ಳಿ, ಕಲಬುರಗಿ, ರಾಯಚೂರು, ಸಿಂದನೂರು, ಗಂಗಾವತಿಯಂತ ವಾಣಿಜ್ಯ ನಗರಗಳು ,ಮಂತ್ರಾಲಯ, ದರ್ಮಸ್ತಳ, ಹಂಪಿ ಮುಂತಾದ ಪ್ರಸಿದ್ದ ಕ್ಸೇತ್ರಗಳಿಗೆ ಬಸ್ಸುಗಳ ಸೌಕರ್ಯವಿದೆ, ಹಾಗೇ ರಾಯಚೂರು-ಗಿಣಿಗೇರಾ ರಯ್ಲು ಯೋಜನೆಯ ಬಾಗವಾದ ಕಾರಟಗಿ ರಯ್ಲು ನಿಲ್ದಾಣ ಇತ್ತೀಚಿಗೆ ಕಾರ್ಯನಿರ್ವಹಿಸುತ್ತಿದೆ, ಕಾರಟಗಿಯಿಂದ ಬೆಂಗಳೂರಿನ ಯಶವಂತಪುರ ಮತ್ತು ಹುಬ್ಬಳ್ಳಿ ನಗರಗಳಿಗೆ ನೇರ ರಯ್ಲು ಸಂಪರ್ಕವಿದೆ..
ಕಾರಟಗಿಯ ಪುಶ್ಕರಣಿ
[ಬದಲಾಯಿಸಿ]ಈ ಕಾರಟಗಿ ಭಾಗವನ್ನು ಮೌರ್ಯರು ,ಚಾಲುಕ್ಯರು ,ನಿಜಾಮರು ಮುಂತಾದವರು ಆಳಿ ತನ್ನದೇ ಆದ ಕೊಡುಗೆಯನ್ನು ನೀಡಿದ್ದಾರೆ. ಅವುಗಳಲ್ಲಿ ಈ ಪುಷ್ಕರಣಿ ಸಹ ಒಂದಾಗಿದೆ ಈ ಪುಷ್ಕರಣಿಯನ್ನು ಕಲ್ಯಾಣಿ ಚಾಲುಕ್ಯರ ಕಾಲದ ಅರಸನಾದ ಸುಂಕಲಿ ವೀರಪ್ಪ ದೊರೆ ನಿರ್ಮಿಸಿದನು. ಈ ಪುಶ್ಕರಣಿ ವಿಶಿಷ್ಟ ವಿನ್ಯಾಸದಿಂದ ರಚಿತವಾಗಿದೆ. ಮೆಟ್ಟಿಲುಗಳ ಮತ್ತು ಕಲ್ಲಿನ ಸಾಲಿಮಂಟಪಗಳ ಮೇಲೆ ಕೆತ್ತಲಾದ ಉಬ್ಬು ಶಿಲ್ಪಗಳಲ್ಲಿ ನಾಗರ, ವಾನರ, ನಂದಿ , ಪಾರಿವಾಳ, ಕೈಗೆತ್ತಿ ಮುಂತಾದ ಉಬ್ಬು ಶಿಲ್ಪಗಳು ಕಾಣಬಹುದಾಗಿದೆ. ಈ ಪುಷ್ಕರಣಿಯನ್ನ ನಮ್ಮ ಪೂರ್ವಜರು ಮಹದೇಶ್ವರ ಹೋಂಡ ಎಂದು ಕರೆಯುತ್ತಿದ್ದರು ಇದರಲ್ಲಿ ಒಂದು ಮಠವಿತ್ತು ; ಇಲ್ಲಿ ಅಮರ ಶಿಲ್ಪಿ ಜಕಣಾಚಾರಿ ಕಾಲದಲ್ಲಿ ವಿದ್ಯಾ ಬೋಧನೆಯನ್ನು ಮಾಡುತ್ತಿದ್ದರು ಎಂದು ತಿಳಿದು ಬಂದಿದೆ ಹೀಗಾಗಿ ;ಐತಿಹಾಸಿಕ ಕೊಡುಗೆಗಳಲ್ಲಿ ಇದು ಸಹ ಒಂದಾಗಿದೆ .[೧]