ವಿಷಯಕ್ಕೆ ಹೋಗು

ಇಂಡಿ ವಿಧಾನಸಭಾ ಕ್ಷೇತ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇಂಡಿ ವಿಧಾನಸಭಾ ಕ್ಷೇತ್ರವು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ 8 ವಿಧಾನ ಸಭಾ ಕ್ಷೆತ್ರಗಳಲ್ಲಿ ಒಂದಾಗಿದೆ. ಇಂಡಿ ಮತಕ್ಷೇತ್ರ(2018)ದಲ್ಲಿ 1,18,626 ಪುರುಷರು, 1,09,818 ಮಹಿಳೆಯರು ಸೇರಿ ಒಟ್ಟು 2,28,444 ಮತದಾರರಿದ್ದಾರೆ.

ಕ್ಷೇತ್ರದ ಇತಿಹಾಸ

[ಬದಲಾಯಿಸಿ]

ಪುಣ್ಯಕ್ಷೇತ್ರವಾಗಿಯೂ ಪ್ರಸಿದ್ಧಿ ಪಡೆದ ಇಂಡಿ ಕ್ಷೇತ್ರವು ವಿಜಯಪುರ ಜಿಲ್ಲೆಯ ಒಂದು ವಿಧಾನಸಭಾ ಕ್ಷೇತ್ರ. ಕರ್ನಾಟಕದ ಉತ್ತರದ ಗಡಿಯಲ್ಲಿರುವ ಇಂಡಿಯು ಉತ್ತರಕ್ಕೆ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆ, ಪಶ್ಚಿಮಕ್ಕೆ ಮಹಾರಾಷ್ಟ್ರದ ಸಾಂಗಲಿ ಜಿಲ್ಲೆ , ದಕ್ಷಿಣಕ್ಕೆ ವಿಜಯಪುರ ತಾಲ್ಲೂಕು ಮತ್ತು ಪೂರ್ವಕ್ಕೆ ಸಿಂದಗಿ ತಾಲ್ಲೂಕುಗಳಿವೆ.

ಅವಿಭಜಿತ ವಿಜಯಪುರ ಜಿಲ್ಲೆಯ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿರುವ ಬಿಎಲ್‌ಡಿಇ ಸಂಸ್ಥೆಯ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ಬಂಥನಾಳದ ಸಂಗನಬಸವ ಶಿವಯೋಗಿಗಳ ಕಾರ್ಯಕ್ಷೇತ್ರ. ಲಚ್ಯಾಣದ ಕಮರಿಮಠದ ಸಿದ್ಧಲಿಂಗ ಮಹಾರಾಜರು ನೆಲೆಸಿದ ನೆಲೆವೀಡು.

ಶತ ಶತಮಾನಗಳ ಹಿಂದೆಯೇ ಪ್ರಸಿದ್ಧ ವಿದ್ಯಾಕೇಂದ್ರ ಸಾಲೋಟಗಿಯಲ್ಲಿತ್ತು ಎಂಬ ಐತಿಹ್ಯ. ಸಾಧು–ಸಂತರು ಜನ್ಮ ತಾಳಿದ ಸುಕ್ಷೇತ್ರ. ಶಿಲಾಯುಗ ಸೇರಿದಂತೆ ರಾಮಾಯಣ ಕಾಲಘಟ್ಟದ ಇತಿಹಾಸ. ಪುರಾತನ ಸ್ಥಳ ಎಂಬ ಉಲ್ಲೇಖವೂ ಈಜಿಪ್ಟ್‌ನ ಖ್ಯಾತ ಭೂಗೋಳ ಶಾಸ್ತ್ರಜ್ಞ ಟಾಲೆಮಿ ರಚಿತ ಗ್ರಂಥದಲ್ಲಿ ದಾಖಲಾಗಿದೆ.

ಭೀಮಾ ನದಿ ವಿಜಯಪುರ ಜಿಲ್ಲೆಯ ವ್ಯಾಪ್ತಿಯಲ್ಲಿ ಹೆಚ್ಚು ಹರಿಯುವುದೇ ಇಂಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ. ಅಪರಾಧಿಕ ಚಟುವಟಿಕೆಗಳಿಂದಲೂ ಇಂಡಿ ರಾಜ್ಯದಲ್ಲೇ ಕುಖ್ಯಾತ. ಭೀಮಾ ತೀರ ಎಂದರೇ ಇಂದಿಗೂ ಬೆಚ್ಚಿ ಬೀಳುವವರು ಇದ್ದಾರೆ.

ಕ್ಷೇತ್ರದ ವಿಶೇಷತೆ

[ಬದಲಾಯಿಸಿ]
  • 1978, 1983 ಮತ್ತು 1989ರಲ್ಲಿ ಆರ್.ಆರ್. ಕಲ್ಲೂರ ಶಾಸಕರಾದ ಆಗಿನ ಮುಖ್ಯಮಂತ್ರಿ ಗುಂಡೂರಾವ್‌ಗೆ 9 ಕೆ.ಜಿ. ತೂಕದ ಬೆಳ್ಳಿ ಪಂಪ್‌ಸೆಟ್‌ ನೀಡಿದ ಹೆಗ್ಗಳಿಕೆ ಇವರದ್ದು.
  • ಕಾಂಗ್ರೆಸ್ನಿಂದ ೨ ಬಾರಿ ಶಾಸಕರಾದ ಆರ್.ಆರ್. ಕಲ್ಲೂರರವರಿಗೆ ಭೂಸೇನಾ ನಿಗಮ(ಪ್ರಸ್ತುತ ಹೆಸರು : ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ)ದ ಅಧ್ಯಕ್ಷರಾಗಿದ್ದರು.
  • 1994, 1999, 2004ರಲ್ಲಿ ಪಕ್ಷೇತರರಾಗಿ ಮೊದಲ ಬಾರಿಗೆ ಹ್ಯಾಟ್ರಿಕ್‌ ವಿಜಯಭೇರಿ ದಾಖಲಿಸಿದ ಕೀರ್ತಿ ರವಿಕಾಂತ ಪಾಟೀಲರದ್ದು.
  • ಬಿ.ಜಿ.ಪಾಟೀಲ(ಹಲಸಂಗಿ)ರು ವಿಧಾನ ಪರಿಷತನ ಸದಸ್ಯರಾಗಿದ್ದರು.
  • 2008ರಲ್ಲಿ ಡಾ.ಸರ್ವಭೌಮ ಬಗಲಿಯವರು ಬಿಜೆಪಿಯಿಂದ ಕೇವಲ ಒಮ್ಮೆ ಆಯ್ಕೆಯಾಗಿದ್ದು ಈ ಕ್ಷೇತ್ರದ ವಿಶೇಷತೆಯಾಗಿದೆ.
  • ಕಾಂಗ್ರೆಸನ ಯಶವಂತರಾಯಗೌಡ ಪಾಟೀಲರು ಕಳೆದ 40 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಮರಗೂರಿನ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು 2018ರಲ್ಲಿ ಪೂರ್ಣಗೊಳಿಸಿದ್ದು ಇವರ ಹೆಗ್ಗಳಿಕೆ.
  • ಯಶವಂತರಾಯಗೌಡ ಪಾಟೀಲರು 2018ರಲ್ಲಿ ಜೆಡಿಎಸ್-ಕಾಂಗ್ರೆಸನ ಹೆಚ್.ಡಿ.ಕುಮಾರಸ್ವಾಮಿ ಸಮ್ಮಿಸ್ರ ಸರಕಾರದ ಸಂಪುಟದಲ್ಲಿ ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ಅಧ್ಯಕ್ಷರಾಗಿದ್ದರು.
  • ಯಶವಂತರಾಯಗೌಡ ಪಾಟೀಲರು 2013, 2018 ಹಾಗೂ 2023 ರಲ್ಲಿ ಕಾಂಗ್ರೆಸ್ನಿಂದ 3 ಬಾರಿ ಶಾಸಕರಾಗಿ ಹ್ಯಾಟ್ರಿಕ್‌ ವಿಜಯಭೇರಿ ದಾಖಲಿಸಿದ್ದಾರೆ.
  • ಇಂಡಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ ಯಾವುದೇ ನಾಯಕರು ಇದೂವರೆಗೆ ಸಚಿವ ಸ್ಥಾನವನ್ನು ಅಲಂಕರಿಸಿಲ್ಲ.

ಜನಪ್ರತಿನಿಧಿಗಳ ವಿವರ

[ಬದಲಾಯಿಸಿ]
ವರ್ಷ ವಿಧಾನ ಸಭಾ ಕ್ಷೆತ್ರ ವಿಜೇತರು ಪಕ್ಷ ಮತಗಳು ಉಪಾಂತ ವಿಜೇತರು ಪಕ್ಷ ಮತಗಳು
ಇಂಡಿ ವಿಧಾನಸಭಾ ಕ್ಷೇತ್ರ ಕರ್ನಾಟಕ ರಾಜ್ಯ
2023 ಇಂಡಿ ವಿಧಾನಸಭಾ ಕ್ಷೇತ್ರ ಯಶವಂತರಾಯಗೌಡ ಪಾಟೀಲ INC 71785 ಬಿ.ಡಿ.ಪಾಟೀಲ(ಹಂಜಗಿ) JDS 61456
2018 ಇಂಡಿ ವಿಧಾನಸಭಾ ಕ್ಷೇತ್ರ ಯಶವಂತರಾಯಗೌಡ ಪಾಟೀಲ INC 50401 ಬಿ.ಡಿ.ಪಾಟೀಲ(ಹಂಜಗಿ) JDS 40463
2013 ಇಂಡಿ ವಿಧಾನಸಭಾ ಕ್ಷೇತ್ರ ಯಶವಂತರಾಯಗೌಡ ಪಾಟೀಲ INC 58562 ರವಿಕಾಂತ ಪಾಟೀಲ KJP 25260
2008 ಇಂಡಿ ವಿಧಾನಸಭಾ ಕ್ಷೇತ್ರ ಡಾ.ಸರ್ವಭೌಮ ಬಗಲಿ BJP 29456 ಯಶವಂತರಾಯಗೌಡ ಪಾಟೀಲ INC 28885
2004 ಇಂಡಿ ವಿಧಾನಸಭಾ ಕ್ಷೇತ್ರ ರವಿಕಾಂತ ಪಾಟೀಲ IND 42984 ಬಿ.ಜಿ.ಪಾಟೀಲ(ಹಲಸಂಗಿ) INC 33652
1999 ಇಂಡಿ ವಿಧಾನಸಭಾ ಕ್ಷೇತ್ರ ರವಿಕಾಂತ ಪಾಟೀಲ IND 44523 ಬಿ.ಆರ್.ಪಾಟೀಲ(ಅಂಜುಟಗಿ) INC 25203
1994 ಇಂಡಿ ವಿಧಾನಸಭಾ ಕ್ಷೇತ್ರ ರವಿಕಾಂತ ಪಾಟೀಲ IND 23200 ಬಿ.ಜಿ.ಪಾಟೀಲ(ಹಲಸಂಗಿ) JDS 19469
1989 ಇಂಡಿ ವಿಧಾನಸಭಾ ಕ್ಷೇತ್ರ ಆರ್.ಆರ್. ಕಲ್ಲೂರ INC 27154 ಬಿ.ಜಿ.ಪಾಟೀಲ(ಹಲಸಂಗಿ) JDS 18438
1985 ಇಂಡಿ ವಿಧಾನಸಭಾ ಕ್ಷೇತ್ರ ಎನ್.ಎಸ್.ಖೇಡ JNP 30349 ಭೀಮನಗೌಡ ಪಾಟೀಲ INC 23541
1983 ಇಂಡಿ ವಿಧಾನಸಭಾ ಕ್ಷೇತ್ರ ಆರ್.ಆರ್. ಕಲ್ಲೂರ INC 24132 ಬಸನಗೌಡ ಪಾಟೀಲ IND 11098
1978 ಇಂಡಿ ವಿಧಾನಸಭಾ ಕ್ಷೇತ್ರ ಆರ್.ಆರ್. ಕಲ್ಲೂರ JNP 26022 ಸಿದ್ದೂಬಾ ಮಿಸಾಳೆ INC 15856
ಇಂಡಿ ವಿಧಾನಸಭಾ ಕ್ಷೇತ್ರ ಮೈಸೂರು ರಾಜ್ಯ
1972 ಇಂಡಿ ವಿಧಾನಸಭಾ ಕ್ಷೇತ್ರ ಮಲ್ಲಪ್ಪ ಕರಬಸಪ್ಪ ಸುರಪುರ INC 17517 ಆರ್.ಆರ್. ಕಲ್ಲೂರ INC(O) 14490
1967 ಇಂಡಿ ವಿಧಾನಸಭಾ ಕ್ಷೇತ್ರ ಮಲ್ಲಪ್ಪ ಕರಬಸಪ್ಪ ಸುರಪುರ SWA 15769 ಆರ್.ಆರ್. ಕಲ್ಲೂರ INC 11703
1962 ಇಂಡಿ ವಿಧಾನಸಭಾ ಕ್ಷೇತ್ರ ಗುರುಲಿಂಗಪ್ಪ ದೇವಪ್ಪ ಪಾಟೀಲ SWA 14624 ಮಲ್ಲಪ್ಪ ಕರಬಸಪ್ಪ ಸುರಪುರ INC 13673
1957 ಇಂಡಿ ವಿಧಾನಸಭಾ ಕ್ಷೇತ್ರ-2 ಮಲ್ಲಪ್ಪ ಕರಬಸಪ್ಪ ಸುರಪುರ INC 23033 ಯಶವಂತರಾವ್ ಪಾಟೀಲ SFC 6586
ಇಂಡಿ-ಸಿಂದಗಿ ವಿಧಾನಸಭಾ ಕ್ಷೇತ್ರ ಬಾಂಬೆ ರಾಜ್ಯ
1951 ಇಂಡಿ-ಸಿಂದಗಿ ವಿಧಾನಸಭಾ ಕ್ಷೇತ್ರ-2 ಮಲ್ಲಪ್ಪ ಕರಬಸಪ್ಪ ಸುರಪುರ INC 30322 ರಾವಪ್ಪ ಕಾಳೆ SWA 4536