ಆರ್.ಆರ್. ಕಲ್ಲೂರ

ವಿಕಿಪೀಡಿಯ ಇಂದ
Jump to navigation Jump to search

ವಿಜಯಪುರ ಜಿಲ್ಲೆಇಂಡಿ ವಿಧಾನಸಭಾ ಕ್ಷೇತ್ರದಿಂದ 1978ರಲ್ಲಿ ಜನತಾ ಪಕ್ಷದಿಂದ ಆರ್.ಆರ್.ಕಲ್ಲೂರ(ರೇವಣಸಿದ್ದಪ್ಪ ರಾಮಗೊಂಡಪ್ಪ ಕಲ್ಲೂರ) ಅವರು ಆಯ್ಕೆಯಾಗಿ ಪ್ರಪ್ರಥಮ ಬಾರಿಗೆ ವಿಧಾನಸೌಧ ಪ್ರವೇಶಿಸಿದರು. ನಂತರ ಕಾಂಗ್ರೆಸ್‌ನಿಂದ 1983 ಹಾಗೂ 1989ರಲ್ಲಿ ಪುನರಾಯ್ಕೆಯಾಗಿದ್ದರು.[೧]

ಪಂಪ್‌ಸೆಟ್ ಕಲ್ಲೂರ[ಬದಲಾಯಿಸಿ]

ಆರ್.ಗುಂಡುರಾವರವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಬಿಲ್ ವಿನಾಯ್ತಿ ಮಾಡಿದ್ದರಿಂದಾಗಿ ಜನರಿಂದ ಹಣ ಸಂಗ್ರಹಿಸಿ 9 ಕೆ.ಜಿ. ತೂಕದ ಬೆಳ್ಳಿ ಪಂಪ್‌ಸೆಟ್‌ನ್ನು ಕಾಣಿಕೆ ನೀಡಿ ಸತ್ಕರಿಸಿದ್ದರು. ಈ ಕಾರಣಕ್ಕಾಗಿ ಇಂದಿಗೂ ಕಲ್ಲೂರ ಅವರಿಗೆ ಪಂಪ್‌ಸೆಟ್ ಕಲ್ಲೂರ ಎಂದೇ ಕರೆಯುತ್ತಾರೆ.[೨]

ಸಭಾಧ್ಯಕ್ಷರ ಕನ್ನಡ ಹೆಸರು[ಬದಲಾಯಿಸಿ]

ಎಸ್.ಎಂ.ಕೃಷ್ಣ ವಿಧಾನ ಸಭಾಧ್ಯಕ್ಷ ಆಗಿದ್ದ ಸಂದರ್ಭದಲ್ಲಿ ಸಭಾಧ್ಯಕ್ಷ ಕಚೇರಿ ಬಲಬದಿಗೆ ಇಂಗ್ಲಿಷ್‌ನಲ್ಲಿ ಮಾತ್ರ ಅವರ ಹೆಸರು ಬರೆಯಲಾಗಿತ್ತು. ಕನ್ನಡದಲ್ಲೂ ಸಭಾಧ್ಯಕ್ಷರ ಹೆಸರು ಬರೆಯಬೇಕೆಂದು ಕಲ್ಲೂರ ಅವರು ಪ್ರತಿಭಟನೆ ಮಾಡಿದ್ದರು. ಅದರ ಫಲವಾಗಿ ಎಡಬದಿ ಗೋಡೆಯಲ್ಲಿ ಸಭಾಧ್ಯಕ್ಷರ ಹೆಸರು ಕನ್ನಡದಲ್ಲಿ ಇಂದಿಗೂ ರಾರಾಜಿಸುತ್ತಿದೆ.

ಜನ ಸೇವಕ[ಬದಲಾಯಿಸಿ]

ಕಲ್ಲೂರರವರ ಸೇವೆ ಮತ್ತು ವ್ಯಕ್ತಿತ್ವ ಕುರಿತು ಅಭಿನಂದನಾ ಗ್ರಂಥ ಜನ ಸೇವಕ ಬಿಡುಗಡೆಯಾಗಿದೆ.[೩]

ಭೂಸೇನಾ ನಿಗಮದ ಅಧ್ಯಕ್ಷ[ಬದಲಾಯಿಸಿ]

1978ರಲ್ಲಿ ಜನತಾ ಪಕ್ಷದಿಂದ ಒಂದು ಬಾರಿ ಹಾಗೂ 1983 ಮತ್ತು 1989ರಲ್ಲಿ ಕಾಂಗ್ರೆಸ್ನಿಂದ ಎರಡು ಬಾರಿ ಶಾಸಕರಾದ ಆರ್.ಆರ್.ಕಲ್ಲೂರರವರು ಭೂಸೇನಾ ನಿಗಮದ ಅಧ್ಯಕ್ಷರಾಗಿದ್ದರು.

ರಾಜಕೀಯ[ಬದಲಾಯಿಸಿ]

  • 1978 ರಲ್ಲಿ ಜನತಾ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿದ್ದರು.
  • 1983, 1989ರಲ್ಲಿ ಆರ್.ಆರ್. ಕಲ್ಲೂರ ಶಾಸಕರಾದ ಆಗಿನ ಮುಖ್ಯಮಂತ್ರಿ ಗುಂಡೂರಾವ್‌ಗೆ 9 ಕೆ.ಜಿ. ತೂಕದ ಬೆಳ್ಳಿ ಪಂಪ್‌ಸೆಟ್‌ ನೀಡಿದ ಹೆಗ್ಗಳಿಕೆ ಇವರದ್ದು.
  • ಕಾಂಗ್ರೆಸ್ನಿಂದ ೨ ಬಾರಿ ಶಾಸಕರಾದ ಆರ್.ಆರ್.ಕಲ್ಲೂರರವರು 1989ರಲ್ಲಿ ಭೂಸೇನಾ ನಿಗಮ(ಪ್ರಸ್ತುತ ಹೆಸರು : ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ)ದ ಅಧ್ಯಕ್ಷರಾಗಿದ್ದರು.

ಉಲ್ಲೇಖಗಳು[ಬದಲಾಯಿಸಿ]