ಮಾಲೂರು
ಮಾಲೂರು
ಮಾಲೂರು | |
---|---|
city | |
Population (2001) | |
• Total | ೩೮,೬೮೪ |
ಮಾಲೂರು ಕರ್ನಾಟಕ ರಾಜ್ಯದ, ಕೋಲಾರ ಜಿಲ್ಲೆಯ ತಾಲ್ಲೂಕು ಮತ್ತು ಅದರ ಆಡಳಿತ ಕೇಂದ್ರ.
ಕೋಲಾರ ಜಿಲ್ಲೆಗೆ ಸೇರಿದ ಮಾಲೂರು ತಾಲ್ಲೂಕು ಕೇಂದ್ರ. ಇದರ ಸುತ್ತಮುತ್ತ ನೂರಾರು ಇಟ್ಟಿಗೆ ಹಾಗು ಹೆಂಚಿನ ಕಾರ್ಖಾನೆಗಳು ನೆಲೆಗೊಂಡಿವೆ. ಇಲ್ಲಿ ದೊರೆಯುವ ವಿಶೇಷ ಜೇಡಿ ಮಣ್ಣು ಹಾಗೂ ನೀಲಗಿರಿ ಉರುವಲುಗಳಿಂದಾಗಿ ಇಲ್ಲಿನ ಹೆಂಚು ಮತ್ತು ಇಟ್ಟಿಗೆ ಕಾರ್ಖಾನೆಗಳು ಪ್ರಸಿದ್ಧವಾಗಿವೆ. ಇಲ್ಲಿ ತಯಾರಾಗುವ ಹೆಂಚುಗಳಿಗೆ ರಾಜ್ಯ ಅಲ್ಲದೇ ತಮಿಳುನಾಡು ಆಂಧ್ರ ಪ್ರದೇಶದಿಂದ ಬೇಡಿಕೆ ಇದೆ. ಈ ಪ್ರದೇಶವು ತರಕಾರಿ ಮತ್ತು ಹೂಗಳಿಗೆ ಮನೆಮಾತಾಗಿದೆ. ಬಿಹಾರ, ಒರಿಸ್ಸ, ಆಂಧ್ರ ಮತ್ತು ತಮಿಳುನಾಡಿನ ಅನೇಕ ಕಾರ್ಮಿಕರಿಗೆ ಇಟ್ಟಿಗೆ ಕಾರ್ಖಾನೆಗಳು ಆಶ್ರಯ ತಾಣವಾಗಿವೆ. ಮಾಲೂರು ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರವಾಗಿದೆ. ಮಾಲೂರು ಸೊಣ್ಣಪ್ಪ ಹರಿಕಥಾ ವಿದ್ವಾಂಸರಾಗಿದ್ದು, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಹಾಸ್ಯ ಸಾಹಿತಿಗಳಾದ ಎಂ.ಎಸ್ ನರಸಿಂಹಮೂರ್ತಿ, ಸಿ.ಎಂ.ಗೋವಿಂದರೆಡ್ಡಿ, ಆರ್ ವಿಜಯರಾಘವನ್, ಸ.ರಘುನಾಥ ಮತ್ತು ಡಾ.ಕೆ.ವೈ.ನಾರಾಯಣಸ್ವಾಮಿ ಮುಂತಾದವರು ರಾಜ್ಯ ಮಟ್ಟದ ಲೇಖಕರಾಗಿ ಗುರುತಿಸಿಕೊಂಡಿದ್ದಾರೆ.
ಮಾಲೂರು ಕಸಬಾ ಹೋಬಳಿಗೆ ಸೇರಿದ ಈ ಗ್ರಾಮ ಶಿಲ್ಪ ಕಲೆಗೆ ಹೆಸರಾಗಿದೆ. ಇಲ್ಲಿನ ವಿಶ್ವಕರ್ಮ ಜನಾಂಗವು ಅನಾದಿ ಕಾಲದಿಂದ ಶಿಲೆ ಮತ್ತು ಲೋಹದಲ್ಲಿ ಶಿಲ್ಪಗಳನ್ನು ಶಿಲ್ಪ ಶಾಸ್ರ್ತಾನುಸಾರವಾಗಿ ಸುಂದರವಾಗಿ ವಿವಿಧ ಅಳತೆಗಳಲ್ಲಿ ಕೆತ್ತುತ್ತಾರೆ. ಇಲ್ಲಿನ ಶಿಲ್ಪ ಕಲಾಕೃತಿಗಳಿಗೆ ಹೊರರಾಜ್ಯಗಳಿಂದ, ದೇಶ-ವಿದೇಶಗಳಿಂದ ಬೇಡಿಕೆ ಇದೆ. ಇಲ್ಲಿನ ಶಿಲ್ಪಿಗಳಿಗೆ ಹಲವಾರು ರಾಜ್ಯ ಪ್ರಶಸ್ತಿಗಳು ಸಂದಿವೆ. ಶಿವಾರಪಟ್ಟಣದ ಶಿಲ್ಪಕಲೆ ವಿಜಯನಗರ ಶಿಲ್ಪಕಲೆಯ ಅನುಕರಣೆ ಆಗಿದೆ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ರವರು ಹುಂಗೇನಹಳ್ಳಿಯಲ್ಲಿ ವಾಸವಿದ್ದು ಶಿವಾರಪಟ್ಟಣದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪಡೆದರು.ಮಾಲೂರು ತಾಲೂಕಿನಲ್ಲಿ ನಾಲ್ಕು ಹೋಬಳಿಗಳಿವೆ.1.ಕಸಬಾ ಹೋಬಳಿ, 2.ಟೇಕಲ್. 3.ಲಕ್ಕೂರು. 4.ಮಾಸ್ತಿ.
ಮಾಲೂರು ತಾಲ್ಲೂಕಿನ ಪ್ರೇಕ್ಷಣೀಯ ಸ್ಥಳಗಳು
[ಬದಲಾಯಿಸಿ]- ಟೇಕಲ್ ಶಿಲಾವನ :
ತಾಲ್ಲೂಕು ಕೇಂದ್ರದಿಂದ : ೧೮ ಕಿ.ಮೀ ಜಿಲ್ಲಾ ಕೇಂದ್ರದಿಂದ : ೨೦ ಕಿ.ಮೀ
ಮಾಲೂರು ತಾಲೂಕ್ಲಿ ನ ಹೋಬಳಿ ಕೇಂದ್ರ ಟೇಕಲ್. ಸುತ್ತಲೂ ಕಲ್ಲು ಬೆಟ್ಟಗಳಿಂದ ಕೂಡಿದೆ. ಟೇಕಲ್ ಬೆಟ್ಟದಲ್ಲಿ ಭೀಮನ ಗರಡಿ ಇತ್ತೆಂದು ಪ್ರತೀತಿ. ಟೇಕಲ್ನ ಪೂರ್ವಕ್ಕೆ ಬೆಟ್ಟದ ಸಾಲಿದ್ದು, ಒಂದು ಬೆಟ್ಟದಲ್ಲಿ ಗುಹೆ ಇದೆ. ಅದರ ಅಳತೆ ೧೫೦x೭೦x೫೦ ಅಡಿಗಳು. ಪದರಗಳಿಂದ ಕೂಡಿದ ಮೃದು ಮಣ್ಣು ಇಲ್ಲಿದೆ. ಆ ಮಣ್ಣು ಭತ್ತದ ಹೊಟ್ಟಿನ ಹಾಗೆ ಇರುತ್ತದೆ. ಒಂದು ಮೂಲೆಯಲ್ಲಿ ತಿಳಿಯಾದ ನೀರು ಕೂಡ ಇದೆ. ಅದೇ ಭೀಮನ ಗರಡಿ. ಈ ಬೆಟ್ಟದ ಸಾಲುಗಳಲ್ಲಿ ನವಿಲುಗಳು ಮತ್ತು ಚಿರತೆಗಳು ಇವೆ. ಟೇಕಲ್ನಿಂದ ಉತ್ತರಕ್ಕೆ ಭೂತಮ್ಮನ ಗುಡ್ಡ ಇದೆ. ಹಿಂದೆ ಅರಸರು ಹಣ ಬಚ್ಚಿಡುತ್ತಿದ್ದರೆಂದು ಹೇಳಲಾಗಿದೆ. ಇದನ್ನು ರೊಕ್ಕಗವಿಯೆಂದು ಕರೆಯಲಾಗುತ್ತದೆ. ಹಿಂದೆ ಇಲ್ಲಿ ೧೦೧ ದೇವಸ್ಥಾನಗಳು ೧೦೧ ಹೊಂಡಗಳು ಇತ್ತೆಂದು ಪ್ರತೀತಿ ಇದೆ.
ಮಾಸ್ತಿ : ತಾಲ್ಲೂಕು ಕೇಂದ್ರದಿಂದ : ೨೨ ಕಿ.ಮೀ ಜಿಲ್ಲಾ ಕೇಂದ್ರದಿಂದ : ೪೮ ಕಿ.ಮೀ
ವೀರಕಪುತ್ರ ಗ್ರಾಮ : ಇದು ಮಾಲೂರಿನಿಂದ 23 ಕಿಮೀ ದೂರದಲ್ಲಿದೆ. ವೀರಕಪುತ್ರ ಎಂ.ಶ್ರೀನಿವಾಸ ಇಲ್ಲಿನವರು.
- Pages with script errors
- Articles with short description
- Short description is different from Wikidata
- Pages using infobox settlement with infobox mapframe errors
- Pages using infobox settlement with unknown parameters
- Pages using infobox settlement with missing country
- Pages using infobox settlement with no map
- Pages using infobox settlement with no coordinates
- ಕೋಲಾರ ಜಿಲ್ಲೆಯ ತಾಲೂಕುಗಳು