ವಿಷಯಕ್ಕೆ ಹೋಗು

ಗೌರಿಬಿದನೂರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗೌರಿಬಿದನೂರು

ಗೌರಿಬಿದನೂರು
ರಾಜ್ಯ
 - ಜಿಲ್ಲೆ
ಕರ್ನಾಟಕ
 - ಚಿಕ್ಕಬಳ್ಳಾಪುರ
ನಿರ್ದೇಶಾಂಕಗಳು 13.43° N 77.72° E
ವಿಸ್ತಾರ
 - ಎತ್ತರ
 km²
 - ೬೯೪ ಮೀ.
ಸಮಯ ವಲಯ IST (UTC+5:30)
ಜನಸಂಖ್ಯೆ (೨೦೦೧)
 - ಸಾಂದ್ರತೆ
೩೦೫೩೦
 - /ಚದರ ಕಿ.ಮಿ.
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - ೫೬೧೨೦೮
 - +೦೮೧೫೫
 - ಕೆಎ ೪೦

ಗೌರಿಬಿದನೂರು ಒಂದು ತಾಲ್ಲೂಕು ಕೇಂದ್ರವಾಗಿದೆ. ಇದು ಚಿಕ್ಕಬಳ್ಳಾಪುರ ಜಿಲ್ಲೆ ಕರ್ನಾಟಕ ರಾಜ್ಯದಲ್ಲಿದೆ. ಇದು ಬೆಂಗಳೂರಿನಿಂದ ಸುಮಾರು ೭೫ km ದೂರದಲ್ಲಿ ಹಾಗು ಸರ್ ಎಂ ವಿಶ್ವೇಶ್ವರಯ್ಯ ಅವರ ಜನ್ಮ ಸ್ಥಳವಾದ ಮುದ್ದೇನಹಳ್ಳಿಯಿಂದ ೨೫ km ದೂರದಲ್ಲಿದೆ. ಆಂದ್ರಪ್ರದೇಶದ ಗಡಿಯಲ್ಲಿರುವುದರಿಂದ ಕನ್ನಡದ ಜೊತೆಯಲ್ಲಿ ತೆಲುಗೂ ಕೂಡ ಹೆಚ್ಚಿನ ಬಳಕೆಯಲ್ಲಿದೆ. ಟಿಪ್ಪುವಿನ ಕಾಲದಲ್ಲಿ ಅವನ ಕೆಲವು ಯೋಧರ ಘೋರಿಗಳನ್ನು ಇಲ್ಲಿ ಕಟ್ಟಲಾಗಿದುದರಿಂದ, ಇದಕ್ಕೆ ಗೌರಿಬಿದನೂರು ಎಂಬ ಹೆಸರು ಬರಲು ಕಾರಣವಾಯಿತೆಂದು ಹೇಳುತ್ತಾರೆ. ಜೊತೆಗೆ ಇಲ್ಲಿ ಹಿಂದೂ ದೇವತೆಯಾದಿ ಗೌರಿಯ ದೇವಾಲಯವಿದ್ದುದರಿಂದಲೂ ಈ ಹೆಸರು ಬಂತೆಂದು ಹೇಳುತ್ತಾರೆ.

ಡಾ. ಹೆಚ್ ನರಸಿಂಹಯ್ಯರವರ ಹುಟ್ಟೂರಾದ ಹೊಸೂರು ಇದೇ ತಾಲ್ಲೂಕಿನಲ್ಲಿದೆ. ಸ್ವತಿಗ್ರಾಮ ಯೋಜನೆಯಡಿ ಪ್ರಥಮಬಾರಿಗೆ ಕರ್ನಾಟಕ ರಾಜ್ಯ ಸರ್ಕಾರವು ಮೂಲ ಸೌಲಭ್ಯಗಳನ್ನೂ ಹೊಸೂರಿಗೆ ಒದಗಿಸಿತು.

ಮುಂಚೆ ಕಬ್ಬು ಮತ್ತು ಭತ್ತ ಇಲ್ಲಿನ ಮುಖ್ಯ ಬೆಳೆಗಳಾಗಿದ್ದವು. ಇತ್ತೀಚಿನ ದಿನಗಳಲ್ಲಿ, ಮಳೆ ಹಾಗು ಅಂತರ್ಜಲ ಕಡಿಮೆಯಾಗುತ್ತಿರುವುದರಿಂದ ರೇಷ್ಮೆ, ನೆಲಗಡಲೆ, ಜೋಳ ಮತ್ತು ಸೂರ್ಯಕಾಂತಿಯನ್ನು ಪ್ರಮುಕವಾಗಿ ಬೆಳೆಯಲಾಗುತ್ತಿದೆ. ಇಲ್ಲಿನ ಮುಖ್ಯ ನದಿಯಾದ ಉತ್ತರ ಪಿನಾಕಿನಿ ಮಳೆಗಾಳದಲ್ಲಷ್ಟೇ ಹರಿಯುತ್ತದೆ.

""ಕರ್ನಾಟಕದ ಜಲಿಯನ್‌ವಾಲಾ‍ಭಾಗ್"" ಎಂದು ಪ್ರಸಿದ್ಧವಾಗಿರುವ ವಿದುರಾಶ್ವಥ, ನಗರದಿಂದ ಸುಮಾರು ೬ ಕಿಮೀ ದೂರದಲ್ಲಿದೆ. ಇದು ಬೆಂಗಳೂರು-ಹೈದರಾಬಾದ್ ರೈಲು ಮಾರ್ಗದಲ್ಲಿ ಸಿಗುವ ಕರ್ನಾಟಕದ ಕೊನೆಯ ನಿಲ್ದಾಣ. ಇಲ್ಲಿನ ಭೂಗೋಳ ಹಾಗು ನೆಲ ಸಂಪನ್ಮೂಲದ ಅನುಕೂಲತೆಯಿಂದ BARC ಹಾಗು TIFR ತಮ್ಮ ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಿವೆ.

ಗ್ರಾಮಗಳು

[ಬದಲಾಯಿಸಿ]

ಗೌರಿಬಿದನೂರು ತಾಲ್ಲೂಕಿನಲ್ಲಿರುವ ಗ್ರಾಮಗಳ ಪಟ್ಟಿ:

 • ಅಲಕಾಪುರ
 • ಪೋತೇನಹಳ್ಳಿ
 • ನಂದಿಗಾನಹಳ್ಳಿ
 • ರಾಯರೇಖಲಹಳ್ಳಿ
 • ಚಿಕ್ಕಹನುಮೇನಹಳ್ಳಿ
 • ಹುಸೇನಪುರ
 • ದೊಡ್ಡಹನುಮೇನಹಳ್ಳಿ
 • ಬರ್ಜಾನುಕುಂಟೆ
 • ಬಜ್ಜೇರಂಗನಹಳ್ಳಿ
 • ಅಲ್ಲೀಪುರ
 • ಪುಲಗಾನಹಳ್ಳಿ
 • ಮರಾಠಿಪಾಳ್ಯ
 • ಬಿ ಬೊಮ್ಮಸಂದ್ರ
 • ಬಳೆಹೊಸಪೇಟೆ
 • ಚೀಲಂನಹಳ್ಳಿ
 • ಚಿಂಚನಹಳ್ಳಿ
 • ಜೋಗಿರೆಡ್ಡಿಹಳ್ಳಿ
 • ಕೆರೆಕೆಲಗಿನಹಳ್ಳಿ
 • ಮಿದ್ದಿಲು
 • ಸಿದ್ದೆನಹಳ್ಳಿ
 • ವೆಂಕಟಾಪುರ
 • ಯರ್ರನಾಗೇನಹಳ್ಳಿ
 • ಉಚ್ಚೋದನಹಳ್ಳಿ
 • ಕೋನಾಪುರ
 • ಗೌಡಸಂದ್ರ
 • ನಶಕುಂಟಹಳ್ಳಿ
 • ಬಾದಿಮರಳೂರು
 • ಬೈಚಾಪುರ
 • ಡಿಪಾಳ್ಯ
 • ಅಣಗಟ್ಟನಹಳ್ಳಿ
 • ಗುಲಗಿಂಜಲಹಳ್ಳಿ
 • ಗೊಲ್ಲರ ಕಾಲೋನಿ
 • ಚಿಕ್ಕ ವದ್ದೇನಹಳ್ಳಿ
 • ಡಿ.ಪಾಳ್ಯ
 • ದಾಸರೇನಹಳ್ಳಿ
 • ಪುಲಮಾಕಲಹಳ್ಳಿ
 • ಬಚ್ಚರೆಡ್ಡಿಹಳ್ಳಿ
 • ವದ್ದೇನಹಳ್ಳಿ
 • ಜಿ.ಬೊಮ್ಮ
 • ಕುಂಟಚಿಕ್ಕನಹಳ್ಳಿ
 • ಜಿ.ಬೊಮ್ಮಸಂದ್ರ
 • ಮಲ್ಲಸಂದ್ರ
 • ಗೌಡಗೆರೆ
 • ಗಿಡಗಾನಹಳ್ಳಿ
 • ಹಳೇಹಳ್ಳಿ
 • ಚಿಲೇನಹಳ್ಳಿ
 • ನಾಗರಬಾವಿ
 • ಹೊಸೂರು
 • ಇಡಗೂರು
 • ಜಕ್ಕೇನಹಳ್ಳಿ
 • ಬಳಗೆರೆ
 • ಭೀಮನಹಳ್ಳಿ
 • ಶಂಭುಕನಗರ
 • ಕಾದಲವೇಣಿ
 • ಉಡುಮಲೋಡು
 • ಗುಂಡಾಪುರ
 • ಮರಳೂರು
 • ವೈಚಕೂರಹಳ್ಳಿ
 • ಕುರೂಡಿ
 • ಮೇಳ್ಯಾ
 • ಮುದುಗೆರೆ
 • ಕೆ.ಟಿ.ಹಳ್ಳಿ
 • ನಗರಗೆರೆ
 • ಕಂತಾರ್ಲಹಳ್ಳಿ
 • ಕೋಟಪ್ಪನಹಳ್ಳಿ
 • ನಂಜೇಗಾರ್ಲಹಳ್ಳಿ
 • ನಗರಗೆರೆ
 • ನರಸಿಂಹರೆಡ್ಡಿಹಳ್ಳಿ
 • ಪಾಯನಹಳ್ಳಿ
 • ಬಂದಾರ್ಲಹಳ್ಳಿ
 • ಮಟ್ಟಾವಲಹಳ್ಳಿ
 • ಮಲ್ಲೇನಹಳ್ಳಿ
 • ನಾಮಗೊಂಡ್ಲು
 • ಕಡಬೂರು
 • ಗುಂಡ್ಲಹಳ್ಳಿ
 • ಗುಟ್ಟೆನಹಳ್ಳಿ
 • ಜೆಕ್ಕೆನಹಳ್ಳಿ
 • ಬುಡಿಗೇನಹಳ್ಳಿ
 • ಸಾರಗೊಂಡ್ಲು
 • ರಮಾಪುರ
 • ಕುಂದಿಹಳ್ಳಿ
 • ಕುದುರೆಬ್ಯಾಲ್ಯ
 • ರಮಾಪುರ
 • ಹಂಪಸಂದ್ರ
 • ಸೊನಗಾನಹಳ್ಳಿ
 • ಗುರುಪನಹಳ್ಳಿ
 • ಯರ್ರಪೊತೇನಹಳ್ಳಿ
 • ರಂಗಪ್ಪನಹಳ್ಳಿ
 • ಸೊನಗಾನಹಳ್ಳಿ
 • ಹಕ್ಕಿಪಿಕ್ಕಿ ಕಾಲೋನಿ
 • ಹುಣಸೇಕುಂಟೆ
 • ಹೊಸಕೋಟೆ
 • ತೊಂಡೇಬಾವಿ
 • ಚಿಕ್ಕಮಲ್ಲೇಕೆರೆ
 • ದೊಡ್ಡಮಲ್ಲೆಕೆರೆ
 • ಇಂದಿರಾನಗರ
 • ಗುಂಡೇನಹಳ್ಳಿ
 • ಯರಗುಂಟೆ
 • ಗುಂತಮಡುಗು
 • ಬೇವಿನಹಳ್ಳಿ
 • ಕಾಮಗನಹಳ್ಳಿ
 • ಕಂಬಾಲಹಳ್ಳಿ
 • ಬಸವನಹಳ್ಳಿ
 • ಶೀಗಲಹಳ್ಳಿ
 • ಮುತ್ತಗದಹಳ್ಳಿ
 • ಕುರಬರಹಳ್ಳಿ
 • ಹುದುಗೂರು