ವಿಷಯಕ್ಕೆ ಹೋಗು

ಯಲಬುರ್ಗಾ

Coordinates: 15°36′50″N 76°00′44″E / 15.613794°N 76.012359°E / 15.613794; 76.012359
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಯಲಬುರ್ಗಾ
Yalaburga
Town
ಯಲಬುರ್ಗಾ is located in Karnataka
ಯಲಬುರ್ಗಾ
ಯಲಬುರ್ಗಾ
ಕರ್ನಾಟಕ, ಭಾರತದಲ್ಲಿರುವ ಸ್ಥಳ
Coordinates: 15°36′50″N 76°00′44″E / 15.613794°N 76.012359°E / 15.613794; 76.012359
ದೇಶ ಭಾರತ
ರಾಜ್ಯಕರ್ನಾಟಕ
ಜಿಲ್ಲೆಕೊಪ್ಪಳ
Government
 • BodyTown Panchayath
Area
 • Town೭ km (೩ sq mi)
 • Rural
೧,೪೮೯ km (೫೭೫ sq mi)
Elevation
೬೨೦ m (೨,೦೩೦ ft)
Population
 (2011)
 • Town೧೪,೮೧೪ []
 • Rural
೨,೫೨,೬೨೮
ಭಾಷೆಗಳು
 • ಅಧಿಕೃತಕನ್ನಡ
Time zoneUTC+5:30 (IST)
PIN
583236
Telephone code08534
Vehicle registrationKA-37
Websitewww.yelburgatown.gov.in

ಯಲಬುರ್ಗಾ ತಾಲೂಕಿನಲ್ಲಿ ಒಟ್ಟು ೧೪೪ ಹಳ್ಳಿಗಳು ಇರುತ್ತವೆ.ಇದರಲ್ಲಿ ೫ ಗ್ರಾಮಗಳು ಬೇಚಿರಾಗ ಅಂದರೆ ಜನವಸತಿ ರಹಿತ ಮತ್ತು ೧೩೯ ಜನವಸತಿ ಗ್ರಾಮಗಳಾಗಿರುತ್ತವೆ. ಯಲಬುರ್ಗಾ,ಕುಕನೂರು,ಹಿರೇವಂಕಲಕುಂಟಾ, ಮಂಗಳೂರು ಒಟ್ಟು ೪ ಹೋಬಳಿಗಳು ಇವೆ. ಈ ತಾಲೂಕು ೩೩ ಗ್ರಾಮ ಪಂಚಾಯತಿಗಳನ್ನು ಹೊಂದಿದೆ.ವ್ಯವಸಾಯವು ಬಹುತೇಕ ಮಳೆ ಆದಾರಿತವಾಗಿದೆ.

[ಬದಲಾಯಿಸಿ]

ಹುಣಸಿಹಾಳ

ಈ ಗ್ರಾಮವು ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕು ಹಿರೇವಂಕಲಕುಂಟ ಹೋಬಳಿಯಲ್ಲಿ ಗ್ರಾಮವಾಗಿದ್ದು ರಾಜಕೀಯವಾಗಿ ಶೈಕ್ಷಣಿಕವಾಗಿ ಚೆನ್ನಾಗಿ ಸಾಧನೆ ಮಾಡಿದ್ದು .ಈ ಊರಿಗೆ ಹುಣಸಿಹಾಳ ಎಂಬ ಹೆಸರು ಬರಲು ಕಾರಣ ಹಲವು ಪುರಾವೆಗಳಿವೆ ಅವುಗಳೆಂದರೆ ಈ ಗ್ರಾಮದಲ್ಲಿ ಅತಿ ಹೆಚ್ಚು ಹುಣಸೆ ಮರವನ್ನ ಕಾಣುತ್ತಿದ್ದೆವು ಆದರೆ ಒಂದು ದಿನ ಆ ಎಲ್ಲಾ ಹುಣಸೆಮರವನ್ನ ನಾಶ ಮಾಡಲಾಗಿತ್ತು ಹಾಗಾಗಿ ಈ ಗ್ರಾಮವನ್ನು ಹುಣಸಿಹಾಳ ಎಂದು ಕರೆಯಲಾಗಿದೆ. ರಾಜಕೀಯವಾಗಿ ಸಾಧನೆ ಮಾಡಿದೆ. ಈ ಊರಿಗೆ ಸುತ್ತಮುತ್ತಲಿನ ಹಳ್ಳಿಗಳೆಂದರೆ ಗುನ್ನಾಳ,ಹಿರೇವಂಕಲ ಕುಂಟ, ಉಚ್ಚಲಕುಂಟ, ಮುರಡಿ, ತರಲುಕಟ್ಹಿ, ಬೇವೂರ್ ಕೋಳಿಹಾಳ ಸೀಮೆಯನ್ನು ಹಂಚಿಕೊಂಡಿದೆ.ಈ ಊರಿನಲ್ಲಿ ಧಾರ್ಮಿಕವಾಗಿ ಅಂದರೆ ಶ್ರೀ ಶರಣಬಸವೇಶ್ವರ ಹಾಗೂ ಶ್ರೀ ಗೋಳಿಬಸವೇಶ್ವರಜಾತ್ರೆಯು ಅದ್ದೂರಿಯಾಗಿ ಮಾಡಲಾಗುತ್ತದೆ. ಮತ್ತು ಶ್ರೀ ಗ್ರಾಮ ದೇವತೆಯಾದ ದ್ಯಾಮಂಬಿಕ ದೇವಿಯ ಜಾತ್ರೆಯನ್ನು ಪ್ರತಿ ಮೂರು ವರ್ಷಕ್ಕೊಮ್ಮೆ ಜರುಗುತ್ತದೆ. ರಾಜಕೀಯವಾಗಿ ಈ ಗ್ರಾಮದಲ್ಲಿ ಇಬ್ಬರು ಎಂಎಲ್ಎಗಳು ಮತ್ತು ಒಬ್ಬರು ಎಂಪಿ ಆಗಿ ಈ ಗ್ರಾಮದಿಂದ ಆಯ್ಕೆಯಾಗಿರುತ್ತಾರೆ. ಇನ್ನು ಶೈಕ್ಷಣಿಕವಾಗಿ ಪ್ರತಿಶತಕ್ಕಿಂತ 80%ರಷ್ಟು ಜನ ಶಿಕ್ಷಣವಂತರಾಗಿದ್ದಾರೆ. ರಾಜ್ಯದ ಮತ್ತು ದೇಶದ ಅತ್ಯುನ್ನತ ಹುದ್ದೆಗಳಾಗಿರುವಂತಹ ಪಿಎಸ್ಐ ಪೊಲೀಸ್ ಪೇದೆ ಸೈನಿಕ ಹಲವಾರು ಕ್ಷೇತ್ರಗಳಲ್ಲಿ ಈ ಗ್ರಾಮದಿಂದ ಸೇವೆಯನ್ನು ಸಲ್ಲಿಸುತ್ತಿದ್ದಾರೆ.[ಕೊಪ್ಪಳ ೧]

ಮರ್ಕಟ್

[ಬದಲಾಯಿಸಿ]

ಈ ಗ್ರಾಮವು ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕು, ಹಿರೇವಂಕಲಕುಂಟಾ ಹೋಬಳಿಯಲ್ಲಿ ಬರುವ 300 ಮನೆಗಳು ಇರುವ ಸಣ್ಣ ಹಳ್ಳಿಯಾಗಿದ್ದು ಯಲಬುರ್ಗಾ ತಾಲೂಕಿನ ಕೊನೆಯ ಹಳ್ಳಿ (37Km ದೂರದಲ್ಲಿದೆ),ಧಾರ್ಮಿಕವಾಗಿ ರಾಜಕೀಯವಾಗಿ ಶೈಕ್ಷಣಿಕವಾಗಿ ಚೆನ್ನಾಗಿ ಸಾಧನೆ ಮಾಡಿದ್ದು. ಈ ಊರಿಗೆ ಯಾವುದೇ ಐತಿಹಾಸಿಕ ಪುರಾವೆಗಳಿಲ್ಲ,ಆದರೂ ಈ ಗ್ರಾಮಕ್ಕೆ ಮರ್ಕಟ್ ಎಂಬ ಹೆಸರು ಬರಲು ಒಂದು ಐತಿಹ್ಯ ಇದೆ ಈ ಊರಿಗೆ ಮರಕಟ್(ಮರದಕಟ್ಟು),ಮರ್ಕಟ,ಮರಕಟ್ಟು ಎಂದು ಆಡುಮಾತಿನಲ್ಲಿ ಸಂಬೋಧಿಸುತ್ತಿದ್ದು ಕಾರಣ ಒಬ್ಬ ಅನಾಮಿಕ ಕೋತಿ ಆಡಿಸುವವನು ಹಗಲೆಲ್ಲಾ ಸುತ್ತಲೂರಿನಲ್ಲಿ ಕೋತಿ ಆಡಿಸಿ ಇರುಳಿನಲ್ಲಿ ಒಂದು ಮರದ ಕಟ್ಟೆಯ ಹತ್ತಿರ ಬಂದು ವಾಸಿಸುತ್ತಿದ್ದನಂತೆ,ಬೇರೆಯವರು ನೀನು ಎಲ್ಲಿ ವಾಸಿಸುತ್ತಿಯ ಎಂದು ಕೇಳಿದಾಗ ಮರದಕಟ್ಟೆ ಕೆಳಗೆ ಎಂದು ಹೇಳುತ್ತಿದ್ದನಂತೆ ಅದು ಆತನ ಕಾಯಂ ವಾಸಸ್ಥಾನವಾಗಿದ್ದು ಕೆಲಕಾಲದನಂತರ ಮರಕಟ್ ಎಂದು ಈಗ ಹೆಸರುವಾಸಿಯಾಗಿದೆ. ಈ ಚಿಕ್ಕ ಗ್ರಾಮವು ಧಾರ್ಮಿಕ ಶ್ರೀಮಂತಿಕೆಯನ್ನು ಹೊಂದಿದ್ದು ಇಲ್ಲಿ ಲಿಂಗೈಕ್ಯ"ಶ್ರೀ ಶಿವಾನಂದ ಮಠ"ವಿದೆ,ಇವರಿಗೆ ಹಲವಾರು ಭಕ್ತಗಣವು ಇದೆ. ಆ ಪುಣ್ಯಾತ್ಮರ ಆಶೀರ್ವಾದವೋ ಏನೋ ಎಂಬಂತೆ ಅಲ್ಲಿನ ಜನರು ಉತ್ತಮ ಕಾಯಕಯೋಗಿಗಳು, ಪ್ರಜ್ಞಾವಂತರು, ಉತ್ತಮ ಸಂಸ್ಕೃತಿವಂತರು ಹಾಗೂ ಹಲವಾರು ವಿಚಾರವಾದಿಗಳು ವಿದ್ಯಾವಂತರು ಇದ್ದಾರೆ. ಅದರ ಫಲವಾಗಿ ಈ ಚಿಕ್ಕಗ್ರಾಮದಲ್ಲಿ ಸುಮಾರು ಹತ್ತುಹಲವಾರು ಹುದ್ದೆಗಳನ್ನು ಪಡೆದಿರುತ್ತಾರೆ ಈ ಕಾರಣದಿಂದಾಗಿ ಸುತ್ತೂಗ್ರಾಮಗಳಿಗೂ ಮತ್ತು ಇಂದಿನ ಯುವಪೀಳಿಗೆಗೆ ಆದರ್ಶಪ್ರಾಯ; ಇಲ್ಲಿನ ಜನ ಈ ಊರಿನ ಹೆಸರಿನಂತೆ(ಮರ್ಕಟ್) ಕೋತಿಯಂತ ಲಕ್ಷಣದವರು 'ಭಕ್ತಿಯಲ್ಲಿ, ಕಾಯಕದಲ್ಲಿ ಹಾಗೂ ಧರ್ಮಶ್ರದ್ಧೆ'ಯಲ್ಲಿ ಅನಗತ್ಯ ವಿಷಯಗಳಲ್ಲಿ ತಲೆಹಾಕದವರು.

ಕೆಟ್ಟತನವನ್ನು ಬೇಗನೆ ಧಿಕ್ಕರಿಸುವಂತಹ ಜನ ಅಂತೆಯೇ ಅಲ್ಲಿಯ ಜನ ತಮ್ಮ ಧರ್ಮವನ್ನು ಪ್ರೀತಿಸುತ್ತಾ ಬೇರೆ ಧರ್ಮವನ್ನು ಗೌರವಿಸುತ್ತಾ ಉತ್ತಮ ಸ್ವಾಮರಸ್ಯಯುತ ಜೀವನವನ್ನು ನಡೆಸುತ್ತಾ ಇದ್ದಾರೆ.

  1. "Census Data Handbook 2011" (PDF). Retrieved 11 November 2023.


ಉಲ್ಲೇಖ ದೋಷ: <ref> tags exist for a group named "ಕೊಪ್ಪಳ", but no corresponding <references group="ಕೊಪ್ಪಳ"/> tag was found