ಅರಸೀಕೆರೆ
ಅರಸೀಕೆರೆ | |
ಅರಸೀಕೆರೆ ರೈಲ್ವೆ ಜಂಕ್ಷನ್ | |
ರಾಜ್ಯ - ಜಿಲ್ಲೆ |
ಕರ್ನಾಟಕ - ಹಾಸನ |
ನಿರ್ದೇಶಾಂಕಗಳು | |
ವಿಸ್ತಾರ - ಎತ್ತರ |
km² - ೮೦೬ ಮೀ. |
ಸಮಯ ವಲಯ | IST (UTC+5:30) |
ಜನಸಂಖ್ಯೆ (೨೦೦೧) - ಸಾಂದ್ರತೆ |
೪೫,೧೬೬ - ೫,೬೦೦/ಚದರ ಕಿ.ಮಿ. |
ಕೋಡ್‍ಗಳು - ಪಿನ್ ಕೋಡ್ - ಎಸ್.ಟಿ.ಡಿ. - ವಾಹನ |
- ೫೭೩ ೨೦೧ - +೦೮೧೭೯ - ಕೆಎ-೧೩ |
Arsikere
ಅರಸೀಕೆರೆ Arasikere | |
---|---|
town | |
Country | India |
State | Karnataka |
District | Hassan District |
Area | |
• Total | ೮ km೨ (೩ sq mi) |
Elevation | ೮೦೬ m (೨,೬೪೪ ft) |
Population | |
• Total | ೪೫,೧೬೬ |
• ಸಾಂದ್ರತೆ | ೫,೬೦೦/km೨ (೧೫,೦೦೦/sq mi) |
Languages | |
• Official | Kannada |
ಸಮಯದ ವಲಯ | |
ಸಮಯ ವಲಯ | ಯುಟಿಸಿ+5:30 (IST) |
PIN | 573,103 |
Telephone code | 91 8174 |
ವಾಹನ ನೋಂದಣಿ | KA-13 |
ಜಾಲತಾಣ | www |
ಅರಸೀಕೆರೆ ಹಾಸನ ಜಿಲ್ಲೆಯ ಒಂದು ತಾಲೂಕು ಕೇಂದ್ರ. ತೆಂಗಿನಕಾಯಿ ಬೆಳೆಗೆ ಹಾಗು ಮಾರಾಟಕ್ಕೆ ಇದೊಂದು ಪ್ರಮುಖ ಕೇಂದ್ರ. ಹೊಯ್ಸಳರ ಕಾಲದ ಅರಸಿ ಎಂಬ ರಾಣಿಯೋರ್ವಳು ಈ ಊರಿನಲ್ಲಿ ಕೆರೆಯೊಂದನ್ನು ನಿರ್ಮಿಸಿದ ಕಾರಣಕ್ಕೆ ಈ ಹೆಸರು ಬಂದಿದೆ.[೨]ಅರಸಿಯೆಂದರೆ ಕನ್ನಡದಲ್ಲಿ ರಾಣಿ ಎಂದರ್ಥ. ಆದ್ದರಿಂದ, ಇದು 'ಅರಸಿಯಾ + ಕೆರೆ' ಅಂದರೆ "ರಾಣಿಯ ಕೊಳ". ಅರಸೀಕೆರೆಯನ್ನು 'ಉದ್ಭವ ಸರ್ವಜ್ಞ ವಿಜಯ' ಮತ್ತು 'ಬಲ್ಲಾಳಪುರ' ಎಂದು ವಿವಿಧ ಸಮಯಗಳಲ್ಲಿ ಕರೆಯಲಾಗುತ್ತಿತ್ತು.
ಪ್ರಮುಖ ಸ್ಥಳಗಳು
[ಬದಲಾಯಿಸಿ]ಈ ತಾಲ್ಲೂಕಿನಲ್ಲಿರುವ ಪ್ರಮುಖ ಸ್ಥಳಗಳೆಂದರೆ-ಹೊಯ್ಸಳರ ಕಾಲದ ಶಿವಾಲಯ, ಯಾದಾಪುರದ ಶ್ರಿ ಜೇನುಕಲ್ಲು ಸಿದ್ಧೇಶ್ವರ ಸ್ವಾಮಿ ಬೆಟ್ಟ ,ಮಲ್ಲೇಶ್ವರ ಬೆಟ್ಟ ,ಮಾಲೆಕಲ್ಲು ತಿರುಪತಿ,ಲಕ್ಷ್ಮೀಪುರದ ಗಣಪತಿ ದೇವಾಲಯದ ಮಹಾಗಣಪತಿ, ಬೆಟ್ಟದ ಸಿದ್ದೇಶ್ವರಸ್ವಾಮಿ ದೇವಸ್ಥಾನ ನಾಗವೇದಿ ಹಾಗೂ ಮಾಡಾಳು ಶ್ರೀ ಗೌರಮ್ಮನವರು ಹಾಗೂ ಗರುಡನಗಿರಿ ಏಳು ಸುತ್ತಿನ ಕೋಟೆ ಮತ್ತು ಕರಡಿ ಅವಾಸ ಸ್ಥಾನ ಗರುಡನಗಿರಿ, ಹರಳಕಟ್ಟ-ಕ್ಯಾತನಹಳ್ಳಿ ಸಿರಿಗೆರೆ ಶಾಖಾ ಶ್ರೀಹೊಸಮಠ.
ಊರಿನ ಪರಿಚಯ
[ಬದಲಾಯಿಸಿ]ಈ ತಾಲ್ಲೂಕನ್ನು ಕಡೂರು, ಚಿಕ್ಕನಾಯಕನಹಳ್ಳಿ, ತಿಪಟೂರು, ಚನ್ನರಾಯಪಟ್ಟಣ, ಹಾಸನ, ಬೇಲೂರು ಮತ್ತು ಚಿಕ್ಕಮಗಳೂರು ತಾಲ್ಲೂಕುಗಳು ಸುತ್ತವರಿದಿವೆ. ಕಸಬ, ಕಣಕಟ್ಟೆ, ಬಾಣಾವರ, ಜಾವಗಲ್, ಗಂಡಸಿ ಹೋಬಳಿಗಳಿವೆ. ಒಟ್ಟು ೩೭೦ ಗ್ರಾಮಗಳೂ ಅರಸೀಕೆರೆ ಮತ್ತು ಬಾಣಾವರ ಪಟ್ಟಣಗಳೂ ಇವೆ. ತಾಲ್ಲೂಕಿನ ವಿಸ್ತೀರ್ಣ ೧೨೭೮ಚ.ಕಿಮೀ. ಜನಸಂಖ್ಯೆ ೩,೦೩,೦೦೦. ಮೊದಲು ಹಾರ್ನಹಳ್ಳಿ ತಾಲ್ಲೂಕ್ಕಾಗಿದ್ದು ೧೮೮೨ರಲ್ಲಿ ಅರಸೀಕೆರೆ ತಾಲ್ಲೂಕಾಯಿತು.[೩]
ಮೇಲ್ಮೈ ಲಕ್ಷಣ
[ಬದಲಾಯಿಸಿ]ಇದು ಬೆಟ್ಟಗುಡ್ಡಗಳ ಪ್ರದೇಶ. ಹಿರೇಕಲ್ಲುಬೆಟ್ಟ ಎಂಬುದು ಎತ್ತರವಾದ ಬೆಟ್ಟಗಳಲ್ಲೊಂದು. ಈ ತಾಲ್ಲೂಕಿನ ದಕ್ಷಿಣಭಾಗದಲ್ಲಿ ಸಾಧಾರಣವಾದ ಅನೇಕ ಕುರುಚಲು ಕಾಡುಗಳೂ ಹುಲ್ಲು ಬೆಳೆಯುವ ಪ್ರದೇಶಗಳೂ ಇವೆ. ಇಲ್ಲೆಲ್ಲ ಸಾಧಾರಣ ಫಲವತ್ತಾದ, ಗಡುಸಾದ ಕೆಂಪು ಮತ್ತು ಬೂದು ಬಣ್ಣದ ಮಣ್ಣಿದೆ. ಭೂಮಿ ದಕ್ಷಿಣದಿಂದ ಉತ್ತರದ ಕಡೆಗೆ ಇಳಿಜಾರಾಗಿದೆ.
ಹವಾಮಾನ
[ಬದಲಾಯಿಸಿ]ಮಳೆ ಕಡಿಮೆ, ವಾರ್ಷಿಕ ಸರಾಸರಿ ೬೭೧ ಮಿಮೀ.
ಬೇಸಾಯ ಮತ್ತು ವಾಣಿಜ್ಯ
[ಬದಲಾಯಿಸಿ]ರಾಗಿ, ತೆಂಗು, ಮೆಣಸಿನಕಾಯಿ, ಎಣ್ಣೆಕಾಳುಗಳು, ಜೋಳ ಮುಖ್ಯ ಬೆಳೆಗಳು. ಕೆರೆಗಳಿಂದ ೧೭೭೦, ಬಾವಿಗಳಿಂದ ೮೨೦ ಮತ್ತು ಕೊಳವೆ ಬಾವಿಗಳಿಂದ ೨೮೦೦ಹೆ.ಗಳ ಜಮೀನು ನೀರಾವರಿಗೆ ಒಳಪಟ್ಟಿದೆ. ದಕ್ಷಿಣಕ್ಕೆ ಅಮೃತಮಹಲ್ ಕಾವಲುಗಳು ಅನೇಕವಿದ್ದು ಇಲ್ಲಿ ಒಳ್ಳೆಯ ದನಕರುಗಳನ್ನು ಸಾಕುತ್ತಾರೆ. ಕುರಿ ಸಾಕಣೆಯೂ ಹೆಚ್ಚು.
ಪ್ರವಾಸ ತಾಣ
[ಬದಲಾಯಿಸಿ]ಬಾಣಾವರ, ಗರುಡನಗಿರಿ, ಹಾರನಹಳ್ಳಿ, ಹುಲ್ಲೆಕೆರೆ ಮತ್ತು ಜಾವಗಲ್ಲು ಹಿರೆಕಲ್ಲುಸಿದ್ದೇಶ್ವರಬೆಟ್ಟ,ಬಿಳಿಕಲ್ಲು ಲಕ್ಷ್ಮಿರಂಗನಾಥ ಕ್ಷೇತ್ರ,ಜೇನುಕಲ್ಲು ಸಿದ್ದೇಶ್ವರಬೆಟ್ಟ, ಆದಿಹಳ್ಳಿ ಬಾರೆ ವಿರೂಪಾಕ್ಷಲಿಂಗ ಕ್ಷೇತ್ರ ಈ ತಾಲ್ಲೂಕಿನ ಇತರ ಪ್ರಸಿದ್ಧ ಸ್ಥಳಗಳು (ಆಯಾ ಲೇಖನಗಳನ್ನು ನೋಡಿ). ಅರಕೆರೆ ಎಂಬ ಗ್ರಾಮದಲ್ಲಿ ಚನ್ನಕೇಶವ ಮತ್ತು ರಾಮೇಶ್ವರ ದೇವಾಲಯಗಳಿವೆ. ಇಲ್ಲಿ ಗಂಗದೊರೆ ಎರೆಯಪ್ಪನ ಕಾಲಕ್ಕೆ ಸಂಬಂಧಿಸಿದ ಶಾಸನವಿರುವ ಒಂದು ದೊಡ್ಡ ವೀರಗಲ್ಲಿದೆ. ಕಂಚಿನಕೋವಿ ಮರತಿ ಎಂಬುದು ಅರಸೀಕೆರೆ ಪಟ್ಟಣಕ್ಕೆ ೪ಕಿಮೀ ದೂರದಲ್ಲಿರುವ ಒಂದು ಸಣ್ಣ ಬೆಟ್ಟ. ಇಲ್ಲಿ ದೇವಾಲಯಗಳ ಅವಶೇಷಗಳಿವೆ.ಹಿಂದೆ ಇಲ್ಲೊಂದು ಊರಿದ್ದಿರಬಹುದೆಂದು ಹೇಳುತ್ತಾರೆ. ಮಾಲೆಕಲ್ಲುತಿರುಪತಿ ಅರಸೀಕೆರೆಗೆ ೩ಕಿಮೀ ದೂರದಲ್ಲಿರುವ ಒಂದು ಯಾತ್ರಾಸ್ಥಳ. ಇಲ್ಲಿನ ಹಿರೇಕಲ್ಲು ಬೆಟ್ಟದ ಮೇಲಿರುವ ವೆಂಕಟರಮಣಸ್ವಾಮಿ ಮತ್ತು ಬೆಟ್ಟದ ಬುಡದಲ್ಲಿರುವ ಗೋವಿಂದರಾಜಸ್ವಾಮಿ ದೇವಾಲಯಗಳು ಪ್ರಸಿದ್ಧವಾದವು.ಮಾವತ್ತನ ಹಳ್ಳಿಯಲ್ಲಿ ಹೊಯ್ಸಳ ಶೈಲಿಯ ಮಹಾಲಿಂಗೇಶ್ವರ ದೇವಾಲಯವಿದೆ. ಅಗ್ಗುಂದದಲ್ಲಿ ಶಿಥಿಲವಾದ ಎರಡು ಹೊಯ್ಸಳ ದೇವಾಲಯಗಳಿವೆ. ಅರಸೀಕೆರೆಗೆ ಉತ್ತರದಲ್ಲಿ ೧೧ ಕಿಮೀ ದೂರದಲ್ಲಿರುವ ನಾಗಪುರಿ ಕೋಟೆಯಲ್ಲಿ ಹೈದರ್ ಅಲಿ ಕಟ್ಟಿದ ಕೋಟೆಯ ಅವಶೇಷವಿದೆ,ಈ ಕೋಟೆಯನ್ನು ಬಾಣಾವರದ ಬ್ರಾಹ್ಮಣರನ್ನು ಪುರದಿಂದ ನಾಗಪುರಿಗೆ ಓಡಿಸಿ ಅಲ್ಲಿರಲು ಅವರಿಗೆ ವ್ಯವಸ್ಥೆ ಮಾಡಿದ್ದ,ಅರಸೀಕೆರೆಗೆ ೨೮ಕಿಮೀ ದೂರದಲ್ಲಿ ತಿಮ್ಮನಹಳ್ಳಿಯ ಹತ್ತಿರ ವೇದಾವತಿ ನದಿಗೆ ಹಿರೆಕಟ್ಟೆವಡ್ಡು ಎನ್ನುವ ಕಟ್ಟೆ ಕಟ್ಟಲಾಗಿದೆ.
ತಾಲೂಕು ಕೇಂದ್ರ
[ಬದಲಾಯಿಸಿ]ತಾಲ್ಲೂಕಿನ ಕೇಂದ್ರ ಅರಸೀಕೆರೆಯ ಜನಸಂಖ್ಯೆ ೪೫,೧೬೦. ಮೈಸೂರು ಮತ್ತು ಬೆಂಗಳೂರು ಕಡೆಗಳಿಂದ ಅರಸೀಕೆರೆಗೂ ಮುಂದಕ್ಕೂ ರೈಲು ಮಾರ್ಗಗಳಿವೆ. ಇದೊಂದು ವ್ಯಾಪಾರ ಕೇಂದ್ರ. ಪ್ರತಿ ಶುಕ್ರವಾರ ಇಲ್ಲಿ ನಡೆಯುವ ದೊಡ್ಡ ಸಂತೆ ತೆಂಗಿನಕಾಯಿ ಮತ್ತು ಕೊಬ್ಬರಿ ವ್ಯಾಪಾರಕ್ಕೆ ಪ್ರಸಿದ್ಧವಾಗಿದೆ. ೧೮೮೨ ರಷ್ಟು ಹಿಂದೆಯೇ ಅಸ್ತಿತ್ವಕ್ಕೆ ಬಂದ ಇಲ್ಲಿನ ಪುರಸಭೆ ಹಳೆಯ ಪುರಸಭೆಗಳಲ್ಲೊಂದು. ಈ ಊರಿಗೆ ಸಮೀಪವಾಗಿ ಕಸ್ತೂರಬಾ ಗ್ರಾಮವೆಂಬ ಒಂದು ಮಾದರಿ ಗ್ರಾಮ ಸ್ಥಾಪಿತವಾಗಿದೆ. ಇದನ್ನು ಶ್ರೀಮತಿ ಯಶೋಧರಾ ದಾಸಪ್ಪ ಅವರು ಸ್ಥಾಪಿಸಿದರು.
ಇತಿಹಾಸ
[ಬದಲಾಯಿಸಿ]ಈ ಊರು ಹೊಯ್ಸಳರ ಆರಂಭಕಾಲದಲ್ಲಿಯೆ ಹುಟ್ಟುಕೊಂಡಿತು. ೧೧ ನೆಯ ಶತಮಾನದ ಕಡೆಯಲ್ಲಿ ಎರೆಯಂಗನ ಪಟ್ಟದರಸಿ ಮಹಾದೇವಿ ಕೆರೆಯನ್ನು ಕಟ್ಟಿಸಿದಂತೆ ಒಂದು ಶಾಸನದಿಂದ ತಿಳಿದುಬರುವುದರಿಂದ ಈ ಅರಸಿಯ ಹೆಸರಿನಿಂದಲೇ ಅರಸೀಕೆರೆ ಎಂಬ ಹೆಸರು ಈ ಊರಿಗೆ ಬಂದಿರಬಹುದು. ಮುಂದೆ ಇಮ್ಮಡಿ ಬಲ್ಲಾಳನ ಕಾಲದಲ್ಲಿ ಈ ಊರು ಅಭ್ಯುದಯುದ ಪರಾಕಾಷ್ಠೆಯನ್ನು ಕಂಡಿತು. ಬಲ್ಲಾಳನ ಪೆರಿಯರಸಿ ಉಮಾದೇವಿಯ ತವರಾಗಿದ್ದ ಈ ಊರು ಅವನ ಕಾಲದಲ್ಲಿ ಹೊಯ್ಸಳ ರಾಜ್ಯದ ‘ಭಂಡಾರವಾಡ’ವಾಯಿತು. ಇದಕ್ಕೆ ಜಯಗೊಂಡ ಬಲ್ಲಾಳಪುರ, ವೀರವಿಜಯ ಬಲ್ಲಾಳಪುರ ಎಂಬ ಹೆಸರುಗಳೂ ಇದ್ದು ಶಾಸನಗಳಲ್ಲಿ ರಾಜಧಾನಿ ಅರಸಿಯಕೆರೆ ಎನ್ನಿಸಿಕೊಂಡಿದೆ. ವೇದವಿದರಾದ ವಿಪ್ರರು, ವೀರರಾದ ಕಾಯ್ವಾಳುಗಳು, ಆಢ್ಯರಾದ ಪರದರು, ಅಲಕಾಧೀಶ ಕುಬೇರರನ್ನೂ ಧಿಕ್ಕರಿಸುವ ವಾಣಿಜ್ಯರು, ಅಚಲವಾಕ್ಯರಾದ ಜನ, ವಿನೂತಾಕಾರ ರಾದ ಕಾಂತಾಜನ, ಇಳೆಗೆ ಮಂಡನಪ್ರಾಯವಾದ ದೇವಾಗಾರ ಸಂದೋಹ, ಸಾಗರತೀರದಂತೆ ಶೋಭಿಸುವ ತುಂಬುಕೆರೆಗಳು, ಫಲಭರಿತ ವನಗಳು, ಪುಷ್ಪಭರಿತ ತೋಟಗಳು, ಸುರ ವೃಕ್ಷದಂತಿರುವ ಮಾವು, ಸುರಲತೆಯಂತಿರುವ ತಾಂಬೂಲ, ತೆಂಗು, ಕೌಂಗುಗಳು, ಗಂಧಶಾಲೀ ಪರಿಮಳಗಳಿಂದ ಕೂಡಿ ಉದ್ಯತ್ ಪ್ರಜಾಪೂರಿತವಾದ ಈ ನಗರಿಯು ಸುತ್ತಲೂ ಬಳಸಿದ್ದ ಕೋಟೆಯಿಂದ ಉರ್ವೀಮಂಡನವಾಯಿತೆಂದು ಇಲ್ಲಿನ ಹಲವಾರು ಶಾಸನಗಳನ್ನು ರಚಿಸಿರುವ ದೇವಪಾರ್ಯ, ತ್ರಿವಿಕ್ರಮಪಂಡಿತ, ಶಾಂತಿನಾಥ ಮೊದಲಾದ ಕವಿಗಳು ಹಾಡಿ ಹೊಗಳಿದ್ದಾರೆ. ಪ್ರಸನ್ನ ಚೆನ್ನ ಕೇಶವ, ನಖರ ಜಿನಾಲಯ, ಸಹಸ್ರಕೂಟ ಚೈತ್ಯಾಲಯ, ಕೊಯ್ಲಾಳೇಶ್ವರ ಜಗತೇಶ್ವರ, ಮೇಳೇಶ್ವರ, ಬ್ರಹ್ಮ, ಕತ್ತಮೇಶ್ವರ, ಬಲ್ಲೇಶ್ವರ, ಅರೆಯಶಂಕರದೇವ ಮುಂತಾದ ಹಲವು ಗುಡಿಗೋಪುರಗಳನ್ನು ಅನೇಕ ರಾಜ್ಯಾಧಿಕಾರಿಗಳು ಹಾಗೂ ವಣಿಕ್ ಮತ್ತು ವೃತ್ತಿ ಶ್ರೇಣಿಗಳು, ಸರಸ್ವತಿ ಗಣದಾಸಿ ಕೇತೋಜ, ಪುಲಿಗೆಯ ಏಚೋಜ, ಸಿಂಗೋಜ ಮುಂತಾದ ಬಿರುದ ರೂವಾರಿಗಳನ್ನು ನಿಯೋಜಿಸಿ ಕಟ್ಟಿಸಿದರೆಂದು ಹೊಯ್ಸಳ ಶಾಸನ ಗಳಿಂದ ತಿಳಿಯುತ್ತದೆ. ವಿದ್ಯೆಗೆ, ಕಲೆಗೆ ಐಶ್ವರ್ಯಕ್ಕೆ ಹೆಸರಾಗಿದ್ದ ಈ ಊರು ತೆಂಕಣ ಅಯ್ಯಾವೊಳೆ ಯಾಯಿತು. ಅಭಿನವ ದ್ವಾರಾವತಿಯಾಯಿತು. ಇಲ್ಲಿನ ಧರ್ಮಪ್ರತಿಪಾಲಕ ಶಕ್ತಿಯನ್ನು ಕೇಳಿದ ಕಳಚೂರ್ಯರ ಸಚಿವ ರೇಚರಸ ಬಲ್ಲಾಳನನ್ನಾಶ್ರಯಿಸಿ ಸಹಸ್ರಕೂಟ ಚೈತ್ಯಾಲಯಕ್ಕೆ ಸಹಸ್ರಕೂಟ ಜಿನಬಿಂಬವನ್ನು ಮಾಡಿಸಿಕೊಟ್ಟ.ಆದರೆ ಇಷ್ಟು ಉನ್ನತಿಗೇರಿದ ಈ ಊರು ಹೊಯ್ಸಳ ರಾಜ್ಯದ ಅವನತಿಯೊಂದಿಗೆ ಇಳಿಮುಖವಾಯಿತು. ಮುಂದೆ ಕ್ರಮವಾಗಿ ಚನ್ನಪಟ್ಟಣದ ಜಗದೇವರಾಯ, ತರೀಕೆರೆಯ ತಿಮ್ಮಪ್ಪನಾಯಕ, ಇಕ್ಕೇರಿಯ ಶಿವಪ್ಪನಾಯಕ ಇವರ ಅಧೀನದಲ್ಲಿ ಒಂದು ಸಾಮಾನ್ಯ ಊರಾಗಿದ್ದು ಕಡೆಯಲ್ಲಿ ಮೈಸೂರರಸರಿಗೆ ಸೇರಿತು. ಆದರೆ ಮರಾಠಿಗರ ದಾಳಿಗೆ ಬೆದರಿ ಕಪ್ಪ ತೆತ್ತು ಸಾಕಾಗಿದ್ದ ಮೈಸೂರು ಕಪ್ಪದ ಹೊರೆ ತೀರುವವರೆಗೆ ಒತ್ತೆ ಇಟ್ಟ ಮೈಸೂರು ರಾಜ್ಯದ ಭಾಗಗಳಲ್ಲಿ ಈ ಊರು ಸೇರಿತು. ಆಗ ಇದು ಸುಲಿಗೆಗೊಳಗಾಗಿ ಹಾಳುಹಳ್ಳಿಯಾಗಿ ದಾರಿಹೋಕರನ್ನು ಸುಲಿಯುವ ದರೋಡೆಕಾರರಿಗೆ ಆಶ್ರಯಸ್ಥಾನವಾಯಿತು. ೧೯ ನೆಯ ಶತಮಾನದ ಕೊನೆಯಲ್ಲಿ ಬೆಂಗಳೂರು- ಪುಣೆ ರೈಲುಮಾರ್ಗ ಹಾಕಿದಮೇಲೆ ಈ ಊರು ಪುನಃ ಬೆಳೆಯಲಾರಂಭಿಸಿತು.
ದೇವಾಲಯಗಳು
[ಬದಲಾಯಿಸಿ]ಸಿದ್ದೇಶ್ವರ ಸ್ವಾಮಿ ದೇವಾಲಯಯ
[ಬದಲಾಯಿಸಿ]ಸಿದ್ದೇಶ್ವರ ಸ್ವಾಮಿ ದೇವಾಲಯವು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಲಿಂಗದಹಳ್ಳಿ ಗ್ರಾಮದಲ್ಲಿ ಸುತ್ತಲು ಸದಾ ಹಚ್ಚಹಸಿರಿನಿಂದ ಕಂಗೊಳಿಸುತ್ತಿರುವ ದಟ್ಟವಾದ ಹರಣ್ಯದ ಮೇಲ್ಭಾಗದಲ್ಲಿ ದೊಡ್ಡ ಬಂಡೆಯ ಮೇಲೆ ಈ ದೇವಾಲಯವನ್ನು ನಿರ್ಮಿಸಲಾಗಿದೆ. ಈ ದೇವಾಲಯವು ಸುಮಾರು ಸಾವಿರಾರು ವರ್ಷಗಳ ಹಿಂದೆ ನಿರ್ಮಿತವಾದ ದೇವಾಲಯವಾಗಿದೆ .ಇಲ್ಲಿಯ ಜನರು ಹೇಳುವ ಪ್ರಕಾರ ಈ ದೇವಾಲಯವು ಚೋಳರ ಕಾಲದಲ್ಲಿ ನಿರ್ಮಿತವಾದ ದೇವಾಲಯವು ಎಂದು ತಿಳಿದಿದೆ. ಕಾಡಿನ ಮಧ್ಯದಲ್ಲಿ ಇರುವ ಸಿದ್ದೇಶ್ವರ ಸ್ವಾಮಿ ದೇವಾಲಯಕ್ಕೆ ಭಕ್ತಾದಿಗಳು ಕಾಲ್ನಡಿಗೆಯ ಮೂಲಕ ಸಂಚರಿಸುತ್ತಾರೆ.
[ಬದಲಾಯಿಸಿ]ಈ ದೇವಾಲಯಕ್ಕೆ ಪ್ರವೇಶಿಸಬೇಕೆಂದರೆ ಅರಣ್ಯದ ತುತ್ತತುದಿಯಲ್ಲಿರುವ ಕಡಿದಾದ ದೊಡ್ಡ ಕಲ್ಲುಬಂಡೆಯನ್ನು ಹತ್ತಿ ಈ ದೇವಾಲಯಕ್ಕೆ ಪ್ರವೇಶಿಸಬೇಕಾಗುತ್ತದೆ. ಒಂದು ಅಚ್ಚರಿಯ ಸಂಗತಿ ಏನೆಂದರೆ ಈ ಹಿಂದೆ ಈ ದೇವಸ್ಥಾನಕ್ಕೆ ಮೆಟ್ಟಿಲುಗಳನ್ನು ನಿರ್ಮಿಸುವ ಸಂದರ್ಭದಲ್ಲಿ ತುಂಬಾ ಜನರು ಮರಣ ಹೊಂದಿದ್ದಾರೆ. ಆದ್ದರಿಂದ ಮೆಟ್ಟಿಲುಗಳನ್ನು ನಿರ್ಮಿಸುವ ಸಾಹಸಕ್ಕೆ ಯಾರು ಸಹ ಆಗುವುದಿಲ್ಲ. ಬೆಟ್ಟದ ಮೇಲಿನ ಈ ದೇವಸ್ಥಾನದಲ್ಲಿ ಪಕ್ಕದಲ್ಲಿ ನಿಂತು ಸುತ್ತಲೂ ನೋಡಿದರೆ ತಂಪಾದ ಗಾಳಿ ಜೋರಾಗಿ ಬೀಸುತ್ತದೆ ನೋಡುಗರಿಗೆ ಸ್ವರ್ಗದಂತೆ ಭಾಸವಾಗುತ್ತದೆ. ಇಲ್ಲಿನ ಸಿದ್ದೇಶ್ವರ ಸ್ವಾಮಿ ದೇವಾಲಯಕ್ಕೆ ಪ್ರತಿ ವರ್ಷ ಕೊನೆ ಶ್ರಾವಣದಿಂದ ಸುತ್ತಮುತ್ತಲಿನ ಭಕ್ತಾದಿಗಳು ದೇವರ ದರ್ಶನವನ್ನು ಪಡೆದು ಪ್ರತಿಯೊಬ್ಬರು ಸಹ 101 ರೀತಿಯಲ್ಲಿ ಪೂಜೆಯನ್ನು ಸಮರ್ಪಿಸುತ್ತಾರೆ ಇನ್ನು ಕೆಲವರು ಪ್ರಸಾದವನ್ನು ಆ ಬೆಟ್ಟದ ಮೇಲೆ ತಯಾರಿಸಿ ದೇವರಿಗೆ ನೈವೇದ್ಯವನ್ನು ಸಮರ್ಪಿಸುತ್ತಾರೆ. ಲಿಂಗದಹಳ್ಳಿ ಗ್ರಾಮದ ಪಕ್ಕದಲ್ಲಿರುವ ಬೆಟ್ಟದ ಮೇಲಿನ ಸಿದ್ದೇಶ್ವರ ಸ್ವಾಮಿ ಇಲ್ಲಿಯ ಭಕ್ತಾದಿಗಳನ್ನು ಸದಾ ಕಾಲ ಅರಸಿ ಸಲಹುತ್ತಾನೆ.
[ಬದಲಾಯಿಸಿ]ಹೊಯ್ಸಳರ ಕಾಲದಲ್ಲಿ ನಿರ್ಮಿತವಾದ ದೇವಾಲಯಗಳು ಈಗ ಬಹುಮಟ್ಟಿಗೆ ನಾಶವಾಗಿವೆ. ಆದರೆ ಬಹುಶಃ ಎರಡನೆಯ ಬಲ್ಲಾಳ ಕಟ್ಟಿಸಿರಬಹುದಾದ ಈಶ್ವರದೇವಾಲಯ ಉಳಿದಿದೆ. ಪುಟ್ಟಪುಟ್ಟ ಗರ್ಭಗೃಹ ಸುಕನಾಸಿ, ನವರಂಗ, ಮುಖಮಂಟಪಗಳು, ನಕ್ಷತ್ರಾ ಕಾರದಲ್ಲಿ ವೈವಿಧ್ಯಮಯವಾಗಿ ಸುಂದರವಾಗಿರುವ ಹೊರವಿನ್ಯಾಸ, ಅದೇ ವಿನ್ಯಾಸದಲ್ಲಿಯೇ ನೀಳವಾಗಿ ಗರ್ಭಗೃಹದ ಮೇಲೆದ್ದಿರುವ ಲಾವಣ್ಯಮಯವಾದ ಗೋಪುರ, ಹೊರಗೂ ಒಳಗೂ ಯಾವ ಭಾಗವನ್ನೂ ಬಿಡದಂತೆ ಚಾತುರ್ಯದಿಂದ ಕಡೆದು ತುಂಬಿಸಿದ್ದರೂ ಅತಿಯಾಯಿತು ಎನ್ನಿಸಿದ ಶಿಲ್ಪಜಾಣ್ಮೆಯಿಂದ ಕೂಡಿರುವ ಈ ದೇವಾಲಯದ ಹೊರಗೋಡೆಯ ಮೇಲೆ ಒಂದು ಸಾಲು ಮಾತ್ರ ಮೂರ್ತಿಶಿಲ್ಪವಿದೆ. ಹಲವಾರು ಮೂಲೆಗಳುಳ್ಳ ನಕ್ಷತ್ರಾಕಾರದ ಮುಖಮಂಟಪಕ್ಕೆ ದೊಡ್ಡದಾದ ಒಂದೇ ಭುವನೇಶ್ವರಿಯಿದ್ದು ಅಪರೂಪವಾದ ರೀತಿಯಲ್ಲಿದೆ. ನವರಂಗದ ಒಳಗೋಡೆಯ ಕಲಾತ್ಮಕವಾದ ಗೂಡುಗಳು, ಸುಂದರವಾಗಿ ಲಲಿತವಾಗಿ ಕಡೆದಿರುವ ಕಂಬಗಳು, ಕುಸುರಿ ಕೆಲಸದ ಪರಾಕಾಷ್ಟೆಯನ್ನು ಮುಟ್ಟಿರುವ ಗರ್ಭಗೃಹದ ಬಾಗಿಲು ಎಲ್ಲವೂ ಆಕರ್ಷಕವಾಗಿವೆ.[೪]
ಲಕ್ಷ್ಮೀನರಸಿಂಹಸ್ವಾಮಿ ದೇವಾಲಯ, ಜಾವಗಲ್
[ಬದಲಾಯಿಸಿ]೧೩ ನೇ ಶತಮಾನದ ಹೊಯ್ಸಳ ವಾಸ್ತುಶೈಲಿಯ ಮಧ್ಯದಲ್ಲಿ ಜಾವಗಲ್ ನಲ್ಲಿ ಲಕ್ಷ್ಮೀನರಸಿಂಹ ದೇವಸ್ಥಾನ (ಜಾವಗಲ್ ಎಂದು ಕೂಡ ಕರೆಯಲ್ಪಡುತ್ತದೆ) ಒಂದು ಉದಾಹರಣೆಯಾಗಿದೆ. ಜಾವಗಲ್ ಹಾಸನ ನಗರದಿಂದ ಸುಮಾರು ೫೦ ಕಿ.ಮೀ ಮತ್ತು ಕರ್ನಾಟಕ ರಾಜ್ಯದ ಹಳೆಬೀಡುದಿಂದ ಸುಮಾರು ೨೦ ಕಿ.ಮೀ ದೂರದಲ್ಲಿದೆ. ಹೊಯ್ಸಳ ಸಾಮ್ರಾಜ್ಯದ ಹಿಂದಿನ ರಾಜಧಾನಿಯಾಗಿ ಹಳೇಬೀಡು ಐತಿಹಾಸಿಕವಾಗಿ ಮಹತ್ವದ್ದಾಗಿದೆ. ೧೨೫೦ ರಲ್ಲಿ ಹೊಯ್ಸಳ ಸಾಮ್ರಾಜ್ಯದ ರಾಜ ವೀರಾ ಸೋಮೇಶ್ವರರಿಂದ ನಿರ್ಮಿಸಲ್ಪಟ್ಟ ಈ ದೇವಾಲಯವು ನರಸಿಂಹ (ಹಿಂದೂ ದೇವತೆ ವಿಷ್ಣುವಿನ ಒಂದು ರೂಪ) ಆಗಿದೆ. ಭಾರತದ ಪುರಾತತ್ವ ಸರ್ವೇಕ್ಷಣೆಯ ಕರ್ನಾಟಕ ರಾಜ್ಯ ವಿಭಾಗದ ಅಡಿಯಲ್ಲಿ ಈ ದೇವಾಲಯವು ರಕ್ಷಿತ ಸ್ಮಾರಕವಾಗಿದೆ.[೫]
ದೇವಾಲಯದ ಯೋಜನೆ
[ಬದಲಾಯಿಸಿ]ದೇವಾಲಯದ ಯೋಜನೆ ಸರಳ ಮತ್ತು ಸಾಮಾನ್ಯವಾಗಿ ಇತರ ಹೊಯ್ಸಳ ದೇವಾಲಯಗಳಲ್ಲಿ ಕಂಡುಬರುತ್ತದೆ. ಮಧ್ಯದ ದೇವಾಲಯವು ಕೇವಲ ಒಂದು ಸೂಪರ್ಸ್ಟ್ರಕ್ಚರ್ (ಗೋಪುರ ಅಥವಾ ಶಿಖರಾ ) ಮತ್ತು ಸುಖಾನಾಸಿ ( ಗೋಡೆಯ ಮೇಲೆ ಮೂಗು ಅಥವಾ ಗೋಪುರ) ಮಾತ್ರ ಮೂರು ಟ್ರೈಕುಟಾ (ಮೂರು ಶ್ರೈನ್), ಆದರೆ ಮೂರು ಸಮಾನ ಗಾತ್ರದ ದೇವಾಲಯಗಳು ಎಲ್ಲಾ ಚದರ ಯೋಜನೆಯಲ್ಲಿ ಮತ್ತು ಒಂದು ಸಾಮಾನ್ಯ ಮುಚ್ಚಿದ ಸಭಾಂಗಣ ( ಮಂಟಪ ) ಮೂಲಕ ಸಂಪರ್ಕ ಕಲ್ಪಿಸಲಾಗಿದೆ.ಪಾರ್ಶ್ವದ ದೇವಾಲಯಗಳನ್ನು ನೇರವಾಗಿ ಸಭಾಂಗಣಕ್ಕೆ ಜೋಡಿಸಲಾಗುತ್ತದೆ, ಆದರೆ ಮಧ್ಯದ ದೇವಾಲಯವು ಪವಿತ್ರವನ್ನು (ಸೆಲ್ಲಾ) ಹಾಲ್ಗೆ ಜೋಡಿಸುವ ಒಂದು ಕವಚವನ್ನು ಹೊಂದಿದೆ. ಪಕ್ಕದ ಪುಣ್ಯಕ್ಷೇತ್ರಗಳು ಅವುಗಳ ಮೇಲೆ ಯಾವುದೇ ಗೋಪುರವನ್ನು ಹೊಂದಿಲ್ಲ ಮತ್ತು ನೇರವಾಗಿ ಒಂದು ಗೋಡೆ ಇಲ್ಲದೆ ಹಾಲ್ಗೆ ಸಂಪರ್ಕ ಕಲ್ಪಿಸಲ್ಪಟ್ಟಿರುವುದರಿಂದ ಮತ್ತು ಪ್ರೊಜೆಕ್ಷನ್ನಂತಹ ಅದರ ಅನುಗುಣವಾದ ಗೋಪುರವು ಹೊರಗಿನಿಂದ ಎಲ್ಲಾ ದೇವಾಲಯಗಳಂತೆ ಕಂಡುಬರುವುದಿಲ್ಲ. ಬದಲಿಗೆ, ಅವು ಹಾಲ್ ಗೋಡೆಗಳಲ್ಲಿ ಹೀರಲ್ಪಡುತ್ತವೆ. ಪುಣ್ಯಕ್ಷೇತ್ರಗಳ ಕೆಳಗಿನ ಭಾಗವು (ಛಾವಣಿಯ ಕೆಳಗೆ) ಪ್ರತಿ ಬದಿಯ ಐದು ಪ್ರಕ್ಷೇಪಣಗಳನ್ನು ಹೊಂದಿದ್ದು, ಈ ಪ್ರಕ್ಷೇಪಣಗಳು ಕೇಂದ್ರ ಭಾಗದಲ್ಲಿ ಮೂರು ಬದಿಗಳಲ್ಲಿ ಗೋಚರಿಸುತ್ತವೆ . ಈ ದೇವಾಲಯವು ವೇದಿಕೆಯಲ್ಲಿದೆ ( ಜಗತಿ ). ಇದು ಅನೇಕ ಹೊಯ್ಸಳ ದೇವಾಲಯಗಳಿಗೆ ಸಾಮಾನ್ಯವಾಗಿದೆ. ವೇದಿಕೆಯು ಅದರ ದೃಷ್ಟಿಗೋಚರ ಆಕರ್ಷಣೆಯ ಜೊತೆಗೆ ದೇವಸ್ಥಾನದ ಸುತ್ತಲೂ ಸುತ್ತುವರಿದ ( ಪ್ರದಕ್ಷಿಣಾಪಥ ) ಮಾರ್ಗವನ್ನು ಭಕ್ತರಿಗೆ ಒದಗಿಸುತ್ತದೆ. ದೇವಾಲಯದ ರೂಪರೇಖೆಯನ್ನು ಇದು ನಿಕಟವಾಗಿ ಅನುಸರಿಸುತ್ತದೆ, ಇದು ಉತ್ತಮವಾದ ನೋಟವನ್ನು ನೀಡುತ್ತದೆ. ಕೇಂದ್ರ ಮಂದಿರ ಮತ್ತು ಗೋಡೆಗಳ ಮೇಲಿರುವ ಗೋಪುರವು ಅಖಂಡ ಮತ್ತು ಅಲಂಕಾರಿಕವಾಗಿದೆ. ಹೊಯ್ಸಳ ದೇವಸ್ಥಾನದಲ್ಲಿನ ಇತರ ಮಾನದಂಡಗಳು ಗೋಪುರದ ಮೇಲಿರುವ ದೊಡ್ಡ ಗುಮ್ಮಟ ಛಾವಣಿಯಾಗಿದ್ದು, ಇದು ಹೊಯ್ಸಳ ದೇವಾಲಯದ ದೊಡ್ಡ ಶಿಲ್ಪಕಲೆಯಾಗಿದೆ (ಇದನ್ನು "ಹೆಲ್ಮೆಟ್" ಅಥವಾ ಅಮಲಕ ಎಂದು ಕರೆಯಲಾಗುತ್ತದೆ)
ಅಲಂಕಾರ ಮತ್ತು ಶಿಲ್ಪಗಳು
[ಬದಲಾಯಿಸಿ]ಭಕ್ತರು ಕಟ್ಟಮೇಶ್ವರ ಮತ್ತು ಚಂದ್ರಮೌಳೀಶ್ವರ ಎಂದೂ ಕರೆಯಲ್ಪಡುವ ಕಲಮೇಶ್ವರ ದೇವಸ್ಥಾನ (ಈಶ್ವರ) ಹೊಯ್ಸಳ ಶೈಲಿಯ ವಾಸ್ತುಶಿಲ್ಪದ ಸ್ಮಾರಕವಾಗಿದೆ. ಇದು ಪೂರ್ವಕ್ಕೆ ಮುಖ ಮಾಡಿದೆ. ಸಹಸ್ರಕೂಟ ಜಿನಾಲಯವು ಕ್ರಿ.ಶ ೧೨೨೦ ರಿಂದ ಹೊಯ್ಸಳ ಕಟ್ಟಡವನ್ನು ಹೊಂದಿದೆ ಮತ್ತು ಇದನ್ನು ವೀರ ಬಲ್ಲಾಲ II ರ ಮಂತ್ರಿಯಾಗಿದ್ದ ವಾಸುದೈಕಾ ಬಂಧವ ರೇಚರಸ ನಿರ್ಮಿಸಿದ್ದಾರೆ. ಮಾಲೆಕಲ್ ತಿರುಪತಿ ಬೆಟ್ಟವನ್ನು ಚಿಕ್ಕ ತಿರುಪತಿ ಎಂದೂ ಕರೆಯುತ್ತಾರೆ, ಇದು ಅರಸೀಕೆರೆ ಯಂದ ಮೂರು ಕಿಲೋಮೀಟರ್ ದೂರದಲ್ಲಿದೆ ಮತ್ತು ಎರಡು ದೇವಾಲಯಗಳನ್ನು ಹೊಂದಿದೆ: (ವೆಂಕಟರಮಣ ಮತ್ತು ಗೋವಿಂದರಾಜ), ಇವುಗಳನ್ನು ಆಗಾಗ್ಗೆ ಯಾತ್ರಿಕರು ಭೇಟಿ ನೀಡುತ್ತಾರೆ. ಮಾಲೆಕಲ್ ತಿರುಪತಿ ಬೆಟ್ಟದಲ್ಲಿ ೧೩೦೦ ಮೆಟ್ಟಿಲುಗಳು ಮತ್ತು ನಿಂತಿರುವ ವೆಂಕಟೇಶ್ವರ ವಿಗ್ರಹವಿದೆ. ಸಾಯಿನಾಥ ಮತ್ತು ಗಣಪತಿ ದೇವಾಲಯಗಳು ಆಧುನಿಕ ವಿನ್ಯಾಸ ಮತ್ತು ನಿರ್ಮಾಣದಿಂದ ಕೂಡಿದೆ.ಅರಸೀಕೆರೆ ಸ್ವಾಭಾವಿಕವಾಗಿ ನಿರ್ಮಿಸಲಾದ ಆನೆ ಕಲ್ಲಿಗೆ ನೆಲೆಯಾಗಿದೆ, ಇದು ಶ್ರೀ ಸುಬ್ರಹ್ಮಣ್ಯ ಆನೆ ಬೆಟ್ಟದ ಪಟ್ಟಣದ ಹೃದಯಭಾಗದಲ್ಲಿದೆ.
ಶ್ರಿ ಜೇನುಕಲ್ಲು ಸಿದ್ಧೇಶ್ವರ ಸ್ವಾಮಿ
[ಬದಲಾಯಿಸಿ]ಈ ಪುಣ್ಯ ಕ್ಷೇತ್ರವು ಅರಸೀಕೆರೆಯಿಂದ ಸುಮಾರು ೮ ಕಿಲೋಮಿಟರ್ ದೂರದಲ್ಲಿರುವ ಯಾದಾಪುರ ಎಂಬ ಗ್ರಾಮದಲ್ಲಿದೆ. ಇಲ್ಲಿ ಪ್ರತಿ ತಿಂಗಳ ಹುಣ್ಣಿಮೆಯಂದು ಸಾವಿರಾರು ಭಕ್ತಾಧಿಗಳು ರಾಜ್ಯದ ವಿವಿಧ ಸ್ಠಳಗಳಿಂದ ಆಗಿಮಿಸಿ ಭಕ್ತಿಯಿಂದ ಬೆಟ್ಟವನ್ನು ಹತ್ತಿ ತಮ್ಮ ಭಕ್ತಿ ಸಮರ್ಪಿಸುತ್ತಾರೆ. ಇಲ್ಲಿ ಪ್ರತಿದಿನ ಭಕ್ತಾದಿಗಳಿಗೆ ಅನ್ನದಾಸೋಹದ ವ್ಯವಸ್ಥೆ ಇರುತ್ತದೆ.
ಶ್ರೀಮಹಾಗಣಪತಿ ದೇವಾಲಯ,ಲಕ್ಷ್ಮೀಪುರ
[ಬದಲಾಯಿಸಿ]ಬಸ್ ನಿಲ್ದಾಣದಿಂದ ಸುಮಾರು 50 ಹೆಜ್ಜೆ ದೂರದಲ್ಲಿ ಈ ದೇವಾಲಯವು ನಿರ್ಮಾಣವಾಗಿದೆ ಇಲ್ಲಿನ ಬಲಮುರಿಗಣಪತಿ ಬಹಳ ಪ್ರಸಿದ್ಧಿ. ಈ ದೇವರು ಅನೇಕ ಭಕ್ತರ ಸಂಕಷ್ಟಗಳನ್ನು ನಿವಾರಣೆ ಮಾಡಿರುವುದರಿಂದ ಇಲ್ಲಿಗೆ ಬರುವ ಭಕ್ತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ.
ಮಾಲೆಕಲ್ಲು ತಿರುಪತಿ
[ಬದಲಾಯಿಸಿ]ಈ ಕ್ಷೇತ್ರವು ಅರಸೀಕೆರೆಯಿಂದ ೨ ಕಿಲೋಮೀಟರ್ ದೂರದಲ್ಲಿದೆ. ಇದು ಚಿಕ್ಕ ತಿರುಪತಿ ಎಂದೆ ಪ್ರಸಿದ್ಧವಾಗಿದೆ. ಸಾವಿರಾರು ಮೆಟ್ಟಿಲುಗಳಿರುವ ದೊಡ್ಡ ಬೆಟ್ಟ ದ ಮೇಲೆ ವೆಂಕಟೇಶ್ವವರ ಸ್ವಾಮಿ ಮತ್ತು ತಾಯಿ ಲಕ್ಷ್ಮೀ ದೇವಿಯವರ ದೇವಾಲಯವಿದ್ದು ೨೦೦ ವರ್ಷಗಳ ಇತಿಹಾಸ ಇದೆ ಹಾಗೂ ಕೆಳಗಡೆಯು ಸವಿಸ್ತಾರವಾದ ವೆಂಕಟೇಶ್ವರಸ್ವಾಮಿ ದೇವಸ್ಠಾನವಿದೆ. ಪ್ರತಿ ವರ್ಷ ಜಾತ್ರಾಮಹೋತ್ಸವ ವಿಜೃಂಭಣೆಯಿಂದ ಜರುಗುತ್ತದೆ ಮತ್ತು ಇಲ್ಲಿ ಎಂದೂ ಬತ್ತದಂಥ ಹೊಂಡ ಇದೆ.[೬]
ಉಲ್ಲೇಖಗಳು
[ಬದಲಾಯಿಸಿ]- ↑ Home | ಅರಸೀಕೆರೆ ಪುರಸಭೆ Archived 2013-03-14 ವೇಬ್ಯಾಕ್ ಮೆಷಿನ್ ನಲ್ಲಿ.. Arasikeretown.gov.in (10 May 2013).
- ↑ http://www.fallingrain.com/world/IN/19/Arsikere.html
- ↑ https://web.archive.org/web/20130314113604/http://www.arasikeretown.gov.in/
- ↑ https://www.onefivenine.com/india/Places/Taluk/Hassan/Arsikere/Temple
- ↑ "ಆರ್ಕೈವ್ ನಕಲು". Archived from the original on 2020-01-30. Retrieved 2020-01-11.
- ↑ https://www.karnataka.com/hassan/arsikere-amargiri-malekal-tirupati-temple/