ವಿಷಯಕ್ಕೆ ಹೋಗು

ಮಸ್ಕಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಸ್ಕಿ
ಪಟ್ಟಣ
Country ಭಾರತ
Stateಕರ್ನಾಟಕ
Districtರಾಯಚೂರು ಜಿಲ್ಲೆ
Languages
 • Officialಕನ್ನಡ
Time zoneUTC+5:30 (IST)
PIN
584124
Vehicle registrationಕೆಎ 36
Websitewww.lingasugurtown.gov.in/tourism

ಮಸ್ಕಿ, ಕರ್ನಾಟಕ ರಾಜ್ಯದ ರಾಯಚೂರು ಜಿಲ್ಲೆಯ ಒಂದು ಐತಿಹಾಸಿಕ ಪಟ್ಟಣ ಮತ್ತು ನೂತನ ತಾಲೂಕು ಕೇಂದ್ರ. ಮಸ್ಕಿ ಪಟ್ಟಣದಲ್ಲಿ ದೊರೆತ ಅಶೋಕನ ಶಿಲಾಶಾಸನ, ನಗರಕ್ಕೆ ಐತಿಹಾಸಿಕ ಮಹತ್ವ ತಂದಿದೆ. ಈ ಪಟ್ಟಣವು ಮಸ್ಕಿ ನಾಲಾ ಎಂಬ ನದಿಯ ದಂಡೆ ಮೇಲೆ ಕಂಡುಬರುತ್ತದೆ.ಈ ಊರು ಇತಿಹಾಸ ಪೂರ್ವಕಾಲದ ನಿವೇಶನವು ಆಗಿದ್ದು ಶಾಸನಗಳಲ್ಲಿ ಮೊಸಂಗಿ ಎಂದು ಪರಿಚಿತವಾಗಿದೆ.ಯಾದವರ ಒಂದು ಶಾಸನವು ಈ ಪಟ್ಟಣವನ್ನು ರಾಜಧಾನಿ ಪ್ರಿಯ ಮೊಸಂಗಿ ಎಂದಿದೆ. ವಿಜಯನಗರ ಕಾಲದಲ್ಲಿ ಇದು ಮೊಸುಗೆ ಎಂದು ಪರಿಚಿತವಾಗಿದೆ.

ಮಸ್ಕಿಯ ವಿಶೇಷತೆಗಳು

[ಬದಲಾಯಿಸಿ]

■1.ಅಶೋಕನ ಶಾಸನಗಳು ಮೌಯ೯ ವಂಶದ ಚಕ್ರವತಿ೯ ಅಶೋಕನ ಶಿಲಾ ಶಾಸನ ಹೊಂದಿದ ಮಸ್ಕಿ ಐತಿಹಾಸಿಕ ಹಾಗೂ ಧಾಮಿ೯ಕ ಕ್ಷೇತ್ರವಾಗಿ ಗುರುತಿಸಿಕೊಂಡಿರುವ ಮಾಸಂಗಿಪುರ ಇಂದಿನ ಮಸ್ಕಿ ಇದೀಗ ಸಾಹಿತ್ಯ ಸಾಮಾಜಿಕವಾಗಿಯೂ ಅಷ್ಟೆ ಬೆಳದಿದೆ. ದೇವನಾಂಪ್ರೀಯ ಅಶೋಕ ಎಂಬ ಶಾಸನವನ್ನು ಕ್ರಿ.ಶ.1915ರಲ್ಲಿ ಎಂಜಿನಿಯರ್ ಆಗಿದ್ದ ಸಿ.ಬಿಡನ್ ಎಂಬುವರು ಈ ಶಾಸನವನ್ನು ಗುರುತಿಸಿದ್ದಾರೆ. ಇದು ಬ್ರಾಹ್ಮಿಲಿಪಿಯಲ್ಲಿ ಕೆತ್ತಲಾಗಿದೆ ಇಲ್ಲಿ ದೊರೆತಿರುವ ಶಾಸನಗಳು:-(*ಶಿಲಾಯುಗದ ಅಸ್ಥಿಪಂಜರಗಳು *ವೀರ ಗಲ್ಲುಗಳು *ಸಿಡಿಲು ಗುಂಡು)

■2.ಮಲ್ಲಿಕಾಜು೯ನ ದೇವಸ್ಥಾನ ಎರಡನೇ ಶ್ರೀ ಶೈಲ ಎಂದೇ ಖ್ಯಾತಿ ಪಡೆದ ಮಲ್ಲಿಕಾಜು೯ನ ದೇವಸ್ಥಾನ ಕೂಡ ತನ್ನದೇ ಇತಿಹಾಸ ಹೊಂದಿದೆ.ಬೆಟ್ಟದ ಮೇಲೆ ಇರುವ ಕಲ್ಲಿನಲ್ಲಿ ಈ ವಿಗ್ರಹ ಮೂಡಿದೆ ಕಾಲಕ್ರಮೇಣ ಬೆಟ್ಟದ ಕೆಳಗೆ ದೇವಸ್ಥಾನ ನಿಮಿ೯ಸಿ ಮಲ್ಲಿಕಾಜು೯ನನ್ನು ಪ್ರತಿಷ್ಠಾಪಿಸಲಾಗಿದೆ ಪ್ರತಿ ವಷ೯ ಆರು ತಿಂಗಳಿಗೊಮ್ಮೆ ಎರಡು ಸಲ ಜಾತ್ರೆ ಬೆಟ್ಟದ ಮೇಲೆ ಮತ್ತು ಕೆಳಗೆ ಮಾಡಲಾಗುತ್ತಿದೆ

■3.ಎನ್ ಸಿ ಆರ್ ಟಿ ಲಾಂಛನ ಮಸ್ಕಿಯ ಬೆಟ್ಟದ ಮೇಲೆ ಇರುವ ಮಲ್ಲಿಕಾಜು೯ನ ದೇವಸ್ಥಾನದ ಗೋಡೆ ಮೇಲೆ ಕೆತ್ತೆನೆ ಮಾಡಲಾಗಿರುವ ಮೂರು ಮುಖವುಳ್ಳ ಹಂಸದ ಚಿತ್ರ ದೆಹಲಿಯ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಹಾಗೂ ತರಬೇತಿ ಕೇಂದ್ರ ತನ್ನ ಲಾಂಛನವನ್ನಾಗಿ ಬಳಕೆ ಮಾಡಿಕೊಂಡಿದೆ

ಚಿತ್ರಗಳು

[ಬದಲಾಯಿಸಿ]
"https://kn.wikipedia.org/w/index.php?title=ಮಸ್ಕಿ&oldid=1121907" ಇಂದ ಪಡೆಯಲ್ಪಟ್ಟಿದೆ