ನಾಗಠಾಣ ವಿಧಾನಸಭಾ ಕ್ಷೇತ್ರ

ವಿಕಿಪೀಡಿಯ ಇಂದ
Jump to navigation Jump to search

ನಾಗಠಾಣ ವಿಧಾನಸಭಾ ಕ್ಷೇತ್ರವು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ 8 ವಿಧಾನ ಸಭಾ ಕ್ಷೆತ್ರಗಳಲ್ಲಿ ಒಂದಾಗಿದೆ. ನಾಗಠಾಣ ಮತಕ್ಷೇತ್ರ(2018)ದಲ್ಲಿ 1,07,407 ಪುರುಷರು, 99,773 ಮಹಿಳೆಯರು ಸೇರಿ ಒಟ್ಟು 2,07,180 ಮತದಾರರಿದ್ದಾರೆ.

ಕ್ಷೇತ್ರದ ಇತಿಹಾಸ[ಬದಲಾಯಿಸಿ]

ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿ ಗುರುತಿಸಿಕೊಂಡ ನಾಗಠಾಣ ವಿಧಾನಸಭಾ ಕ್ಷೇತ್ರವು, ವಿಜಯಪುರ ಜಿಲ್ಲೆಯ ಒಂದು ಪ್ರಮುಖ ವಿಧಾನಸಭಾ ಕ್ಷೇತ್ರ. ವಿಜಯಪುರ-ಇಂಡಿ ರಸ್ತೆಯಲ್ಲಿ ಈ ಊರು ನೆಲೆಸಿದೆ. ಮಹಾರಾಷ್ಟ್ರ-ಕರ್ನಾಟಕ ಗಡಿಯಲ್ಲಿರುವುದರಿಂದ ಈ ಊರಿನ ಮೇಲೆ ಮರಾಠಿ ಪ್ರಭಾವ ಸಾಕಷ್ಟಿದೆ. ರಾಜ್ಯದಲ್ಲೇ ಹೆಚ್ಚು ವಿಸ್ತಾರವುಳ್ಳ ಎರಡನೇ ವಿಧಾನಸಭಾ ಕ್ಷೇತ್ರ ಎಂಬ ಹೆಗ್ಗಳಿಕೆ ಹೊಂದಿರುವ ನಾಗಠಾಣ ವಿಧಾನಸಭಾ ಕ್ಷೇತ್ರದ್ದು. ಮಾಜಿ ಶಾಸಕ ಆರ್‌.ಕೆ.ರಾಠೋಡ ಪಂಚಾಯಿತಿ ರಾಜಕಾರಣವನ್ನು ಮೆಟ್ಟಿಲಾಗಿಸಿಕೊಂಡು ವಿಧಾನಸಭೆಗೆ ಆಯ್ಕೆಯಾಗಿದ್ದರು. ಹೊರ್ತಿ ಜಿಪಂ ಕ್ಷೇತ್ರದ ಸದಸ್ಯರಾಗಿ ಆಯ್ಕೆಯಾಗಿದ್ದಲ್ಲದೆ ಅಧ್ಯಕ್ಷ ಸ್ಥಾನವನ್ನೂ ಅಲಂಕರಿಸಿದ್ದರು. 2004ರಲ್ಲಿ ಜನತಾದಳದಿಂದ ಬಳ್ಳೊಳ್ಳಿ ಮೀಸಲು ಕ್ಷೇತ್ರದ (ಈಗಿನ ನಾಗಠಾಣ) ಶಾಸಕರಾಗಿ ಆಯ್ಕೆಯಾಗಿದ್ದರು. 2004ರ ಮುಂಚೆ ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರವಾಗಿತ್ತು.1962ರಲ್ಲಿ ಬರಡೋಲ ವಿಧಾನಸಭಾ ಕ್ಷೇತ್ರವೆಂದು ನಾಮಕರಣಗೊಂಡಿತ್ತು. ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾದ ಈ ಕ್ಷೇತ್ರವನ್ನು 2013 ರಲ್ಲಿ ಕಾಂಗ್ರೆಸ್ ನ ಪ್ರೊ.ರಾಜು ಆಲಗೂರು ಪ್ರತಿನಿಧಿಸಿದ್ದರು.

ಕ್ಷೇತ್ರದ ವಿಶೇಷತೆ[ಬದಲಾಯಿಸಿ]

  • ರಾಜ್ಯದಲ್ಲೇ ಹೆಚ್ಚು ವಿಸ್ತಾರವುಳ್ಳ ಎರಡನೇ ವಿಧಾನಸಭಾ ಕ್ಷೇತ್ರ ಎಂಬ ಹೆಗ್ಗಳಿಕೆ ಹೊಂದಿರುವ ನಾಗಠಾಣ ವಿಧಾನಸಭಾ ಕ್ಷೇತ್ರದ್ದು.
  • ವಿಜಯಪುರ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿ ಗುರುತಿಸಿಕೊಂಡ ನಾಗಠಾಣ ವಿಧಾನಸಭಾ ಕ್ಷೇತ್ರ.
  • ರಾಜು ಆಲಗೂರುರವರು 2013ರಲ್ಲಿ ಸಿದ್ದರಾಮಯ್ಯನವರ ಕರ್ನಾಟಕ ಸಾಬೂನು ಮತ್ತು ಮಾರ್ಜಕ ಮಂಡಳಿಯ ಅಧ್ಯಕ್ಷ ಹಾಗೂ ಸಂಸದೀಯ ಕಾರ್ಯದರ್ಶಿಗಳಾಗಿದ್ದರು.
  • ದೇವಾನಂದ ಚವ್ಹಾಣರವರು 2018ರಲ್ಲಿ ಹೆಚ್.ಡಿ.ಕುಮಾರಸ್ವಾಮಿಯವರ ಜೆಡಿಎಸ್-ಕಾಂಗ್ರೇಸ್ ಸಮ್ಮಿಸ್ರ ಸರ್ಕಾರದಲ್ಲಿ ಸಂಸದೀಯ ಕಾರ್ಯದರ್ಶಿಗಳಾಗಿದ್ದರು.
  • ಜೆಟ್ಟೆಪ್ಪ ಕಬಾಡಿಯವರು ಇದೆ ಕ್ಷೇತ್ರದಿಂದ 4 ಬಾರಿ ಆಯ್ಕೆಯಾಗಿದ್ದಾರೆ.
  • ರಾಜು ಆಲಗೂರು, ಸಿದ್ಧಾರ್ಥ ಅರಕೇರಿ 2 ಬಾರಿ ಹಾಗೂ ರಮೇಶ್ ಜಿಗಜಿಣಗಿ 3 ಬಾರಿ ಆಯ್ಕೆಯಾಗಿದ್ದಾರೆ.
  • ರಮೇಶ್ ಜಿಗಜಿಣಗಿಯವರು 1983ರಲ್ಲಿ ರಾಮಕೃಷ್ಣ ಹೆಗಡೆ ಸಂಪುಟದಲ್ಲಿ ಗೃಹ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. ಅದರಂತೆ 1984 -85ರಲ್ಲಿ ಅಬಕಾರಿ ಖಾತೆ ರಾಜ್ಯ ಸಚಿವರಾಗಿ, 1996-98ರಲ್ಲಿ ಜೆ.ಎಚ್.ಪಟೇಲ್ ಸಂಪುಟದಲ್ಲಿ ಸಮಾಜ ಕಲ್ಯಾಣ ಮತ್ತು ಕಂದಾಯ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ.
  • ದೇವಾನಂದ ಚವ್ಹಾಣ, ಆರ್.ಕೆ.ರಾಠೋಡ ಮತ್ತು ಮನೋಹರ ಐನಾಪುರರವರು ಲಂಬಾಣಿ ಸಮುದಾಯಕ್ಕೆ ಸೇರಿದ ನಾಯಕರಾಗಿದ್ದಾರೆ.

ಜನಪ್ರತಿನಿಧಿಗಳ ವಿವರ[ಬದಲಾಯಿಸಿ]

ವರ್ಷ ವಿಧಾನ ಸಭಾ ಕ್ಷೆತ್ರ ವಿಜೇತ ಪಕ್ಷ ಮತಗಳು ಉಪಾಂತ ವಿಜೇತ ಪಕ್ಷ ಮತಗಳು
ನಾಗಠಾಣ ವಿಧಾನಸಭಾ ಕ್ಷೇತ್ರ ಕರ್ನಾಟಕ ರಾಜ್ಯ
2018 ನಾಗಠಾಣ ವಿಧಾನಸಭಾ ಕ್ಷೇತ್ರ ದೇವಾನಂದ ಚವ್ಹಾಣ JDS 59709 ವಿಠ್ಠಲ ಕಟಕದೊಂಡ INC 54108
2013 ನಾಗಠಾಣ ವಿಧಾನಸಭಾ ಕ್ಷೇತ್ರ ರಾಜು ಆಲಗೂರ INC 45570 ದೇವಾನಂದ ಚವ್ಹಾಣ JDS 44903
2008 ನಾಗಠಾಣ ವಿಧಾನಸಭಾ ಕ್ಷೇತ್ರ ವಿಠ್ಠಲ ಕಟಕದೊಂಡ BJP 40225 ರಾಜು ಆಲಗೂರ INC 36018
ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ ಕರ್ನಾಟಕ ರಾಜ್ಯ
2004 ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ ಆರ್.ಕೆ.ರಾಠೋಡ JDS 39915 ರಾಜು ಆಲಗೂರ INC 28873
1999 ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ ರಾಜು ಆಲಗೂರ INC 27194 ಆರ್.ಕೆ.ರಾಠೋಡ JDS 24667
1994 ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ ರಮೇಶ್ ಜಿಗಜಿಣಗಿ JD 29018 ಫೂಲಸಿಂಗ್ ಚವ್ಹಾಣ INC 17591
1989 ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ ಮನೋಹರ ಐನಾಪುರ INC 27782 ರಮೇಶ್ ಜಿಗಜಿಣಗಿ JD 23357
1985 ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ ರಮೇಶ್ ಜಿಗಜಿಣಗಿ JNP 32360 ದಯಾನಂದ ಕೊಂಡಗೂಳಿ INC 21311
1983 ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ ರಮೇಶ್ ಜಿಗಜಿಣಗಿ JNP 24603 ಸಿದ್ಧಾರ್ಥ ಅರಕೇರಿ INC 11876
1978 ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ ಸಿದ್ಧಾರ್ಥ ಅರಕೇರಿ JNP 23023 ಚಂದ್ರಶೇಖರ ಹೊಸಮನಿ INC 14204
ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ ಮೈಸೂರು ರಾಜ್ಯ
1972 ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ ಜೆಟ್ಟೆಪ್ಪ ಕಬಾಡಿ INC(O) 15537 ಬಾಬುರಾವ್ ಹುಜರೆ INC 11204
1967 ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ ಸಿದ್ಧಾರ್ಥ ಅರಕೇರಿ RPI 14653 ಜೆಟ್ಟೆಪ್ಪ ಕಬಾಡಿ INC 10738
1962 ಬರಡೋಲ ವಿಧಾನಸಭಾ ಕ್ಷೇತ್ರ ಜೆಟ್ಟೆಪ್ಪ ಕಬಾಡಿ INC 9792 ಶಿವಪ್ಪ ಕಾಂಬ್ಳೆ RPI 2623
1957 ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ ಜೆಟ್ಟೆಪ್ಪ ಕಬಾಡಿ INC 17402 ಲಚ್ಚಪ್ಪ ಸಂಧಿಮನಿ SWA 16390
ಇಂಡಿ ವಿಧಾನಸಭಾ ಕ್ಷೇತ್ರ-೧ ಬಾಂಬೆ ರಾಜ್ಯ
1951 ಇಂಡಿ-ಸಿಂದಗಿ ವಿಧಾನಸಭಾ ಕ್ಷೇತ್ರ ಜೆಟ್ಟೆಪ್ಪ ಕಬಾಡಿ INC 30322 ಬಾಬುರಾವ್ ಹುಜರೆ SFC 5457