ರಮೇಶ್ ಜಿಗಜಿಣಗಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರಮೇಶ ಜಿಗಜಿಣಗಿ
ವೈಯಕ್ತಿಕ ಮಾಹಿತಿ
ಜನನ 28ನೇ ಜೂನ್ 1952
ಅಥರ್ಗಾ, ಇಂಡಿ ತಾಲ್ಲೂಕು, ವಿಜಯಪುರ ಜಿಲ್ಲೆ, ಕರ್ನಾಟಕ
ರಾಷ್ಟ್ರೀಯತೆ ಭಾರತೀಯ
ಸಂಗಾತಿ(ಗಳು) ಶೋಭಾ
ಮಕ್ಕಳು 2
ವೃತ್ತಿ ರಾಜಕೀಯ

ರಮೇಶ ಜಿಗಜಿಣಗಿ (ರಮೇಶ ಚಂದಪ್ಪ ಜಿಗಜಿಣಗಿ) ಕರ್ನಾಟಕದ ರಾಜ್ಯದ ಶಾಸಕ, ಸಂಸದ, ರಾಜ್ಯ ಮತ್ತು ಕೇಂದ್ರದ ಸಚಿವರಾಗಿದ್ದರು.

ಪರಿಚಯ[ಬದಲಾಯಿಸಿ]

ಜಿಗಜಿಣಗಿಯವರು 1952ರ ಜೂನ್ 28 ರಂದು ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಅಥರ್ಗಾ ಗ್ರಾಮದಲ್ಲಿ ಜನಿಸಿದರು. ತಂದೆ ಚಂದ್ರಪ್ಪ ಮತ್ತು ತಾಯಿ ಬೌರಮ್ಮ ದಂಪತಿಯ ಪುತ್ರರು.

ಶಿಕ್ಷಣ[ಬದಲಾಯಿಸಿ]

ವಿಜಯಪುರದ ಎಸ್.ಬಿ.ನ್ಯೂ ಕಲಾ ಮಹಾವಿದ್ಯಾಲಯದಿಂದ ಬಿಎ ಪದವಿ ಪಡೆದಿದ್ದಾರೆ.

ರಾಜಕೀಯ[ಬದಲಾಯಿಸಿ]

ರಮೇಶ್ ಜಿಗಜಿಣಗಿ ಅವರು 1998, 1999 ಮತ್ತು 2004ರಲ್ಲಿ ಚಿಕ್ಕೋಡಿ (ಲೋಕ ಸಭೆ ಚುನಾವಣಾ ಕ್ಷೇತ್ರ)ದಿಂದ ಆಯ್ಕೆಯಾಗಿದ್ದರು. 2009, 2014 ಮತ್ತು 2019ರಲ್ಲಿ ನಡೆದ ಚುನಾವಣೆಯಲ್ಲಿ ವಿಜಯಪುರ ಲೋಕ ಸಭಾ ಕ್ಷೇತ್ರದಿಂದ ಸಂಸದರಾಗಿ ಲೋಕಸಭೆಗೆ ಆಯ್ಕೆಯಾಗಿದ್ದರು. 1983 ರಿಂದ 98ರ ತನಕ ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರದಿಂದ 3 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.[೧]

ನಿರ್ವಹಿಸಿದ ಖಾತೆಗಳು[ಬದಲಾಯಿಸಿ]

 • 1978 ರಲ್ಲಿ ಇಂಡಿ ತಾಲೂಕು ಅಭಿವೃದ್ಧಿ ಮಂಡಳಿ ಸದಸ್ಯರಾಗಿ ಆಯ್ಕೆ.
 • 1980 ರಲ್ಲಿ ಇಂಡಿ ಭೂ ನ್ಯಾಯ ಮಂಡಳಿ ಸದಸ್ಯರಾಗಿ ಆಯ್ಕೆ.
 • 1983, 1985 ಮತ್ತು 1994ರಲ್ಲಿ ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ(ಈಗಿನ ನಾಗಠಾಣ ವಿಧಾನಸಭಾ ಕ್ಷೇತ್ರ)ದಿಂದ 3 ಬಾರಿ ಶಾಸಕರಾಗಿ ಆಯ್ಕೆ.
 • 1989ರಲ್ಲಿ ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ(ಈಗಿನ ನಾಗಠಾಣ ವಿಧಾನಸಭಾ ಕ್ಷೇತ್ರ)ದಿಂದ ಸೋಲು.
 • 1983ರಲ್ಲಿ ರಾಮಕೃಷ್ಣ ಹೆಗಡೆ ಸಂಪುಟದಲ್ಲಿ ಗೃಹ ಸಚಿವರಾಗಿದ್ದರು.[೨]
 • 1984-85ರಲ್ಲಿ ಅಬಕಾರಿ ಖಾತೆ ರಾಜ್ಯ ಸಚಿವರಾಗಿ ಕಾರ್ಯ ನಿರ್ವಹಣೆ.
 • 1996-98ರಲ್ಲಿ ಜೆ.ಎಚ್.ಪಟೇಲ್ ಸಂಪುಟದಲ್ಲಿ ಸಮಾಜ ಕಲ್ಯಾಣ ಮತ್ತು ಕಂದಾಯ ಸಚಿವರಾಗಿದ್ದರು.
 • 1998ರಲ್ಲಿ ಲೋಕಶಕ್ತಿ ಪಕ್ಷದಿಂದ, 1999ರಲ್ಲಿ ಜನತಾದಳದಿಂದ ಮತ್ತು 2004ರಲ್ಲಿ ಬಿಜೆಪಿಯಿಂದ ಚಿಕ್ಕೋಡಿ (ಲೋಕ ಸಭೆ ಚುನಾವಣಾ ಕ್ಷೇತ್ರ)ದಿಂದ ಸಂಸದರಾಗಿ ಹ್ಯಾಟ್ರಿಕ್ ಸಾಧಿಸಿದ್ದಾರೆ.
 • 2009, 2014 ಮತ್ತು 2019ರಲ್ಲಿ ವಿಜಯಪುರ ಲೋಕ ಸಭಾ ಕ್ಷೇತ್ರ ಕ್ಷೇತ್ರದಿಂದ ಬಿಜೆಪಿಯಿಂದ ಸಂಸದರಾಗಿ ಹ್ಯಾಟ್ರಿಕ್ ಸಾಧಿಸಿದ್ದಾರೆ.[೩]
 • 2016 - ಕುಡಿಯುವ ನೀರು ಮತ್ತು ನೈರ್ಮಲಿಕರಣದ ಕೇಂದ್ರ ಮಂತ್ರಿಯಾಗಿ ಆಯ್ಕೆಯಾಗಿದ್ದರು.[೪]

ಈ ಕೆಳಗಿನ ಸಮಿತಿಗೆ ಸದಸ್ಯರಾಗಿದ್ದರು:

 • ಸಂಸತ್ತಿನ ಸಮಾಲೋಚಕ ಸಮಿತಿ, ಹಣಕಾಸು ಸಚಿವಾಲಯದ ಸದಸ್ಯರು.
 • ಅನುಪಸ್ಥಿತಿಯಲ್ಲಿ ಸಂಸತ್ತಿನ ಸಮಿತಿಯ ಸದಸ್ಯರು.
 • ವಾಣಿಜ್ಯ ಸಂಸತ್ತಿನ ಸಮಿತಿಯ ಸದಸ್ಯರು.
 • ಗೃಹ ವ್ಯವಹಾರಗಳ ಸಂಸದೀಯ ಸಮಿತಿ ಮತ್ತು ಕೇಂದ್ರೀಯ ಮಿಲಿಟರಿ ಪಡೆಗಳ ಸಿಬ್ಬಂದಿ ಪಾಲಿಸಿಯ ಮೇಲಿನ ಉಪ ಸಮಿತಿಯ ಸದಸ್ಯರು.

ಉಲ್ಲೇಖಗಳು[ಬದಲಾಯಿಸಿ]