ವಿಷಯಕ್ಕೆ ಹೋಗು

ಹೊಳೇನರಸೀಪುರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಹೊಳೆನರಸೀಪುರ ಇಂದ ಪುನರ್ನಿರ್ದೇಶಿತ)
ಹೊಳೆನರಸೀಪುರ

ಹೊಳೆನರಸೀಪುರ
ರಾಜ್ಯ
 - ಜಿಲ್ಲೆ
ಕರ್ನಾಟಕ
 - ಹಾಸನ
ನಿರ್ದೇಶಾಂಕಗಳು 12.783° N 76.243° E
ವಿಸ್ತಾರ
 - ಎತ್ತರ
೨.೫೦ km²
 - ೮೪೯ ಮೀ.
ಸಮಯ ವಲಯ IST (UTC+5:30)
ಜನಸಂಖ್ಯೆ (೨೦೦೧)
 - ಸಾಂದ್ರತೆ
೨೭,೦೧೮
 - ೧೦೮೦೭.೨/ಚದರ ಕಿ.ಮಿ.
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - ೫೭೩೨೧೧
 - +೦೮೧೭೫
 - ಕೆಎ-೧೩

ಹೊಳೆನರಸೀಪುರ ಹಾಸನ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಈ ಊರನ್ನು ನರಸೀಪುರ ಎಂದು ಕೂಡ ಕರೆಯುತ್ತಾರೆ. ಇಲ್ಲಿ ಹೇಮಾವತಿ ನದಿ ಹರಿಯುವುದರಿಂದ ಹೊಳೆನರಸೀಪುರ ಎಂಬ ಹೆಸರು ಬಂತು ಎಂದು ಹೇಳಲಾಗುತ್ತದೆ. ಪುರಸಭೆ ಇಲ್ಲಿನ ಸ್ಥಳೀಯ ಆಡಳಿತ ಸಂಸ್ಥೆ.ಇಡೀ ಊರನ್ನು ಕೋಟೆ ಮತ್ತು ಪೇಟೆ ವಿಭಜಿಸಲಾಗಿದೆ. ಈ ತಾಲ್ಲೂಕಿನ ಮೂರು ಹೋಬಳಿಗಳು: ಹಳೇಕೋಟೆ, ಹಳ್ಳಿಮೈಸೂರು ಮತ್ತು ಕಸಬಾ.

ಇತಿವೃತ್ತ

[ಬದಲಾಯಿಸಿ]
  • ಹೊಳೆನರಸೀಪುರ ಪಟ್ಟಣವು ರಾಜ್ಯ ಹೆದ್ದಾರಿ ಸಂಖ್ಯೆ ೫೭ ರಲ್ಲಿ ನೆಲೆಯಲ್ಲಿದೆ ಹಾಗೂ ಹಾಸನ ಮತ್ತು ಮೈಸೂರು ರೈಲ್ವೆ ದಾರಿಯ ಪೂರ್ವವಲಯದಲ್ಲಿದೆ. ಹೊಳೆನರಸೀಪುರವು ದಕ್ಷಿಣಾಭಿಮುಖವಾಗಿ ಅಭಿವೃದ್ಧಿ ಹೊಂದಿದೆ. ಈ ಪಟ್ಟಣವು ಮೂರು ನಗರ ವಲಯಗಳನ್ನು ಹೊಂದಿದೆ. ಕೋಟೆ ಪ್ರದೇಶ ಜತೆಗೆ ದೇವಾಲಯ ಕೇಂದ್ರಬಿಂದುವಾಗಿದೆ. ಉತ್ತರದ ಕೋಟೆಯು ಮತ್ತು ರೈಲ್ವೆದಾರಿಯ ಮಧ್ಯೆ ಅಭಿವೃದ್ದಿಯಾಗಿದೆ. ಶ್ರೀರಾಮದೇವರಕಟ್ಟೆಯ ನೀರಾವರಿ ಕೆಲಸಗಳಿಗೆ ಅನುಕೂಲಕರವಾಗಿದೆ. ಹೊಳೆನರಸೀಪುರದ ಈಗಿನ ಜನಸಂಖ್ಯೆ ೨೭,೦೨೪ ಇದ್ದು, ಇದು ೨೦೧೧ರ ವೇಳೆಗೆ ೬೫೦೦೦ ಮುಟ್ಟುವ ಸಾಧ್ಯತೆಯಿದೆ.
  • ಭಾರತದ ಮಾಜಿ ಪ್ರಧಾನಿ ದೇವೇಗೌಡರ ಹುಟ್ಟೂರು ಹರದನಹಳ್ಳಿಯು ಹಳೇಕೋಟೆ ಹೋಬಳಿಯಲ್ಲಿದೆ. ಹಳೇಕೋಟೆಯ ಪಕ್ಕದಲ್ಲಿಯೇ ಇರುವ ಮಾವಿನಕೆರೆಯು ಪುಣ್ಯಕ್ಷೇತ್ರವಾಗಿದ್ದು, ಮಾವಿನಕೆರೆ ರಂಗನಾಥನಬೆಟ್ಟಕ್ಕೆ ಇತ್ತೀಚೆಗೆ ರಸ್ತೆ ಮಾಡಲಾಗಿದೆ. ಹರಿಹರಪುರವು ಇದೇ ಹೋಬಳಿಗೆ ಸೇರಿದ ಪ್ರಮುಖ ಪಂಚಾಯಿತಿ ಕೇಂದ್ರವಾಗಿದ್ದು, ಹರಿಹರಪುರದ ಗ್ರಾಮದೇವತೆ ಉಡುಸಲಮ್ಮ-ದುರ್ಗಾಪರಮೇಶ್ವರಿ ದೇವತೆಗಳಿಗೆ ಹೊರರಾಜ್ಯದಲ್ಲೂ ಭಕ್ತರಿದ್ದಾರೆ.


ಹೊಳೆನರಸೀಪುರದ ಹಿರೇಬೆಳಗುಲಿಯ ಗ್ರಾಮದ ಚರಿತ್ರೆ

[ಬದಲಾಯಿಸಿ]
  • ಕೋಟ್ಯಂತರ ವರ್ಷಗಳ ಹಿಂದೆ ನಭೋ ಮಂಡಲದಲ್ಲಿ ಒಂದು ಮಹಾಸ್ಪೋಟ ಉಂಟಾಗಿ ಆಕಾಶ ಕಾಯವು ಛಿದ್ರಗೊಂಡು ಆಕಾಶ, ಗಾಳಿ, ನೀರು, ಭೂಮಿ, ಸೂರ್ಯ ಎಂಬ ಪಂಚ ಭೂತಗಳು ಸೃಷ್ಟಿಯಾಗಿದೆ ಎಂದು ಖಗೋಳ ವಿಜ್ಞಾನಿಗಳ ಅಭಿಪ್ರಾಯವಾಗಿದೆ. ಹೀಗೆ ಪ್ರಪಂಚ ಸೃಷ್ಟಿ ಯಾದ ನಂತರದಲ್ಲಿ ಶಾಖ, ನೀರು, ಗಾಳಿ ಇವುಗಳ ಸಂಯೋಜನೆಯಿಂದ ಭೂಮಿಯ ಬಂಡೆಗಳ ಮೇಲೆ ‘ಪಾಚಿ ಶೀಲಾವಲ್ಕಗಳೆಂಬ’ ಜೀವ ಕೋಶಗಳು ಹುಟ್ಟಿ ಕೊಳುತ್ತವೆ.
  • ಇದರಿಂದ ಪ್ರಾರಂಭವಾದ ಜೀವಿಗಳ ಪರಿವರ್ತನೆಯು ಸಾವಿರಾರು ವರ್ಷಗಳ ಕಾಲ ವಿಕಾಸ ಹೊಂದಿ ವಿವಿಧ ಜೀವಿಗಳ ಮೂಲದಿಂದ ಅಂತಿಮವಾಗಿ ಮಾನವನ ಉಗಮವಾಗಿದೆ ಎಂಬುದು ಇತಿಹಾಸ ಮೂಲಗಳಿಂದ ತಿಳಿದು ಬಂದಿರುತ್ತದೆ. ಮಾನವನ ವಿಕಾಸವು ಸಿಂಧು ನದಿ ಕಣಿವೆಯ ನಾಗರಿಕತೆಯಿಂದ ಪ್ರಾರಂಭವಾಗಿದ್ದರಿಂದ ಹಿಂದೂದೇಶ ವೆಂದು ರೂಪುಗೊಂಡು ಇಲ್ಲಿನ ನಿವಾಸಿಗಳು ಹಿಂದೂಗಳೆಂದು ಕರೆಯಲ್ಪಡುತ್ತಾರೆ.
  • ಭೂಮಿಯ ಮೇಲೆ ಆದಿ ಮಾನವನ ಜೀವನ ಕ್ರಮವು ಪ್ರಾರಂಭವಾಗುವುದಕ್ಕೂ ಮುನ್ನ ಅಲ್ಲಲ್ಲಿ ಕೆಲವು ರಾಕ್ಷಸರು ಹುಟ್ಟಿಕೊಂಡು ಮಾನವನ ಕುಲದ ವಿಕಾಸಕ್ಕೆ ಕಂಟಕ ಪ್ರಾಯವಾಗುತ್ತದೆ ಇದರಿಂದ ಭಕ್ತಿಗೆ ನೆಲೆಯಿಲ್ಲದಂತಾಗುತ್ತದೆ ಮತ್ತು ಮನುಕುಲವು ವಿನಾಶದ ಹಾದಿ ಹಿಡಿಯುತ್ತದೆ. ಇದರಿಂದ ಆತಂಕಗೊಂಡ ವೈಕುಂಠಪತಿಯಾದ ಶ್ರೀ ವಿಷ್ಣು ಬೇರೆ ಬೇರೆ ಯುಗಗಳಲ್ಲಿ ವಿವಿಧ ಅವತಾರಗಳನೆತ್ತಿ ದುಷ್ಟ ಸಂಹಾರ ಮಾಡಿದ್ದನ್ನು 'ಋಷಿ' ಮುನಿಗಳಿಂದ ರಚಿತವಾಗಿರುವ ಪುರಾಣ ಕಥೆಗಳಿಂದ ತಿಳಿದು ಬಂದಿರುತ್ತದೆ: ದುಷ್ಟ ಸಂಹಾರವಾದ ನಂತರದಲ್ಲಿ ಭೂಮಿಯ ಮೇಲೆ ಮಾನವನ ಸಂತತಿಯು ಉಳಿದು ಬೆಳೆಯಲು ನಾಂದಿಯಾಗುತ್ತದೆ.
  • ಇವರುಗಳು ತಮ್ಮ ಕಷ್ಟ ತೊಂದರೆಗಳಿಗೆಲ್ಲ ಹೆಚ್ಚಾಗಿ ಶ್ರೀ ಪಾರ್ವತಿ ದೇವಿಯನ್ನು ವಿವಿಧ ರೂಪದಲ್ಲಿ ತಮ್ಮ ಶಕ್ತಿ ದೇವತೆಯಾಗಿ ನಂಬಿಕೆ ಭಕ್ತಿಯಿಂದ ಆರಾಧಿಸಿರುತ್ತಾರೆ. ವೈಕುಂಠಪತಿಯಿಂದ ದುಷ್ಟ ಸಂಹಾರವಾದರೂ ಸಹ, ಮಾನವರಲ್ಲಿ ಹೆಚ್ಚಾಗಿ ಹಿಂದೂಗಳಲ್ಲಿ ಸಾಮೂಹಿಕ ಪಿಡುಗು ಗಳಾದ ಅಧರ್ಮ, ಅಜ್ಞಾನ, ಅನಾಚಾರ, ದರಿದ್ರ್ಯ, ಮೂಡನಂಬಿಕೆ ಮತ್ತು ಸಾಂಕ್ರಾಮಿಕ ರೋಗಗಳೆಂಬ ಧೈತ್ಯ ಸಮಸ್ಯೆಗಳು ಜೀವಂತವಾಗಿ ಉಳಿದು ಕೊಂಡಿರುತ್ತದೆ. ಇದರಿಂದ ದೈವದ ಮೇಲೆ ಭಕ್ತಿ ಕಡಿಮೆಯಾಗಿ ಜನರಲ್ಲಿ ಲೌಕಿಕ ವಿಕಾಸವು ನಿಂತ ನೀರಾಗುತ್ತದೆ. ಆದ ಕಾರಣ ಮಾನವ ಸಂತತಿಯು ವಿನಾಶದ ಹಾದಿ ಹಿಡಿದಿರುವ ಪರಿಸ್ಥಿತಿಯನ್ನು ತಿಳಿದ ಪರಶಿವನು, ರಾಣಿಯಾದ ಶ್ರೀ ಪಾರ್ವತಿ ದೇವಿಯವರು ಮಾನವರಲ್ಲಿ ಈ ಜ್ವಲಂತ ಸಮಸ್ಯೆಗಳಿಗೆ ಆತಂಕಪಟ್ಟು ದೈವ ಭಕ್ತಿ, ಶಾಂತಿ, ನೆಮ್ಮದಿ, ಉತ್ಸಾಹದಿಂದ ಜೀವನ ಮಾಡುವ ಅವಕಾಶಗಳನ್ನು ಕಲ್ಪಿಸುವ ಸಂಕಲ್ಪ ಮಾಡಿ, ತಮ್ಮ ಪರಿಚಾರಿಕೆಯರ ಪೈಕಿ ಅರ್ಹರಾದ ೭ ಜನ ಕನ್ಯೆಯರಿಗೆ ಸರ್ವಶಕ್ತಿಯನ್ನು ಕೊಟ್ಟು ಸಪ್ತ ಮಾತೃಕೇಯರನ್ನು ಸೃಷ್ಟಿ ಮಾಡಿ, ನೀವುಗಳು ಭೂಲೋಕಕ್ಕೆ ಹೋಗಿ ಸ್ಥಳ, ಸನ್ನಿವೇಶ ಅಲ್ಲಿನ ಮಾನವರಲ್ಲಿರುವ ಆಚಾರ, ವಿಚಾರ, ನಂಬಿಕೆ ಪದ್ದತಿಗೆ ಅನುಸಾರವಾಗಿ ಬೇರೆ ಬೇರೆ ಹೆಸರುಗಳಿಂದ ಶಿಲಾ ರೂಪದಲ್ಲಿ ನೆಲೆಯಾಗಿ, ಆರಾಧಿಸಿಕೊಳ್ಳುತ್ತಾ ಅಲ್ಲಿನ ಎಲ್ಲಾ ಸಮಸ್ಯೆ ತೊಂದರೆಗಳಿಗೆ ಸ್ಪಂದಿಸುತ್ತಿರಬೇಕೆಂದು ಆದೇಶ ಮಾಡಿ, ಅಂಬಿಕಾ ಎಂಬ ಕನ್ಯಾಮಣಿಯನ್ನು ಮುಂದಿಟ್ಟು ಉಳಿದ ಆರು ಜನರನ್ನು ಈಕೆಯ ಸಂಗಡ ಕಳುಹಿಸಿಕೊಟ್ಟ ಮೇರೆಗೆ ಏಳು ಜ್ಯೋತಿ ರೂಪ ದಲ್ಲಿ ಇಹಲೋಕಾಭಿಮುಖವಾಗಿ ಹೊರಡುತ್ತಾರೆ.
  • ಇತ್ತ ಭೂಲೋಕದ ದಕ್ಷಿಣ ಕರಾವಳಿ ತೀರದ ಕೊಂಕಣ ಸೀಮೆಯಲ್ಲಿ ಒಬ್ಬ ಬೇಡನು ಹುಟ್ಟಿಕೊಂಡು ಮೂಢನಂಬಿಕೆಯಿಂದ, ಸಿಕ್ಕಿದ ಜನರನ್ನು ಕೊಲ್ಲುವುದು, ಅವರಿಂದ ದೋಚಿಕೊಂಡು ತಂದು ಜೀವನ ಮಾಡುತ್ತಿರುತ್ತಾನೆ. ಈತನ ತೊಂದರೆ ಯನ್ನು ಸಹಿಸಲಾರದೆ ನಿಗ್ರಹಕ್ಕಾಗಿ ಪ್ರತಿ ದಿನವೂ ಶಕ್ತಿ ದೇವತೆಗೆ ಮೊರೆಯಿಡುತ್ತಾರೆ. ಇದೇ ಸಂಧರ್ಭದಲ್ಲಿ ಕೈಲಾಸದಿಂದ ಹೊರಟ ಸಪ್ತಮಾತೃಕೆಯರುಗಳು ಮೊದಲು ಈ ಸ್ಥಳಕ್ಕೆ ಬಂದು ತಲುಪುತ್ತಾರೆ. ಇಲ್ಲಿಗೆ ಬಂದ ನಂತರ ಮೊದಲು ಬೇಡನನ್ನು ಬೇಟಿ ಮಾಡಿದ ಅಂಬಿಕಾ ದೇವಿಯು ಬಗೆ ಬಗೆಯಾಗಿ ಉಪದೇಶ ಮಾಡಿ ಕ್ರಮೇಣ ಪರಮ ಭಕ್ತನನ್ನಾಗಿ ಪರಿವರ್ತಿಸಿ ಹಿಂಸಾ ಮಾರ್ಗವನ್ನು ಬಿಟ್ಟು ಮನುಷ್ಯನಾಗುತ್ತಾನೆ.
  • ಇದರಿಂದ ಈತನ ಆತಂಕ ತಪ್ಪುತ್ತದೆ. ಈ ಕಾರಣಕ್ಕೆ ಕೊಲ್ಲುತ್ತಿದ್ದ ಊರು ‘ಕೊಲ್ಲೂರು' ಎಂದು ಕರೆದಿರುತ್ತಾರೆ. ದುಶ್ಚಟವನ್ನು ಪರಿವರ್ತನೆ ಮಾಡಿದ ಪ್ರೇರಣೆಯಿಂದ ಮೂಕ+ಅಂಬಿಕೆ = ಮೂಕಾಂಬಿಕೆ ಎಂತಲೂ ನೆಲೆಸಿ ಪ್ರಸಿದ್ದಿಯನ್ನು ಪಡೆದು, ಇಂದಿನ ಈ ಭಾಗದ ಜನರ, ರಾಜಕಾರಣಿಗಳ, ಕಲಾವಿದರ, ಆರಾಧ್ಯ ಧೈವವಾಗಿ ನೆಲೆಸಿರುತ್ತಾಳೆ.

*ಇದಾದ ನಂತರ ಉಳಿದ ಆರು ಜನ ಮಾತೃಕೆಯರು ಕರ್ನಾಟಕದ ಆರು ದಿಕ್ಕುಗಳನ್ನು ಹಿಡಿದು ಹೊರಟು ಸ್ತ್ರೀ ಹೆಸರಿನ ಮುಖ್ಯ ನದಿ ಪಾತ್ರದ ಮುಖ ಜಾಲ ಸೀಮೆಗಳಲ್ಲಿ ನೆಲೆಯಾಗಿ ತಮ್ಮ ಶಕ್ತಿ ಪವಾಡಗಳಿಂದ ಆ ಸ್ಥಳದ ಜನರ ಎಲ್ಲಾ ತೊಂದರೆ, ಕಷ್ಟ ಗಳನ್ನು, ಪರಿಹಾರ ಮಾಡಿ ನಂಬಿಕೆ, ಧೈವ ಭಕ್ತಿ ನೆಲೆಯಾಗುವಂತೆ ಸಂಕಲ್ಪ ಮಾಡಿ ಹೊರಟವರಲ್ಲಿ ಮೂರನೇ ಮಾತೃಕೆಯು ಅಲ್ಲಿಂದ ಉತ್ತರಾಭಿಮುಖವಾಗಿ ಹೊರಟು ಹೇಮಾವತಿ ನದಿ ತೀರದ ಈಗಿನ ಹಿರೇಬೆಳಗುಲಿ ಎಂಬ ಗ್ರಾಮದ ಊರಿನ ಗಡಿ ಪ್ರದೇಶಕ್ಕೆ ಬಂದ ನಂತರ ಗ್ರಾಮದ ಒಳಕ್ಕೆ ಪ್ರವೇಶ ಮಾಡಿದ ಕ್ರಮವು ಬಹಳ ಕುತೂಹಲ ಕಾರಿಯಾಗಿರುವ ಬಗ್ಗೆ ವಿವರವಾಗಿ ತಿಳಿಸಲಾಗಿರುತ್ತದೆ.

ಹಿರೇಬೆಳಗುಲಿಗೆ ಮೂರನೇ ಮಾತೃಕೆಯ ಪ್ರವೇಶ

[ಬದಲಾಯಿಸಿ]
  • ಹನ್ನೊಂದನೇ ಶತಮಾನದ ಆದಿ ಭಾಗದಲ್ಲಿ ನಮ್ಮ ಗ್ರಾಮಕ್ಕೆ ಯಾವಾಗಲೂ ಕ್ಷಾಮ, ಅಭಾವಗಳು, ಸಾಂಕ್ರಾಮಿಕ ರೋಗಗಳು ಮನುಷ್ಯರನ್ನು ಮತ್ತು ಜಾನುವಾರುಗಳನ್ನು ಬಲಿ ತೆಗೆದುಕೊಳ್ಳುತ್ತಿದ್ದೆವು. ಆವತ್ತಿನ ರೋಗಿಗಳಿಗೆ ಸರಿಯಾದ ಚಿಕಿತ್ಸೆ, ಮದ್ದುಗಳು ಇನ್ನೂ ಆವಿಷ್ಕಾರ ಗೊಂಡಿರ ಲಿಲ್ಲದ ಕಾರಣ ಜನರು ಮೂಢನಂಬಿಕೆಯಿಂದ ಹಾದಿ ಬೀದಿಯ ಮಾರಿ ಮಸಣಿಯರನ್ನು ಕರೆದು ಬೇವಿನ ಸೊಪ್ಪಿನಿಂದ ಮಂತ್ರ ಹಾಕಿಸುವುದು, ಶಾಸ್ತ್ರ ಕೇಳಿ ಪೂಜೆ ಹಾಕಿಸುವುದು ಮಾಡುತ್ತಿದ್ದರಿಂದ ತೊಂದರೆಗಳು, ರೋಗಗಳು ನಿಯಂತ್ರಣಕ್ಕೆ ಬಾರದೆ, ಹೆಚ್ಚಿನ ಸಂಖ್ಯೆಯಲ್ಲಿ ಜನ, ಜಾನುವಾರುಗಳು ಸಾವಿಗೆ ತುತ್ತಾಗುತ್ತಿದ್ದವು. ಇದರಿಂದ ಪ್ರಕೃತಿಯ ಸಮತೋಲನವು ತಪ್ಪುತ್ತಾ ಬರುತ್ತದೆ.
  • ಈ ಪರಿಸ್ಥಿತಿಯಲ್ಲಿ ಜನರಲ್ಲಿ ಭಯ, ಭೀತಿ, ಧಾರಿದ್ರ್ಯ ಹೆಚ್ಚಾಗುತ್ತದೆ. ನೆಮ್ಮದಿಯಾಗಿ ಜೀವನ ಮಾಡಲು ಆಸೆ, ಉತ್ಸಾಹಗಳು ಇರುತ್ತಿರಲಿಲ್ಲವಾದ ಕಾರಣ ಕೆಲವರು ಉದ್ಯೋಗವನ್ನು ಹುಡುಕಿಕೊಂಡು ಬೇರೆ ಕಡೆಗೆ ವಲಸೆ ಹೋಗುತ್ತಿದ್ದರು. ದೈರ್ಯ ಮಾಡಿ ಉಳಿದವರು ಕೂಲಿ ಸಣ್ಣ ಪುಟ್ಟ ವ್ಯಾಪಾರವನ್ನು ಮಾಡಿಕೊಂಡು ಜೀವನವನ್ನು ಸಾಗಿಸುವುದು ಅನಿವಾರ್ಯವಾಗಿದ್ದಿತ್ತು. ಆಗಿನ ಕಾಲದಲ್ಲಿ ಹತ್ತಿರದಲ್ಲಿ ಅಂಗಡಿಗಳಾಗಲಿ, ಪೇಟೆಗಳಾಗಲಿ ಇರುತ್ತಿರಲಿಲ್ಲದ ಕಾರಣ, ತಾವು ಬೆಳೆದ ರಾಗಿ ನವಣೆ, ಹುರುಳಿ, ಮುಂತಾದ ಕೃಷಿ ಉತ್ಪನ್ನಗಳನ್ನು ಅಲ್ಲಲ್ಲಿ ಸೇರುತ್ತಿದ್ದ ವಾರದ ಸಂತೆಗಳಲ್ಲಿ ಸರಕು ವಿನಿಮಯ ಮಾಡಿಕೊಳ್ಳುವುದು ಸಾಗಿಕೊಂಡು ಬರುತ್ತಿತ್ತು.
  • ಇಂದಿಗೆ ಇಪ್ಪತೊಂದನೆ ತಲೆಮಾರಿನವರಾದ ಈ ಗ್ರಾಮದ ಹಿರಿಯರಾಗಿದ್ದ ಶ್ರೀ ಹಲಗೇಗೌಡ ಎಂಬುವವರು ಇದ್ದವರ ಪೈಕಿ ಧೃಡ ಕಾಯಾಕರು, ದೈವ ಭಕ್ಟರು, ವ್ಯವಹಾರ ಚತುರರು ಆಗಿದ್ದರು. ಆ ಕಾಲದಲ್ಲಿ ಇಲ್ಲಿ ಬೆಳೆಯುತ್ತಿದ್ದ ರಾಗಿ, ಹುರುಳಿ, ನವಣೆ, ಅವರೇ ಮುಂತಾದ ಧಾನ್ಯ ಗಳನ್ನು ವ್ಯಾಪಾರ ಮಾಡಿಕೊಂಡು ತಮ್ಮ ಜೀವನವನ್ನು ಸಾಗಿಸುತ್ತಿದ್ದರು. ಮಾಮೂಲಿನಂತೆ ಒಂದು ಗುರುವಾರ ದಿನ, ಇಲ್ಲಿಗೆ ನಾಲ್ಕು ಮೈಲಿ ದೂರದ ಗುಡ್ಡದ ತಪ್ಪಲಿನ ಈಗಿನ ಕುಂಚೇವು ಎಂಬ ಗ್ರಾಮದ ಹತ್ತಿರ ವಿಶಾಲವಾದ ಮೈದಾನದಲ್ಲಿ ಸೇರುತ್ತಿದ್ದ ಸಂತೆಗೆ ಕಾಲುನಡಿಗೆಯಲ್ಲಿ ರಾಗಿ ಚೀಲವನ್ನು ಹೊತ್ತುಕೊಂಡು ಹೋಗುತಿದ್ದರು. ಆ ಕಾಲದಲ್ಲಿ ಎತ್ತಿನ ಗಾಡಿಗಳಾಗಲಿ, ಇತರೆ ವಾಹನಗಳು ಆವಿಷ್ಕಾರ ಗೊಂಡಿರಲಿಲ್ಲವಾದ್ದರಿಂದ ಕಾಲ್ನಡಿಗೆ ಅನಿವಾರ್ಯವಾಗಿತ್ತು.
  • ಆ ದಿನದ ಸಂತೆಯಲ್ಲಿ ಗೌಡರ ಮಾಲು ಪೂರ ಖರ್ಚಾಗದೆ ಉಳಿದು ಬಿಡುತ್ತದೆ : ಉಳಿದಿದ್ದ ರಾಗಿ ಚೀಲವನ್ನು ಹೊತ್ತುಕೊಂಡು ಊರು ಕಡೆಗೆ ವಾಪಸ್ಸು ಬರಲು ಸ್ವಲ್ಪ ತಡವಾಗುತ್ತದೆ. ನಮ್ಮ ಗ್ರಾಮಕ್ಕೆ ಹತ್ತಿರದ ಈಗಿನ ಕೆರೆಕೋಡಿ ಇರುವ ಜಾಗವು ತುಂಬಾ ತಗ್ಗು ಪ್ರದೇಶವಾಗಿ ತ್ತು. ಆಗ ಕೆರೆ ಇರಲಿಲ್ಲ ಬೆಟ್ಟದ ತಪ್ಪಲಿನಿಂದ ಹುಟ್ಟಿದ ಒಂದು ನೀರಿನ ಹಳ್ಳ ಹರಿಯುತಲಿದ್ದಿತ್ತು. ಈ ಜಾಗಕ್ಕೆ ಹಲಗೆ ಗೌಡರು ರಾಗಿ ಚೀಲವನ್ನು ಕೆಳಕ್ಕೆ ಇಟ್ಟು ಬಹಿರ್ದೆಶೆಗೆ ಹೋಗಿ ಬಂದು ದೇಹಶೌಚ ಮಾಡಿಕೊಂಡು ಹಳ್ಳದ ಸ್ವಲ್ಪ ಮೇಲುಭಾಗಕ್ಕೆ ಹೋಗಿ ಮುಖ ಕೈಕಾಲು ತೊಳೆದು ಕೊಂಡು ನೀರನ್ನು ತಲೆ ಮೇಲಕ್ಕೆ ಪ್ರೋಕ್ಷಣೆ ಮಾಡಿಕೊಂಡು ಮನೆಕಡೆಗೆ ಹೊರಡುವುದು ಇವರ ಮಾಮೂಲಿ ಪದ್ದತಿಯಾಗಿತ್ತು.
  • ಈ ದಿನವೂ ಅದೇ ನಿಯಮಗಳನ್ನೆಲ್ಲ ಮಾಡಿಕೊಂಡು ಚೀಲವನ್ನು ಹೆಗಲಿಗೇರಿಸಿ ಹೊರಡಲು ಸಿದ್ದರಾದಾಗ ‘ನಾನು ಬರುತ್ತೇನೆ' ಎಂಬ ಅಶರೀರವಾಣಿಯು ಕೇಳಿ ಬರುತ್ತದೆ. ಹಿಂದಿನ ವಾರಗಳಲ್ಲಿ ಈ ಜಾಗಕ್ಕೆ ಬಂದಾಗ ಈ ಅನುಭವ ಆಗಿರುವುದಿಲ್ಲ; ಈಗ ಗೌಡರು ಸ್ವಲ್ಪ ಧೈರ್ಯ ಗೆಡುತ್ತಾರೆ. ಸುತ್ತಲೂ ಕತ್ತಲು ಆವರಿಸಿದೆ ನರ ಸಂಚಾರವಿಲ್ಲ ಅಲ್ಲಲ್ಲಿ ಜೀರುಂಡೆಗಳ ಜೂಕರ, ನರಿಗಳು ಗುಳಿಡುವಿಕೆ, ಗೂಬೆಗಳು ಉಲಿಯುವಿಕೆ ಮರಗಳ ಮೇಲೆ ಬಾವುಲಿಗಳ ನಲಿಯುವಿಕೆ. ಇವುಗಳು ಮಾಮೂಲಿನ ಶಕುನಗಳು; ಆದರೆ ಈ ದಿನ ಈ ವಿಸ್ಮಯದಿಂದ ಭಯವುಂಟಾಗು ತ್ತದೆ. ಸ್ವಲ್ಪ ಕಣ್ಣು ಕವಿದಂತಾಗುತ್ತದೆ. ಮೈ ಬೆವರುತ್ತದೆ. ಪುನಃ ಅದೇ ಅಶರಿರವಾಣಿಯು ಹಳ್ಳದ ಮೇಲುಭಾಗದಿಂದ ಕೇಳಿ ಬರುತ್ತದೆ.
  • ಇವರ ಪರಿಸ್ಥಿತಿಯನ್ನು ಅರಿತ ಆಗಂತಕರು, ಗೌಡರೇ ಹೆದರ ಬೇಡಿ ನಾನು ಒಬ್ಬ ರಕ್ಷಾದೇವತೆ ಕೊಂಕಣ ದೇಶದಿಂದ ಇಲ್ಲಿಗೆ ಬಂದಿರುತ್ತೇನೆ. ಈ ಮದ್ಯೆ ಎಲ್ಲೂ ಸರಿಯಾದ ನೆಲೆ ಸಿಗದೆ ಹೋದ ಕಾರಣ ಶರಣರು ಮುಟ್ಟಿದ ನಿಮ್ಮ ಗ್ರಾಮವು ಪವಿತ್ರ ತಾಣವೆಂದು ಇಲ್ಲಿಗೆ ಬಂದಿ ರುತ್ತೇನೆ. ಹರಿಯುತ್ತಿರುವ ಹಳ್ಳದ ಬಲಭಾಗದ ನೀರಿನ ದಡದ ಮೇಲೆ ಮೂರು ರೂಪಿತ ಕಪ್ಪು ಶಿಲೆಗಳೊಳಗೆ ಜ್ಯೋತಿ ರೂಪದಲ್ಲಿ ಲೀನಳಾಗಿರುತ್ತೇನೆ. ಬಹಳ ಹೊತ್ತಿನಿಂದ ಇಲ್ಲಿಗೆ ಬಂದು ಕಾದು ಕುಳಿತ್ತಿದ್ದೇನೆ. ಈ ಮುಂಚೆ ಈ ಸ್ಥಳಕ್ಕೆ ಬಂದು ಹೋದ ಯಾವ ದಾರಿಹೋಕನು ನಿಮ್ಮ ಹಾಗೆ ಸಂಧ್ಯಾವಿಧಿಗಳನ್ನು ಮಾಡಲಿಲ್ಲ. ನಿಮ್ಮ ನಿಯಮಗಳಿಂದ ಆಚಾರವಂತರು, ದೈವ ಭಕ್ತರು ಆಗಿರುವುದನ್ನು ಮನಗಂಡು ನಿಮ್ಮ ಮುಖಾಂತರ ಗ್ರಾಮದ ಒಳಗೆ ಪ್ರವೇಶಿಸಿ ನೆಲೆಯಾಗಿರಲು ಆಪೇಕ್ಷೇಪಟ್ಟು ಬಂದಿರುತ್ತೇನೆ;
  • ನಿಮ್ಮ ಗ್ರಾಮವು ಪವಿತ್ರ ನದಿ ಉತ್ತಮ ಪರಿಸರ ಋಷಿ ಮುನಿಗಳ ತಪೋಭೂಮಿಯಾಗಿರುವುದರಿಂದ ಭಕ್ತರ ಸಂಖ್ಯೆ ಹೆಚ್ಚಗಿರಬಹುದು ಹಾಗೂ ಶಾಂತಿ ಪ್ರೀಯರೆಂದು ಊಹಿಸಿರುತ್ತೇನೆ; ಆದ್ದರಿಂದ ಇಲ್ಲಿ ನೆಲಸಿ ಜನ, ಜಾನುವಾರುಗಳ ನೆಮ್ಮದಿಗೆ ಮಾರಕವಾಗಿರುವ ದುಷ್ಟಮಾರಿಗಳನೆಲ್ಲ ಹೊರಕ್ಕೆ ಹಾಕಿ, ದಾರಿದ್ರ್ಯವನ್ನು ದೂರ ಮಾಡಿ ಗ್ರಾಮದಲ್ಲಿ ಸುಖ, ಶಾಂತಿ ನೆಲಸುವಂತೆ ಮಾಡುವ ಸಂಕಲ್ಪದಿಂದ ಬಂದಿರುತ್ತೇನೆ; ನನ್ನ ವಿವಿಧ ಶಕ್ತಿಗಳ ಸಂಕೇತವಾಗಿರುವ ಈ ಮೂರು ಶೀಲಾಮೂರ್ತಿಗಳನ್ನು ಸಂತೆಯಿಂದ ಉಳಿದು ತಂದಿರುವ ರಾಗಿ ಚೀಲದೊಳಕ್ಕೆ ಇಟ್ಟು, ತೆಗೆದು ಕೊಂಡು ಹೋಗಿ ನಿಮ್ಮ ಮನೆಯಲ್ಲಿ ಅದೇ ಚೀಲದ ಒಳಗಡೆ ಇಡಬೇಕು. ಈ ವಿಚಾರ ರಾತ್ರಿ ಇಡೀ ಗುಪ್ತವಾಗಿರಬೇಕು. ನಂತರ ನನ್ನಲಿರುವ ಮೂರು ಶಕ್ತಿಗಳ ಮಹತ್ವವನ್ನು ತಿಳಿಸುತ್ತೇನೆ ಎಂಬ ಅಭಯವಾಣಿ ಕೇಳಿ ಬಂದ ಮೇಲೆ ದೈವ ಪ್ರೇರಣೆಯಾದಂತೆ ಧೈರ್ಯ, ಭಕ್ತಿ ಉಂಟಾಗು ತ್ತದೆ.
  • ಆ ದಿನ ಜೇಷ್ಠ ಮಾಸದ ಶುಕ್ಲಪಕ್ಷ ಷಷ್ಠಿ ದಿನವಾಗಿದ್ದರಿಂದ ಚಂದ್ರನ ಹೊಂಬೆಳಕಿನೊಂದಿಗೆ ಪ್ರಕಾಶಿಸುತ್ತಿದ್ದ ನಕ್ಷತ್ರಗಳ ಕುಡಿಬೆಳಕಿನಲ್ಲಿ ಮಿಣುಕು ಹುಳಗಳ ತುಣುಕು ಬೆಳಕಿನಂತೆ ಹೊಳೆಯುತ್ತಿದ್ದ ಶಿಲಾರೂಪದಲ್ಲಿದ್ದ ದೇವಿಯ ಹತ್ತಿರಕ್ಕೆ ಬಂದು ಭಕ್ತಿಯಿಂದ ನಮಸ್ಕರಿಸಿ ಅಪ್ಪಣೆಯಾಗಿದ್ದಂತೆ ಮೂರು ಪ್ರತಿಮೆಗಳನ್ನು ಮೇಲಕ್ಕೆತ್ತಿ ರಾಗಿ ಚೀಲದಲ್ಲಿ ಇಟ್ಟುಕೊಂಡು ತಮ್ಮ ಮನೆಗೆ ಆಹ್ವಾನಿಸುತ್ತಾರೆ ಮತ್ತು ಬೆಳಕಾಗುವವರೆಗೂ ಈ ವಿಚಾರವನ್ನು ನಿಗೂಢವಾಗಿ ಇಡುತ್ತಾರೆ. ಮನೆಗೆ ಬಂದ ನಂತರ ಶ್ರೀ ಹಲಗೇಗೌಡರಿಗೆ ಭಯ, ಆತಂಕ ಹಾಗೂ ದಿಗುಲು ಉಂಟಾಗುತ್ತದೆ; ಕಾರಣ ದಾರಿಯಲ್ಲಿ ಹೋಗುತ್ತಿದ್ದ ಯಾವನೋ (ಮಾರಿಯನ್ನು ಮನೆಗೆ ಕರೆದುಕೊಂಡು ಬಂದಿರುವುದರಿಂದ ಮುಂದೆ ಏನೋ ಎಂತೋ ?) ಎಂಬ ಸಂಶಯ ಕಾಡುತ್ತದೆ.
  • ರಾತ್ರಿ ಊಟವನ್ನು ಮಾಡಲಿಲ್ಲ ಆವೇಶ ಬಂದವರಂತೆ ಮೌನವಹಿಸುತ್ತಾರೆ ಮಡದಿ ಶಿವಮ್ಮನಿಗೆ ಅನುಮಾನ ಬಂದು ವಿಚಾರಿಸಲಾಗಿ ನನಗೆ ಹಸಿವಿಲ್ಲ ಸಂತೆಯಲ್ಲಿ ಪಾಲಾಹಾರ ಸೇವಿಸಿ ಬಂದಿದ್ದೇನೆ ಈ ದಿನ ಒಂಟಿಯಾಗಿ ಮಲಗಲು ಬಿಡಿ ತುಂಬಾ ಆಯಾಸವಾಗಿದೆ ಎಂದು ಹೇಳಿ ತಾವು ಮಲಗುತ್ತಿದ್ದ ಕೊಣೆಗೆ ಹೋಗಿ ಚಾಪೆಯ ಮೇಲೆ ಮಲಗಿ ಬಿಡುತ್ತಾರೆ; ಆದರೂ ಮನಸ್ಸಿಗೆ ಬಹಳ ದುಗುಡವುಂಟಾಗಿದ್ದರಿಂದ ನಿದ್ರೆ ಹತ್ತಲಿಲ್ಲ ಹಾಗೇ ಯೋಚಿಸುತ್ತಾ ಭಾವನಾಲೂಕದಲ್ಲಿ ಲೀನರಾಗಿದ್ದಾಗ ಸ್ವಲ್ಪ ಜೊಂಪುಬರುತ್ತದೆ. ಆಗ ಶ್ರೀ ದೇವಿಯವರು ಛಾಯಾ ರೂಪದಲ್ಲಿ ಗೌಡರ ಮನಸ್ಸಿನ ಮೇಲೆ ಬಂದು ಹೇಳಿದಂತೆ ನಾನು ಜಗನ್ಮಾತೆ ಪಾರ್ವತಿದೇವಿಯವರ ವರಕನ್ಯೆ ಧೈವ ಸಂಕೇತವಾದ ಆಕಾರಗೊಂಡಿರುವ ಮೂರು ಕಪ್ಪು ಶೀಲಾ ಪ್ರತಿಮೆ ರೂಪದಲ್ಲಿ ಈ ಗ್ರಾಮಕ್ಕೆ ನೆಲಸುವ ಆಕಾಂಕ್ಷಿಯಾಗಿ ಬಂದಿರುತ್ತೇನೆ;
  • ನೀವು ಹಳ್ಳದ ನೀರಿನಲ್ಲಿ ಉತ್ತರಕ್ಕೆ ಮುಖ ಮಾಡಿ ನಿಂತಿದ್ದಾಗ ಮಧ್ಯಭಾಗದಲ್ಲಿ ಹೊಳೆಯುತ್ತಿದ್ದ ದೊಡ್ಡ ಪ್ರತಿಮೆಯೊಳಗೆ ಲೀನಗೊಂಡಿರುವ ನನ್ನ ಮೂಲ ನಾಮಧೇಯ ಶ್ರೀ ಉಡಿಶೀಲಮ್ಮ ನೆಂದು ನನ್ನ ಬಲಭಾಗಕ್ಕೆ ಇದ್ದ ಪ್ರತಿಮೆಯೊಳಗೆ ನನ್ನ ಇಷ್ಟೊಂದು ಶಕ್ತಿ ಮಾರಿಕಾಂಬೆ ಎಂಬುದಾಗಿಯೂ ಮತ್ತು ನನ್ನ ಎಡಭಾಗಕ್ಕೆ ಇರುವ ಪ್ರತಿಮೆಯೊಳಗೆ ಮೂರನೆ ಶಕ್ತಿಯಾಗಿ ಶ್ರೀ ದೇವಿರಮ್ಮನೆಂತಲೂ, ಜ್ಯೋತಿ ರೂಪದಲ್ಲಿ ಲೀನಗೊಂಡಿರುವ; ಈ ಮೂರು ವಿವಿಧ ಶಕ್ತಿಯನ್ನು ಹೊಂದಿದ್ದು ನಿಮ್ಮ ಗ್ರಾಮದಲ್ಲಿ ಗ್ರಾಮದೇವತೆ ಎಂಬ ನಾಮಸ್ಮರಣೆಯಿಂದ ಕರೆಸಿ ಕೊಳ್ಳು ತ್ತೇನೆ.
  • ಹಳ್ಳದ ನೀರಿನ ದಡದಲ್ಲಿ ಯಾವ ರೀತಿಯಲ್ಲಿ ಕುಳಿತ್ತಿದ್ದಾನೋ ಹಾಗೆ ಶ್ರೀ ಉಡಿಶೀಲಮ್ಮ ಎಂಬ ನಾಮೋಂಕಿತದ ದೊಡ್ಡದಾಗಿರುವ ಶೀಲಾ ಪ್ರತಿಮೆಯನ್ನು ಮಧ್ಯಭಾಗಕ್ಕೂ ಗ್ರಾಮದಲ್ಲಿನ ಎಲ್ಲಾ ಸಮಸ್ಯೆಗಳಿಗೂ ಸ್ಪಂದಿಸಲು ಅನುಕೂಲವಾಗಿರುವ ಹಾಗೆ ತಲೆಯ ಭಾಗವು ಮತ್ತವಾಗಿರುವ ನನ್ನ ಎರಡನೇ ಶಕ್ತಿ ಶೀಲಾ ಪ್ರತಿಮೆಯನ್ನು ನನ್ನ ಬಲಭಾಗಕ್ಕೂ ನನ್ನ ಕರುಣೆ ತೀಕ್ಷ್ಣ ದೃಷ್ಠಿಯ ಸಂಕೇತವಾಗಿರುವ ತಲೆಯ ಭಾಗವು ಸ್ವಲ್ಪ ನನ್ನ ಕರುಣೆ, ತೀಕ್ಷ್ಣ ದೃಷ್ಟಿಯ ಸಂಕೇತವಾಗಿ ತಲೆಯ ಭಾಗವು ಸ್ವಲ್ಪ ಮೊನಚಾಗಿರುವ ಮೂರನೇ ಶಕ್ತಿಯ ಶೀಲಾ ಪ್ರತಿಮೆಯನ್ನು ಎಡ ಭಾಗಕ್ಕೂ, ಗ್ರಾಮದ ಮೂರು ರಸ್ತೆಗಳು ಕೂಡುವ ಜಾಗದಲ್ಲಿ ಬೆಳೆದು ನಿಂತಿರುವ ವಿಶಾಲವಾದ ವಟವೃಕ್ಷ (ಆಲದಮರ) ದ ಕೆಳಕ್ಕೆ ನಿಮ್ಮ ಅನುಭವದಲ್ಲಿರುವ ದೇವರ ಬನ ದಲ್ಲಿ ಪೂರ್ವಾಭಿಮುಖವಾಗಿ ಸ್ಥಾಪನೆ ಮಾಡಬೇಕು.
  • ನಾಳೆಯಿಂದ ಜೇಷ್ಠ ಮಾಸದ ಸಪ್ತಮಿ ತಿಥಿ ರೋಹಿಣಿ ನಕ್ಷತ್ರವಿದ್ದು ಶುದ್ಧ ಶುಕ್ರವಾರ ವಿರುವುದರಿಂದ ಬಹಳ ಶುಭವಾಗಿರುತ್ತದೆ. ಈ ದಿನ ಉದಯ ವೇಳೆಯಲ್ಲಿ ಸೂರ್ಯ ದೇವನ ಹೊಂಗಿರಣಗಳು, ನನ್ನ ಪ್ರತಿಮೆಗಳ ಮೇಲೆ ಬೀಳುವುದರಿಂದ ಇನ್ನೂ ಹೆಚ್ಚಿನ ಯೋಗ ಶಕ್ತಿ ಲಬಿಸುತ್ತದೆ ಹಾಗೂ ಸೌಂದರ್ಯ ಪ್ರಭಾವಗಳು ಮೈಗೂಡಿಕೊಳ್ಳುತ್ತದೆ; ಎಂದು ಆದೇಶವಾಗುತ್ತದೆ.

ಮೂರ್ತಿ ಪ್ರತಿಷ್ಠಾಪನೆ

[ಬದಲಾಯಿಸಿ]
  • ನೀವು ಬ್ರಾಹ್ಮೀಕಾಲದಲ್ಲಿ ಎದ್ದು ನಿಮ್ಮ ನಿತ್ಯ ಕರ್ತವ್ಯಗಳನೆಲ್ಲ ಮುಗಿಸಿ ಸ್ನಾನಾದಿ ನಿಯಮಗಳನೆಲ್ಲ ಮಾಡಿಕೊಂಡು ನಂತರ ನನ್ನ ಶಕ್ತಿಯ ಶಿಲಾಪ್ರತಿಮೆಗಳನ್ನು ರಾಗಿ ಚೀಲದಿಂದ ಹೊರಕ್ಕೆ ತೆಗದು ಒಂದು ದೊಡ್ಡ ಹರಿವಾಣದಲ್ಲಿಟ್ಟು ಮನೆಯಲ್ಲಿರುವ ಎಳ್ಳು ಎಣ್ಣೆಯನ್ನು ಹಚ್ಚಿ ಚೆನ್ನಾಗಿ ಮಜ್ಜನ ಮಾಡಿರಿ. ಕೆಲವು ಸಮಯ ಬಿಟ್ಟು ನಿರ್ಣಾಯಕವಾಗಿ ಅಭಿಷೇಕದ ಪರಿಕರಗಳನ್ನು ಬಳಸಿ ಕಳಾನಭಿಷೇಕ ಮಾಡಿರಿ. ಆಗ ನನ್ನ ಪ್ರತಿಮೆಗಳೊಳಗೆ ಚೀತ್ಕಳೆ(ಜ್ಯೋತಿ) ಕಾಣುತ್ತದೆ. ಈ ಚೀತ್ಕಳೆಯನ್ನು ತದೇಕ ದ್ರ್ ಷ್ಟಿ ಯಿಂದ ನೋಡುತ್ತಿದ್ದರೆ, ಅದರೊಳಗೆ ನನ್ನ ಸುಂದರ ರೂಪವು ಕಾಣುತ್ತದೆ. ಕಾರಣ ಪೂಜಾ ವೇಳೆಯಲ್ಲಿ ಮಜ್ಜನ ಮಾಡಿ, ಅಭಿಷೇಕ ಮಾಡಿ ಆರಾಧಿಸುವುದು ಸೂಕ್ತವಾದುದ್ದು.
  • ನಂತರ ಕುಲ ಪುರೋಹಿತರ ಮಂತ್ರ ಘೋಷಣೆಯೊಂದಿಗೆ ವಿಧಿ ವಿಧಾನಗಳ ಪ್ರಕಾರ ಧೈವ ಶಕ್ತಿಯನ್ನು ಪ್ರತಿಮೆಗಳಿಗೆ ಕೊಟ್ಟು ನಿಮ್ಮ ಮನೆಯಲ್ಲಿ ಅವುಗಳಿಗೆ ಪೂಜೆಯನ್ನು ಮಾಡಿ ತಳಿಗೆ ಅರ್ಪಿಸಿದರೆ ತೃಪ್ತಳಾಗುತ್ತೇನೆ. ಈ ಎಲ್ಲಾ ಪ್ರಕ್ರಿಯೆಗಳು ಬೆಳಗಿನ ೬-೩೦ ಘಂಟೆ ಗೊಳಗಾಗಿ ಮುಗಿಸಬೇಕು ಎಂದು ತಮ್ಮ ಸ್ಥಾಪನೆಯ ವಿಧಾನಗಳನ್ನೆಲ್ಲ ತಿಳಿಸಿದಂತಾದ ಮೇಲೆ, ತನ್ನಲ್ಲಿರುವ ಮೂರು ಶಕ್ತಿ ಪ್ರಭಾವಗಳ ಬಗ್ಗೆ ಹೇಳುತ್ತಾ- ಯಾರು ಶ್ರದ್ದೆ, ಪ್ರಭಾವ ಗಳ ಬಗ್ಗೆ ಹೇಳುತ್ತಾ ಯಾರು ಶ್ರದ್ದೆ, ಭಕ್ತಿ, ನಂಬಿಕೆಯಿಂದ ನನ್ನನ್ನು ಆರಾಧಿಸುತ್ತಾರೋ ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಕಂಕಣ ಭಾಗ್ಯ, ಉತ್ತಮ ದಾಂಪತ್ಯ ಭಾಗ್ಯ ಹಾಗೂ ಸಮೃದ್ದ ಜೀವನವನ್ನು ಕೊಡುತ್ತೇನೆ.
  • ಶ್ರೀ ಉಡಿಶೀಲಮ್ಮ ಶಕ್ತಿಯಾಗಿಯೂ ನನ್ನ ಬಗ್ಗೆ ಉತ್ತಮ ಆಚಾರ, ನಿಷ್ಟೆಯಿಂದ ಸೇವೆಯನ್ನು ಮಾಡುತ್ತಾರೋ, ಅಂತಹವರನ್ನು ಕಾಡುವ ದುಷ್ಟ ಪಿಡುಗುಗಳಾದ ಸಾಂಕ್ರಾಮಿಕ ರೋಗಗಳಿಗೆ ಕಾರಣವಾದ ದುಷ್ಟ ಮಾರಿಗಳನ್ನು ಹೊರ ಹಾಕುವ ಎರಡನೇ ಶಕ್ತಿ ಶ್ರೀ ಮಾರಿಕಾಂಬೆ ಯಾಗಿಯೂ ಗ್ರಾಮದಲ್ಲಿ ತಾಂಡವ ಮಾಡುತ್ತಿರುವ ಅಜ್ಞಾನ, ಧಾರಿದ್ರ್ಯ, ಮೂಢನಂಬಿಕೆ ಮತ್ತು ಅಭಾವಗಳನ್ನು ನಿವಾರಣೆ ಮಾಡಿ ಆರೋಗ್ಯ ಸಮೃದ್ದಿ ಸುಜ್ಞಾನವನ್ನು ಮೂರನೇ ಶಕ್ತಿಯಾಗಿ ಶ್ರೀ ದೇವೀರಮ್ಮ ನಾಗಿಯೂ ಕರ್ತವ್ಯಗಳನ್ನು ಕಾಲ ಕಾಲಕ್ಕೆ ನಿರ್ವಹಿಸುತ್ತಿರುತ್ತೇನೆ.

ನನ್ನನ್ನು ನಿಮ್ಮ ಗ್ರಾಮದಲ್ಲಿ ಸ್ಥಾಪನೆ ಮಾಡಿದ ದಿನದಿಂದ ಪ್ರತಿ ವರ್ಷವೂ 'ಬಂಡಿ ಹಬ್ಬ' ಎಂದು ಪರಿಷೆಯನ್ನು ಮಾಡಿ.

  • ಆ ಒಂದು ವರ್ಷದಲ್ಲಿ ಅನಧಿಕೃತವಾಗಿ ಗ್ರಾಮದ ಒಳಗಡೆಗೆ ನುಸುಳಿ ಬಂದು ಜನ, ಜಾನುವಾರುಗಳು ಕಾಡುವ ಎಲ್ಲ ದುಷ್ಟ ಮಾರಿಗಳನ್ನು ತಮಟೆ ವಾದ್ಯ ಶಬ್ದ ಗಳಿಂದ ಎಚ್ಚಿಸಿ, ಅವುಗಳನೆಲ್ಲ ಊರಿನ ಹೆಬ್ಬಾಗಿಲಿಗೆ ಕರೆತಂದು ಸಿದ್ದ ಮಾಡಿದ ಬಂಡಿಯಲ್ಲಿ ತುಂಬಿ ಮಾರಿಗಳಿಗೆ ಪ್ರಿಯ ವಾದ ಬಿಳಿ ಬಣ್ಣದ ಬಟ್ಟೆಯಿಂದ ಕೆಳಕ್ಕೆ ಜಿಗಿಯದಂತೆ ಬಂದಿಸಿ ಇವುಗಳಿಗೆ ಪ್ರಿಯವಾದ ಖಂಡಾ ಹಾರದ ತದ್ರೂಪ ಶಾವಿಗೆ ಪರ್ಪನ್ನು ಎಡೆ ಇತ್ತು ಪೂಜಿಸಿ ಕೂಸ್ಮಂಡದಿಂದ ಬಂಡಿಗೆ ದಿಗ್ಬಾಂದನಮಾಡಿ ಅದನ್ನು ಬಲಿಕೊಟ್ಟು ನಂತರ ಗಾಡಿಯಲ್ಲಿ ಭದ್ರಗೊಳಿಸಿ ಹಳ್ಳಿವಾದ್ಯ ಪ್ರತಿ ಮನೆಯ ಎಡೆಯನ್ನು ಹೊತ್ತ ಭಕ್ತರು ಬಂಡಿಯನ್ನು ಸುತ್ತುವರಿದು, ಎಳೆದು ತಂದು ನನ್ನ ಸನ್ನಿಧಿಗೆ ಒಪ್ಪಿಸಿ;
  • ಇವುಗಳು ನನ್ನ ಹಿಡಿತಕ್ಕೆ ಬಂದ ಮೇಲೆ ಭಕ್ತರು ತಂದ ಶಾವಿಗೆ ಪರ್ಪನ್ನು ೧೦೧ ಮಾರಿಗಳಿಗೆ ಎಡೆ ಇತ್ತು ಪೂಜಿಸಿ ನಮ್ಮ ಮನೆಯ ಕಷ್ಟಕ್ಕೆ ಬರಬೇಡ ಸುಖಕ್ಕೆ ಬಾ ಎಂದು ಪ್ರಾರ್ಥನೆಯ ಮಾಡಿ ಈ ಮಾರಿಗಳಿಗೆ ಆರ್ಫಿಸಿದರೆ; ತೃಪ್ತಗೊಳ್ಳುತ್ತಾರೆ ನಂತರ ಇವರನ್ನೆಲ್ಲ ಗ್ರಾಮದಿಂದ ಹೊರಕ್ಕೆ ಓಡಿಸಿ ಜನ, ಜಾನುವಾರುಗಳು ಆರೋಗ್ಯ ನೆಮ್ಮದಿಯಿಂದ ಇರುವಂತೆ ಬೆಂಗಾವಲಾಗಿರುತ್ತೇನೆ ಇಂದಿನ ದಿನದಿಂದ ನಿಮ್ಮ ಸಂತತಿಯವರು ಪ್ರತಿ ಶುಕ್ರವಾರ ತಪ್ಪದೆ ನನಗೆ ಪೂಜೆ, ನೈವೇದ್ಯ, ಸಲ್ಲಿಸಲು ಕ್ರಮವು ನಿರಂತರ ವಾಗಿ ನೆಡೆದುಕೊಂಡು ಬರಬೇಕು, ನನ್ನನ್ನು ಆರಾಧಿಸುವ ವಿಷಯದಲ್ಲಿ ಯಾರು ಅಲಕ್ಷ ಮಾಡುತ್ತಾರೋ ಅಂತವರನ್ನು ನಾನು ಸಹ ಅಲಕ್ಷ ಮಾಡುತ್ತೇನೆ ಎಂಬ ಎಚ್ಚರಿಕೆಯ ಮಾತುಗಳನ್ನು ಹೇಳಿ ನಾನು ಪ್ರಸ್ತುತ ಪಡಿಸಿರುವ ಎಲ್ಲ ನಿಯಮಗಳನ್ನು ಕೊಡಲೇ ಕಾರ್ಯರೂಪಕ್ಕೆ ತರಲು ಗೌಡರಿಗೆ ಶಕ್ತಿ, ಜ್ಞಾನವನ್ನು ಕೊಟ್ಟು ಅದೃಶ್ಯ ವಾದಂತೆ ಪ್ರೇರಣೆಯಾಗುತ್ತದೆ.
  • ಆ ರಾತ್ರಿ ಎಲ್ಲ ಶ್ರೀ ದೇವಿಯವರು ಹಲಗೇಗೌಡರ ಕನಸಿಗೆ ಆವೇಶವಾಗಿ ಬಂದು ಎಲ್ಲ ವಿಷಯಗಳನ್ನು ತಿಳಿಸಿದ ವಿಸ್ಮಯವನ್ನು ತಿಳಿದು, ಜಾಗೃತವಸ್ಥೆಗೆ ಬಂದ ಕೂಡಲೇ ಎಚ್ಚರ ಉಂಟಾಗುತ್ತದೆ; ಕೂಡಲೇ ಎದ್ದು ಹೊರಕ್ಕೆ ಬಂದು ನೋಡುತ್ತಾರೆ ಎಲ್ಲವೂ ಯಥಾಸ್ತಿತಿ ಆಗಲೇ ಮೂಡಣ ಕೆಂಪಾಗಿದ್ದು ದಿನಕರನ ಆಗಮನದ ಛಾಯೆ ಕಂಡು ಬರುತ್ತದೆ. ರಾತ್ರಿ ಇಡೀ ಕಂಡ ಸಂಗತಿ ಇಂದ ತುಂಬಾ ಭಾವುಕರಾಗಿ ಶ್ರದ್ದಾ ಭಕ್ತಿಯಿಂದ ಕಾರ್ಯೋನ್ಮುಖರಾಗುತ್ತಾರೆ. ತಮ್ಮ ಶೌಚೊಪಚಾರಗಳನ್ನೆಲ್ಲ ಮುಗಿಸಿಕೊಂಡು, ಸ್ನಾನಕ್ಕೆ ವ್ಯವಸ್ಥೆ ಮಾಡಿ ಪೂಜೆಗಾಗಿ ಬಗೆ ಬಗೆಯ ಪುಷ್ಪ ಪತ್ರೆಗಳನ್ನು ಅರಸಿ ತಂದು ಇಡುತ್ತಾರೆ.
  • ನಂತರ ರಾಗಿ ಚೀಲದ ಒಳಗಡೆಯಿಂದ ಧೈವ ಬಿಂಬಿತ ವಿಗ್ರಹಗಳನ್ನು ಹೊರಕ್ಕೆ ತೆಗದು ದೇವಿಯವರ ಆಪೇಕ್ಷೆಯಂತೆ ದೊಡ್ಡ ಹರಿವಾಣದಲ್ಲಿ ಸ್ಥಾಪಿಸಿ ಮೊದಲು ಎಣ್ಣೆ ಮಜ್ಜನ ಮಾಡಿ ಅಗತ್ಯ ಪೂಜಾ ಸಾಮಗ್ರಿಗಳನ್ನು ಸಿದ್ದತೆ ಮಾಡುತ್ತಾರೆ. ಆ ನಂತರ ಸ್ನಾನ ಮಾಡಿ ಶುಚಿಭೂತರಾಗಿ ಮನೆಯವರನ್ನು ಏಳಿಸುತ್ತಾರೆ; ಈ ದಿನದಿಂದ ನಮ್ಮ ಕುಟುಂಬಕ್ಕೆ ಹೊಸ ಪರ್ವ ಆರಂಭವಾಗಿದೆ, ಎಲ್ಲರೂ ಬೇಗ ಸ್ನಾನಾದಿಕ್ರಮಗಳಿಂದ ಸಿದ್ದರಾಗಿ ಎಂಬುದಾಗಿ ತಿಳಿಸಿದಂತೆ ಕುತೂಹಲ ಸಂಶಯ ಉಂಟಾಗುತ್ತದೆ. ಯಜಮಾನರ ಆದೇಶದಂತೆ ಎಲ್ಲರೂ ಸಿದ್ದರಾದ ಮೇಲೆ ತಾವು ಮಲಗಿದ್ದ ಕೋಣೆಗೆ ಕರೆದುಕೊಂಡು ಹೋಗಿ ಹರಿವಾಣದಲ್ಲಿ ಇಡಲಾಗಿದ್ದ ಲಿಂಗಾಕಾರದ ಮೂರು ಕಪ್ಪು ವಿಗ್ರಹಗಳನ್ನು ತೋರಿಸುತ್ತಾ, ನಿನ್ನೆ ಸಂಜೆಯಿಂದ ರಾತ್ರಿಯಿಡೀ ಶ್ರೀ ಉಡಿ ಶೀಲಮ್ಮ ಆವೇಶವಾಗಿ ಬಂದು ತಮ್ಮ ಶಕ್ತಿ ಪವಾಡ ಆಚರಣೆಗಳ ಬಗ್ಗೆ ತಿಳಿಸಿ ಅಂತರ್ಧಾನಳಾದ ವಿಚಾರವನ್ನು ತುಂಬಾ ಬಾವುಕರಾಗಿ ತಿಳಿಸುತ್ತಾರೆ.
  • ಈ ವಿಸ್ಮಯವನ್ನು ಕೇಳಿದ ಮನೆಯವರಿಗೆ ನಂಬಿಕೆ ಭಕ್ತಿ ಉಂಟಾಗಿ ಮುಂದಿನ ಕಾರ್ಯಗಳಿಗೆ ಸಿದ್ಧರಾಗುತ್ತಾರೆ. ಈ ವಿಚಾರವು ಕೇರಿಯವರಿಗೆಲ್ಲ ಹರಡಿ ಕುತೂಹಲ ಭರಿತರಾಗಿ ಗೌಡರ ಮನೆಗೆ ಬಂದು ಹರಿವಾಣದಲ್ಲಿ ಇಡಲಾಗಿದ್ದ ದೇವಿಯಪ್ರತಿಮೆಗಳನ್ನು ಶ್ರದ್ದೆ, ಭಕ್ತಿಯಿಂದ ದರ್ಶನ ಮಾಡಿ ಇಲ್ಲಿಗೆ ಪಾದಾರ್ಪಣೆ ಮಾಡಿದಾಗ ವಿಚಾರವನ್ನು ಗೌಡರಿಂದ ತಿಳಿದು ಉತ್ಸಾಹ, ಸಂತೋಷದಿಂದ ದೇವಿಯವರ ಸೇವೆಯನ್ನು ಮಾಡಲು ಸಿದ್ದರಾಗುತ್ತಾರೆ; ಅಪ್ಪಣೆಯಾದಂತೆ ದೇವರ ಬನವನ್ನು ಸ್ವಚ್ಛಮಾಡಿ ಕೇರಿಯಿಂದ ಬನದವರೆಗೆ ಗುಡಿಸಿ ನೀರು ಹಾಕುವುದು ತಳಿರು ತೋರಣ ಗಳಿಂದ ಅಲಂಕಾರ ಮಾಡುವುದು ಬನಕ್ಕೆ ಚಪ್ಪರ ಹಾಕುವುದು ಮುಂತಾದ ಕೆಲಸಗಳನ್ನು ಪರಸ್ಪರ ಸಹಕಾರದಿಂದ ಹಾಗೂ ಸಂಭ್ರಮಗಳಿಂದ ಮಾಡುತ್ತಾರೆ.
  • ಶ್ರೀ ದೇವಿಯವರ ಅಪೇಕ್ಷೆಯಂತೆ ಪುರೋಹಿತರ ಸಲಹೆಯ ಪ್ರಕಾರ ಮನೆಯಲ್ಲಿ ಸರಳವಾದ ಅಗ್ರಪೂಜೆಯನ್ನು ಮಾಡಿ ಆರತಿ ಮಾಡಿದ ನಂತರ ದೇವರು ದುಂಬಿತ ಹರಿವಾಣವನ್ನು ಈ ವ್ಯವಸ್ಥೆಗೆಲ್ಲ ಕಾರಣ ಕರ್ತರಾದ ಹಲಗೇಗೌಡರ ತಲೆಯ ಮೇಲೆ ಹೊತ್ತು ಮೂಡಣ ದಿಕ್ಕಿನತ್ತ ಹೇಮಾ ವತಿ ನಡಿಗೆ ಬಿಜಯಂಗೈದು; ಗಂಗಾಸ್ನಾನದಲ್ಲಿ ಪುರೋಹಿತರ ವಿಧಿ ವಿಧಾನಗಳ ಪ್ರಕಾರ ದೇವಿಯವರಿಗೆ ದೈವತ್ವವನ್ನು ಕೊಟ್ಟು ದಶ ಕುಂಭಗಳನ್ನು ದೇವಿ ಕಲಶವನ್ನು ಸ್ಥಾಪಿಸಿ ವನಿತೆಯರಿಗೆಲ್ಲ ಹೂವಿನ ಕಂಕಣ ಕಟ್ಟಿ, ಮುತ್ತೈದೆಯರಿಂದ ಪಂಚ ಪೂಜೆಯಾದ ಮೇಲೆ ಎಲ್ಲಾ ಮಾನಿನಿಯ ರಿಗೂ ಮಡಿಲನ್ನು ತುಂಬಿ, ಒಬ್ಬ ಮಾನಿನಿಯ ದೇವಿ ಕಲಶ ಹತ್ತು ಜನ ವನಿತೆಯರಿಂದ ಪೂರ್ಣಕುಂಭ ಹಾಗೂ ಗೌಡರಿಂದ ಪ್ರತಿಮೆ ಗಳನ್ನಿಟ್ಟು ಹರಿವಾಣ ತಲೆಯ ಮೇಲೆ ಹೊತ್ತು ದಾರಿಯುದ್ದಕ್ಕೂ ಪಕ್ಷಾಮಡಿಯ ಮೇಲೆ ಘಂಟೆಯಿಂದ ಮಂತ್ರ ಘೋಷಣೆ ಮಾಡುತ್ತಾ ಸಿದ್ದಪಡಿಸಲಾಗಿದ್ದ ದೇವರ ಬನಕೆ ತರುತ್ತಾರೆ.
  • ಶ್ರೀ ದೇವಿಯವರನ್ನು ಸ್ಥಾಪನೆ ಮಾಡುವ ಜಾಗಕ್ಕೆ ಗೋಮಯ ಪಾದೋದಕಗಳಿಂದ ದೋಷರಹಿತವನ್ನಾಗಿ ಮಾಡಿ ದೇವಿಯ ದಾನ್ಯ ಸ್ತಂಬನದ ಮುಖಾಂತರ ಬಂದಿದ್ದರಿಂದ ಚೀಲದಲ್ಲಿದ್ದ ರಾಗಿಯನ್ನು ಗದ್ದುಗೆಯಂತೆ ಹರಡಿ ಕಲಶ ಹಾಗೂ ಪೂರ್ಣ ಖೊಂಬಗಳನ್ನು ಈ ಗದ್ದುಗೆಯ ಮೇಲೆ ಸ್ಥಾಪಿಸಿ ಹರಿವಾಣವನ್ನು ಪಕ್ಷಕ್ಕೆ ಇಟ್ಟುಕೊಳ್ಳುತ್ತಾರೆ. ಮನೆಯಲ್ಲಿ ಎಣ್ಣೆ ಮಜ್ಜನ ಮಾಡಿದ್ದರಿಂದ ಅರ್ಘ್ಯಪಾದ್ಯ ಆಚಮನ ಪರಿಕರಗಳಿಂದ ಅಭಿಷೇಕಮಾಡಿ ಪ್ರತಿಮೆಗಳೊಳಗೆ ಚೀತ್ಕಲೆ ಕಾಣುವಂತೆ ಹೊಳಪು ಹೋಳಿಸಿದಾನಾಂತರ ಗದ್ದುಗೆಯ ಮೇಲೆ ಸ್ಥಾಪನೆ ಮಾಡಿದ ಮೇಲೆ, ಮಧ್ಯಕ್ಕೆ ಶ್ರೀ ಉಡಿಶೀಲಮ್ಮ ಎರಡನೇ ಶಕ್ತಿ ಸಂಕೇತ ಮಾರಿಕಾಂಬೆಯನ್ನು ಬಲಭಾಗಕ್ಕೂ ಮತ್ತು ಮೂರನೇ ಶಕ್ತಿ ಸಂಕೇತ ದೇವೀರಮ್ಮನವರನ್ನು ಎಡ ಭಾಗಕ್ಕೂ ಪೂರ್ವಾಭಿಮುಖವಾಗಿ ಸ್ಥಿರಗೊಳಿಸುತ್ತಾರೆ.
  • ಎರಡು ಬದಿಗೂ ಕೈ ಎಣ್ಣೆ ದೀಪ ಹಚ್ಚಿಟ್ಟು ಪ್ರಕಾಶಮಾನ ಗೊಳಿಸಿ, ಹೊಳಪುಗೊಳಿಸಿ ಪ್ರತಿಮೆಗಳೊಳಗೆ ಚೀತ್ಕಲೆ ಕಾಣುವಂತೆ ವ್ಯವಸ್ಥೆಯಾಗುತ್ತದೆ. ಪೋರೋಹಿತರ ಮಂತ್ರೋಪದೇಶಗಳ ಆಗರವಾಗಿ ರುದ್ರ ಹೋಮವಾಗುತ್ತದೆ. ನಂತರ ಗಣಪತಿ ಪೂಜೆ, ಕಲಶ,ಕುಂಭಗಳಿಗೆ,

ಪೂಜೆಯೊಂದಿಗೆ ದೇವಿಯವರಿಗೆ ನವ ವಿಧಧ ಪುಷ್ಪಗಳಿಂದ ಅಲಂಕರಿಸಿ ದೈವ ಕಲೆಯನ್ನು ತುಂಬಿ ಪೂಜಿತರನ್ನಾಗಿ ಮಾಡಿದ ಮೇಲೆ, ಮಹಾಪೂಜೆ, ಮಂಗಳಾರತಿ, ಪಂಚಾಮೃತಗಳಿಗೆ ಅರ್ಪಣೆ ಹಣ್ಣು ಕಾಯಿ ಬೆಲ್ಲದ ನೈವೇದ್ಯ ಆದ ಮೇಲೆ, ಆರು ತೋಳು ಬಲಗಳನ್ನೂ ಸರ್ವಶಕ್ತಿ ಯನ್ನು ಹೊಂದಿರುವ ಗ್ರಾಮದ ಅಧಿದೇವತೆ ಶ್ರೀ ಗ್ರಾಮದೇವತೆ ಎಂಬ ಒಂದೇ ಅರ್ಥದ ರೂಡಿ ನಾಮದಿಂದ ನಾಮಕರಣ ಮಾಡಲಾಯಿತು;

  • ನೆರದಿದ್ದ ಭಕ್ತ ಸಮೂಹವು ಜನ ಮನದ ಜಯದೇವಿ ಶ್ರೀ ಗ್ರಾಮದೇವತೆ ಎಂಬುದಾಗಿ ಸಾಮೂಹಿಕವಾಗಿ ಜನ ಘೋಷಣೆ ಮಾಡುತ್ತಾರೆ. ಈ ಪ್ರಕ್ರಿಯೆಗಳೆಲ್ಲ ಮುಗಿದನಂತರ ಭಕ್ತರ ಮನೆಗಳಿಂದ ಬಂದಿದ್ದ ತಳಿಗೆ ಪದಾರ್ಥಗಳು( ಅಕ್ಕಿ ಬೆಲ್ಲ) ಬಾಳೆ ಹಣ್ಣು ತೆಂಗಿನ ಕಾಯಿ ಸೇವೆ ಯನ್ನು ಮಾಡಿ ಎಲ್ಲರಿಗೂ ತೀರ್ಥ, ಪ್ರಸಾದವನ್ನು ಕೊಟ್ಟು ಪುನೀತರನ್ನಾಗಿ ಮಾಡಿದ ಸಂಬಂಧ ಗ್ರಾಮದಲ್ಲಿ ಇಂತಹ ಸತ್ಕಾರ್ಯವು ಅನಿರೀಕ್ಷಿತವಾಗಿ ನೆರವೇರಿದ್ದರಿಂದ ನಂಬಿಕೆ, ಭಕ್ತಿ, ಸಂತೋಷವೂ ಭಕ್ತರಲ್ಲಿ ನೆಲೆಯಾಗಿ ಉಳಿದಿದೆ. ಶ್ರೀ ದೇವಿಯವರು ಕಿರು ಧಾನ್ಯದಿಂದ ರಾಗಿಯ ಗದ್ದುಗೆಯ ಮೇಲೆ ಆಸೀನರಾಗಲು ಇಷ್ಟ ಪಟ್ಟಿದ್ದು ಬಹಳ ಮಹತ್ವವನ್ನು ಪಡೆದುಕೊಂಡಿದೆ.
  • ರಾಗಿ ಎಂಬ ಸಂಭವನೀಯ ವಾಕ್ಯವು ಭಕ್ತಿಯ ನೆಲೆಗಟ್ಟಿನ ಮೇಲೆ ಬಂದಿರಬಹುದೆಂಬ ನಂಬಿಕೆಯಾಗಿದೆ; ಹೇಗೆಂದರೆ ರಾಗಿಯಿಂದ ತಯಾರಿಸಿದ ಆಹಾರ ಪದಾರ್ಥಗಳನ್ನು ಪ್ರಸಾದ ಮಯವಾಗಿ ಸೇವನೆ ಮಾಡುವವರು ಶ್ರೀ ದೇವಿಯವರು ಆಶೀರ್ವಧಿಸಿದಂತೆ. ಭಕ್ತಿವಂತರಾಗಿ ನಿಷ್ಟೆಯಿಂದ ಪೂಜೆಮಾಡುವವರಿಗಾಗಿ ನಂಬಿಕೆಯುಳ್ಳವರಾಗಿ, ಜ್ಞಾನಳ್ಳವರಾಗಿ, ಶಕ್ತಿವಂತರಾಗಿ, ಆರೋಗ್ಯವಂತರಾಗಿ, ಯೋಗವಂತರಾಗಿ, ಗುರು ಹಿರಿಯರಲ್ಲಿ ನಿಷ್ಟಾವಂತರಾಗಿ, ತಂದೆ ತಾಯಿಯವರನ್ನು ಪೂಜಿಸುವವರಾಗಿ, ಹೀಗೆ ಪ್ರತಿ ಭಾವಾರ್ಥದ ಕೊನೆಯಲ್ಲಿ ರಾಗಿ ಎಂದು ಇದರ ಮಹತ್ವವನ್ನು ತಿಳಿಸಿರುವುದರಿಂದ ರಾಗಿಯ ತಳಿಗೆಯನ್ನು ದೇವಿಯವರು ಇಷ್ಟಪಡುವ ಕಾರಣದಿಂದ ಬಂಡಿ ಹಬ್ಬದ ಆಚರಣೆ ದಿನ ಎಡೆಯಾಗಿ ರಾಗಿ ಶಾವಿಗೆಯನ್ನು ತಂದು ಅರ್ಪಣೆ ಮಾಡುತ್ತಿರುವುದು ಪ್ರಸ್ತುತವೆನಿಸಿರುತ್ತೆ.
  • ಈ ಎಲ್ಲ ಪ್ರಕ್ರಿಯೆಗಳು ನೆರವೇರಿದ ಮೇಲೆ ದೇವಿಯವರ ಪೂರ್ಣ ಕುಂಭ ಹಾಗೂ ಕಲಶದ ಪವಿತ್ರ ಜಲವನ್ನು ದೇವರ ಬನದ ಸುತ್ತಲೂ ಪ್ರೋಕ್ಷಿಸಿ ದಿಗ್ಬಂದನ ಮಾಡುತ್ತಾರೆ, ನಂತರ ಪ್ರತಿಮೆಗಳಿಗೆ ಅಪಾಯ ಅಪಚಾರಗಳು ಆಗಬಾರದೆಂಬ ಭಾವನೆಯಿಂದ ಕೆಲವು ಭಕ್ತರು ಸ್ವಾಧೀನ ದಲ್ಲಿದ್ದ ಕಲ್ಲು ಚಪ್ಪಡಿಗಳನ್ನು ತಂದು ಭದ್ರವಾದ ತಾತ್ಕಾಲಿಕ ಗುಡಿಯನ್ನು ಎಲ್ಲರ ಸಹಕಾರದಿಂದ ನಿರ್ಮಾಣ ಮಾಡುತ್ತಾರೆ.
  • ಹೀಗೆ ದೇವಿಯವರನ್ನು ಇಲ್ಲಿ ಶಾಶ್ವತವಾಗಿ ನೆಲೆಗೊಳಿಸಿದ ಪ್ರಕ್ರಿಯೆಗಳಲ್ಲೆಲ್ಲ ಪೂರ್ಣವಾದಂತಾದ ಮೇಲೆ ಶ್ರೀ ಹಲಗೇಗೌಡರು ಪ್ರತಿ ಶುಕ್ರವಾರ ಪೂಜೆಯನ್ನು ನೆಡಸಿಕೊಂಡು ಬರುತ್ತಿದ್ದರು. ಈ ವ್ಯವಸ್ಥೆಯು ಗ್ರಾಮದಲ್ಲಿ ಆದನಂತರ ಶ್ರೀ ದೇವಿಯವರ ಮಹಿಮೆಯಿಂದ ರೋಗ ರುಜಿನಗಳು ನಿಯಂತ್ರಣಕ್ಕೆ ಬರುತ್ತವೆ; ಜನರಲ್ಲಿ ಆಚಾರ ವಿಚಾರಗಳು ಹೆಚ್ಚಾಗಿ ಬರುತ್ತವೆ, ಕಾಲ ಕಾಲಕ್ಕೆ ಮಳೆಯಾಗುತ್ತಿದ್ದರಿಂದ ಸಮೃದ್ಧಿ ವಾತಾವರಣ ಉಂಟಾಗುತ್ತದೆ ಇದರಿಂದ ನೆಮ್ಮದಿಯ ಬದುಕನ್ನು ನಡೆಸುತ್ತಾ ಆಶಾವಾದಿಗಳಾಗಿ ಬಾಳುತ್ತಿರುತ್ತಾರೆ;
ಕಾಲಾನಂತರದಲ್ಲಿ
[ಬದಲಾಯಿಸಿ]
  • ಈ ಪ್ರಾಂತ್ಯವನ್ನು ಆಳುತ್ತಿದ್ದ ಕೆಳದಿಯ ಅಂದರೆ ಶಿವಮೊಗ್ಗದ ಪಾಳೇಗಾರರಿದ್ದ ಶ್ರೀ ಶಿವಪ್ಪ ನಾಯಕನನ್ನು ತನ್ನ ಶತ್ರುಗಳ ನೆಲೆಯನ್ನು ಅರಸುತ್ತಾ ಹಾಗೂ ತನ್ನ ಆಡಳಿತದ ಬಗ್ಗೆ ಪ್ರಜೆಗಳಲ್ಲಿರುವ ಅಭಿಪ್ರಾಯ ಅವರ ಸಮಸ್ಯೆ ತೊಂದರೆಗಳನ್ನು ತಿಳಿಯುವ ಸಂಬಂಧವಾಗಿ ನದಿ ಪಾತ್ರದಲ್ಲಿದ್ದ ಈ ಗ್ರಾಮಕ್ಕೂ ಭೇಟಿ ಮಾಡುತ್ತಾರೆ: ಇಲ್ಲಿ ಜನರಲ್ಲಿ ಆಚಾರ, ವಿಚಾರ, ಭಕ್ತಿ, ಆನ್ಯೂನತೆ, ಸಮೃದ್ದಿ ಮತ್ತು ರಾಜಭಕ್ತಿ ಇವುಗಳನೆಲ್ಲ ನೋಡಿ ಸಂತೋಷ ಭರಿತನಾಗಿ ತನ್ನ ರಾಜ್ಯಾಡಳಿತದ ಬಗ್ಗೆ ಹೆಮ್ಮೆ ಪಡುತ್ತಾನೆ. ಈ ಎಲ್ಲ ಆದರ್ಶ ಹಾಗೂ ಸಂತೋಷಗಳಿಗೆ ಸಕಾರಣ ಗಳನ್ನು ತಿಳಿಯುವ ಆಸೆಯಾಗುತ್ತದೆ; ಊರಿನ ಪುರೋಹಿತರನ್ನು ಮತ್ತು ಮುಖಂಡರಾಗಿದ್ದ ಶ್ರೀ ಹಲಗೇಗೌಡರನ್ನು ಕರಸಿಕೊಂಡು ಯೋಗ ಕ್ಷೇಮವನ್ನು ವಿಚಾರಿಸುತ್ತಾನೆ ಮತ್ತು ಜನರಲ್ಲಿ ಕಂಡು ಬರುತ್ತಿರುವ ಈ ಮಡಿವಂತಿಕೆಗೆ ಕಾರಣಗಳನ್ನು ಕೇಳುತ್ತಾನೆ.
  • ಶ್ರೀ ಹಲಗೇಗೌಡರು ಹೇಳಿದ್ದೇನೆಂದರೆ- ಶ್ರೀ ಪಾರ್ವತಿ ದೇವಿಯವರ ಕನ್ಯೆರಾದ ಉಡಿಶಿಲಮ್ಮನವರು ಗ್ರಾಮ ದೇವತೆಯಾಗಿ ನೆಲೆಯಾಗಿರುವ ಕಾರಣ ' ಬೇಡಿದ್ದಕೆಲ್ಲ ವರ, ಮುಟ್ಟಿದ್ದಕೆಲ್ಲ ಚಿನ್ನ ಎಂಬಂತೆ ಅವರ ಶಕ್ತಿ ಪವಾಡಗಳ ಬಗ್ಗೆ ಸಾಗಿ ಬಂದ ಸಂಗತಿಗಳನ್ನೆಲ್ಲ ಸವಿಸ್ತಾರವಾಗಿ ತಿಳಿಸುತ್ತಾರೆ. ಈ ಮಹಾತ್ಮೆಯನ್ನು ತಿಳಿದ ನಾಯಕನಿಗೂ ನಂಬಿಕೆ ಭಕ್ತಿವುಂಟಾಗಿ ದೇವಿಯವರ ದರ್ಶನ ಮಾಡುವ ಹಂಬಲ ಉಂಟಾಗುತ್ತದೆ;
  • ಭಕ್ತರ ಸಮೇತ ಬಾಣಕ್ಕೆ ಬಂದು ಪೂಜಿಸಿದ್ದ ಪ್ರತಿಮೆಗಳಲ್ಲಿ ಏಕ ಚಿತ್ತದಿಂದ ದೃಷ್ಟಿ ಇಟ್ಟು ಕಾಣುತ್ತಿದ್ದ ಚೀತ್ಕಲೆಯ ಅಂತರಂಗದಿಂದ ಶ್ರೀ ದೇವಿಯವರ ಸುಂದರ ರೂಪವನ್ನು ಕಂಡು ಲೀನರಾಗಿ ಭಾವಪರವಶರಾಗುತ್ತಾರೆ. ನಂತರ ಜಾಗೃತಗೊಂಡು ಆರಾಧಕರಿಂದ ಪೂಜೆಯನ್ನು ಮಾಡಿಸಿ ತೀರ್ಥ ಪ್ರಸಾಧವನ್ನು ತೆಗೆದುಕೊಂಡು ತನ್ನನ್ನು ಕಾಡುತ್ತಿದ್ದ ಕೊರತೆಯನ್ನು ನಿವಾರಿಸಲು ತನ್ನ ಮನಿಸ್ಸಿನಲ್ಲೇ ಪ್ರಾರ್ಥನೆ ಮಾಡಿ, ಹರಕೆ ಹೊತ್ತು ನಂಬಿಕೆ ಸಂತೋಷದಿಂದ ತಮ್ಮ ಬೇಟಿಗಾಗಿ ಬಂದಿದ್ದ ಪ್ರಜೆಗಳಿಗೆ ಸಾಂತ್ವನ ಹೇಳಿ, ಎಲ್ಲರಿಗೂ ಶ್ರೀ ದೇವಿಯವರು ಶ್ರೇಯಸ್ಸನ್ನು ಕೊಡಲಿ ಎಂಬುದಾಗಿ ಹಾರೈಸಿ ಅಲ್ಲಿಂದ ಬೀಳ್ಕೊಂಡು ತನ್ನ ಪ್ರಯಾಣವನ್ನು ಮುಂದುವರಿಸುತ್ತಾನೆ. ದಾರಿ ಉದ್ದಕ್ಕೂ ಶುಭ ಶಕುನಗಳು ಕಂಡುಬರುತ್ತವೆ. ಇದು ದೇವಿಯವರ ದರ್ಶನದ ಪಲ ಎಂಬ ನಂಬಿಕೆಯಿಂದ ತನ್ನ ಕೋಟೆಯನ್ನು ತಲುಪುತ್ತಾನೆ.
  • ಆ ಲಾಗಾಯ್ತಿನಿಂದ ಎಲ್ಲಾ ತೊಂದರೆ ಸಮಸ್ಯೆಗಳು ನಿಯಂತ್ರಣಕ್ಕೆ ಬರುತ್ತವೆ. ಹೀಗಿರುತ್ತಿರುವಾಗ ನಮ್ಮ ಗ್ರಾಮಕ್ಕೆ ಭೇಟಿ ಕೊಟ್ಟು ಹರಕೆ ಹೊತ್ತುಕೊಂಡಿದ್ದರಿಂದ ಫಲವಾಗಿ ೧೩ನೇ ತಿಂಗಳಿಗೆ ಸಂತಾನಹೀನನಾಗಿದ್ದು ನಾಯಕನಿಗೆ ವಂಶೋದ್ದಾರಕನ ಆಗಮನವಾಗುತ್ತದೆ; ಕಳಂಕ ತಪ್ಪಿ ಜನ ನಿಂದನಾ ರಹಿತವಾದ ಕಾರಣ ಆನಂದ ಸಂತೋಷ ಉಂಟಾಗಿ ವಿಜಯೋತ್ಸವ ಆಚರಿಸಿ ಕೋಟೆಯವರಿಗೆಲ್ಲ ಅನ್ನ ವಸ್ತ್ರದಾನ ಮಾಡಿ ಈ ಎಲ್ಲ ಉತ್ಸಾಹಕ್ಕೆ ಕೃಪೆ ಮಾಡಿದ. ಶ್ರೀ ಉಡಿಶೀಲಮ್ಮ ಯಾ ಗ್ರಾಮದೇವತೆಯವರನ್ನು ಹಾಡಿ ಹೊಗಳುತ್ತಾನೆ; ಮಗ ಹುಟ್ಟಿದ ನಂತರ ತನ್ನ ಎಲ್ಲಾ ಕಾರ್ಯಗಳಲ್ಲೂ ಯಶಸ್ಸು ಕಾಣುತ್ತಾನೆ. ಈ ಅದೃಷ್ಟದ ವಿಚಾರವನ್ನು ಆಗ ತನ್ನ ಪತ್ನಿಗೆ ಮನವರಿಕೆ ಮಾಡಿ ಕೊಳ್ಳುತ್ತಾನೆ.
  • ಮಗುವಿಗೆ ಒಂದು ವರ್ಷ ತುಂಬುವುದರ ಒಳಗಾಗಿ ಹರಕೆ ಮಾಡಿ ಕೊಂಡಿದ್ದರಿಂದ ಒಂದು ಶುಭ ದಿನ ಪತ್ನಿ ಪುತ್ರ ಹಾಗೂ ಪರಿವಾರ ಸಮೇತ ಕುದುರೆ ಸಾರೋಟಿನಲ್ಲಿ ಬಂದು ಇಲ್ಲಿನ ಶ್ರೀ ದೇವಿಯವರ ದರ್ಶನ ಮಾಡಿ ಪ್ರತಿಮೆಗಳಿಗೆ ಕಣ್ಮಣಿ, ಸೀರೆ, ಮುಕುಟಗಳಿಂದ ಅಲಂಕಾರ ಮಾಡಿಸಿ ಹೊವು ಹಾರಗಳನ್ನಿಟ್ಟು ಶೃಂಗಾರ ಮಾಡಿ ಸಾಂಪ್ರದಾಯಿಕವಾಗಿ ಪೂಜೆ ಮಾಡಿಸಿ ಪಂಚಾಮೃತ ತಳಿಗೆಯನ್ನು ಅರ್ಪಿಸಿ ಮಹಾ ಮಂಗಳಾರತಿ,ತೀರ್ಥ ಪ್ರಸಾದಗಳನ್ನು, ಪಡೆದುಕೊಂಡು ಕೃತಾರ್ಥರಾಗುತ್ತಾರೆ. ಪೂರ್ವೋಚಿತವಾಗಿ ವ್ಯವಸ್ಥೆ ಮಾಡಿದಂತೆ ಕೇರಿಯ ಭಕ್ತ ಸಮುದಾಯಕ್ಕೆ ಪ್ರಸಾದ ವ್ಯವಸ್ಥೆ ನೆಡೆಯುತ್ತದೆ. ಈ ಎಲ್ಲಾ ಕಾರ್ಯಗಳು ನೆರೆವೇರಿಸಿ, ತನ್ನ ಪ್ರಜೆಗಳ ಪ್ರೀತಿಗೆ ಪಾತ್ರನಾಗಿ ತನ್ನ ಕಳಂಕ ನಿವಾರಣೆ ಹಾಗೂ ಸಮಸ್ಯೆಗಳು ಬಗೆಹರಿದು ಕೊಂಡು ಬರುತಿದ್ದುದ್ದರಿಂದ, ಉತ್ಸಾಹ ಉಳ್ಳವನಾಗಿ ಶ್ರೀ ದೇವಿಯವರಿಗೆ ಸುಂದರ ಹಾಗೂ ಭದ್ರವಾದ ದೇವ ಮಂದಿರವನ್ನು ನಿರ್ಮಿಸಲು ತನ್ನ ಸಿಬ್ಬಂದಿಗೆ ಆದೇಶ ಮಾಡುತ್ತಾನೆ.
  • ದೇವಿಯ ಅಭಿಷೇಕ ತಳಿಗೆ ಹಾಗೂ ಪೂಜೆ ಇವುಗಳಿಗೆ ಸರಿಯಾದ ನೀರಿನ ಸೌಕರ್ಯಗಳಿಲ್ಲದ ಕಾರಣ ದೇವಾಲಯದ ಮುಂಭಾಗ ಹಾಗೂ ಈಶಾನ್ಯ ಮೂಲೆಗೆ ಲಗತ್ತಾದಂತೆ ವಿಶಾಲವಾಗಿ ನೀರು ಸಂಗ್ರಹವಾಗುವ ರೀತಿಯಲ್ಲಿ ಹಾಲಿ ಹರಿಯುತ್ತಿದ್ದು ನೀರಿನ ಹಳ್ಳವನ್ನು ಒಳ ಸರಿಸಿ ಒಂದು ಕೆರೆಯನ್ನು ಸಹ ಮಾಡಿಸುವ ಜವಾಬ್ದಾರಿಯನ್ನು ತನ್ನ ಸಿಬ್ಭಂದಿಯವರಿಗೆ ಆದೇಶ ಕೊಟ್ಟು ಹೋದ ನಂತರದಲ್ಲಿ ಆಜ್ಞಾಪಿಸಿದ ಕಾಮಗಾರಿಗಳು ಆರು ತಿಂಗಳೊಳಗೆ ಪೂರ್ಣಗೊಂಡು ಸೇವೆಗೆ ಸಿದ್ಧವಾಗುತ್ತದೆ. ಹೀಗೆ ಜನ ಹಿತ ಸೇವಾ ಕಾರ್ಯಗಳನ್ನು ಮಾಡಿಸಿದ್ದರಿಂದ ದೇವಿಯವರ ಅನುಗ್ರಹ ವುಂಟಾಗಿ ಸುಖ ಸಂತೋಷದಿಂದ ಆಡಳಿತ ಮಾಡಿದನೆಂಬ ವಿಚಾರವು ಪ್ರಸ್ತುತವಾಗಿದೆ. ಶ್ರೀ ಗ್ರಾಮದೇವತೆಯವರು ನೆಲೆಯಾದನಂತರದ ದಿನಗಳಲ್ಲಿ ಗ್ರಾಮದಲ್ಲಿ ಸುಭಿಕ್ಷತೆ ಉಂಟಾಗಿದ್ದರು ಸಹ ಜನರಲ್ಲಿ ಮೂಡ ನಂಬಿಕೆಯ ಭದ್ರವಾಗಿ ಬೇರೂರಿದ್ದಿತ್ತು.
  • ವೀರಶೈವ ಧರ್ಮದ ಹಾಗೂ ಶರಣರ ತತ್ವ ಉಪದೇಶ ಆದರ್ಶಗಳ ಅರಿವಿಲ್ಲದೆ ಅಜ್ಞಾನ ತಮ್ಮ ಕಷ್ಟ ತೊಂದರೆಗಳ ನಿವಾರಣೆಗಾಗಿ ಪ್ರಾಣಿ ಪಕ್ಷಿಗಳ ಬಲಿಯನ್ನು ಕೊಡುವ ಅನಿಷ್ಟ ಪದ್ಧತಿಯೂ ಆಚರಣೆಯಲ್ಲಿದ್ದಿತ್ತು; ಈ ಕೃತ್ಯವು ದೈವ ಮಾನವರಾಗಿ. ಜನಿಸಿ ಸಮಾಜ ಸುಧಾರಣೆಗೆ ತಮ್ಮನ್ನು ತೊಡಗಿಸಿಕೊಂಡ ಶ್ರೀ ಜಗಜ್ಯೋತಿ ಬಸವಣ್ಣನವರ ಆದರ್ಶ ತತ್ವಗಳಿಗೆ ಕಳಂಕ ಹಾಗೂ ಮಾರಕವಾದ ಹೀನ ಕೃತ್ಯ ಈ ಹಿಂದೆ ವರ್ಷಕ್ಕೊಮ್ಮೆ ಆಚರಿಸುತ್ತಿದ್ದ ಬಂಡಿಹಬ್ಬವನ್ನು ಎರಡು ಜಾತಿಯವರು ಒಟ್ಟಿಗೆ ಕೂಡಿ ಮಾಡುತ್ತಿದ್ದಾಗ ಒಂದು ಘಟನೆ ನೆಡೆಯಿತು.

ಸುಮಾರು ೭೦ ವರ್ಷಗಳ ಹಿಂದಿನ ಒಂದು ಪ್ರಸಂಗ ಆ ವರ್ಷ ಬಂಡಿಹಬ್ಬವನ್ನು ಮಾಡುತ್ತಿದ್ದ ಸಮಯದಲ್ಲಿ ಒಂದು ವಿಸ್ಮಯಕರ ಸಂಗತಿ ನೆಡೆಯಿತೆಂಬುದನ್ನು ನಮ್ಮ ಹಿರಿಯರಿಂದ ತಿಳಿದು ಬಂದಿತು.

  • ವಿಷಯವೇನೆಂದರೆ ೧೯೪೨ ಇಸವಿಗೆ ಮೊದಲಿನಿಂದಲೂ ವಿದ್ಯುತ್‌ಶಕ್ತಿ ಇಲಾಖೆಯ ೪ ಕುಟುಂಬಗಳು ಈ ಗ್ರಾಮದಲ್ಲಿರುವ ಇಲಾಖೆಯ ಬಂಗಲೆಗಳಲ್ಲಿ ವಾಸಿಸುತ್ತಿದ್ದರು. ಇವರಲ್ಲಿ ೨ ಕುಟುಂಬ ವೀರಶೈವರು, ೨ ಕುಟುಂಬ ವಕ್ಕಲಿಗರು. ಆ ವರ್ಷದಲ್ಲಿ ಆಚರಣೆ ಮಾಡುತ್ತಿದ್ದ ಬಂಡಿ ಹಬ್ಬ ದ ವೈಭವವನ್ನು ನೋಡಲು ಹಾಗೂ ಹಣ್ಣು ಕಾಯಿ ಸೇವೆಯನ್ನು ಮಾಡಿಸಲು ಬಂದಿದ್ದರು ಜನ ಸಂದಣಿ ಸ್ವಲ್ಪ ಕಡಿಮೆಯಾದ ಮೇಲೆ ವಕ್ಕಲಿಗ ಕುಟುಂಬದ ಹೆಣ್ಣು ಮಗಳು ದೇವರ ದರ್ಶನವನ್ನು ಮಾಡಲು ಗುಡಿಯ ಬಾಗಿಲಿಗೆ ಬಂದು ಹಣ್ಣು, ಕಾಯಿ, ಬುತ್ತಿಯನ್ನು ಒಳಕ್ಕೆ ಕೊಟ್ಟು ಬಾಗಿಲಲ್ಲಿ ಭಕ್ತಿಯಿಂದ ಕೈಮುಗಿದು ಕೊಂಡು ನಿಂತುಕೊಂಡರು; ಹಣ್ಣು ಕಾಯಿ ಅರ್ಪಣೆ ಮಾಡಿದ ಮೇಲೆ ಮಂಗಳಾರತಿಯನ್ನು ಕೊಡಲು ತಂದಾಗ, ಇವರ ಹಿಂಬಾಗದಿಂದ ಕರ್ಕಶವಾದ ಜೀರಲು ಶಬ್ದ ಬರುತ್ತದೆ; ಜಯಮ್ಮನೆಂಬ ಹುಡುಗಿಯೂ ತಿರುಗಿ ನೋಡುತ್ತಾಳೆ.
  • ಹರಿಜನ ಮತದ ತಲೆಗಡುಕ ಒಂದು ಕುರಿಯ ತಲೆಯನ್ನು ಕಡಿದು ಕೆಳಕ್ಕೆ ಉರುಳಿಸುತ್ತಾನೆ. ಈ ಕರ್ತವ್ಯವೂ ದೇವರ ಎದುರಿನಲ್ಲಿ ನಡೆದಿತ್ತು. ಇನ್ನೂ ನಾಲ್ಕು ಕುರಿಗಳು ವಧೆಯಾಗಲು ಬಂದಿದ್ದವು. ಕಡಿದ ಕುರಿಯ ಚೆಲ್ಲಿದ ರಕ್ತ ಅದು ಒದ್ದಾಡುತ್ತಿದ್ದ ಸ್ಥಿತಿಯನ್ನು ನೋಡಿದ ಈ ಭಕ್ತೆಯು ಮಾಂಸಾಹಾರಿಯಾಗಿದ್ದರೂ ಸಹ ಮತಿಭ್ರಮಣೆಯಾದಂತಾಗಿ, ಶ್ರೀ ದೇವಿಯವರು ಮೈ ಮೇಲೆ ಆವೇಶವಾಗಿ ಬಂದಂತೆ, ಮೈ ಯನ್ನು ನಡುಗಿಸುತ್ತಾ ಆರ್ಭಟಿಸಿ, ನನಗೆ ಕರ್ಪೂರ ಹಚ್ಚಿ ತೀರ್ಥಹಾಕು ಎಂದು ದೊಡ್ಡ ದ್ವನಿಯಲ್ಲಿ ಹೇಳಿದ್ದನ್ನು ನೋಡಿದ ಜನ ಸಮೂಹವು ಈಕೆಯ ಕೆಂಪಾದ ಕಣ್ಣು ಅದುರುತ್ತಿದ್ದ ಮೈಯನ್ನು ನೋಡಿ ಭಯದಿಂದ ದಿಗ್ಮೂಢರಾಗುತ್ತಾರೆ; ಮತ್ತೆ ಕರ್ಪೂರ ಹಚ್ಚಲಿಲ್ಲ ಎಂದು ಘರ್ಜಿಸಿದಾಗ ಅರ್ಚಕರು ಕೂಡಲೇ ಕರ್ಪೂರದ ತಟ್ಟೆಯನ್ನು ತಂದು ತೀರ್ಥಪ್ರೋಕ್ಷಣೆ ಮಾಡುತ್ತಾರೆ.
  • ಆಗ ಹುಡುಗಿಯೂ ತಟ್ಟೆಯನ್ನು ಕೈಗೆ ತೆಗೆದುಕೊಂಡು ಅಹಹಾ ನಾನು ಹಿಂಸಾ ಮಾರ್ಗದವಳಲ್ಲ, ವೀರಶೈವ ಧರ್ಮದ ಉಪದೇಶ ಪಡೆದು ನೆಲೆಸಿರುವ ಕಾರಣ ಯಾವ ಪ್ರಾಣಿಯು ಜೀವವನ್ನು ಕೊಳ್ಳುವವಳು ಅಲ್ಲ, ತೆಗೆಯುವವಳು ಅಲ್ಲ. ಈ ಗ್ರಾಮದ ಪ್ರತಿಯೊಂದು ಪ್ರಾಣಿಯು ಜೀವನವನ್ನು ರಕ್ಷಿಸುವ ಉದ್ದೇಶದಿಂದ, ಇಲ್ಲಿಗೆ ಬಂದು ನೆಲೆಸಿರುತ್ತೇನೆ. ಎಲ್ಲರ 'ರಕ್ಷಾ ದೇವತೆಯಾಗಿರುತ್ತೇನೆಯೇ, ಹೊರತು ರಕ್ಕಸಿಯಲ್ಲ ಲಿಂಗವಂತರ ಮನೆಯಲ್ಲಿ ತಂಗಿದ್ದು ಅಹಿಂಸಾ ಧರ್ಮವನ್ನು ಆಚರಿಸಿಕೊಂಡು ಹೋಗುತ್ತಿರುವ ಲಿಂಗವಂತ ವ್ಯಕ್ತಿಯ ಮುಖಾಂತರ ಅಭಿಷೇಕ, ಹೋಮ, ಪೂಜೆಗಳಿಂದ ಸಂಸ್ಕಾರವನ್ನು ಪಡೆದು ಶರಣ ಧರ್ಮದ ಆಚರಣೆಯುಳ್ಳವಳಾಗಿದ್ದೇನೆ ಆದಕಾರಣ ವೀರಶೈವರಾಗಲಿ ಇತರೆ ಯಾವ ತಿನ್ನುಣ್ನುವ ಈ ಮೂಡ ಪದ್ಧತಿಯಿಂದ ಕಳಂಕಿತಳಾಗುತ್ತೇನೆ. ಅಸ್ಪುರ್ಷರ ಸಾಲಿನ ದುಷ್ಟ ದೇವತೆ ಎಂಬ ಭಾವನೆ ನನ್ನ ಭಕ್ತರಲ್ಲಿ ನೆಲೆಯಾಗುತ್ತದೆ. ಇಲ್ಲಿಂದ ಮುಂದಿನ ವರ್ಷಗಳಲ್ಲಿ ಹಬ್ಬವನ್ನು ಬೇರೆ ಬೇರೆ ವಾರಗಳಲ್ಲಿ ಮಾಡಿರಿ ವೀರಶೈವರು ಅಹಿಂಸಾ ದರ್ಮದವರಾಗಿರುವುದರಿಂದ ಮತ್ತೆ ೧೦೧ ಮಾರಿಗಳಿಗೆ ಶಾವಿಗೆ ಎಡೆ ಇತ್ತು ಪೂಜೆ ಸಲ್ಲಿಸಬೇಕಾಗಿರುವುದರಿಂದ, ಮೊದಲು ಆಚರಿಸಬೇಕು.
  • ನಂತರ ಪರಿಶಿಷ್ಟ ಜಾತಿಯವರು ಮುಂದಿನ ವಾರ ಆಚರಿಸುವುದು ನನಗ ಇಷ್ಟವಾಗುತ್ತದೆ. ಏಕೆಂದರೆ ಅವರು ತಿನ್ನುಣ್ನುವ ಜಾತಿ ತಮ್ಮ ಉದರ ಪೋಷಣೆಗಾಗಿ ಮಾಡುವ ಹಿಂಸಾ ಕಾರ್ಯದ ಪಾಪವನ್ನು ಸ್ವಾರ್ಥತೆಯಿಂದ ದೈವದ ಮೇಲೆ ಹೊರಿಸುತ್ತಾರೆ. ಇದು ಹೇಯ ಕೃತ್ಯ, ಆದರೂ ಧರ್ಮದ ಅರಿವು ಪ್ರಾಣದ ಬೆಲೆ ಗೊತ್ತಿಲ್ಲದ ಮೌಡ್ಯತೆಯಿಂದ ಕೊಡುವ ಪಾಪದ ಬಲಿಯು ನನ್ನ ಎದುರಿನಲ್ಲಿರುವ ದ್ವಾಮವ್ವ ಎಂಬ ಚೌಡಿಯು ಒಪ್ಪಿಕೊಳ್ಳುತ್ತಾಳೆ. ಆಕೆಗೆ ನಿತ್ಯದ ಪೂಜೆ ವಾರದ ಪೂಜೆಗಳಿರುವುದಿಲ್ಲ ಪ್ರಾಣಿಗಳ ಬಲಿಯಿಂದಲೇ ತೃಪ್ತಿ ಪಡುವವಳಾಗಿದ್ದಾಳೆ. ನಾನು ಮಾತ್ರ ಪ್ರಾಣಿಗಳ ಬಲಿಯನ್ನು ಖಡ್ಡಾಯವಾಗಿ ದ್ವೇಷಿಸುತ್ತೇನೆ.
  • ಈ ಹಿಂಸಾ ಮಾರ್ಗವನ್ನು ಕೈಬಿಟ್ಟು ನನ್ನನ್ನು ನಿತ್ಯ ಅಲಂಕರಿಸುವ ಶಾಶ್ವತ ವಸ್ತುಗಳು ಬೆಳ್ಳಿಯ ರೂಪಕಗಳು ಕಂಚು, ತಾಮ್ರದ ವಸ್ತುಗಳು ಉಡಿಗೆ ಸಾಧನಗಳು ಹೆಚ್ಚಿನದಾಗಿ ನಂಬಿಕೆ, ಭಕ್ತಿಯಿಂದ ಪೂಜಿಸಿದರೆ ತೃಪ್ತಳಾಗುತ್ತೇನೆ ಎಂಬುದಾಗಿ ದೇವಿಯವರ ಅಪ್ಪಣೆಯಾದಂತೆ ಆ ಹೆಣ್ಣು ಮಗಳ ಬಾಯಿಂದ ಹೋರಟ ಮಾತುಗಳಿಂದ ನೆರದಿದ್ದ ಭಕ್ತ ಸಮೂಹವು ನಂಬಿಕೆ, ಭಯದಿಂದ ಮೂಕ ಪ್ರೇಕ್ಷರಾಗುತ್ತಾರೆ ಎಲ್ಲರ ಸಲಹೆಯಂತೆ ಸನ್ನಿದಿಯಿಂದ ತೀರ್ಥ ತಂದು ಹೆಂಗಸಿನ ಮೇಲೆ ಪ್ರೋಕ್ಷಣೆ ಮಾಡಿದಾಗ ಮತ್ತು ಮಂಗಳಾರತಿ ಮಾಡಿದ ಮೇಲೆ ಆಕೆಯ ವಾಸ್ತವ ಸ್ಥಿತಿಗೆ ಬರುತ್ತಾಳೆ. ಕುತೂಹಲ ಗೊಂಡ ಸಮೂಹದವರು ಯಾಕೆ ಹೀಗೆಲ್ಲ ಮಾತನಾಡಿದೆ ಎಂಬುದಾಗಿ ವಿಚಾರ ಮಾಡಿದಾಗ, ನಾನೇನು ಮಾತನಾಡಿದೆ; ಈ ಬಗ್ಗೆ ಯಾವ ಅರಿವು ಇರಲಿಲ್ಲ ಎಂಬುದಾಗಿ ಹೇಳುತ್ತಾಳೆ.
  • ದೇವಿಯವರು ಈ ಭಕ್ತೇಯ ಮೇಲೆ ಆವೇಶವಾಗಿ ಈ ರೀತಿ ಅಪ್ಪಣೆ ಮಾಡಿದ್ದಾಳೆ ಎಂದು ನಂಬುತ್ತಾರೆ: ನಂತರ ಉಳಿದ ಕುರಿಗಳು ಪುನರ್ಜನ್ಮವನ್ನು ಪಡೆದುಕೊಳ್ಳುತ್ತದೆ; ಶ್ರೀಮತಿ ಜಯಮ್ಮನಿಗೆ ಸನ್ನಿಧಿಯಿಂದ ತಾಂಬೂಲ, ಫಲ, ಪುಷ್ಪಗಳನ್ನು ಕೊಟ್ಟು ಸನ್ಮಾನಿಸಲಾಯಿತು ಅಂದಿನಿಂದ ಆದೇಶವಾದಂತೆ ಬಂಡಿಹಬ್ಬವನ್ನು ಬೇರೆ ಬೇರೆ ವಾರಗಳಲ್ಲಿ ಆಚರಿಸಿಕೊಂಡು ಬರುವುದು ಪದ್ದತಿಯಾಗಿದೆ
  • .


ದ್ಯಾಮವ್ವ(ಚೌಡಿಯು)ನ ಆಗಮನ

[ಬದಲಾಯಿಸಿ]
  • ಈ ಗ್ರಾಮದ ಹರಿಜನ(ಪಂಗಡ) ಜಾತಿಗೆ ಸೇರಿದವನಾದ ಸುಮಾರು ೧೪ ವರ್ಷ ವಯಸ್ಸಿನ ಕಾಳಯ್ಯನೆಂಬ ಹುಡುಗನು ತನ್ನ ಮನೆಯಲ್ಲಿನ ಬಡತನ ಹಾಗೂ ಈತನು ಸೋಮಾರಿತನದ ಬಗ್ಗೆ ಮನೆಯಲ್ಲಿನ ಹಿರಿಯರಿಗೆ ಬೇಸರ ಉಂಟಾಗಿ ಕೆಲಸಕ್ಕೆ ಹೋಗು ಏನಾದರೂ ದುಡಿಮೆ ಮಾಡು ಎಂದು ದಿನವೂ ನಿಂದನೆ ಮಾಡುತ್ತಿದ್ದರು; ನಿತ್ಯವೂ ಹಂಗಿನ ಊಟಕ್ಕಾಗಿ ಬಹಳ ಬೇಸರವುಂಟಾಗಿ ಒಂದು ದಿನ ಮನೆಯನ್ನು ಬಿಟ್ಟು ಹೊರಡುತ್ತಾನೆ; ಗೊತ್ತು ಗುರಿಯಿಲ್ಲದ ದಿಕ್ಕಿನತ್ತ ಹೊರತು ದಾರಿಯಲ್ಲಿ ಸಿಕ್ಕಿದ ಗ್ರಾಮಗಳಲ್ಲಿ ಅವರಿವರ ಮನೆಗಳಲ್ಲಿ ಒಪ್ಪೊತ್ತಿನ ಊಟಕ್ಕಾಗಿ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿಕೊಂಡು, ಊರಿಂದ ಊರಿಗೆ ಸವೆದ ಕಾಲುದಾರಿಯನ್ನು ಹಿಡಿದು ಆಳವಿಲ್ಲದ ನದಿ, ಕಣಿವೆಗಳನ್ನು ದಾಟಿ ೬೦ ಮೈಲಿಗಳನ್ನು ಕ್ರಮಿಸಿ ಮಂಜ್ರಾಬಾದ್(ಸಕಲೇಶಪುರ) ಗೆ ಬರುತ್ತಾನೆ.
  • ಅಲ್ಲಿ ಸಣ್ಣ ಅಂಗಡಿ ಮುಂದೆ ಕುಳಿತುಕೊಂಡಾಗ ಅಂಗಡಿ ಮಾಲಿಕನು ವಿಚಾರಣೆ ಮಾಡುತ್ತಾನೆ, ತನ್ನ ಪರಿಸ್ಥಿತಿ ಇಲ್ಲಿಗೆ ಬಂದ ಕಾರಣಗಳನ್ನು ತಿಳಿಸುತ್ತಾನೆ. ಅಂಗಡಿಯವನಿಗೆ ಕನಿಕರ ಉಂಟಾಗಿ ತಿನ್ನಲು ಸ್ವಲ್ಪ ಕಾಳುಗಳನ್ನು ಕೊಡುತ್ತಾನೆ. ಅದೇ ಸಮಯಕ್ಕೆ ಬಂದು ಕಾಫಿ ಎಸ್ಟೇಟಿನ ರೈತನೊಬ್ಬ ಅದೇ ಅಂಗಡಿಗೆ ಬರುತ್ತಾನೆ ಅವನ ಸಂಗಡ ಈ ಹುಡುಗನನ್ನು ಕಳುಹಿಸಿ ಕೊಡುತ್ತಾನೆ: ಅಲ್ಲಿಂದ ಅದೇ ತಾಲ್ಲೂಕಿಗೆ ಸೇರಿದ ಹಾನಬಾಳು ಪ್ರದೇಶದಲ್ಲಿದ್ದ ಶ್ರೀ ದಗ್ಗಪ್ಪಗೌಡರ ಒಡೆತನದ ಗಿರಿಕನ್ಯೆ ಎಂಬ ಕಾಫಿ ತೋಟಕ್ಕೆ ಬಂದು ಅಲ್ಲಿ ದಿನಗೂಲಿ ಆಳಾಗಿ ಸೇರಿ ಕೊಂಡು ನಂತರದ ವರ್ಷಗಳಲ್ಲಿ ಈತನ ಅನುಭವ ಕಾರ್ಯದಕ್ಷತೆಗಳ ಮೇಲೆ ಪಟ್ಟಿ ಆಳಾಗಿ ಖಾಯಂ ಗೊಳಿಸುತ್ತಾರೆ'.
  • ಈ ಸಂಬಂಧ ಕೆಲವು ವರ್ಷಗಳವರೆಗೆ ನಿಯತ್ತಿನಿಂದ ಕೆಲಸ ಮಾಡಿಕೊಂಡು ತನ್ನ ಸಹುದ್ಯೋಗಿಗಳಿಗೆ ಮೆಚ್ಚಿಗೆಯಾಗುತ್ತಾನೆ. ಈ ತೋಟದಲ್ಲಿ ಕಾಳಯ್ಯ ಎಂಬ ಹೆಸರಿನವರು ಮೂರ್ನಾಲ್ಕು ಜನರಿರುತ್ತಾರೆ ಕಾರಣ ಈತನನ್ನು ಗುರುತಿಸಲು ಸಲಿಗೆಯಿಂದ 'ಮೂಡ್ಲಾ' ಎಂಬ ಅಡ್ಡ ಹೆಸರಿನಿಂದ, ಇದರ ಅರ್ಥ ಮೂಡಣ ಸೀಮೆಯವನು ಎಂಬ ಭಾವನೆ , ದುಗ್ಗಪ್ಪ ಗೌಡರು ತಮ್ಮ ತೋಟದ ಬೆಂಗಾವಲಿಗಾಗಿ ದ್ಯಾಮವ್ವ ಎಂಬ ಚೌಡಿಯನ್ನು ಕರೆತಂದು ತೋಟದ ಮುಖ್ಯ ದ್ವಾರದ ದೇವತಾರೆ ಮರದ ಬುಡದಲ್ಲಿ ನೆಲೆ ಮಾಡಿರುತ್ತಾಲೆ, ಗೌಡರು ಒಕ್ಕಲಿಗ ಜನಾಂಗಕ್ಕೆ ಸೇರಿದವರಾಗಿ ಮಾಂಸಾಹಾರಿಯಾಗಿದ್ದರಿಂದ, ಸ್ವಾರ್ಥತೆಯಿಂದ ಕಾಡುಪ್ರಾಣಿ ಇಲ್ಲವೇ ಸಾಕು ಪ್ರಾಣಿಗಳನ್ನು ಈ ಚೌಡಿಗೆ ಬಲಿಕೊಟ್ಟು ನಂತರ ತಾವು ಸ್ವಾಹಾ ಮಾಡುತ್ತಿದ್ದರು. ಈ ಚೌಡಿಗೆ ಬೇರೆ ಯಾವ ಪೂಜೆ ಪುರಸ್ಕಾರಗಳು ಇರಲಿಲ್ಲ.
  • ಬಲಿಯಿಂದಲೇ ಶೋಷಣೆಯಾಗುತ್ತಿತ್ತು. ಈ ಚೌಡಿ ಇದ್ದ ಸಂಕೇತ ಕಪ್ಪಾದ ಗುಂಡು ಕಲ್ಲು ಅರಿಶಿಣ, ಕುಂಕುಮ ಲೇಪನ ಮತ್ತು ಬಲಗಡೆಗೆ ಒಂದು ದ್ವಿಶೂಲ ನಿಲ್ಲಿಸಿರುವುದು ಕೆಲವಾರು ವರ್ಷಗಳಲ್ಲಿ ಶ್ರೀ ದುಗ್ಗಪ್ಪ ಗೌಡರು ತಮ್ಮ ತೋಟವನ್ನು ಕಾರಣಾಂತರಗಳಿಂದ 'ಮೆ II ಪ್ರಾನ್ಸಿ ಸ್ ಹಾರ್ಲೆ' ಎಂಬ ಆಂಗ್ಲ ಉದ್ಯಮಿಗೆ ಮಾರಾಟ ಮಾಡುತ್ತಾರೆ. ಮೇ II ಹಾರ್ಲೆಯವರು ಮೂಢನಂಬಿಕೆಯಿಂದ ಮಾಡುತ್ತಿದ್ದ ಅನಾಚಾರಗಳನೆಲ್ಲ ನಿಲ್ಲಿಸಿ ಬಿಡುತ್ತಾರೆ. ಇದರಿಂದ ಚೌಡಿಗೆ ಯಾವ ಪುರಸ್ಕಾರವು ಇಲ್ಲದಂತಾಗುತ್ತದೆ. ಕಾರಣ ಈಕೆಗೆ ಬಳಲುವ ಪರಿಸ್ಥಿತಿ ಉಂಟಾಗುತ್ತದೆ. ಈ ಮಧ್ಯೆ 'ಮೂಡ್ಲನು' ತನ್ನ ಜೊತೆಗಾರನ ಸಂಗಡ ಮಾತನಾಡುವಾಗಲೆಲ್ಲ, ನಮ್ಮ ಊರಿನ ಶ್ರೀ ಗ್ರಾಮ ದೇವತೆ ಬನದಲ್ಲಿ ನಿರಂತರ ಪ್ರಾಣಿಗಳ ಬಲಿಯು ನಡೆಯುತ್ತಿರುವ ಬಗ್ಗೆ ಹೊಗಳಿಕೆಯ ಮಾತುಗಳಿಂದ ಆಗಿಂದಾಗ್ಗೆ ಹೇಳುತ್ತಿದ್ದದನ್ನು ಈ ಚೌಡಿಯು ಕೇಳಿಸಿ ಕೊಂಡಿರುತ್ತಾಳೆ ಮತ್ತು ಇಲ್ಲಿಂದ ಹೊರಡಬೇಕೆಂಬ ನೀರಿಕ್ಷೆಯಲ್ಲಿ ಸಮಯ ಕಾಯುತ್ತಿರುತ್ತಾಳೆ. ಈ ಸಮಯ 'ಮೂಡ್ಲಕಾಳನಿಗೆ' ೨೭ ವರ್ಷಗಳು ಕಳೆದಿರುತ್ತದೆ. ಸಂಸಾರಿಯಾಗುವ ಹಂಬಲದಿಂದ ಊರಿಗೆ ಹೊರಡುವ ಮನಸ್ಸಾಗುತ್ತದೆ. ಕೈಯಲ್ಲಿ ಸ್ವಲ್ಪ ಹಣವನ್ನು ಕೂಡಿಸಿಕೊಂಡು; ಒಂದು ಶುಭದಿನ ಬೆಳಗಿನ ೫ ಘಂಟೆಗೆ ಊರಿಗೆ ಅಭಿಮುಖವಾಗಿ ಹೊರಡುತ್ತಾನೆ. ಈ ಸಮಯವನ್ನು ಕಾಯುತ್ತಿದ್ದ ಚೌಡಿಯು ಈತನ ಬೆನ್ನುಹಿಡಿದು ಮೈತುಂಬಿ ಕೊಳ್ಳುತ್ತಾನೆ.
  • ಇದರಿಂದ ಕಾಲವು ಮೂಡ್ಲನಿಗೆ ಪ್ರಯಾಣದ ಆಯಾಸ, ಹಸಿವು, ನೀರಡಿಕೆಗಳು ಕಂಡು ಬರುವುದಿಲ್ಲ. ತಾನು ಇಲ್ಲಿಗೆ ಬಂದಾಗ ಇದ್ದ ನೇರ ದಾರಿಯೂ ಸವೆದು ಉತ್ತಮವಾಗಿದ್ದರಿಂದ ಬಹಳ ಬೇಗ ಊರು ತಲುಪುತ್ತಾನೆ. ಇಲ್ಲಿಗೆ ಬಂದಾಗ ಪದ್ದತಿ ನಂಬಿಕೆಯಂತೆ ದೇವರಿಗೆ ಕೈ ಮುಗಿಯಲು ನಿಲ್ಲುತ್ತಾನೆ. ಈತನ ಏಕಾಂಕತೆಯನ್ನು ತಿಳಿದ ಚೌಡಿಯು ಇಳಿದು ಕೊಳ್ಳುತ್ತಾಳೆ. ಈಗ ಹುಡುಗನಿಗೆ ಆಯಾಸ, ದಣಿವು, ಹಸಿವು ಎಲ್ಲವುದರ ಅನುಭವವಾಗುತ್ತದೆ. ಮನೆಗೆ ಹೋದ ಮೇಲೆ ಊಟ ಮಾಡಿ ಇದಾವುದರ ಅರಿವೂ ಇಲ್ಲದೆ ನಿದ್ರೆಗೆ ಜಾರುತ್ತಾನೆ. ಸುಖ ನಿದ್ರೆ ಕಳೆದು ಬೆಳಗಿನ ಜಾವ ಅರೆ ನಿದ್ರೆಯಲ್ಲಿದ್ದಾಗ ಯಾರೋ ಕರೆದಂತಾಗುತ್ತದೆ.
  • ನಾನು 'ಹಾರ್ಲೆ' ತೋಟದ 'ದ್ಯಾಮವ್ವ(ಚೌಡಿಯು) ನಿನ್ನನ್ನು ಆಶ್ರಯಿಸಿ ಇಲ್ಲಿಗೆ ಬಂದಿದ್ದೇನೆ; ಕಾಫಿ ತೋಟದಲ್ಲಿ ನಾವಿದ್ದ ಸಂಕೇತವಾಗಿ ನಾಳೆ ಬೆಳಿಗ್ಗೆ ನದಿಯಿಂದ ಸವೆದು ಹೊಳಪಾಗಿರುವ ಗುಂಡುಕಲ್ಲಿನ ರೂಪದ ಒಂದು ಕಲ್ಲು ಶಿಲೆಯನ್ನು ತಂದು ಅರಿಶಿಣ, ಕುಂಕುಮ ಲೇಪನ ಮಾಡಿ ಒಂದು ದ್ವಿಶೂಲ ವನ್ನು ತಯಾರಿಸಿ ನನ್ನ ಬಲಕ್ಕೆ ನಿಲ್ಲಿಸಿ ಶ್ರೀ ಗ್ರಾಮದೇವತೆ ದೇವಸ್ಥಾನದ ಮುಂಭಾಗಕ್ಕೆ ದೇವಿಗೆ ಎದುರಾಗಿ ಸ್ಥಾಪನೆ ಮಾಡು. ಬಂಡಿಹಬ್ಬದ ದಿನ ಪೂಜೆಯನ್ನು ಮಾಡು'. ಇದು ನಿನ್ನ ವಂಶ ಪಾರಂಪರ್ಯವಾಗಿ ನಡೆಯಲಿ ಎಂದು ಹೇಳಿದಂತೆ ಕೆಲಸ ನೆರವೇರಿಸಿ ಸ್ಥಾಪನೆ ಗೊಳ್ಳುತ್ತಾಳೆ.
  • ಹೀಗೆ ಚೌಡಿಯು 'ಮೂಡ್ಲನ ಮೇಲಿಂದ ಇಳಿದ ತಕ್ಷಣ ಗ್ರಾಮದೇವತೆಯವರನ್ನು ದರ್ಶನ ಮಾಡಿ ತನ್ನ ಹಿಂದಿನ ಪರಿಸ್ಥಿತಿಯನ್ನೆಲ್ಲ ಹೇಳಿ ನನ್ನ ನಾಮಧೇಯ ದ್ವ್ಯಾಮವ್ವ ಎಂಬ ಚೌಡಿರೂಪಿಣಿ ನನಗೆ ಯಾವ ತರಹದ ಪೂಜೆ, ಪುರಸ್ಕಾರಗಳು ಗುಡಿ ಗೋಪುರಗಳಿಲ್ಲ ಹಾಗೂ ಇಷ್ಟವಿರುವುದಿಲ್ಲ. ಕೆಂಪು ವರ್ಣ, ಅರಿಶಿನ, ಕುಂಕುಮ, ರಕ್ತ ಮಾಂಸ ಪ್ರಿಯವಾದ ವಸ್ತುಗಳು. ಈ ಹಿಂದೆ ನಾನಿದ್ದ ಕಾಫಿ ತೋಟವು ಮೆ II ಹಾರ್ಲೆ ಎಂಬ ಕ್ರೈಸ್ತ ಸಂಪ್ರದಾಯವಾರಾಗಿದ್ದ ಕಾರಣ ಆಹಾರವಿಲ್ಲದೆ ಎಷ್ಟೋ ಸಲ ಲಂಗನೆ ಮಾಡಿರುತ್ತೇನೆ; ತಮ್ಮ ಸನ್ನಿಧಿಯಲ್ಲಿ ನನಗೆ ಪ್ರಿಯ ವಾದ ಅನುಕೂಲತೆಗಳು ಇರುವ ಕಾರಣ ತಮ್ಮಲ್ಲಿ ಆಶ್ರಯ ಕೂರಿ ಬಂದಿದ್ದೇನೆ ಎಂಬುದಾಗಿ ಅರಿಕೆ ಮಾಡಿಕೊಂಡ ಸಂಬಂಧ ಶ್ರೀ ಗ್ರಾಮದೇವತೆಯವರು ಪೂರ್ವಾಪರ ಯೋಚಿಸಿ, ಕೆಲವು ಷರತ್ತುಗಳ ಮೇಲೆ ನೆಲೆಯಾಗಿರಲು ಒಪ್ಪಿಗೆ ಕೊಟ್ಟಂತೆ. ನಾನು ಶೈವ ಧರ್ಮದ ತತ್ವ ಸಿದ್ಧಾಂತ ನಿಯಮಗಳನ್ನು ಮೈ ಗೂಡಿಸಿಕೊಂಡು ವೀರಶೈವರಿಂದ ಪೂಜಿಸಿಕೊಳ್ಳುತ್ತಾ ನೆಲೆಯಾಗಿರುತ್ತೇನೆ.
  • ಈ ಗ್ರಾಮದ ದಲಿತ ವರ್ಗದವರು ತಮ್ಮ ಸ್ವಾರ್ಥ, ಅಜ್ಞಾನ, ಮೂಡನಂಬಿಕೆ, ಪ್ರಾಣಿ ಪಕ್ಷಿಗಳ ಬಲಿಯನ್ನು ನನ್ನ ಬನದಲ್ಲಿ ಕೊಡುತ್ತಿರುವ ಸಂಬಂಧ ನನಗೆ ಕಳಂಕ ತರುತ್ತಿದ್ದಾರೆ. ಈ ಗ್ರಾಮದಲ್ಲಿನ ಎಲ್ಲ ಜೀವ ರಾಶಿಗಳ ಬಗ್ಗೆ ದಯೆ ಕರುಣೆಯನ್ನು ಹೊಂದಿರುವ ರಕ್ಷಾ ದೇವತೆಯಾಗಿ ಇಲ್ಲಿಗೆ ಬಂದು ನೆಲೆಸಿರುತ್ತೇನೆ ಅಹಿಂಸಾ ಮಾರ್ಗವನ್ನು ಆರಾಧಿಸುತ್ತಿರುವ ಕಾರಣ ಹಿಂಸೆಯ ಪ್ರಾಣಿಗಳ ಬಳಿಯೂ ಇಷ್ಟವಾಗುವುದಿಲ್ಲ. ಆದ್ದರಿಂದ ನೀನು ನನ್ನ ಸಹಚಾರಳಾಗಿದ್ದು ನನ್ನ ಎದುರಿನಲ್ಲೇ ಇರಬೇಕು ಈ ಜಾಗದಲ್ಲಿ ನಿನಗೆ ಯಾವುದೇ ವಿಧವಾದ ಹಕ್ಕು ಬಾಧ್ಯತೆಗಳು ಇರುವುದಿಲ್ಲ ಹಾಗೂ ನಿನ್ನ ಇಚ್ಛೆ ಪ್ರಕಾರ ನಿತ್ಯದ ವಾರದ ಪೂಜೆ ಪುರಸ್ಕಾರಗಳಿಗೆ ಅನರ್ಹಳಾಗಿರುತ್ತಿ ಹರಿಜನ ವ್ಯಕ್ತಿಯ ಮುಖಾಂತರ ಇಲ್ಲಿಗೆ ಬಂದಿರುವುದರಿಂದ, ವರ್ಷಕ್ಕೊಮ್ಮೆ ನೆಡೆಯುವ ಬಂಡಿ ಹಬ್ಬದ ದಿನ ಮಾತ್ರ ಮೂಡ್ಲನಿಂದ ಪೂಜಿಸಿಕೊಂಡು ಅವರು ಕೊಡುವ ಪ್ರಾಣಿಗಳ ಬಲಿಯನ್ನು ಪೂರ್ಣವಾಗಿ ನೀನೆ ಅನುಭವಿಸು; ಮತ್ತು ನನ್ನ ಆಜ್ಞಾದಾರಕಳಾಗಿದ್ದು ,ಭಕ್ತ ಸಮೂಹಕ್ಕೆ ಯಾವ ವಿಧವಾದ ಕಷ್ಟ ತೊಂದರೆಗಳನ್ನು ಕೊಡದೆ ಎಚ್ಚರಿಕೆಯಿಂದ ನಡೆದು ಕೊಳ್ಳಬೇಕು.
  • ನೀನು ಇಲ್ಲಿಗೆ ಬಂದಿದ್ದರಿಂದ ನನಗೆ ಕಳಂಕ ತಪ್ಪಿದೆ ಒಳ್ಳೆಯದೆಯಾಯಿತು ಈ ದ್ವಾರದ ಮುಖಾಂತರ ಗ್ರಾಮಕ್ಕೆ ಯಾವ ಮಾರಿಯೂ ನುಸಳದಂತೆ ಬೆಂಗಾವಲಾಗಿರು ಎಂದು ಹೇಳಿ ನೆಲಸಲು ಒಪ್ಪಿಗೆ ಕೊಟ್ಟು ಪರಿಶಿಷ್ಟರು ಕೊಡುವ ಪ್ರಾಣಿಗಳ ಬಲಿಯನ್ನು ಪೂರ್ಣವಾಗಿ ಸ್ವೀಕರಿಸುವ ಚಿಕ್ಕಮ್ಮ ಎಂಬ ರೂಡಿನಾಮದಿಂದ 'ಚೌಡಿಯು' ಶ್ರೀ ಗ್ರಾಮದೇವತೆಯವರ ಎದುರಿನಲ್ಲಿ ನೆಲೆಯಾಗಿದ್ದಾಳೆ. ಈಕೆಯ ಸಂಕೇತ ಹೊಳಪಾದ ಗುಂಡುಕಲ್ಲು, ಅರಿಶಿನ ಕುಂಕುಮ, ಲೇಪಿತ ಬಲಭಾಗದಲ್ಲಿ ದ್ವಿಶೂಲ ದೇವಿಯವರು ದ್ವಾಮವ್ವ ಎಂಬ ಚೌಡಿಯನ್ನು ತನ್ನ ಎದುರಿನಲ್ಲೇ ನೆಲೆ ಮಾಡಿದ ಸಂಬಂಧ ರಾತ್ರಿಯಿಡೀ ನೆಡೆದ ಸಂವಾದವು 'ಹಲಗೇಗೌಡರ' ಮಗ 'ಶಿವೇಗೌಡರ' ಸ್ವಪ್ನದಲ್ಲಿ ಎಲ್ಲಾ ಆದೇಶಗಳು ಎದುರಿನಲ್ಲಿ ನಡದಂತೆ ಕಾಣಿಸಿಕೊಂಡ ವಿಚಾರವನ್ನು ಬೆಳಿಗ್ಗೆ ಭಕ್ತರಿಗೆ ತಿಳಿಸುತ್ತಾರೆ. ಕಲ್ಲು ಚಪ್ಪಡಿಗಳಿಂದ ಮಂಟಪ ಇವುಗಳು ಚಿಕ್ಕಮ್ಮನ ರೂಪಕಗಳು ಹಾಗೂ ಇರುವಿಕೆಗಳು.

ಗ್ರಾಮದೇವತೆಯ ಆಚರಣೆ

[ಬದಲಾಯಿಸಿ]
  • 'ಶ್ರೀ ಗ್ರಾಮದೇವತೆಯು' ನಮ್ಮ ಗ್ರಾಮದ ವಾಸ್ತು ಪ್ರದಾನವಾದ ಅಂದರೆ ಈಶಾನ್ಯ ಮೂಲೆಯಲ್ಲಿ ಪೂರ್ವಾಭಿ ಮುಖವಾಗಿ ನೆಲೆಯಾಗಿರುವುದರಿಂದ ಶಕ್ತಿ, ಯೋಗ, ಕರಣ ಹಾಗೂ ಆರು ಭುಜ ಬಲಗಳು ಇರುವುದರಿಂದ ಅಧಿಕವಾಗಿ ಕರುಣೆಯನ್ನು ಮೈಗೂಡಿಸಿ ಕೊಂಡಿರುತ್ತಾಳೆ. ಎದುರಿನಲ್ಲಿ ದೇವಿಯವರ ಅಭಿಷೇಕ ಹಾಗೂ ಪ್ರಾಣಿ ಪಕ್ಷಿಗಳಿಗೆ ಜೀವನಾಧಾರವಾದ ನೀರಿನ ಕೆರೆ ಮೂರು ರಸ್ತೆಗಳು ಕೂಡುವ ಜಾಗದಲ್ಲಿ ಆಯಸ್ಸು ಆರೋಗ್ಯವನ್ನು ಕೊಡುವ ವಿಶಾಲವಾದ 'ಅಶ್ವಥ' ಮರ ಇರುವುದು ಮತ್ತು ಗ್ರಾಮದ ಪ್ರವೇಶ ದ್ವಾರದಲ್ಲಿರುವುದರಿಂದ, ಈ ಕ್ಷೇತ್ರವು ಹೆಚ್ಚಿ ನ ಮಹತ್ವವನ್ನು ಪಡೆದುಕೊಂಡಿರುತ್ತದೆ. ತುಂಬಾ ಪುರಾತನದ್ದಾಗಿದ್ದ 'ಅಶ್ವಥ' ಮರವು ಪ್ರಕೃತಿಯ ಒತ್ತಡದಿಂದ ಬಿದ್ದು ಹೋದ ಪ್ರಯುಕ್ತ ಹಾಲಿ ಬೆಳೆದಿರುವ ಮರವನ್ನು ಗ್ರಾಮದ ಮುಖಂಡರು, ದೇವಿಯ ಪರಮ ಭಕ್ತರೂ ಆಗಿದ್ದ 'ಲಿಂII ಬಿ ಯಳ್ಳಪ್ಪನವರು ಆಚಾರವೆಂಬ ಸಸಿಯನ್ನು ನೆಟ್ಟು ಭಕ್ತಿಯೆಂಬ ನೀರನ್ನೆರೆದು ಬೆಳಸಿ ಚಿರಋಣಿಯಾಗಿದ್ದಾರೆ.
  • ಈ ಮರದ ಬುಡದ ಸುತ್ತಲೂ ಲಿಂIIಕುಂಟೇಗೌಡ ರುದ್ರಪ್ಪನವರ ಪುತ್ರ ಹಾಗೂ ಲಿಂII ಆರ.ಸಿದ್ದಲಿಂಗಪ್ಪನವರ ಪುತ್ರರು ಆದ ಶ್ರೀ ಹೆಚ್, ಎಸ್, ಶಿವಾನಂದ ಎಂಬ ಭಕ್ತನಿಗೆ ದೇವಿಯವರ ಪ್ರೇರಣೆಯಾಗಿ ಸುಂದರ ಹಾಗೂ ಸುಭದ್ರವಾದ ಅರಳೀ ಕಟ್ಟೆಯನ್ನು ಕಟ್ಟಿಸಿ ಇದ್ದನ್ನು ತ್ರಿವಿಧ ದಾಸೋಹಿಗಳು ನೆಡೆದಾಡುವ ದೇವರು ಎಂಬ ಹೆಗ್ಗಳಿಕೆಗೆ ಅರ್ಹರಾದ ಶ್ರೀ ಸಿದ್ದಗಂಗಾ ಮಠಾಧ್ಯಕ್ಷರಾದ ಪರಮ ಪೂಜ್ಯ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳವರ ಅಮೃತ ಹಸ್ತದಿಂದ ಪ್ರಾರಂಭೋತ್ಸವ ಮಾಡಿಸಿ ಗ್ರಾಮದ ಭಕ್ತ ಸಾಮೂಹಕ್ಕೆ ಸಮರ್ಪಣೆಮಾಡಿ ಕೀರ್ತಿವಂತರಾಗಿದ್ದಾರೆ. ಇದೆ ಭಕ್ತರು ಅರಳಿ ಮರದ ಪಕ್ಕಕ್ಕೆ ಬೇವಿನ ಸಸಿಯನ್ನು ಬೆಳಸಿ ಕಟ್ಟೆಯ ಮೇಲೆ ನಾಗರ ಕಲ್ಲು ಮೂರ್ತಿಗಳನ್ನು ಸ್ಥಾಪನೆ ಮಾಡಿರುವುದರಿಂದ, ಗ್ರಾಮದ ಭಕ್ತ ಕನ್ಯಾಮಣಿಯರ ಹಾಗೂ ಶೋಡಶಿಯರ ಮನಸ್ಸಿನ ಹಂಬಲ ಈಡೇರಿಕೆಗಳಿಗೆ ಚೈತನ್ಯ ಮಾಯವಾಗಿರುತ್ತದೆ;
  • ಇದೆ ಕುಟುಂಬಕ್ಕೆ ಸೇರಿದ ಆರ್. ಸಿದ್ಧಪ್ಪ ಮತ್ತು ಅವರ ಪುತ್ರರುಗಳಿಗೆ ದೇವಿಯ ಪ್ರೇರಣೆಯಾಗಿ ಗ್ರಾಮದ ಹೃದಯ ಭಾಗದಲ್ಲಿರುವ 'ಶ್ರೀ ಬಸವೇಶ್ವರ ಸ್ವಾಮಿ' ದೇವಸ್ಥಾನದ ಮುಂಭಾಗದ ಪ್ರಭಾವಳಿಯ ಮೇಲೆ ಸುಂದರವಾದ ಬೃಹತ್ ಗಾತ್ರದ ಬಸವ ವಿಗ್ರಹವನ್ನು ನಿರ್ಮಾಣ ಮಾಡಿ ಅದಕ್ಕೆ ವಿಧಿ, ವಿಧಾನಗಳ ಪ್ರಕಾರ ಕುಲ ಪುರೋಹಿತರಿಂದ ದೈವಕಳೆಯನ್ನು ತುಂಬಿ ಮುಂಗಾರು ಮಳೆಯ ಆಗಮನ ನೈರುತ್ಯ ಮೂಲೆಗೆ ದೃಷ್ಟಿಯನ್ನು ಮಾಡಿ ಈ ಗ್ರಾಮದ ಸುಭಿಕ್ಷತೆಗೆ ನಾಂದಿಯಾಗುವಂತೆ ಸಮಾಜಕ್ಕೆ ಸಮರ್ಪಣೆ ಮಾಡಿರುತ್ತಾರೆ. ಈ ಸಂಬಂಧ ದಾನಿಗಳು ಹಾಗೂ ಭಕ್ತ ಮಹನೀಯರುಗಳು ಗ್ರಾಮದ ವೀರಶೈವ ಸಮಾಜವು ಕೃತಜ್ಞತೆಗಳನ್ನು ಸಲ್ಲಿಸುತ್ತದೆ.
  • ಈ ಎಲ್ಲ ನೈಸರ್ಗಿಕ ಸಂಪತ್ತುಗಳು ದೇವಿಯವರ ಸಮಾಚ್ಚಯದಲ್ಲಿ ಇರುವುದರಿಂದ ಈ ದೇವ ಬನವು ಪಾಪನಾಶಿನಿ ಎಂಬ ಹೆಗ್ಗಳಿಕೆಗೆ ಅರ್ಹವಾಗಿದೆ ಈ ರೀತಿ ಎಲ್ಲ ಶಕ್ತಿಗಳನ್ನು ಮೈಗೂಡಿಸಿಕೊಂಡಿರುವುದರಿಂದ ಹಾಗೂ ಗ್ರಾಮದ ಪ್ರವೇಶ ದ್ವಾರದಲ್ಲಿ ಪೂರ್ವಾಭಿಮುಖವಾಗಿ ನೆಲೆ ಯಾಗಿರುವ ಸಂಬಂಧ ಜನರು ತಮ್ಮ ಕಾರ್ಯಾರ್ಥವಾಗಿ ಹೊರಗಡೆ ಹೋಗುವಾಗ ಮತ್ತು ಗ್ರಾಮದ ಒಳಕ್ಕೆ ಬರುವಾಗ, ದೇವಿಯವರ ದೇವಾಲಯವಿರುವ ಸ್ಥಳಕ್ಕೆ ಬಂದಾಗ ಮನಸ್ಸಿನ ಮೇಲೆ ಚೈತನ್ಯವುಂಟಾಗಿ ಕೂಡಲೇ ಜಾಗೃತರಾಗಿ ಧೃಡ ಮನಸ್ಸಿನಿಂದ ಕೈ ಮುಗಿಯುತ್ತಾರೆ, ಇಲ್ಲವೇ ಎದೆಯ ಮೇಲೆ ಕೈ ಇಟ್ಟು ಮನಸ್ಸಿನೊಳಗೆ ಭಕ್ತಿಯಿಂದ ವಂದಿಸಿ ಹೋಗುತ್ತಿರುವುದರಿಂದ ಹೋದ ಕಾರ್ಯವು ನಿರ್ವಿಘ್ನವಾಗಿ ನೆರವೇರುವುದರಿಂದ ನಂಬಿಕೆಯು ದಿನೇ ದಿನೇ ಹೆಚ್ಚಾಗುತ್ತಾ ಬಂದಿರುತ್ತದೆ. ಒಂದು ವೇಳೆ ಯಾವುದಾದರೂ ಅಜಾಗರೂಕತೆಯಿಂದ ದೇವಿಯ ಸ್ಮರಣೆ ಮಾಡದೆ ಸನ್ನಿಧಿಯನ್ನು ದಾಟಿ ಹೂಡಾಗ ತಮ್ಮ ಕೆಲಸಗಳು ನೆರವೆರದೇ ತೊಂದರೆಗಳು ಕಂಡು ಬಂದಾಗ ಇದ್ದ ಜಾಗದಿಂದಲೇ ದೇವಿಯವರಿಗೆ ಮನಸ್ಸಿನಲ್ಲಿ ಸ್ಮರಿಸಿ, ಹರಸಿಕೊಂಡಾಗ ತೊಂದರೆಗಳು ಕೂಡಲೆ ಬಗೆಹರಿದ ಉದಾಹರಣೆಗಳಿವೆ.
  • ಅನೇಕ ಭಕ್ತರಿಗೆ ಸ್ವಂತ ಅನುಭವವಾಗಿರುವುದರಿಂದ ಸಹಜವಾಗಿರುತ್ತದೆ. ಇದೆ ರೀತಿಯಲ್ಲಿ ಭಕ್ತರು ತಮ್ಮ ಮನೆಗಳಲ್ಲಿ ಯಾವುದಾದರೂ ದುಷ್ಟ ಮಾರಿಗಳಿಂದ ಕಷ್ಟ, ತೊಂದರೆಗಳು ಒದಗಿ ಬಂದಾಗ ಮೊಸರನ್ನ ಅಥವಾ ಬೆಲ್ಲದ ಅನ್ನದ ತಳಿಗೆಯನ್ನು ಒಪ್ಪಿಸಿ ಸೇವೆ ಮಾಡುತ್ತೇನೆಂದಾ ಗಲಿ ಬೆಳ್ಳಿಯ ಮುಖವಾಡಗಳನ್ನು ಧರಿಸಿ ಸುಂದರ ರೂಪದ ಸೇವೆ ಮಾಡುತ್ತೇನೆಂದಾಗಲಿ ಅವರವರ ನಂಬಿಕೆಯಂತೆ ಮನೆಯಲ್ಲಿ ಜ್ಯೋತಿ ಹಚ್ಚಿ ಹರಸಿಕೊಂಡಂತಹ ಭಕ್ತರ ಎಲ್ಲ ಕಷ್ಟ ತೊಂದರೆಗಳಿಗೆ ಪರಿಹಾರದ ಅಪ್ಪಣೆಯಾಗುತ್ತಿರುವುದರಿಂದ; ಈ ಸಂಖ್ಯೆಯು ದಿನೇ ದಿನೇ ಬೆಳೆಯುತ್ತಾ ಬಂದಿರುತ್ತದೆ, ಧನುರ್ಮಾಸದ ಪೂಜಾದಿನಗಳಲ್ಲಿ ಗ್ರಾಮದ ಹೆಣ್ಣು ಮಕ್ಕಳು ಉಷಾ ಕಾಲದಲ್ಲಿ ಪಕ್ಕ ಮಡಿಯಿಂದ ದೇವಿಯ ಸನ್ನಿಧಿಗೆ ಬಂದು ಪ್ರದಕ್ಷಣೆ ಮಾಡಿ ಸ್ವ ಹಸ್ತದಿಂದ ಇಚ್ಛಾಪೂಜೆಯನ್ನು ಸಲ್ಲಿಸಿ ಮನೆಯಲ್ಲಿ ಮೀಸಲು ಪದ್ದತಿಯಿಂದ ತಯಾರಿಸಿದ ಪಂಚಾಮೃತ ತಳಿಗೆ ಒಪ್ಪಿಸಿ 'ಈ ಕಾಯವನ್ನು ಹಣ್ಣು ಮಾಡಿ' ಅಂದರೆ ಹಣ್ಣು ಕಾಯಿ ಪರಿಮಳ ಪುಷ್ಪಗಳನೆಲ್ಲ ಅರ್ಪಿಸಿ, ನಂತರ ಮುಂಭಾಗದಲ್ಲಿ ಅಶ್ವಥ ಮರಕ್ಕೆ ಪ್ರದಕ್ಷಣೆ ಮಾಡಿ ಅಲ್ಲಿರುವ ನಾಗರಕಲ್ಲಿಗೆ ಹಾಲನ್ನೆರೆದು ಭಕ್ತಿ, ನಂಬಿಕೆಯಿಂದ ಹೆಣ್ಣುಮಕ್ಕಳಿಗೂ, ವನಿತೆಯರಿಗೂ ದೇವಿಯವರು ಬಹಳ ಬೇಗ ಒಲಿದು ಅವರ ಇಷ್ಟಾರ್ಥಗಳನೆಲ್ಲ ನೆರೆವೆರಿಸುತ್ತಿರುವ ಸಂಬಂಧ ವಾರದ ದಿನಗಳ ಸಂದ್ಯಾ ಕಾಲದಲ್ಲಿ ದೇವಿಯವರನ್ನು ತಾವೇ ಸ್ವತಃ ಪೂಜಿಸಿ ತೃಪ್ತಿ ಪಡುತ್ತಿರುವ ಪದ್ದತಿಯು ತುಂಬಾ ಸುದ್ದಿಯಾಗುತ್ತಾ ಬಂದಿದೆ.
  • ಗ್ರಾಮದೇವತೆಯವರು ದೂರದೃಷ್ಟಿ ಹಾಗೂ ತುಂಬಾ ತೀಕ್ಷ್ಣ ಸ್ವಭಾವದ ಸಾಕಾರ ತಾಯಿಯಾಗಿರುವ ಕಾರಣ ತನ್ನ ಭಕ್ತರು ಹೊರಗಡೆ ಯಾವ ಊರಿನಲ್ಲಿರಲಿ ಅವರುಗಳಿಗೆ ತೊಂದರೆಗಳು ಎದುರಾದಾಗ ತಮ್ಮ ಮನಸ್ಸಿನಲ್ಲಿ ಧ್ಯಾನಿಸಿ ಅಲ್ಲಿಂದಲೇ ಹರಕೆ ಹೊತ್ತುಕೊಂಡಾಗ ಅವರ ತೊಂದರೆಗಳಿಗೆಲ್ಲ ಪರಿಹಾರದ ಕೃಪೆಯಾಗಿರುವ ಕಾರಣ ಈ ಭಕ್ತರು ಅಷ್ಟೈಶ್ವರ್ಯವಂತರಾಗಿ ಪ್ರಭಾವ ಶಾಲಿಗಳಾಗಿ ಬಾಳುತ್ತ ಇದ್ದಾರೆಂಬುದನ್ನು ಕೆಲವು ಉದಾಹರಣೆಗಳಿಂದ ಪ್ರಸ್ತಾಪಿಸಲು ಆಸಕ್ತಿವುಳ್ಳವನಾಗಿರುತ್ತೇನೆ. ಶ್ರೀ ದೇವಿಯವರ ಆರಾಧಕರಿಗೆ ವೀರಶೈವ ಧರ್ಮದ ತತ್ವ, ಸಿದ್ಧಾಂತ, ಆದರ್ಶಗಳ ಅರಿವಾಗ ತೊಡಗಿದ ಮೇಲೆ ಹಾಗೂ ದೇವಿಯವರ ಅಪ್ಪಣೆಯಾದಂತೆ ಅಜ್ಞಾನ, ಮೂಢತನದಿಂದ ಕೊಡುತ್ತಿದ್ದ ಪ್ರಾಣಿಗಳ ಬಲಿಯನ್ನು ಖಡ್ಡಾಯವಾಗಿ ನಿಲ್ಲಿಸಲಾಯಿತು. ಆದರೆ ಪರಿಶಿಷ್ಟರು ಮಾತ್ರ ಪ್ರಾಣಿಗಳ ಬಲಿಯನ್ನು ಈ ಬನದಲ್ಲಿ ತಮ್ಮ ಸ್ವಾರ್ಥ ಹಾಗೂ ಮೂಡ ನಂಬಿಕೆಯಿಂದ ಕೊಡುತ್ತಾ ಬಂದಿರುತ್ತಾರೆ.
  • ಇದನ್ನು ಸಹಚರಳಾದ ದ್ವ್ಯಾಮವ್ವ/ ಚಿಕ್ಕಮ್ಮ ಎಂಬ ಚೌಡಿಯು ಆರ್ಫಿಸಿಕೊಳ್ಳುತ್ತಾ ನೆಲೆಸಿರುತ್ತಾಳೆ. ವೀರಶೈವರಲ್ಲಿ ಅಹಿಂಸಾ ಧರ್ಮದ ಜಾಗೃತಿಯಾದ ನಂತರ ತಮ್ಮ ತೊಂದರೆ ಕಷ್ಟಗಳು ನಿವಾರಣೆಯಾದ ಸಂಧರ್ಭದಲ್ಲಿ ಹರಿಸಿ ಕೊಂಡಿದ್ದಂತೆ ದೇವಿಯವರಿಗೆ ಬೆಳ್ಳಿಯ ಕಣ್ಮಣಿಗಳು, ತಾಮ್ರದ ಬಿಂದಿಗೆ, ಕಂಚಿನ ದೀಪದ ಕಂಬಗಳು, ಬೆಳ್ಳಿಯ ಮುಖವಾಡಗಳು, ಸೀರೆ, ತಳಿಗೆಗಳನ್ನು ಒಪ್ಪಿಸಿ ಸೇವೆ ಮಾಡಿಕೊಂಡು ಬರುತ್ತಿರುವುದು ಪ್ರಶಂಸನೀಯ. ಬೆಳ್ಳಿಯ ಕಣ್ಮಣಿಗಳು ಅಗತ್ಯಕ್ಕಿಂತ ಹೆಚ್ಚಾಗಿ ಬಂದಿದ್ದರಿಂದ ಎಲ್ಲವನ್ನೂ ಸೇರಿಸಿ ಚಿನ್ನ-ಬೆಳ್ಳಿ ಅಂಗಡಿಗೆ ಕೊಟ್ಟು ಅವುಗಳ ತೂಕಕ್ಕೆ ಪ್ರತಿಮೆಗಳಿಗೆ ಸಧಾ ಧರಿಸುವ ಬೆಳ್ಳಿಯ ಮುಖವಾಡಗಳನ್ನು ಇತ್ತೀಚಿಗೆ ತಂದು ನಿರಂತರವಾಗಿ ಅಲಂಕರಿಸುತ್ತ ಬಂದಿದೆ.

ಹಬ್ಬದ ಆಚರಣೆ ವೈಶಿಷ್ಟ್ಯಗಳು

[ಬದಲಾಯಿಸಿ]
  • ಶ್ರೀ ಮನೆಯಮ್ಮನವರ ಪುಂಮಿಲನ ದ್ವೈವಾರ್ಷಿಕ ಮಹಾ ಪೂಜೆಯನ್ನು ನಿಗದಿಪಡಿಸಿದ ಮೇಲೆ ಮಂದಿರದ ಬಾಗಿಲನ್ನು ತೆರೆದು ದೂಳುಹೊಡೆದು; ಗುಡಿಸಿ ನಂತರ ನೆಲವನ್ನು ತೊಳೆದು ಸ್ವಚಗೊಳಿಸಲಾಗುವುದು, ಗೋಡೆಗಳಿಗೆಲ್ಲ ಸುಣ್ಣ-ಬಣ್ಣ ಬಳಿದು ರಂಗುಗೊಳಿಸಲಾಗುವುದು ಹಬ್ಬದ ಹಿಂದಿನ ದಿನ ಅಂದರೆ ಗುರುವಾರ ಸಂಜೆ ವೇಳೆಯಲ್ಲಿ ದೇವ ಮಂದಿರದಿಂದ ನದಿಯ ದಡದವರೆಗೆ ರಸ್ತೆಯನ್ನು ಗುಡಿಸಿ, ನೀರುಹಾಕಿ, ದೂಳು ಏಳದಂತೆ ತಂಪು ಮಾಡಲಾಗುತ್ತದೆ ಮತ್ತು ದೇವಸ್ಥಾನದ ಮುಖ್ಯ ದ್ವಾರಕ್ಕೆ ಹಸಿರು ಚಪ್ಪರ ಹಾಕಿ ತಳಿರು ತೋರಣಗಳಿಂದ ಅಲಂಕರಿಸಲಾಗು ತ್ತದೆ; ದೇವಿಯವರನ್ನು ಪೂಜಿಸುವ ಪೂಜಾರಿಯು ಬುಧವಾರದ ಸಂಜೆಯಿಂದಲೇ ಉಪವಾಸದಿಂದ ಇರಬೇಕು. ಫಲಾಹಾರ ಮಾತ್ರ ಸೇವಿಸಬೇಕು. ಕಾರಣ ಗುರುವಾರ ರಾತ್ರಿ ೨ ಘಂಟೆಯಿಂದ ಶುಕ್ರವಾರ ಮದ್ಯಾಹ್ನ 3 ಘಂಟೆಯವರೆಗೆ ದೇವಸ್ಥಾನದ ಒಳಗಡೆ ಪೂಜಾಮಗ್ನರಾಗಿರುವುದ ರಿಂದ ಸನ್ನಿಧಿಯಿಂದ ಹೊರಕ್ಕೆ ಬರುವಂತಿಲ್ಲ. ಜಲ-ಮಲ ನಿಯಂತ್ರಣದಲ್ಲಿರ ಬೇಕಾಗಿರುವುದರಿಂದ ಈ ಕ್ರಮ ಅನಿವಾರ್ಯವಾಗಿದೆ. ಒಂದು ವೇಳೆ ಜಲ ಬಾದಿಯಾದರೂ ಸೂತಕವಾಗುತ್ತದೆ.
  • ಆಗ ಪುನಃ ಸ್ನಾನ, ಪೂಜೆ ಮಾಡಿ ಮಂದಿರ ಪ್ರವೇಶ ಮಾಡಬೇಕಾಗಿರುವ ಪ್ರಯುಕ್ತ ಕನಿಷ್ಟ ೧೮ ಘಂಟೆ; ಇವುಗಳನ್ನು ನಿಯಂತ್ರಿಸಬೇಕಾಗುತ್ತದೆ. ಈ ಅವಧಿಯಲ್ಲಿ ಯಾವುದೇ ದುರಭ್ಯಾಸಗಳನ್ನು ಮಾಡುವಂತಿರುವುದಿಲ್ಲ. ಇದು ಪೂಜಾರಿಯ ನಿಯಮಗಳು. ಅಮ್ಮನವರ ದೈವಾರ್ಷಿಕ ಪೂಜೆ ಬರುವ ಶುಕ್ರವಾರದ ಹಿಂದಿನ ರಾತ್ರಿ ೩ ಘಂಟೆ ವೇಳೆಗೆ ದೇವಿಯವರನ್ನು ಕುಂಭ ಸಮೇತ ಕವಚದಲ್ಲಿರಿಸಿ ಪುರೋಹಿತರು ಹಾಗೂ ಭಕ್ತರ ಸಮೇತ ಹೇಮಾವತಿ ನಡಿಗೆ ಬಿಜಯಂಗೈದು ನದಿಯ ಆಳದಿಂದ ಮರಳನ್ನು ತೆಗೆದು ದಡದ ಮೇಲೆ ಗದ್ದಿಗೆಯನ್ನು ಮಾಡಿ ಕುಂಭಗಳಲ್ಲಿದ್ದ ದೈವ ಜಲವನ್ನು ತುಂಬಿಸಿ ಮರಳಿನ ಗದ್ದಿಗೆಯ ಮೇಲೆ ಸ್ಥಾಪಿಸಿ ಶ್ರೀ ಮನೆಯಮ್ಮನವರನ್ನು ಒಂದು ಕುಂಭಕ್ಕೆ ಕಳಾಹ್ವಾನ ಮಾಡಿ ವಿಧಿ ವಿಧಾನಗಳ ಪ್ರಕಾರ ಪೂಜಿಸಿ ಲೀನಗೊಳಿಸಲಾಗುತ್ತದೆ.
  • ದೈವ ಶಕ್ತಿಯನ್ನು ಹೊಂದಿದ ಈ ಕುಂಭಕ್ಕೆ ಕರ್ಪೂರದ ಆರತಿ ಮಾಡಿ, ಕವಚದ ಒಳಕ್ಕೆ ಸ್ಥಾಪಿಸಲಾಗುವುದು. ನಂತರ ಇನ್ನೊಂದು ಕುಂಭಕ್ಕೆ ಗುರುಗಳವರಿಂದ ಉಪದೇಶಿಸಲ್ಪಟ್ಟ ಜೀವಜಲವೆಂದು ಸಂಕಲ್ಪಮಾಡಿ ಕ್ರಮವಾದ ಪೂಜೆ ಸಲ್ಲಿಸಿ ಅದನ್ನು ಪೆಟ್ಟಿಗೆ ಒಳಗಡೆ ಸ್ಥಾಪಿಸಿ ಪೂಜಾರಿ ಯ ತಲೆಯ ಮೇಲೆ ಅದೃಶ್ಯರೂಪದಲ್ಲಿದ್ದ ದೇವಿಯವರನ್ನು ನಡೆ ಮಡಿಯ ಮೇಲೆ ನಿಶಬ್ದತೆಯಿಂದ ಮೂಲ ಸ್ಥಾನಕ್ಕೆ ಕರೆತಂದು ಪುನರ್ ಸ್ಥಾಪನೆ ಮಾಡಲಾಗುವುದು. ಈ ಕ್ರಮವನ್ನು ಪ್ರತಿ 2 ವರ್ಷಗಳಿಗೊಮ್ಮೆ ಆರಾಧಿಸುತ್ತಾ ಬರಲಾಗಿದೆ. ಈ ದ್ವೈವಾರ್ಷಿಕ ಪುಂಮಿಲನ ಪೂಜಾ ಕಾರ್ಯ ಕ್ರಮದ ದಿನಕ್ಕೆ ಈ ಗ್ರಾಮದಲ್ಲಿ ಜನಿಸಿದವರಾಗಿದ್ದು ಹೊರಗಡೆ ಯಾವ ಭಾಗದಲ್ಲೆ ಇರಲಿ ಆದಿನ ಸನ್ನಿಧಿಗೆ ಬಂದು; ಶುದ್ಧ ಮಡಿ ಹಾಗೂ ನಂಬಿಕೆ ಭಕ್ತಿಯಿಂದ ಶ್ರೀ ಮನೆಯಮ್ಮ ನವರನ್ನು ಆರಾಧಿಸಿ ತೀರ್ಥ, ಪ್ರಸಾದ ಹಾಗೂ ದೋಷ ಪರಿಹಾರ ಸಂಕೇತವಾದ ಚಿಗಳಿಯನ್ನು ಪ್ರಸಾದ ಮಯವಾಗಿ ಪಡೆದು, ದೇವಿಯವರ ಕೃಪಾಶೀರ್ವಾದಕ್ಕೆ ಅರ್ಹರಾಗುತ್ತಿರುತ್ತಾರೆ.
  • ಇದೆ ದಿನಕ್ಕೆ ಪ್ರತಿ ಭಕ್ತರ ಮನೆಯಲ್ಲಿ ದೊಡ್ಡ ಹಬ್ಬವನ್ನಾಗಿ ಆಚರಿಸಿ ಸುಖ, ಸಂತೋಷಗಳನ್ನು ಹಂಚಿ ಕೊಳ್ಳುತಿರುವುದು ಜೀವಂತ ನಿದರ್ಶನಗಳಾಗಿವೆ ಹಾಗೂ ಶ್ರೀ ಮನೆಯಮ್ಮನವರು ನೆಲೆಯಾಗೀರುವ ಈ ಕೇರಿಯಲ್ಲಿ 'ವೀರಶೈವ' ರನ್ನು ಹೊರತುಪಡಿಸಿ ನಿಷ್ಠರಲ್ಲದ ಬೇರೆ ಧರ್ಮ ದವರು ನೆಲೆ ಯಶಸ್ಸನ್ನು ಕಾಣದೆ ಇರುವುದು; ದೇವಿಯ ಆಚಾರ, ಪರಿಶುದ್ಧತೆ, ಅಹಿಂಸಾ ತತ್ವದ ಆರಾದಕರೆಂದು ನಂಬಬುಹುದಾಗಿದೆ. ದ್ವೈವಾರ್ಷಿಕ ಮಹಾ ಪೋಜಾದಿನ ಶ್ರೀ ದೇವಿಯವರು ಸರ್ವಭಕ್ತರ ದರ್ಶನಕ್ಕಾಗಿ ಮಂದಿರದ ಗರ್ಭಾಂಕಣ ಗದ್ದುಗೆಯಮೇಲೆ ಛಾಯಾ ರೂಪ ದಿಂದಿದ್ದು ಎಲ್ಲಾ ಭಕ್ತರ ಮುಖ ದರ್ಶನ ಮಾಡುತ್ತಾರೆ; ಕನ್ಯಾಮಣಿ ಹಾಗೂ ಅತ್ಯಂತ ಸೌಂದರ್ಯವತಿಯಾಗಿರುವುದರಿಂದ, ಒಂಟಿಯಾಗಿ ವರ್ಷವಿಡೀ ಹೊರಗಡೆ ಇರಲು ಆತಂಕ, ಸಂಕೋಚದಿಂದ ಇಷ್ಟಪಡದೆ, ಈ ದಿನ ಸನ್ನಿಧಿಗೆ ಬಂದ ಎಲ್ಲಾ ಭಕ್ತರ ದರ್ಶನವಾದ ನಂತರ ಮಹಾ ಮಂಗಳಾರತಿ ಮಾಡಿದ ಮೇಲೆ; ಗರ್ಭಾಂಕಣದಲ್ಲಿ ನಿರ್ಮಿಸಲಾಗಿರುವ ನೆಲಮಾಳಿಗೆಯ ಗುಪ್ತ ಕೋಣೆಯ ಪ್ರಾಂಗಣದ ಗದ್ದುಗೆಯ ಮೇಲೆ ತಮ್ಮ ರಕ್ಷಾಕವಚ(ಪೆಟ್ಟಿಗೆ) ಸಮೇತ ಆಸೀನರಾಗುತ್ತಾರೆ.
  • ಮತ್ತೆ ತಮಗೆ ಸರ್ವಾಲಂಕಾರದ ವ್ಯಾಮೋಹ ಉಂಟಾದಾಗ ಹೊರಕ್ಕೆ ಬಂದು ಸ್ತ್ರೀ ಸಹಜ ರೂಪದಲ್ಲಿ ಸರ್ವಾಭರಣ ಸುಂದರಿಯಾಗಿ ಕುಳಿತು ವಿಜೃಂಭಿಸುತ್ತಿರುತ್ತಾರೆ ಕಾರಣ ಇಂತಹ ಸಮಯದಲ್ಲಿ ಗರ್ಭಗುಡಿಯ ಬಾಗಿಲನ್ನು ತೆರೆದರೆ ಮುಜುಗರ ಉಂಟಾಗಿ ಅವರ ಸಂತೋಷಕ್ಕೆ ಅಡಚಣೆ ಯಾಗಬಾರದೆಂದು ಪದೇ ಪದೇ ಬಾಗಿಲನ್ನು ತೆರೆಯದೆ ವಾರಕ್ಕೊಂದು ಸಲ ಪ್ರತಿ ಶುಕ್ರವಾರ ಮಾಡುವ ಪೂಜೆಯನ್ನು ಬಾಗಿಲಿನಿಂದಲೇ ಸ್ವೀಕಾರ ಮಾಡುತ್ತಾರೆ ಎಂಬ ನಂಬಿಕೆ ಜನಜನಿತವಾಗಿದೆ. ನಮ್ಮ ಗ್ರಾಮದಲ್ಲಿ ಎಲ್ಲ ಸರ್ವಶಕ್ತಿಯನ್ನು ಹೊಂದಿರುವ ಶ್ರೀ ಮನೆಯಮ್ಮ ದೇವಿಯ ವರನ್ನು ಭಕ್ತಿಯಿಂದ ನಂಬಿ ಕಷ್ಟ, ತೊಂದರೆಗಳ ನಿವಾರಣೆಗೆ ಸಂಕಲ್ಪ ಮಾಡಿ ಹರಕೆ ಹೊತ್ತು ಪೂಜಿಸಿದ ಆಸ್ತಿಕರಿಗೆಲ್ಲ ಕಳ್ಳತನವಾಗಿಹೋಗಿದ್ದ ವಸ್ತುಗಳು ಪುನಃ ಸಿಕ್ಕಿರುವುದು.
  • ಕಾಣೆಯಾಗಿದ್ದ ಜಾನುವಾರುಗಳು ಪುನಃ ಮನೆಗೆ ಬಂದಿರುವುದು ಅರ್ಹ ಯುವಕ-ಯುವತಿಯರಿಗೆ ವಿವಾಹ ಸಂಬಂಧ ಕೂಡಿಬಂದಿರುವುದು ನ್ಯಾಯಾಲಯದ ವ್ಯವಹಾರಗಳು ಬಗೆ ಹರಿದಿರುವುದು. ಗ್ರಾಮದಲ್ಲಿ ಶಾಂತಿ, ಸುಭಿಕ್ಷತೆ ನೆಲೆಸಿರುವುದು ಹೀಗೆ ಹತ್ತು ಹಲವಾರು ಸಮಸ್ಯೆಗಳಿಗೆ ಸ್ಪಂದಿಸಿ ಕೃಪೆಮಾಡುತ್ತಿರುವ ಸಂಬಂಧ ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಾ ಇದ್ದು, ಬಂದಿರುವ ಅನೇಕ ಹರಕೆ ವಸ್ತುಗಳು ಶ್ರೀ ದೇವಿಯವರನ್ನು ಅಲಂಕರಿಸುತ್ತಿರುವುದು ಪ್ರತ್ಯಕ್ಷ ನಿದರ್ಶನವಾಗಿದೆ. ದ್ವೈವಾರ್ಷಿಕ ಪುಂಮಿಲನ ಮಹಾಪೂಜೆಗೆ ದಿನ ನಿಗದಿಯಾದ ಮೇಲೆ ಹಿಂದಿನ ಸೋಮವಾರ ಅಂದರೆ ೫ ದಿನ ಮುಂಚಿತವಾಗಿ ಈ ಪೂಜಾಕಾರ್ಯಕ್ಕೆ ನೇಮಕ ಗೊಂಡಿರುವ ೫ ಜನ ಭಕ್ತರು ತಮ್ಮ ಸ್ನಾನ, ಪೂಜೆ ಮುಗಿಸಿಕೊಂಡು ಶುದ್ದ ಮಡಿಯಿಂದ ಬಾಳೆತೋಟಕ್ಕೆ ಹೋಗಿ ಪರಿಪಕ್ವವಾದ ೧೨ ಗೊನೆಗಳನ್ನು ಕಡಿದು ತೊಳೆದು ಶುದ್ದಗೊಳಿಸಿದ ಎತ್ತಿನ ಗಾಡಿ ಯಲ್ಲಿ ಸಾಗಿಸಿ ತಂದು ದೇವಸ್ಥಾನದ ಹಗೇವಿಗೆ ಇಡಲಾಗುವುದು;
  • ಈ ಅವಧಿ ಮದ್ಯೆ ಯಾವ ದೈಹಿಕ ವಿಸರ್ಜನೆ, ದುಶ್ಚಟ ಸೇವನೆ ಮಾಡುವಂತಿಲ್ಲ ಒಂದು ವೇಳೆ ಅಚಾತುರ್ಯ ನಡೆದು ಹೋದರೆ ಬಾಳೆಗೊನೆಗಳು ಹಣ್ಣಾಗದೇ ಹೋಗಿರುವುದು ಈ ಹಿಂದೆ ಹಿರಿಯರು ಅನುಭವಿಸಿರುವ ಕಹಿ ಅನುಭವವಾಗಿ ಪೂಜೆಯನ್ನೇ ಮುಂದೂಡಿದ ನಿದರ್ಶನಗಳಿವೆ; ಇದೇ ರೀತಿಯಲ್ಲಿ ತೆಂಗಿನಕಾಯಿ, ಪರಿಮಳ ದ್ರವ್ಯಗಳನ್ನು ತರುವಾಗಲೂ ಇದೇ ನಿಯಮಗಳನ್ನು ಅನುಸರಿಸಿ ಪೂಜಿಸಿರುವುದರಿಂದ ದೇವಿಯವರ ಅನುಗ್ರಹದಿಂದ ಸರ್ವರಿಗೂ ಮಂಗಳಕರವಾಗುವುದೆಂದು ನಂಬಿ ನಡೆಯೋಣ ಎಂಬುದಾಗಿ ಇಂದಿನ ಯುವ ಪೀಳಿಗೆಗೆ ಮಾರ್ಗದರ್ಶನ ಮಾಡಲಾಗಿರುತ್ತದೆ.

ನಂಬಿಕೆಗಳು

[ಬದಲಾಯಿಸಿ]
  • ಇದೆ ಗ್ರಾಮದ ನಂಜೇಗೌಡರ 'ಲಿಂII ಬಸಪ್ಪನವರ ಪುತ್ರ ಶ್ರೀ. ನಾಗರಾಜಪ್ಪ ಇವರ ಪುತ್ರಿ ಶ್ರೀಮತಿ. ರೂಪ ಎಂಬ ಕನ್ಯಾಮಣಿಗೆ ಒದಗಿ ಬಂದಿದ್ದ ತೊಂದರೆಯೂ 'ಶ್ರೀ ದೇವಿಯವರ' ಕೃಪೆಯಿಂದ ನಿವಾರಣೆಯಾಗಿ ಆಕೆಗೆ ಉತ್ತಮ ದಾಂಪತ್ಯ ಜೀವನ, ಸೇವಾಭಾಗ್ಯ ಮತ್ತು ಸುಖ ಜೀವನಕ್ಕೆ ಪ್ರೇರಣೆಯಾಗಿದ್ದಕ್ಕೆ ಹರಕೆಯ ವಸ್ತುವಾಗಿ ಒಂದು ಜೊತೆ ಬೆಲೆಬಾಳುವ ಕಂಚಿನ ದೀಪದ ಕಂಭಗಳನ್ನು ಸನ್ನಿಧಿಗೆ ಒಪ್ಪಿಸಿ ದೇವಿಯ ಆನುಗ್ರಹದಿಂದ ಸುಖ ಸಂತೋಷದಿಂದ ಬಾಳುತ್ತಿದ್ದಾಳೆ; ಹಾಗೂ ದೇವಮಂದಿರಕ್ಕೆ ನೆನಪಿನ ಕಾಣಿಕೆಯಾಗಿ ಜನೋಪೋಯೋಗಿ ಕೆಲಸವನು ಮಾಡಿ ಸುವ ಇಚ್ಛೆಯನ್ನು ಹೊಂದಿರುತ್ತಾಳೆ.
  • ಇದೆ ಗ್ರಾಮದ ಮತ್ತೊಬ್ಬ ದಾನಿ ಲಿಂII ಸಿದ್ಧವೀರಪ್ಪನವರ ಪುತ್ರಿ ಶ್ರೀ .ಸಿದ್ದಲಿಂಗಪ್ಪನವರ ಪುತ್ರಿ 'ಶ್ರೀಮತಿ ಶಶಿಕಲಾಎಂಬ ಕನ್ಯಾಮಣಿಗೆ ಶ್ರೀ ದೇವಿಯವರ ಕೃಪೆಯಿಂದ ತನ್ನ ತೊಂದರೆ ಪರಿವಾರವಾದ್ದರಿಂದ ಹರಿಸಿಕೊಂಡಿದ್ದಕ್ಕೆ ಅಭಿಷೇಕಕ್ಕೆ ಬಳಸುವ ಒಂದು ತಾಮ್ರದ ಬಿಂದಿಗೆ ಯನ್ನು ಸನ್ನಿಧಿಗೆ ಒಪ್ಪಿಸಿ ನೆಮ್ಮದಿಯ ಜೀವನವನ್ನು ಮಾಡುತ್ತಿದ್ದಾಳೆ. ಇದೇ ಗ್ರಾಮದ ನಂಜೇಗೌಡರ ಲಿಂIIಬಸಪ್ಪ ಇವರ ಪೌತ್ರ ಲಿಂII ಚನ್ನವೀರಪ್ಪ ಮತ್ತು ಗೌರಮ್ಮ ಇವರ ವರ ಪುತ್ರ ಕೊಡುಗೆ ದಾನಿ ಕೋಟಿವೀರ ಶ್ರೀ. ಹೆಚ್. ಎಸ್. ಸಿದ್ದಲಿಂಗಪ್ಪ ಉ ಮೂರ್ತಿ ಎಂಬುವವರು ಶ್ರೀ ಗ್ರಾಮದೇವತೆಯನ್ನು ಧೃಡವಾಗಿ ನಂಬಿ ಪರಮ ಭಕ್ತರಾಗಿರುವ ಸಂಬಂಧ ತಮ್ಮ ವೃತ್ತಿಯಲ್ಲಿ ತುಂಬಾ ಯಶಸನ್ನು ಕಂಡು ವಿದ್ಯುತ್ ಕೆಲಸಗಳ ಗುತ್ತಿಗೆಯಲ್ಲಿ ಹಂತ ಹಂತವಾಗಿ ಅಭಿವೃದ್ಧಿಯನ್ನು ಹೊಂದಿ, ಈಗ ಇದೆ ಇಲಾಖೆಯ ಪ್ರಥಮ ದರ್ಜೆ ಗುತ್ತಿಗೆದಾರರು ಮತ್ತು ವಿದ್ಯುತ್ ಸಲಕರಣೆಗಳ ಅಂಗಡಿ ಶ್ರೀ ಶಿಸಸಾಯಿ ಎಲೆಕ್ಟ್ರಿಕಲ್ ಎಂಟರ್‌ಪ್ರೈಸಸ್; ದಾಸರಹಳ್ಳಿ -ಬೆಂಗಳೂರು ಎಂಬ ಬೃಹತ್ ಸಂಕೀರ್ಣವನ್ನು ಹೊಂದಿರುತ್ತಾರೆ.
  • ಈ ಎಲ್ಲ ವ್ಯವಸ್ಥೆಗೆ ಚೈತನ್ಯ ಹಾಗೂ ಕೃಪೆಯಾಗಿದ್ದು 'ಶ್ರೀ ಗ್ರಾಮದೇವತೆಯವರು ಎಂಬುದಾಗಿ ತಮ್ಮ ಭಕ್ತಿಯ ವಾಣಿಯಿಂದ ಸ್ಮರಿಸಿ ತಮ್ಮ ಭಕ್ತಿಯ ಕಾಣಿಕೆಯಾಗಿ 'ಒಂದು ಕೆಜಿ ತೂಕದ ಬೆಳ್ಳಿಯ ಸ್ವಚ್ಛ, ಸುಂದರ ಮುಖವಾಡಗಳನ್ನು ಸನ್ನಿಧಿಗೆ ಒಪ್ಪಿಸಿ ಅವುಗಳಿಗೆ ಪುರೋಜೀತರಿಂದ ಅಭಿಷೇಕ, ಹೋಮ ಸಂಪ್ರದಯಾಯಕ ಪೂಜೆ ಮುಂತಾದ ಪುಣ್ಯವದನ ಕಾರ್ಯವನ್ನು ಮಾಡಿಸಿ ವಿಧಿ, ವಿಧಾನಗಳ ಪ್ರಕಾರ ದೈವ ಶಕ್ತಿಯನ್ನು ತುಂಬಿ ಪ್ರತಿಮೆಗಳಿಗೆ ಧಾರಣೆ ಮಾಡಿ, ಸಾಕ್ಷಾತ್ಕರಿಸುತ್ತಾರೆ. ಈ ವೈವಸ್ಥೆಯಿಂದ ದೇವಿಯವರ ತೇಜಸ್ಸು ಹಾಗೂ ಸುಂದರವಾದ ಮುಖದರ್ಶ ನ ಭಾಗ್ಯ ಭಕ್ತರಿಗೆ ದೊರೆಯುವಂತೆ ರೂಪಗೊಳಿಸುತ್ತಾರೆ.
  • ಇದೇ ಶುಭದಿನದಂದು ತಾ.೨೨-೦೫-೨೦೦೯, ಶುಕ್ರವಾರ ತೇಜೂರು ಸಿದ್ಧರಾಮೇಶ್ವರ ಮಠದ ಶ್ರೀ ಕಲ್ಯಾಣ ಸ್ವಾಮಿಗಳವರ ದಿವ್ಯ ಪಾದ ಪೂಜೆ ಕಾರ್ಯಕ್ರಮವನ್ನು ನೆರವೇರಿಸಿ, ಈ ಸಂಬಂಧ ಎಲ್ಲ ಭಕ್ತಮಂಡಳಿ ಯವರಿಗೆ ಪ್ರಸಾದ ವ್ಯವಸ್ಥೆಯನ್ನು ಮಾಡಿ ಶ್ರೀ ಗ್ರಾಮದೇವತೆಯವರ ಹಾಗೂ ಗುರು ಹಿರಿಯರ ಶುಭ ಹಾರೈಕೆಗೆ ಅರ್ಹರಾಗಿರುತ್ತಾರೆ ಮತ್ತು ಇದೆ ದಾನಿಯು ದೇವ ಮಂದಿರವನ್ನು ವಿಶಾಲವಾಗಿ, ಸುಂದರವಾಗಿ ಹೊಸದಾಗಿ ನಿರ್ಮಿಸಲು ಮೂರು ಲಕ್ಷ ರೂಪಾಯಿಗಳನ್ನು ದಾನವಾಗಿ ಕೊಡಲು ಭರವಸೆ ಕೊಟ್ಟಿರುತ್ತಾರೆ, ಕಾರಣ ಈ ಭಕ್ತನು ಧಾನಶೂರ ಹಾಗೂ ಗ್ರಾಮದ ಹೆಮ್ಮೆಯ ಪುತ್ರ ಎಂಬ ಹೆಗ್ಗಳಿಕೆಯನ್ನು ಪಡೆದಿರುತ್ತಾರೆ; ವೀರಶೈವ ಸಮಾಜವು ಇವರಿಗೆ ಕೃತಜ್ಞತೆಗಳನ್ನು ಸಲ್ಲಿಸಿರುತ್ತದೆ; ಇಂತಹ ಭಕ್ತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಾ ಬಂದಿರುವ ಕಾರಣ ಭಕ್ತಿಯ ಕಾಣಿಕೆಗಳು ಹೆಚ್ಚಾಗಿ ದೇವರ ಹುಂಡಿಯನ್ನು ಸೇರುವ ಮುನ್ಸೋಚನೆ ಗಳು ಕಂಡು ಬಂದಿರುತ್ತದೆ.
  • ಈ ಗ್ರಾಮದ ಹರಿಜನ ಬಾಂದವರು ಸಹ ಶ್ರೀ ದೇವಿಯವರನ್ನು ಭಕ್ತಿ, ನಂಬಿಕೆಗಳಿಂದ ಆರಾಧಿಸುತ್ತಿದ್ದಾರೆ. ಅವರೂ ಸಹ ತಮ್ಮ ಕಷ್ಟ ನಿವಾರಣೆಗಾಗಿ ಹರಕೆಗಳನ್ನು ಹೊತ್ತಂತೆ ದೇವಸ್ಥಾನಕ್ಕೆ ಬಣ್ಣ ಹೊಡೆಸುವುದು. ಹಣ್ಣು ಕಾಯಿ, ಕರ್ಪೂರ ಕೊಟ್ಟು ಪೂಜೆ ಮಾಡಿಸುವ ಸೇವೆಗಳನ್ನು ಮಾಡಿಕೊಂಡು ಬಂದಿರುತ್ತಾರೆ. ಶ್ರೀ ಉಡಿಶೀಲಮ್ಮ ಅರ್ಧಾತ್ ಗ್ರಾಮದೇವತೆಯವರು ಈ ಗ್ರಾಮದಲ್ಲಿ ನೆಲೆಯಾಗಲು ಮೂಲ ಕಾರಣರಾದ ಶ್ರೀ ಹಲಗೇಗೌಡರ ಸಂತತಿಯವರಲ್ಲಿ ಹಿರಿಯ ಮಕ್ಕಳೇ ಪಾಳೇಪಟ್ಟಿನ ಸರದಿಯಂತೆ ಪೂಜಾ, ವಿಧಿಗಳನ್ನು ಮಾಡಲು ಹಕ್ಕುದಾರ ರಾಗಿರುತ್ತಾರೆಂಬುದು ಸಾಗಿಬಂದ ವಿಷಯವಾಗಿದೆ; ಇದೆ ಪದ್ದತಿಯಂತೆ ಹತ್ತಾರು ತಲೆಮಾರಿನವರು ಆದಮೇಲೆ ಈಗಿನ ಹಿಂದೆ ಐದನೇ ತಲೆ ಮಾರಿನ ವಂಶಸ್ಥರಾದ ಶ್ರೀ ನಿಂಗೇಗೌಡರ ಕಾಲದಲ್ಲಿ ಈ ಪೂಜಾರಿಕೆ ಪದ್ಧತಿಯು ವಿಕೇಂದ್ರೀಕರಣಗೊಳ್ಳುತ್ತದೆ.
  • ಅಂದರೆ ಹುಟ್ಟಿದ ಎಲ್ಲ ಗಂಡು ಮಕ್ಕಳಿಗೂ ಪೂಜೆಯ ಜವಾಬ್ದಾರಿ ಬರುತ್ತದೆ. ನಿಂಗೇಗೌಡರಿಗೆ ಮೂರು ಜನ ಗಂಡು ಮಕ್ಕಳುಗಳು ಇರುತ್ತಾರೆ ಕ್ರಮವಾಗಿ 'ಶ್ರೀ ಈರೇಗೌಡ, ಸಿದ್ದೇಗೌಡ ಮತ್ತು ಪುಟ್ಟಸ್ವಾಮಿಗೌಡ ಎಲ್ಲರೂ ಅನ್ಯೋನ್ಯವಾಗಿ ಬಾಳುತ್ತಿರುತ್ತಾರೆ. ನಿಂಗೇಗೌಡರು ಮೊದಲು ಇಬ್ಬರು ಮಕ್ಕಳಿಗೆ ಮದುವೆ ವಗೈರೆ ಮಾಡಿ ತಮ್ಮ ಜವಾಬ್ದಾರಿಯನ್ನು ಮುಗಿಸಿ ಕೊಂಡಿರುತ್ತಾರೆ.' ಆದರೆ ಅನಾರೋಗ್ಯದಿಂದ ಕೆಲವೇ ಸಮಯದಲ್ಲಿ ವಿಧಿ ವಶರಾಗುತ್ತಾರೆ. ಆಗ ಸಂಸಾರದ ಜವಾಬ್ದಾರಿಯೂ 'ಈರೇಗೌಡರ' ಮೇಲೆ ಬರುತ್ತದೆ. ಇವರು ಸ್ವಲ್ಪ ಜಡ ಸ್ವಭಾವದವರು ಎಲ್ಲ ಕೆಲಸಗಳನ್ನು ಎರಡನೇ ಸಿದ್ದೇಗೌಡರು ನಿಭಾಯಿಸಿ ಕೊಂಡು ಹೋಗುತ್ತಿರುತ್ತಾರೆ ಆದರೆ ಮೂರನೇ 'ಪುಟ್ಟಸ್ವಾಮಿಗೌಡ' ಧಾರ್ಮಿಕ ವಿಚಾರದಲ್ಲಿ ತುಂಬಾ ಆಸಕ್ತರಾಗಿದ್ದು ಹೊರ ಸಂಚಾರ ಸ್ವಭಾವ ಉಳ್ಳವರು ಮನೆ ಕೆಲಸಗಳ ಬಗ್ಗೆ ಸ್ವಲ್ಪವೂ ಆಸಕ್ತಿ ವಹಿಸುತ್ತಿರಲಿಲ್ಲ.
  • ಈ ಪರಿಸ್ಥಿತಿಯಿಂದ ಸಹೋದರರ ಮದ್ಯೆ ಮನಸ್ಥಾಪಗಳು ಹುಟ್ಟಿ ಕೊಳ್ಳುತ್ತವೆ ಕಾರಣ ಆಸ್ತಿಯನ್ನು ವಿಭಾಗ ಮಾಡಿ ಕೊಳ್ಳುವ ವಿರ್ಧಾರಕ್ಕಾಗಿ ಬರುತ್ತಾರೆ. ನಿಂಗೇಗೌಡರ ಅನುಭವದಲ್ಲಿದ್ದ ಸ್ವಂತ ಆಸ್ತಿ ಹಾಗೂ ದೇವರ ಕೊಡುಗೆ ಜಮೀನುಗಳನ್ನು ಸಮನಾಗಿ ಮೂರು ಭಾಗಗಳನ್ನಾಗಿ ಮಾಡುತ್ತಾರೆ. ಇದರಲ್ಲಿ 'ಸಿದ್ಧೇಗೌಡರು ಮಾತ್ರ ಒಂದು ಭಾಗದ ಆಸ್ತಿಯನ್ನು ವಹಿಸಿಕೊಂಡು, ತಮ್ಮ ವ್ಯವಹಾರವನ್ನು ಬೇರೆ ಮಾಡಿಕೊಳ್ಳುತ್ತಾರೆ ಹಾಗೂ ಒಂದು ವರ್ಷ ಕಾಲ ದೇವರ ಪೂಜೆ ಮಾಡಿಕೊಂಡು ಹೋಗಲು ಒಪ್ಪಿಕೊಂಡಿರುತ್ತಾರೆ. ಒಂದನೇ ಈರೇಗೌಡ ಮತ್ತು ಮೂರನೇ ಪುಟ್ಟಸ್ವಾಮಿ ಒಟ್ಟಿಗೆ ಇದ್ದುಕೊಂಡು ಎರಡು ಭಾಗ ಆಸ್ತಿ ಮತ್ತು ಎರಡು ವರ್ಷ ದೇವರ ಪೂಜೆ ಮಾಡಲು ಜವಬ್ದಾರರಾಗುತ್ತಾರೆ;
  • ಪುಟ್ಟಸ್ವಾಮಿಯವರು ಅವಿವಾಹಿತರು ಹಾಗೂ ದೈವ ಭಕ್ತಿ ಉಳ್ಳವರು ಪ್ರತಿ ಶುಕ್ರವಾರ ಶ್ರದ್ದಾ ಭಕ್ತಿಯಿಂದ ಗ್ರಾಮದೇವಟೆಯವರ ಪೂಜೆಯನ್ನು ನಿರಂತರವಾಗಿ ಮಾಡುತ್ತಿದ್ದ ಸಂಬಂಧ ದೈವ ಪ್ರೇರಿತರಾಗಿ ಕೆಲವು ಧಾರ್ಮಿಕ ಕ್ಷೇತ್ರಗಳ ದರ್ಶನ ಮಾಡುವ ಹಂಬಲವುಂಟಾಗಿ ಒಂದು ಶುಭದಿನ ದಂದು; ಅಣ್ಣನವರ ಒಪ್ಪಿಗೆ ಪಡೆದು ಪಡುವಣ ದಿಕ್ಕಿನತ್ತ ಕಾಲುನಡಿಗೆಯಲ್ಲಿ ಹೋರಾಡುತ್ತಾರೆ. ದಾರಿ ಮಧ್ಯೆ ಕೆಲವು ಗ್ರಾಮಗಳಲ್ಲಿ ವಾಸ್ತವ ಮಾಡಿ ತಮ್ಮ ನಿತ್ಯದ ಕಾಯಕಗಳನ್ನು ಪ್ರಸಾದದ ವ್ಯವಸ್ಥೆಯನ್ನು ಮಾಡಿಕೊಳ್ಳುತ್ತಾ ಹಳೇಬೀಡು, ಬೇಲೂರು ದರ್ಶನ ಮಾಡಿಕೊಂಡು ಚಿಕ್ಕಮಗ ಳೂರಿಗೆ ತಲುಪುತ್ತಾರೆ. ಇಲ್ಲಿ ಆಯಾಸ ಪರಿಹರಿಸಿಕೊಂಡು ಇಲ್ಲಿನ ಪುರಜನರ ಸಹಕಾರದಿಂದ ಆರು ಮೈಲಿ ದೂರದಲ್ಲಿರುವ ಶ್ರೀ ನಿರ್ಮಾಣಸ್ವಾಮಿ ಮಠ ಇರುವುದನ್ನು ತಿಳಿದು ಅಲ್ಲಿಗೆ ಪ್ರಯಾಣ ಬೆಳೆಸುತ್ತಾರೆ.
  • ಮುಸ್ಸಂಜೆ ವೇಳೆಗೆ ಮಠಕ್ಕೆ ಬಂದು ತಲುಪುತ್ತಾರೆ, ಶ್ರೀ ಮಠದ ಗುರುಗಳನ್ನು ದರ್ಶನ ಮಾಡಿ ತಮ್ಮ ಪರಿಚಯ ಮಾಡಿಕೊಂಡು ಆಶ್ರಯವನ್ನು ಪಡೆಯುತ್ತಾರೆ ನಂತರ ಶಿವ ಪೂಜೆ ಪ್ರಸಾದವಾದ ಮೇಲೆ ವಿಶ್ರಾಂತಿಯನ್ನು ತೆಗೆದುಕೊಳ್ಳುತ್ತಾರೆ ಮರುದಿನ ಮುಂಜಾನೆ ಎದ್ದು ಶ್ರೀಗಳವರ ಸಲಹೆಯಂತೆ ಸ್ನಾನ, ಪೂಜಾ ವ್ಯವಸ್ಥೆಗಳನ್ನೆಲ್ಲ ಮಾಡಿ ಕೊಡಲೇ ತಮ್ಮ ಸ್ನಾನ ಪೂಜೆ ಮುಗಿಸಿ ಪ್ರಸಾದದ ಸಿದ್ಧತೆಗೆ ತೊಡಗುತ್ತಾರೆ; ಗುರುಗಳವರ ಸ್ನಾನ, ಪೂಜೆ ಮುಗಿಯುವುದರೊರಳಗೆ ಪ್ರಸಾದ ಸಿದ್ಧವಾಗುತ್ತದೆ ಮೊದಲು ಗುರುಗಳಿಗೆ ಲಿಂಗಾರ್ಪಿತವಾದಾನಂತರ ತಾವು ಪ್ರಸಾದ ತೆಗೆ ದುಕೊಳ್ಳುತ್ತಾರೆ, ಈ ದಿನ ವ್ಯವಸ್ಥೆಯೊಂದ ಗುರುಗಳವರಿಗೆ ಅನುಕೂಲವಾಗಿರುತ್ತದೆ. ಕಾರಣ ಮಠದ ಶಿಷ್ಯನಾಗಿ ಕೆಲವುದಿನ ಸೇವೆ ಮಾಡಿ ಕೊಂಡಿರಲು ಆದೇಶಿಸುತ್ತಾರೆ.
  • ಇಲ್ಲಿ ಪರಿಸರ, ಪ್ರಕೃತಿ, ಸೌಂದರ್ಯ, ಗುರುಗಳ ಶಿವಪೂಜಾವಿಧಾನ ಶಿಷ್ಯನನ್ನು ಪ್ರಭಾವಿತನನ್ನಾಗಿ ಮಾಡುತ್ತದೆ; ಈತನ ಸೇವೆಯನ್ನು ಗುರುಗಳು ಬಹಳ ಮೆಚ್ಚಿಕೊಂಡಿದ್ದರು, ಇಲ್ಲಿದ್ದ ಕೆಲವು ವರ್ಷಗಳಲ್ಲಿ ಹತ್ತಿರವಿರುವ ಪಂಚಪೀಠಗಳೊಲ್ಲೊಂದಾದ 'ಶ್ರೀ ರಂಭಾಪುರಿ' ಮಠವನ್ನು ದರ್ಶ ನ ಮಾಡಿ ಬರಬೇಕೆಂದು ಆಕಾಂಕ್ಷೆಯಾಗುತ್ತದೆ; ಗುರುಗಳವರಿಂದ ದಾರಿಯನ್ನು ತಿಳಿದು ಅಪ್ಪಣೆಪಡೆದು ಒಂದು ಶುಭ ದಿನ ಉದಯ ಕಾಲದಲ್ಲಿ ಹೊರಟು; ಇಲ್ಲಿಗೆ ೩೫ ಮೈಲಿ ದೂರದಲ್ಲಿರುವ ಬಾಳೆಹೊನ್ನೂರನ್ನು ಅಪರಾನ ೩ ಘಂಟೆಗೆ ತಲುಪಿ ಗುರುಗಳವಾರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿ ಆಯಾಸ ಪರಿಹಾರಕ್ಕಾಗಿ ಕೆಲವು ದಿನ ಅಲ್ಲಿದ್ದು ವೀರಶೈವ ಧರ್ಮದ ತತ್ವ, ಸಿದ್ಧಾಂತ, ಶಿವಪೂಜಾ ವಿಧಾನಗಳನ್ನು ಕರಗತ ಮಾಡಿಕೊಂಡು, ಪುನಃ ಅಲ್ಲಿಂದ ಹೊರತು 'ಶ್ರೀ ನಿರ್ವಾಣ'ಸ್ವಾಮಿ ಮಠಕ್ಕೆ ಬಂದು ಅಲ್ಲಿ ಶಿಷ್ಯನಾಗಿ ತಮ್ಮ ಇಳಿವಯಸ್ಸಿನವರಿಗೂ ಸೇವೆ ಮಾಡಿ ಸ್ವಾಮಿಗಳ ಪ್ರೇರಣೆಯಂತೆ ವಿರಕ್ತಾಶ್ರಮ ಧರ್ಮವನ್ನು ಸ್ವೀಕರಿಸಿ ಅಲ್ಲಿಂದ ಬಂದು ಶಿವಲಿಂಗವನ್ನು ತೆಗೆದುಕೊಂಡು ತಾಯ್ನಾಡಿಗೆ ವಾಪಸ್ಸು ಬರುತ್ತಾರೆ.

ಗೌಡರ ಲಿಂಗೈಕ್ಯತೆ

[ಬದಲಾಯಿಸಿ]
  • ಇಲ್ಲಿಗೆ ಬಂದು ಹಿರಿಯ ಅಣ್ಣನವರಾದ ಈರೇಗೌಡರ ಜೊತೆಗೆ ಸೇರಿಕೊಂಡು ಮನೆಯಲ್ಲಿ 'ಶ್ರೀ ನೀರ್ವಾಣ' ಸ್ವಾಮಿಯವರ ಗದ್ದುಗೆಯನ್ನು ಮಾಡಿ ಮಠದಿಂದ ತಂದಿದ್ದ ನೀರ್ವಾಣ ಸ್ವ್ವಾಮಿ ಹೆಸರಿನ 'ಲಿಂಗವನ್ನು ಸ್ಥಾಪನೆ ಮಾಡಿ ನಿತ್ಯವೂ ಧೃಡ ಭಕ್ತಿಯಿಂದ ಪೂಜೆಯನ್ನು ಮಾಡುತ್ತಾ ವಾರದ ದಿನಗಳಲ್ಲಿ 'ಶ್ರೀ ಗ್ರಾಮದೇವತೆಯನ್ನು' ಪೂಜಿಸುತ್ತಾ ವೈರಾಗಿಯಾಗಿ ಜೀವನವನ್ನು ಕಳೆಯುತ್ತಿರುತ್ತಾರೆ. ಹೀಗಿದ್ದಾಗ ಕೆಲವು ವರ್ಷಗಳು ಕಳೆದ ಮೇಲೆ ತಮ್ಮ ಮುಕ್ತಿ ಮಾರ್ಗದ ಅಂತಿಮ ಗೀತೆಯನ್ನು ಹಾಡಿ 'ಲಿಂಗೈಕ್ಯರಾಗುತ್ತಾರೆ'; ನಂತರ ಇವರ ಅಂತಿಮ ವಿಧಿ ವಿಧಾನ ಗಳೆಲ್ಲಾ 'ಈರೇಗೌಡರೆ' ನಿರ್ವಹಿಸಿದ ಕಾರಣ ಎರಡು ಭಾಗದ ಆಸ್ತಿ ಮತ್ತು ಎರಡು ವರ್ಷಗಳ ದೇವರ ಪೂಜೆಗೆ ಜವಾಬ್ದಾರರಾಗುತ್ತಾರೆ.
  • ಈ ಸಂಬಂಧ ಈರೇಗೌಡರ ಮನೆಯಲ್ಲಿ 'ಶ್ರೀ ನೀರ್ವಾಣ'ಸ್ವಾಮಿಯವರ ಮೂರ್ತಿ ಇದ್ದದ್ದು ಸತ್ಯ ಸಂಗತಿಯಾಗಿದೆ. ಶ್ರೀ ಗ್ರಾಮದೇವತೆಯನ್ನು ಈ ಗ್ರಾಮದಲ್ಲಿ ನೆಲೆ ಮಾಡಲು ಕಾರಣರಾಗಿದ್ದ 'ಹಲಗೇಗೌಡರ' ಹಕ್ಕು ಭದ್ಯತೆಗೆ ಸೇರಿದ ದೇವರ ಕೊಡುಗೆ ಜಾಮೀನು ಸರೈನಂ: ೨೩/೬ ಅಲ್ಲಿ ಒಟ್ಟೂ ೧-೧೬ ಎಕರೆ ಋಷ್ಕಿ ಇದರ ಪೈಕಿ ಪೂರ್ವ ಭಾಗಕ್ಕೆ ೧೬ ಗುಂಟೆಯನ್ನು ದೇವರ ಬನಕ್ಕಾಗಿ ಕಾಯ್ದಿರಿಸಲಾಯಿತು. ಉಳಿದ ೧-೦೦ ಎಕರೆಯನ್ನು ಇವರ ವಂಶಸ್ತರು ಮೂರು ಭಾಗಗಳಾಗಿ ವಿಂಗಡಿಸಿ ತಮ್ಮ ಮೂರು ಮಕ್ಕಳಿಗೆ ತಲಾ ೧೩ ರವರೆ ಗುಂಟೆಯಂತೆ ಹಂಚಿಕೆ ಮಾಡಿದರು. ಈರೇಗೌಡರಿಗೆ ೨ ಭಾಗದ ಒಟ್ಟೂ ೨೭ ಗುಂಟೆ ಸೇರುತ್ತದೆ.
  • ಈಗ ಅವರ ಪೀಳಿಗೆಯವರಾಗಿರುವ ಹೆಚ್ ಎಸ್.ಸಿದ್ದಲಿಂಗಪ್ಪ ಬಿನ್ ಸಿದ್ದವೀರಪ್ಪ ಇವರಿಗೆ ೭ ಗುಂಟೆ ಜಮೀನು ೬ ತಿಂಗಳ ಕಾಲ ದೇವರ ಪೂಜೆ ಹೆಚ್ ಎಸ್. ಚಂದ್ರಪ್ಪ ಬಿನ್ ಸಿದ್ದಲಿಂಗಪ್ಪ ಉ. ಪುಟ್ಟಸ್ವಾಮಿ ಇವರಿಗೆ ೭ ಗುಂಟೆ ಜಮೀನು ೬ ತಿಂಗಳ ದೇವರ ಪೂಜೆ; ಹೆಚ್ ಎಸ್. ಬಸವರಾಜಪ್ಪ ಉ ರಾಜ ಇವರಿಗೆ ೬ ವರೆ ಗುಂಟೆ ಜಮೀನು ೬ ತಿಂಗಳ ಪೂಜೆ ಮತ್ತು ಹೆಚ್ ವಿ ಸಿದ್ದಲಿಂಗಪ್ಪ ಬಿನ್ ವೀರಣ್ಣ ಇವರ ಮಗ 'ಅಣ್ಣಪ್ಪ'ನಿಗೆ ೬ ವರೆ ಗುಂಟೆ ಜಮೀನು ೬ ತಿಂಗಳ ದೇವರ ಪೂಜೆ ಈ ವ್ಯವಸ್ಥೆಯನ್ನು ಸಹೋದರರ ಮದ್ಯೆ ಮಾಡಿಕೊಂಡಿರುವ ಒಳ ಒಪ್ಪಂದದಂತೆ ನೆಡೆದುಕೊಂಡು ಹೋಗುತ್ತಿದ್ದಾರೆ.
  • ಎರಡನೇ ಸಹೋದರರಾದ 'ಶ್ರೀ ಸಿದ್ದೇಗೌಡರ' ಪೀಳಿಗೆಯ ಶ್ರೀ ಹೆಚ್ ವಿ. ಸಿದ್ಧಲಿಂಗಪ್ಪ ಉ ಸ್ವಾಮಿ ಇವರಿಗೆ ೩ವರೆ ಜಮೀನು ೩ ತಿಂಗಳು ದೇವರ ಪೂಜೆ ಹೆಚ್ ಬಿ. ಸಿದ್ದಲಿಂಗಪ್ಪ ಉ ಉದ್ದಾರಣ್ಣ ಬಿನ್ ಸಿದ್ದವೀರಪ್ಪ ಇವರಿಗೆ ೩ ವರೆ ಗುಂಟೆ ಜಮೀನು ೩ತಿಂಗಳು ದೇವರ ಪೂಜೆ; ಬಿ. ಬಸಪ್ಪ a/ss ಸಿದ್ದಲಿಂಗಪ್ಪ ಇವರಿಗೆ ೩ ಗುಂಟೆ ಜಮೀನು ೩ ತಿಂಗಳ ದೇವರ ಸೇವೆ; ಈ ಕ್ರಮದಲ್ಲಿ ಮಾಡಿಕೊಂಡಿರುವ ವ್ಯವಸ್ಥೆಗೆ ಅನುಸಾರವಾಗಿ ಹಾಲಿ ೮ ಕುಟುಂಬದವರು ದೇವರ ಪೂಜೆಯನ್ನು ಪ್ರತಿ ಶುಕ್ರವಾರ ಸ್ವಲ್ಪವೂ ಚ್ಯುತಿಯಾಗ ದಂತೆ; ತಮ್ಮ ವಂಶ ಪಾರಂಪರ್ಯವಾಗಿ ನೆಡೆಸಲು ಒಪ್ಪಿಕೊಂಡಿರುವಂತೆ ಇಂದಿನ ದಿನಗಳವರೆಗೂ ಸಾರೋದ್ದಾರವಾಗಿ ನೆರವೇರುತ್ತಾ ಬಂದಿದೆ.

ಬರಗಾಲ ಸಂದರ್ಭ ಗ್ರಾಮದೇವತೆಗಳ ಜಗಳ

[ಬದಲಾಯಿಸಿ]
  • ಕೋಸಲ ದೇಶವೆಂಬುದು ಕರ್ನಾಟಕ ಮತ್ತು ಆಂದ್ರ ಪ್ರದೇಶದ ಗಡಿ ಭಾಗದಲ್ಲಿರುವ ಬೆಂಗಾಡು ಪ್ರದೇಶ ಈ ಪ್ರದೇಶವು ಯಾವಾಗಲೂ ಬರಗಾಲಕ್ಕೆ ತುತ್ತಾಗುತ್ತಿದ್ದರಿಂದ ಜನಗಳಿಗೆ ಜೀವನ ನಿರ್ವಹಣೆ ಮಾಡುವುದು ಬಹಳ ಕಷ್ಟವಾಗುತ್ತದೆ; ಕಾರಣ ಕೆಲಸವನ್ನು ಹುಡಿಕಿಕೊಂಡು ಬೇರೆ ಕಡೆಗೆ ಗುಳೇ ಹೋಗುತ್ತಾರೆ. ಇಂತಹ ಪರಿಸ್ಥಿತಿ ಎದುರಾದಾಗ ಜನರಲ್ಲಿ ಆಚಾರ ವಿಚಾರ, ಧೈವ ಭಕ್ತಿ ಕಡಿಮೆಯಾಗಿ ಇಲ್ಲಿನ ಗುಡಿ ಗೋಪುರಗಳಲ್ಲಿದ್ದ ದೇವತೆಗಳಿಗೆ ಪೂಜೆ ಪುರಸ್ಕಾರಗಳು ನಿಂತು ಹೋಗುತ್ತವೆ: ಆದ ಕಾರಣ ಈ ಪ್ರದೇಶದಲ್ಲಿ ನೆಲೆಯಾಗಿದ್ದ ಯಕ್ಷ ದೇವತೆಗಳಿಗೂ ಯಾವ ವಿಧವಾದ ಪುರಸ್ಕಾರಗಳು ಇಲ್ಲದಂತಾಗುತ್ತದೆ; ಇದರಿಂದ ಆತಂಕ ಮತ್ತು ಬಳಲಿಕೆಗೆ ಒಳಗಾಗುತ್ತಾರೆ;
  • ಆದ ಕಾರಣ ಸಮೃದ್ಧಿ ಇರುವ ಸ್ಥಳಗಳಿಗೆ ಸ್ಥಾನ ಪಲ್ಲಟ ಮಾಡಲು ನಿರ್ಧರಿಸಿ ಈ ನಾಲ್ಕು ಜನ ಯಕ್ಷ ಕನ್ಯೆಯರು, ಪಶ್ಚಿಮಾಭಿಮುಖವಾಗಿ ಹೊರಡುತ್ತಾರೆ ; ಜನರಲ್ಲಿ ಧೈವ ಭಕ್ತಿ ಹಾಗೂ ಸುಭಿಕ್ಷ ಸಮೃದ್ದಿಯಿಂದ ಕೂಡಿದ ಪ್ರದೇಶವನ್ನು ಅರಸುತ್ತಾ ಅನೇಕ ದಿನಗಳವರೆಗೆ ಪ್ರಯಾಣ ಮಾಡುತ್ತಾರೆ ಮಾರ್ಗ ಮಧ್ಯದಲ್ಲಿ ಯಾವ ಪ್ರದೇಶವು ಅವರಿಗೆ ಸೂಕ್ತವಾಗಿ ಕಂಡು ಬರುತ್ತಿರಲಿಲ್ಲ ಕೊನೆಗೆ ಮೈಸೊರು ಸೀಮೆಗೆ ಸೇರಿದ 'ನರಸೀಪುರದ' ನರಸಿಂಹ ನಾಯಕನ ಅಧಿಕಾರ ವ್ಯಾಪ್ತಿಗೆ ಬರುವ ಒಂದು ಕುಗ್ರಾಮಕ್ಕೆ ಬಂದು ಸೇರುತ್ತಾರೆ; ಇಲ್ಲಿನ ಪ್ರಕೃತಿ, ಗಿರಿ, ವನಗಳಿಂದ ಕೂಡಿದ ಸುಂದರ ಪ್ರದೇಶವು ತುಂಬಾ ಇಷ್ಟವಾಗುತ್ತದೆ.
  • ಅಂದ, ಚಂದದ ಪುಷ್ಪ ವೃಕ್ಷಗಳಾದ ನಾಗಲಿಂಗ, ಸುರಹೊನ್ನೆ ಕೇದಿಗೆ, ಬಿಲ್ಪತ್ರೆ, ನೀಲಿ ಹೂವು, ಕೆಂಡ ಸಂಪಿಗೆ, ಗೋಲ್ಡ್ಮೊಹರ್ ಹಾಗೂ ಹೂವಿನ ಬಳ್ಳಿಗಳಾದ ಕಾಡುಗುಲಾಬಿ, ಮಲ್ಲಿಗೆ, ಪಾರಿಜಾತ, ರಾತ್ರಿ ರಾಣಿ, ನಿತ್ಯಪುಷ್ಪ ದೇವಕಣಗಳ ವಿವಿಧ ಬಗೆಯ ದಾಸವಾಳದ ಹೂಗಳು ಮುಂತಾದ ಪುಷ್ಪ ಸಮೂಹಗಳಿಂದ ಕಂಗೊಳಿಸುತ್ತಾ ಇರುವುದು; ಸಮೃದ್ಧಿ, ಹಸಿರು, ಪೈರುಗಳಿಂದ ಕೂಡಿ ಜನರಲ್ಲಿ ದಾರಿದ್ರ್ಯವನ್ನು ದೂರ ಮಾಡಿರುವುದರ ಕಾರಣ ಹಲವಾರು ದೇವ ಮಂದಿರಗಳನ್ನು ಹೊಂದಿದ್ದರಿಂದ ಜನರಲ್ಲಿ ಆಚಾರ, ಧೈವ ಭಕ್ತಿ ಹೆಚ್ಚಾಗಿರಬಹುದೆಂದು ಭಾವಿಸುತ್ತಾ. ಮತ್ತು ಈ ಪರಿಸರ, ಹವಾಮಾನ ಇಷ್ಟವಾದ ಕಾರಣ ತಮಗೆ ಸೂಕ್ತವಾದ ಏಕಾಂತ ಸ್ಥಳದ ಅನುಕೂಲ ಇದ್ದ ಪ್ರಯುಕ್ತ ಈ ಪರಿಸರದಲ್ಲಿ ನೆಲೆಯಾಗಲು ಸಂಕಲ್ಪ ಮಾಡುತ್ತಾರೆ;
  • ಈ ಸುತ್ತ ಎಲ್ಲಿ ನೋಡಿದರು ಸುಹಾಸನ ಭರಿತವಾದ ಬಣ್ಣ ಬಣ್ಣದ ಹೂವುಗಳು ಕಂಡುಬರುತ್ತಿದ್ದರಿಂದ ಕನ್ಯೆಯರು ತೆಲುಗುಮೂಲದವರಾಗಿದ್ದ ಕಾರಣ ಈ ಸಮುಚ್ಚಯಕ್ಕೆ ಪೊವಿನ ಹಳ್ಳಿ ಎಂದು ಕರೆದಿದ್ದರು ಕಾಲಕ್ರಮೇಣ ಈ ಭಾಗದಲ್ಲಿ ಭಕ್ತರ ಸಂಖ್ಯೆ ಹೆಚ್ಚಾದ ಮೇಲೆ ಸ್ಥಳೀಯ ಬಾಷೆಯಲ್ಲಿ ಹೂವಿನಹಳ್ಳಿ ಎಂಬುದಾಗಿ ಗುರುತಿಸಿಕೊಂಡಿರಬಹುದೆಂದು ನಂಬ ಬಹುದಾದ ಸಂಗತಿಯಾಗಿದೆ. ಈ ಬೆಳವಣಿಗೆಗಳೆಲ್ಲ ಮುಂದುವರಿದ ನಂತರದಲ್ಲಿ ಈ ಕನ್ಯೆಯರಿಗೆ ಉತ್ತಮ ಆಶ್ರಯ, ಬೆಂಬಲ ಸಿಕ್ಕಿದಂತಾಗುತ್ತದೆ. ಇವರ ನಿತ್ಯದ ಕಾಯಕಗಳೆಂದರೆ; ನಸುಕಿನಲ್ಲಿ ಪಕ್ಕದ 'ಹೇಮಾವತಿ' ನದಿಗೆ ಹೋಗಿ ತಮ್ಮ ನಿತ್ಯದ ಕರ್ತವ್ಯಗಳನೆಲ್ಲ ಮುಗಿಸಿ ಸ್ನಾನಾದಿ ನಿಯಮಗಳನ್ನು ಮಾಡಿ ತಮ್ಮ ತಮ್ಮಲ್ಲಿದ್ದ ಸುವರ್ಣಗಿಂಡಿ (ಮಣ್ಣಿನ)ಗಳಿಂದ ಗಂಗಾ ಜಲವನ್ನು ತೆಗೆದುಕೊಂಡು ನದಿ ಪಕ್ಕದ 'ಶ್ರೀ ರುದ್ರೇಶ್ವರ' ದೇವರಿಗೆ ಹಾಗೂ ಬಿಲ್ವತ್ರೆಮರಗಳಿಗೆ ಪ್ರದಕ್ಷಿಣೆ ಮಾಡಿ 'ನಡೆ ಮಡಿ'ಯ ಮೇಲೆ ಬಂದು ನಿರ್ಜನ ಹಾಗೂ ವಿಶಾಲವಾದ ಆಲದ ಮರ ಬನದಲ್ಲಿ ತಮ್ಮ ಸಂಕಲ್ಪ ಜಲದಿಂದ ದೋಷಮುಕ್ತಗೊಳಿಸಿ ಕನ್ಯಾಮಣಿಯಾಗಿದ್ದ ಕಾರಣ ನಿಜರೂಪವನ್ನು ಕಳೆದು ನಾಲ್ಕು ಶೀಲಾ ರೂಪದಲ್ಲಿ ವೃಕ್ಷದ ಕೆಳಗೆ ನೆಲೆಯಾಗುತ್ತಾರೆ.
  • ಈ ಕನ್ಯಾಮಣಿಯರ ನಾಮಾಂಕಿತ ಕ್ರಮವಾಗಿ ಬನ್ನಿಕಟ್ಟಮ್ಮ, ಎರಡನೇ ಆಲಕಮ್ಮ, ಮೂರನೇ ಮುನಿಯಮ್ಮ, ನಾಲ್ಕನೇ ಲಕ್ಷ್ಮಮ್ಮ ಎಂಬುದಾಗಿ ಸರ್ವಶಕ್ತಿಯನ್ನು ಹೊಂದಿರುತ್ತಾರೆ.' ಇವರು ದಿನನಿತ್ಯ ತಮ್ಮ ಕಾಯಕಗಳನ್ನು ಮಾಡಿಕೊಂಡು; ಈ ಗ್ರಾಮದ ಜನಗಳ ಮನಸ್ಸಿನ ಮೇಲೆ ಭಕ್ತಿ ಮಾರ್ಗದ ವಿಷಯಗಳನ್ನು ಪ್ರೇರೇಪಣೆ ಮಾಡುತ್ತಾ ಅವರ ತೊಂದರೆಗಳನ್ನು ಪರಿಹಾರ ಮಾಡಿ ಭಕ್ತರಿಂದ ಪೂಜಿಸಿಕೊಳ್ಳುತ್ತಾ, ಕೆಲವು ಕಾಲದವರೆಗೆ ಅನ್ಯೂನ್ಯವಾಗಿರುತ್ತಾರೆ. ಈ ಕನ್ಯೆಯರು ಇಲ್ಲಿದ್ದ ಅವಧಿಯಲ್ಲಿ ಉತ್ತಮ ಮಳೆ, ಬೆಳೆಗಳಾಗಿ ಜನರು ಸುಖ, ಶಾಂತಿ, ನೆಮ್ಮದಿ ಯಿಂದ ಜೀವನ ಮಾಡುತ್ತಿರುತ್ತಾರೆ. ಕಾಲಕ್ರಮದಲ್ಲಿ ಇವರ ಶಕ್ತಿ ಸಾಧನೆಗಳ ಕ್ಷುಲ್ಲಕ ಕಾರಣಗಳಿಂದ ಈ ಕನ್ಯೆಯರ ಮಧ್ಯೆ ಸಂಶಯ, ದ್ವೇಷ, ಅಸೂಯೆ, ಸ್ವಾರ್ಥ ಹುಟ್ಟಿಕೊಳ್ಳುತ್ತವೆ.
  • ಈ ಕಾರಣದಿಂದ ಪದೇ ಪದೇ ಕಲಹಗಳು ಪ್ರಾರಂಭವಾಗುತ್ತದೆ ಮಾತೃ ಸ್ಥಾನದ 'ಶ್ರೀ ಬನ್ನಿಕಟ್ಟಮ್ಮನವರು' ತಂಗಿಯರ ಬಗ್ಗೆ ತುಂಬಾ ಒರಟುತನ ಮತ್ತು ಅಸಭ್ಯವಾಗಿ ವರ್ತಿಸುತ್ತಾ ತುಚ್ಛ ಹಾಗೂ ಕೀಳು ನುಡಿಗಳಿಂದ ನಿಂದನೆ ಮಾಡುತ್ತಾ ನೆಡೆದು ಕೊಳ್ಳುತ್ತಾಳೆ. ಆದರ್ಶ, ಶಿಸ್ತು, ಚತುರತೆ ಹಾಗೂ ಚಾಣಾಕ್ಷತೆಯುಳ್ಳ ಶ್ರೀ ಆಲಕಮ್ಮನವರು ಹೇಳುತ್ತಿದ್ದ ಶಾಂತಿ, ಸಮಾಧಾನದ ಮಾತುಗಳಿಗೆ ಬೆಲೆಕೊಡದೆ ಕೆಂಡಮಂಡಲವಾಗಿ ನಿಂದಿಸುತ್ತಾ ಇದ್ದುದ್ದರಿಂದ ಉಳಿದ ಮೂವರು ತಂಗೀಯವರ ಮನಸ್ಸಿಗೆ ತುಂಬಾ ಬೇಸರ ದುBಖ ಉಂಟಾಗುತ್ತದೆ. ಈ ರೀತಿ ಮನಸ್ಸಿಗೆ ಆಶಾಂತಿ ಬಂದ ಕಾರಣದಿಂದ ಶ್ರೀ ಬನ್ನಿಕಟ್ಟಮ್ಮನವರ ಸಹವಾಸವನ್ನು ಬಿಟ್ಟು ಬೇರೆ ಬೇರೆ ಸ್ಥಳಗಳಿಗೆ ಸ್ಥಳಾಂತರ ಮಾಡುವ ನಿರ್ಧಾರಕ್ಕೆ ಬರುತ್ತಾರೆ. ಹೀಗಿದ್ದಾಗ ಒಂದು ದಿನ ಹೂವಿನ ಹಳ್ಳಿ ನೆಲದ ಬಂಧನವನ್ನು ಕಿತ್ತುಕೊಂಡು; ಮೂರು ಜನರು ಹೊರಟೆ ಬಿಡುತ್ತಾರೆ.
  • ಹೀಗೆ ಹೊರಡುವಾಗ ಸೂಕ್ಷ್ಮ ಬುದ್ಧಿಯವಳಾದ ಶ್ರೀ ಆಲಕಮ್ಮನವರು ಅಕ್ಕ ‘ಬನ್ನಿಕಟ್ಟಮ್ಮ'ನಿಗೆ ಕೆಲವು ಷರತ್ತುಗಳನ್ನು ಹಾಕುತ್ತಾರೆ ಅವುಗಳೆಂದರೆ ನಿನ್ನನ್ನು ತೊರೆದು ಹೋದ ಮೇಲೆ ನಾನು ನೆಲೆಯಾಗುವ ಜಾಗದಿಂದ ವಿವಾಹ ಸಂಬಂಧ ದನ, ಕುರಿ ಮೊದಲಾದ ಯಾವ ವಸ್ತುವನ್ನು ಕೊಡುವುದಿಲ್ಲ ಮತ್ತು ಎಂತಹ ಪರಿಸ್ಥಿತಿ ಒದಗಿ ಬಂದರು ನಿನ್ನ ನೆಲೆಯಿಂದಲೂ ಯಾವ ವಸ್ತುವನ್ನು ನಾನು ಕೇಳುವುದಿಲ್ಲ, ನೀನು ಕೇಳಬಾರದು. ಇದು ನನ್ನ ಶಾಪ ಇನ್ನೂ ಮುಂದೆ ನಿನಗೂ ನನಗೂ ಯಾವ ಸಂಬಂಧವು ಇರುವುದಿಲ್ಲ ನಿನ್ನ ಮುಖದರ್ಶನವನ್ನು ಸಹ ಮಾಡುವು ದಿಲ್ಲ ಮತ್ತು ಆಲದ ಮರದ ಬನದಲ್ಲಿದ್ದು ನಮ್ಮ ದ್ವೇಷ ಹುಟ್ಟಿದಾಗ ಮರವು ಯಾವ ಸಾಂತ್ವಾನವನ್ನು ಮಾಡದೆ ನಿಷ್ಕ್ರಿಯೆವಾಗಿದ್ದರಿಂದ ನನ್ನ ನೆಲೆಯಲ್ಲಿ ಆಲದ ಮರವನ್ನು ದ್ವೇಷಿಸುತ್ತೇನೆ ಎಂಬ ಷರತ್ತು ಬದ್ಧ ಮಾತುಗಳನ್ನು ಹೇಳಿ, ಮೂಕ ಪ್ರೇಕ್ಷಕರಾಗಿದ್ದು ಮುಗ್ದ ತಂಗಿಯರಿಬ್ಬರನ್ನು ಕರೆದು ಕೊಂಡು ತಿರುಗಿಯೂ ನೋಡದಂತೆ ಹೊರಟು ಬಿಡುತ್ತಾರೆ.

ಸೂಕ್ತ ನೆಲೆಯ ಹುಡುಕಾಟ

[ಬದಲಾಯಿಸಿ]
  • ಅಲ್ಲಿಂದ ನದಿ ತೀರಕ್ಕೆ ಬಂದು ಪಶ್ಚಿಮಾಭಿಮುಖವಾಗಿ ಹೊರಟು ಸುಮಾರು ಅರ್ಧ ಗ್ರಾಮದ ದೂರ ಇರುತ್ತಾರೆ' ಅಲ್ಲಿ ಇದೆ ನದಿ ದಡದ ಮೇಲೆ ಒಂದು ದೇವಾಲಯ ಕಂಡು ಬಂದಿದ್ದರಿಂದ ದೇವರ ದರ್ಶನ ಮಾಡಿ ಇಲ್ಲಿಯೂ ಸಹ ಹೆಚ್ಚು ಭಕ್ತ ಮಂಡಳಿ ಇರುವ ಸಂಕೇತವೆಂದು ತಿಳಿದು ನದಿ ತೀರದಿಂದ ಮೇಲಕ್ಕೆ ಬಂದು ನೋಡಿದಾಗ ಸ್ವಲ್ಪ ದೂರದಲ್ಲಿ ಜನ ಸಂದಣಿಯಿಂದ ಕೂಡಿದ ಗ್ರಾಮಕಾಣಿಸುತ್ತದೆ, ಕಾಲುದಾರಿ ಹಿಡಿದು ಸಂಧ್ಯಾವೇಳೆಗೆ ಇಲ್ಲಿಗೆ ಬರುತ್ತಾರೆ ಉತ್ತಮ ಪರಿಸರ ಒಳ್ಳೆಯ ಭಕ್ತ ಸಮೂಹ ವರ್ಷಕ್ಕೊಮ್ಮೆ ಶ್ರದ್ಧಾ, ಭಕ್ತಿಯಿಂದ ನಡೆಯುವ ಸೋಜಿಗಮಯವಾದ ಶ್ರೀ ರುದ್ರೇಶ್ವರ ದೇವರ ಮೆರೆಯುವ ಬಿಂದಿಗೆ ಜಾತ್ರೆ, ರಥೋತ್ಸವ ಈ ಸಂಬಂಧ ಭಕ್ತರ ಸಂಖ್ಯೆ ಹೆಚ್ಚಾಗಿರುವುದನ್ನು ಅಂತರಂಗ ಶಕ್ತಿಯಿಂದ ತಿಳಿದು ಬಹಳ ಸಂತೋಷ ಪಡುತ್ತಾರೆ.
  • ಈ ಪರಿಸರದಲ್ಲಿ ಶ್ರೀ ಆಲಕಮ್ಮನೆಲೆಸುವ ನಿರ್ಧಾರ ಮಾಡಿ ಆಲದ ಮರಗಳಿಗೆಲ್ಲ ಒಂದು ನಿರ್ಜನವಾದ ಬಾಗೇಮರಗಳಿಂದ ಕೂಡಿದ ಪಾಳು ಜಾಗದ ಬಣದಲ್ಲಿರಲು ಸಂಕಲ್ಪ ಮಾಡಿ ತಮ್ಮ ಕುಂಭಗಳಿಗೆ ತಂದಿದ್ದ ಶುದ್ಧ ಜಲದಿಂದ ಬನವನ್ನು ಪವಿತ್ರಗೊಳಿಸಿ ಈ ಬಾಗೇಮರದ ಪಾಳಿನ ಬನದಲ್ಲಿ ಶಿಲರೂಪದಲ್ಲಿ ನೆಲೆಯಾಗುತ್ತಾರೆ. ಈ ಬಾಗೇಮರದ ಪಾಲೀನ ಬನದಲ್ಲಿ ಅಮ್ಮನವರು ನೆಲೆಯಾದ ಕಾರಣ, ಈ ಬನಕ್ಕೆ ಬಾಗೆಪಾಳು ಎಂಬುದಾಗಿ ಹೆಸರು ಬರುತ್ತದೆ. ಉಚ್ಚಾರಣೆಯಿಂದ ಕ್ರಮೇಣ ಬಾಗೇವಾಳು ಎಂಬುದಾಗಿ ಕರೆದಿರಬಹುದೆಂದು ಪ್ರಸ್ತುತವಾಗಿದೆ. ದೇವಿಯವರು ಈ ಗ್ರಾಮದಲ್ಲಿ ನೆಲೆಯಾದ ಮೇಲೆ ಇಲ್ಲಿನ ಭಕ್ತರಿಗೆ ಉತ್ತಮ ಆರೋಗ್ಯ, ಸಮೃದ್ಧಿ, ಸುಖ, ನೆಮ್ಮದಿಗಳು ನೆಲೆಗೊಂಡಿರುತ್ತದೆ;
  • ಈ ಕಾರಣ ದೇವಿಯ ತುಂಬಾ ಪ್ರಭಾವಿ ಹಾಗೂ ಸರ್ವರಿಗೂ ಪೂಜ್ಯನೀಯಳಾಗಿದ್ದಾಳೆ, ಈ ಸಂಬಂಧ ತನ್ನ ಅಕ್ಕ ಬನ್ನಿಕಟ್ಟಮ್ಮ ಹೂವಿನಹಳ್ಳಿ ನೆಲೆಗೆ ಷರತ್ತಿನಂತೆ, ಇಲ್ಲಿಂದ ಯಾವ ವಸ್ತುವನ್ನು ಕೊಡುವ, ತರುವ ಪದ್ಧತಿ ನಿಷಿದ್ಧವಾಗಿದೆ; ಮತ್ತು ಆಲದಮರವನ್ನು ದ್ವೇಷಿಸಿದ ಸಂಬಂಧ ಬಾಗೇವಾಳಿನಲ್ಲಿ ಆಲದ ಮರಗಳಿಗೆ ನೆಲೆಯಿಲ್ಲ ಎಂಬ ವಾದವು ಪ್ರತ್ಯಕ್ಷ ನಿದರ್ಶನವಾಗಿದೆ. ಹಿಂದಿನ ಘಟನೆಗಳು ಇನ್ನೂ ಹಸಿ ಇದ್ದಾಗಲೇ ಶ್ರೀ ಅಲಕಮ್ಮನವರು ಸೂಕ್ಷ್ಮವಾಗಿ ಯೋಚಿಸಿ ತಂಗಿಯರಿಬ್ಬರನ್ನು ಕುರಿತು, ನಾವು ಮೂರು ಜನ ಒಟ್ಟಿಗೆ ಒಂದೇ ಕಡೆ ಇದ್ದುಕೊಂಡು ಪುನಃ ಕಿತ್ತಾಡುವುದು ಸಮಂಜಸವಲ್ಲ ಮತ್ತು ನಮ್ಮ ಉದ್ದೇಶ ಸಾಧನೆಗಳಿಗೆ ಕುಂದಾಗುತ್ತದೆ;
  • ಕಾರಣ ಬೇರೆ ಬೇರೆ ಸ್ಥಳಗಳಿಗೆ ಹೋಗಿ ನಾವೇ ಗುರಿ ಸಾಧಿಸುವುದು ಮುಖ್ಯ ಎಂಬುದಾಗಿ ಶ್ರೀ ಮನೆಯಮ್ಮ ಮತ್ತು 'ಲಕ್ಷ್ಮಮ್ಮ'ನವರ ಮನವೊಲಿಸಿ ಇಲ್ಲಿಂದ ಮುಂದೆ ಹೋಗಿ ನಿಮ್ಮ ಇಚ್ಛಿತ ನೆಲೆಗಳನ್ನು ಆರಿಸಿ ಕೊಳ್ಳಿರಿ ನನಗಿಂತಲೂ ಒಳ್ಳೆಯ ಬನವು ಸಿಗುತ್ತದೆ ಎಂದು ಧೈರ್ಯ ತುಂಬಿ ಗಿಂಡಿಗಳನ್ನು ಕೊಟ್ಟು ಶುಭ ಕೋರಿ ಬೀಳ್ಕೊಡುತ್ತಾಳೆ. ಆಗ ಈ ಇಬ್ಬರು ಕನ್ಯೆಯರು ಇಲ್ಲಿಗೆ ಬಂದ ದಾರಿಯನ್ನು ಹಿಡಿದು ಪುನಃ ನದಿ ತೀರಕ್ಕೆ ಬಂದು ಅಲ್ಲಿಂದ ಪಶ್ಚಿಮಾಭಿಮುಖವಾಗಿ ಹೊರಟು ಸುಮಾರು ಎರಡು ಗಾವುದ ದೂರವನ್ನು ನದಿತೀರದಲ್ಲಿ ಪಯಣಿಸಿದಾಗ ಇಲ್ಲೊಂದು ಈಶ್ವರ ದೇವಾಲಯ ಕಂಡುಬರುತ್ತದೆ. ನಮ್ಮ ಶಕುನ ಶುಭವಾಯಿತೆಂದು ನಂಬಿ ನದಿ ದಡದಿಂದ ಮೇಲೆ ಬಂದು ದೇವಸ್ಥಾನಕ್ಕೆ ಪ್ರದಕ್ಷಿಣೆ ಮಾಡಿ ಮುಂದಕ್ಕೆ ನೋಡುತ್ತಾರೆ.
  • ಸ್ವಲ್ಪ ದೂರದಲ್ಲಿ ಗ್ರಾಮ ಕಾಣಿಸುತ್ತದೆ ಹಾಗೂ ಋಷಿಗಳ ಆಶ್ರಮದ ಹತ್ತಿರವಿರುವ ಎತ್ತರದ ಕಂಭದ ಮೇಲೆ ಹಿರಿದಾದ ಬೆಳಕನ್ನು ಪಸರಿಸುವ ಬಂಗಾರ ಬಣ್ಣದ ದೀಪ ಕಂಡು ಬರುತ್ತದೆ; ಆ ಸಂಧರ್ಭದಲ್ಲಿ ಗ್ರಾಮಕ್ಕೆ ಪ್ರವೇಶ ಮಾಡಲು ಹೊರಡುತ್ತಾರೆ. ಸಮಯ ಎರಡನೇ ಜಾವ (ರಾತ್ರಿ ೧೧.ಘಂಟೆ) ಈ ವೇಳೆಯಲ್ಲಿ ಜನ ಸಂಚಾರ ಹೆಚ್ಚಾಗಿರುತ್ತೆ. ಪಕ್ಕದ ಕೋಟೆಯ ಪಾಳೇಗಾರರ ಸಿಪಾಯಿಗಳು ಗಸ್ತು ತಿರುಗುತ್ತಿರುತ್ತಾರೆ, ಶ್ರೀ ಮಡಿವಾಳೇಶ್ವರರು ಪೂಜಾಮಗ್ನರಾಗಿ ಸೂಚನೆ ಬಂಗಾರದ ಬಣ್ಣದ ಗಾಜಿನ ಕವಚದ ಮೂಲಕ ಬರುತ್ತಿದ್ದ ಹೊಂಬೆಳಕಿನಿಂದ ತಿಳಿದು ಬರುತ್ತದೆ.
  • ಈ ವೇಳೆಯಲ್ಲಿ ಗ್ರಾಮ ಪ್ರವೇಶ ಮಾಡಿದರೆ ಶತ್ರು ಪಾಳೆಯದ ಗೂಡಾಚಾರರಿರಬಹುದೆಂದು ಹಿಡಿದು ತೊಂದರೆ ಕೊಡಬಹುದು ಎಂಭುದಾಗಿ ಭಯ ಪಟ್ಟಿ ಸ್ವಲ್ಪ ತಡವಾಗಿ ಅಂದರೆ ೩ ನೇ ಜಾವಕ್ಕೆ (ರಾತ್ರಿ 3 ಘಂಟೆ ಮೇಲೆ) ಪ್ರವೇಶ ಪ್ರವೇಶ ಮಾಡಲು ನಿರ್ಧರಿಸಿ ದೇವಸ್ಥಾನದ ಹತ್ತಿರವೇ ಹೊತ್ತು ಕಳೆದು ನದಿಯಿಂದ ಗಿಂಡಿಗಳಿಗೆ ಜಲವನ್ನು ತುಂಬಿಕೊಂಡು; ಶರಣರು ಮೆಟ್ಟಿರುವ ನೆಲವು ಅಪವಿತ್ರವಾಗಬಾರದೆಂದು ದಾರಿ ಉದ್ದಕ್ಕೂ ನೀರನ್ನು ಪ್ರೋಕ್ಷಣೆ ಮಾಡುತ್ತಾ ನೆಡೆದುಕೊಂಡು ಬರುತ್ತಾರೆ; ಬರುವ ದಾರಿಯ ಪಕ್ಕದಲ್ಲಿದ್ದ 'ಶ್ರೀ ಮಡಿವಾಳೇಶ್ವರರ' ಅಪ್ಪಣೆ, ಆಶೀರ್ವಾದ ಪಡೆಯಲು ಆಶ್ರಮಕ್ಕೆ ಬರುತ್ತಾರೆ, ಇರುಳು ಬಹಳ ಹೊತ್ತಾಗಿದ್ದರಿಂದ ಮುನಿಗಳು 'ಅತೀಂದ್ರಿಯ ಪ್ರಜ್ಞೆ' ಯಲ್ಲಿ ವಿಶ್ರಾಂತಿ ಪಡೆಯುತ್ತಿರುತ್ತಾರೆ. ಗೋಧಿ ಮೈಬಣ್ಣ, ನೆತ್ತಿ ಮೇಲಕ್ಕೆ ಎತ್ತಿ ಕಟ್ಟಿದ ಕೇಶರಾಶಿ, ಲಿಂಗಾಕಾರದ ಮುಖದ ಭಾಗದ ಕಪ್ಪುದಾಡಿ, ಸೌಮ್ಯ ಸ್ವರೂಪದ ಕಣ್ಣು ದೃಷ್ಠಿ ಹಣೆಯ ಮೇಲೆ ೬ ಅಂಗುಲ ಉದ್ದದ ಭಸ್ಮಧಾರಣೆ.
  • ಈ ರೂಪದ ಮುನಿಗಳನ್ನು ನೋಡಿದ ಕನ್ಯೆಯರಿಗೆ ಸಾಕ್ಷಾತ್ ವಿಶ್ವಾಮಿತ್ರ ಋಷಿಯನ್ನು ದರ್ಶನ ಮಾಡಿದಂತೆ ಭಕ್ತಿ ಉಂಟಾಗುತ್ತದೆ; ಇವರು ಆಶ್ರಮ ಪ್ರವೇಶ ಮಾಡಿದ್ದರಿಂದ ಬೆಳಕಾದಂತಾಗುತ್ತದೆ; ಇದರಿಂದ ಮುನಿಗಳಿಗೆ ಜಾಗೃತಿ ಉಂಟಾಗಿ ಕಣ್ಣ್ ತೆರೆದು ನೋಡುತ್ತಿರಲಾಗಿ ಎದುರಿನಲ್ಲಿ ಅಪ್ರತಿಮ ಸುಂದರಿಯಾದ ಇಬ್ಬರು ಕನ್ಯೆಯರು ನಿಂತಿದ್ದು ಆಗ 'ಶ್ರೀ ಗುರುಗಳವರಿಗೆ' ಸಾಷ್ಟಾಂಗ ನಮಸ್ಕಾರ ಹಾಕುತ್ತಾರೆ. ಈ ಆಗುಂತಕರ ಆಗಮನದಿಂದ ಆಶ್ಚರ್ಯ, ಸಂದೇಹಗಳು ಉಂಟಾಗುತ್ತದೆ; ಜಯಸಿ ವಿರಕ್ತಾ ಶ್ರಮ ಧರ್ಮವನ್ನು ಪಾಲಿಸುತ್ತಿದ್ದರಿಂದ ಸ್ವಲ್ಪವೂ ಭಾವುಕರಾಗದೆ ಎದ್ದು ಬಂದು ತಮ್ಮ ವ್ಯಾಘ್ರಾಸನದ ಮೇಲೆ ಕುಳಿತುಕೊಳ್ಳುತ್ತಾರೆ; ನಂತರ ಕನ್ಯೆಯರ ಪರಿಚಯ ಅಕಾಲ ವೇಳೆಯಲ್ಲಿ ಬಂದ ಉದ್ದೇಶಗಳ ಬಗ್ಗೆ ವಿಚಾರ ಮಾಡುತ್ತಾರೆ.
  • ಆಗ ಕನ್ಯೆಯರು ತಮ್ಮ ಹಿಂದಿನ ವೃತ್ತಾಂತಗಳನ್ನು ತಿಳಿಸಿ, ತಾವು ಅಪ್ಪಣೆ ಕೊಟ್ಟರೆ ಈ ಗ್ರಾಮದಲ್ಲಿ ನೆಲೆಸಿ ತಮ್ಮ ಆದೇಶದಂತೆ ನೆಡೆದುಕೊಂಡು ತಮ್ಮ ಆಶೀರ್ವಾದ ಉಪದೇಶವನ್ನು ಪಡೆದು ನಮ್ಮ ಕಾರ್ಯ ಸಾಧನೆಯನ್ನು ಮಾಡಲು ಹಂಬಲಿಸಿ ಬಂದಿದ್ದೇನೆ ಎಂಬುದಾಗಿ ನಿವೇದನೆ ಮಾಡಿಕೊಳ್ಳುತ್ತಾರೆ. ಕನ್ಯೆಯರ ಮಾತುಗಳನ್ನು ಕೇಳಿ ಮುನಿಗಳಿಗೆ ಆನಂದವಾಗುತ್ತದೆ. ಅವರ ಇಚ್ಛಾ ಶಕ್ತಿಗಳಿಗೆ ಸಮ್ಮತಿ ಪಟ್ಟು ನಂತರದಲ್ಲಿ ನಾಮಾಂಕಿತವನ್ನು ತಿಳಿಯಲಾಪೇಕ್ಷಿಸಲಾಗಿ ಮೊದಲೆನೆಯ ಮುನಿಯಮ್ಮ ಎರಡನೆಯ ಲಕ್ಷ್ಮಮ್ಮ ಎಂಬುದಾಗಿ ತಿಳಿಸುತ್ತಾರೆ ; ಈಗ ಮುನಿಗಳಿಗೆ ಸಂಶಯ ಉಂಟಾಗಿ ನೀವುಗಳು ಅಪರಿಮಿತ ಸುಂದರಿಯಾಗಿದ್ದೀರ; ಅದರಲ್ಲೂ ಮುನಿಯಮ್ಮ ದೇವಲೋಕದ ಅಪ್ಸರೆಯಾಗಿದ್ದಾಳೆ, ಆದ ಕಾರಣ ನೀವು ಈ ರೂಪದಿಂದ ಗ್ರಾಮದಲ್ಲಿ ನೆಲೆಸಿದರೆ ಯಾರಾದರೂ ಯಕ್ಷ ಪುರುಷರು; ಮೋಹಿಸಿ ತೊಂದರೆ ಕೊಡಬಹುದು ಆದ ಕಾರಣ ನಿರಾಕಾರ ರೂಪದಿಂದ ಇದ್ದು ಗ್ರಾಮದ ಎಲ್ಲ ಭಕ್ತರ ಮನೆಯ ಹಾಗೂ ಮನಸ್ಸಿನಲ್ಲಿ ಅಮ್ಮ ಎಂಬ ಅಭಿದಾನದಿಂದ ಶ್ರೀ ಮನೆಯಮ್ಮ ಮತ್ತು ಲಕ್ಷ್ಮೀದೇವಮ್ಮ ಎಂಬ ಹೆಸರಿನಿಂದ ನೆಲಸಬೇಕು ಎಂಬುದಾಗಿ ಅಪ್ಪಣೆ ಕೊಡುತ್ತಾರೆ.
  • ಇನ್ನು ಮುಂದೆ ಶರಣರು ಮೆಟ್ಟಿರುವ ಈ ಪವಿತ್ರ ನೆಲಕ್ಕೆ ಮತ್ತು ವೀರಶೈವ ಧರ್ಮಕ್ಕೆ ಯಾವ ವಿಧವಾದ ಹಿಂಸೆ, ಅಪಚಾರ, ಅಪವಿತ್ರತೆ ಆಗಬಾರದು. ಪರಿಶುದ್ದತೆ ನಿಷ್ಠೆಯಿಂದ ಇದ್ದುಕೊಂಡು ಆರೋಗ್ಯಕರವಾದ ಭಕ್ತಿ ಪೂರಕವಾದ ವಾತಾವರಣವನ್ನು ಸೃಷ್ಠಿ ಮಾಡಿ ನಿಮ್ಮ ತತ್ವ ಸಿದ್ಧಾಂತಗಳಿಗೆ ಅನುಸಾರವಾಗಿ ಕಾಯಕಗಳನ್ನು ಮಾಡುತ್ತಾ ಇರಬೇಕು ಎಂಬ ಎಚ್ಚರಿಕೆಯ ಮಾತುಗಳಿಂದ ಜಾಗೃತಿಗೊಳಿಸುತ್ತಾರೆ. ತಮ್ಮ ಪೂಜಾಮಂದಿರದಿಂದ ತಾಮ್ರದ ಪಾತ್ರೆಯಲ್ಲಿದ್ದ ಅಭಿಷೇಕಜಲದಿಂದ ಪಾದೋದಕವನ್ನು ಮಾಡಿ ಇದಕ್ಕೆ ಬೀಜಾಕ್ಷರಗಳಿಂದ ದೈವತ್ವವನ್ನು ಕೊಟ್ಟು ಈ ಪವಿತ್ರ ತೀರ್ಥವನ್ನು ಕನ್ಯೆಯರ ಮೇಲೆ ಪ್ರೋಕ್ಷಣೆಮಾಡಿದನಂತರ ಮಂತ್ರಾಕ್ಷಗಳಿಂದ ಧರ್ಮೊಪದೇಶಮಾಡಿ ದೈವಬಲವನ್ನು ಕೂಡಿಸುತ್ತಾರೆ;
  • ಹೀಗೆ ದೈವಬಲವನ್ನು ಹೊಂದಿದ್ದರಿಂದ ಶ್ರೀ ಮನೆಯಮ್ಮದೇವಿ ಮತ್ತು ಲಕ್ಷ್ಮಿದೇವಮ್ಮ ಎಂಬುದಾಗಿ ಮರು ನಾಮಕರಣವಾಗುತ್ತದೆ. ಅನಂತರ ನಾಯಕರಿಂದ ಬಂದಿದ್ದ ಪೂರ್ಣ ಕಂಭಗಳ ಪೈಕಿ ಎರಡು ಹವಳ ವರ್ಣ ಒಂದು ನೀಲಿವರ್ಣದ ಕುಂಭಗಳನ್ನು ತಂದು ಅವುಗಳಿಗೆ ಗಂಗೋದಕವನ್ನು ತುಂಬಿ ವಿಧಿ ವಿಧಾನಗಳ ಪ್ರಕಾರ ಪೂಜಿಸಿ ಹವಳವರ್ಣದ ಕುಂಭಕ್ಕೆ ಶ್ರೀ ಲಕ್ಷ್ಮೀದೇವಮ್ಮನವರನ್ನು ಕಳಾಹ್ವಾನ ಪ್ರಕ್ರಿಯೆಯಿಂದ ಲೀನಗೊಳಿಸುತ್ತಾರೆ; ನಂತರ ಎರಡು ತಾಮ್ರದ ತಗಡನ್ನು ತಂದು ಷಡ್ಯಂತ್ರವನ್ನು ಬರೆದು; ಪೂಜಿಸಿ ಸಾಂಪ್ರದಾಯಕ ದಾರರಿಂದ ಸುರುಳಿ ಸುತ್ತಿ ದೇವಿಯವರಿಗೆ ಧಾರಣೆಮಾಡುತ್ತಾರೆ ಇದು ಯಾವ ದುಷ್ಟಶಕ್ತಿಯಿಂದಲು ಅವರ ನೆಲೆಗೆ ತೊಂದರೆ ಅಡಚಣೆಗಳು ಬರದಂತೆ; ದಿಗ್ಭಂದನವಾಗಿರುತ್ತದೆ.
  • ಇನ್ನು ಮೂರನೇ ಹವಳದ ಕುಂಭಕ್ಕೆ ಶ್ರೀ ಗುರುಗಳಿಂದ ಉಪದೇಶಿಸಲ್ಪಟ್ಟ ಜೀವರಕ್ಷಕ ಜಲವಾಗಿರಬೇಕೆಂದು ಸಂಕಲ್ಪಮಾಡಿ ಮೇಲೆ ಓಂ ಎಂಬ ಬೀಜಾಕ್ಷರ ಬರೆದು ಗುರುತಿಸುತ್ತಾರೆ, ಆದ್ದರಿಂದ ಗುರುಗಳ ಕುಂಭವು ದೇವಿಯರಿಬ್ಬರ ಮಧ್ಯದಲ್ಲಿ ಸ್ಥಾಪನೆಯಾಗಿರುತ್ತದೆ ಈ ಎಲ್ಲಾ ಪ್ರಕ್ರಿಯೆಗಳಿಂದ ದೇವಿಯವರಿಗೆ ಇಚ್ಛಾ ನಿರಾಕಾರತ್ವವು ಪ್ರಾಪ್ತವಾಗಿರುತ್ತದೆ; ಇದರಿಂದ ಯಕ್ಷರಾಗಿದ್ದ ಕನ್ಯೆಯರು ಶ್ರೀ ಮಡಿವಾಳೇಶ್ವರರ ತಪೋಬಲಶಕ್ತಿಯಿಂದ ಹಾಗೂ ಉಪದೇಶದಿಂದ ದೈವತ್ವವನ್ನು ಪಡೆದುಕೊಳ್ಳುತ್ತಾರೆ; ಇದಾದ ನಂತರ ಇವರಿಗೆ ತೀರ್ಥ, ಪ್ರಸಾದ ಹಾಗೂ ಕಲ್ಲು ಸಕ್ಕರೆ ಹರಳುಗಳನ್ನು ಕೊಡುತ್ತಾರೆ, ಇಲ್ಲಿಂದ ಗ್ರಾಮದ ಒಳಕ್ಕೆ ಹೋಗುವವರಿಗೆ ಸಶರೀರವಾಗಿ ಈ ಮೂರು ಕುಂಭಗಳನ್ನು ಹೊತ್ತು ದಾರಿ ಉದ್ದಕ್ಕೂ ನೀರನ್ನು ಚಿಮುಕಿಸುತ್ತಾರೆ ನಡೆ ಮಡಿಯ ಮೇಲೆ ಹೋಗಬೇಕು; ಭಕ್ತನ ಮನೆ ವರಾಂಡಕ್ಕೆ ತಲುಪುವ ವೇಳೆ ತಡರಾತ್ರಿಯಾಗಿರುವುದರಿಂದ ಆತ ಗಾಢ ನಿದ್ರೆಯಲ್ಲಿರುತ್ತಾನೆ. ನೀವು ಆತನ ಮೇಲೆ ಆವೇಶವಾಗಿ ಹೋದರೆ ಕನಸಿನಲ್ಲಿ ಕಂಡಂತೆ ಕೂಡಲೇ ಎಚ್ಚರ ಗೊಳ್ಳುತ್ತಾನೆ.
  • ಆಶ್ಚರ್ಯ ಪಟ್ಟು ಎದ್ದು ಬರುವುದರೊಳಗೆ ನಿಮಗೆ ಮಾಂತ್ರಿಕವಾಗಿ ಕೊಟ್ಟಿರುವ ಕಲ್ಲುಸಕ್ಕರೆ ಹರಳುಗಳನ್ನು ನಿಮ್ಮ ಬಾಯಿಗೆ ಹಾಕಿಕೊಂಡು ಬಿಡಿ ಕಲ್ಲುಸಕ್ಕರೆ ಹರಳುಗಳು ಕರಗಿದಂತೆ ಕುಂಭದಲ್ಲಿರುವ ಪವಿತ್ರ ಜಲದಲ್ಲಿ ಲೀನವಾಗುತ್ತೀರ ಆಗ ನಿಮಗೆ ನಿರಾಕಾರತ್ವವು ಪ್ರಾಪ್ತವಾಗುತ್ತದೆ. ಮುಂದೆ ನಿಮ್ಮ ಶಕ್ತಿಯಾಗಿರುವ ಕುಂಭಗಳಿಗೆ ನಿರಂತರವಾಗಿ ಪೂಜಾ ವಿಧಿಗಳು ನಡೆದುಕೊಂಡು ಬರುತ್ತವೆ, ನೀನು ಅಪ್ರತಿಮ ಸುಂದರಿಯಾಗಿರುವ ಕಾರಣ ಹಗಲಿನಲ್ಲಿ ಸಂಚರಿಸಬಾರದು ಎಂಬುದಾಗಿ ಶ್ರೀ ಮನೆಯಮ್ಮದೇವಿಯವರಿಗೆ ಸೂಚನೆ ಕೊಟ್ಟು ನಾನು ನಿಮಗೆ ಕೊಟ್ಟಿರುವ ಭೋದನೆ, ಉಪದೇಶಗಳನ್ನು ಮರೆಯದೆ ಒಳ್ಳೆಯ ಆಚಾರವಂತಿಕೆಯಿಂದ ವೀರಶೈವ ಧರ್ಮಕ್ಕೆ ಕಳಂಕ ಬರದಂತೆ ಎಚ್ಚರಿಕೆಯಿಂದ ನೆಲೆಯಾಗಿ ಭಕ್ತರ ಎಲ್ಲಾ ತೊಂದರೆ ಕಷ್ಟಗಳಿಗೆ ಸ್ಪಂದಿಸಿ ನಿಮ್ಮ ಧ್ಯೇಯ ಉದ್ದೇಶವನ್ನು ಸಾಧಿಸಿರಿ ಎಂದು ಆಶೀರ್ವಾದ ಮಾಡಿ ಬೀಳ್ಕೊಡುತ್ತಾರೆ. *ಅಲ್ಲದೆ ಈ ಗ್ರಾಮದ ಮೂಲ ನೆಲೆಯವರಾದ ಶ್ರೀ ಲಿಂಗೇಗೌಡರು ಒಬ್ಬ ಪ್ರಾಮಾಣಿಕ ದೈವ ಭಕ್ತರು ಹಾಲಿ ಶ್ರೀ ಬಸವೇಶ್ವರ ಸ್ವಾಮಿ ದೇವರ ಅರ್ಚಕರು ಅವರ ನಿವಾಸವು ಗ್ರಾಮದ ಪ್ರಾರಂಭದಲ್ಲಿದೆ; ಅಲ್ಲಿಗೆ ಹೋಗಿ ಅವರ ಮನೆ ವರಾಂಡಕ್ಕೆ ಇಳಿದುಕೊಂಡು; ನಾನು ತಿಳಿಸಿರುವ ಕ್ರಮದಲ್ಲಿ ಅವರ ನಿದ್ರೆಯಿಂದ ಎಚ್ಚರ ಗೊಳಿಸಿದರೆ ನಿಮಗೆ ಆಶ್ರಯ ಸಿಗುತ್ತದೆ; ಅವರೇ ನಿದ್ರೆಯಿಂದ ಜಾಗರೂಕರಾದಾಗ ನಿಮ್ಮ ಪರಿಚಯ ಪವಾಡ ತತ್ವ ಆದರ್ಶಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿದರೆ ಪ್ರೇರಿತರಾಗಿ ವಾಸ್ತವಕ್ಕೆ ಬರುತ್ತಾರೆ ಎಂದು ನೆಲೆಯನ್ನು ಗುರಿಮಾಡಿ ಕಳುಹಿಸಿ ಕೊಡುತ್ತಾರೆ. ಶ್ರೀ ದೇವಿಯವರು ಆಶ್ರಮದಿಂದ ಬೀಳ್ಕೊಂಡು ಮೂರು ಕುಂಭಗಳನ್ನು ಹೊತ್ತು ನೆಡೆ ಮಡಿಯ ಮೇಲೆ ಹೊರಟು ಸೂಚನೆಯಾದ ಮನೆಯ ಹತ್ತಿರಕ್ಕೆ ಬರುವವರೆಗೂ ಜನ ಸಂಚಾರ, ಸಾಕು ಪ್ರಾಣಿಗಳ ಕೋಗುವಿಕೆ ಯಾವುದು ಅನುಭವಕ್ಕೆ ಬರಲಿಲ್ಲ ಪ್ರಶಾಂತ ವಾತಾವರಣ ಶುಭಶಕುನದ ಪ್ರಯಾಣದಿಂದ ಇಂದಿನ ಅರ್ಚಕ ವಂಶದ ಮೂಲ ಪುರುಷರಾದ ಶ್ರೀ ಲಿಂಗೇಗೌಡರ ಮನೆಯ ವರಾಂಡಕ್ಕೆ ಪಾದಾರ್ಪಣೆ ಮಾಡುತ್ತಾರೆ.
  • ಈ ಸ್ಥಳಕ್ಕೆ ಬಂದನಂತರ ಶ್ರೀ ಮುನಿಗಳ ಆದೇಶದಂತೆ ಶ್ರೀ ಗೌಡರ ಸ್ವಪ್ನದಲ್ಲಿ ದೇವತೆಯಾಗಿ ಕಾಣಿಸಿಕೊಂಡು ತಮ್ಮ ಹಿಂದಿನ ವೃತ್ತಾಂತವನ್ನೆಲ್ಲ ತಿಳಿಸಿ ಉದ್ದೇಶ ಸಾಧನೆ ಹಾಗೂ ಶ್ರೀ ಮಡಿವಾಳೇಶ್ವರರು ಕೊಟ್ಟಿರುವ ಉಪದೇಶಗಳ ಬಗ್ಗೆ ವಿವರವಾಗಿ ತಿಳಿಸಿ-ಈಗ ನಾವು ನಿಮ್ಮ ಮನೆಯ ವರಾಂಡದಲ್ಲಿ ಕಂಡುಬರುವತ್ತಿರುವ ಮೂರು ಪೂರ್ಣ ಕುಂಭಗಳ ಎರಡರಲ್ಲಿ 'ಭಸ್ಮ'ದಾರಣೆ ಮತ್ತು 'ಬಿಲ್ಪತ್ರೆ' ಜಲದಲ್ಲಿರುತ್ತದೆ, ಇವುಗಳೊಳಗೆ ನಾವು ಲೀನರಾಗಿದ್ದೇವೆ ಹಾಗೂ ನಿರಾಕಾರದಿಂದಿದ್ದೇವೆ ಆದರೆ ನಾವು ನಿಮಗೆ ಕಾಣಿಸುವುದಿಲ್ಲ. ನಿಮ್ಮ ಎಲ್ಲಾ ಚಟುವಟಿಕೆಗಳು ನಮಗೆ ಕಾಣಿಸುತ್ತಿರುತ್ತವೆ;
  • ಈಗ ನಿಮ್ಮ ಮನೆಯಲ್ಲಿ ಒಂದು ಕೋಣೆಯನ್ನು ಸ್ವಚ್ಛಗೊಳಿಸಿ ನಾವು ತಂದಿರುವ ಪೂರ್ಣಕುಂಭಗಳ ಪೈಕಿ ಓಂ ಎಂಬ ಬೀಜಾಕ್ಷರದಿಂದ ಗುರುತಿಸಿರುವ ಹವಳ ವರ್ಣದ ಕುಂಭದಲ್ಲಿ ಶ್ರೀ ಮಡಿವಾಳೇಶ್ವರರುಕೊಟ್ಟಿರುವ ಪಾದೋದಕ ಯುಕ್ತ ಜೀವ ಜಲವಿರುತ್ತೆ ಇದರಲ್ಲಿರುವ ಪವಿತ್ರ ತೀರ್ಥವನ್ನು ಸ್ವಲ್ಪ ತೆಗೆದುಕೊಂಡು ಕೊಣೆಗೆಲ್ಲ ಪ್ರೋಕ್ಷಣೆ ಮಾಡಿ ಯಾವ ದುಷ್ಠ ಶಕ್ತಿಯು ಇಲ್ಲದಂತೆ ಪರಿಶುದ್ದಗೊಳಿಸಿ ಒಂದು ಮಣೆಯನ್ನು ಇಟ್ಟು ಇದರ ಮೇಲೆ ಗುರುಗಳ ಸಂಕೇತದ ಪೂರ್ಣ ಕುಂಭವನ್ನು ಮದ್ಯಕ್ಕೂ ಶ್ರೀ ಮನೆಯಮ್ಮದೇವಿ ಎಂದು ಲೀನವಾಗಿರುವ ಹವಳ ವರ್ಣದ ಕುಂಭವನ್ನು ಬಲಭಾಗಕ್ಕೂ ಶ್ರೀ ಲಕ್ಷ್ಮಿ ದೇವಮ್ಮ ಎಂದು ಲೀನವಾಗಿರುವ ನೀಲಿವರ್ಣದ ಕುಂಭವನ್ನು ಎಡಭಾಗಕ್ಕೂ ಸ್ಥಾಪನೆ ಮಾಡಿ ಶ್ರದ್ಧಾ-ಭಕ್ತಿಯಿಂದ ಪೂಜೆಯನ್ನು ನೆರವೇರಿಸಬೇಕು.
  • ಹೀಗೆ ನಿರಂತರವಾಗಿ ನಮಗೆ ಪೂಜೆ ಸಲ್ಲಿಸುತ್ತಾ ಬಂದರೆ ನಿಮ್ಮ ವಂಶಕ್ಕೂ ಮತ್ತು ನಿಮ್ಮ ಗ್ರಾಮಕ್ಕೂ ಸಮೃದ್ಧಿ, ಸುಖ, ಶ್ರೇಯಸ್ಸನ್ನು ಕೊಡುತ್ತೇವೆ; ನಮಗೆ ಅಪಚಾರವಾದರೆ ದೋಷ ತೊಂದರೆ ಉಂಟಾಗುತ್ತದೆ. ಶ್ರೀ ಗುರುಗಳವರ ಕುಂಭದ ಬಲ ಮತ್ತು ಎಡ ಭಾಗಕ್ಕೂ ಸ್ಥಾಪಿಸ ಲ್ಪಡುವ ಪೂರ್ಣ ಕುಂಭಗಳಲ್ಲಿ ಲೀನಗೊಂಡಿರುವ ನಾವಿಬ್ಬರೂ ಅಕ್ಕ ತಂಗಿಯರು ಕಾರಣಾಂತರಗಳಿಂದ ಇಲ್ಲಿಗೆ ಬಂದಿದ್ದೇವೆ; ನಾವು ಈ ನೆಲೆಗೆ ಮಾಘ ಮಾಸದ ಅಮಾವಾಸ್ಯೆಯ ಹಿಂದಿನ ಶುಕ್ರವಾರ ಬಂದಿರುವುದರಿಂದ ಪ್ರತಿ ಶುಕ್ರವಾರ ಹೊರಬಾಗಿಲಿನಿಂದ ನಮ್ಮ ಪೂಜೆಯನ್ನು ನಿಮ್ಮ ವಂಶಪಾರಂಪರ್ಯವಾಗಿ ಮಾಡಿಕೊಂಡು ಬರಬೇಕು. ನಮ್ಮ ಪೂಜೆಗೆ ಉಪಯೋಗಿಸುವ ಪ್ರತಿ ಪೂಜಾ ಸಾಮಗ್ರಿಗಳನ್ನು ಪವಿತ್ರ ತೀರ್ಥದಿಂದ ಕಳಂಕ ರಹಿತವನ್ನಾಗಿ ಮಾಡಿ ಉಪಯೋಗಿಸಬೇಕು.
  • ನಾವು ಇಲ್ಲಿಗೆ ಬಂದು ನೆಲೆಯಾದ ವರ್ಷಕ್ಕೆ ಸರಿಯಾಗಿ ಶಿವರಾತ್ರಿ ಹಬ್ಬ ಬರುವ ಹಿಂದಿನ ಶುಕ್ರವಾರಕ್ಕೆ ವಾರ್ಷಿಕ ಮಹಾ ಪೂಜೆಯನ್ನು ಮಾಡಬೇಕು ಈ ಪೂಜಾ ಮುನ್ನಾ ದಿನವಾದ ಗುರುವಾರ ರಾತ್ರಿ; ಅಂದರೆ ನಾವು ಈ ಗ್ರಾಮಕ್ಕೆ ಪ್ರವೇಶ ಮಾಡಿದ ವೇಳೆ ರಾತ್ರಿ ಮೂರನೇ ಜಾವದಲ್ಲಿ ಶ್ರೀ ಗುರುಗಳ ಹಾಗೂ ನಾವುಗಳು ಲೀನವಾಗಿರುವ ಮೂರು ಕುಂಭಗಳನ್ನು ಕವಚ ಸಮೇತ(ಪೆಟ್ಟಿಗೆ) ಹೇಮಾವತಿ ನದಿಗೆ ಕರೆತಂದು ಸ್ನಾನ ಶೋಪಚಾರಗಳಿಂದ ಶುದ್ಧಗೊಳಿಸಿದ ಕುಂಭಗಳಿಗೆ ಹೊಸ ಗಂಗಾ ಜಲವನ್ನು ತುಂಬಿ ಪುರೋಹಿತರ ಮಂತ್ರ ಪೋಷಣೆಗಳಿಂದ ನಮ್ಮನ್ನು ಪುನಃ ಈ ತೀರ್ಥಕ್ಕೆ ಕಳಾಹ್ವಾನ ಪ್ರಕ್ರಿಯೆಗಳಿಂದ ಲೀನಗೊಳಿಸಬೇಕು.
  • ಈ ರೀತಿ ಪುಂಮಿಲನ ವಿಧಿ ವಿಧಾನಗಳೆಲ್ಲ ನೆರೆವೇರಿದ ಮೇಲೆ ಪೂಜೆ ಮಂಗಳಾರತಿ ಆದಮೇಲೆ ದೈವಶಕ್ತಿಯನ್ನು ಹೊಂದಿದ ಪೂರ್ಣಕುಂಭಗಳನ್ನು ಸ್ವಚ್ಛಗೊಳಿಸಿದ ಪೆಟ್ಟಿಗೆಯೊಳಕ್ಕೆ ಸ್ಥಾಪಿಸಿ ಅರ್ಚಕರ ತಲೆಮೇಲೆ ಹೊರಿಸಿ ನಾವು ಸಾಗುವ ದಾರಿಯಲ್ಲಿ ಅಪವಿತ್ರ ಆಗದಂತೆ ನಡೆ ಮಡಿಯ ಮೇಲೆ; ನಿಶಭ್ದತೆಯಿಂದ ಸ್ವಸ್ಥಾನಕ್ಕೆ ಕರೆತಂದು ಮೊದಲಿನಂತೆ ಸ್ಥಾಪನೆಮಾಡಬೇಕು. ಈ ಕ್ರಮದಿಂದ ನಮಲ್ಲಿದ್ದ ಜಡತ್ವವೂ ಕಳೆದು ಹೊಸ ಚೈತನ್ಯ ಪಡೆದಂತಾಗುತ್ತದೆ. ಈ ಕ್ರಮದಿಂದ ನಮ್ಮನ್ನು ಶುಚಿಭೂತರನ್ನಾಗಿ ಮಾಡಿ ಸ್ಥಾಪನೆ ಮಾಡಿದ ನಂತರ ಆ ರಾತ್ರಿಯ ಪ್ರಥಮ ಪೂಜೆ ನಿಮ್ಮ ಮನೆತನದಾಗರುತ್ತದೆ ಪೂಜೆಗೆ ಪಕ್ಕ ಮಡಿಯಿಂದ ತಂದ ಪರಿಮಳ ಪುಷ್ಪ ಪತ್ರೆ, ಹಣ್ಣು, ತೆಂಗಿನಕಾಯಿ, ಮಂಗಳದ್ರವ್ಯಗಳು ಇವುಗಳನ್ನು ಬಳಸುವ ಮುನ್ನ ಶುದ್ಧ ತೀರ್ಥಪ್ರೋಕ್ಷಿಸಿ ಪವಿತ್ರಗೊಳಿಸಬೇಕು. ಹಾಗೂ ಸನ್ನಿಧಿಯಲ್ಲಿ ತಯಾರಾದ ಪಂಚಾಮೃತ ತಳಿಗೆಯನ್ನು ನಿವೇದಿಸಿದರೆ ತೃಪ್ತರಾಗುತ್ತೇವೆ.
  • ಅದೇ ವೇಳೆಗೆ ಗ್ರಾಮದ ಪರವಾದ ಎರಡನೇ ಪೂಜೆಯು, ಇದೇ ವ್ಯವಸ್ಥೆಯೊಂದಿಗೆ ನಡೆಯಬೇಕು ಈ ಕ್ರಮದಿಂದ ಶ್ರದ್ಧಾ, ಭಕ್ತಿಯಿಂದ ಸೇವೆ ಸಲ್ಲಿಸುತ್ತಾ ಬಂದರೆ ಗ್ರಾಮದ ಎಲ್ಲ ತೊಂದರೆಗಳನ್ನು ನಿವಾರಿಸಿ ಜನ, ಜಾನುವಾರುಗಳಿಗೆ ಆರೋಗ್ಯ, ಸುಖ, ಶಾಂತಿ, ಸಮೃದ್ದಿಯನ್ನು ಉಂಟುಮಾಡುತ್ತೇವೆ ಈ ಗ್ರಾಮದಲ್ಲಿ ಜನಿಸಿದ ಪ್ರಬುದ್ಧರು, ಪ್ರೌಡರು, ವಯೋವೃದ್ದರು, ಗಂಡಾಗಲಿ, ಹೆಣ್ಣಾಗಲಿ ಎಲ್ಲೆ ಇರಲಿ ವರ್ಷಕ್ಕೊಮ್ಮೆ ನಡೆಯುವ ಪುಂಮಿಲನ ಮಹಾಕಾರ್ಯ ನೆಡೆಯುವ ದಿನಕ್ಕೆ ಸನ್ನಿಧಿಗೆ ಬಂದು ಪಕ್ಕಾ ಮಡಿಯಿಂದ ನಮಗೆ ಪೂಜೆಸಲ್ಲಿಸುವುದು ಆದ್ಯಕರ್ತವ್ಯ ಈ ಕ್ರಮದಿಂದ ನೆಡೆದುಕೊಳ್ಳುವ ಭಕ್ತರಿಗೆ ಅವರ ಕಷ್ಟ, ತೊಂದರೆಗಳನ್ನೆಲ್ಲ ಪರಿಹರಿಸಿ ಸುಖ, ಸಂತೋಷಗಳನ್ನು ಕೊಡುತ್ತೇವೆ ಮತ್ತು ಅರ್ಹ ಕನ್ಯಾಮಣಿಯರಿಗೆ ಕಂಕಣಭಾಗ್ಯ, ಸಂತಾನಭಾಗ್ಯ, ಸುಖ ದಾಂಪತ್ಯ ಜೀವನ ಲಭಿಸುತ್ತದೆ. ಈ ಎಲ್ಲಾ ಆದೇಶಗಳನ್ನು ತಿಳಿಸುತ್ತಿರುವ ವೇಳೆ ನಾಲ್ಕನೇ ಜಾವಕ್ಕೆ ಬರುತ್ತದೆ; ನೀವು ನಮ್ಮನ್ನು ವ್ಯವಸ್ತೆಮಾಡುವುದು ಮತ್ತು ಪೂಜೆಗಳಿಗೆಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಿರಿ ಎಂಬುದಾಗಿ ಹೇಳಿದಂತಾಗುತ್ತದೆ.
  • ಈ ಅಗೋಚರ ವಿಸ್ಮಯವನ್ನು ತಿಳಿದ ಶ್ರೀ ಲಿಂಗೇಗೌಡರಿಗೆ ಜಾಗರೂಕ ನಿದ್ರೆಯಿಂದ ತಕ್ಷಣ ಎಚ್ಚರಗೊಂಡು ತಮ್ಮ ಇಷ್ಟಲಿಂಗಕ್ಕೆ ನಮಸ್ಕರಿಸಿ ಶಿವ ಶಿವಾ ಎಂದು ಮೇಲೇಳುತ್ತಾ ರಾತ್ರಿಯೆಲ್ಲಾ ಕನಸಿನಲ್ಲಿ ದೇವಿಯವರು ಆವೇಶಭರಿತವಾಗಿ ಬಂದು ತಿಳಿಸಿದ ಆದೇಶಗಳು ಮನಸ್ಸಿನ ಮೇಲೆ ತುಂಬಾ ಪ್ರಭಾವ ಬೀರಿದ್ದರಿಂದ ಭಾವಪರವಶವಾಗಿ ಕೂಡಲೇ ಎದ್ದು ಬಂದು ನೋಡುತ್ತಾರೆ ವರಾಂಡದಲ್ಲಿ ಮೂರು ಪೂರ್ಣ ಕುಂಭಗಳು ಇದ್ದುದ್ದರಿಂದ ರಾತ್ರಿಯ ಕನಸು ಸಹಜವಾಗುತ್ತದೆ, ಆಶ್ಚರ್ಯದಿಂದ ನೋಡುತ್ತಿದ್ದಾಗ ಕುಂಭಗಳಲ್ಲಿ ದೇವಿಯವರ ಸೌಮ್ಯ ರೂಪವು ಕಂಡಂತಾಗುತ್ತದೆ ಹಾಗೂ ಅಭಯ ಹಸ್ತದಿಂದ ಆಶೀರ್ವಾದ ಮಾಡುತ್ತಿರುವಂತೆ ನೈಜ ಚಿತ್ರಣ ಮನಸ್ಸಿಗೆ ಅರಿವಾಗುತ್ತದೆ;
  • ಆಗ ಮುಂದೆ ಬಂದು ಕುಂಭಗಳನ್ನು ಮುಟ್ಟಿ ನಮಸ್ಕರಿಸುತ್ತಾರೆ; ಆದೇಶವಾದಂತೆ ಮುಂದಿನ ಕರ್ತವ್ಯಗಳನ್ನು ಮಾಡಲು ಪ್ರಾರಂಭಿಸುತ್ತಾರೆ; ಮೊದಲು ಮಡಿ ಬಟ್ಟೆಗಳೊಂದಿಗೆ ಸ್ನಾನ ಮಾಡಲು ಬಚ್ಚಲುಮನೆ ಕಡೆ ಹೋಗಿ ಇದ್ದ ತಣ್ಣೀರಿನಿಂದಲೇ ಸ್ನಾನ ಮಾಡಲು ಇಳಿಯುತ್ತಾರೆ ನೀರುಮುಟ್ಟಿನೋಡಿದಾಗ ಆಶ್ಚರ್ಯ ದೇವಿಯವರ ಪ್ರಭಾವದಿಂದ ನೀರು ಬಿಸಿಯಾಗಿರುತ್ತದೆ ಇದೊಂದು ಶುಭಗಳಿಗೆ ಎಂದು ತಿಳಿದು ಸ್ನಾನ ಮುಗಿಸಿಕೊಂಡು ಬರುವುದರೊಳಗೆ ಅಕಾಲ ವೇಳೆಯಲ್ಲಿ ಎಲ್ಲಾ ಪೂಜೋವಸ್ತ್ರಗಳು ಸಿದ್ಧಗೊಂಡಿರುತ್ತವೆ; ಈ ವಿಸ್ಮಯದಿಂದ ಗೌಡರಿಗೆ ನಂಬಿಕೆ ಭಕ್ತಿ ಹೆಚ್ಚಾಗುತ್ತದೆ ದೇವಿಯವರ ಆಜ್ನೆಯಾದಂತೆ ಅವರ ಮನೆಯಲ್ಲಿನ ಒಂದು ಕೋಣೆಯನ್ನು ಸ್ವಚ್ಛಮಾಡಿ ಮಡಿವಾಳೇಶ್ವರರ ಗುರುಗಳವರ ಕುಂಭದಲ್ಲಿದ್ದ ಪವಿತ್ರ ಜಲದಿಂದ ಸ್ವಲ್ಪ ಪಾದೋದಕವನ್ನು ತೆಗೆದು ಕೊಣೆಗಳಿಗೆಲ್ಲ ಸಿಂಪಡಿಸಿ ಕೋಣೆಯನ್ನು ಪವಿತ್ರಗೊಳಿಸುತ್ತಾರೆ;
  • ಇದಾದ ನಂತರ ವರಾಂಡದಲ್ಲಿದ್ದ ಮೂರು ಪೂರ್ಣ ಕುಂಭಗಳನ್ನು ತಂದು ಒಂದು ಶುಬ್ರವಾದ ಮಣೆಯ ಮೇಲೆ ದೇವಿಯವರು ಇಚ್ಚಿಸಿದ ಪ್ರಕಾರ ಮದ್ಯದಲ್ಲಿ ಶ್ರೀ ಮಡಿವಾಳೇಶ್ವರರು ಉಪದೇಶಿಸಿರುವ ಜೀವಜಲದ ಕುಂಭ ಇವರ ಬಲಕ್ಕೆ ಶ್ರೀ ಮನೆಯಮ್ಮ ದೇವಿಯವರು ಎಡಭಾಗಕ್ಕೆ ಶ್ರೀ ಲಕ್ಷ್ಮಮ್ಮದೇವಿಯವರು ಸಂಮಿಲನವಾಗಿರುವ ಕುಂಭಗಳನ್ನು ಸ್ಥಾಪನೆ ಮಾಡಿ ಸಿದ್ಧವಾಗಿದ್ದ ವಿವಿಧ ಪರಿಮಳ ಪುಷ್ಪಗಳಿಂದ ಕುಂಭಗಳಿಗೆ ಅರ್ಥಾತ್ ದೇವಿಯವರಿಗೆ ಅಲಂಕಾರ ಮಾಡಿ ಉಳಿದಂತೆ ಹಣ್ಣು ಕಾಯಿ ಪರಿಮಳದ್ರವ್ಯಗಳ ಪೂಜೆ ನೈವೇದ್ಯೆ ಮಾಡಿ ಮುಗಿಯುವುದರೊಳಗೆ ಬೆಳಗಾಗುತ್ತಾ ಬಂದಿದ್ದರಿಂದ ಪೂಜಾ ಕೋಣೆಯ ಬಾಗಿಲನ್ನು ಮುಚ್ಚಿಕೊಂಡು ಹೊರಕ್ಕೆ ಬರುತ್ತಾರೆ.
  • ಶ್ರೀ ದೇವಿಯವರ ಮಹಿಮೆಯಿಂದ ಯಾವುದೂ ಗೋಚರವಿಲ್ಲದೆ ಗಾಢ ನಿದ್ರೆಯಲ್ಲಿದ್ದ ಮನೆ ಮಂದಿಯನ್ನು ಎಚ್ಚರ ಗೊಳಿಸುತ್ತಾರೆ ಎಲ್ಲರೂ ಎದ್ದು ವರಾಂಡಕ್ಕೆ ಬಂದ ಕೂಡಲೇ ಸುಗಂಧ ವಸ್ತುಗಳ ಕಂಪು ಮನೆಯಲ್ಲೆಲ್ಲಾ ಪಸರಿಸುತ್ತದೆ. ಯಜಮಾನರು ಸ್ನಾನಾದಿ ಕರ್ತವ್ಯಗಳನೆಲ್ಲ ಮುಗಿಸಿಕೊಂಡು ಉತ್ಸಾಹದಿಂದ ಮನೆಯಲ್ಲೆಲ್ಲಾ ಸುತ್ತಾಡುತ್ತಿರುತ್ತಾರೆ; ಈ ಪರಿಸ್ಥಿತಿಯಿಂದ ಮನೆಯವರಿಗೆ ಸಂಶಯ ಕುತೂಹಲವುಂಟಾಗಿ ಕಾರಣ ತಿಳಿಯಲು ಆತುರದಿಂದಿರುತ್ತಾರೆ; ಮೊದಲು ಎಲ್ಲರೂ ಸ್ನಾನ ಮಾಡಿ ಬನ್ನಿ ಶುಚಿರ್ಭೂತರಾದ ನಂತರ ನಮ್ಮ ಮನೆತನಕ್ಕೆ ಒದಗಿ ಬಂದಿರುವ ಅದೃಷ್ಟದ ವಿಚಾರವನ್ನು ತಿಳಿಸುತ್ತೇನೆ ಎಂದಾಗ ಆತುರದಿಂದ ಎಲ್ಲರ ಸ್ನಾನ ಮುಗಿಯುತ್ತದೆ; ಆಗ ಅವರನ್ನೆಲ್ಲ ದೇವಿಯರನ್ನು ಸ್ಥಾಪಿಸಿರುವ ತಮ್ಮ ಮನೆಯ ಪೂಜಾಕೊಣೆಗೆ ಕರೆತಂದು ಸಕಲ ಪೂಜಾವಸ್ತುಗಳಿಂದ ಅಲಂಕರಿಸಿ ಪೂಜಿಸಿದ್ದ ೩ ಪೂರ್ಣ ಕುಂಭಗಳನ್ನು ತೋರಿಸಿ ಈ ಪೈಕಿ ಎರಡರಲ್ಲಿ ಲೀನವಾಗಿರುವ ದೇವಿಯವರು ರಾತ್ರಿ ಕನಸ್ಸಿನಲ್ಲಿ ಆವೇಶಭರಿತಾಗಿ ಹೇಳಿದ ಎಲ್ಲಾ ವಿಚಾರಗಳನ್ನು ವಿವರವಾಗಿ ತಿಳಿಸುತ್ತಾರೆ.
  • ಈ ಎಲ್ಲಾ ಮಹಿಮೆಯನ್ನು ಕೇಳಿದ ಮನೆಯವರಿಗೂ ಹಾಜರಿದ್ದ ನೆರೆ ಹೊರೆಯವರಿಗೂ ಭಕ್ತಿ ಉಂಟಾಗುತ್ತದೆ ದೇವಿಗೆ ಎಲ್ಲರೂ ಸಾಷ್ಠಾಂಗ ನಮಸ್ಕಾರ ಹಾಕಿ ಗೌಡರು ಕೊಟ್ಟ ತೀರ್ಥ ಪ್ರಸಾದ ಪಡೆದು ಪುನೀತರಾಗುತ್ತಾರೆ ಅಂದಿನಿಂದಲೂ ಇವತ್ತಿನವರೆಗೂ ಲಿಂಗೇಗೌಡರ ವಂಶಸ್ಥರು ಪ್ರತಿ ಶುಕ್ರವಾರದ ದಿನ ಮಂದಿರದ ಬಾಗಿಲಿನಿಂದಲೇ ಪೂಜೆಯನ್ನು ಸಲ್ಲಿಸುತ್ತಾ ಬಂದಿರುವುದುಪ್ರಸ್ತುತವಾಗಿದೆ. ಈ ಪದ್ದತಿಯ ಆಚರಣೆಗೆ ಬರಲು ಮುಖ್ಯ ಶ್ರೀ ಮನೆಯಮ್ಮ ದೇವಿಯು ಸುರಸುಂದರಿ ಹಾಗೂ ಕನ್ಯಾಮಣಿಯಾಗಿರುವುದರಿಂದ ಈ ದೇವ ಮಂದಿರದ ಒಳಗಡೆ ಇರುವಾಗ ತಮ್ಮ ನಿಜರೂಪದಿಂದ ತಮ್ಮ ರೂಪ ಲಾವಣ್ಯಕ್ಕೆ ತಕ್ಕಂತೆ ಸರ್ವಾಲಂಕಾರ ಮಾಡಿಕೊಂಡು ಬೀಗುತಿರುತ್ತಾರೆ. ಇದು ಸ್ತ್ರೀ ಸಹಜಗುಣ.
  • ಹೀಗಿರುತ್ತಿರುವಾಗ ಪದೇ ಪದೇ ಮಂದಿರದ ಬಾಗಿಲನ್ನು ತೆರೆಯುತ್ತಿದ್ದರೆ ಮುಜುಗರವಾಗಿ ಅವರ ಸ್ವಾತಂತ್ರಕ್ಕೆ ಹಕ್ಕು ಚ್ಯುತಿಯಾಗುವುದರಿಂದ ಬಾಗಿಲಿನಿಂದಲೇ ಪೂಜೆಯನ್ನು ಸ್ವೀಕರಿಸುತ್ತಾರೆ. ದೇವ ಮಂದಿರದ ಗರ್ಭಾಂಕಣ ಒಳಗಡೆ ದೇವಿಯವರ ಸರ್ವಾಲಂಕಾರ ದಾರಿಗಳಾಗಿ ನಿಜ ರೂಪದಿಂದ ಇರುತ್ತಿರುವಾಗ ತಾವೇ ವಿಶೇಷವಾದ ತಳಿಗೆಯನ್ನು ತಯಾರು ಮಾಡಬೇಕೆಂಬ ಹಂಬಲ ಉಂಟಾಗುತ್ತದೆ ಇದಕ್ಕೆ ಅಗತ್ಯ ಪರಿಕರಗಳನೆಲ್ಲ ಸ್ವಂತ ಅಗೋಚರ ಶಕ್ತಿಯಿಂದ ಕೂಡಿಸಿಕೊಂಡು ಈ ವ್ಯವಸ್ಥೆಗೆ ಬೇಕಾಗಿದ್ದ ಬೆಂಕಿಯನ್ನು ಉತ್ತಮರ ಕೇರಿಯಲ್ಲಿನ ಮನೆಯಿಂದ ತರಲು ಶ್ರೀ ಲಕ್ಷ್ಮೀದೇವಮ್ಮನನ್ನು ಕಳುಹಿಸುತ್ತಾರೆ ಅವೇಳೆ ತಡ ರಾತ್ರಿಯಾಗಿದ್ದರಿಂದ ಯಾರ ಮನೆಯಲ್ಲೂ ಬೆಂಕಿ ಕಾಣಿಸುವುದಿಲ್ಲ ಕಾರಣ ಪಕ್ಕದ ಹರಿಜನ ಕೇರಿಗೆ ಹೋಗುತ್ತಾಳೆ, ಅಲ್ಲಿನ ಒಂದು ಮನೆಯ ಮೇಲೆ ಹೊಗೆ ಬರುತ್ತಿರುವುದು ಕಾಣಿಸುತ್ತದೆ. ಇದು ಅಕ್ಕ ಮನೆಯಮ್ಮನಿಗೆ ಗೊತ್ತಾಗುವುದಿಲ್ಲ ಎಂದು ತಿಳಿದು ಆಮನೆ ಹತ್ತಿರಕ್ಕೆ ಬಂದು ನೋಡಲಾಗಿ ಆ ಮನೆಯವರು ಬಾಗಿಲನ್ನು ಭದ್ರಪಡಿಸಿ ಒಳಗಡೆ ಕಳ್ಳತನದಿಂದ ತಂದಿದ್ದ ಒಂದು ಕೋಳಿಯನ್ನು ಕಡಿದು ಯಾರಿಗೂ ಗೊತ್ತಾಗಬಾರದೆಂದು ತಡ ರಾತ್ರಿಯಲ್ಲಿ ಮಾಂಸದ ಅಡಿಗೆಯನ್ನು ಮಾಡುತ್ತಿರುತ್ತಾರೆ; ಅಲ್ಲಿಗೆ ಬಂದ ಲಕ್ಷ್ಮಿ ದೇವಮ್ಮನು ಬಾಗಿಲಿಗೆ ಶಬ್ದ ಮಾಡಿ ಮನೆಯವರು ಹೊರಕ್ಕೆ ಬರುವುದರೊಳಗೆ ನಿರಾಕಾರತ್ವವನ್ನು ಹೊಂದಿ ಒಳ ಬಂದು ಮನೆಯವರಿಗೆ ಗೋಚರವಾಗದ ರೀತಿಯಲ್ಲಿ ಆ ಒಲೆಯಿಂದ ಬೆಂಕಿಯನ್ನು ತರುತ್ತಾಳೆ.
  • ಬೆಂಕಿ ಸಿಕ್ಕಿದ ಖುಷಿಯಲ್ಲಿ ಶ್ರೀ ಮಡಿವಾಳೆಶ್ವರರ ಎಚ್ಚರಿಕೆಯ ಮಾತುಗಳು ಹಾಗೂ ಶರಣರು ಮೆಟ್ಟಿದ ಉತ್ತಮರ ಕೇರಿಯ ನೆಲದ ಮಹತ್ವವನ್ನು ಕಡೆಗಣಿಸಿ, ಎರಡು ಅಪರಾಧಗಳಾದ ಕಳ್ಳತನ ಮತ್ತು ಪ್ರಾಣಿ ಹಿಂಸೆ ಹಾಗೂ ಅಸ್ಪೃಶ್ಯರ ಮನೆಗೆ ಪ್ರವೇಶ ಮತ್ತು ಅಪವಿತ್ರವಾದ ಒಲೆಯಿಂದ ಕೊಳ್ಳಿಯನ್ನು ತಂದಿರುವುದರಿಂದ ಸೂಕ್ಷ್ಮದೃಷ್ಠಿಯುಳ್ಳ ಶರಣರ ವಾಕ್ಯ ಪರಿಪಾಲಕಳು ಆಚಾರ ಹಾಗೂ ಶೀಲವಂತಳಾಗಿರುವ ಶ್ರೀ ಮನೆಯಮ್ಮನವರಿಗೆ ಕೊಳ್ಳಿಯನ್ನು ತಂದ ಮೂಲದ ಅರಿವಾಗುತ್ತದೆ. ಈ ಸಂಬಂಧ ಶ್ರೀ ಲಕ್ಷ್ಮೀದೇವಮ್ಮನ ಬಗ್ಗೆ ಅಸಹ್ಯ, ಕೋಪ, ಮತ್ಸರವುಂಟಾಗಿ ಒರಟು ಮಾತುಗಳಿಂದ ಶಪಿಸುತ್ತಾ ನಿನ್ನಿಂದ ಈ ದೇವಮಂದಿರವು ಅಪವಿತ್ರವಾಯಿತು. ಶ್ರೀ ಮಡಿವಾಳೇಶ್ವರ ಸ್ವಾಮಿಗಳವರ ಉಪದೇಶವಾದಂತೆ ನೀನು ಮಹಾ ಧ್ರೊಹಿ, ವಚನ ಭ್ರಷ್ಟಳೂ ಶ್ರೀ ಗುರುಗಳವರ ಆದೇಶದ ಪ್ರಕಾರ ನೆಡೆದುಕೊಳ್ಳದೆ ಇದ್ದ ಕಾರಣ ಅವರಿಂದ ಉಪದೇಶಿಸಲ್ಪಟ್ಟ ಪಾವಿತ್ರತೆ ಮತ್ತು ದೈವ ಶಕ್ತಿಯನ್ನು ಈ ಘಳಿಗೆಯಿಂದಲೇ ಕಳೆದುಕೊಂಡು ಅಸಹಾಯಕಳಾಗಿದ್ದೀಯ ಕಾರಣ ಈ ಬೆಂಕಿಯನ್ನು ವಾಪಸ್ಸು ತೆಗೆದುಕೊಂಡು ಹೋಗು;
  • ಮತ್ತೆ ಇಲ್ಲಿಗೆ ಬರಬೇಡ ದಲಿತರ ಕೇರಿಯಲ್ಲಿ ನೆಲಸಿ ಅವರ ಆಚಾರ, ಪದ್ಧತಿಗಳಂತೆ ಪೂಜಿಸಿಕೊಂಡು ಹಿಂಸಮಾರ್ಗವನ್ನು ಬಿಟ್ಟು ಅವರುಗಳ ತೊಂದರೆ ಕಷ್ಟ, ಸಮಸ್ಯೆಗಳಿಗೆಲ್ಲ ಸ್ಪಂದಿಸಿ ಸುಖ, ಶಾಂತಿ, ಸಮೃದ್ಧಿಯನ್ನು ಕೊಡುತ್ತಾ ಅವರುಗಳ ಇಷ್ಟ ದೇವತೆಯಾಗಿ ಇರು, ನಾನು ನೀನು ಅಕ್ಕ ಪಕ್ಕದಲ್ಲಿದ್ದರೂ ಸಹ ಯಾವ ರೀತಿಯ ಸಂಬಂಧ, ಸಂಪರ್ಕ, ಸಂಸ್ಕಾರಗಳು ಇರುವುದಿಲ್ಲ ಎಂಬ ದಿಟ್ಟ ಮಾತುಗಳನ್ನು ಹೇಳಿ ಆಕೆಯನ್ನು ಹೊರಕ್ಕೆ ಕಳುಹಿಸುತ್ತಾಳೆ ಮತ್ತು ಆಕೆಯನ್ನು ಲೀನಗೊಳಿಸಿ ಪೂಜಿಸಿದ್ದ ನೀಲಿ ವರ್ಣದ ಕುಂಭವನ್ನು ಹೊರಕ್ಕೆತಂದು ದೈವತ್ವವನ್ನು ಹೊಂದಿದ್ದ ಪವಿತ್ರ ಜಲವನ್ನು ಖಾಲಿ ಮಾಡಿ ಅದೃಶ್ಯ ರೂಪದಿಂದ ಕೇರಿಗೆ ಹೋಗಿ ಶಿಲಾರೂಪದಲ್ಲಿ ಪೂಜಿತಳಾಗಿರು ಎಂಬುದಾಗಿ ಬೀಳ್ಕೊಂಡಂತೆ ಅಂದಿನಿಂದ ಹರಿಜನ ಕೇರಿಯಲ್ಲಿ ನೆಲೆಸಿದ್ದಾಳೆ.
  • ಪ್ರತಿ ದೀಪಾವಳಿ ಹಬ್ಬದ ದಿನ ಅಹಿಂಸಾ ಪದ್ದತಿಯಿಂತೆ ವಿಶೇಷ ಪೂಜೆ ನೆಡೆದುಕೊಂಡು ಬರುತ್ತಿರುವುದು ಪ್ರಸ್ತುತವಾಗಿದೆ, ಈ ಘಟನೆಯ ನಂತರ ಶ್ರೀ ಮನೆಯಮ್ಮನವರು ಅರ್ಚಕರಾದ 'ಶ್ರೀ ಲಿಂಗೇಗೌಡರ' ಮೇಲೆ ಆವೇಶವಾಗಿ ಬಂದು ನೆರೆದಿದ್ದ ಭಕ್ತ ಸಮೂಹಕ್ಕೆ ಅಪ್ಪಣೆ ಕೊಟ್ಟಂತೆ, ನನ್ನ ದೇವ ಮಂದಿರಕ್ಕೆ ಸೂತಕ ಅಪವಿತ್ರತೆ ಕಳಂಕವಾಗಿದೆ ಕಾರಣ ಇಲ್ಲಿಂದ ಹೊರಹೋದ ಶ್ರೀ ಲಕ್ಷ್ಮಿ ದೇವಮ್ಮ ಕಳ್ಳತನ, ಪ್ರಾಣಿಹಿಂಸೆ ಮಾಡಿ, ಮಾಂಸಾಹಾರ ಬೇಯಿಸುತ್ತಿದ್ದ ಅಸ್ಪೃಶ್ಯರ ಮನೆಯ ಅಪವಿತ್ರ ಒಲೆಯಿಂದ ಬೆಂಕಿಯನ್ನು ತಂದುದ್ದರಿಂದ ವೀರಶೈವ ಧರ್ಮದ ಉಪದೇಶವನ್ನು ಪಡೆದಿದ್ದವಳು ಶ್ರೀ ಮಡಿವಾಳೇಶ್ವರರ ಮುನಿಗಳವರ ಆದರ್ಶ ತತ್ವ ವಾಗ್ವಾನಗಳಿಗೆ ಚ್ಯುತಿಯಾಗಿದೆ ಈಗ ನನಗೂ ನನ್ನ ಮಂದಿರಕ್ಕೂ ಸೂತಕ ಆವರಿಸಿದೆ ನನ್ನ ತಂಗಿಯು ಸಹವಾಸದಿಂದ ಮಹಾ ಪಾಪ ಮಾಡಿದ ದೋಷಕ್ಕೆ ಒಳಗಾಗಿದ್ದೇನೆ; ಇಲ್ಲಿರುವ ಜೀವ, ಜಲ ಇರುವ ಕುಂಭವೂ ಅವವಿತ್ರವಾಗಿರುವ ಕಾರಣ ನೀವು ಶ್ರೀ ಮಡಿವಾಳೇಶ್ವರಸ್ವಾಮಿಗಳವರ ಆಶ್ರಮಕ್ಕೆ ಹೋಗಿ ಅಲ್ಲಿಂದ ಪಾದೋದಕವನ್ನು ತಂದು; ಈ ದೇವ ಮಂದಿರಕ್ಕೆ ಹಾಕಿ ಪವಿತ್ರಗೊಳಿಸಬೇಕು.
  • ಕರಿ-ಎಳ್ಳು, ಬೆಲ್ಲದ ಮಿಶ್ರಣ 'ಚಿಗಳಿ' ಮಾಡಿ ಸೂತಕ ಹಾಗೂ ದೋಷನಿವಾರಣೆಗಾಗಿ ನನ್ನ ಸನ್ನಿಧಿಯಿಂದ ಭಕ್ತರಿಗೆಲ್ಲ ಪ್ರಸಾದವಾಗಿ ವಿತರಿಸಿದರೆ ಎಲ್ಲರ ಭಕ್ತಿ ಹಾರೈಕೆಗಳಿಂದ ಕಳಂಕಮುಕ್ತಳಾಗುತ್ತೇನೆ. ಚಿಗಳಿಯ ಸೂತಕ ನಿವಾರಣೆಯ ಸಂಕೇತವಾಗಿರುತ್ತದೆ ಅಲ್ಲದೆ ಅಪವಿತ್ರ ವಾಗಿರುವ ಸ್ಥಾನ ಪಲ್ಲಟವಾಗಿರುವ ಶ್ರೀ ಲಕ್ಷ್ಮೀದೇವಿಯನ್ನು ಲೀನಗೊಳಿಸಿ ಪೂಜಿಸಿದ ನೀಲಾವರ್ಣದ ಕುಂಭವು ಖಾಲಿ ಇದೆ. ಇದನ್ನು ನಿಶಬ್ಧವೇಳೆಯಲ್ಲಿ ತೆಗೆದುಕೊಂಡು ಹೋಗಿ ನದಿಯಲ್ಲಿ ಬಿಟ್ಟು ಬರಬೇಕು ಎಂಬ ಆದೇಶವಾಗುತ್ತದೆ. ಇನ್ನೂ ಮುಂದೆ ಪರಿಶುದ್ದತೆ, ಶೀಲವಂತಿಕೆ, ಅಹಿಂಸಾವಾದಿಯು ಆಗಿರುವ ನನಗೆ ಯಾವ ಮೂಲದಿಂದಲೂ ಅಪವಿತ್ರತೆ ಮೈಲಿಗೆ ಉಂಟಾಗಬಾರದು. ಈ ಕಾರಣಕ್ಕಾಗಿ ಪ್ರತಿ ವರ್ಷ ನೆಡೆಯುವ ಪುಂಮಿಲನ ಪೂಜಾದಿನ ಪೂಜೆಗಾಗಿ ಉಪಯೋಗಿಸುವ ತೆಂಗಿನಕಾಯಿ, ಬಾಳೆಹಣ್ಣುಗಳಿಗಾಗಿ ೫ ದಿನ ಮುಂಚಿತವಾಗಿ ಪಕ್ಕಾ ಮಡಿಯಿಂದ ಬಾಳೆಗೊನೆಗಳನ್ನು ತಂದು ಯಾವ ಕೃತಕ ಶಕ್ತಿಯನ್ನು ಬಳಸದೆ ನನ್ನ ಸನ್ನಿಧಿಯಲ್ಲಿರುವ ಹಗೇವಿನಲ್ಲಿಟ್ಟು ಹಣ್ಣು ಮಾಡಿ ಪೂಜೆಗೆ ಬಳಸಬೇಕು ತೆಂಗಿನಕಾಯಿಗಳನ್ನು ಸಹ ಪಕ್ಕ ಮಡಿಯಿಂದ ಮರದಿಂದ ಕಿತ್ತು ಸುಲಿದು ಉಪಯೋಗಿಸಬೇಕು.
  • ಪರಿಮಳ ದ್ರವ್ಯಗಳಾದ ಕರ್ಪೂರ, ಉದುಬತ್ತಿ, ಹಾರ, ಹೂವುಗಳಿಗೆ ಸನ್ನಿಧಿಯ ಪವಿತ್ರ ತೀರ್ಥಪ್ರೋಕ್ಷಣೆಮಾಡಿ ಶುದ್ಧಗೊಳಿಸಿದನಂತರ ಪೂಜೆಗೆ ಬಳಸಬೇಕು, ಈ ರೀತಿ ವ್ಯವಸ್ಥೆ ಮಾಡಿಕೊಂಡು ಪೂಜಾ ಪರಿಕರಗಳನ್ನು ದೈವಾರ್ಷಿಕ ಪುಂಮಿಲನ ಪೂಜಾ ಮಹೋತ್ಸವ ನಡೆಯುವ ಶುಕ್ರವಾರದ ದಿನ ಗ್ರಾಮದ ಮುಖಂಡರಾದವರು ಶುದ್ಧ ಮಡಿಯಿಂದ ದೇವ ಮಂದಿರದ ವರಾಂಡದಲ್ಲಿ ಕುಳಿತು; ಭಕ್ತರು ತರುವ ತಟ್ಟೆಗಳಿಗೆ ಪೂಜಾವಸ್ತುಗಳನ್ನು ತುಂಬಿ ಕೊಡಬೇಕು. ಈ ಕ್ರಮವು ನಿರಂತರವಾಗಿ ನೆಡೆದುಕೊಂಡು ಬರಬೇಕು. ಈ ಎಲ್ಲಾ ವ್ಯವಸ್ಥೆ ಜೊತೆಗೆ ಚಿಗುಳಿಯು ಸಹ ಪೂಜಾ ತಟ್ಟೆಗೂ ಪ್ರಸಾದವಾಗಿ ತುಂಬಬೇಕು. ಈ ಎಲ್ಲಾ ನಿಯಮಗಳಿಂದ ಭಕ್ತರು ನನಗೆ ಪೂಜೆಯನ್ನು ಸಲ್ಲಿಸುವುದರಿಂದ ಅಂತಹ ಭಕ್ತರು ತಮ್ಮ ಮನಸ್ಸಿನಲ್ಲಿದ್ದ ಸಂಕಲ್ಪವನ್ನು ಕಳೆದು ನಂಬಿಕೆಯಿಂದ ತೀರ್ಥ-ಪ್ರಸಾದ ಪಡೆಯುತ್ತಿರುವುದರಿಂದ ನಾನು ಸಂತುಷ್ಟಳಾಗುತ್ತೇನೆ.
  • ಈ ಎಲ್ಲಾ ವಿಧಿ ವಿಧಾನಗಳಿಂದ ನನ್ನ ಮನಸ್ಸಿಗೆ ಅಂಟಿದ್ದ ಕಳಂಕಗಳೆಲ್ಲ ನಿವಾರಣೆಯಾಗಿ ಭಕ್ತಪರಾದೀನಳಾಗುತ್ತೇನೆ; ಎಂದು ಹೇಳಿದ ದೇವಿಯು ಅರ್ಚಕರಿಂದ ಇಳಿದು ಮೂಲಸ್ಥಾನಕ್ಕೆ ಹೋದಾಗ ಶ್ರೀ ಲಿಂಗೇಗೌಡರಿಗೆ ಸಹಜ ಸ್ಥಿತಿ ಉಂಟಾಗಿ ದೇವಿಯು ಗೌಡರ ಬಾಯಿ ಮುಖಾಂತರ ಹೇಳಿದ ವಿಸ್ಮಯವನ್ನು ಕೇಳಿ ಸಂದರ್ಭದಲ್ಲಿ ಹಾಜರಿದ್ದ ಭಕ್ತರಿಗೆ ನಂಬಿಕೆಯುಂಟಾಗಿ ಆದೇಶವಾದಂತೆ ಕಾರ್ಯೋನ್ಮುಖರಾಗುತ್ತಾರೆ.

ಇತಿಹಾಸ

[ಬದಲಾಯಿಸಿ]
  • ಈ ಊರನ್ನು ಹಿಂದೆ ನರಸಿಂಹ ನಾಯಕ ಎಂಬ ರಾಜನು ಆಳ್ವಿಕೆ ನಡೆಸಿದ್ದನು. ಗ್ರಾಮ ದೇವತೆ ನರಸಿಂಹ ಸ್ವಾಮಿ ಆಗಿರುವುದರಿಂದ ಮತ್ತು ಹೊಳೆಯ ದಂಡೆಯಲ್ಲಿ ಈ ಪಟ್ಟಣ ಇರುವುದರಿಂದ ಈ ಪಟ್ಟಣಕ್ಕೆ ಹೊಳೆನರಸೀಪುರ ಎಂಬ ಹೆಸರು ಬಂತು ಎಂದು ಹೇಳಲಾಗುತ್ತದೆ.

ತಾಲೂಕಿನ ಅತಿ ದೊಡ್ಡ ಗ್ರಾಮ ತಾತನಹಳ್ಳಿ. ಇದು ಹೊಳೆನರಸೀಪುರದಿ೦ದ ಸುಮಾರು ೮ ಕಿಮಿ ದೂರ ಇದೆ.

  • ಇಲ್ಲಿಯ ಮುಖ್ಯ ದೇವಾಲಯ ಶ್ರಿ ಲಕ್ಷ್ಮಿ ತಾತೇಶ್ವರ ದೇವಾಲಯ. ಇಲ್ಲಿ ಪ್ರತಿ ವರುಶ ಯುಗಾದಿ ಕಳೆದ ೯ ನೆಯ ದಿನ ದೇವಿಯ ವೈಭವದ ಜಾತ್ರೆ ನಡೆಯುತ್ತದೆ.

ಹಿರೇಬೆಳಗುಲಿಯ ಗ್ರಾಮದೇವತೆ ಮತ್ತು ಮನೆಯಮ್ಮನವರ ಇತಿಹಾಸ ಬಹಳ ಕುತೂಹಲಕಾರಿಯಾಗಿದೆ ಇದನ್ನು ಓದಲು ಕೆಳಗೆ ಹೋಗಿ.

ಪ್ರೇಕ್ಷಣೀಯ ಸ್ಥಳಗಳು

[ಬದಲಾಯಿಸಿ]

ಪುರಾತನ ಶ್ರೀ ನರಸಿಂಹ ಸ್ವಾಮಿ ದೇವಾಲಯ ಇಲ್ಲಿನ ಆಕರ್ಷಣೆ. ಪ್ರತಿವರ್ಷ ಇಲ್ಲಿ ಜಾತ್ರೆ ನಡೆಯುತ್ತದೆ. ಮಾವಿನಕೆರೆ ಗ್ರಾಮದಲ್ಲಿ ರಂಗನಾಥ ಸ್ವಾಮಿ ಜಾತ್ರ ಮಹೋತ್ಸವ ಜರುಗುತ್ತದೆ.

ಪ್ರಮುಖ ದೇವಸ್ಥಾನಗಳು

[ಬದಲಾಯಿಸಿ]
  • ಶ್ರೀ ಲಕ್ಷ್ಮಿನರಸಿಂಹಸ್ವಾಮಿ ದೇವಾಲಯ
  • ಶ್ರೀ ಹಂಗರ ಮಲ್ಲಪ್ಪ ದೇವಸ್ಥಾನ
  • ಶ್ರೀ ಆಂಜನೇಯ ದೇವಸ್ಥಾನ
  • ಶ್ರೀ ಗಣಪತಿ ದೇವಸ್ಥಾನ
  • ಶ್ರೀ ನಂಜುಂಡೇಶ್ವರ ದೇವರು
  • ಶ್ರೀ ಲಕ್ಷ್ಮಿದೇವಸ್ಥಾನ

ಹಂಗರ ಮಲ್ಲಪ್ಪ ದೇವಸ್ಥಾನ, ಹೂವಿನಹಳ್ಳಿ

[ಬದಲಾಯಿಸಿ]
ಹಂಗರ ಮಲ್ಲಪ್ಪ ದೇವಸ್ಥಾನ, ಹೂವಿನಹಳ್ಳಿ
ಹಂಗರ ಮಲ್ಲಪ್ಪ ದೇವಸ್ಥಾನ, ಹೂವಿನಹಳ್ಳಿ

ದೂರದಲೆಲ್ಲೋ ಇರುವ ಸ್ಥಳಗಳನ್ನ ನೋಡಲಿಕ್ಕೆ ನೂರಾರು ಕಿಲೋ ಮೀಟರ್ ಹೋಗುವ ನಾವು ನಮ್ಮ ತಾಲ್ಲೋಕಿನ ಹಂಗರಮಲ್ಲಪ್ಪ ಬೆಟ್ಟವನ್ನೊಮ್ಮೆ ನೋಡಿದ್ದೇವೆಯೇ…..

ನಮ್ಮ ಹೊಳೆನರಸೀಪುರ ತಾಲ್ಲೋಕಿನ 8 ಕಿಲೋ ಮೀಟರ್ ದೂರದಲ್ಲಿನ ಹೂವಿನಹಳ್ಳಿ (ಹೊಳೆನರಸೀಪುರ – ಚನ್ನರಾಯಪಟ್ಟಣ ರಸ್ತೆ) ಸಮೀಪದ ಹಂಗರ ಮಲ್ಲಪ್ಪ ದೇವರು ಇರುವ ಸ್ಥಳವೇ ಹಂಗರಮಲ್ಲಪ್ಪ ಬೆಟ್ಟ. ಯಾವುದೇ ಮಲೆನಾಡಿಗೂ ಕಡಿಮೆಯೆನಿಸದ ಸುತ್ತಲೂ ಬೆಟ್ಟಗುಡ್ಡಗಳಿಂದ ಕೂಡಿದ್ದ ಸುಂದರ ಪರಿಸರದೊಂದಿಗೆ ಚಾರಣಕ್ಕೆ ಅಥವಾ ಸಹಲ್ ಗೆ ತೆರಳುವ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿರುವಂತಿದೆ ಬೆಟ್ಟ.

ಬೆಟ್ಟಕ್ಕೆ ತೆರಳಲು ರಸ್ತೆ ವ್ಯವಸ್ಥೆಯಿದ್ದು, ಕಾರು ಅಥವಾ ಬೈಕ್ ಗಳ ಮೂಲಕವೂ ಸರಾಗವಾಗಿ ಬೆಟ್ಟದ ತುದಿಯನ್ನ ತಲುಪಬಹುದು.

ಈ ದೇವಸ್ಥಾನದ ವಿಶೇಷತೆ ಏನು? ಹಾಗೂ ಇಲ್ಲಿಗೆ ಭಕ್ತಾದಿಗಳು ಇದ್ದಾರ? ಅನ್ನೋ ಗೊಂದಲವೇ ನಿಮಗೆ ಬನ್ನಿ ಅದರ ಬಗ್ಗೆಯೂ ನೋಡೋಣ.

ಈ ದೇವಸ್ಥಾನಕ್ಕೆ ಸುತ್ತಮುತ್ತಲಿನ 10 ಕ್ಕೂ ಮಿಗಿಲಾದ ಹಳ್ಳಿಗಳ (ಹೂವಿನಹಳ್ಳಿ, ಕಾಳೇನಹಳ್ಳಿ ಕಾವಲು, ಬಾಗಿವಾಳು, ಬೆಟ್ಟದ ಸಾತೇನಹಳ್ಳಿ, ಜಾಂದಾಳ್ ಕ್ರಾಸ್, ಬಿಚೇನಹಳ್ಳಿ, ಉಣ್ಣೇನಹಳ್ಳಿ, ಹರಿಹರಪುರ, ಬೀರನಹಳ್ಳಿ ಇತ್ಯಾದಿ) ಹೆಚ್ಚು ಜನರು ಕೃಷಿ ಚಟುವಟಿಕೆಗಳನ್ನೇ ತಮ್ಮ ಮೂಲ ಕಸುಬನ್ನಾಗಿಸಿಕೊಂಡಿದ್ದಾರೆ. ಕೃಷಿ ಅಂದಾಕ್ಷಣ ನಿಮ್ಮೆಲ್ಲರಿಗೂ ಗೊತ್ತೇ ಇದೆ ಪ್ರತೀ ಮನೆಯಲ್ಲೂ ಹಸು ಹಾಗೂ ಎಮ್ಮೆಗಳನ್ನ ಸಾಕಿರುತ್ತಾರೆ. ಪ್ರತಿ ಹಸು ಅಥವಾ ಎಮ್ಮೆಗಳು ಕರು ಹಾಕಿದಾಗ ಗಿಣ್ಣು ತಯಾರಿಸಿ ಇಲ್ಲಿಗೆ ತಂದು ಪೂಜಿಸಿ ನಂತರ ಮನೆಯವರೆಲ್ಲರೂ ಸ್ವೀಕರಿಸುವ ಪದ್ದತಿ ಮೊದಲಿನಿಂದಲೂ ಬೆಳೆದುಕೊಂಡು ಬಂದಿದೆ. ಇಲ್ಲಿ ಪೂಜೆ ಕೈಗೊಂಡರೆ ಹಸು/ಎಮ್ಮೆ ಹಾಗೂ ಕರುಗಳಿಗೆ ಯಾವುದೇ ತೊಂದರೆಯಾಗೊಲ್ಲವೆಂಬ ನಂಬಿಕೆ ಇಲ್ಲಿನ ಭಕ್ತಾದಿಗಳದ್ದು.

ಈ ದೇವಸ್ಥಾನಕ್ಕೊಂದು ದಂತ ಕಥೆಯೂ ಇದೆ ಅದೇನೆಂದರೆ, ಪಕ್ಕದ ಬಾಗಿವಾಳು ಗ್ರಾಮದ ಗರ್ಭಿಣಿ ಮಹಿಳೆಯೊಬ್ಬರ ಮನೆಯ ಹಸು ಕರು ಹಾಕಿದ ಸಂದರ್ಭದಲ್ಲಿ ಗಿಣ್ಣು ತೆಗೆದುಕೊಂಡು ಹೋಗಿ ಪೂಜಿಸಿಕೊಂಡು ಬರಲು ಯಾರೂ ಇಲ್ಲದ ಕಾರಣ ಆಕೆಯೇ ತೆರಳುತ್ತಾಳೆ ಮಾರ್ಗಮಧ್ಯದಲ್ಲಿ ಆಕೆಗೆ ಸುಸ್ತಾದ ಸಂದರ್ಭದಲ್ಲಿ ಅಲ್ಲೇ ಕುಳಿತು ಭಗವಂತ ನೀನೇಕೆ ಅಷ್ಟು ದೂರ ಇದ್ದೀಯ ಇಲ್ಲೇ ಹತ್ತಿರದಲ್ಲೇ ಇರಬಾರದಿತ್ತೆ ಎಂದು ಕೇಳಿಕೊಂಡಾಗ ಪಕ್ಕದ ಬೆಟ್ಟದಲ್ಲಿದ್ದ ದೇವರು ಅಲ್ಲಿ ಮೂಡಿತೆಂಬ ನಂಬಿಕೆಯಿದೆ. ಇದು ಸತ್ಯಕ್ಕೆ ಸಮೀಪವೆಂಬಂತೆ ಪುಷ್ಟಿ ನೀಡಲು ಹಂಗರಮಲ್ಲಪ್ಪ ಬೆಟ್ಟಕ್ಕೆ ಸಮೀಪದ ದೊಡ್ಡ ಬೆಟ್ಟದಲ್ಲೂ ಈಗಲೂ ಪಾದದ ಗುರುತುಗಳನ್ನೊಳಗೊಂಡ ಕಲ್ಲು ಇದ್ದು ಅದನ್ನೂ ಪೂಜಿಸುವ ಪದ್ದತಿ ಇದೆ.

ಈ ಬೆಟ್ಟದಲ್ಲಿ ಪ್ರತೀ ಕಾರ್ತಿಕ ಮಾಸದ ಹುಣ್ಣಿಮೆಯ ದಿನ ಸುತ್ತಮುತ್ತಲ ಭಕ್ತಾದಿಗಳೆಲ್ಲರೂ ಒಟ್ಟಿಗೆ ಸೇರಿ ಸಭ್ರಮ ಸಡಗರದಿಂದ ಜಾತ್ರಾ ಮಹೋತ್ಸವ ನಡೆಸುತ್ತಾ ಬಂದಿದ್ದಾರೆ.

ಹೂವಿನಹಳ್ಳಿಯ ಸಂಗಮೇಶ್ವರ ಮತ್ತು ವೀರಭದ್ರೇಶ್ವರ ದೇವಸ್ಥಾನದ ಸಮೀಪದಲ್ಲಿರುವ ವೀರಗಲ್ಲುಗಳ ಇತಿಹಾಸ

[ಬದಲಾಯಿಸಿ]

ಹೊಳೆನರಸೀಪುರದಿಂದ ೮ ಕಿ.ಮೀ ದೂರದಲ್ಲಿರುವ ಹೂವಿನಹಳ್ಳಿ ಗ್ರಾಮದಲ್ಲಿ ಹೊಯ್ಸಳ ಕಾಲದ ಮಹತ್ವದ ವೀರಗಲ್ಲು ಶಾಸನವೊಂದು ಲಭ್ಯವಾಗಿದೆ. ಈ ವೀರಗಲ್ಲು ಹೂವಿನಹಳ್ಳಿಯ ಈಶ್ವರ ದೇವಸ್ಥಾನದ (ಹೇಮಾವತಿ ನದಿಯ ಸಮೀಪದಲ್ಲಿರುವ ದೇವಸ್ತಾನ) ಪಕ್ಕದಲ್ಲಿ ಇದೆ. ಇದು ಕ್ರಿ.ಶ ೧೧೭೨ ಮಾರ್ಚ್ ೧ರ ಕಾಲಮಾನ ಸೂಚಿಸುವ ಈ ವೀರಗಲ್ಲು ೨ನೇ ಬಲ್ಲಾಳನ ಕಾಲದ್ದಾಗಿದೆ.

ಇಮ್ಮಡಿ ಬಲ್ಲಾಳ ನಡೆಸಿದ ಗ್ರಾಮ ದಾಳಿಯ ಸಂದರ್ಭವೊಂದರಲ್ಲಿ ಬಮ್ಮಯನಾಯಕ ಎಂಬಾತ ಮರಣ ಹೊಂದಿದ ಸಂಗತಿಯನ್ನು ಇದು ನಿರೂಪಿಸುತ್ತದೆ. ಆತ ಬಲ್ಲಾಳನ ಪರವಾಗಿ ಹೋರಾಡಿದಂತೆ ತೋರುತ್ತದೆ. ಇದು ಬಲ್ಲಾಳ ತನ್ನ ತಂದೆಯ ವಿರುದ್ಧ ನಡೆಸಿದ ಬಂಡಾಯದ ಅಪ್ರತ್ಯಕ್ಷ ಸೂಚನೆ. ಕೆಲವರು ಶಾಸನಗಳಲ್ಲಿ ಸೂಚಿತವಾಗಿರುವಂತೆ ಕ್ರಿ.ಶ ೧೧೬೮ ರಿಂದಲೇ ತನ್ನ ತಂದೆಯೊಂದಿಗೆ ಜಂಟಿಯಾಗಿ ರಾಜ್ಯವಾಳುತಿದ್ದ ಕ್ರಿ.ಶ ೧೧೭೨ ರಲ್ಲಿ ತನ್ನದೇ ಆದ ಸೇನಾಬಲವನ್ನು ಕೂಡಿಸಿಕೊಂಡು ತಂದೆಯ ವಿರುದ್ಧ ಹೋರಾಟಕ್ಕಿಳಿದ

ಶ್ರವಣೂರು ಗ್ರಾಮ. ಗರುಡಾಳೇಶ್ವರ ದೇವಾಲಯ

[ಬದಲಾಯಿಸಿ]

ಈ ಗ್ರಾಮ ಹೊಳೆನರಸೀಪುರ ತಾಲೋಕಿನ 12 ಕಿ.ಮಿ.ದೂರದಲ್ಲಿದೆ

ನಮ್ಮ ಊರಿನಲ್ಲಿ ನೆಲೆಸಿರುವ ಗರುಡಾಳೇಶ್ವರ ದೇವರು

ಅತ್ಯಂತ ಶಕ್ತಿ ಶಾಲಿ ದೇವರು ಎಂದು ಹೇಳುತಾರೆ ಗರುಡನು ವಿಷ್ಣುವಿನ ವಾಹನದೇವತೆ ಎಂದು ಹೇಳುತಾರೆ ನಮ್ಮ ಊರಿನ ಈ ದೇವಾಲಯದ ದಲ್ಲಿ ಗರುಡನ ಆಕೃತಿ ಮನುಷ್ಯನ ರೀತಿ ಇದ್ದು ಬಾಗಿದ ಕೊಕ್ಕು ಮತ್ತು ರೆಕ್ಕೆಗಳಿಂದ ಕೂಡಿದೆ ಗರುಡ ಮತ್ತು ನಾಗರ ಹಾವಿಗೆ ಬದ್ದ ದ್ವೇಷ ಇದೆ ಎಂಬುದನ್ನು ನಮ್ಮ ಈ ದೇವಾಲಯದಲ್ಲಿ ಅದ್ಬುತವಾಗಿ ಚಿತ್ರೀಸಲಾಗಿದೆ. ಅತ್ಯಂತ ವಿಶಿಷ್ಟವಾದ ಸಂಗತಿ ಎಂದರೆ ಮಕ್ಕಳು ಇಲ್ಲದವರು ಈ ದೇವಾಲಯಕ್ಕೆ ಬಂದು ಶ್ರದ್ದೆ ಭಕ್ತಿ ಇಂದ ಗರುಡ ಸೆರೆಯನ್ನು ಬಿಡಿಸಿದರೆ ಮಕ್ಕಳ ಭಾಗ್ಯ ಕರುಣಿಸುತ್ತದೆ ಎಂಬುದು ನಿಜವಾದ ಸಂಗತಿ ಆಗಿದೆ ಪ್ರತಿ ವರ್ಷ ಕಾರ್ತಿಕ ಮಾಸದಲ್ಲಿ ದೇವಸ್ಥಾನಕ್ಕೆ ಪೂಜೆ ಸಲ್ಲಿಸುವ ವಾಡಿಕೆ ಇದೆ ಪ್ರತಿ ವರ್ಷ ಏಪ್ರಿಲ್ ತಿಂಗಳಲ್ಲಿ ಮೂರು ದಿನ ಅತ್ಯಂತ ಅದ್ದೂರಿ ಯಾಗಿ ಹಬ್ಬ ವನ್ನು ಆಚರಿಸಲಾಗುತ್ತದೆ. ಈ ಹಬ್ಬಕ್ಕೆ ರಂಗದ ಹಬ್ಬ ಎನ್ನುವರು. ಸುತೂರಿನ ಹಳ್ಳಿಗಳ ಜನರು ರಂಗದ ಕುಣಿತಕ್ಕೆ ಭಾಗವಹಿಸುತ್ತಾರೆ. ಮತ್ತು ಇಲ್ಲಿನ ಗ್ರಾಮ ದೇವತೆಯಾದ ಶಿವರದಮ್ಮ ನೆಲೆಸಿರುತಾಳೆ. ಹಾಗು 1986ನೇ ಇಸವಿಯಲ್ಲಿ ಸ್ಥಾಪನೆಯಾದ ಶ್ರೀ ಶಿಂಗಮ್ಮ.ದೇವಾಲಯ ಇದೆ. ಇಲ್ಲಿ ವರ್ಷಕ್ಕೊಮ್ಮೆ. ನಾಯಕ ಸಮುದಾಯದವರಿಂದ ಶ್ರೀ ಶಿಂಗಮ್ಮನವರ ಹಬ್ಬವನ್ನು ಮಾಡಲಾಗುತ್ತದೆ. ಹಾಗು ಈಶ್ವರ ದೇವಾಲಯ ಇದೆ.

ಕೃಷಿ ಇಲ್ಲಿ ಪ್ರಮುಖ ಕಸುಬು. ಭತ್ತ,ಕಬ್ಬು ಇತ್ಯಾದಿಗಳನ್ನು ಬೆಳೆಯಲಾಗುತ್ತದೆ. ಇದು ಒಂದು ವ್ಯವಸಾಯ ಪ್ರಧಾನವಾದ ಪಟ್ಟಣ. ಹೇಮಾವತಿ ಹೊಳೆಯು ಪಟ್ಟಣದ ಪಕ್ಕದಲ್ಲಿ ಹರಿಯುತ್ತಿದ್ದು ಇದರಿಂದ ನೀರಾವರಿ ಸೌಲಭ್ಯ ಹೆಚ್ಚಾಗಿ ಕಂಡು ಬರುತ್ತದೆ. ಹೊಳೆನರಸೀಪುರ ಸುತ್ತಮುತ್ತಲ ಹೂಲಗದ್ದೆಗಳಿಗೆ ಅನುಕೂಲಕರವಾಗಿದೆ. ಇದರಿಂದ ವ್ಯಾಪಾರ ಕೇಂದ್ರ ಮತ್ತು ವ್ಯವಸಾಯ ಪ್ರಧಾನ ಕೈಗಾರಿಕೆಗಳಿಗೆ ಪ್ರಾಮುಖ್ಯತೆ ಪಡೆದಿದೆ. ಹೇಮಾವತಿ ಹೊಳೆಯಿಂದ ನೀರಾವರಿ ಚಟುವಟಿಕೆಗಳು ಹಲವು ಕಡೆ ವಿಸ್ತಾರವಾಗಿದೆ. ಹೊಳೆನರಸೀಪುರವು ಒಂದು ಆಕರ್ಷಣೀಯವಾದ ವಸತಿ ಕೇಂದ್ರವಾಗಿದೆ.

ಹೊಳೆ ನರಸೀಪುರ ತಾಲ್ಲೂಕಿನ ಆನೆ ಕನ್ನಂಬಾಡಿ ಗ್ರಾಮ

[ಬದಲಾಯಿಸಿ]

ಆನೆ ಕನ್ನಂಬಾಡಿ ಎಂಬುದು ಹಾಸನ ಜಿಲ್ಲೆಯ ಹೊಳೆ ನರಸೀಪುರ ತಾಲ್ಲೂಕಿನ ಹಳ್ಳಿ ಮೈಸೂರು ಹೋಬಳಿಯ ಒಂದು ಗ್ರಾಮ ವಾಗಿದ್ದು, ಈ ಗ್ರಾಮದಲ್ಲಿ ಹಲವಾರು ವಿಶೇಷತೆ ಗಳಿವೆ.

ಶತಮಾನಗಳ ಹಿಂದೆ ಈ ಗ್ರಾಮವನ್ನು ಅಗ್ರಹಾರವೆಂದು ಕರೆಯಲಾಗುತ್ತಿತ್ತು ಎಂದು ಪೂರ್ವಜರು ಉಲ್ಲೇಖಿಸಿದ್ದಾರೆ. ಶತಮಾನಗಳ ಹಿಂದೆ ಈ ಗ್ರಾಮದಲ್ಲಿ ಅಂದರೆ, ೧೨ನೇ ಶತಮಾನದಲ್ಲಿ ಹೊಯ್ಸಳರು ನಿರ್ಮಿಸಿರುವ ನಾರಾಯಣ ದೇವಾಲಯವಿದ್ದು, ಸುಂದರ ಕಲೆ ಮತ್ತು ವಾಸ್ತುಶಿಲ್ಪದಿಂದ ಕೂಡಿದ್ದು, ಅತ್ಯುತ್ತಮ ಕೆತ್ತನೆಯನ್ನೂ ಕಾಣಬಹುದಾಗಿದೆ.

ಈ ಗ್ರಾಮದಲ್ಲಿನ ಗ್ರಾಮದೇವತೆಯಾದ ಶ್ರೀ ಬಿದಿರು ಕಾಳಮ್ಮ ದೇವತೆಯ ದೇವಾಲಯವು ಒಂದು ಪ್ರಮುಖ ದೇವಾಲಯವಾಗಿದೆ. ಪ್ರತಿ ವರ್ಷವೂ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಜಾತ್ರಾ ಮಹೋತ್ಸವವು ನಡೆಯುತ್ತದೆ. ಯುಗಾದಿ ಹಬ್ಬದ ಸಂದರ್ಭದಲ್ಲಿಯೂ ವಿಶೇಷ ಪೂಜೆ ಜರುಗುತ್ತದೆ. ಜೊತೆಗೆ ಲಕ್ಷ್ಮಿ ದೇವಿಯ ದೇವಾಲಯ, ಆಂಜನೇಯ ಸ್ವಾಮಿ ದೇವಾಲಯ, ಹಾಗೂ ಮಾರಮ್ಮನ ದೇವಾಲಯಗಳು ಕೂಡ ಇವೆ.

ಆನೆ ಕನ್ನಂಬಾಡಿ ಎಂಬುದರ ಮೂಲ -ಹೊಯ್ಸಳರ ಕಾಲದಲ್ಲಿ ಆನೆಗಳನ್ನು ಇಲ್ಲಿ ಪಳಗಿಸುತ್ತಿದ್ದರೆಂದು ಉಲ್ಲೇಖವಿರುವ ಕಾರಣದಿಂದಾಗಿಯೇ ಈ ಗ್ರಾಮಕ್ಕೆ ಆನೆ ಕನ್ನಂಬಾಡಿ ಎಂದು ಕರೆಯಲಾಗುತ್ತಿದೆ.

ಪ್ರಮುಖ ಕೈಗಾರಿಕೆಗಳು

[ಬದಲಾಯಿಸಿ]

ಹೊಳೇನರಸೀಪುರ ತಾಲ್ಲೂಕಿನಲ್ಲಿ ಪ್ರಮುಖ ಬೆಳೆಯಾದ ಬತ್ತಕ್ಕೆ ಪೂರಕವಾದ ಹಲವಾರು ಅಕ್ಕಿಗಿರಣಿಗಳು ತಾಲ್ಲೂಕಿನಾದ್ಯಂತ ಹರಡಿದೆ.

ಶಿಕ್ಷಣ

[ಬದಲಾಯಿಸಿ]

ಹೊಳೆನರಸೀಪುರದಲ್ಲಿ ಕಲೆ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗಗಳಿರುವ ಕಾಲೇಜುಗಳಿವೆ. ಮಹಿಳೆಯರಿಗಾಗಿ ಪ್ರತ್ಯೇಕ ಪ್ರಥಮದರ್ಜೆ ಕಾಲೇಜಿದೆ. ಇವಲ್ಲದೇ ಹಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಸೇರಿದಂತೆ ಹತ್ತಾರು ವಿದ್ಯಾಸಂಸ್ಥೆಗಳು ಕೆಲಸ ಮಾಡುತ್ತಿವೆ.ಪ್ರಮುಖವಾದ ಸರಕಾರಿ ಕಾನೂನು ಕಾಲೇಜ್ ಕೂಡ ಇದೆ,ಪಡುವಾಲಹಿಪ್ಪೆ ಗ್ರಾಮ ಒಂದು ಪ್ರಮುಖ ಶಿಕ್ಷಣ ಕೇಂದ್ರವಾಗಿ ಹೊರಹೊಮ್ಮುತ್ತಿದೆ.ಈ ಗ್ರಾಮದಲ್ಲಿ ಉನ್ನತ ಶಿಕ್ಷಣಕ್ಕೆ ಅತಿ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತಿದೆ.ಸರಕಾರಿ ಪ್ರಥಮ ದರ್ಜೆ ಕಾಲೇಜು,ಇದೆ ಎಂಕಾಮ್,ಎಂಎ.ಮುಂತಾದ ಪದವಿಗಳನ್ನು ನೀಡುತ್ತಿದ್ದಾರೆ.ವಿದ್ಯಾರ್ಥಿಗಳಿಗೆ ಬೇಕಾದ ಎಲ್ಲ ಸೌಲ್ಯಭ್ಯ ಗಳನ್ನು ದೊರಕಿಸಿ ಕೊಡಲಾಗಿದೆ.ಹಾಸ್ಟೆಲ್ ಕೂಡ ಇದೆ.

ಕಂಪ್ಯೂಟರ್ ಶಿಕ್ಷಣ

[ಬದಲಾಯಿಸಿ]

ಹೊಳೆನರಸೀಪುರ Archived 2014-03-05 ವೇಬ್ಯಾಕ್ ಮೆಷಿನ್ ನಲ್ಲಿ. ಬೈಪಾಸ್ ರಸ್ತೆಯ ಮಹಿಳಾ ಪದವಿ ಪೂರ್ವ ಕಾಲೇಜು ಮುಂಭಾಗ ಗುತ್ತಮ್ಮ ತಮ್ಮೇಗೌಡ ಕಲ್ಯಾಣ ಮಂಟಪದ ಹತ್ತಿರವಿರುವ ಮಣಿಪಾಲ್ ಇನಸ್ಟಿಟ್ಯೂಟ್ ಆಫ್ ಕಂಪ್ಯೂಟರ್ ಎಜುಕೇಷನ್ Archived 2014-06-04 ವೇಬ್ಯಾಕ್ ಮೆಷಿನ್ ನಲ್ಲಿ. ಕೇಂದ್ರವು ಕಂಪ್ಯೂಟರ್ ಶಿಕ್ಷಣದ ಅಂಗಗಳಾದ ಸಾಫ್ಟ್ವೇರ್, ಪ್ರೋಗ್ರಾಮಿಂಗ್, ಹಾರ್ಡವೇರ್ ಮತ್ತು ನೆಟ್ವರ್ಕ್ ವಿಷಯಗಳಲ್ಲಿ ತರಬೇತಿ ನೀಡಲಾಗುತ್ತಿದೆ. ಸುಸಜ್ಜಿತ ಲ್ಯಾಬ್ ಹೊಂದಿದ್ದು ಪ್ರಾಯೋಗಿಕ ತರಬೇತಿಗೆ ಆದ್ಯತೆ ನೀಡುತ್ತದೆ. ತನ್ನ ಉತ್ತಮ ಗುಣಮಟ್ಟ ಹಾಗೂ ಕ್ರಮಬದ್ಧ ಕಂಪ್ಯೂಟರ್ ಶಿಕ್ಷಣ ನೀಡಲು ಮಣಿಪಾಲ್ ಯೂನಿವರ್ಸಿಟಿಯಿಂದ ಪ್ರಮಾಣ ಪತ್ರವನ್ನು ಪಡೆದಿದೆ.


೧.ಹೊಳೆನರಸೀಪುರ ೨.ಹಾಸನ ಇತಿಹಾಸ ೩.ಹೊಯ್ಸಳ ಟೂರಿಸಮ್ Archived 2014-02-09 ವೇಬ್ಯಾಕ್ ಮೆಷಿನ್ ನಲ್ಲಿ.