ಮೊಳಕಾಲ್ಮೂರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮೊಳಕಾಲ್ಮೂರು [೧] ಚಿತ್ರದುರ್ಗ ಜಿಲ್ಲೆಯ ಅತಿ ಚಿಕ್ಕ ತಾಲ್ಲೂಕು. ಈ ತಾಲ್ಲೂಕಿನ ಉತ್ತರಕ್ಕೆ ಬಳ್ಳಾರಿ ತಾಲ್ಲೂಕಿನ ಗಡಿ ಹಾಗೂ ಆಂದ್ರಪ್ರದೇಶದ ಅನಂತಪುರ ಜಿಲ್ಲೆಯ ರಾಯದುರ್ಗ ತಾಲ್ಲೂಕಿನಲ್ಲಿದೆ. ದಕ್ಷಿಣಕ್ಕೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿ ಗಡಿ ಹಾಗೂ ಆಂದ್ರಪ್ರದೇಶದ ಅನಂತಪುರ ಜಿಲ್ಲೆಯ ರಾಯದುರ್ಗ ತಾಲ್ಲೂಕಿದೆ. ಪೂರ್ವಕ್ಕೆ ಆಂದ್ರಪ್ರದೇಶದ ಅನಂತಪುರ ಜಿಲ್ಲೆಯ ರಾಯದುರ್ಗ ತಾಲ್ಲೂಕಿದೆ. ಪಶ್ವಿಮಕ್ಕೆ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿದೆ. ಮೊಳಕಾಲ್ಮೂರು ತಾಲ್ಲೂಕು ಉ*ದ ಮುಖವಾಗಿ ಸುಮಾರು ೪೦ ಕಿ.ಮೀಟರ್ ವಿಸ್ತೀರ್ಣ ಹೊಂದಿದೆ. ಪೂ*ಪ ಮುಖವಾಗಿ ಸುಮಾರು ೨೭ ಕಿ.ಮೀಟರ್ ವಿಸ್ತೀರ್ಣವನ್ನು ಹೊಂದಿದೆ. ಮೊಳಕಾಲ್ಮೂರಿನ ಹಿಂದಿನ ಹೆಸರು ಮೊಣಕಾಲ್ಮುರಿ ಎಂದಿತ್ತು.ಮೊಳಕಾಲ್ಮೂರು ಪಟ್ಟಣಕ್ಕೆ ಹಲವಾರು ಹೆಸರುಗಳಿವೆ.ಇಲ್ಲಿನ ಪ್ರತಿಧ್ವನಿಸುವ ಕೂಗುವ ಬಂಡೆಯಿಂದ ಅಂದರೆ ಶಬ್ದ ಮೊಳಗುವ ಬಂಡೆಯಿಂದ "ಮೊಳಗುವಕಲ್ಲು" ಇರುವ ಊರು ಮೊಳಕಾಲ್ಮೂರು ಎಂದಾಯಿತು.ಒಂದು ಕಾಲದಲ್ಲಿ ಈ ಪ್ರದೇಶದಲ್ಲಿ ಬೆಳೆಯುತ್ತಿದ್ದ "ಮೊಳಕಾಲ್ಮುತ/ಕ"ಎಂಬ ಜಲಸಸ್ಯದಿಂದ ಮೊಳಕಾಲ್ಮೂರು ಎಂಬ ಹೆಸರು ಬಂದಿತು. ಮತ್ತೊಂದು ಅಭಿಪ್ರಾಯದಂತೆ ಅಶೋಕ ಚಕ್ರವರ್ತಿಯ ನಂತರ ಇಲ್ಲಿ ಆತನ ಮೊಮ್ಮಕ್ಕಳಾದ "ಮುರ"ಮತ್ತು "ಕುಲಾಣ" ರು ಆಡಳಿತ ನಡೆಸಿದರಿಂದ ಮುರಕುಲಾಣನೂರು ಎಂದಾಗಿ ಕಾಲಾನಂತರ ಮೊಳಕಾಲ್ಮೂರು ಎಂದಾಯಿತು.ಅಷ್ಟೇ ಅಲ್ಲದೆ ನಿಸರ್ಗದತ್ತವಾಗಿ ಇಲ್ಲಿನ ಬೆಟ್ಟಸಾಲುಗಳಲ್ಲಿ ಗ್ರಾನೈಟ್ ಕಲ್ಲುಗಳಂತೆ ಮರಳು ಕಲ್ಲುಗಳು ಸಹ ಯತೇಚ್ಚವಾಗಿ ಸಿಗುವುದರಿಂದ ಮರಳುಕಲ್ಲುಗಳಿಂದ ಕೂಡಿದ ಊರು ಮರಳು+ಕಲ್ಲು+ಊರು ಎಂದಾಗಿ ಕಾಲಾನಂತರ ಮರಳ್ ಕಲ್ ಊರು ಆಗಿ, ಮೊಳಕಾಲ್ಮೂರು ಎಂದು ಪರಿವರ್ತಿತಗೊಂಡಿತು.

ಮೊಳಕಾಲ್ಮೂರು ಸೀರೆಗಳು ವಿಶ್ವ ಪ್ರಸಿದ್ಧ[ಬದಲಾಯಿಸಿ]

  • ಮೊಳಕಾಲ್ಮೂರು ತಾಲ್ಲೂಕನ್ನು ರೇಷ್ಮೆ ಸೀರೆಯ ತವರೂರು ಎಂದು ಕರೆಯಲಾಗುತ್ತದೆ.[೨] ಇದು ಒಂದು ಐತಿಹಾಸಿಕ ಸ್ಥಳವಾಗಿದ್ದು. ಇಲ್ಲಿ ನುಂಕಪ್ಪನ ಪ್ರಸಿದ್ಧವಾದ ಬೆಟ್ಟವಿದೆ. ಈ ಬೆಟ್ಟದಲ್ಲಿ ಶ್ರೀ ನುಂಕಮಲೆ ಸಿದ್ದೇಶ್ವರ ಸ್ವಾಮಿಯು ನೆಲೆಸಿದ್ದು ಈ ಸ್ವಾಮಿಯ ಜಾತ್ರೆಯನ್ನು ವರ್ಷಕ್ಕೊಮೆ ನೆಡೆಸಲಾಗುತ್ತದೆ. ಅಲ್ಲದೆ ಮೊಳಕಾಲ್ಮೂರು ತಾಲ್ಲೂಕಿನ ಗ್ರಾಮವಾದ ಜಟ್ಟಂಗಿ ರಾಮೇಶ್ವರ ಎಂಬಲ್ಲಿ ಅಶೋಕ ಚಕ್ರವರ್ತಿಯ ಕಾಲದ ಶಾಸನ ಒಂದು ಸಹ ದೊರೆತಿದೆ. ಇಲ್ಲಿನ ಜನರ ಮೂಲ ಕಸುಬು ಕೃಷಿಯಾಗಿದ್ದು. ರೇಷ್ಮೆ, ನೆಲಗಡಲೆ (ಕಡಲೆ ಕಾಯಿ), ಜೋಳ, ರಾಗಿ, ಮೆಕ್ಕೆಜೋಳ ಮತ್ತು ಈರುಳ್ಳಿ ಬೆಳೆಗಳನ್ನು ಹೆಚ್ಚಾಗಿ ಬೆಳೆಯುತ್ತಾರೆ.
  • ಮೊಳಕಾಲ್ಮೂರು ಒಂದು ತಾಲೂಕು ಕೇಂದ್ರವಾಗಿದ್ದು ಪ್ರಮುಖವಾಗಿ ರಾಂಪುರ, ಗ್ರಾಮ ತಾಲ್ಲೂಕು ನಲ್ಲಿಯೇ ಅತಿ ಹೆಚ್ಚು ಜನಸಂಖೈಯನ್ನು ಹೊಂದಿದ ಅಭಿವೃಧ್ಧಿಯಲ್ಲಿರುವ ಗ್ರಾಮ ಎಂಬ ಹೆಸರು ಗಳಿಸಿದೆ ಹಾಗೂ ಕೊಂಡ್ಲಹಳ್ಳಿ, ಕೋನಸಾಗರ, ಮೊಗಲಹಳ್ಳೈ, ಬೊಮ್ಮಗೊಂಡನ ಕೆರೆ(ಬಿಜಿ ಕೆರೆ) ಇವು ಪ್ರಮುಖವಾದವುಗಳು. ಇವರ ಪ್ರಮುಖ ಉದ್ಯೋಗ ರೇಷ್ಮೆ ನೇಯ್ಗೆಯಾಗಿದ್ದು ಇಲ್ಲಿನ ಸೀರೆಗಳು ದೇಶ ವಿದೇಶಗಳಲ್ಲಿ ಪ್ರಸಿದ್ಧಿಯಾಗಿವೆ.
  • ಮೊಳಕಾಲ್ಮೂರು ಸೀರೆಗಳು ವಾಸ್ತವವಾಗಿ ರೇಷ್ಮೆ ಸೀರೆಗಳ ಒಂದು ವಿಧ, ಅವನ್ನು ಮೊಳಕಾಲ್ಮೂರು ಎಂಬ ಊರಿನಲ್ಲಿ ನೇದು ತಯಾರಿಸುತ್ತಾರೆ. ಕರ್ನಾಟಕ ರಾಜ್ಯದ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಸೀರೆಗಳಿಗೆ ಬಹಳ ಪ್ರಸಿದ್ಧಿಯಾಗಿದೆ. ೨೦೧೧, ರಲ್ಲಿ ಒಂದು ಸರಕಾರಿ ಟ್ಯಾಗ್ ಸಂಖ್ಯೆ ೫೩ ಕೊಡಲಾಗಿದೆ.[೩] ಈ ಊರಿನಲ್ಲಿ ತಯಾರಾಗುವ ಸೀರೆಗಳ ವಿನ್ಯಾಸದಲ್ಲಿ ಮೂಡಿ ಸಲಾದ ಕಲಾಪ್ರಕಾರಗಳಲ್ಲಿ ಹಣ್ಣುಗಳು, ಪ್ರಾಣಿಗಳು ಮತ್ತು ನಾನಾ ತರಹೆಯ ಪುಷ್ಪಗಳ ಸಮ್ಮಿಳನವಿದೆ.ಚರಿತ್ರೆಯ ಪುಟಗಳಲ್ಲಿ ಮೊಳಕಾಲ್ಮೂರು ತನ್ನದೇ ಆದ ಮಹತ್ವ ಹೊಂದಿದೆ. ದಕ್ಷಿಣ ಭಾರತದಲ್ಲಿ ಮೌರ್ಯರ ಹೆಗ್ಗುರುತಾದ ಅಶೋಕನ ಶಿಲಾಶಾಸನಗಳು ಮೊದಲ ಬಾರಿಗೆ ಕಂಡುಬಂದದ್ದು ಈ ತಾಲೂಕಿನ ಬ್ರಹ್ಮಗಿರಿಯ ತಪ್ಪಲಿನಲ್ಲಿ.

ಉಲ್ಲೇಖಗಳು[ಬದಲಾಯಿಸಿ]

  1. 'ಮೊಳಕಾಲ್ಮೂರು'
  2. 'ಇಂಡಿಯನ್ ಪೇಟೆಂಟ್ ಆಫೀಸ್'
  3. List of Geographical Indications in India