ಕೃಷ್ಣರಾಜನಗರ

ವಿಕಿಪೀಡಿಯ ಇಂದ
Jump to navigation Jump to search
Krishnarajanagara

ಕೃಷ್ಣರಾಜನಗರ

ಹೊಸ ಯಡತೊರೆ
ನಗರ
ಕಾಯನಹಳ್ಳಿ
ಕಾಯನಹಳ್ಳಿ
Nickname(s): 
ಕೆಆರ್ಎನ್
Krishnarajanagara is located in Karnataka
Krishnarajanagara
Krishnarajanagara
Location in Karnataka, India
Coordinates: 12°28′N 76°23′E / 12.46°N 76.39°E / 12.46; 76.39Coordinates: 12°28′N 76°23′E / 12.46°N 76.39°E / 12.46; 76.39
Country ಭಾರತ
ರಾಜ್ಯಕರ್ನಾಟಕ
ಜಿಲ್ಲೆಮೈಸೂರು
Population
 (2010)
 • Total೫೬,೩೧೨
Languages
 • Officialಕನ್ನಡ
ಸಮಯ ವಲಯUTC+5:30 (IST)
ಪಿನ್ ಕೊಡು
571 602
Telephone code08223
ವಾಹನ ನೊಂದಣಿKA-45 KA-09 KA-55

ಕೃ‍ಷ್ಣರಾಜನಗರವು ಮೈಸೂರು ಜಿಲ್ಲೆಯ ಒಂದು ಪ್ರಮುಖ ತಾಲ್ಲೂಕು ಕೇಂದ್ರವಾಗಿದ್ದು ಕಾವೇರಿ ನದಿಯ ದಡದಲ್ಲಿದೆ. ಈ ನಗರವು ಹಿಂದೆ ಎಡತೊರೆ ಎಂದು ಕರೆಯಲ್ಪಡುತ್ತಿತ್ತು. ಈ ನಗರದ ಕಾವೇರಿ ದಂಡೆಯ ಮೇಲೆ ಅರ್ಕೇಶ್ವರ ಸ್ವಾಮಿ ದೇವಸ್ಥಾನವಿದೆ. ಇದು ಜಗತ್ತಿನಲ್ಲೆ ಕಂಡುಬರುವ ಎರಡನೇ ಸೂರ್ಯ ದೇವಾಲಯವಾಗಿದೆ. ಈ ದೇವಾಲದಲ್ಲಿರುವ ಲಿಂಗದ ಮೇಲೆ ಶಿವರಾತ್ರಿಯಾದ ಮಾರನೇ ದಿನ ಸೂರ್ಯನ ಕಿರಣಗಳು ನೇರವಾಗಿ ಬೀಳುತ್ತವೆ[೧]

ಕೃಷ್ಣರಾಜನಗರವು ಮೈಸೂರು ಜಿಲ್ಲೆಯ ಒಂದು ಪ್ರಮುಖ ತಾಲ್ಲೂಕಾಗಿದ್ದು, ಇದು ಸರಿಸುಮಾರು 1925-1930ರ ಮಧ್ಯಂತರ ಇಸವಿಯಲ್ಲಿ ನಗರವಾಗಿ ಸ್ಥಾಪಿತಗೊಂಡಿದ್ದು ಕಾವೇರಿ ನದಿ ಪ್ರವಾಹದ ಹಾನಿಯ ಪರಿಣಾಮ ಎಡತೊರೆಯು ಹುಟ್ಟಿ ನಂತರ ಕೃಷ್ಣರಾಜನಗರ ಎಂದಾಯಿತು. (ಎಡತೊರೆ ಹೆಸರಿನ ಹಿನ್ನೆಲೆ: ನಗರದ ಎಡಭಾಗಕ್ಕೆ ತೊರೆಯಿದ್ದು ಆದಕಾರಣ ಈ ಹೆಸರು ಬಂದಿದೆ.

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ನಾಮಾಂಕಿತವಾಗಿ ಇದನ್ನು ಕೃಷ್ಣರಾಜನಗರ ಎಂದು ನಾಮಕರಣ ಮಾಡಲಾಗಿದೆ. ಇವರ ಕಾಲಘಟ್ಟದಲ್ಲಿ ಕಾವೇರಿ ನದಿಗೆ ಅಚ್ಚಕಟ್ಟಾದ ಸೇತುವೆ ನಿರ್ಮಾಣ ಮಾಡಲಾಗಿದ್ದು, ಇದರ ನಿರ್ಮಾತೃ ಅಂದಿನ ಮೈಸೂರು ಸಂಸ್ಥಾನದ ದೀವಾನರಾಗಿದ್ದ ಸರ್.ಎಂ. ವಿಶ್ವೇಶ್ವರಯ್ಯನವರು ಕಾವೇರಿಯ ನದಿಯ ದಡಕ್ಕೆ ಆರ್ಕೇಶ್ವರ ಸ್ವಾಮಿಯ ದೇವಾಲಯವಿದ್ದು ಪ್ರತಿ ವರ್ಷ ಜನವರಿ ತಿಂಗಳಲ್ಲಿ ಅದ್ದೂರಿ ಜಾತ್ರೆ ಜರುಗುತ್ತದೆ. ಕೆ.ಆರ್.ನಗರಕ್ಕೆ ಉತ್ತಮ ರೈಲು ಸಂಪರ್ಕವಿದ್ದು ಹಾಸನವನ್ನು ಮೈಸೂರಿಗೆ ಸಂಪರ್ಕಿಸುತ್ತದೆ. ಕೆ.ಆರ್.ನಗರದಿಂದ 22ಕಿ.ಮೀ ದೂರದಲ್ಲಿ ಪ್ರಸಿದ್ದ ಚುಂಚನಕಟ್ಟೆ ಸ್ಥಳದಲ್ಲಿ ಕಾವೇರಿ ನದಿಯ ಜಲಪಾತವಿದ್ದು ನೋಡುಗರನ್ನು ಆಕರ್ಷಿಸುತ್ತಿದೆ, ಶ್ರೀ ರಾಮನು ಇಲ್ಲಿನ ಪ್ರಮುಖ ಆರಾಧ್ಯದೈವ. ಸರ್ವಧರ್ಮಕ್ಕೊ ಸಮನ್ವಯವಾಗಿ ಇಲ್ಲಿ ಅನೇಕ ಮಸೀದಿಗಳು, ಢೋರ್ನಹಳ್ಳಿ ಎಂಬಲ್ಲಿ ಕ್ರೈಸ್ತರ ಸಂತ ಅಂತೋಣಿರವರ ಚರ್ಚ್ ಇದ್ದು ಸರ್ವ ಧರ್ಮ ಸಮನ್ವಯತೆಯನ್ನು ಎತ್ತಿ ಹಿಡಿದಿದೆ. ಇನ್ನು ಶಿಕ್ಷಣ ಕ್ಷೇತ್ರದಲ್ಲಿ ತುಂಬಾ ಅಭಿವೃದ್ಧಿಯಾಗಿದ್ದು ವಿದ್ಯಾರ್ಥಿಗಳಿಗಾಗಿ ಸರ್ಕಾರಿ ಪದವಿ ಕಾಲೇಜು, ಡಿಪ್ಲೋಮಾ ಕಾಲೇಜು, ಪಿ.ಯು ಕಾಲೇಜು, ಪ್ರೌಢಶಾಲೆಗಳು ಸಮಾಜಕ್ಕೆ ಉತ್ತಮ ವಿದ್ಯಾರ್ಥಿಗಳನ್ನು ಕೊಡುಗೆಯಾಗಿ ನೀಡುತ್ತಿರುವದು ಶ್ಲಾಘನೀಯ ವಿಷಯ. ಇನ್ನು ರಾಜಕೀಯ ವಿಷಯಕ್ಕೆ ಬಂದರೆ ಪ್ರಸ್ತುತ ತಾಲ್ಲೂಕಿನ ಸಾ.ರಾ ಮಹೇಶ್ ಇವರು ಈಗಿನ ಕರ್ನಾಟಕ ಸರ್ಕಾರ ಮಂತ್ರಿ ಮಂಡಲದ ಪ್ರವಾಸೋದ್ಯಮ ಮತ್ತು ರೇಷ್ಮೆ ಸಚಿವರಾಗಿದ್ದಾರೆ. ಇನ್ನು ಲೋಕಸಭಾ ಕ್ಷೇತ್ರದಲ್ಲಿ ಕೆ.ಆರ್.ನಗರವು ಮಂಡ್ಯ ಕ್ಷೇತ್ರವನ್ನು ಪ್ರತಿನಿಧಿಸುತ್ತದೆ.

    -ಪ್ರದೀಪ್ ಸಿ

ಕೃ‍ಷ್ಣರಾಜನಗರದ ವಿಶೇಷತೆ[ಬದಲಾಯಿಸಿ]

 • ಈ ತಾಲೂಕಿನಾದ್ಯಂತ ಕಾವೇರಿ ನದಿಯ ಪಾತ್ರವಿದ್ದು ನೀರಾವರಿ ಯೊಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಚುಂಚನಕಟ್ಟೆ, ಕಟ್ಟೆಪುರ ಮೊದಲಾದ ಕಡೆ ಅಣೆಕಟ್ಟುಗಳನ್ನು ನಿರ್ಮಿಸಲಾಗಿದೆ. ಅಲ್ಲದೆ ಹಲವಾರು ಏತ ನೀರಾವರಿ ಯೊಜನೆಗಳನ್ನೂ ಕೂಡ ಕೈಗೆತ್ತಿಕೊಳ್ಳಲಾಗಿದೆ. ಕೆ.ಆರ್. ನಗರವು ರಾಜ್ಯ ಹೆದಾರಿ ೫೭ ರಲ್ಲಿ ಬರುವುದರಿಂದ ವ್ಯವಸ್ತಿತ ರಸ್ತೆಗಳ ನಿರ್ಮಾಣವಾಗಿದೆ.
 • ಅಲ್ಲದೆ ಮೈಸೂರು - ಹಾಸನ - ಅರಸಿಕೆರೆ ರೈಲುಮಾರ್ಗವು ಕೂಡ ಹಾದೂ ಹೋಗಿದ್ದು ರಸ್ತೆ ಮತ್ತು ರೈಲು ಸೌಲಭ್ಯ ಲಭ್ಯವಾಗಿದೆ. ಜಿಲ್ಲಾ ಕೆಂದ್ರ ಮೈಸೂರಿನಿಂದ ೪೨ ಕಿ.ಮೀ. ದೂರವಿದೆ. ಹುಣಸೂರು, ಪಿರಿಯಾಪಟ್ಟಣ, ಅರಕಲಗೂಡು, ಹೊಳೆ ನರಸಿಪುರ, ಕೆ.ಆರ್.ಪೇಟೆ ತಾಲೂಕುಗಳ ಮದ್ಯದಲ್ಲಿ ಕೆ.ಆರ್.ನಗರ ತಾಲೂಕು ಇದೆ.
 • ವ್ಯವಸ್ಥಿತ ರಸ್ತೆ, ಚರಂಡಿ, ಬಸ್‌ನಿಲ್ದಾಣ, ಹೆರಿಗೆ ಆಸ್ಪತ್ರೆ, ವಾಚನಾಲಯ, ಶಾಲಾ ಕಾಲೇಜು, ಪಶುಆಸ್ಪತ್ರೆ, ತಾಲೂಕು ಕಚೇರಿ, ಮುಖ್ಯರಸ್ತೆಯಲ್ಲಿ ಎಲ್ಲಾ ಸರಕಾರಿ ಕಚೇರಿಗಳು ಮತ್ತು ಸರಕಾರಿ ವಸತಿಗೃಹಗಳು ಇವೆ. ಆಕರ್ಷಕ ವೃತ್ತಗಳನ್ನೊಳಗೊಂಡಂತೆ ಅಂದು ವ್ಯವಸ್ಥಿತ ನಗರ ನಿರ್ಮಾಣಕ್ಕೆ ಒತ್ತು ನೀಡಿದ ಮೈಸೂರು ರಾಜರ ಕೊಡುಗೆ ಅಪಾರ.
 • MAHADEV

ಪ್ರಮುಖ ಬೆಳೆ[ಬದಲಾಯಿಸಿ]

ತಾಲೂಕಿನ ಪ್ರಮುಖ ಬೆಳೆ ಭತ್ತವಾಗಿದ್ದು, ಇದರೊಂದಿಗೆ ರಾಗಿ, ತರಕಾರಿ ಮತ್ತು ಇತರ ವಾಣಿಜ್ಯ ಬೆಳೆಗಳನ್ನು ಕೂಡ ಬೆಳೆಯುತ್ತಾರೆ. ಕೆ.ಆರ್.ನಗರ ತಾಲೂಕನ್ನು ಮೈಸೂರು ಜಿಲ್ಲೆಯ ಭತ್ತದ ಕಣಜ / ಭತ್ತದ ನಾಡೆಂದು ಕರೆಯುತ್ತಾರೆ. ಬರ/ಪ್ರವಾಹದಂತ ಸಂದರ್ಭದಲ್ಲಿ ಕೆ.ಆರ್.ನಗರದಲ್ಲಿರುವ ಆಹಾರ ಉಗ್ರಾಣ ಎಲ್ಲರ ಜೀವನಾಡಿಯಾಗಿರುತ್ತದೆ

ಕಾಟ್ನಾಳು[ಬದಲಾಯಿಸಿ]

ಕಾಟ್ನಾಳು ಎಂಬ ಹೆಸರು ಬರಲು ಕಾರಣ ಹಿಂದಿನ ಕಾಲದಿಂದ ಈ ಊರಿಗೆ ಲಕ್ಷ್ಮಿಪುರ ಎಂಬ ಹೆಸರು ಇತ್ತು ಅಗಿನ ಕಾಲದ ಪದ್ಧತಿ ಪ್ರಕಾರ ಲಕ್ಷ್ಮಿ ದೆವರನ್ನುಆರಾದಿಸುತ್ತಿದ್ದರು ಆದ್ದರಿಂದ ಪ್ರತಿವರ್ಷ ಜಾತ್ರೆ ಯನ್ನು ಕೊಡಮಾಡುತ್ತಿದ್ದರು ಅದ್ದರಿ ನಂತರ ಕಾಟ್ನಾಳು ಯೆಂದು ಕರೆದರು

ಪ್ರಸಿದ್ಧ ವ್ಯಕ್ತಿಗಳು[ಬದಲಾಯಿಸಿ]

ಶೈಕ್ಷಣಿಕವಾಗಿ. ಸಾಂಸ್ಕೃತಿಕವಾಗಿ ತನ್ನದೇ ಆದ ಛಾಪನ್ನು ಹೊಂದಿರುವ ಕೆ.ಆರ್.ನಗರ ತಾಲೂಕು ಪ್ರಭಾವಿ ವ್ಯಕ್ತಿಗಳನ್ನು ಈ ನಾಡಿಗೆ ಕೊಟ್ಟಿದೆ. ಸಾಹಿತಿ ಶ್ರೀ ಸಿ.ಪಿ.ಕೃಷ್ಣಕುಮಾರ್, ಬೆ.ಗೊ.ರಮೇಶ್ ಮುಂತಾದವರು ಈ ತಾಲ್ಲೂಕಿನ ಹೆಮ್ಮೆಯ ಪುತ್ರರು.

ತಾಲ್ಲೂಕಿನ ಪ್ರಮುಖ ಗ್ರಾಮಗಳು[ಬದಲಾಯಿಸಿ]

 • Ballur . Nds55@ :
 • ಗೊರಗುಂಡಿ
 • ಗಂಧನಹಳ್ಳಿ
 • ಸಾಲಿಗ್ರಾಮ
 • ಕೆಸ್ತೂರು ಕೊಪ್ಪಲು
 • ಮಿರ್ಲೆ
 • ಹೆಬ್ಬಾಳು
 • ಚುಂಚನಕಟ್ಟೆ
 • ಮಾವತ್ತೂರು
 • ತಿಪ್ಪೂರು
 • ಕಗ್ಗೆರೆ
 • ಕನುಗನಹಳ್ಳಿ
 • ಹಂಪಾಪುರ
 • ದೊಡ್ಡೇಕೊಪ್ಪಲು
 • ಹೊಸಕೊಟೆ
 • ಮಧುವನಹಳ್ಳಿ
 • ಲಕ್ಕಿಕುಪ್ಪೆ.-. ಮಂಜುನಾಥ LR
 • ಈ ಲಕ್ಕಿಕುಪ್ಪೆ ಗ್ರಾಮವು ಕೃಷ್ಣರಾಜನಗರ ತಾಲೋಕಿನ ಸಾಲಿಗ್ರಾಮ ಹೋಬಳಿಯ ಒಂದು ಬೆಳವಣಿಗೆ ಹೊಂದುತಿರುವ ಗ್ರಾಮವಾಗಿದೆ ಮೊದಲು 40 ರಿಂದ 50 ಮನೆಗಳಿದ್ದು ಪ್ರಸ್ತುತದಲ್ಲಿ 500 ರಿಂದ 600 ಮನೆಗಳಿದ್ದು ಆರ್ಥಿಕವಾಗಿ ರಾಜಕೀಯವಾಗಿ ಧಾರ್ಮಿಕವಾಗಿ ಪ್ರಗತಿ ಹೊಂದುತ್ತಿರುವ ಗ್ರಾಮವಾಗಿದೆ 2016-17 ನೇ ಸಾಲಿನಲ್ಲಿ ಬಸ್ ನಿಲ್ದಾಣ ನಿರ್ಮಾಣಗೊಂಡಿದೆ ಪ್ರಸ್ತುತ ಹಾಲಿನ ಸಂಸ್ಕರಣಾ ಘಟಕ ಸ್ಥಾಪನೆಯಾಗಿದೆ ಇದರ ಉದ್ಘಾಟನೆಯನ್ನು ಪ್ರವಾಸೋದ್ಯಮ ಸಚಿವರಾದ ಸಾ ರಾ ಮಹೇಶ್ ರವರು ಉದ್ಘಾಟಿಸಿದರು
 • ಧಾರ್ಮಿಕವಾಗಿ
 • ಹಲವು ದೇವಾಲಯಗಳನ್ನು ಹೊಂದಿರುವ ಗ್ರಾಮವಾಗಿದ್ದು ಧಾರ್ಮಿಕವಾಗಿ ಬೆಳವಣಿಗೆಯನ್ನು ಹೊಂದಿದೆ ಈ ಗ್ರಾಮದಲ್ಲಿ ಪ್ರಮುಖವಾಗಿ ದೊಡ್ಡಮ್ಮದೇವಿ ಚಿಕ್ಕಮ್ಮದೇವಿ ಎಂಬ ಎರಡು ದೇವಲಯವಿದ್ದು.. ಮೂರು ವರ್ಷಗಳಿಗೊಮ್ಮೆ ರಥೋತ್ಸವ ವಿಜೃಂಭಣೆಯಿಂದ ನೆರವೇರುತ್ತದೆ ಮತ್ತು ಹಲವಾರು ಗ್ರಾಮಗಳಿಂದ ದೇವಿಯರ ದರ್ಶನಕ್ಕೆ ಭಕ್ತರು ಆಗಮಿಸುತ್ತಾರೆ ಈ ರಥೋತ್ಸವವು ಒಂದು ದಿನ ನಡೆಯುತ್ತದೆ
 • ಭೋಗೋಳಿಕ
 • ಭೋಗೋಳಿಕ ವಾಗಿ ಉತ್ತಮವಾದ ಫಲವತ್ತತೆ ಯನ್ನು ಹೊಂದಿದೆ ಡ್ಯಾಮ್ ನಿಂದ ನೀರಾವರಿ ಸೌಲಭ್ಯ ಹೊಂದಿದೆ
 • ಬೆಳೆಗಳು
 • ಇಲ್ಲಿನ ಪ್ರಮುಖ ಬೆಳೆಗಳು ಹೊಗೆಸೊಪ್ಪು(ತಂಬಾಕು) ಭತ್ತ ರಾಗಿ ಅಡಿಕೆ ತೆಂಗು ತೊಗರಿ ಅಲಸಂದೆ ಹುರುಳಿಕಾಳು

ಶ್ರೀ ಕ್ಷೇತ್ರ ದೇವಿತಂದ್ರೆ[ಬದಲಾಯಿಸಿ]

ಮೈಸೂರು ಜಿಲ್ಲೆ, ಕೆ ಆರ್ ನಗರ ತಾಲ್ಲೂಕು, ಮಿರ್ಲೆ ಹೋಬಳಿಯ ತಂದ್ರೆಯಲ್ಲಿರುವ ಶ್ರೀ ಕ್ಷೇತ್ರ ದೇವಿರಮ್ಮ ದೇವಾಲಯ ವನ್ನು ಚೋಳರ ಕಾಲದಲ್ಲಿ ಕಟ್ಟಲಾದ ದೇವಾಲಯ ಎಂದು ಹೇಳಲಾಗಿದೆ.

ಸಾವಿರಾರು ವರ್ಷಗಳ ಇತಿಹಾಸವುಳ್ಳ ಈ ಶ್ರೀ ಕ್ಷೇತ್ರ ದೇವಿತಂದ್ರೆಯಲ್ಲಿ ಸಪ್ತಮಾತೃಕೆಯವರು ನೆಲೆಗೊಂಡಿರುವುದಲ್ಲದೆ ಶ್ರೀ ದೇವಿರಮ್ಮನವರ ಗುರುವಾಗಿ ಅಂಕಲಿಂಗೇಶ್ವರಸ್ವಾಮಿ ನೆಲಿಸಿರುತ್ತಾರೆ ಹಾಗೂ ವೀರಭದ್ರೇಶ್ವರಸ್ವಾಮಿ, ಶ್ರೀ ಅಜ್ಜಮ್ಮ, ಶ್ರೀ ಕಾಳಮ್ಮನವರ ಸಮೇತ ಶ್ರೀ ಬ್ರಹ್ಮರಾಯಸ್ವಾಮಿ, ಶ್ರೀ ಬುಂಡ ಬ್ರಹ್ಮರಾಯಸ್ವಾಮಿ, ಶ್ರೀ ಕಪ್ಪಡಿ ಬೈರವೇಶ್ವರಸ್ವಾಮಿ ಮತ್ತು ಗ್ರಾಮ ದೇವತೆಯಾದ ಶ್ರೀ ಆಲದಮಾರಮ್ಮ ದೇವಾಲಯಗಳು ಸಹಾ ಇರುತ್ತವೆ.  ಇಲ್ಲಿನ ವಿಶೇಷವೇನೆಂದರೆ ವರ್ಷಕ್ಕೆ ಎರಡು ಬಾರಿ ಜಾತ್ರಾ ಮಹೋತ್ಸವ ನಡೆಯುತ್ತದೆ. ಮೊದಲು ಯುಗಾದಿ ಹಬ್ಬದ ಹಿಂದಿನ ಸೋಮವಾರ ಮತ್ತು ಮಂಗಳವಾರದಂದು ಓಕಳಿ  

ಹಬ್ಬ ಜಾತ್ರಾ ಮಹೋತ್ಸವ ಮತ್ತು ಎರಡನೆಯದು ದೀಪಾವಳಿ ಹಬ್ಬದ ಕಾರ್ತಿಕ ಮಾಸದಲ್ಲಿ ವಿಜೃಂಭಣೆಯಿಂದ ಸಿಡಿ ಉತ್ಸವ ಮತ್ತು ಪಂಚಮಿ ದಿವಸ ಅಮ್ಮನವರ ರಥೋತ್ಸವ ನಡೆಯುತ್ತದೆ. ನಂತರದ ಮಂಗಳವಾರದಂದು ಅಗ್ನಿಎರೆ ಹಬ್ಬ (ಮುತ್ತೈದೆಯರ ಹಬ್ಬ) ಇರುತ್ತದೆ.  

ಈ ಕ್ಷೇತ್ರದಲ್ಲಿ ಇರುವ ಶ್ರೀ ಸಪ್ತಮಾತೃಕೆಯವರ ನಾಮಾಂಕಿತ

ಶ್ರೀ ದೇವಿರಮ್ಮನವರು

ಶ್ರೀ ಕಾಳಮ್ಮನವರು

ಶ್ರೀ ವರ್ಣಮ್ಮನವರು

ಶ್ರೀ ಭದ್ರಾಣಮ್ಮನವರು

ಶ್ರೀ ಚಂದ್ರಾಣಮ್ಮನವರು

ಶ್ರೀ ನಾಗವಾರದಮ್ಮನವರು

ಶ್ರೀ ಮೂರುಮುಖದಮ್ಮನವರು

ತಂದ್ರೆ ಗ್ರಾಮದಲ್ಲಿ ಶ್ರೀ ಸಪ್ತ ಮಾತೃಕಾ ದೇವಿರಮ್ಮನವರು ನೆಲೆಸಿರುವ ಕಾರಣದಿಂದ ದೇವಿತಂದ್ರೆಯಾಗಿ ಪ್ರಸಿದ್ಧಿ ಹೊಂದಿ ಒಂದು ಧಾರ್ಮಿಕ ಕ್ಷೇತ್ರವಾಗಿ ಬೆಳೆಯುತ್ತಿದೆತಾಲ್ಲೂಕಿನ ಪ್ರವಾಸಿ ಕೇಂದ್ರಗಳು[ಬದಲಾಯಿಸಿ]

 • ಚುಂಚನಕಟ್ಟೆ ಜಲಪಾತ
 • ಅರ್ಕೇಶ್ವರ ದೇವಸ್ಥಾನ
 • ಜಿನ ಬಸದಿ, ಚಿಕ್ಕ ಹನಸೋಗೆ
 • ಕಪ್ಪಡಿ ಪುಣ್ಯಕ್ಷೇತ್ರ - ರಾಚಪ್ಪಾಜಿ, ಸಿದ್ದ ಪ್ಪಾಜಿ ಮತ್ತು ಚೆನ್ನಾಜಮ್ಮ ಗದ್ದಿಗೆ
 • ಹಂಪಾಪುರದ ದುರ್ಗಾಪರಮೇಶ್ವರಿ ದೇವಾಲಯ
 • ತಿಪ್ಪೂರು ಶ್ರೀ ಲಕ್ಷ್ಮಿ ನಾರಾಯಣ ದೇವಾಲಯ
 • ಸಂತ ಅಂಥೊನಿ ಕ್ಷೇತ್ರ ಡೋರ್ನಹಳ್ಳಿ
 • ಚುಂಚನಕಟ್ಟೆ ಶ್ರೀ ರಾಮ ದೇವಾಲಯ
 • ಸಾಲಿಗ್ರಾಮ ಜೈನ ದೇವಾಲಯಗಳು
Karnataka-icon.jpg
ಮೈಸೂರು ತಾಲ್ಲೂಕುಗಳು
ಮೈಸೂರು | ಹುಣಸೂರು | ಕೃಷ್ಣರಾಜನಗರ | ನಂಜನಗೂಡು | ಹೆಗ್ಗಡದೇವನಕೋಟೆ | ಪಿರಿಯಾಪಟ್ಟಣ | ಟಿ.ನರಸೀಪುರ
 1. ಕೃಷ್ಣರಾಜನಗರ 81ರ ವರ್ಷಾಚರಣೆ ಸಂಭ್ರಮ