ವಿಷಯಕ್ಕೆ ಹೋಗು

ಅರ್ಕೇಶ್ವರ ದೇವಸ್ಥಾನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೃಷ್ಣರಾಜನಗರ ತಾಲ್ಲೂಕು ಮೈಸೂರು ಜಿಲ್ಲೆಯ ಪ್ರಮುಖ ತಾಲ್ಲೂಕಾಗಿದ್ದು, ಇದು 'ಭತ್ತದ ಕಣಜ'ವೆಂದು ಪ್ರಸಿದ್ದವಾಗಿದೆ. ಇದು ಮೈಸೂರು ಜಿಲ್ಲೆಯ ಹಲವು ಭಾಗಕ್ಕೆ ಭತ್ತವನ್ನು ಪೂರೈಸುತ್ತದೆ. ಕನ್ನಡನಾಡೀನ ಜೀವನಾಡಯಾದ ಕಾವೇರಿಯ ಬಹುಪಾಲು ಈ ತಾಲ್ಲೂಕಿನಲ್ಲಿ ಸೇರಿದೆ. ಇದನ್ನು ೧೯೨೫ರ ಸುಮಾರಿನಲ್ಲಿ ಕೃಷ್ಣರಾಜ ಒಡಯರು ಎಡತೊರೆ ಎಂಬ ಹೆಸರಿನಲ್ಲಿ ಸ್ಥಾಪಿಸಿದರು. ಮುಂದೆ ಅದು ೩ಕಿ,ಮೀ, ಎತ್ತರವಾದ ಪ್ರದೆಶದಲ್ಲಿ ಕೃಷ್ಣರಾಜನಗರ ಎ೦ಬ ಹೆಸರಿನಿಂದ ಸ್ಠಾಪನೆಯಾಯಿತು. ಈ ತಾಲ್ಲೂಕಿನಲ್ಲಿ ಅರ್ಕೆಶ್ವರ ಸ್ವಾಮಿ ದೇವಸ್ಠಾನವಿದೆ. ಇದನ್ನು ಸೂರ್ಯ ಉದಯನಾಡೆಂದು ಕರೆಯುತ್ತಿದ್ದರು. ಈ ತಾಲ್ಲೂಕಿನಲ್ಲಿ ಹಲವು ಗ್ರಾಮಗಳೂ ಸೇರಿವೆ. ಈ ತಾಲೂಕಿನಲ್ಲಿ ರಾಷ್ಟ್ರೀಯ ಹೆದ್ದಾರಿ ೮೮ ಹಾದು ಹೋಗಿದೆ ಮೈಸೂರು-ಹಾಸನಗಳ ರೈಲು ಸಂಪರ್ಕ ಈ ತಾಲ್ಲೂಕಿನ ಮೂಲಕ ಸಾಗಿದೆ. ರಸ್ತೆಗಳೂ ಸುಗಮವಾಗಿವೆ.