ವಿಷಯಕ್ಕೆ ಹೋಗು

ಸ್ವಿಟ್ಜರ್ಲ್ಯಾಂಡ್

Coordinates: 46°50′00″N 8°20′00″E / 46.83333°N 8.33333°E / 46.83333; 8.33333
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಸ್ವಿಡ್ಜರ್ಲ್ಯಾಂಡ್ ಇಂದ ಪುನರ್ನಿರ್ದೇಶಿತ)

Swiss Confederation
Confoederatio Helvetica (Latin)
Schweizerische Eidgenossenschaft (German)
Confédération suisse (French)
Confederazione Svizzera (Italian)
Confederaziun svizra (Romansh)
Flag of Switzerland
Flag
Coat of arms of Switzerland
Coat of arms
Motto: (unofficial) "One for all, all for one"
German: [Einer für alle, alle für einen] Error: {{Lang}}: text has italic markup (help)
French: Un pour tous, tous pour un
ಇಟಾಲಿಯನ್:Uno per tutti, tutti per uno
Anthem: "Schweizerpsalm"  (German)
"Swiss Psalm"
Location of ಸ್ವಿಟ್ಜರ್ಲ್ಯಾಂಡ್ (green) in Europe (dark grey)  –  [Legend]
Location of ಸ್ವಿಟ್ಜರ್ಲ್ಯಾಂಡ್ (green)

in Europe (dark grey)  –  [Legend]

Capital Bern[]
Largest city Zürich
Official languagesಜರ್ಮನ್,
ಫ್ರೆಂಚ್,
ಇಟಾಲಿಯನ್,
Romansh[]
Demonym(s)Swiss
GovernmentDirect democracy
Federal parliamentary republic
M. Leuenberger
P. Couchepin
M. Calmy-Rey
H.-R. Merz (Pres. 09)
D. Leuthard (VP 09)
E. Widmer-Schlumpf
U. Maurer
C. Casanova
LegislatureFederal Assembly
Council of States
National Council
Independence
1 August[] 1291
• de facto
22 September 1499
24 October 1648
• Restored
7 August 1815
12 September 1848[]
Area
• Total
41,284 km2 (15,940 sq mi) (136th)
• Water (%)
4.2
Population
• 2009 estimate
7,725,200[] (94th)
• 2007 census
7,593,500
• Density
186.5/km2 (483.0/sq mi) (65st)
GDP (PPP)2008 estimate
• Total
$312.753 billion[]
• Per capita
$42,783[] (7th)
GDP (nominal)2008 estimate
• Total
$492.595 billion[]
• Per capita
$67,384[] (4th)
Gini (2000)33.7
medium
HDI (2006)Increase 0.955[]
Error: Invalid HDI value · 10th
CurrencySwiss franc (CHF)
Time zoneUTC+1 (CET)
• Summer (DST)
UTC+2 (CEST)
Driving sideright
Calling code+41
ISO 3166 codeCH
Internet TLD.ch

ಸ್ವಿಟ್ಜರ್ಲೆಂಡ್‌‌ (German: [die Schweiz] Error: {{Lang}}: text has italic markup (help) [] French: la Suisse, ಇಟಾಲಿಯನ್:Svizzera, Romansh: [Svizra] Error: {{Lang}}: text has italic markup (help)), ಅಧಿಕೃತವಾಗಿ ಸ್ವಿಸ್‌ ಒಕ್ಕೂಟ (ಲ್ಯಾಟಿನ್‌ನಲ್ಲಿ ಕಾನ್‌ಪೊಡೆರೇಷ್ಯೋ ಹೆಲ್ವೆಟಿಕಾ, ಆದ್ದರಿಂದ ಇದರ ISO ರಾಷ್ಟ್ರ ಸಂಕೇತಗಳಾಗಿ CH ಮತ್ತು CHEಯನ್ನು ನಿಗದಿಪಡಿಸಲಾಗಿದೆ), ಸುತ್ತಲೂ ಭೂಪ್ರದೇಶದಿಂದ ಆವೃತವಾದ ಪರ್ವತ ಪ್ರದೇಶ ಸುಮಾರು 7.7 ದಶಲಕ್ಷ ಜನಸಂಖ್ಯೆ(2009ರಲ್ಲಿ)ಯನ್ನು ಹೊಂದಿರುವ 41,285 km²ನಷ್ಟು ವಿಸ್ತೀರ್ಣವಿರುವ ಪಶ್ಚಿಮ ಯೂರೋಪ್‌ನ ರಾಷ್ಟ್ರವಾಗಿದೆ. ಸ್ವಿಟ್ಜರ್ಲೆಂಡ್‌‌ ಕ್ಯಾಂಟನ್‌ಗಳೆಂದು ಕರೆಯಲಾಗುವ 26 ರಾಜ್ಯಗಳನ್ನು ಹೊಂದಿರುವ ಸಂಯುಕ್ತ ಗಣರಾಜ್ಯವಾಗಿದೆ. ಬರ್ನ್‌ ರಾಜ್ಯಾಡಳಿತದ ಅಧಿಕಾರ ಕೇಂದ್ರವಾಗಿದ್ದರೆ, ಇದರ ಎರಡು ಜಾಗತಿಕ ಮಹಾನಗರಗಳಾದ ಜಿನೀವಾ ಮತ್ತು ಜ್ಯೂರಿಚ್‌ಗಳು ರಾಷ್ಟ್ರದ ಆರ್ಥಿಕ ಕೇಂದ್ರಗಳಾಗಿವೆ. ಸ್ವಿಟ್ಜರ್ಲೆಂಡ್‌‌ ಕನಿಷ್ಟ ತಲಾವಾರು GDP $67,384ನ್ನು ಹೊಂದಿ ತಲಾ ಸಮಗ್ರ ದೇಶೀಯ ಉತ್ಪನ್ನದ ಆಧಾರದಲ್ಲಿ, ವಿಶ್ವದ ಅತ್ಯಂತ ಶ್ರೀಮಂತ ರಾಷ್ಟ್ರಗಳಲ್ಲಿ ಒಂದಾಗಿದೆ.[] ಜ್ಯೂರಿಚ್‌ ಮತ್ತು ಜಿನೀವಾಗಳು ಅನುಕ್ರಮವಾಗಿ ವಿಶ್ವದಲ್ಲೇ ಎರಡನೇ ಮತ್ತು ಮೂರನೇ ಉನ್ನತ ಜೀವನ ಮಟ್ಟವನ್ನು ಹೊಂದಿರುವ ನಗರಗಳಾಗಿ ಶ್ರೇಯಾಂಕಿತಗೊಂಡಿವೆ.[] ಸ್ವಿಟ್ಜರ್ಲೆಂಡ್‌‌ ಉತ್ತರದಲ್ಲಿ ಜರ್ಮನಿಯನ್ನು, ಪಶ್ಚಿಮದಲ್ಲಿ ಫ್ರಾನ್ಸ್‌ನ್ನು, ದಕ್ಷಿಣದಲ್ಲಿ ಇಟಲಿ ಮತ್ತು ಪೂರ್ವದಲ್ಲಿ ಲಿಯೆಕ್‌ಟೆನ್ಸ್ಟೀನ್‌, ಆಸ್ಟ್ರಿಯಾಗಳನ್ನು ಗಡಿಯಾಗಿ ಹೊಂದಿದೆ. ಈ ರಾಷ್ಟ್ರವು ದೀರ್ಘಕಾಲೀನ ಅಲಿಪ್ತ ನೀತಿಯ ಇತಿಹಾಸವನ್ನು ಹೊಂದಿದೆ—1815ರಿಂದ ಇಲ್ಲಿಯವರೆಗೆ ಯಾವುದೇ ಅಂತರರಾಷ್ಟ್ರೀಯ ಯುದ್ಧಗಳಲ್ಲಿ ಭಾಗವಹಿಸಿಲ್ಲ — ಮತ್ತು ರೆಡ್‌ ಕ್ರಾಸ್‌, ವಿಶ್ವ ವ್ಯಾಪಾರ ಸಂಘಟನೆ ಮತ್ತು U.N.ನ ಎರಡು ಐರೋಪ್ಯ ಶಾಖೆಗಳಲ್ಲಿ ಒಂದು ಶಾಖೆಯೂ ಸೇರಿದಂತೆ ಅನೇಕ ಅಂತರರಾಷ್ಟ್ರೀಯ ಸಂಘಟನೆಗಳಿಗೆ ಆತಿಥೇಯನಾಗಿದೆ. ಈ ರಾಷ್ಟ್ರವು ಐರೋಪ್ಯ ಒಕ್ಕೂಟದ ಭಾಗವಾಗದೇ ಇದ್ದರೂ, ಇದು ಷೆಂಗನ್‌ ಒಪ್ಪಂದಕ್ಕೆ ಬದ್ಧವಾಗಿದೆ. ಜರ್ಮನ್‌, ಫ್ರೆಂಚ್‌, ಇಟಾಲಿಯನ್‌ ಮತ್ತು ರೋಮನ್ಷ್‌ ಎಂಬ ನಾಲ್ಕು ಭಾಷೆಗಳನ್ನು ರಾಷ್ಟ್ರಭಾಷೆಗಳಾಗಿ ಹೊಂದಿರುವ ಸ್ವಿಟ್ಜರ್ಲೆಂಡ್‌‌ ಬಹುಭಾಷಿಕ ರಾಷ್ಟ್ರವಾಗಿದೆ. ರಾಷ್ಟ್ರದ ಔಪಚಾರಿಕ ಹೆಸರು ಜರ್ಮನ್‌ ಭಾಷೆಯಲ್ಲಿ Schweizerische Eidgenossenschaft, ಫ್ರೆಂಚ್‌ನಲ್ಲಿ Confédération suisse, ಇಟಾಲಿಯನ್‌ ಭಾಷೆಯಲ್ಲಿ Confederazione Svizzera ಮತ್ತು ರೋಮಾನ್ಷ್‌ನಲ್ಲಿ Confederaziun svizra ಎಂದಾಗಿದೆ. ಸಾಂಪ್ರದಾಯಿಕವಾಗಿ ಸ್ವಿಟ್ಜರ್ಲೆಂಡ್‌‌‌ನ ಸ್ಥಾಪನೆಯು 1291ರ ಆಗಸ್ಟ್‌ 1ರಲ್ಲಿ ಆಗಿದ್ದುದರಿಂದ; ಸ್ವಿಸ್ ರಾಷ್ಟ್ರೀಯ ದಿನವನ್ನು ಅಂದು ವಾರ್ಷಿಕವಾಗಿ ಆಚರಿಸಲಾಗುತ್ತದೆ.

ವ್ಯುತ್ಪತ್ತಿ ಶಾಸ್ತ್ರ

[ಬದಲಾಯಿಸಿ]

ಸ್ವಿಟ್ಜರ್ಲೆಂಡ್‌‌ ಎಂಬ ಆಂಗ್ಲ ಹೆಸರು ಸ್ವಿಸ್‌16ರಿಂದ 19ನೇ ಶತಮಾನಗಳವರೆಗೆ ಬಳಕೆಯಲ್ಲಿದ್ದು ಈಗ ಬಳಕೆಯಲ್ಲಿಲ್ಲದ ರೂಪಾಂತರ ಸ್ವಿಟ್ಜರ್‌ ಪದವನ್ನು ಹೊಂದಿದ್ದ ಸಂಯುಕ್ತ ಪದವಾಗಿದೆ.[೧೦] ಆಂಗ್ಲ ಪದ ಸ್ವಿಸ್ ಎಂಬುದು ಫ್ರೆಂಚ್‌ನಿಂದ ಕಡ ಪಡೆದುಕೊಂಡ Suisse , 16ನೇ ಶತಮಾನದಿಂದಲೂ ಬಳಕೆಯಲ್ಲಿರುವ ಗುಣವಾಚಕವಾಗಿದೆ. ಸ್ವಿಟ್ಜರ್‌ ಎಂಬ ಹೆಸರು ಅಲೆಮಾನ್ನಿಕ್‌ ಮೂಲದ್ದಾಗಿದ್ದು [Schwiizer] Error: {{Lang}}: unrecognized language code: gsx (help) , ಸ್ಕ್ವಿಜ್‌ ಅದರ ಸಂಬಂಧಿತ ಪ್ರಾಂತ್ಯಕ್ಕೆ ಸೇರಿದ್ದಾಗಿತ್ತು. ಈ ಪ್ರದೇಶ ಹಳೆಯ ಸ್ವಿಸ್ ಒಕ್ಕೂಟದ ಕೇಂದ್ರವಾಗಿ ಪರಿಣಮಿಸಿದ ವಾಲ್ಡ್‌ಸ್ಟಾಟ್ಟೆನ್‌ ಕ್ಯಾಂಟನ್‌ಗಳಲ್ಲಿ ಒಂದಾಗಿತ್ತು. ಪ್ರಾಥಮಿಕವಾಗಿ ಹಳೆಯ ಉನ್ನತ ಜರ್ಮನ್‌ Suittes ಎಂಬುದಾಗಿ ಸ್ಥಳನಾಮವನ್ನು 972ರಲ್ಲೇ ದೃಢೀಕೃತಗೊಳಿಸಲಾಗಿತ್ತು. ಇದು ಬಹುಶಃ "ದಹಿಸಲು"suedan ಎಂಬರ್ಥದಲ್ಲಿ ನಗರವನ್ನು ಕಟ್ಟಲು ಅರಣ್ಯವನ್ನು ದಹಿಸಿ ತೆರವುಗೊಳಿಸಿದ್ದನ್ನು[೧೧] ನೆನಪಿಸಲು ಇರಬಹುದು. ಈ ಹೆಸರು ನಂತರ ಕ್ಯಾಂಟನ್ ಆಡಳಿತಕ್ಕೆ ಒಳಪಟ್ಟ ಪ್ರದೇಶಗಳಿಗೆ ವಿಸ್ತರಿಸಲಾಯಿತು. ಒಂದು ಭಾಗದ ಹೆಸರನ್ನು ಪೂರ್ಣ ಪ್ರದೇಶಕ್ಕೆ ಬಳಸುವ ರೀತಿಯಲ್ಲಿ 1499ರ ಸ್ವಾಬಿಯನ್‌ ಯುದ್ಧದ ನಂತರ ಇದು ಇಡೀ ಒಕ್ಕೂಟವನ್ನು ಇದೇ ಹೆಸರಿಂದ ಕರೆಯಲಾಯಿತು.ರಾಷ್ಟ್ರದ ಸ್ವಿಸ್ ಜರ್ಮನ್‌ ಹೆಸರು [Schwiiz] Error: {{Lang}}: unrecognized language code: gsx (help) ಕ್ಯಾಂಟನ್ ಮತ್ತು ವಸಾಹತುಗಳ ಹೆಸರಿಗೆ ಸಮಾನಾರ್ಥಕವಾಗಿದ್ದರೂ , ನಿರ್ದಿಷ್ಟ ಅನುಚ್ಛೇದಗಳಿಂದ ಪ್ರತ್ಯೇಕಿಸಲಾಗಿದೆ(ಒಕ್ಕೂಟಕ್ಕೆ [d'Schwiiz] Error: {{Lang}}: unrecognized language code: gsx (help) , ಆದರೆ ಕ್ಯಾಂಟನ್ ಮತ್ತು ಪಟ್ಟಣಗಳಿಗೆ ಸರಳವಾಗಿ [Schwiiz] Error: {{Lang}}: unrecognized language code: gsx (help) ಎಂದು ಕರೆಯಲಾಗಿದೆ).

ನೆಪೋಲಿಯನ್‌ನ ಹೆಲ್ವೆಟಿಕ್‌ ಗಣರಾಜ್ಯಕ್ಕೆ ಮರಳಿ ನವೀನ-ಲ್ಯಾಟಿನ್‌ ಹೆಸರಾದ ಕಾನ್‌ಫೊಡರೇಷಿಯೋ ಹೆಲ್ವೆಟಿಕಾ ಎಂಬುದನ್ನು ಒಕ್ಕೂಟ ರಾಷ್ಟ್ರದ ಸ್ಥಾಪನೆಯಾದ 1848ರಲ್ಲಿ ಪರಿಚಯಿಸಲಾಯಿತು. ರೋಮನ್‌ ಯುಗದ ಮುನ್ನ ಸ್ವಿಸ್ ಪ್ರಸ್ಥಭೂಮಿಯಲ್ಲಿ ವಾಸವಾಗಿದ್ದ ಕೆಲ್ಟಿಕ್‌ ಬುಡಕಟ್ಟು ಜನಾಂಗದ ಹೆಸರಿನಿಂದ ಹೆಲ್ವೆಟೀ ಎಂಬುದು ಈ ಹೆಸರಿಗೆ ಮೂಲವಾಗಿತ್ತು. ಹೆಲ್ವೆಟೀ ಎಂಬ ಹೆಸರು ಇಟ್ರಸ್ಕನ್‌ ರೂಪದಲ್ಲಿ ಶಾಸನ ಬದ್ಧವಾಗಿ, ಸುಮಾರು 300 BC ಕಾಲದ ಹಡಗಿನ ಮೇಲೆ ದೃಢಪಡಿಸಲಾಗಿತ್ತು.[೧೨] ಈ ಹೆಸರುಗಳು ಇತಿಹಾಸ ಶಾಸ್ತ್ರದಲ್ಲಿ ಮೊದಲು 2ನೇ ಶತಮಾನ BCಯ ಸಮಯದಲ್ಲಿನ, ಪೋಸಿಡೊನಿಯಸ್‌ ರಚಿತ ಇತಿಹಾಸದಲ್ಲಿ ಕಾಣಿಸಿಕೊಳ್ಳುತ್ತವೆ. ಜೋಹಾನ್ನ್‌ ಕ್ಯಾಸ್ಪರ್‌ ವೇಸನ್‌ಬಕ್‌ ಎಂಬಾತನ 1672ರಲ್ಲಿ ಬರೆದ ನಾಟಕದಲ್ಲಿ 17ನೇ ಶತಮಾನದ ಹೆಲ್ವೆಟಿಯಾ ಸ್ವಿಸ್ ಒಕ್ಕೂಟದ ರಾಷ್ಟ್ರೀಯ ಸಂಕೇತವಾಗಿ ಕಾಣಿಸಿಕೊಳ್ಳುತ್ತದೆ.

ಇತಿಹಾಸ

[ಬದಲಾಯಿಸಿ]

1848ರಲ್ಲಿ ಸ್ವಿಸ್ ಒಕ್ಕೂಟದ ಸಂವಿಧಾನದ ಅಳವಡಿಕೆಯ ನಂತರ ಸ್ವಿಟ್ಜರ್ಲೆಂಡ್‌‌ ಪ್ರಸಕ್ತ ಚಾಲ್ತಿಯಲ್ಲಿರುವ ರಾಜಕೀಯ ವ್ಯವಸ್ಥೆಯನ್ನೇ ಪಾಲಿಸುತ್ತಿದೆ. 13ನೇ ಶತಮಾನದ ಅಂತ್ಯದಲ್ಲಿ ಆಧುನಿಕ ಸ್ವಿಟ್ಜರ್ಲೆಂಡ್‌‌‌ನ ಪೂರ್ವಿಕರು ರಕ್ಷಣಾತ್ಮಕ ಮೈತ್ರಿಯನ್ನು ಸ್ಥಾಪಿಸಿದರು. ಇದು ಶತಮಾನಗಳ ಕಾಲ ರಾಷ್ಟ್ರಗಳ ಸಡಿಲ ಒಕ್ಕೂಟವಾಗಿ ಮುಂದುವರೆಯಲು ಕಾರಣವಾಯಿತು.

ಪೂರ್ವ ಇತಿಹಾಸ

[ಬದಲಾಯಿಸಿ]

ಸ್ವಿಟ್ಜರ್ಲೆಂಡ್‌‌‌ನಲ್ಲಿನ ಮಾನವ ಅಸ್ತಿತ್ವದ ಪ್ರಾಚೀನ ಕುರುಹುಗಳು 150,000 ವರ್ಷಗಳ ಹಿಂದಿನವು.[೧೩] ಸ್ವಿಟ್ಜರ್ಲೆಂಡ್‌‌‌ನಲ್ಲಿನ ಗ್ಯಾಕ್‌ಲಿಂಗೆನ್‌ನಲ್ಲಿ ಪತ್ತೆಯಾದ ಕೃಷಿ ನೆಲೆಯೇ ಅತಿ ಹಳೆಯ ಪರಿಚಿತ ನೆಲೆಯಾಗಿದ್ದು , ಇದು ಸುಮಾರು 5300 BCಗಳಷ್ಟು ಹಳೆಯದಾಗಿದೆ.[೧೩] ಈ ಪ್ರದೇಶದ ಅತಿ ಹಳೆಯ ಗೊತ್ತಿರುವ ಬುಡಕಟ್ಟು ಸಂಸ್ಕೃತಿಯೆಂದರೆ ಹಾಲ್‌ಸ್ಟಟ್‌ ಮತ್ತು ಲಾ ಟೆನೆ ಸಂಸ್ಕೃತಿಗಳು. ಲಾ ಟೆನೆ ನ್ಯೂಚಾಟೆಲ್‌ ಸರೋವರದ ಉತ್ತರದಲ್ಲಿರುವ ಉತ್ಖನನ ಕ್ಷೇತ್ರದಿಂದ ಪ್ರೇರಿತವಾಗಿ ಈ ಹೆಸರುಗಳನ್ನಿಡಲಾಗಿದೆ. ಲಾ ಟೆನೆ ಸಂಸ್ಕೃತಿಯು ಕಬ್ಬಿಣ ಯುಗದ ಉತ್ತರಾರ್ಧದಲ್ಲಿ ಸುಮಾರು 450 BCಯ ಕಾಲದಲ್ಲಿ ,[೧೩] ಗ್ರೀಕ್‌ ಮತ್ತು ಎಟ್ರುಸ್ಕನ್‌ ನಾಗರೀಕತೆಗಳ ಪ್ರಭಾವದಲ್ಲಿ ಬೆಳೆದು ಏಳಿಗೆ ಹೊಂದಿತು. ಸ್ವಿಸ್ ಪ್ರದೇಶದ ಪ್ರಮುಖ ಬುಡಕಟ್ಟು ಜನಾಂಗಗಳಲ್ಲಿ ಪ್ರಮುಖವಾದದ್ದೆಂದರೆ ಹೆಲ್ವೆಟೀ. 58ನೇ ಇಸವಿ BCಯಲ್ಲಿ, ಬಿಬ್ರಾಕ್ಟ್‌‌ ಕಾಳಗದಲ್ಲಿ, ಜ್ಯೂಲಿಯಸ್‌ ಸೀಜರ್‌'ನ ಸೇನೆಯು ಹೆಲ್ವೆಟೀಯನ್ನು ಪರಾಭವಗೊಳಿಸಿತು.[೧೩] 15 BC ಕಾಲದಲ್ಲಿ ರೋಮ್‌ನ ಎರಡನೇ ಚಕ್ರವರ್ತಿಯಾಗುತ್ತಿದ್ದ , ಟಿಬೆರಿಯಸ್‌ I, ಮತ್ತು ಆತನ ಸಹೋದರ, ಡ್ರೂಸಸ್‌, ಆಲ್ಫ್ಸ್‌ ಪ್ರದೇಶವನ್ನು ವಶಪಡಿಸಿಕೊಂಡು ರೋಮ್‌ ಸಾಮ್ರಾಜ್ಯಕ್ಕೆ ಸೇರಿಸಿಕೊಂಡರು. ಹೆಲ್ವೆಟೀಯು ಆಕ್ರಮಿಸಿದ ಪ್ರದೇಶ—ನಂತರದ ಕಾನ್‌ಫೊಡರೇಷಿಯೋ ಹೆಲ್ವೆಟಿಕಾ ದ ನಾಮ ಮಾತ್ರ ಭಾಗವಾಗಿದ್ದ —ಮೊದಲು ರೋಮ್‌ನ ಗಲ್ಲಿಯಾ ಬೆಲ್ಜಿಕಾ ಪ್ರಾಂತ್ಯದ ಭಾಗವಾಗಿತ್ತು. ನಂತರ ಆಗಿನ ತನ್ನ ಜರ್ಮೇನಿಯಾ ಸುಪೀರಿಯರ್‌ ಪ್ರಾಂತ್ಯದ ಭಾಗವಾಗಿತ್ತು. ಆಧುನಿಕ ಸ್ವಿಟ್ಜರ್ಲೆಂಡ್‌‌‌ನ ಪೂರ್ವ ಭಾಗವು ರಯೇಶ್ಯಾ ಎಂಬ ರೋಮ್‌ ಪ್ರಾಂತ್ಯದೊಂದಿಗೆ ವಿಲೀನವಾಗಿತ್ತು.

ಕ್ರಿ.ಪೂ ೪೪ರಲ್ಲಿ ರೈನ್‌‌ ದಡದಲ್ಲಿ ಸ್ಥಾಪಿತವಾದ ಅಗಸ್ಟ ರೌರಿಕ ಒಂದು ಮೊದಲ ರೋಮನ್‌ ವಸಾಹತು ಆಗಿದ್ದು, ಅದು ಸ್ವಿಟ್ಜರ್ಲೆಂಡ್‌‌ನ ಮುಖ್ಯ ಉತ್ಖನನ ಸ್ಥಳಗಳಲ್ಲಿ ಒಂದಾಗಿದೆ.

ಮಧ್ಯ ಯುಗದ ಪೂರ್ವಭಾಗದಲ್ಲಿ, 4ನೇ ಶತಮಾನದಿಂದ, ಆಧುನಿಕ-ಕಾಲದ ಸ್ವಿಟ್ಜರ್ಲೆಂಡ್‌‌‌ನ ಪಶ್ಚಿಮ ಹರವಿನ ಪ್ರದೇಶವು ಬರ್ಗಂಡಿಯನ್‌ ಅರಸರ ಸೀಮೆಗೆ ಒಳಪಟ್ಟಿತ್ತು. ಅಲೆಮಾನ್ನಿಗಳು ಸ್ವಿಸ್‌ ಪ್ರಸ್ಥಭೂಮಿಯಲ್ಲಿ 5ನೇ ಶತಮಾನದಲ್ಲಿ ನೆಲೆಗೊಂಡರೆ, ಆಲ್ಪ್ಸ್‌ ಕಣಿವೆಗಳಲ್ಲಿ 8ನೇ ಶತಮಾನದಲ್ಲಿ ನೆಲೆಗೊಂಡು ಅಲೆಮಾನ್ನಿಯಾ ಪ್ರದೇಶವನ್ನು ರೂಪಿಸಿದರು. ಆಧುನಿಕ-ಕಾಲದ ಸ್ವಿಟ್ಜರ್ಲೆಂಡ್‌‌ ಅಲೆಮಾನ್ನಿಯಾ ಮತ್ತು ಬರ್ಗಂಡಿ ಅಧಿಪತ್ಯಗಳ ನಡುವೆ ಹಂಚಿಹೋಗಿತ್ತು.[೧೩] 6ನೇ ಶತಮಾನದಲ್ಲಿ ಇಡೀ ಪ್ರದೇಶವು , 504 ADಯ ಕಾಲದಲ್ಲಿ ಕ್ಲೋವಿಸ್‌ Iಅಲೆಮಾನ್ನಿಗಳ ಮೇಲಿನ ಟೋಲ್‌‌ಬಿಯಾಕ್‌ನಲ್ಲಿನ ವಿಜಯದ ನಂತರ ಮತ್ತು ನಂತರದ ಬರ್ಗಂಡಿಯನ್ನರ ಫ್ರಾಂಕಿಷ್‌ ಪ್ರಭುತ್ವದಿಂದಾಗಿ ವಿಸ್ತರಿಸುತ್ತಿದ್ದ ಫ್ರಾಂಕಿಷ್‌ ಸಾಮ್ರಾಜ್ಯದ ಭಾಗವಾಗಿತ್ತು. 6ನೇ, 7ನೇ ಮತ್ತು 8ನೇ ಶತಮಾನಗಳುದ್ದಕ್ಕೂ ಸ್ವಿಸ್ ಪ್ರದೇಶಗಳು ಫ್ರಾಂಕಿಷ್‌ ಅಧಿಪತ್ಯದಲ್ಲಿ ಮುಂದುವರೆದವು (ಮೆರೊವಿಂಜಿಯನ್‌ ಮತ್ತು ಕ್ಯಾರೋಲಿಂಜಿಯನ್‌ ಅಧಿಪತ್ಯಗಳು). ಆದರೆ ಮಹಾನ್‌ ಚಾರ್ಲ್ಸ್‌ನ ನೇತೃತ್ವದ ತನ್ನ ವಿಸ್ತರಣೆಯ ನಂತರ ಫ್ರಾಂಕಿಷ್‌ ಸಾಮ್ರಾಜ್ಯ ವರ್ಡನ್‌ ಒಪ್ಪಂದದಿಂದಾಗಿ 843ರಲ್ಲಿ ವಿಭಜಿತವಾಯಿತು.[೧೩] ಪ್ರಸಕ್ತ ಸ್ವಿಟ್ಜರ್ಲೆಂಡ್‌‌‌ನ ಈಗಿನ ಪ್ರಾಂತ್ಯಗಳು ಮಧ್ಯ ಫ್ರಾನ್ಷಿಯಾ ಮತ್ತು ಪೂರ್ವ ಫ್ರಾನ್ಷಿಯಾಗಳಾಗಿ ವಿಭಜನೆಯಾದವು. ಪವಿತ್ರ ರೋಮ್‌ ಸಾಮ್ರಾಜ್ಯ 1000 ADಯ ಅವಧಿಯಲ್ಲಿ ನಂತರ ಮರು ಏಕೀಕರಣಗೊಂಡವು.[೧೩]1200ರ ಹೊತ್ತಿಗೆ, ಸ್ವಿಸ್ ಪ್ರಸ್ಥಭೂಮಿಯು ಸೆವಾಯ್‌, ಝಹ್ರಿಂಗರ್‌, ಹಬ್ಸ್‌ಬರ್ಗ್‌ ಮತ್ತು ಕಿಬರ್ಗ್‌ ಆಡಳಿತಗಳ ಸ್ವಾಮ್ಯಕ್ಕೆ ಒಳಪಟ್ಟಿತ್ತು.[೧೩] ಕೆಲ ಪ್ರದೇಶಗಳು (ಯೂರಿ, ಸ್ಕ್ವಿಜ್‌, ನಂತರ ವಾಲ್ಡ್‌ಸ್ಟಾಟೆನ್‌ ಎಂದು ಹೆಸರಾದ ಅಂಟರ್‌ವಾಲ್ಡನ್‌ಗಳು) ಸಾಮ್ರಾಜ್ಯಕ್ಕೆ ಪರ್ವತ ಕಣಿವೆಗಳ ಮೇಲೆ ನೇರ ನಿಯಂತ್ರಣ ಸಿಗುವ ಹಾಗೆ ಸಾಮ್ರಾಜ್ಯದ ನೇರ ಆಳ್ವಿಕೆಗೆ ಒಳಪಟ್ಟವು . 1264 ADಯಲ್ಲಿ ಕಿಬರ್ಗ್‌ ರಾಜವಂಶವು ಕುಸಿದಾಗ, ಹಬ್ಸ್‌ಬರ್ಗ್ಸ್‌ ಚಕ್ರವರ್ತಿ ರುಡಾಲ್ಫ್‌ Iನ ನೇತೃತ್ವದಲ್ಲಿ (1273ರಲ್ಲಿ ಪವಿತ್ರ ರೋಮ್‌ನ ಚಕ್ರವರ್ತಿಯಾಗಿದ್ದ ) ಪೂರ್ವ ಸ್ವಿಸ್ ಪ್ರಸ್ಥಭೂಮಿಯವರೆಗೆ ತನ್ನ ಎಲ್ಲೆಯನ್ನು ವಿಸ್ತರಿಸಿಕೊಂಡಿತು.

ಹಳೆಯ ಸ್ವಿಸ್ ಒಕ್ಕೂಟ

[ಬದಲಾಯಿಸಿ]
ಸುಮಾರು ಕ್ರಿ.ಶ ೧೨೦೦ರಲ್ಲಿ ಅಸ್ತಿತ್ವದಲ್ಲಿದ್ದ ಆಳ್ವಿಕೆಯ ಮನೆತನಗಳು

ಹಳೆಯ ಸ್ವಿಸ್ ಒಕ್ಕೂಟವು ಮಧ್ಯ ಆಲ್ಪ್ಸ್‌‌ ಪರ್ವತ ಶ್ರೇಣಿಯ ಕಣಿವೆಯ ಸಮುದಾಯಗಳಲ್ಲಿ ಒಂದು ಮೈತ್ರಿ ಒಕ್ಕೂಟವಾಗಿತ್ತು. ಒಕ್ಕೂಟವು ಸಮಾನ ಆಸಕ್ತಿ(ಸುಂಕ ಮುಕ್ತ ವ್ಯಾಪಾರ)ಗಳನ್ನು ಮತ್ತು ಪ್ರಮುಖ ಪರ್ವತ ಪ್ರದೇಶದ ವ್ಯಾಪಾರ ಮಾರ್ಗಗಳಲ್ಲಿ ಶಾಂತಿ ಕಾಪಾಡುವಿಕೆ ಮುಂತಾದವುಗಳ ನಿರ್ವಹಣೆ ನಡೆಸುತ್ತಿತ್ತು . ಇದೇ ಮಾದರಿಯ ಇನ್ನಿತರ ಮೈತ್ರಿಗಳು ದಶಕಗಳ ಹಿಂದೆಯೇ ಅಸ್ತಿತ್ವದಲ್ಲಿದ್ದಿರಬಹುದಾದರೂ, ಗ್ರಾಮೀಣ ಸಮುದಾಯಗಳಾದ ಯೂರಿ, ಸ್ಕ್ವಿಜ್‌, ಮತ್ತು ನಿಡ್‌ವಾಲ್ಡೆನ್‌ಗಳ ನಡುವಿನ 1291ರ ಒಕ್ಕೂಟ ಶಾಸನಪತ್ರವು ಒಕ್ಕೂಟ ನಿರ್ಮಾಣದ ಆಧಾರ ಸ್ತಂಭವೆಂದು ಪರಿಗಣಿಸಲ್ಪಟ್ಟಿದೆ.[೧೪][೧೫]

1291ರ ಒಕ್ಕೂಟ ಶಾಸನಪತ್ರ

1353ರ ಹೊತ್ತಿಗೆ ಮೂರು ಮೂಲ ಕ್ಯಾಂಟನ್‌ಗಳು ಎಂದರೆ ಗ್ಲಾರಸ್‌ ಮತ್ತು ಝಗ್‌ ಮತ್ತು ಲ್ಯೂಸರ್ನ್‌ ಕ್ಯಾಂಟನ್‌ಗಳು, ಜ್ಯೂರಿಚ್‌ ಮತ್ತು ಬರ್ನ್‌ ನಗರರಾಜ್ಯಗಳೊಂದಿಗೆ ಸೇರಿ ಎಂಟು ರಾಜ್ಯಗಳಿಂದ ರೂಪುಗೊಂಡಿದ್ದ 15ನೇ ಶತಮಾನದ ಕೊನೆಯವರೆಗೆ ಅಸ್ತಿತ್ವದಲ್ಲಿದ್ದ "ಹಳೆಯ ಒಕ್ಕೂಟ"ವು ಅಸ್ತಿತ್ವಕ್ಕೆ ಬಂದಿತ್ತು. ಈ ವಿಸ್ತರಣವು ಒಕ್ಕೂಟದ ಶಕ್ತಿ ಮತ್ತು ಐಶ್ವರ್ಯಗಳನ್ನು ಹೆಚ್ಚಿಸುವಲ್ಲಿ ನೆರವಾಯಿತು.[೧೫] 1460ರ ಹೊತ್ತಿಗೆ, ಒಕ್ಕೂಟದ ಸಂಸ್ಥಾನಗಳು ಪ್ರಾಂತ್ಯದ ದಕ್ಷಿಣ ಮತ್ತು ಪಶ್ಚಿಮ ತಗ್ಗು ಪ್ರದೇಶಗಳು ಆಲ್ಫ್ಸ್‌ ಮತ್ತು ಜೂರಾ ಪರ್ವತಗಳವರೆಗೆ ನಿಯಂತ್ರಣವನ್ನು ಪಡೆದುಕೊಂಡವು. ಇದು ನಿರ್ದಿಷ್ಟವಾಗಿ ಹಬ್ಸ್‌ಬರ್ಗ್ಸ್‌ಗಳ (ಸೆಂಪಾಕ್‌ ಕಾಳಗ, ನ್ಯಾಫೆಲ್ಸ್‌ಗಳ ಕಾಳಗ) ಬರ್ಗಂಡಿದಿಟ್ಟ ಚಾರ್ಲ್ಸ್‌ ಮೇಲಿನ 1470ರಲ್ಲಿನ ವಿಜಯದಿಂದ, ಮತ್ತು ಸ್ವಿಸ್ ಕೂಲಿ ಸಿಪಾಯಿಗಳ ಯಶಸ್ಸಿನ ನಂತರ ಸಾಧ್ಯವಾಯಿತು.1499ರಲ್ಲಿನ ಸ್ವಾಬಿಯನ್‌ ಯುದ್ಧದಲ್ಲಿ ಚಕ್ರವರ್ತಿ ಮ್ಯಾಕ್ಸಿಮಿಲಿಯನ್‌ Iಸ್ವಾಬಿಯನ್‌ ಒಕ್ಕೂಟದ ಮೇಲಿನ ಸ್ವಿಸ್ ವಿಜಯವು ಪವಿತ್ರ ರೋಮ್‌ ಸಾಮ್ರಾಜ್ಯದೊಳಗೆ ವಸ್ತುತಃ ಸ್ವಾತಂತ್ರ್ಯ ಗಳಿಸಲು ಕಾರಣವಾಯಿತು.[೧೫] ಹಳೆಯ ಸ್ವಿಸ್ ಒಕ್ಕೂಟವು ಮುಂಚಿನ ಅನೇಕ ಯುದ್ಧಗಳಿಂದಾಗಿ ಅಜೇಯತೆಯ ಕೀರ್ತಿ ಪಡೆದಿತ್ತು. ಆದರೆ ಒಕ್ಕೂಟದ ವಿಸ್ತರಣೆ ಮಾಡುವಾಗ 1515ರಲ್ಲಿ ಮಾರಿಗ್ನಾನೋ ಕಾಳಗದಲ್ಲಿನ ಸ್ವಿಸ್ ಸೋಲು ಹಿನ್ನಡೆ ಕಾಣುವಂತೆ ಮಾಡಿತು. ಇದು ಸ್ವಿಸ್ ಚರಿತ್ರೆಯ "ಧೀರ" ಯುಗದ ಮುಕ್ತಾಯಕ್ಕೆ ನಾಂದಿ ಹಾಡಿತು.[೧೫] ಝ್ವಿಂಗ್ಲಿಸುಧಾರಣೆಯ ಯಶಸ್ಸು ಕೆಲ ಕ್ಯಾಂಟನ್‌ಗಳಲ್ಲಿ 1529 ಮತ್ತು 1531ರಲ್ಲಿ (ಕಪ್ಪೆಲರ್‌ ಕ್ರೀಗ್‌ ) ಅಂತರ-ಕ್ಯಾಂಟನ್ ಯುದ್ಧಗಳಿಗೆ ಕಾರಣವಾಯಿತು. ಈ ಆಂತರಿಕ ಯುದ್ಧಗಳು ನಡೆದ ನೂರು ವರ್ಷಕ್ಕೂ ಹೆಚ್ಚಿನ ಕಾಲದ ನಂತರವೇ, 1648ರಲ್ಲಿ, ವೆಸ್ಟ್‌ಫಾಲಿಯಾ ಒಪ್ಪಂದದ ಅಂಗವಾಗಿ, ಐರೋಪ್ಯ ರಾಷ್ಟ್ರಗಳು ಪವಿತ್ರ ರೋಮ್‌ ಸಾಮ್ರಾಜ್ಯದಿಂದ ಸ್ವಿಟ್ಜರ್ಲೆಂಡ್‌‌‌ನ ಸ್ವತಂತ್ರತೆಯನ್ನು ಮತ್ತು ಅದರ ಅಲಿಪ್ತ ನೀತಿ([ancien régime] Error: {{Lang}}: text has italic markup (help))ಗೆ ಮಾನ್ಯತೆ ನೀಡಿದವು. ಸ್ವಿಸ್ ಚರಿತ್ರೆಯ ಪೂರ್ವ ಆಧುನಿಕ ಅವಧಿಯಲ್ಲಿ, ಶ್ರೀಮಂತ ವರ್ಗದ ಕುಟುಂಬಗಳ ಹೆಚ್ಚುತ್ತಿದ್ದ ಸರ್ವಾಧಿಕಾರಿತನವು ಮೂವತ್ತು ವರ್ಷಗಳ ಯುದ್ಧದ ನಂತರದ ಆರ್ಥಿಕ ಹಿನ್ನಡೆಯೊಂದಿಗೆ ಸೇರಿಕೊಂಡು 1653ರ ಸ್ವಿಸ್ ರೈತರ ದಂಗೆಗೆ ಕಾರಣವಾಯಿತು. ಈ ಹೋರಾಟಕ್ಕೆ ಹಿನ್ನೆಲೆಯಾಗಿ, ಕ್ಯಾಥೊಲಿಕ್‌ ಮತ್ತು ಪ್ರೊಟೆಸ್ಟೆಂಟ್‌ ಕ್ಯಾಂಟನ್‌ಗಳ ನಡುವಿನ ಸಂಘರ್ಷವು ಮುಂದುವರಿದು, 1656 ಮತ್ತು 1712ರಲ್ಲಿ ನಡೆದ ವಿಲ್‌ಮರ್ಗನ್‌ ಕಾಳಗಗಳ ರೂಪದಲ್ಲಿ ಹಿಂಸೆಯನ್ನು ಸ್ಫೋಟಿಸಿತು.[೧೫]

ನೆಪೋಲಿಯನ್‌ ಯುಗ

[ಬದಲಾಯಿಸಿ]
ಮಧ್ಯವರ್ತಿ ಕಾಯಿದೆಯು ಹಳೆಯ ಆಳ್ವಿಕೆ ಪದ್ಧತಿ ಮತ್ತು ಗಣರಾಜ್ಯಗಳ ನಡುವಿನ ಒಪ್ಪಂದಕ್ಕೆ ನೆಪೋಲಿಯನ್‌‌ನ ಪ್ರಯತ್ನ.

1798ರಲ್ಲಿ ಫ್ರೆಂಚ್‌ ಕ್ರಾಂತಿಯ ಸೇನೆಯು ಸ್ವಿಟ್ಜರ್ಲೆಂಡ್‌‌‌ನ್ನು ವಶಪಡಿಸಿಕೊಂಡು ಏಕೀಕೃತ ಸಂವಿಧಾನವನ್ನು ಹೇರಿತು.[೧೫] ಇದು ರಾಷ್ಟ್ರದ ಆಡಳಿತವನ್ನು ಏಕೀಕರಣಗೊಳಿಸಿತು ಮತ್ತು ಪರಿಣಾಮವಾಗಿ ಕ್ಯಾಂಟನ್‌ಗಳ ವ್ಯವಸ್ಥೆಯನ್ನು ರದ್ದುಗೊಳಿಸಿತು ಮತ್ತು ಮುಲ್‌ಹಾಸನ್‌ ಮತ್ತು ವಾಲ್‌ಟೆಲ್ಲಿನಾ ಕಣಿವೆಗಳನ್ನು ಸ್ವಿಟ್ಜರ್ಲೆಂಡ್‌‌‌ನಿಂದ ಪ್ರತ್ಯೇಕಿಸಿತು. ಹೆಲ್ವೆಟಿಕ್‌ ಗಣರಾಜ್ಯ ಎಂದೆನಿಸಿದ ಹೊಸ ಪ್ರಭುತ್ವವು, ಬಹಳವೇ ಅಪಖ್ಯಾತಿ ಹೊಂದಿತ್ತು. ಈ ಸರ್ಕಾರವನ್ನು ವಿದೇಶೀ ಆಕ್ರಮಣಕಾರಿ ಸೇನೆಯಿಂದ ಹೇರಲಾಗಿತ್ತು. ಇದರಿಂದಾಗಿ ಶತಮಾನಗಳ ಕಾಲದ ಸಂಸ್ಕೃತಿಯು ನಾಶವಾಗಿ, ಸ್ವಿಟ್ಜರ್ಲೆಂಡ್‌‌ ಎಂಬುದು ಕೇವಲ ಫ್ರೆಂಚ್‌ ಪರಾಧೀನ ರಾಷ್ಟ್ರವಾಗಿ ಬದಲಾಯಿಸಿತ್ತು. ನಿಡ್‌ವಾಲ್ಡೆನ್‌ ದಂಗೆಯನ್ನು 1798ರ ಸೆಪ್ಟೆಂಬರ್‌ ತಿಂಗಳಿನಲ್ಲಿ ತೀವ್ರವಾಗಿ ಫ್ರೆಂಚ್‌ ಸೇನೆಯು ಹತ್ತಿಕ್ಕಿದ ಸಂಗತಿ ಫ್ರೆಂಚ್‌ ಸೇನೆಯ ದಬ್ಬಾಳಿಕೆಗೆ ಮತ್ತು ಸ್ಥಳೀಯ ನಿವಾಸಿಗಳಿಂದ ಸೇನೆಯ ಇರುವಿಕೆಯ ಬಗೆಗೆ ಇದ್ದ ವಿರೋಧಕ್ಕೆ ಉದಾಹರಣೆಯಾಗಿದೆ.ಫ್ರಾನ್ಸ್‌‌ ಮತ್ತು ಅದರ ವಿರೋಧಿಗಳ ನಡುವೆ ಯುದ್ಧ ಆರಂಭವಾದಾಗ, ರಷ್ಯಾ ಮತ್ತು ಆಸ್ಟ್ರಿಯಾದ ಸೇನೆಗಳು ಸ್ವಿಟ್ಜರ್ಲೆಂಡ್‌‌ನ್ನು ವಶಪಡಿಸಿಕೊಂಡವು. ಹೆಲ್ವೆಟಿಕ್‌ ಗಣರಾಜ್ಯದ ಹೆಸರಿನಲ್ಲಿ ಫ್ರೆಂಚರ ಪರ ಹೋರಾಡಲು ಸ್ವಿಸ್ ಸಮ್ಮತಿಸಲಿಲ್ಲ. 1803ರಲ್ಲಿ ನೆಪೋಲಿಯನ್‌ ಎರಡೂ ಪಂಗಡಗಳಿಂದ ಪ್ರಮುಖ ಸ್ವಿಸ್ ರಾಜಕಾರಣಿಗಳನ್ನು ಕರೆಸಿ ಪ್ಯಾರಿಸ್‌ನಲ್ಲಿ ಭೇಟಿ ಏರ್ಪಡಿಸಿದನು. ಇದರ ಪರಿಣಾಮವಾಗಿ ಮಧ್ಯವರ್ತಿ ಕಾಯಿದೆಯು ಜಾರಿಯಾಗಿ ಬಹಳಷ್ಟು ಮಟ್ಟಿಗೆ ಸ್ವಿಸ್ ಸ್ವಾಯತ್ತತೆಯನ್ನು ಕಾಪಾಡಿಕೊಂಡು 19 ಕ್ಯಾಂಟನ್‌ಗಳ ಒಕ್ಕೂಟವೊಂದನ್ನು ಪರಿಚಯಿಸಿತು.[೧೫] ಸ್ವಿಸ್ ರಾಜಕೀಯದ ಬಹುಪಾಲು ಹಿತಾಸಕ್ತಿಯು ಕೇಂದ್ರ ಸರಕಾರದ ಅಗತ್ಯ ಹಾಗೂ ಕ್ಯಾಂಟನ್‌ಗಳ ಸ್ವಯಮಾಡಳಿತದ ಸಂಸ್ಕೃತಿಯ ನಡುವೆ ಹೊಂದಾಣಿಕೆಯನ್ನು ಸರಿದೂಗಿಸುವುದಾಗಿದೆ. 1815ರಲ್ಲಿ ವಿಯೆನ್ನಾದ ಆಡಳಿತ ಸ್ವಿಸ್ ಸ್ವತಂತ್ರತೆಯನ್ನು ಮರುಸ್ಥಾಪನೆಗೊಳಿಸಿತು. ಐರೋಪ್ಯ ಶಕ್ತಿಗಳು ಸ್ವಿಸ್ ಅಲಿಪ್ತ ನೀತಿಯನ್ನು ಅಂತಿಮವಾಗಿ ಒಪ್ಪಿಕೊಂಡವು.[೧೫] ಸ್ವಿಸ್ ಪಡೆಗಳು 1860ರ ಗೇಟಾದ ಮುತ್ತಿಗೆಯಲ್ಲಿ ನಡೆದ ಹೋರಾಟದವರೆಗೂ ವಿದೇಶೀ ಸರ್ಕಾರಗಳಿಗೆ ತಮ್ಮ ಸೇವೆ ಸಲ್ಲಿಸುತ್ತಿದ್ದವು. ಈ ಒಪ್ಪಂದವು ವಲಾಯಿಸ್‌‌, ನ್ಯೂಚಾಟೆಲ್‌ ಮತ್ತು ಜಿನೀವಾ ಕ್ಯಾಂಟನ್‌ಗಳನ್ನು ಸೇರಿಸಿಕೊಂಡು ಸ್ವಿಟ್ಜರ್ಲೆಂಡ್‌‌ನ ವಿಸ್ತರಣೆಗೆ ಅವಕಾಶ ನೀಡಿತು. ಆಗಿನಿಂದ ಸ್ವಿಟ್ಜರ್ಲೆಂಡ್‌‌ನ ಗಡಿಗಳು ಬದಲಾಗಿಲ್ಲ.

ಸಂಯುಕ್ತ ಒಕ್ಕೂಟ ದೇಶ

[ಬದಲಾಯಿಸಿ]
ಬರ್ನ್‌‌ನಲ್ಲಿನ ಪ್ರಥಮ ಒಕ್ಕೂಟ ಅರಮನೆ (1857).

ಬರ್ನ್‌ ಕ್ಯಾಂಟನ್, ಲ್ಯೂಸರ್ನ್‌ ಮತ್ತು ಜ್ಯೂರಿಚ್‌ಗಳೊಂದಿಗೆ ಟಾಗ್ಸಾಟ್ಸುಂಗ್‌ (ಹಿಂದಿನ ಶಾಸಕಾಂಗ ಮತ್ತು ಕಾರ್ಯಾಂಗ ಸಮಿತಿ)ನ ಅಗ್ರಸ್ಥಾನ ವಹಿಸಿದ ಮೂರು ಕ್ಯಾಂಟನ್‌ಗಳಲ್ಲಿ ಒಂದಾಗಿದೆ. 1848ರಲ್ಲಿ ಕ್ಯಾಂಟನ್‌ಗಳ ರಾಜಧಾನಿಯನ್ನೇ ಒಕ್ಕೂಟದ ರಾಜಧಾನಿಯಾಗಿ ಮುಖ್ಯವಾಗಿ ಫ್ರೆಂಚ್‌ ಭಾಷಿಕರ ಪ್ರದೇಶಕ್ಕೆ ಸನಿಹವಿರುವುದರಿಂದ, ಆಯ್ಕೆ ಮಾಡಲಾಯಿತು.[೧೬]

ಶ್ರೀಮಂತ ಕುಟುಂಬಗಳ ಅಧಿಕಾರ ಪುರ್ನಸ್ಥಾಪನೆಯು ಕೇವಲ ತಾತ್ಕಾಲಿಕವಾಗಿತ್ತು. 1839ರ ಜ್ಯೂರಿಪುಟ್ಷ್‌ ಹಿಂಸಾತ್ಮಕ ಘರ್ಷಣೆಗಳ ರಾಜಕೀಯ ಅಶಾಂತಿಯ ಅವಧಿಯ ನಂತರ, 1847ರಲ್ಲಿ ಕೆಲ ಕ್ಯಾಥೊಲಿಕ್‌ ಕ್ಯಾಂಟನ್‌ಗಳು ಪ್ರತ್ಯೇಕ ಮೈತ್ರಿಕೂಟ(ಸೋಂಡರ್‌ಬಂಡ್ಸ್‌ಕ್ರೇಗ್‌)ವನ್ನು ರಚಿಸಲು ನೋಡಿದಾಗ ಅಂತರ್ಯುದ್ಧ ಭುಗಿಲೆದ್ದಿತು.[೧೫] ಈ ಕಲಹವು ನೂರರ ಆಸುಪಾಸಿನ ಸಂಖ್ಯೆಯ ಜೀವಗಳನ್ನು ಬಲಿ ತೆಗೆದುಕೊಂಡು ಸುಮಾರು ಕೆಲ ವಾರಗಳ ಮಟ್ಟಿಗೆ ನಡೆಯಿತು. ಇದಕ್ಕೆ ಪ್ರಮುಖ ಕಾರಣ ವಿರೋಧಿಗಳಿಗೆಂದು ಉದ್ದೇಶಿಸಿದ ಆಕ್ರಮಣಗಳು ತಿರುಗುಬಾಣವಾದುದರಿಂದ ಸಂಭವಿಸಿದವು. 19ನೇ ಶತಮಾನದಲ್ಲಿ ನಡೆದ ಇತರೆ ಐರೋಪ್ಯ ದಂಗೆ ಮತ್ತು ಯುದ್ಧಗಳಿಗೆ ಹೋಲಿಸಿದರೆ ಸೋಂಡರ್‌ಬಂಡ್ಸ್‌ಕ್ರೇಗ್‌ನ ದಂಗೆ ಎಷ್ಟೇ ಅಲ್ಪ ಪ್ರಮಾಣದ್ದಾದರೂ ಸ್ವಿಸ್ ಜನರ ಮನಃಸ್ಥಿತಿ ಮತ್ತು ಸ್ವಿಟ್ಜರ್ಲೆಂಡ್‌‌ನ ಸಮಾಜದ ಮೇಲೆ ಬಹಳ ಪ್ರಭಾವ ಬೀರಿತು. ಈ ಯುದ್ಧವು ಇಡೀ ಸ್ವಿಸ್ ಪ್ರಾಂತ್ಯಕ್ಕೆ ತನ್ನ ಐರೋಪ್ಯ ನೆರೆಹೊರೆಯ ವಿರುದ್ಧ ಏಕತೆ ಮತ್ತು ಬಲದ ಸಾಮರ್ಥ್ಯದ ಅಗತ್ಯವನ್ನು ಮನದಟ್ಟು ಮಾಡಿಸಿತು. ಸ್ವಿಸ್ ಸಮಾಜದ ಎಲ್ಲಾ ವರ್ಗಗಳ ಜನರು ಕ್ಯಾಥೊಲಿಕ್‌, ಪ್ರೊಟೆಸ್ಟೆಂಟ್‌, ಪ್ರಗತಿಪರ ಇಲ್ಲವೇ ಸಾಂಪ್ರದಾಯಿಕ ಯಾವುದೇ ವರ್ಗಕ್ಕೆ ಸೇರಿರಲಿ, ಆರ್ಥಿಕ ಮತ್ತು ಧಾರ್ಮಿಕ ಆಸಕ್ತಿಗಳು ಒಂದುಗೂಡಿದರೆ ಕ್ಯಾಂಟನ್‌ಗಳ ಹಿತಾಸಕ್ತಿಗೆ ಹೆಚ್ಚು ಪೂರಕ ಎಂಬುದನ್ನು ಮನಗಂಡರು. ಇದೇ ಕಾರಣದಿಂದ ಯೂರೋಪ್‌ನ ಇತರೆ ಭಾಗಗಳು ಕ್ರಾಂತಿಯ ಕೋಲಾಹಲ ಮತ್ತು ಗಲಭೆಗಳಿಂದ ನಲುಗುತ್ತಿದ್ದರೆ, ಇತ್ತ ಸ್ವಿಸ್‌ ಜನರು ಅಮೇರಿಕದ ಶೈಲಿಯಿಂದ ಪ್ರೇರಿತವಾಗಿ ಒಂದು ಒಕ್ಕೂಟ ವ್ಯವಸ್ಥೆಯ ವಾಸ್ತವಿಕವಾದ ಸಂವಿಧಾನವನ್ನು ರಚಿಸುವುದರಲ್ಲಿ ಮಗ್ನರಾಗಿದ್ದರು. ಈ ಸಂವಿಧಾನವು ಕ್ಯಾಂಟನ್‌ಗಳಿಗೆ ಸ್ಥಳೀಯ ಸಮಸ್ಯೆಗಳಿಗೆ ಸ್ವಯಮಾಡಳಿತ ನಡೆಸುವ ಹಕ್ಕನ್ನು ನೀಡಿ ಉಳಿದ ಅಧಿಕಾರವನ್ನು ಕೇಂದ್ರ ಸರಕಾರಕ್ಕೆ ನೀಡಿತು. ಕ್ಯಾಂಟನ್‌ಗಳ ಅಧಿಪತ್ಯಕ್ಕೆ ಬೆಂಬಲ ಸೂಚಿಸಿದವರಿಗೆ ಮನ್ನಣೆಯೊಂದಿಗೆ (ಸೋಂಡರ್‌ಬಂಡ್‌ ಕಂಟೋನ್‌), ರಾಷ್ಟ್ರೀಯ ಸಂಸತ್ತನ್ನು ಮೇಲ್ಮನೆ ( ಸ್ವಿಸ್ ಸಂಸ್ಥಾನಗಳ ಆಡಳಿತ ಮಂಡಳಿ, ಪ್ರತಿ ಕ್ಯಾಂಟನ್‌ಗೆ ಇಬ್ಬರು ಪ್ರತಿನಿಧಿಗಳ ಹಾಗೆ) ಮತ್ತು ಕೆಳಮನೆಯೆಂದು (ಸ್ವಿಟ್ಜರ್ಲೆಂಡ್‌‌ನ ರಾಷ್ಟ್ರೀಯ ಸಮಿತಿಗೆ ದೇಶಾದ್ಯಂತದ ಸದಸ್ಯರು ಆಯ್ಕೆಯಾಗಬಹುದು) ಎಂದು ವಿಭಜಿಸಲಾಯಿತು. ಸಂವಿಧಾನದ ಯಾವುದೇ ತಿದ್ದುಪಡಿಗೆ ಜನಾಭಿಪ್ರಾಯ ಸಂಗ್ರಹಣೆಯನ್ನು ಕಡ್ಡಾಯಗೊಳಿಸಲಾಗಿದೆ. ಏಕೀಕೃತ ತೂಕ ಮಾಪನೆ ಮತ್ತು ಅಳತೆಯ ವ್ಯವಸ್ಥೆಯನ್ನು ಪರಿಚಯಿಸಲಾಯಿತು. 1850ರಲ್ಲಿ ಸ್ವಿಸ್ ಫ್ರಾಂಕ್‌ ಅನ್ನು ಸ್ವಿಸ್‌ನ ಏಕೈಕ ನಾಣ್ಯ ಪದ್ಧತಿ ಮಾಡಲಾಯಿತು. ಸಂವಿಧಾನದ 11ನೇ ಅನುಚ್ಛೇದವು ವಿದೇಶಗಳಿಗೆ ಸೇನೆಯ ಸೇವೆ ನೀಡುವುದನ್ನು ಪ್ರತಿಬಂಧಿಸಿದರೂ, ಆಗಲೂ ಎರಡು ಸಿಸಿಲೀಸ್‌ನ ಫ್ರಾನ್ಸಿಸ್‌ IIನ ರಕ್ಷಣೆಯನ್ನು ಸ್ವಿಸ್ ರಕ್ಷಣಾ ಸಿಬ್ಬಂದಿ 1860ರ ಗೇಟಾನ ಮುತ್ತಿಗೆಯ ಸಂದರ್ಭದಲ್ಲಿ ನಿರ್ವಹಿಸಿ, ಸ್ವಿಸ್ ಜನರು ವಿದೇಶಿ ಸೇವೆಗೆ ಮುಕ್ತಾಯ ಹಾಡಿದರು.

1882ರಲ್ಲಿ ಉದ್ಘಾಟನೆಯಾದ ಗಾತ್ಥರ್ಡ್ ರೈಲ್ವೆ ಸುರಂಗವು, ಟಿಕಿನೊದ ದಕ್ಷಿಣ ಕ್ಯಾಂಟನ್‌ಗೆ ಸಂಪರ್ಕ ಕಲ್ಪಿಸುತ್ತದೆ.

ಸಂವಿಧಾನದ ಒಂದು ಪ್ರಮುಖ ವಿಧಿಯು ಅಗತ್ಯ ಬಿದ್ದರೆ ಇಡೀ ಸಂವಿಧಾನವನ್ನು ಪುನರ್ರಚನೆ ಮಾಡಬಹುದೆಂದು, ಹಾಗಾಗಿ ಇದನ್ನು ಒಮ್ಮೆ ಕೇವಲ ಒಂದು ತಿದ್ದುಪಡಿ ಮಾಡುವ ಬದಲಿಗೆ ಒಂದು ಸಮಗ್ರ ಸಂವಿಧಾನವಾಗಿ ರೂಪಿಸಲು ಸೂಚಿಸುತ್ತದೆ.[೧೭] ಈ ವಿಧಿಯ ಅಗತ್ಯವು ಜನಸಂಖ್ಯೆಯ ಹೆಚ್ಚಳ ಮತ್ತು ಕೈಗಾರಿಕಾ ಕ್ರಾಂತಿಯ ಪರಿಣಾಮವಾಗಿ ಅಗತ್ಯ ಬದಲಾವಣೆಗಳನ್ನು ಮಾಡಬೇಕಾದ ಸಂದರ್ಭ ಒದಗಿದಾಗ ಎದ್ದುಕಾಣಿಸಿತು. 1872ರಲ್ಲಿ ರೂಪಿಸಿದ ಸಂವಿಧಾನದ ರೂಪರೇಖೆಯು ಸಮುದಾಯದಿಂದ ತಿರಸ್ಕೃತಗೊಂಡರೂ ಅದರಲ್ಲಿ ಮಾಡಿದ ಬದಲಾವಣೆಗಳಿಂದಾಗಿ 1874ರಲ್ಲಿ ಅಂಗೀಕೃತಗೊಂಡಿತು.[೧೫] ಈ ಸಂವಿಧಾನವು ಒಕ್ಕೂಟದ ಹಂತದಲ್ಲಿ ಶಾಸನಗಳನ್ನು ಜಾರಿಗೆ ತರಲು ಅನುಜ್ಞಾತ್ಮಕ ಜನಾಭಿಪ್ರಾಯವನ್ನು ಪರಿಚಯಿಸಿತು. ಇದು ರಕ್ಷಣೆ, ವ್ಯಾಪಾರ ಮತ್ತು ಕಾನೂನು ವಿಚಾರಗಳಿಗೆ ಸಂಬಂಧಪಟ್ಟಂತೆ ಒಕ್ಕೂಟಕ್ಕೆ ಹೊಣೆಗಾರಿಕೆಯನ್ನು ನೀಡಿತ್ತು.1891ರಲ್ಲಿ ಇಂದಿಗೂ ಅದ್ವಿತೀಯವಾಗಿರುವ ನೇರ ಪ್ರಜಾಪ್ರಭುತ್ವದ ದೃಢವಾದ ಅಂಶಗಳನ್ನು ಸೇರಿಸಿಕೊಂಡು ಸಂವಿಧಾನವನ್ನು ಪರಿಷ್ಕರಣೆ ಮಾಡಲಾಯಿತು.[೧೫]

ಆಧುನಿಕ ಚರಿತ್ರೆ

[ಬದಲಾಯಿಸಿ]
19ನೇ ಶತಮಾನದ ಆರಂಭದಲ್ಲಿ ಪ್ರಾರಂಭವಾದ ಪ್ರವಾಸೋದ್ಯಮದಿಂದಾಗಿ ಪ್ರಮುಖ ಮೂಲಭೂತ ವ್ಯವಸ್ಥೆಗಳು ನಿರ್ಮಾಣವಾದವು. ಇಲ್ಲಿ ರೈಲು ಝರ್ಮತ್ತ್‌ನ ಹಳ್ಳಿಗೆ ಸಂಪರ್ಕ ಕಲ್ಪಿಸುತ್ತದೆ (1891).

ಎರಡೂ ವಿಶ್ವಸಮರಗಳಲ್ಲಿ ಸ್ವಿಟ್ಜರ್ಲೆಂಡ್‌‌ ಆಕ್ರಮಿತವಾಗಿರಲಿಲ್ಲ. ವಿಶ್ವ ಸಮರ Iರ ಸಮಯದಲ್ಲಿ, ಸ್ವಿಟ್ಜರ್ಲೆಂಡ್‌‌ ವ್ಲಾಡಿಮಿರ್‌ ಇಲ್ಲಿಯಿಚ್‌ ಉಲ್ಯಾನೊವ್‌ (ಲೆನಿನ್‌)ಗೆ ಆಶ್ರಯ ಕೊಟ್ಟಿತ್ತು ಅಲ್ಲದೇ ಆತ 1917ರವರೆಗೆ ಅಲ್ಲಿಯೇ ಉಳಿದಿದ್ದ.[೧೮] ಸ್ವಿಸ್ ಅಲಿಪ್ತ ನೀತಿಯು 1917ರ ಗ್ರಿಮ್‌-ಹಾಫ್‌ಮನ್‌ ವ್ಯವಹಾರಗಳಿಗೆ ಸಂಬಂಧಪಟ್ಟಂತೆ ತೀವ್ರ ಟೀಕೆಗೊಳಗಾದರೂ, ಈ ವಿರೋಧವು ತಾತ್ಕಾಲಿಕವಾಗಿತ್ತು. 1920ರಲ್ಲಿ, ಸ್ವಿಟ್ಜರ್ಲೆಂಡ್‌‌ ಯಾವುದೇ ಸೈನಿಕ ಕಾರ್ಯಾಚರಣೆಗಳಲ್ಲಿ ಪಾಲ್ಗೊಳ್ಳುವುದಿಲ್ಲ ಎಂಬ ನಿಬಂಧನೆಯ ಮೇರೆಗೆ ಜಿನೀವಾದಲ್ಲಿ ನೆಲೆಸಿರುವ ಲೀಗ್‌ ಆಫ್‌ ನೇಷನ್ಸ್‌ಗೆ ಸೇರ್ಪಡೆಗೊಂಡಿತು. ವಿಶ್ವಸಮರ IIರ ಸಮಯದಲ್ಲಿ, ಜರ್ಮನ್ನ[೧೯] ರು ಈ ದೇಶದ ಮೇಲೆ ಆಕ್ರಮಣ ನಡೆಸಲು ದೀರ್ಘ ಯೋಜನೆಗಳನ್ನು ಹಾಕಿಕೊಂಡಿದ್ದರೂ, ಸ್ವಿಟ್ಜರ್ಲೆಂಡ್‌‌ ಯಾವುದೇ ದಾಳಿಗೊಳಗಾಗಲಿಲ್ಲ.[೧೫] ಸೇನಾಬಲದ ಮೂಲಕ ನೀಡಿದ ವಿರೋಧ, ಜರ್ಮನಿಯೊಂದಿಗಿನ ರಿಯಾಯಿತಿಯ ಮಾತುಕತೆ ಹಾಗೂ ವಿಶ್ವ ಸಮರದ ಕಾಲದಲ್ಲಿನ ಇತರೆ ಮಹತ್ವದ ಘಟನೆಗಳಿಂದಾಗಿ ಉದ್ದೇಶಿತ ದಾಳಿ ನಡೆಯದಿದ್ದ ಉತ್ತಮ ಅದೃಷ್ಟ ಮುಂತಾದುವುಗಳ ಒಟ್ಟಾರೆ ಫಲವಾಗಿ ಸ್ವಿಟ್ಜರ್ಲೆಂಡ್‌‌ ತನ್ನ ಸ್ವತಂತ್ರತೆಯನ್ನು ಉಳಿಸಿಕೊಳ್ಳಲು ಸಾಧ್ಯವಾಯಿತು.ಸ್ವಿಟ್ಜರ್ಲೆಂಡ್‌ನ ಪುಟ್ಟ ನಾಜಿ ಪಕ್ಷವು ಮಾಡಿದ ಜರ್ಮನಿಯ ಮೇಲಿನ ಆಕ್ರಮಣದ ಪ್ರಯತ್ನವು ಶೋಚನೀಯವಾಗಿ ವಿಫಲವಾಯಿತು. ಸ್ವಿಸ್ ಮುದ್ರಣ ಮಾಧ್ಯಮವು ತೃತೀಯ ಜರ್ಮನ್‌ ಸಾಮ್ರಾಜ್ಯವನ್ನು, ಸಾಕಷ್ಟು ಬಾರಿ ಜರ್ಮನಿಯ ನೇತಾರರನ್ನು ಉದ್ರೇಕಿಸುವಂತೆ ಬಲವಾಗಿ ಟೀಕಿಸುತ್ತಿತ್ತು. ಜನರಲ್‌ ಹೆನ್ರಿ ಗುಸನ್‌ರ ನೇತೃತ್ವದಲ್ಲಿ ಬೃಹತ್‌ ಪ್ರಮಾಣದ ಸೇನಾ ಕಾರ್ಯಾಚರಣೆಗೆ ಸನ್ನದ್ಧಗೊಳಿಸಲು ಆದೇಶಿಸಲಾಯಿತು. ಕೇವಲ ಗಡಿ ಪ್ರದೇಶದಲ್ಲಿ ಆರ್ಥಿಕ ಕೇಂದ್ರಗಳನ್ನು ರಕ್ಷಿಸುತ್ತಿದ್ದ ಸ್ಥಾಯೀ ರಕ್ಷಣಾ ನೀತಿಯಿಂದ ಹಿಂದೆ ಸರಿದು ದೀರ್ಘಕಾಲೀನ ವ್ಯವಸ್ಥಿತ ನಿರಂತರ ಸವೆಸುವ ಯುದ್ಧ ನಡೆಸುವಿಕೆ ಮತ್ತು ಆಲ್ಫ್ಸ್‌ ಪರ್ವತ ಶ್ರೇಣಿಯ ಎತ್ತರದ ಸ್ಥಳಗಳಲ್ಲಿ ರೀಡ್ಯುಟ್‌ ಎಂದು ಹೆಸರಾದ ಸದೃಢ ಉತ್ತಮ ಆಯುಧ ದಾಸ್ತಾನು ಹೊಂದಿರುವ ಪ್ರದೇಶಗಳಿಗೆ ಹಿಂತಿರುಗುವ ಮಾದರಿಯ ನೂತನ ಯುದ್ಧನೀತಿಯನ್ನು ಸ್ವಿಸ್‌ ಪಡೆ ಬದಲಿಸಿಕೊಂಡಿದೆ. ಸ್ವಿಟ್ಜರ್ಲೆಂಡ್‌‌ ಆಕ್ಸಿಸ್‌ ಮತ್ತು ಮಿತ್ರದೇಶಗಳ ನಡುವಿನ ದ್ವಿಪಕ್ಷೀಯ ಬೇಹುಗಾರಿಕೆ ಮತ್ತು ಆಗಾಗ್ಗೆ ನಡೆಯುತ್ತಿದ್ದ ಮಧ್ಯಸ್ಥಿಕೆಯ ಮಾತುಕತೆಗಳಿಗೆ ನೆಲೆಯಾಗಿತ್ತು. ಜಿನೀವಾದಲ್ಲಿ ನೆಲೆಸಿರುವ ಅಂತರರಾಷ್ಟ್ರೀಯ ರೆಡ್‌ಕ್ರಾಸ್‌ ಸಂಘಟನೆಯು ಈ ತರಹದ ಹಾಗೂ ಇನ್ನಿತರ ಸಂಘರ್ಷಗಳಲ್ಲಿ ಪ್ರಧಾನ ಪಾತ್ರ ವಹಿಸಿತ್ತು. ಸ್ವಿಟ್ಜರ್ಲೆಂಡ್‌‌ನ ವಾಣಿಜ್ಯೋದ್ಯಮವನ್ನು ಮಿತ್ರಪಕ್ಷಗಳು ಮತ್ತು ಆಕ್ಸಿಸ್‌ ದೇಶಗಳೆರಡೂ ದಿಗ್ಬಂಧಿಸಿದ್ದವು. ಜರ್ಮನಿಯ ತೃತೀಯ ಸಾಮ್ರಾಜ್ಯಕ್ಕೆ ಆರ್ಥಿಕ ಸಹಕಾರ ಮತ್ತು ಸಾಲದ ಕಾಲಾವಧಿಯ ವಿಸ್ತರಣೆಗಳು ಆಕ್ರಮಣದ ಸಾಧ್ಯಾಸಾಧ್ಯತೆಗಳ ಗ್ರಹಿಕೆಯ ಮೇಲೆ ಮತ್ತು ಇನ್ನಿತರ ವಾಣಿಜ್ಯ ಪಾಲುದಾರ ದೇಶಗಳ ಲಭ್ಯತೆಯ ಮೇಲೆ ಬದಲಾಗುತ್ತಿದ್ದವು. ಈ ರಿಯಾಯಿತಿಗಳು ವಿಚಿ ಫ್ರಾನ್ಸ್‌‌ ಮೂಲಕ ಹಾದುಹೋಗುತ್ತಿದ್ದ ನಿರ್ಣಾಯಕ ರೈಲ್ವೆ ಸಂಪರ್ಕವೊಂದನ್ನು 1942ರಲ್ಲಿ ಆಕ್ರಮಿಸಿ ಸ್ವಿಟ್ಜರ್ಲೆಂಡ್‌‌ ಸಂಪೂರ್ಣವಾಗಿ ಆಕ್ಸಿಸ್‌ ದೇಶಗಳಿಂದ ಸುತ್ತುವರೆಯುವ ಹಾಗೆ ಮಾಡಿದ ಸಮಯದಲ್ಲಿ ಗರಿಷ್ಠ ಮಟ್ಟ ಮುಟ್ಟಿತು. ವಿಶ್ವ ಸಮರದ ಅವಧಿಯಲ್ಲಿ 104,000 ಮಂದಿ ವಿದೇಶೀ ಸೈನಿಕರೂ ಸೇರಿದಂತೆ ಸುಮಾರು 300,000 ನಿರಾಶ್ರಿತರನ್ನು ಹೇಗ್‌ ಒಡಂಬಡಿಕೆಗಳಲ್ಲಿ ಸೂಚಿಸಲಾಗಿದ್ದ ಅಲಿಪ್ತ ರಾಷ್ಟ್ರಗಳ ಹಕ್ಕು ಮತ್ತು ಬಾಧ್ಯತೆ ಗಳಿಗೆ ಅನುಗುಣವಾಗಿ ನಿರ್ಬಂಧಕ್ಕೊಳಪಡಿಸಿತು. ನಿರಾಶ್ರಿತರಲ್ಲಿ 60,000 ಜನರು ನಾಜಿಗಳ ಹಿಂಸೆಯಿಂದ ತಪ್ಪಿಸಿಕೊಂಡು ಬಂದವರಾಗಿದ್ದರು. ಅವರಲ್ಲಿ 26,000ರಿಂದ 27,000 ಮಂದಿ ಯಹೂದಿಗಳಾಗಿದ್ದರು. ಆದರೂ, ನಾಜಿ ಜರ್ಮನಿಯೊಂದಿಗಿನ ಆರ್ಥಿಕ ಸಂಬಂಧಗಳು ಹಾಗೂ ಕಟ್ಟುನಿಟ್ಟಾದ ವಲಸೆ ಮತ್ತು ಆಶ್ರಯ ನೀತಿಗಳು ವಾದವಿವಾದಗಳಿಗೆ ಕಾರಣವಾದವು.[೨೦] ಯುದ್ದ ಸಮಯದಲ್ಲಿ , ಸ್ವಿಸ್ ವಾಯುದಳವು ಎರಡೂ ಪಡೆಗಳ ಯುದ್ಧವಿಮಾನಗಳೊಂದಿಗೆ ಹೋರಾಟ ನಡೆಸಿತಲ್ಲದೇ 11 ಒಳನುಗ್ಗುತ್ತಿದ್ದ ಲುಫ್ಟ್‌ವಾಫ್ಫೆ ವಿಮಾನಗಳನ್ನು 1940ರ ಮೇ ಮತ್ತು ಜೂನ್‌ನಲ್ಲಿ ಹೊಡೆದುರುಳಿಸಿತು. ಜರ್ಮನಿಯಿಂದ ಯುದ್ಧ ಬೆದರಿಕೆ ಗ್ರಹಿಸಿದ ನಂತರ ಯುದ್ಧನೀತಿ ಬದಲಾಯಿಸಿ ಇನ್ನಿತರ ಆಕ್ರಮಣಕಾರರನ್ನು ನೆಲಕಚ್ಚಿಸಿತು. ಸಮರದಲ್ಲಿ 100ಕ್ಕೂ ಹೆಚ್ಚಿನ ಮಿತ್ರಪಕ್ಷಗಳ ಬಾಂಬರ್‌ ವಿಮಾನಗಳನ್ನು ಮತ್ತು ಅವುಗಳ ಸಿಬ್ಬಂದಿಯನ್ನು ವಶಪಡಿಸಿಕೊಂಡಿತು. 1944-45ರ ಸಮಯದಲ್ಲಿ, ಮಿತ್ರ ಪಕ್ಷಗಳ ಬಾಂಬರ್‌ ವಿಮಾನಗಳು ಪ್ರಮಾದವಶಾತ್‌ ಸ್ವಿಸ್ ಪಟ್ಟಣಗಳ ಸ್ಕಾಫ್‌ಹಾಸೆನ್‌ ( 40 ಮಂದಿ ಕೊಲ್ಲಲ್ಪಟ್ಟರು ), ಸ್ಟೇನ್‌ ಆಮ್‌ ರೇಯ್ನ್‌, ವಾಲ್ಸ್‌, ರಫ್ಸ್‌‌ (18 ಮಂದಿ ಕೊಲ್ಲಲ್ಪಟ್ಟರು)ಗಳ ಮೇಲೆ ದಾಳಿ ನಡೆಸಿದವು ಮತ್ತು 1945ರ ಮಾರ್ಚ್‌ 4ರಂದು ಬಸೆಲ್‌ ಮತ್ತು ಜ್ಯೂರಿಚ್‌ ಗಳ ಮೇಲೆ ಕುಖ್ಯಾತ ಬಾಂಬ್‌ ದಾಳಿ ನಡೆಯಿತು.

ಜೂರಾ ಕ್ಯಾಂಟನ್‌ನ ಶಸ್ತ್ರಾಸ್ತ್ರಗಳ ಕೋಠಿಯನ್ನು ಸಂಸ್ಥಾನಿಕ ಅರಮನೆಯ ಗೋಪುರದಲ್ಲಿ ಹೊಂದಿಸಿಡಲಾಗಿದೆ. ಬರ್ನ್‌ ಕ್ಯಾಂಟನ್ 1978ರಲ್ಲಿ ಸ್ಥಾಪಿತವಾಗಿದ್ದು, ಇದರ ಪ್ರದೇಶವು ವಿಭಜನೆಯಾಯಿತು, ಮತ್ತು 1979ರಲ್ಲಿ ವ್ಯವಸ್ಥಿತವಾಗಿ ಸ್ವಿಸ್ ಒಕ್ಕೂಟಕ್ಕೆ ಸೇರಿಕೊಂಡಿತು.

1959ರಲ್ಲಿ ಮೊದಲು ಸ್ವಿಸ್‌ ಕ್ಯಾಂಟನ್‌ಗಳಲ್ಲಿ ಮಹಿಳೆಯರು ಮತದಾನದ ಹಕ್ಕು ಪಡೆದರೆ, ಒಕ್ಕೂಟದ ಮಟ್ಟದಲ್ಲಿ 1971[೧೫] ರಲ್ಲಿ ಮತದಾನದ ಅವಕಾಶ ದೊರೆಯಿತು. ವಿರೋಧದ ನಂತರ ಕೊನೆಯ ಕ್ಯಾಂಟನ್‌ ಅಪ್ಪೆನ್‌ಜೆಲ್‌ ಇನ್ನರ್‌ಹೋಡೆನ್‌‌ನಲ್ಲಿ 1990ರಲ್ಲಿ ಈ ಅವಕಾಶ ದೊರೆಯಿತು. ಒಕ್ಕೂಟದ ಮಟ್ಟದಲ್ಲಿ ಮತದಾನದ ಹಕ್ಕು ದೊರೆತ ಮೇಲೆ ಮಹಿಳೆಯರು ರಾಜಕೀಯದಲ್ಲಿ ಬಹಳ ಮಹತ್ವ ಪಡೆಯುವ ಮಟ್ಟಿಗೆ ಬಹುಬೇಗ ಏರಿದರು. ಏಳು ಮಂದಿ ಸದಸ್ಯರ ಒಕ್ಕೂಟ ಕಾರ್ಯಾಂಗದ ಸಮಿತಿಯ ಪ್ರಥಮ ಮಹಿಳಾ ಸದಸ್ಯೆಯಾಗಿ ಎಲಿಜಬೆತ್‌ ಕೊಪ್‌ ಎಂಬಾಕೆ 1987-1989ರವರೆಗೆ ಕಾರ್ಯನಿರ್ವಹಿಸಿದರು.[೧೫] ಪ್ರಥಮ ಅಧ್ಯಕ್ಷೆಯಾಗಿ ರುತ್‌ ಡ್ರೇಫಸ್‌ರು 1999ನೇ ವರ್ಷದ ಅವಧಿಯಲ್ಲಿ ಕಾರ್ಯನಿರ್ವಹಿಸಲು 1998ರಲ್ಲಿ ಚುನಾಯಿತರಾದರು. (ಸ್ವಿಸ್‌ ಅಧ್ಯಕ್ಷರನ್ನು ಪ್ರತಿ ವರ್ಷ ಮೇಲ್ಕಂಡ ಏಳು ಜನ ಸದಸ್ಯರ ಉಚ್ಚ ಸಮಿತಿಯಲ್ಲೊಬ್ಬರನ್ನು ಆಯ್ಕೆ ಮಾಡಲಾಗುತ್ತದೆ, ಹಾಗೂ ಯಾವುದೇ ಅಭ್ಯರ್ಥಿ ಸತತವಾಗಿ ಎರಡು ಅವಧಿಗೆ ಆಯ್ಕೆಯಾಗಲು ಅವಕಾಶವಿರುವುದಿಲ್ಲ). ಎರಡನೇ ಅಧ್ಯಕ್ಷೆಯಾಗಿ 2007ರಲ್ಲಿ ಮಿಷೆಲಿನ್‌ ಕಾಲ್ಮಿ-ರೇ ಎಂಬಾಕೆ ಉಚ್ಚ ಹುದ್ದೆಯನ್ನೇರಿದರು. ಆಕೆ ಫ್ರೆಂಚ್‌ ಭಾಷಿಕ ಕ್ಯಾಂಟನ್‌ ಆದ (ಜೆನ್‌ಫ್‌ ಎಂದು ಜರ್ಮನ್‌‌ ಭಾಷೆಯಲ್ಲಿ, ಜಿನರ್ವಾ ಎಂದು ಇಟಾಲಿಯನ್‌ ಭಾಷೆಯಲ್ಲಿ ಕರೆಯಲಾಗುವ) ಜೆನೆವ್‌ನ ಪಶ್ಚಿಮ ಭಾಗದ ಮೂಲದವರು. ಆಕೆ ಪ್ರಸ್ತುತ ಏಳು ಜನ ಸದಸ್ಯರ ಸಚಿವ ಸಂಪುಟ/ಉಚ್ಚ ಸಮಿತಿಯಲ್ಲಿ ತನ್ನ ಸಹೋದ್ಯೋಗಿಗಳಾಗಿ ಇನ್ನಿಬ್ಬರು ಮಹಿಳೆಯರನ್ನು ಎಂದರೆ, ಆರ್ಗಾವ್‌ ಕ್ಯಾಂಟನ್‌ನ ಡೋರಿಸ್‌ ಲ್ಯೂಥರ್ಡ್‌ ಹಾಗೂ ಗ್ರಾವುಬುಂಡೆನ್‌ ಕ್ಯಾಂಟನ್‌ನ ಎವೆಲಿನ್‌ ವಿಡ್ಮರ್‌-ಷ್ಲುಂಫ್‌ರನ್ನು ಹೊಂದಿದ್ದಾರೆ.

ಸ್ವಿಟ್ಜರ್ಲೆಂಡ್‌ ಯೂರೋಪ್‌ ಆಡಳಿತ ಮಂಡಲಿಗೆ 1963ರಲ್ಲಿ ಸೇರ್ಪಡೆಯಾಯಿತು. ಬರ್ನ್‌ ಕ್ಯಾಂಟನ್‌ನ ಕೆಲ ಪ್ರದೇಶಗಳು ಬರ್ನ್‌ ಜನರಿಂದ ಸ್ವಾತಂತ್ರ್ಯ ಪಡೆದು ಜ್ಯೂರಾ ಕ್ಯಾಂಟನ್‌‌ ಎಂಬ ಹೊಸದೊಂದು ಕ್ಯಾಂಟನ್‌‌ನ್ನು 1979ರಲ್ಲಿ ರಚಿಸಿಕೊಂಡವು. 1999ರ ಏಪ್ರಿಲ್‌ 18ರಂದು ಜನಸಮುದಾಯ ಹಾಗೂ ಕ್ಯಾಂಟನ್‌ಗಳು ಸಂಪೂರ್ಣ ಪರಿಷ್ಕರಿಸಿದ ಒಕ್ಕೂಟ ಸಂವಿಧಾನವನ್ನು ರಚಿಸಲು ಬೆಂಬಲಿಸಿದವು.[೧೫]

2002ರ ರಾಷ್ಟ್ರೀಯ ಪ್ರದರ್ಶನ

2002ರಲ್ಲಿ ಸ್ವಿಟ್ಜರ್ಲೆಂಡ್‌ ಸಂಯುಕ್ತ ರಾಷ್ಟ್ರ ಸಂಘದ ಪೂರ್ಣ ಪ್ರಮಾಣದ ಸದಸ್ಯರಾಷ್ಟ್ರವಾಯಿತು. ಇದರಿಂದಾಗಿ ವ್ಯಾಟಿಕನ್‌ ಮಾತ್ರವೇ ಹೆಚ್ಚು ಮಾನ್ಯತೆಯನ್ನೂ ಹೊಂದಿದ್ದೂ ಸಂಯುಕ್ತ ರಾಷ್ಟ್ರ ಸಂಘದ ಸಂಪೂರ್ಣ ಸದಸ್ಯತ್ವ ಹೊಂದಿರದ ಕೊನೆಯ ರಾಷ್ಟ್ರವಾಗಿ ಉಳಿಯಿತು. ಸ್ವಿಟ್ಜರ್ಲೆಂಡ್‌ EFTAನ ಸ್ಥಾಪಕ ಸದಸ್ಯ ರಾಷ್ಟ್ರವಾಗಿದ್ದು, ಐರೋಪ್ಯ ಆರ್ಥಿಕ ವಲಯದ ಸದಸ್ಯತೆಯನ್ನು ಹೊಂದಿಲ್ಲ. ಐರೋಪ್ಯ ಒಕ್ಕೂಟದ ಸದಸ್ಯತ್ವ ಪಡೆಯಲು 1992ರ ಮೇ ತಿಂಗಳಿನಲ್ಲಿ ಅರ್ಜಿಯನ್ನು ಕಳಿಸಲಾಗಿತ್ತಾದರೂ, ಡಿಸೆಂಬರ್‌ 1992[೧೫] ರಲ್ಲಿ EEAಯು ತಿರಸ್ಕೃತವಾದಾಗಿನಿಂದ ಈ ಕಾರ್ಯ ಮುಂದುವರೆಸಲಾಗಿಲ್ಲ. ಸ್ವಿಟ್ಜರ್ಲೆಂಡ್‌ EEAಯ ಬಗ್ಗೆ ಜನಾಭಿಪ್ರಾಯ ಕೇಳಿದ ಏಕೈಕ ರಾಷ್ಟ್ರವಾಗಿದೆ. ಆಗಿನಿಂದ ಬಹಳಷ್ಟು ಬಾರಿ EU ವಿಷಯದಲ್ಲಿ ಸಾಕಷ್ಟು ಜನಾಭಿಪ್ರಾಯ ಸಂಗ್ರಹಣೆ ನಡೆಯಿತಾದರೂ ಜನಸಮುದಾಯದಿಂದ ಈ ಬಗ್ಗೆ ಸಮ್ಮಿಶ್ರ ಅಭಿಪ್ರಾಯ ವ್ಯಕ್ತವಾದುದರಿಂದ ಈ ಸದಸ್ಯತ್ವ ಅರ್ಜಿಯು ಸ್ಥಗಿತಗೊಂಡಿದೆ. ಆದಾಗ್ಯೂ ಸ್ಥಳೀಯ ಶಾಸನವು EUಗೆ ಹೊಂದಾಣಿಕೆಯಾಗುವ ಹಾಗೆ ಬಹಳಷ್ಟು ಹೊಂದಾಣಿಕೆಗಳನ್ನು ಮಾಡಿರುವುದಲ್ಲದೇ ಐರೋಪ್ಯ ಒಕ್ಕೂಟದ ಜೊತೆ ಅನೇಕ ದ್ವಿಪಕ್ಷೀಯ ಒಡಂಬಡಿಕೆಗಳನ್ನು ಮಾಡಿಕೊಂಡಿದೆ. ಸ್ವಿಟ್ಜರ್ಲೆಂಡ್‌ ಮತ್ತು ಲೀಚ್‌ಟೆನ್‌ಸ್ಟೀನ್‌ಗಳು 1995ರಲ್ಲಿ ಇದರ ಸದಸ್ಯತ್ವವನ್ನು ಆಸ್ಟ್ರಿಯಾ ಪಡೆದ ನಂತರ ಸಂಪೂರ್ಣವಾಗಿ EU ಸದಸ್ಯರಿಂದ ಸುತ್ತುವರೆಯಲ್ಪಟ್ಟಿದೆ. 2005ರ ಜೂನ್‌ 5ರಂದು ಷೆಂಗೆನ್‌ ಒಪ್ಪಂದಕ್ಕೆ ಸಹಿ ಹಾಕಲು 55% ಬಹುಮತದೊಂದಿಗೆ ಮತದಾರರು ಸಮ್ಮತಿ ನೀಡಿದರು. ಇದನ್ನು EU ಟೀಕಾಕಾರರು ಈ ಒಪ್ಪಂದಕ್ಕೆ, ಪಾರಂಪರಿಕವಾಗಿ ಸಾರ್ವಭೌಮತ್ವದ ಅಥವಾ ಪ್ರತ್ಯೇಕತೆಯ ಪ್ರತೀಕ ಎಂದು ಗ್ರಹಿಸಲಾಗಿದ್ದ ಸ್ವಿಟ್ಜರ್ಲೆಂಡ್‌ನ ಬೆಂಬಲವಿದೆ ಎಂಬುದರ ಸಂಕೇತವಿದು ಎಂದು ಪರಿಗಣಿಸಿದ್ದಾರೆ.

ರಾಜಕೀಯ

[ಬದಲಾಯಿಸಿ]
೨೦೦೯ರಲ್ಲಿ ಸ್ವಿಸ್ ಒಕ್ಕೂಟ ಸಮಿತಿ. ಎಡದಿಂದ ಬಲಕ್ಕೆ: ಒಕ್ಕೂಟ ಶಾಸಕರಾದ ಮಾರೆರ್‌‌, ಮಿಷೆಲಿನ್‌ ಕಾಲ್ಮಿ-ರೇ, ಮೊರಿಟ್ಜ್ ಲ್ಯುಎನ್‌ಬರ್ಜರ್, ಅಧ್ಯಕ್ಷ ಹಾನ್ಸ್‌-ರುಡಾಲ್ಫ್‌ ಮರ್ಜ್‌, ಒಕ್ಕೂಟ ಶಾಸಕ ಡೋರಿಸ್‌ ಲ್ಯೂಥರ್ಡ್‌ (ಉಪಾಧ್ಯಕ್ಷ), ಒಕ್ಕೂಟ ಶಾಸಕ ಪ್ಯಾಸ್ಕಲ್ ಕಷೆಪನ್‌, ಮತ್ತು ಒಕ್ಕೂಟ ಶಾಸಕ ಎವೆಲಿನ್‌ ವಿಡ್ಮರ್‌-ಷ್ಲುಂಫ್‌. ಒಕ್ಕೂಟ ಅಧ್ಯಕ್ಷ ಕೊರಿನ ಕ್ಯಾಸನೋವ ಚಿತ್ರದಲ್ಲಿ ಬಲಭಾಗದ ಅಂಚಿನಲ್ಲಿದ್ದಾರೆ.

1848ರಲ್ಲಿ ಅಂಗೀಕೃತವಾದ ಒಕ್ಕೂಟ ಸಂವಿಧಾನವು ಆಧುನಿಕ ಒಕ್ಕೂಟ ರಾಷ್ಟ್ರದ ಕಲ್ಪನೆಯ ಶಾಸನಾಧಾರ ಮೂಲವಾಗಿತ್ತು. ಇದು ವಿಶ್ವದ ಹಳೆಯ ಒಕ್ಕೂಟ ವ್ಯವಸ್ಥೆಗಳಲ್ಲಿ ಎರಡನೆಯದಾಗಿದೆ.[೨೧] 1999ರಲ್ಲಿ ಹೊಸ ಸಂವಿಧಾನವನ್ನು ಅಳವಡಿಸಲಾಯಿತಾದರೂ, ಅದು ಒಕ್ಕೂಟ ವ್ಯವಸ್ಥೆಗೆ ಸಂಬಂಧಿಸಿದಂತೆ ಯಾವುದೇ ಗಮನಾರ್ಹ ಬದಲಾವಣೆಗಳನ್ನು ಹೊಂದಿಲ್ಲ. ಇದು ವ್ಯಕ್ತಿಗತವಾಗಿ ಪ್ರಜೆಗಳ ರಾಜಕೀಯ ಮತ್ತು ಮೂಲಭೂತ ಹಕ್ಕುಗಳನ್ನು ಹಾಗೂ ಸಾರ್ವಜನಿಕ ವ್ಯವಹಾರಗಳಲ್ಲಿ ನಾಗರಿಕರ ಭಾಗವಹಿಸುವಿಕೆಗೆ ಸಂಬಂಧಪಟ್ಟಂತೆ ನೀತಿನಿಯಮಗಳ ಮುಖ್ಯಾಂಶಗಳನ್ನೊಳಗೊಂಡಿತ್ತು. ಇಷ್ಟೇ ಅಲ್ಲದೇ ಒಕ್ಕೂಟ ಮತ್ತು ಕ್ಯಾಂಟನ್‌ಗಳ ನಡುವೆ ಅಧಿಕಾರವನ್ನು ಹಂಚುವುದರೊಂದಿಗೆ ಒಕ್ಕೂಟದ ನ್ಯಾಯ ವ್ಯಾಪ್ತಿ ಹಾಗೂ ಅಧಿಕಾರ ವ್ಯಾಪ್ತಿಯನ್ನು ನಿಗದಿಪಡಿಸಿತು. ಒಕ್ಕೂಟದ ಹಂತದಲ್ಲಿ ಮೂರು ಆಡಳಿತ ಮಂಡಳಿಗಳಿದ್ದವು. ಅವೆಂದರೆ :[೨೨] ಉಭಯ ಸದನಗಳ ಸಂಸತ್ತು (ಶಾಸಕಾಂಗ), ಒಕ್ಕೂಟ ಸಮಿತಿ (ಕಾರ್ಯಾಂಗ) ಮತ್ತು ಒಕ್ಕೂಟ ನ್ಯಾಯಮಂಡಳಿ (ನ್ಯಾಯಾಂಗ).

ಬರ್ನ್‌ನಲ್ಲಿರುವ ಸ್ವಿಟ್ಜರ್ಲೆಂಡ್‌‌ನ ಸಂಯುಕ್ತ ಸಂಸತ್ತು‌ (ಒಕ್ಕೂಟ ಸಂಸತ್ತು) ಮತ್ತು ಸ್ವಿಸ್ ಒಕ್ಕೂಟ ಸಮಿತಿ(ಕಾರ್ಯಾಂಗ) ಇರುವ ಕಟ್ಟಡವನ್ನು ಒಕ್ಕೂಟ ಅರಮನೆ ಎಂದು ಕರೆಯುತ್ತಾರೆ.

ಸ್ವಿಸ್ ಸಂಸತ್ತು ಎರಡು ಸಭೆಗಳನ್ನು ಹೊಂದಿದೆ : ಪ್ರತಿ ಕ್ಯಾಂಟನ್ ನಿಗದಿಪಡಿಸಿದ ವ್ಯವಸ್ಥೆಯಂತೆ ಆಯ್ಕೆಯಾಗಿರುವ 46 ಪ್ರತಿನಿಧಿಗಳನ್ನೊಳಗೊಂಡಿರುವ (ಪ್ರತಿ ಕ್ಯಾಂಟನ್‌ನಿಂದ ಇಬ್ಬರು ಮತ್ತು ಪ್ರತಿ ಅರೆ-ಕ್ಯಾಂಟನ್‌ನಿಂದ ಒಬ್ಬರು ಸೇರಿದಂತೆ) ಸಂಸ್ಥಾನಗಳ ಸಮಿತಿ, ಮತ್ತು ಪ್ರತಿ ಕ್ಯಾಂಟನ್‌‌ನ ಜನಸಂಖ್ಯೆಯ ಮೇಲೆ ಆಧಾರಿತವಾಗಿ ಅನುಪಾತಾಧರಿತ ಪ್ರತಿನಿಧಿತ್ವದ ಮೂಲಕ ಆಯ್ಕೆಯಾದ 200 ಸದಸ್ಯರನ್ನು ಹೊಂದಿರುವ ರಾಷ್ಟ್ರೀಯ ಸಮಿತಿಯನ್ನು ಹೊಂದಿದೆ. ಎರಡೂ ಸಭೆಗಳ ಸದಸ್ಯರು 4 ವರ್ಷಗಳ ಅವಧಿಯನ್ನು ಹೊಂದಿರುತ್ತಾರೆ. ಎರಡೂ ಸಭೆಗಳು ಜಂಟಿ ಅಧಿವೇಶನವನ್ನು ನಡೆಸುವ ಸಂದರ್ಭದಲ್ಲಿ, ಆ ಸಭೆಗಳನ್ನು ಒಟ್ಟಿಗೆ ಒಕ್ಕೂಟ ಶಾಸನ ಸಭೆ ಎಂದು ಕರೆಯಲಾಗುತ್ತದೆ. ಜನಾಭಿಪ್ರಾಯ ಸಂಗ್ರಹಣೆಗಳ ಮೂಲಕ, ನಾಗರಿಕರು ಸಂಸತ್ತು ಅಂಗೀಕರಿಸಿದ ಯಾವುದೇ ಮಸೂದೆಯ ಬಗ್ಗೆ ಆಕ್ಷೇಪಣೆ ಸಲ್ಲಿಸಬಹುದಾಗಿದ್ದು, ಮತ್ತು ಶಾಸನಹಕ್ಕುಗಳ ಮೂಲಕ ಒಕ್ಕೂಟ ಸಂವಿಧಾನಕ್ಕೆ ತಿದ್ದುಪಡಿಗಳನ್ನು ಮಾಡುವಂತೆ ಕೋರಬಹುದು. ಇದರಿಂದಾಗಿ ಸ್ವಿಟ್ಜರ್ಲೆಂಡ್‌‌ ನೇರ ಪ್ರಜಾ ಪ್ರಭುತ್ವವನ್ನು ಹೊಂದಿರುವ ರಾಷ್ಟ್ರವೆನ್ನಬಹುದಾಗಿದೆ.[೨೧] ಒಕ್ಕೂಟ ಸಮಿತಿಯು ಒಕ್ಕೂಟ ಸರ್ಕಾರವನ್ನು ರಚಿಸುವುದಲ್ಲದೇ, ಒಕ್ಕೂಟ ಆಡಳಿತವನ್ನು ನಿರ್ದೇಶಿಸುತ್ತದೆ. ಇದರಿಂದಾಗಿ ಒಕ್ಕೂಟದ ವ್ಯವಸ್ಥೆಯ ನೇತಾರನಾಗಿ ಕಾರ್ಯನಿರ್ವಹಿಸುತ್ತದೆ. ಈ ಸಮಿತಿಯು ಒಕ್ಕೂಟ ಶಾಸನಸಭೆಯಿಂದ ನಾಲ್ಕು ವರ್ಷ ಅವಧಿಗೆ ಚುನಾಯಿತರಾದ ಏಳು ಮಂದಿ ಸಹೋದ್ಯೋಗಿಗಳನ್ನು ಹೊಂದಿರುವ ಸಮಿತಿಯಾಗಿದೆ. ಈ ಸಮಿತಿಯ ಕಾರ್ಯವೈಖರಿಯ ಮೇಲೆ ಶಾಸನಸಭೆಯು ಮೇಲ್ವಿಚಾರಣೆ ನಡೆಸುತ್ತದೆ. ಈ ಏಳು ಮಂದಿ ಸದಸ್ಯರಲ್ಲಿ ಒಬ್ಬರನ್ನು ಒಕ್ಕೂಟದ ಅಧ್ಯಕ್ಷರನ್ನಾಗಿ ಶಾಸನಸಭೆಯು ಆಯ್ಕೆ ಮಾಡುತ್ತದೆ. ಇದು ಸಾಂಪ್ರದಾಯಿಕವಾಗಿ ವಾರ್ಷಿಕವಾಗಿ ಆವರ್ತನದಲ್ಲಿ ಆಯ್ಕೆ ಮಾಡಲಾಗುತ್ತದೆ; ಅಧ್ಯಕ್ಷರು ಸರ್ಕಾರದ ನೇತೃತ್ವವನ್ನು ವಹಿಸಿಕೊಳ್ಳುವುದಲ್ಲದೇ, ಪ್ರಾತಿನಿಧಿಕ ಕಾರ್ಯಗಳನ್ನು ನಡೆಸುತ್ತಾರೆ. ಆದರೂ ಅಧ್ಯಕ್ಷರು ಯಾವುದೇ ಹೆಚ್ಚಿನ ಅಧಿಕಾರವಿಲ್ಲದೆಯೇ ಹಿರಿಯ ಸಹೋದ್ಯೋಗಿಯಾಗಿದ್ದುಕೊಂಡು, ಆಡಳಿತ ಮಂಡಳಿಯಲ್ಲಿ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಾರೆ.[೨೧] 1959ರಿಂದ ಸ್ವಿಸ್ ಸರಕಾರವು ನಾಲ್ಕು ಪ್ರಮುಖ ರಾಜಕೀಯ ಪಕ್ಷಗಳ ಸಂಯೋಜನೆಯಾಗಿದ್ದು, ಮತದಾರ ಸಮುದಾಯದ ಬಲವನ್ನು ಮತ್ತು ಒಕ್ಕೂಟ ಸಂಸತ್ತನ್ನು ಪ್ರತಿನಿಧಿತ್ವದ ಮೇಲೆ ಅವಲಂಬಿತವಾಗಿ ಪ್ರತಿ ಪಕ್ಷವು ಸ್ಥಾನಗಳನ್ನು ಪಡೆಯುತ್ತದೆ. 1959ರಿಂದ 2003ರವರೆಗೆ ಅಸ್ತಿತ್ವದಲ್ಲಿದ್ದ ಸಾಂಪ್ರದಾಯಿಕ ಹಂಚಿಕೆಯಾದ 2 ಸ್ಥಾನಗಳು CVP/PDCಗೆ, 2 ಸ್ಥಾನಗಳು SPS/PSSಗೆ, 2 ಸ್ಥಾನಗಳು FDP/PRDಗೆ ಮತ್ತು 1 ಸ್ಥಾನ SVP/UDCಕ್ಕೆ ನೀಡುವ ವ್ಯವಸ್ಥೆಯು "ಮಾಂತ್ರಿಕ ಸೂತ್ರ"ವೆಂಬ ಹೆಸರಿಂದ ಬಳಕೆಯಲ್ಲಿದೆ. 2007ರ ಒಕ್ಕೂಟ ಸಮಿತಿ ಚುನಾವಣೆಗಳಲ್ಲಿ ಒಕ್ಕೂಟ ಸಮಿತಿಯ ಏಳು ಸ್ಥಾನಗಳು ಕೆಳಕಂಡಂತೆ ಹಂಚಿಕೆಯಾದವು :

ಸಮಾಜವಾದಿ ಪ್ರಜಾಪ್ರಭುತ್ವವಾದಿಗಳಿಗೆ (SPS/PSS) 2 ಸ್ಥಾನಗಳು,
ಉದಾರವಾದಿ ಪ್ರಜಾಪ್ರಭುತ್ವವಾದಿಗಳಿಗೆ (FDP/PRD) 2 ಸ್ಥಾನಗಳು,
ಸ್ವಿಸ್ ಪೀಪಲ್ಸ್‌ ಪಾರ್ಟಿಗೆ (SVP/UDC) 2 ಸ್ಥಾನಗಳು,[೨೩]
ಕ್ರೈಸ್ತ ಪ್ರಜಾಪ್ರಭುತ್ವವಾದಿಗಳಿಗೆ (CVP/PDC) 1 ಸ್ಥಾನ.

ಒಕ್ಕೂಟದ ಸರ್ವೋಚ್ಚ ನ್ಯಾಯಾಲಯವು ಇತರೆ ಒಕ್ಕೂಟ ನ್ಯಾಯಾಲಯಗಳ ಹಾಗೂ ಕ್ಯಾಂಟನ್‌ ನ್ಯಾಯಾಲಯಗಳ ತೀರ್ಪುಗಳ ಮೇಲೆ ಸಲ್ಲಿಸಲಾಗುವ ಮೇಲ್ಮನವಿಗಳನ್ನು ಮಾತ್ರ ಪರಿಶೀಲಿಸುತ್ತದೆ. ನ್ಯಾಯಾಧೀಶರು ಒಕ್ಕೂಟ ಶಾಸನಸಭೆಯಿಂದ ಆರು ವರ್ಷಗಳ ಅವಧಿಗೆ ಚುನಾಯಿತರಾಗುತ್ತಾರೆ.

ನೇರ ಪ್ರಜಾಪ್ರಭುತ್ವ

[ಬದಲಾಯಿಸಿ]
ಲೆಂಡ್ಸ್‌ಜೆಮಿನೈಡ್‌ ಎಂಬುದು ಹಳೆ ರೀತಿಯ ನೇರ ಪ್ರಜಾಪ್ರಭುತ್ವ. ಈಗಲೂ ಎರಡು ಕ್ಯಾಂಟನ್‌ಗಳಲ್ಲಿ ಆಚರಣೆಯಲ್ಲಿದೆ

ಸ್ವಿಸ್ ನಾಗರೀಕರು ಮೂರು ಹಂತದ ಕಾನೂನುಗಳ ವ್ಯಾಪ್ತಿಗೆ ಒಳಪಡುತ್ತಾರೆ : ಅವೆಂದರೆ ಪಂಗಡ, ಕ್ಯಾಂಟನ್ ಮತ್ತು ಒಕ್ಕೂಟ ಹಂತಗಳು. 1848ರ ಒಕ್ಕೂಟ ಸಂವಿಧಾನವು ನೇರ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ನಿರೂಪಿಸಿದೆ (ಸಂಸದೀಯ ಪ್ರಜಾಪ್ರಭುತ್ವ ಸಂಸ್ಥೆಗಳೂ ಇದರ ಭಾಗವಾದುದರಿಂದ ಕೆಲವೊಮ್ಮೆ ಅರೆ-ನೇರ ಅಥವಾ ಪ್ರಾತಿನಿಧಿಕ ನೇರ ಪ್ರಜಾಪ್ರಭುತ್ವವೆಂದೂ ಕರೆಯಲ್ಪಡುತ್ತದೆ). ಪೌರ ಹಕ್ಕುಗಳೆಂದು ಕರೆಯಲಾಗುವ ಒಕ್ಕೂಟದ ಮಟ್ಟದಲ್ಲಿ ಸ್ವಿಸ್ ನೇರ ಪ್ರಜಾಪ್ರಭುತ್ವದ ದಸ್ತೈವಜುಗಳು, (ವೊಲ್ಕ್ಸರೆಚ್ಟ್‌ , ಡ್ರಾಯಿಟ್ಸ್‌ ಸಿವಿಕ್ಸ್‌ ), ಸಂವಿಧಾನಾತ್ಮಕ ಶಾಸನಹಕ್ಕು ಗಳನ್ನು ಚಲಾಯಿಸುವ ಮತ್ತು ಜನಾಭಿಪ್ರಾಯ ಸಂಗ್ರಹಣೆಯನ್ನು ದಾಖಲಿಸುವ ಹಕ್ಕುಗಳನ್ನು ನೀಡುತ್ತವೆ, ಇವೆರಡೂ ಸಾಂವಿಧಾನಿಕ ನಿರ್ಣಯಗಳನ್ನು ಬದಲಿಸಬಹುದಾಗಿರುತ್ತವೆ.[೨೧] ನಾಗರೀಕರ ಗುಂಪೊಂದು ಒಕ್ಕೂಟದ ಜನಾಭಿಪ್ರಾಯ ಸಂಗ್ರಹಣೆ ಯ ಮೂಲಕ ಸಂಸತ್ತು ಅಂಗೀಕರಿಸಿದ ಶಾಸನವೊಂದನ್ನು ಅದು ಅಂಗೀಕೃತವಾದ 100 ದಿನಗಳೊಳಗೆ ವಿರೋಧಿಸುವ 50,000 ಮಂದಿಯ ಸಹಿಯನ್ನು ಪಡೆಯುವ ಮೂಲಕ ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿರುತ್ತದೆ. ಹಾಗಿದ್ದ ಪಕ್ಷದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಮತ ಚಲಾವಣೆಯನ್ನು ನಡೆಸಿ ಸರಳ ಬಹುಮತದ ಮೂಲಕ ಮತದಾರರು ಶಾಸನಕ್ಕೆ ಅಂಗೀಕಾರ ಇಲ್ಲವೇ ತಿರಸ್ಕಾರ ಸೂಚಿಸಬಹುದಾಗಿರುತ್ತದೆ. ಯಾವುದೇ ಎಂಟು ಕ್ಯಾಂಟನ್‌ಗಳು ಒಕ್ಕೂಟ ಶಾಸನದ ವಿರುದ್ಧ ಒಟ್ಟಿಗೆ ಜನಾಭಿಪ್ರಾಯ ಕೋರುವ ಸೌಲಭ್ಯ ಸಹಾ ಇದೆ.[೨೧]

ಇದೇ ಮಾದರಿಯಲ್ಲಿ, ನಾಗರಿಕರಿಗೆ ಒಕ್ಕೂಟದ ಸಂವಿಧಾನಾತ್ಮಕ ಹಕ್ಕು ಗಳು ನೀಡುವ ಸೌಲಭ್ಯದ ಮುಖಾಂತರ 18 ತಿಂಗಳುಗಳೊಳಗೆ 100,000 ಮತದಾರರ ಸಹಿ ಪಡೆದುಕೊಂಡು ಪ್ರಸ್ತಾಪಿತ ಸಂವಿಧಾನಾತ್ಮಕ ತಿದ್ದುಪಡಿಗಳನ್ನೂ ಸಹಾ ರಾಷ್ಟ್ರೀಯ ಮತದಾನಕ್ಕೆ ಹಾಕಬಹುದಾಗಿದೆ.[೨೪] ಸಂಸತ್ತು ಹೀಗೆ ಪ್ರಸ್ತಾಪಿಸಿದ ತಿದ್ದುಪಡಿಗೆ ಪೂರಕ ಪ್ರತಿ-ಪ್ರಸ್ತಾವನೆಯನ್ನು ಸಲ್ಲಿಸಬಹುದಾಗಿದ್ದು, ನಂತರ ಚುನಾವಣೆಯಲ್ಲಿ ಎರಡೂ ಪ್ರಸ್ತಾವಗಳು ಅಂಗೀಕೃತವಾದರೆ ಮತದಾರರು ತಮ್ಮ ಆದ್ಯತೆಯನ್ನು ತಿಳಿಸಬೇಕಾಗಿರುತ್ತದೆ. ಶಾಸನ ಹಕ್ಕುಗಳ ಮೂಲಕ ಇಲ್ಲವೇ ಸಂಸತ್ತಿನ ಮೂಲಕ ಆದ ಸಂವಿಧಾನಾತ್ಮಕ ತಿದ್ದುಪಡಿಗಳು, ರಾಷ್ಟ್ರೀಯ ಜನಪ್ರಿಯತೆಯ ಮತ ಹಾಗೂ ಕ್ಯಾಂಟನ್‌ಗಳ ಆಂತರಿಕ ಮತಗಳೆರಡರಲ್ಲೂ ಉಭಯ ಬಹುಮತ ಪಡೆಯುವುದು ಕಡ್ಡಾಯ.[೨೫][೨೬][೨೭][೨೮]

ಕ್ಯಾಂಟನ್‌ಗಳು

[ಬದಲಾಯಿಸಿ]

ಸ್ವಿಸ್ ಒಕ್ಕೂಟ 26 ಕ್ಯಾಂಟನ್‌ಗಳನ್ನು ಹೊಂದಿದೆ:[೨೧]

align=center style="background:#f0f0f0;" | || align=left style="background:#f0f0f0;" |*ಬಸೆಲ್‌ -ನಗರ || align=left| ಬಸೆಲ್‌ || align=center style="background:#f0f0f0;" | || align=left style="background:#f0f0f0;" | ಸ್ಕ್ವಿಜ್‌ || align=left| ಸ್ಕ್ವಿಜ್‌
ಕ್ಯಾಂಟನ್ ರಾಜಧಾನಿ ಕ್ಯಾಂಟನ್ ರಾಜಧಾನಿ
ಆರ್ಗಾವ್‌ ಆರಾವ್‌ *ನಿಡ್‌ವಾಲ್ಡೆನ್‌ ಸ್ಟ್ಯಾನ್‌ಗಳು
*ಅಪ್ಪೆನ್‌ಜೆಲ್‌ ಆಸ್ಸರ್‌ಹೋಡೆನ್‌ ಹೆರಿಸಾವ್‌ *ಓಬ್‌ವಾಲ್ಡೆನ್‌ ಸಾರ್ನೆನ್‌
*ಅಪ್ಪೆನ್‌ಜೆಲ್‌ ಇನ್ನರ್‌ಹೋಡೆನ್‌ ಅಪ್ಪೆನ್‌ಜೆಲ್‌ ಸ್ಕಾಫ್‌ಹಾಸೆನ್‌ ಸ್ಕಾಫ್‌ಹಾಸೆನ್‌
*ಗ್ರಾಮೀಣ-ಬಸೆಲ್‌ ಲೀಸ್ಟಲ್‌ ಸೋಲೋಥರ್ನ್‌ ಸೋಲೋಥರ್ನ್‌
ಬರ್ನ್‌ ಬರ್ನ್‌ ಸೇಂಟ್‌ ಗ್ಯಾಲೆನ್‌ ಸೇಂಟ್‌ ಗ್ಯಾಲೆನ್‌
ಫ್ರೈಬೋರ್ಗ್‌ ಫ್ರೈಬೋರ್ಗ್‌ ಥುರ್ಗೌ ಫ್ರಾನ್‌ಫೆಲ್ಡ್‌
ಜಿನೀವಾ ಜಿನೀವಾ ಟಿಕಿನೊ ಬೆಲ್ಲಿನ್‌ಜೋನಾ
ಗ್ಲೇರಸ್‌ ಗ್ಲೇರಸ್‌ ಯೂರಿ ಆಲ್ಟ್‌ಡಾರ್ಫ್‌
ಗ್ರಾವುಬುಂಡೆನ್‌ ಛುರ್‌ ವಲಾಯಿಸ್‌ ಸಿಯಾನ್‌
ಜ್ಯೂರಾ ಡೆಲೆಮಾಂಟ್‌ ವಾಡ್‌‌ ಲಾಸನ್ನೆ
ಲ್ಯೂಸರ್ನೆ ಲ್ಯೂಸರ್ನೆ ಝುಗ್‌ ಝುಗ್‌
ನ್ಯೂಚಾಟೆಲ್‌ ನ್ಯೂಚಾಟೆಲ್‌ ಜ್ಯೂರಿಚ್‌ ಜ್ಯೂರಿಚ್‌

* ಸಂಸ್ಥಾನಗಳ ಆಡಳಿತ ಮಂಡಳಿಯಲ್ಲಿ ಅರೆ ಕ್ಯಾಂಟನ್‌ಗಳನ್ನು ಓರ್ವ ಶಾಸಕ (ಇಬ್ಬರ ಬದಲಿಗೆ) ಮಾತ್ರವೇ ಪ್ರತಿನಿಧಿಸುತ್ತಾರೆ (ಸಾಂಪ್ರದಾಯಿಕ ಅರೆ-ಕ್ಯಾಂಟನ್‌ಗಳನ್ನು ನೋಡಿ). ಅವುಗಳ ಜನಸಂಖ್ಯೆಯು 15,000ದಿಂದ (ಅಪ್ಪೆನ್‌ಜೆಲ್‌ ಇನ್ನರ್‌ಹೋಡೆನ್‌) 1,253,500ದ ವರೆಗೆ ವ್ಯತ್ಯಾಸವಾಗಿದ್ದರೆ (ಜ್ಯೂರಿಚ್‌ ), ಮತ್ತು ಅವುಗಳ ವಿಸ್ತೀರ್ಣ 37 km²ರಿಂದ (ಬಸೆಲ್‌ -ಸ್ಟಾಡ್ಟ್‌) 7,105 km²ವರೆಗೆ (ಗ್ರಾವುಬುಂಡೆನ್‌) ಭಿನ್ನಭಿನ್ನವಾಗಿವೆ. ಕ್ಯಾಂಟನ್‌ಗಳು ಒಟ್ಟು 2,889 ಪೌರಸಂಸ್ಥೆಗಳನ್ನೊಳಗೊಂಡಿವೆ. ಸ್ವಿಟ್ಜರ್ಲೆಂಡ್‌‌ನೊಳಗೇ ಎರಡು ಪರಾಧೀನ ಪ್ರದೇಶಗಳಿವೆ, ಅವುಗಳಲ್ಲಿ : ಬುಸಿಂಗೆನ್‌ ಜರ್ಮನಿಗೆ ಸೇರಿದ್ದರೆ, ಕ್ಯಾಂಪಿಯೋನೆ ಡಿ'ಇಟಾಲಿಯಾ ಇಟಲಿಗೆ ಸೇರಿದೆ. ಆಸ್ಟ್ರಿಯಾದ ರಾಜ್ಯವಾಗಿದ್ದ ವೋರಾರ್ಲ್‌ಬರ್ಗ್‌ನಲ್ಲಿ 1919ರ ಮೇ 11ರಂದು ನಡೆದ ಜನಾಭಿಪ್ರಾಯ ಸಂಗ್ರಹಣೆಯಲ್ಲಿ 80%ಗೂ ಮಿಕ್ಕಿದ ಜನರು ತಮ್ಮ ರಾಜ್ಯವನ್ನು ಸ್ವಿಸ್ ಒಕ್ಕೂಟಕ್ಕೆ ವಿಲೀನಗೊಳಿಸುವುದನ್ನು ಬೆಂಬಲಿಸಿದರು. ಆದರೂ, ಈ ವಿಲೀನವನ್ನು ಆಸ್ಟ್ರಿಯಾ ಸರ್ಕಾರ, ಮಿತ್ರದೇಶಗಳು, ಸ್ವಿಸ್‌ ಉದಾರವಾದಿಗಳು, ಸ್ವಿಸ್-ಇಟಾಲಿಯನ್‌ರು (ಸ್ವಿಟ್ಜರ್ಲೆಂಡ್‌ನ ಇಟಾಲಿಯನ್‌ ಭಾಗದಲ್ಲಿ ವಾಸಿಸುವ ಸ್ವಿಸ್ ದೇಶೀಯರು‌, ನಕ್ಷೆ ಪರಿಶೀಲಿಸಿ) ಮತ್ತು ರೋಮಂಡ್‌ಗಳು (ಸ್ವಿಟ್ಜರ್ಲೆಂಡ್‌ನ ಫ್ರೆಂಚ್‌-ಭಾಷಿಕ ಪ್ರದೇಶಗಳಲ್ಲಿ ವಾಸಿಸುವ ಸ್ವಿಸ್ ದೇಶೀಯರು‌, ನಕ್ಷೆ ಪರಿಶೀಲಿಸಿ) ಮುಂತಾದವರು ತಡೆದರು.[೨೯]

ವಿದೇಶಿ ಸಂಬಂಧಗಳು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು

[ಬದಲಾಯಿಸಿ]

ಸಾಂಪ್ರದಾಯಿಕವಾಗಿ ಸ್ವಿಟ್ಜರ್ಲೆಂಡ್‌‌ ಸೇನಾ, ರಾಜಕೀಯ ಅಥವಾ ನೇರ ಆರ್ಥಿಕ ಕಾರ್ಯಾಚರಣೆಗಳಿಗೆ ಸಂಬಂಧಿಸಬಹುದಾದ ಯಾವುದೇ ಮೈತ್ರಿಗಳಿಂದ ದೂರ ಉಳಿದಿದೆ. 1515ರಲ್ಲಿ ಅದರ ವಿಸ್ತರಣೆಯಾದ ನಂತರದಿಂದ ಅಲಿಪ್ತವಾಗಿ ನಡೆದುಕೊಂಡಿದೆ.[೩೦] ಕೇವಲ 2002ರಲ್ಲಿ ಸ್ವಿಟ್ಜರ್ಲೆಂಡ್‌‌ ಸಂಯುಕ್ತ ರಾಷ್ಟ್ರ ಸಂಘದ ಪೂರ್ಣ ಪ್ರಮಾಣದ ಸದಸ್ಯತ್ವ ಪಡೆಯಿತಾದರೂ,[೩೦] ಈ ರಾಷ್ಟ್ರವು ಜನಾಭಿಪ್ರಾಯದ ಮೂಲಕವಾಗಿ ಸೇರಿದ ಪ್ರಪ್ರಥಮ ರಾಷ್ಟ್ರವಾಗಿತ್ತು. ಸ್ವಿಟ್ಜರ್ಲೆಂಡ್‌‌ ಬಹುಪಾಲು ಎಲ್ಲಾ ರಾಷ್ಟ್ರಗಳೊಂದಿಗೆ ರಾಜತಾಂತ್ರಿಕ ಸಂಬಂಧಗಳನ್ನು ಹೊಂದಿರುವುದಲ್ಲದೇ ಐತಿಹಾಸಿಕವಾಗಿ ಇತರೆ ರಾಷ್ಟ್ರಗಳ ನಡುವೆ ಮಧ್ಯಸ್ಥಿಕೆ ವಹಿಸುತ್ತಾ ಬಂದಿದೆ.[೩೦] ಸ್ವಿಟ್ಜರ್ಲೆಂಡ್‌‌ ಐರೋಪ್ಯ ಒಕ್ಕೂಟದ ಸದಸ್ಯತ್ವ ಪಡೆದಿಲ್ಲ; ಸ್ವಿಸ್ ನಾಗರಿಕರು 1990ರ ದಶಕದ ಪೂರ್ವ ಭಾಗದಿಂದಲೇ ನಿರಂತರವಾಗಿ ತಿರಸ್ಕರಿಸುತ್ತಾ ಬಂದಿದ್ದಾರೆ.[೩೦]

ಅಸಾಧಾರಣ ಸಂಖ್ಯೆಯ ಅಂತರರಾಷ್ಟ್ರೀಯ ಸಂಸ್ಥೆಗಳು, ಭಾಗಶಃ ಈ ರಾಷ್ಟ್ರದ ಅಲಿಪ್ತ ನೀತಿಯ ಕಾರಣದಿಂದ ತಮ್ಮ ಪೀಠಗಳನ್ನು ಸ್ವಿಟ್ಜರ್ಲೆಂಡ್‌‌ನಲ್ಲಿ ಸ್ಥಾಪಿಸಿವೆ. 1863ರಲ್ಲಿ ರೆಡ್‌ ಕ್ರಾಸ್‌ ಸಂಸ್ಥೆಯನ್ನು ಅಲ್ಲಿ ಸ್ಥಾಪಿಸಲಾಯಿತಲ್ಲದೇ ಈಗಲೂ ಅದರ ಸಾಂಘಿಕ ಕೇಂದ್ರವು ಅದೇ ದೇಶದಲ್ಲಿದೆ. ಜಿನೀವಾನಲ್ಲಿ ಐರೋಪ್ಯ ಪ್ರಸರಣಾ ಒಕ್ಕೂಟವು ತನ್ನ ಪ್ರಧಾನ ಕಚೇರಿಯನ್ನು ಹೊಂದಿದೆ. ಸ್ವಿಟ್ಜರ್ಲೆಂಡ್‌‌ ಸಂಯುಕ್ತ ರಾಷ್ಟ್ರ ಸಂಘಕ್ಕೆ ಇತ್ತೀಚೆಗೆ ಸೇರ್ಪಡೆಯಾದರೂ ಸಹಾ, ಜಿನೀವಾ ನಗರವು, ಸಂಯುಕ್ತ ರಾಷ್ಟ್ರ ಸಂಘದ ನ್ಯೂಯಾರ್ಕ್‌ ನಂತರದ ಎರಡನೇ ಅತಿ ದೊಡ್ಡ ಕೇಂದ್ರವಾಗಿದೆ. ಸ್ವಿಟ್ಜರ್ಲೆಂಡ್‌‌ ಲೀಗ್‌ ಆಫ್‌ ನೇಷನ್ಸ್‌‌ನ ಸ್ಥಾಪಕ ಸದಸ್ಯನಾಗಿದೆ. ಸಂಯುಕ್ತ ರಾಷ್ಟ್ರ ಸಂಘದ ಪ್ರಧಾನ ಕೇಂದ್ರವಾಗಿರುವುದಲ್ಲದೇ, ಜಿನೀವಾ ಅನೇಕ UN ಉಪಸಂಸ್ಥೆಗಳ ಕಚೇರಿಗಳನ್ನು ಉದಾಹರಣೆಗೆ ವಿಶ್ವ ಆರೋಗ್ಯ ಸಂಸ್ಥೆ (WHO), ಅಂತರರಾಷ್ಟ್ರೀಯ ದೂರಸಂಪರ್ಕ ಒಕ್ಕೂಟ(ITU) ಮತ್ತು ಇನ್ನಿತರ ಸುಮಾರು 200 ಅಂತರರಾಷ್ಟ್ರೀಯ ಸಂಸ್ಥೆಗಳ ಕಚೇರಿಗಳನ್ನು ಹೊಂದಿದೆ.[೩೦]

ಇಷ್ಟೇ ಅಲ್ಲದೇ ಅನೇಕ ಕ್ರೀಡಾ ಒಕ್ಕೂಟಗಳು ಮತ್ತು ಅಂತರರಾಷ್ಟ್ರೀಯ ಐಸ್‌‌ ಹಾಕಿ ಒಕ್ಕೂಟದಂತಹಾ ಸಂಸ್ಥೆಗಳು ದೇಶದುದ್ದಕ್ಕೂ ತಮ್ಮ ಕಚೇರಿಗಳನ್ನು ಹೊಂದಿವೆ. ಪ್ರಾಯಶಃ ಅವುಗಳಲ್ಲಿ ಪ್ರಮುಖವಾದವೆಂದರೆ ಲಾಸನ್ನೆಯಲ್ಲಿರುವ ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿ, ಜ್ಯೂರಿಚ್‌ನಲ್ಲಿರುವ FIFA (ಅಂತರರಾಷ್ಟ್ರೀಯ ಸಾಂಘಿಕ ಫುಟ್‌ಬಾಲ್‌ ಒಕ್ಕೂಟ), ಮತ್ತು UEFA (ಐರೋಪ್ಯ ಫುಟ್‌ಬಾಲ್‌ ಸಂಘಗಳ ಒಕ್ಕೂಟ).

ವಿಶ್ವ ಆರ್ಥಿಕ ಮಾರುಕಟ್ಟೆ ಪ್ರತಿಷ್ಠಾನವು ಜಿನೀವಾದಲ್ಲಿ ಕೇಂದ್ರವನ್ನು ಹೊಂದಿದೆ. ಡಾವೋಸ್‌ನಲ್ಲಿ ನಡೆಯುವ ವಾರ್ಷಿಕ ಸಭೆಯಿಂದಾಗಿ ಇದು ಹೆಚ್ಚು ಪ್ರಸಿದ್ಧಿಯನ್ನು ಹೊಂದಿದೆ. ಈ ಸಭೆಯಲ್ಲಿ ಪ್ರಮುಖ ಅಂತರರಾಷ್ಟ್ರೀಯ ವ್ಯವಹಾರಗಳನ್ನು ಮತ್ತು ರಾಜಕೀಯ ಧುರೀಣರನ್ನೂ ಒಂದೆಡೆ ಸೇರಿಸಿ ಆರೋಗ್ಯ ಮತ್ತು ಪರಿಸರಗಳೂ ಸೇರಿದಂತೆ, ವಿಶ್ವವು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ನಿವಾರಣೆಗೆಂದು ಪರಿಹಾರವನ್ನು ಚರ್ಚಿಸಲಾಗುತ್ತದೆ.

ಸ್ವಿಸ್ ಶಸ್ತ್ರ ಸನ್ನದ್ಧ ಸೇನಾಪಡೆ

[ಬದಲಾಯಿಸಿ]
ಸ್ವಿಟ್ಜರ್ಲೆಂಡ್‌‌‌ನಲ್ಲಿ F/A-18 ಹಾರ್ನೆಟ್‌ ವಿಮಾನ. ರಾಷ್ಟ್ರದಲ್ಲಿರುವ ಪರ್ವತಗಳೊಂದಿಗೆ ವಿಮಾನ ಚಾಲಕರು ವ್ಯವಹರಿಸಬೇಕು.

ಪದಾತಿ ದಳ ಮತ್ತು ವಾಯುದಳಗಳೂ ಸೇರಿದಂತೆ ಸ್ವಿಸ್ ಸೇನಾ ಪಡೆಗಳು ಪ್ರಮುಖವಾಗಿ ಬಲವಂತವಾಗಿ ಸೇನೆಗೆ ಸೇರಿದವರನ್ನು ಹೊಂದಿವೆ. ವೃತ್ತಿಪರ ಸೈನಿಕರ ಸೇನಾಪಡೆಯ 5 ಪ್ರತಿಶತದಷ್ಟು ಮಾತ್ರವೇ ಇದ್ದು, ಉಳಿದವರೆಲ್ಲಾ ಬಲವಂತದಿಂದ ಸೇನೆಗೆ ಸೇರಿಸಲ್ಪಟ್ಟ 20ರಿಂದ 34(ಕೆಲವೊಮ್ಮೆ ವಿಶೇಷ ಸಂದರ್ಭಗಳಲ್ಲಿ 50) ವರ್ಷ ವಯೋಮಿತಿಯ ನಾಗರಿಕರು ತುಂಬಿದ್ದಾರೆ. ಸ್ವಿಟ್ಜರ್ಲೆಂಡ್‌‌ ಭೂಪ್ರದೇಶದಿಂದ ಸುತ್ತುವರೆಯಲ್ಪಟ್ಟಿರುವುದರಿಂದ ಇಲ್ಲಿ ನೌಕಾಪಡೆಯಿಲ್ಲ, ಆದರೂ ನೆರೆಹೊರೆಯಲ್ಲಿ ಗಡಿಯನ್ನು ಹೊಂದಿರುವ ಸರೋವರ ಪ್ರದೇಶಗಳ ರಕ್ಷಣೆಗೆ ಸೇನಾ ಗಸ್ತು ದೋಣಿಗಳನ್ನು ಬಳಸಲಾಗುತ್ತದೆ. ವ್ಯಾಟಿಕನ್‌ ಸಿಟಿಸ್ವಿಸ್ ಪಹರೆದಾರಿಕೆ ಬಿಟ್ಟರೆ ಇತರೆ ವಿದೇಶೀ ಸೇನೆಗಳಿಗೆ ಸೇವೆ ಸಲ್ಲಿಸುವುದು ಸ್ವಿಸ್‌ ನಾಗರಿಕರಿಗೆ ನಿಷಿದ್ಧವಾಗಿದೆ.

ಸ್ವಿಸ್ ಸೇನಾ ವ್ಯವಸ್ಥೆಯ ರಚನೆಯು ಅಲ್ಲಿನ ಸೈನಿಕರು ತಮ್ಮ ಖಾಸಗಿ ಶಸ್ತ್ರಗಳೂ ಸೇರಿದಂತೆ ಎಲ್ಲಾ ಖಾಸಗಿ ವಸ್ತುಗಳನ್ನು ಮನೆಯಲ್ಲಿಯೇ ಇಟ್ಟಿರಬೇಕೆಂದು ನಿರ್ಬಂಧ ವಿಧಿಸಿದೆ. ಕೆಲವು ಸಂಸ್ಥೆಗಳು ಮತ್ತು ರಾಜಕೀಯ ಪಕ್ಷಗಳು ಈ ಪದ್ಧತಿಯನ್ನು ವಿವಾದಾತ್ಮಕ ಹಾಗೂ ಅಪಾಯಕಾರಿ ಎಂಬ ಅಭಿಪ್ರಾಯ ಪಟ್ಟಿವೆ.[೩೧] ಸೇನೆಗೆ ಕಡ್ಡಾಯವಾಗಿ ಸೇರಲೇಬೇಕೆಂಬ ನಿಬಂಧನೆ ಎಲ್ಲಾ ಪುರುಷ ಸ್ವಿಸ್ ನಾಗರಿಕರಿಗೆ ಮಾತ್ರ ಅನ್ವಯಿಸುತ್ತದೆ; ಸ್ತ್ರೀಯರು ಸ್ವಯಂಪ್ರೇರಣೆಯಿಂದ ಸೇವೆ ಸಲ್ಲಿಸಬಹುದು. ಸಾಧಾರಣವಾಗಿ ಅವರು 19ನೇ ವಯಸ್ಸಿನಲ್ಲಿ ಸೇನೆಯ ದಾಖಲಾತಿಗೆ ಹಾಜರಾಗಲು ಆದೇಶ ಪಡೆಯುತ್ತಾರೆ. ಯುವ ಸ್ವಿಸ್‌ ನಾಗರಿಕರಲ್ಲಿ ಮೂರನೇ ಎರಡರಷ್ಟು ಮಂದಿ ಸೇವೆಗೆ ದಾಖಲಾಗಲು ಅರ್ಹತೆಯನ್ನು ಪಡೆದಿರುತ್ತಾರೆ; ಅರ್ಹತೆ ಪಡೆಯದವರಿಗೆ ಪರ್ಯಾಯ ಸೇವೆಯೂ ಸಹಾ ಲಭ್ಯ.[೩೨] ವಾರ್ಷಿಕವಾಗಿ ಸುಮಾರು 20,000 ಮಂದಿ 18ರಿಂದ 21 ವಾರಗಳ ಕಾಲ ಸೇನೆಯ ಪ್ರಾಥಮಿಕ ತರಬೇತಿಯಲ್ಲಿ ಭಾಗವಹಿಸುತ್ತಾರೆ. "ಸೇನೆ XXI" ಎಂಬ ಸುಧಾರಣೆಯನ್ನು 2003ರಲ್ಲಿ ಸಾರ್ವಜನಿಕ ಅಭಿಮತದ ಮೇರೆಗೆ ಅಳವಡಿಸಿಕೊಳ್ಳಲಾಯಿತು, "ಸೇನೆ 95" ಎಂಬ ಹಿಂದಿನ ಪದ್ಧತಿಯನ್ನು ರದ್ದುಗೊಳಿಸಿ, ಅಗತ್ಯ ಸಿಪಾಯಿಗಳ ಗಣನೆಯನ್ನು 400,000ರಿಂದ 200,000ಕ್ಕೆ ಇಳಿಸಲಾಯಿತು. ಅವರಲ್ಲಿ 120,000 ಮಂದಿ ಸಕ್ರಿಯ ಸೇವೆಯಲ್ಲಿದ್ದು ಇತರೆ 80,000 ಮಂದಿ ಮೀಸಲು ಪಡೆಗೆ ಸೇರಿದವರು.[೩೩]

ಮಿಲಿಟರಿ ಪೆರೇಡ್‌ನಲ್ಲಿ MOWAG ಈಗಲ್ ಶಸ್ತ್ರಸಜ್ಜಿತ ವಾಹನಗಳು

ಸ್ವಿಟ್ಜರ್ಲೆಂಡ್‌ನ ಅಖಂಡತೆ ಮತ್ತು ಅಲಿಪ್ತತೆಯನ್ನು ಕಾಪಾಡಿಕೊಳ್ಳಲು ಸಮಗ್ರವಾಗಿ ಇದುವರೆವಿಗೆ ಮೂರು ಶಸ್ತ್ರಸಜ್ಜಿತ ಕಾರ್ಯಾಚರಣೆಗಳನ್ನು ನಡೆಸಲಾಗಿದೆ. ಮೊದಲನೆಯದು 1870-71ರ ಫ್ರಾಂಕೋ-ಪ್ರಷ್ಯನ್‌ ಯುದ್ಧದ ಸಂದರ್ಭದಲ್ಲಿ ನಡೆದ ಕಾರ್ಯಾಚರಣೆ. ಆಗಸ್ಟ್‌ 1914ರಲ್ಲಿ ಹಠಾತ್‌ ಘೋಷಣೆಯಾದ ಪ್ರಥಮ ವಿಶ್ವ ಸಮರಕ್ಕೆ ಪ್ರತಿಕ್ರಿಯೆಯಾಗಿ ಎರಡನೆ ಕಾರ್ಯಾಚರಣೆಯನ್ನು ನಡೆಸಲಾಯಿತು. 1939ರ ಸೆಪ್ಟೆಂಬರ್‌ನಲ್ಲಿ ಆರಂಭಿಸಲಾದ ಮೂರನೇ ಸೈನಿಕ ಕಾರ್ಯಾಚರಣೆಯು ಜರ್ಮನಿಯಿಂದ ಪೋಲೆಂಡ್‌ ಮೇಲಿನ ಆಕ್ರಮಣಕ್ಕೆ ಪ್ರತಿಯಾಗಿ ನಡೆಸಿದ್ದುದಾಗಿತ್ತು; ಈ ಕಾರ್ಯಾಚರಣೆಗೆ ಹೆನ್ರಿ ಗ್ಯುಸೆನ್‌ ಅವರನ್ನು ಸೇನಾ ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಲಾಗಿತ್ತು.

ಅಲಿಪ್ತ ನೀತಿಯ ಕಾರಣದಿಂದಾಗಿ ಸೇನೆಯು ಇತರೆ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಸೈನಿಕ ಕಾರ್ಯಾಚರಣೆಗಳಲ್ಲಿ ಭಾಗವಹಿಸದಿದ್ದರೂ, ಇಲ್ಲಿನ ಸೇನೆಯು ವಿಶ್ವದಾದ್ಯಂತ ನಡೆಯುತ್ತಿರುವ ಶಾಂತಿಪಾಲನಾ ನಿಯೋಗಗಳ ಭಾಗವಾಗಿದೆ. 2000ನೇ ಇಸವಿಯಿಂದ ಸ್ವಿಸ್‌ ರಕ್ಷಣಾ ಇಲಾಖೆಯು ಕೃತಕ ಉಪಗ್ರಹ ಸಂವಹನವನ್ನು ಗಮನಿಸಲು ಓನಿಕ್ಸ್‌ ಗೂಢಚಾರಿ ಮಾಹಿತಿ ವ್ಯವಸ್ಥೆಯನ್ನು ಸಹಾ ಹೊಂದಿದೆ.

ಶೀತಲ ಸಮರದ ಕೊನೆಯ ಭಾಗದಲ್ಲಿ ಸೈನಿಕ ಚಟುವಟಿಕೆಗಳನ್ನು ಪೂರ್ಣ ಪ್ರಮಾಣದಲ್ಲಿ ನಿಲ್ಲಿಸಲು ಇಲ್ಲವೇ ಸಮಗ್ರ ಸೇನಾಪಡೆಯನ್ನೇ ನಿಷೇಧಿಸಲು ಯತ್ನಗಳು ನಡೆದವು (ಸೇನಾಪಡೆ ರಹಿತ ಸ್ವಿಟ್ಜರ್ಲೆಂಡ್‌ಗಾಗಿ ಗುಂಪನ್ನು ನೋಡಿ). 1989ರ ನವೆಂಬರ್‌ 26ರಂದು ಈ ವಿಷಯಕ್ಕೆ ಸಂಬಂಧಿಸಿದಂತೆ ಗಮನಾರ್ಹ ಜನಾಭಿಪ್ರಾಯ ಸಂಗ್ರಹಣೆ ನಡೆದಾಗ ಈ ವಿಚಾರ ಸೋಲು ಕಂಡರೂ ಸಹಾ, ಈ ಬಗೆಗೆ ಜನರ ಒಲವು ಹೆಚ್ಚಾಗಿಯೇ ಇತ್ತು.[೩೪] ಹಿಂದೆಯೇ ಉದ್ದೇಶಿಸಿದ್ದ ಆದರೆ 9/11 ದಾಳಿಯ ನಂತರ ನಡೆದ ಇದೇ ಮಾದರಿಯ ಜನಾಭಿಪ್ರಾಯ ಸಂಗ್ರಹಣೆಯು 77%ಕ್ಕೂ ಹೆಚ್ಚಿನ ಮತಗಳಿಂದ ಸೋಲು ಕಂಡಿತು.

ಭೂಗೋಳ

[ಬದಲಾಯಿಸಿ]
ಸ್ವಿಟ್ಜರ್ಲೆಂಡ್‌‌ನ ಉಪಗ್ರಹ ಚಿತ್ರ

ಆಲ್ಫ್ಸ್‌ ಪರ್ವತ ಶ್ರೇಣಿಯ ಉತ್ತರ ಮತ್ತು ದಕ್ಷಿಣ ಬದಿಗಳಲ್ಲಿ ಹರಡಿರುವ ಸ್ವಿಟ್ಜರ್ಲೆಂಡ್‌‌, ಕೇವಲ 41,285 ಚದರ ಕಿಲೋಮೀಟರ್‌ಗಳ (15,940 ಚ ಮೈ) ಸೀಮಿತ ವ್ಯಾಪ್ತಿಯಲ್ಲಿ ವೈವಿಧ್ಯಮಯ ಮಾದರಿಯ ವಿಶಾಲದೃಶ್ಯ ಮತ್ತು ಹವಾಗುಣವನ್ನು ಹೊಂದಿದೆ.[೩೫] ಸರಾಸರಿ ಜನಸಾಂದ್ರತೆ ಪ್ರತಿ ಚದರ ಕಿಲೋಮೀಟರ್‌(622/ಚ ಮೈ)ಗೆ 240 ಮಂದಿಯ ಹಾಗೆ ಸುಮಾರು 7.6 ಮಿಲಿಯನ್‌ ಜನಸಂಖ್ಯೆಯನ್ನು ಹೊಂದಿದೆ.[೩೫][೩೬][೩೭] ಆದರೂ ಪರ್ವತ ಪ್ರದೇಶಗಳಿರುವ ರಾಷ್ಟ್ರದ ದಕ್ಷಿಣ ಭಾಗವು ಮೇಲ್ಕಂಡ ಸರಾಸರಿಗಿಂತ ಕಡಿಮೆ ನಿಬಿಡತೆಯನ್ನು ಹೊಂದಿದ್ದರೆ, ಉತ್ತರ ಭಾಗ ಮತ್ತು ದಕ್ಷಿಣ ಕೊನೆಗಳು ಸರಿಸುಮಾರು ಹೆಚ್ಚಿನ ಸಾಂದ್ರತೆಯನ್ನು ಹೊಂದಿವೆ. ಇದಕ್ಕೆ ಪ್ರಮುಖ ಕಾರಣವೆಂದರೆ ಅಲ್ಲಿನ ಭಾಗಶಃ ಅರಣ್ಯವಿರುವ ಮತ್ತು ಭಾಗಶಃ ಅರಣ್ಯಮುಕ್ತ ಪ್ರದೇಶಗಳೊಂದಿಗೆ ಅನೇಕ ದೊಡ್ಡ ಸರೋವರಗಳೂ ಇರುವ ಆರೋಗ್ಯಕಾರಿ ಪರ್ವತ ಪ್ರದೇಶಗಳು.[೩೫]

Contrasted landscapes between the 4,000 metres of the high Alps (Matterhorn on the left), the National Park and the plateau at Lake Lucerne

ಸ್ವಿಟ್ಜರ್ಲೆಂಡ್‌‌ ಮೂರು ವಿಧದ ಮೂಲಭೂತ ಭೂಲಕ್ಷಣಗಳನ್ನು ಹೊಂದಿದೆ: ದಕ್ಷಿಣದಲ್ಲಿ ಸ್ವಿಸ್ ಆಲ್ಫ್ಸ್‌, ಸ್ವಿಸ್ ಪ್ರಸ್ಥಭೂಮಿ ಅಥವಾ "ಮಧ್ಯನಾಡು", ಮತ್ತು ಉತ್ತರದಲ್ಲಿ ಜ್ಯೂರಾ ಪರ್ವತಗಳು.[೩೫] ಆಲ್ಫ್ಸ್‌ ಪರ್ವತಗಳು ಸುಮಾರು ರಾಷ್ಟ್ರದ ಒಟ್ಟು ವಿಸ್ತೀರ್ಣದ 60%ನಷ್ಟು ವಿಸ್ತೀರ್ಣವನ್ನು ಹೊಂದಿ ಎತ್ತರದ ಪರ್ವತ ಶ್ರೇಣಿ ರಾಷ್ಟ್ರದ ದಕ್ಷಿಣಾರ್ಧದುದ್ದಕ್ಕೂ ಹರಡಿಕೊಂಡಿವೆ. ಸ್ವಿಸ್ ಆಲ್ಫ್ಸ್‌ನ ಎತ್ತರದ ಶೃಂಗಗಳಲ್ಲಿ, 4,634 ಮೀಟರ್‌(15,203 ಅಡಿ)ಗಳ [೩೫] ಎತ್ತರವಿರುವ ಡುಪೋರ್‌ಸ್ಪಿಟ್ಸ್‌ ಅತಿ ಎತ್ತರದ್ದಾಗಿದ್ದು, ಹಿಮನದಿ ಮತ್ತು ಜಲಪಾತಗಳನ್ನು ಹೊಂದಿರುವ ಅಸಂಖ್ಯ ಕಣಿವೆಗಳನ್ನು ಹೊಂದಿದೆ. ಇವುಗಳಿಂದ ಅನೇಕ ಪ್ರಮುಖ ಐರೋಪ್ಯ ನದಿಗಳಾದ ರೈನ್‌, ರೋನ್‌, ಇನ್‌, ಆರೆ ಮತ್ತು ಟಿಕಿನೊ ನದಿಗಳ ಮೂಲತೊರೆಗಳು ಅಂತಿಮವಾಗಿ ಅತಿ ದೊಡ್ಡ ಸ್ವಿಸ್ ಸರೋವರಗಳಾದ ಜಿನೀವಾ ಸರೋವರ (ಲಾಕ್‌ ಲೆಮನ್‌), ಜ್ಯೂರಿಚ್‌ ಸರೋವರ, ನ್ಯೂಚಾಟೆಲ್‌ ಸರೋವರ, ಮತ್ತು ಕಾನ್‌ಸ್ಟಾನ್ಸ್‌ಗಳಿಗೆ ಸೇರುತ್ತವೆ.[೩೫]

Contrasted climates between the valleys of the Aletsch Glacier (most glaciated area in western Eurasia[೩೮]), the Alpine foothills of Champéry and the southern canton of Ticino (Lake Lugano)

ಅತಿ ಹೆಚ್ಚು ಪ್ರಸಿದ್ಧವಾದ ಪರ್ವತವೆಂದರೆ ವಲಾಯಿಸ್‌ನಲ್ಲಿರುವ ಮ್ಯಾಟ್ಟರ್‌ಹಾರ್ನ್‌ (4,478 ಮೀ) ಮತ್ತು ಇಟಲಿಯ ಗಡಿಯಲ್ಲಿರುವ ಪೆನ್ನೈನ್‌ ಆಲ್ಫ್ಸ್‌. ಇನ್ನೂ ಎತ್ತರದ ಪರ್ವತಗಳು ಈ ಪ್ರದೇಶದಲ್ಲಿವೆ, ಅವೆಂದರೆ ಡುಪೋರ್‌ಸ್ಪಿಟ್ಸ್‌ (4,634 ಮೀ), ಡಾಮ್‌ (4,545 ಮೀ) ಮತ್ತು ವೇಯಿಸ್‌ಹಾರ್ನ್‌ (4,506 ಮೀ). ಆಳದಲ್ಲಿರುವ ಹಿಮನದಿಗಳಿರುವ ಲಾಟರ್‌ಬ್ರುನೆನ್‌ ಕಣಿವೆಯ ಮೇಲಿರುವ ಬರ್ನ್‌ ಪ್ರಾಂತ್ಯ ಆಲ್ಫ್ಸ್‌ ಭಾಗವು 72 ಜಲಪಾತಗಳನ್ನು ಹೊಂದಿದ್ದು ಜುಂಗ್‌ಫ್ರಾವ್‌ (4,158 ಮೀ) ಮತ್ತು ಐಗರ್‌, ಮತ್ತು ಅನೇಕ ಚಿತ್ರೋಪಮವಾದ ಕಣಿವೆಗಳಿರುವ ಪ್ರದೇಶವಾಗಿಯೂ ಹೆಸರು ಮಾಡಿದೆ. ಆಗ್ನೇಯದಲ್ಲಿ ಗ್ರಾವುಬುಂಡೆನ್‌ ಕ್ಯಾಂಟನ್‌‌ನ St. ಮೋರಿಟ್ಜ್‌ ಪ್ರದೇಶವನ್ನು ಹೊಂದಿರುವ ಉದ್ದವಾದ ಪ್ರಸಿದ್ಧ ಎಂಗಾಡಿನ್‌ ಕಣಿವೆಯಿದೆ; ನೆರೆಹೊರೆಯಲ್ಲಿರುವ ಬರ್ನಿನಾ ಆಲ್ಫ್ಸ್‌ನ ಅತ್ಯುನ್ನತ ಶೃಂಗವೆಂದರೆ ಪಿಜ್‌ ಬರ್ನಿನಾ (4,049 ಮೀ).[೩೯]

ರಾಷ್ಟ್ರದ ಒಟ್ಟು ವಿಸ್ತೀರ್ಣದ 30% ವಿಸ್ತೀರ್ಣದಲ್ಲಿ ಹರಡಿರುವ ರಾಷ್ಟ್ರದ ಉತ್ತರ ಭಾಗವು ಹೆಚ್ಚಿನ ಜನಸಾಂದ್ರತೆಯನ್ನು ಹೊಂದಿದ್ದು ಮಧ್ಯನಾಡು ಎಂದು ಕರೆಯಲ್ಪಡುತ್ತದೆ. ಇದು ಉನ್ನತ ಮುಕ್ತ ಹಾಗೂ ಪರ್ವತ ಪ್ರದೇಶವಿರುವ ವಿಶಾಲದೃಶ್ಯಗಳನ್ನು ಹೊಂದಿದೆ. ಈ ಪ್ರದೇಶವು ಭಾಗಶಃ ಅರಣ್ಯವನ್ನು, ಭಾಗಶಃ ಮೇಯುತ್ತಿರುವ ಪಶುಹಿಂಡುಗಳಿರುವ ಮುಕ್ತ ಹುಲ್ಲುಗಾವಲು ಅಥವಾ ತರಕಾರಿ ಮತ್ತು ಹಣ್ಣು ಬೆಳೆಯುವ ಜಮೀನುಗಳನ್ನು ಹೊಂದಿದ್ದರೂ ಇದು ಪರ್ವತಮಯವಾಗಿದೆ. ಅನೇಕ ದೊಡ್ಡ ಸರೋವರಗಳು ಇಲ್ಲಿಯೇ ಇವೆ ಮತ್ತು ಅತಿ ದೊಡ್ಡ ಸ್ವಿಸ್ ಮಹಾನಗರಗಳೂ ಸಹಾ ರಾಷ್ಟ್ರದ ಇದೇ ಭಾಗದಲ್ಲಿವೆ.[೩೯] ಸ್ವಿಟ್ಜರ್ಲೆಂಡ್‌‌ನ ಪಶ್ಚಿಮದಲ್ಲಿರುವ ಜಿನೀವಾ ಸರೋವರ(ಫ್ರೆಂಚ್‌ನಲ್ಲಿ ಲಾಕ್‌ ಲೆಮನ್‌ ಎಂದು ಕರೆಯಲ್ಪಡುವ)ವು ಅತಿ ದೊಡ್ಡ ಸರೋವರವಾಗಿದೆ. ರೋನ್‌ ನದಿಯು ಜಿನೀವಾ ಸರೋವರದ ಪ್ರಮುಖ ಉಪನದಿಯಾಗಿದೆ.

ಸ್ವಿಸ್ ಹವಾಗುಣವು ಸಾಧಾರಣವಾಗಿ ಸಮಶೀತೋಷ್ಣತೆಯನ್ನು ಹೊಂದಿದ್ದು, ಪರ್ವತದ ತುದಿಗಳಲ್ಲಿನ ವಿಪರೀತ ಶೈತ್ಯದಿಂದ ಹಿಡಿದು ಸ್ವಿಟ್ಜರ್ಲೆಂಡ್‌‌ನ ದಕ್ಷಿಣಾಗ್ರ ತುದಿಯಲ್ಲಿ ಮೆಡಿಟರೇನಿಯನ್‌ ಹವಾಗುಣಕ್ಕೆ ಸಮೀಪದ ಆಹ್ಲಾದಕರ ವಾತಾವರಣವನ್ನು ಹೊಂದಿರುವಂತೆ ಪ್ರದೇಶ[೪೦] ಗಳ ನಡುವೆ ಸಾಕಷ್ಟು ವ್ಯತ್ಯಾಸಗಳಿರುತ್ತವೆ. ಬೇಸಿಗೆಯು ಸಾಧಾರಣವಾಗಿ ಬೆಚ್ಚಗೆ ಮತ್ತು ತೇವಾಂಶದಿಂದ ಕೂಡಿದ್ದು ಆಗಾಗ್ಗೆ ಆವರ್ತಕ ಮಳೆಯಾಗುವುದರಿಂದ ಹುಲ್ಲುಗಾವಲು ಹಾಗೂ ಮೇಯುವಿಕೆ ಅತ್ಯಂತ ಪ್ರಶಸ್ತವಾಗಿರುವ ಪ್ರದೇಶವಾಗಿದೆ. ಪರ್ವತ ಪ್ರದೇಶಗಳಲ್ಲಿನ ಚಳಿಗಾಲದಲ್ಲಿ ಸೂರ್ಯ ಮತ್ತು ಹಿಮವರ್ಷಗಳ ನಡುವೆ ಸ್ಥಿತ್ಯಂತರವಾಗುತ್ತಿದ್ದರೆ ಇತ್ತ ಕೆಳ ಪ್ರದೇಶಗಳು ಮೋಡ ಮತ್ತು ಇಬ್ಬನಿಗಳಿಂದಾವೃತವಾಗಿರುತ್ತವೆ. ಇಟಲಿಯ ಕಡೆಯಿಂದ ಆಲ್ಫ್ಸ್‌ ಮೇಲೆ ಬರುವ ಬೆಚ್ಚನೆಯ ಮೆಡಿಟರೇನಿಯನ್‌ ಬೀಸು ಗಾಳಿಯಿಂದ ಕೂಡಿರುವ ಫಾನ್[೪೦] ಎಂದು ಹೆಸರಾದ ವಾತಾವರಣದ ವಿದ್ಯಮಾನವು ವರ್ಷದ ಎಲ್ಲಾ ಸಮಯಗಳಲ್ಲೂ, ಮಳೆಗಾಲದಲ್ಲೂ ಕೂಡ ಸಂಭವಿಸುತ್ತದೆ. ವಲಾಯಿಸ್‌‌[೪೦] ನ ದಕ್ಷಿಣ ಕಣಿವೆ ಪ್ರದೇಶಗಳಲ್ಲಿ ಒಣ ಪರಿಸ್ಥಿತಿಯಿರುತ್ತದೆ. ಇಲ್ಲಿ ಕೇಸರಿ ಬೆಳೆಯಲಾಗುತ್ತದಲ್ಲದೇ, ಅನೇಕ ಮದ್ಯ ತಯಾರಿಸಲು ಬಳಸುವ ದ್ರಾಕ್ಷಿಯನ್ನು ಬೆಳೆಯಲಾಗುತ್ತದೆ. ಗ್ರಾವುಬುಂಡೆನ್‌ ಸಹಾ ಒಣ ಹವಾಗುಣ[೪೦] ವನ್ನು ಹೊಂದಿದ್ದು ಅಲ್ಪ ಪ್ರಮಾಣದಲ್ಲಿ ತಂಪಾಗಿದ್ದರೂ, ಚಳಿಗಾಲದಲ್ಲಿ ಬಹಳಷ್ಟು ಹಿಮಪಾತವಾಗುತ್ತದೆ. ಆರ್ದ್ರ ಪರಿಸ್ಥಿತಿಯು ಆಲ್ಫ್ಸ್‌ನ ಶೃಂಗ ಪ್ರದೇಶಗಳಲ್ಲಿರುತ್ತದೆ ಮತ್ತು ಟಿಕಿನೊ ಕ್ಯಾಂಟನ್‌ನಲ್ಲಿ ಸಾಕಷ್ಟು ಬಿಸಿಲಿದ್ದರೂ ಆಗಿಂದಾಗ್ಗೆ ಜೋರು ಮಳೆಯೂ ಬರುತ್ತಿರುತ್ತದೆ.[೪೦] ಸ್ವಿಟ್ಜರ್ಲೆಂಡ್‌‌ನ ಪೂರ್ವ ಭಾಗವು ಪಶ್ಚಿಮ ಭಾಗಕ್ಕಿಂತ ಹೆಚ್ಚಿಗೆ ತಂಪಾಗಿದ್ದರೂ, ಯಾವುದೇ ಪರ್ವತ ಪ್ರದೇಶಗಳ ಎತ್ತರದ ಭಾಗಗಳಲ್ಲಿ ವರ್ಷದ ಎಲ್ಲಾ ಸಮಯಗಳಲ್ಲಿಯೂ ತಂಪಾದ ಹವೆಯನ್ನು ಅನುಭವಿಸಬಹುದಾಗಿದೆ. ಹಿಮಪಾತವು ವಾರ್ಷಿಕವಾಗಿ ಸಮಾಂತರವಾಗಿ ಹರಡಿದ್ದರೂ ಸ್ಥಳೀಯ ಹವಾಮಾನಕ್ಕನುಗುಣವಾಗಿ ವಿವಿಧ ಋತುಗಳಲ್ಲಿ ಅಲ್ಪ ವ್ಯತ್ಯಾಸಗಳಾಗುತ್ತಿರುತ್ತವೆ. ಶರತ್ಕಾಲವು ಸಾಮಾನ್ಯವಾಗಿ ಅತಿ ಹೆಚ್ಚಿನ ಒಣ ಋತುವಾಗಿದ್ದು, ಸ್ವಿಟ್ಜರ್ಲೆಂಡ್‌‌ನ ಹವಾಗುಣದ ವೈವಿಧ್ಯತೆಯು ವರ್ಷದಿಂದ ವರ್ಷಕ್ಕೆ ಬದಲಾಯಿಸುವುದರಿಂದ ಮುನ್ಸೂಚನೆ ನೀಡುವುದು ಕಷ್ಟದಾಯಕ.

ಸ್ವಿಟ್ಜರ್ಲೆಂಡ್‌‌ನ ಪರಿಸರ ವ್ಯವಸ್ಥೆಯು ಸೂಕ್ಷ್ಮ ಪರಿಸರವನ್ನು ಹೊಂದಿದ್ದು, ಎತ್ತರದ ಪರ್ವತಗಳಿಂದ ಪ್ರತ್ಯೇಕಿಸಲ್ಪಟ್ಟ ಅನೇಕ ಸೂಕ್ಷ್ಮ ಕಣಿವೆಗಳನ್ನು ಹೊಂದಿವೆ. ಅನೇಕ ಬಾರಿ ಇದು ಪ್ರತ್ಯೇಕವಾದ ಪರಿಸರ ವ್ಯವಸ್ಥೆಗೆ ಕಾರಣೀಭೂತವಾಗಿರುತ್ತದೆ. ಪರ್ವತ ಪ್ರದೇಶಗಳೇ ಸಾಕಷ್ಟು ಮಟ್ಟಿಗೆ ಸೂಕ್ಷ್ಮ ಪರಿಸರವನ್ನು ಹೊಂದಿರುತ್ತವೆ. ಇಂತಹಾ ಪ್ರದೇಶಗಳು, ಇತರೆ ಎತ್ತರದ ಸ್ಥಳಗಳಲ್ಲಿ ಅಲಭ್ಯವಾಗಿರುವ ಅನೇಕ ಶ್ರೀಮಂತ ಸಸ್ಯ ಪ್ರಭೇದಗಳನ್ನು ಹೊಂದಿರುವುದಲ್ಲದೇ ಸ್ಥಳ ಭೇಟಿಗೆ ಬರುವ ಸಂದರ್ಶಕರಿಂದ ಹಾಗೂ ಪ್ರಾಣಿಗಳ ಮೇಯುವಿಕೆಯಿಂದ ಬಹಳಷ್ಟು ಒತ್ತಡವನ್ನು ಅನುಭವಿಸುತ್ತವೆ. ಸ್ವಿಟ್ಜರ್ಲೆಂಡ್‌‌ನ ಪರ್ವತ ಪ್ರದೇಶಗಳಲ್ಲಿನ ವೃಕ್ಷಗಳ ಸಾಲು ಇತ್ತೀಚಿನ ವರ್ಷಗಳಲ್ಲಿ ಪ್ರದೇಶದ ಕೆಳಭಾಗ1,000 ft (300 m)ಕ್ಕೂ ವ್ಯಾಪಿಸುತ್ತಿದೆ. ಇದಕ್ಕೆ ಪ್ರಮುಖ ಕಾರಣ ಪಶುಗಳ ಹಿಂಡಿನ ಹಾಗೂ ಅವುಗಳ ಮೇಯುವಿಕೆಯಿಂದುಂಟಾಗುತ್ತಿದ್ದ ಒತ್ತಡದ ಇಳಿಕೆ.

ವಾಣಿಜ್ಯ

[ಬದಲಾಯಿಸಿ]

ಸ್ವಿಟ್ಜರ್ಲೆಂಡ್‌‌ ಆಧುನಿಕ ಮತ್ತು ವಿಶ್ವದಲ್ಲೇ ಅತ್ಯಧಿಕ ಬಂಡವಾಳಶಾಹಿ ಆರ್ಥಿಕತೆಯನ್ನು ಹೊಂದಿರುವುದಲ್ಲದೇ ಸ್ಥಿರತೆಯನ್ನು ಸಹಾ ಕಾಪಾಡಿಕೊಂಡಿದೆ. ಈ ರಾಷ್ಟ್ರವು ಐರ್‌ಲೆಂಡ್‌ನ್ನು ಬಿಟ್ಟರೆ ಎರಡನೇ ಉನ್ನತ ಐರೋಪ್ಯ ಶ್ರೇಯಾಂಕವನ್ನು ಆರ್ಥಿಕ ಸ್ವಾತಂತ್ರ್ಯ 2008ರ ಪಟ್ಟಿ(ಪರಿವಿಡಿ)ಯಲ್ಲಿ ಹೊಂದಿರುವುದಲ್ಲದೇ, ಸಾರ್ವಜನಿಕ ಸೇವೆಗಳ ಮೂಲಕ ಹೆಚ್ಚಿನ ಪ್ರಮಾಣದ ವ್ಯಾಪಕತೆಯನ್ನು ಹೊಂದಿದೆ. ದೊಡ್ಡದಾದ ಪಾಶ್ಚಿಮಾತ್ಯ ಐರೋಪ್ಯ ಮತ್ತು ಜಪಾನ್‌ ಆರ್ಥಿಕತೆಗಳಿಗಿಂತ ಹೆಚ್ಚಿನ ನಾಮಮಾತ್ರ ತಲಾ GDPಯನ್ನು ಹೊಂದಿದ್ದು, ಲಕ್ಸೆಂಬರ್ಗ್‌, ನಾರ್ವೆ, ಕತಾರ್‌, ಐಸ್‌ಲೆಂಡ್‌ ಮತ್ತು ಐರ್‌ಲೆಂಡ್‌ಗಳ ನಂತರ 6ನೇ ಶ್ರೇಯಾಂಕವನ್ನು ಪಡೆದಿದೆ.

ಗ್ರೇಟರ್‌ ಜ್ಯೂರಿಚ್‌ ಪ್ರದೇಶ, 1.5 ದಶಲಕ್ಷ ಉದ್ಯೋಗಿಗಳನ್ನು ಒಳಗೊಂಡಿದ್ದು 150,000 ಕಂಪನಿಗಳಿವೆ, ಹಾಗೂ ಕೆಲವು ಜೀವನ ಮಟ್ಟದ ಸಮೀಕ್ಷೆಯಲ್ಲಿ ಪ್ರಮುಖ ಸ್ಥಾನಗಳನ್ನು ಪಡೆದಿದೆ. [126]
ಎಂಗಾಡಿನ್‌ ಕಣಿವೆಯಂತಹ ಕಡಿಮೆ ಕೈಗಾರೀಕೃತ ಆಲ್ಪೈನ್ ಶ್ರೇಣಿಗಳಲ್ಲಿ, ಪ್ರವಾಸೋದ್ಯಮ ಒಂದು ಮುಖ್ಯ ಆದಾಯದ ಮೂಲವಾಗಿದೆ

ಖರೀದಿ ಸಾಮರ್ಥ್ಯದ ಹೋಲಿಕೆಗೆ ಹೊಂದಿಸಿದರೆ, ಸ್ವಿಟ್ಜರ್ಲೆಂಡ್‌‌ ತಲಾ GDPಯ ಪ್ರಕಾರ ವಿಶ್ವದಲ್ಲೇ 15ನೇ ಶ್ರೇಯಾಂಕವನ್ನು ಪಡೆಯುತ್ತದೆ.[೪೧] ವಿಶ್ವ ಆರ್ಥಿಕ ಸಂಘಟನೆಯ ವಿಶ್ವ ಸ್ಪರ್ಧಾತ್ಮಕತೆಯ ವರದಿಯು ಸ್ವಿಟ್ಜರ್ಲೆಂಡ್‌‌ನ ಆರ್ಥಿಕತೆಯ ಸ್ಪರ್ಧಾತ್ಮಕತೆಗೆ ಪ್ರಸಕ್ತ ವಿಶ್ವದಲ್ಲೇ ಎರಡನೇ ಅತಿ ಹೆಚ್ಚಿನ ಶ್ರೇಯಾಂಕವನ್ನು ನೀಡಿದೆ.[೪೨] 20ನೇ ಶತಮಾನದ ಬಹುಭಾಗದಲ್ಲಿ, ಸ್ವಿಟ್ಜರ್ಲೆಂಡ್‌‌ ಗಮನಾರ್ಹ ವ್ಯತ್ಯಾಸ[೪೩] ದೊಂದಿಗೆ ಯೂರೋಪ್‌ನ ಅತಿ ಶ್ರೀಮಂತ ರಾಷ್ಟ್ರವಾಗಿತ್ತು. 2005ರಲ್ಲಿ ಸ್ವಿಟ್ಜರ್ಲೆಂಡ್‌‌ನಲ್ಲಿನ ಮಧ್ಯಮ ಕೌಟುಂಬಿಕ ಆದಾಯವನ್ನು 95,000 CHF ಎಂದು ಅಂದಾಜಿಸಲಾಗಿತ್ತು, ಇದು ಖರೀದಿ ಸಾಮರ್ಥ್ಯ ಹೋಲಿಕೆಯಲ್ಲಿ ಸರಿಸುಮಾರು 81,000 USD (ನವೆಂ. 2008ರ ವಿನಿಮಯ ದರದಂತೆ)ರಷ್ಟು ಆಗುತ್ತದೆ, ಕ್ಯಾಲಿಫೋರ್ನಿಯಾದಂತಹಾ ಶ್ರೀಮಂತ ಅಮೇರಿಕನ್‌ ಸಂಸ್ಥಾನಗಳಿಗೆ ಸಮಾನವಾಗುತ್ತದೆ.[೪೪]

ನಿರ್ದಿಷ್ಟವಾಗಿ ಹೇಳಬೇಕೆಂದರೆ, ಸ್ವಿಟ್ಜರ್ಲೆಂಡ್‌ ವಿಶ್ವದ ಅರ್ಧದಷ್ಟು ಕೈಗಡಿಯಾರಗಳ ಉತ್ಪಾದನೆಗೆ ಕಾರಣವಾಗಿದೆ. [132] (ಓಮೇಗಾ ಸ್ಪೀಡ್‌ಮಾಸ್ಟರ್‌ಅನ್ನು, NASAದವರು ಅಪೊಲೊ ಕಾರ್ಯಾಚರಣೆಗಳಿಗೆ ಆಯ್ಕೆ ಮಾಡಿದರು)

ಸ್ವಿಟ್ಜರ್ಲೆಂಡ್‌‌ ಅನೇಕ ಬಹುದೊಡ್ಡ ಅಂತರರಾಷ್ಟ್ರೀಯ ಸಂಘಟನೆಗಳಿಗೆ ನೆಲೆಯಾಗಿದೆ. ಆದಾಯದ ಪ್ರಕಾರ ಅತಿ ದೊಡ್ಡ ಸ್ವಿಸ್ ಕಂಪೆನಿಗಳೆಂದರೆ ಗ್ಲೆನ್‌ಕೋರ್‌, ನೆಸ್ಲೆ, ನೊವಾರ್ಟಿಸ್‌, ಹಾಫ್‌ಮನ್‌-ಲಾ ರೋಕೆ, ABB ಮತ್ತು ಅಡೆಕ್ಕೋಗಳು.[೪೫] ಗಮನಾರ್ಹವಾದ ಉಳಿದ ಕಂಪೆನಿಗಳೆಂದರೆ UBS AG, ಜ್ಯೂರಿಚ್‌ ವಾಣಿಜ್ಯ ಸೇವೆಗಳು, ಕ್ರೆಡಿಟ್‌ ಸ್ಯೂಸ್ಸೆ, ಸ್ವಿಸ್ ರೇ, ಮತ್ತು ಸ್ವಾಚ್‌ ಸಮೂಹ. ಸ್ವಿಟ್ಜರ್ಲೆಂಡ್‌‌ ವಿಶ್ವದಲ್ಲೇ ಅತ್ಯಂತ ಸಶಕ್ತವಾದ ಆರ್ಥಿಕತೆಯನ್ನು ಹೊಂದಿರುವ ರಾಷ್ಟ್ರವಾಗಿ ಶ್ರೇಯಾಂಕಿತವಾಗಿದೆ.[೪೩]

ರಾಸಾಯನಿಕ, ಆರೋಗ್ಯ ಮತ್ತು ಔಷಧೀಯ, ಅಳತೆಯ ಉಪಕರಣಗಳು, ಸಂಗೀತ ಉಪಕರಣಗಳು, ಸ್ಥಿರಾಸ್ತಿ, ಬ್ಯಾಂಕಿಂಗ್‌ ಮತ್ತು ವಿಮೆ, ಪ್ರವಾಸೋದ್ಯಮ, ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ಸ್ವಿಟ್ಜರ್ಲೆಂಡ್‌‌ನ ಪ್ರಮುಖ ಕೈಗಾರಿಕೆಗಳಾಗಿವೆ. ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ರಫ್ತಾಗುವ ಸರಕೆಂದರೆ ರಾಸಾಯನಿಕಗಳು (ರಫ್ತಾಗುವ ಸರಕುಗಳ 34%ರಷ್ಟು), ಯಂತ್ರಗಳು/ವಿದ್ಯುನ್ಮಾನ ಉಪಕರಣಗಳು (20.9%ರಷ್ಟು), ಮತ್ತು ನಿಷ್ಕೃಷ್ಟ ಅಳತೆಯ ಉಪಕರಣಗಳು/ಕೈಗಡಿಯಾರಗಳು (16.9%ರಷ್ಟು).[೪೬] ರಫ್ತಾಗುವ ಸೇವೆಗಳು ರಫ್ತಾಗುವ ಸರಕುಗಳ ಮೂರನೇ ಒಂದರಷ್ಟು ವಿನಿಮಯ ಗಳಿಸುತ್ತವೆ.[೪೬]

ಸ್ವಿಟ್ಜರ್ಲೆಂಡ್‌‌ನಲ್ಲಿ ಸುಮಾರು 3.8 ಮಿಲಿಯನ್‌ ಮಂದಿ ಕೆಲಸ ಮಾಡುತ್ತಾರೆ. ಸ್ವಿಟ್ಜರ್ಲೆಂಡ್‌‌ ನೆರೆಹೊರೆಯ ರಾಷ್ಟ್ರಗಳಿಗಿಂತ ಹೆಚ್ಚಿನ ಹೊಂದಿಕೆಯಾಗಬಲ್ಲ ಔದ್ಯೋಗಿಕ ಮಾರುಕಟ್ಟೆಯನ್ನು ಹೊಂದಿರುವುದರಿಂದ ಇಲ್ಲಿನ ನಿರುದ್ಯೋಗ ಸಮಸ್ಯೆ ಕಡಿಮೆ ಪ್ರಮಾಣದಲ್ಲಿದೆ. ನಿರುದ್ಯೋಗದ ಪ್ರಮಾಣವು ಜೂನ್‌ 2000ರಲ್ಲಿನ 1.7%ನಷ್ಟು ಕಡಿಮೆ ಪ್ರಮಾಣದಿಂದ, 3.9%ರಷ್ಟು ಶೃಂಗ ಪ್ರಮಾಣಕ್ಕೆ ಸೆಪ್ಟೆಂಬರ್‌ 2004ರಲ್ಲಿ ತಲುಪಿತು. ಇದು ಭಾಗಶಃ 2003ರ ಮಧ್ಯದಲ್ಲಿನ ಆರ್ಥಿಕ ಸ್ಥಿತ್ಯಂತರದಿಂದಾಗಿದ್ದು, ಪ್ರಸಕ್ತ ನಿರುದ್ಯೋಗ ಪ್ರಮಾಣವು ಏಪ್ರಿಲ್‌ 2009ರ ಗಣನೆಯಂತೆ 3.4%ರಷ್ಟಿದೆ. ವಲಸೆಯಿಂದಾದ ನಿವ್ವಳ ಜನಸಂಖ್ಯಾ ಏರಿಕೆಯು ಸಾಕಷ್ಟು ಹೆಚ್ಚಿದ್ದು 2004ರಲ್ಲಿ ಜನಸಂಖ್ಯೆಯ 0.52%ರಷ್ಟಿತ್ತು.[೪೬] ವಿದೇಶಿ ನಾಗರಿಕರ ಜನಸಂಖ್ಯೆಯು 2004[೪೬] ರ ಹೊತ್ತಿಗೆ 21.8%ರಷ್ಟಿದ್ದು, ಇದು ಆಸ್ಟ್ರೇಲಿಯಾದ ಪ್ರಮಾಣಕ್ಕೆ ಸಮಾನವಾಗಿದೆ. ಕಾರ್ಯನಿರತ ಪ್ರತಿ ಗಂಟೆಯ GDPಯು ವಿಶ್ವದಲ್ಲೇ 17ನೇ ಹೆಚ್ಚಿನ ಪ್ರಮಾಣದ್ದಾಗಿದ್ದು, 2006ರಲ್ಲಿ 27.44 ಅಂತರರಾಷ್ಟ್ರೀಯ ಡಾಲರ್‌ಗಳಷ್ಟಿತ್ತು.

ಸ್ವಿಟ್ಜರ್ಲೆಂಡ್‌‌ ಅಗಾಧವಾದ ಖಾಸಗಿ ವಲಯದ ಆರ್ಥಿಕತೆಯನ್ನು ಹೊಂದಿದ್ದು ಪಾಶ್ಚಿಮಾತ್ಯ ಮಾನದಂಡಗಳ ಪ್ರಕಾರ ಅತಿ ಕಡಿಮೆ ತೆರಿಗೆ ದರಗಳನ್ನು ಹೊಂದಿದೆ; ಒಟ್ಟಾರೆ ತೆರಿಗೆಯ ಪ್ರಮಾಣವು ಅಭಿವೃದ್ಧಿ ಹೊಂದಿದ ದೇಶಗಳಲ್ಲೇ ಅತ್ಯಂತ ಕಡಿಮೆ ಪ್ರಮಾಣದಲ್ಲಿದೆ. ಸ್ವಿಟ್ಜರ್ಲೆಂಡ್‌‌ ಉದ್ದಿಮೆ ನಡೆಸಲು ಸುಲಭವಾದ ಸ್ಥಳವಾಗಿದೆ; ಸರಾಗ ಉದ್ದಿಮೆ ಸ್ಥಾಪನೆಯ ಪಟ್ಟಿಯಲ್ಲಿ ಸ್ವಿಟ್ಜರ್ಲೆಂಡ್‌‌ 178 ರಾಷ್ಟ್ರಗಳಲ್ಲಿ 16ನೇ ಶ್ರೇಯಾಂಕವನ್ನು ಪಡೆದಿದೆ. ಸ್ವಿಟ್ಜರ್ಲೆಂಡ್‌‌ 1990ರ ದಶಕದಲ್ಲಿ ಪ್ರಗತಿಯಲ್ಲಿ ನಿಧಾನ ಗತಿಯನ್ನು ಕಂಡಿತು. 2000ನೇ ದಶಕದ ಆರಂಭದಲ್ಲಿ ಆರ್ಥಿಕ ಸುಧಾರಣೆಗಳಿಗೆ ಹೆಚ್ಚಿನ ಬೆಂಬಲ ದೊರಕಿತು ಮತ್ತು ಐರೋಪ್ಯ ಒಕ್ಕೂಟದ ಜೊತೆಗೆ ಸಾಮರಸ್ಯ ಹೊಂದಲು ಸಾಧ್ಯವಾಯಿತು.[೪೭][೪೮] ಕ್ರೆಡಿಟ್‌ ಸ್ಯೂಸ್ಸೆನ ಪ್ರಕಾರ, ಕೇವಲ ಸುಮಾರು 37%ರಷ್ಟು ಜನರು ಮಾತ್ರ ಸ್ವಂತ ಗೃಹಗಳನ್ನು ಹೊಂದಿದ್ದು, ಇದು ಯೂರೋಪ್‌ನಲ್ಲಿ ಅತಿ ಕಡಿಮೆ ಗೃಹ ಮಾಲಿಕತ್ವದ ಪ್ರಮಾಣವಾಗಿದೆ. ಜರ್ಮನಿಯ 113% ಮತ್ತು 104%ರ ಪ್ರಮಾಣಕ್ಕೆ ಹೋಲಿಸಿದಾಗ ಗೃಹಬಳಕೆ ಮತ್ತು ಆಹಾರ ಬೆಲೆ ಪ್ರಮಾಣಗಳು 2007ರಲ್ಲಿನ EU-25 ಪಟ್ಟಿಯ ಪ್ರಕಾರ 171% ಮತ್ತು 145%ರಷ್ಟಿದೆ.[೪೬] ಸ್ವಿಟ್ಜರ್ಲೆಂಡ್‌‌ನ ಮುಕ್ತ ವ್ಯಾಪಾರ ನೀತಿಗೆ ಹೊರತಾಗಿರುವ ಕೃಷಿ ಸಂರಕ್ಷಣೆ ವ್ಯವಸ್ಥೆಯು ಹೆಚ್ಚಿದ ಆಹಾರ ಬೆಲೆಗಳಿಗೆ ಮೂಲ ಕಾರಣವಾಗಿದೆ. OECD[೪೭] ಯ ಪ್ರಕಾರ ಉತ್ಪಾದನಾ ಮಾರುಕಟ್ಟೆಯ ಉದಾರೀಕರಣವು ಅನೇಕ EU ರಾಷ್ಟ್ರಗಳಿಗೆ ಹೋಲಿಸಿದರೆ ಹಿನ್ನಡೆಯಲ್ಲಿದೆ. ಇಷ್ಟೆಲ್ಲಾ ಆದರೂ, ದೇಶೀಯ ಖರೀದಿ ಸಾಮರ್ಥ್ಯವು ವಿಶ್ವದಲ್ಲೇ ಅತ್ಯುತ್ತಮವಾದುದಾಗಿದೆ.[೪೯] ಕೃಷಿಯನ್ನು ಹೊರತುಪಡಿಸಿದರೆ, ಐರೋಪ್ಯ ಒಕ್ಕೂಟ ಮತ್ತು ಸ್ವಿಟ್ಜರ್ಲೆಂಡ್‌‌ ನಡುವಿನ ಆರ್ಥಿಕ ಮತ್ತು ವಾಣಿಜ್ಯ ಪ್ರತಿಬಂಧಕಗಳ ಪ್ರಮಾಣ ಕಡಿಮೆ ಎಂದೇ ಹೇಳಬಹುದು. ಇಷ್ಟೇ ಅಲ್ಲದೇ ಸ್ವಿಟ್ಜರ್ಲೆಂಡ್ ವಿಶ್ವದಾದ್ಯಂತ ಮುಕ್ತ ವಾಣಿಜ್ಯ ಒಪ್ಪಂದಗಳನ್ನು ಮಾಡಿಕೊಂಡಿದೆ. ಸ್ವಿಟ್ಜರ್ಲೆಂಡ್‌‌ ಐರೋಪ್ಯ ಮುಕ್ತ ವ್ಯಾಪಾರ ಸಂಘದ (EFTA) ಸದಸ್ಯ ರಾಷ್ಟ್ರವಾಗಿದೆ.

ಶಿಕ್ಷಣ ವಿಜ್ಞಾನ ಮತ್ತು ತಂತ್ರಜ್ಞಾನ

[ಬದಲಾಯಿಸಿ]
ಕೆಲವು ಪ್ರಮುಖ ಸ್ವಿಸ್ ವಿಜ್ಞಾನಿಗಳೆಂದರೆ: ಲಿಯೊನಾರ್ಡ್ ಯೂಲರ್ (ಗಣಿತ) ಲೂಯಿಸ್ ಅಗಸ್ಸಿಸ್ (ಹಿಮನದಿಶಾಸ್ತ್ರ) ಆಲ್ಬರ್ಟ್‌ ಐನ್‌ಸ್ಟೈನ್ (ಭೌತಶಾಸ್ತ್ರ) ಅಗಸ್ಟೆ ಪಿಕ್ಕಾರ್ಡ್‌ (ವಾಯುಯಾನ ವಿಜ್ಞಾನ)

ಸ್ವಿಟ್ಜರ್ಲೆಂಡ್‌‌ನ ಸಂವಿಧಾನವು ಶಾಲಾ ವ್ಯವಸ್ಥೆಯ ಜವಾಬ್ದಾರಿಯನ್ನು ಕ್ಯಾಂಟನ್‌ಗಳಿಗೆ ವಹಿಸಿರುವುದರಿಂದ ಸ್ವಿಟ್ಜರ್ಲೆಂಡ್‌ನ‌ಲ್ಲಿನ ಶಿಕ್ಷಣ ವ್ಯವಸ್ಥೆಯು ವೈವಿಧ್ಯಮಯವಾಗಿದೆ.[೫೦] ಅಲ್ಲಿ ಅನೇಕ ಖಾಸಗಿ ಅಂತರರಾಷ್ಟ್ರೀಯ ಶಾಲೆಗಳೂ ಸೇರಿದಂತೆ ಸಾರ್ವಜನಿಕ ಮತ್ತು ಖಾಸಗಿ ಎರಡೂ ಮಾದರಿಯ ಶಾಲೆಗಳಿವೆ. ಎಲ್ಲಾ ಕ್ಯಾಂಟನ್‌ಗಳಲ್ಲಿ ಪ್ರಾಥಮಿಕ ಶಿಕ್ಷಣಕ್ಕೆ ಕನಿಷ್ಟ ವಯಸ್ಸು ಆರು ವರ್ಷಗಳೆಂದು ನಿಗದಿಪಡಿಸಲಾಗಿದೆ.[೫೦] ಶಾಲೆಗಳ ಮೇಲೆ ಆಧಾರಿತವಾಗಿ ಪ್ರಾಥಮಿಕ ಶಿಕ್ಷಣವು ನಾಲ್ಕು ಅಥವಾ ಐದನೇ ತರಗತಿಯವರೆಗೆ ಮುಂದುವರೆಯುತ್ತದೆ. ಸಾಂಪ್ರದಾಯಿಕವಾಗಿ ಶಾಲೆಗಳಲ್ಲಿ ಕಲಿಸುವ ಪ್ರಥಮ ವಿದೇಶಿ ಭಾಷೆಯು ಸಾಮಾನ್ಯವಾಗಿ ಇತರೆ ರಾಷ್ಟ್ರಗಳ ರಾಷ್ಟ್ರಭಾಷೆಯಾಗಿದ್ದರೂ, ಇತ್ತೀಚೆಗೆ (2000ರಲ್ಲಿ) ಕೆಲ ಕ್ಯಾಂಟನ್‌ಗಳು ಮೊದಲಿಗೆ ಆಂಗ್ಲ ಭಾಷೆಯನ್ನು ಪ್ರಪ್ರಥಮ ಬಾರಿಗೆ ಪರಿಚಯಿಸಿದವು.[೫೦] ಪ್ರಾಥಮಿಕ ಶಿಕ್ಷಣದ ಕೊನೆಗೆ (ಅಥವಾ ಮಾಧ್ಯಮಿಕ ಶಿಕ್ಷಣದ ಆರಂಭದಲ್ಲಿ), ವಿದ್ಯಾರ್ಥಿಗಳು ಅವರವರ ಸಾಮರ್ಥ್ಯಾನುಸಾರವಾಗಿ, ಅನೇಕ (ಸಾಧಾರಣವಾಗಿ ಮೂರು) ವಿಭಾಗಗಳಲ್ಲಿ ಪ್ರತ್ಯೇಕಿಸಲ್ಪಡುತ್ತಾರೆ. ವೇಗವಾಗಿ ಕಲಿಯಬಲ್ಲ ವಿದ್ಯಾರ್ಥಿಗಳು ಉನ್ನತ ತರಬೇತಿಗಳನ್ನು ಪಡೆದು ಉನ್ನತ ಶಿಕ್ಷಣಕ್ಕಾಗಿ ಹಾಗೂ ಮತುರಾ[೫೦] ಗೆಂದು ತಯಾರಾಗುತ್ತಾರೆ. ಆದರೆ ಸ್ವಲ್ಪ ನಿಧಾನವಾಗಿ ವಿದ್ಯೆಯನ್ನು ಅರಗಿಸಿಕೊಳ್ಳುವ ವಿದ್ಯಾರ್ಥಿಗಳು, ಹೆಚ್ಚಿನ ಮಟ್ಟಿಗೆ ಅವರವರ ಅಗತ್ಯಕ್ಕನುಸಾರವಾಗಿ ಅಳವಡಿಸಿದ ಶಿಕ್ಷಣವನ್ನು ಪಡೆಯುತ್ತಾರೆ.

ಜ್ಯೂರಿಚ್‌‌ನ ETH "ಝೆಂತ್ರಮ್‌" ಕ್ಯಾಂಪಸ್, ಸ್ವಿಟ್ಜರ್ಲೆಂಡ್‌‌‌ನಲ್ಲಿ ಪ್ರತಿಷ್ಠಿತ [150] ವಿಶ್ವವಿದ್ಯಾನಿಲಯವಾಗಿದ್ದು, ಇಲ್ಲಿ ಆಲ್ಬರ್ಟ್‌ ಐನ್‌ಸ್ಟೈನ್ ವಿದ್ಯಾಭ್ಯಾಸ ನಡೆಸಿದ್ದರು.

ಸ್ವಿಟ್ಜರ್ಲೆಂಡ್‌‌ನಲ್ಲಿ ಒಟ್ಟು 12 ವಿಶ್ವವಿದ್ಯಾಲಯಗಳಿದ್ದು, ಅವುಗಳಲ್ಲಿ ಹತ್ತು ವಿವಿಗಳನ್ನು ಕ್ಯಾಂಟನ್ ಮಟ್ಟದಲ್ಲಿ ನಿರ್ವಹಿಸಲಾಗುವುದಲ್ಲದೇ, ಸಾಧಾರಣವಾಗಿ ತಾಂತ್ರಿಕವಲ್ಲದ ವಿಷಯಗಳನ್ನು ಕಲಿಸಲಾಗುತ್ತದೆ. ಬಸೆಲ್‌ ನಲ್ಲಿ ಸ್ವಿಟ್ಜರ್ಲೆಂಡ್‌‌ನ ಪ್ರಥಮ ವಿಶ್ವವಿದ್ಯಾಲಯವನ್ನು 1460ರಲ್ಲಿ (ಔಷಧೀಯ ಬೋಧನಾಂಗದೊಂದಿಗೆ) ಸ್ಥಾಪಿಸಲಾಯಿತು. ಈ ನಗರವು ಸ್ವಿಟ್ಜರ್ಲೆಂಡ್‌ನಲ್ಲಿ ರಾಸಾಯನಿಕ ಮತ್ತು ವೈದ್ಯಕೀಯ ‌‌ಸಂಶೋಧನೆಗಳ ಪರಂಪರೆಯನ್ನು ಹೊಂದಿದೆ. ಸರಿಸುಮಾರು 25,000 ವಿದ್ಯಾರ್ಥಿಗಳಿರುವ ಜ್ಯೂರಿಚ್‌ ವಿಶ್ವವಿದ್ಯಾಲಯವು ಸ್ವಿಟ್ಜರ್ಲೆಂಡ್‌‌ನ ಅತಿ ದೊಡ್ಡ ವಿಶ್ವವಿದ್ಯಾಲಯವಾಗಿದೆ. ಒಕ್ಕೂಟ ಸರ್ಕಾರದಿಂದ ಆರ್ಥಿಕ ಬೆಂಬಲವನ್ನು ಪಡೆದ ಎರಡು ಸಂಸ್ಥೆಗಳೆಂದರೆ (1855ರಲ್ಲಿ ಸ್ಥಾಪಿತವಾದ)ಜ್ಯೂರಿಚ್‌ETHZ ಮತ್ತು ಲಾಸನ್ನೆEPFL (1969ರಲ್ಲಿ ಸ್ಥಾಪಿತವಾಗಿದ್ದರೂ, ಮೊದಲು ಲಾಸನ್ನೆ ವಿಶ್ವವಿದ್ಯಾಲಯಕ್ಕೆ ಒಳಪಟ್ಟಿತ್ತು). ಇವೆರಡೂ ಸಂಸ್ಥೆಗಳು ಉತ್ತಮ ಅಂತರರಾಷ್ಟ್ರೀಯ ಪ್ರಖ್ಯಾತಿಯನ್ನು ಪಡೆದಿವೆ. 2008ರಲ್ಲಿ ಜ್ಯೂರಿಚ್‌ನ ETH ಪ್ರಕೃತಿ ವಿಜ್ಞಾನ ಮತ್ತು ಗಣಿತ ಕ್ಷೇತ್ರದಲ್ಲಿ ಶಾಂಘಾಯ್‌ ವಿಶ್ವದ ವಿಶ್ವವಿದ್ಯಾಲಯಗಳ ಶೈಕ್ಷಣಿಕ ಶ್ರೇಯಾಂಕ[೫೧] ದ ಪಟ್ಟಿಯಲ್ಲಿ 15ನೇ ಶ್ರೇಯಾಂಕವನ್ನು ಪಡೆದರೆ, ಲಾಸನ್ನೆಯ EPFL ತಾಂತ್ರಿಕತೆ/ತಂತ್ರಜ್ಞಾನ ಮತ್ತು ಗಣಕ ವಿಜ್ಞಾನ ಕ್ಷೇತ್ರಗಳಲ್ಲಿ 18ನೇ ಸ್ಥಾನವನ್ನು ಅದೇ ಪಟ್ಟಿಯಲ್ಲಿ ಪಡೆಯಿತು. ಇವುಗಳಷ್ಟೇ ಅಲ್ಲದೇ ಅನೇಕ ಅನ್ವಯಿಕ ವಿಜ್ಞಾನಗಳ ವಿಶ್ವವಿದ್ಯಾಲಯಗಳೂ ಇವೆ. ಪದವಿ ಪೂರ್ವ ಹಾಗೂ ನಂತರದ ಶಿಕ್ಷಣದಲ್ಲಿ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಆಸ್ಟ್ರೇಲಿಯಾ ನಂತರದ ಎರಡನೇ ಅತಿ ದೊಡ್ಡ ಸ್ಥಾನವನ್ನು ಸ್ವಿಟ್ಜರ್ಲೆಂಡ್‌‌ ಹೊಂದಿದೆ.[೫೨] ವಿಶ್ವವಿಖ್ಯಾತ ಭೌತವಿಜ್ಞಾನಿ ಆಲ್ಬರ್ಟ್‌ ಐನ್‌ಸ್ಟೀನ್‌ರು ಬರ್ನ್‌ನಲ್ಲಿ ಕಾರ್ಯಪ್ರವೃತ್ತರಾಗಿದ್ದಾಗ ಸಂಶೋಧಿಸಿದ ಸಾಪೇಕ್ಷತಾ ಸಿದ್ಧಾಂತಕ್ಕಾಗಿ ನೀಡಿದ ಭೌತಶಾಸ್ತ್ರದ ನೊಬೆಲ್‌ ಪ್ರಶಸ್ತಿಯೂ ಸೇರಿದಂತೆ ಅನೇಕ ನೊಬೆಲ್‌ ಪ್ರಶಸ್ತಿಗಳನ್ನು ಸ್ವಿಸ್ ವಿಜ್ಞಾನಿಗಳಿಗೆ ನೀಡಲಾಗಿದೆ. ಇತ್ತೀಚಿನ ವ್ಲಾಡಿಮಿರ್‌ ಪ್ರಿಲಾಗ್‌, ಹೇನ್‌ರಿಕ್‌ ಅರ್ನೆಸ್ಟ್‌, ರಿಚರ್ಡ್‌ ಅರ್ನೆಸ್ಟ್‌, ಎಡ್ಮಂಡ್‌ ಫಿಶರ್‌, ರಾಲ್ಫ್‌ ಜಿಂಕರ್‌ನ್ಯಾಗೆಲ್‌ ಮತ್ತು ಕುರ್ಟ್‌ ವುತ್ರಿಚ್‌ಗಳು ಸಹಾ ವೈಜ್ಞಾನಿಕ ಸಂಶೋಧನೆಗಳಿಗೆ ನೊಬೆಲ್‌ ಪ್ರಶಸ್ತಿಯನ್ನು ಪಡೆದರು. ಒಟ್ಟಾರೆಯಾಗಿ ಸ್ವಿಟ್ಜರ್ಲೆಂಡ್‌[೫೩]‌ನೊಂದಿಗೆ ಸಂಬಂಧಿಸಿದ 113 ನೊಬೆಲ್‌ ಪ್ರಶಸ್ತಿ ವಿಜೇತರಿದ್ದಾರೆ ಮತ್ತು ಸ್ವಿಟ್ಜರ್ಲೆಂಡ್‌‌ನಲ್ಲಿರುವ ಸಂಸ್ಥೆಗಳಿಗೆ 9 ಬಾರಿ ನೊಬೆಲ್‌ ಶಾಂತಿ ಪ್ರಶಸ್ತಿ ಸಂದಿದೆ.[೫೪]

LHC ಸುರಂಗ ವಿಶ್ವದ ಅತಿ ದೊಡ್ಡ ಪ್ರಯೋಗಾಲಯ, ಜಿನೀವಾ

ಜಿನೀವಾ ಕಣ ಭೌತಶಾಸ್ತ್ರದ ಸಂಶೋಧನೆಗೆಂದು ಮೀಸಲಾದ ವಿಶ್ವದ ಅತಿ ದೊಡ್ಡ ಪ್ರಯೋಗಾಲಯವಾದ CERN[೫೫] ನ್ನು ಹೊಂದಿದೆ. ಮತ್ತೊಂದು ಪ್ರಮುಖ ಸಂಶೋಧನಾ ಕೇಂದ್ರವೆಂದರೆ ಪಾಲ್‌ ಷೆರ್ರರ್‌ ಸಂಸ್ಥೆ. ಗಮನಾರ್ಹ ಅವಿಷ್ಕಾರಗಳೆಂದರೆ ಲಿಸರ್ಜಿಕ್‌ ಆಸಿಡ್‌ ಡೈಥೈಲಮೈಡ್‌ (LSD), ಸ್ಕ್ಯಾನಿಂಗ್‌ ಟನಲಿಂಗ್‌ ಸೂಕ್ಷ್ಮದರ್ಶಕ (ನೊಬೆಲ್‌ ಪ್ರಶಸ್ತಿ ವಿಜೇತ) ಅಥವಾ ಬಹು ಜನಪ್ರಿಯ ವೆಲ್ಕ್ರೋ. ಆಗಸ್ಟೆ ಪಿಕ್ಕಾರ್ಡ್‌ನ ಒತ್ತಡೀಕೃತ ಬಲೂನ್‌ ಮತ್ತು ಜ್ಯಾಕ್ವಿಸ್‌ ಪಿಕ್ಕಾರ್ಡ್‌ಗೆ ವಿಶ್ವದ ಸಾಗರಗಳ ಆಳದ ತಾಣವನ್ನು ಮುಟ್ಟಲು ಸಾಧ್ಯವಾಗಿಸಿದ ಬ್ಯಾಥಿಸ್ಕೇಫ್‌ನಂತಹಾ ಕೆಲವೊಂದು ತಂತ್ರಜ್ಞಾನಗಳು ಹೊಸದೊಂದು ಲೋಕವನ್ನೇ ತೆರೆದವು.

ಸ್ವಿಟ್ಜರ್ಲೆಂಡ್‌‌ ಬಾಹ್ಯಾಕಾಶ ಸಂಸ್ಥೆ ಎಂಬ ಸ್ವಿಸ್ ಬಾಹ್ಯಾಕಾಶ ಕಚೇರಿಯು ಅನೇಕ ಬಾಹ್ಯಾಕಾಶ ತಂತ್ರಜ್ಞಾನಗಳು ಹಾಗೂ ಬಾಹ್ಯಾಕಾಶ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದೆ. ಇದರೊಂದಿಗೆ ಈ ರಾಷ್ಟ್ರವು ಐರೋಪ್ಯ ಬಾಹ್ಯಾಕಾಶ ಸಂಸ್ಥೆಯನ್ನು 1975ರಲ್ಲಿ ಸ್ಥಾಪಿಸಿದ 10 ರಾಷ್ಟ್ರಗಳಲ್ಲಿ ಒಂದಾಗಿರುವುದಲ್ಲದೇ, ESAನ ಒಟ್ಟು ಆಯವ್ಯಯದ ಏಳನೇ ಅತಿ ದೊಡ್ಡ ದೇಣಿಗೆದಾರನಾಗಿದೆ. ಖಾಸಗಿ ಕ್ಷೇತ್ರದಲ್ಲಿ, ಓರ್ಲಿಕೊನ್‌ ಸ್ಪೇಸ್‌ [೫೬] ಅಥವಾ ಗಗನ ನೌಕೆಯ ಭಾಗಗಳನ್ನು ಉತ್ಪಾದಿಸುವಂತಹಾ ಮ್ಯಾಕ್ಸನ್‌ ಮೋಟಾರ್ಸ್[೫೭] ನಂತಹ ಅನೇಕ ಕಂಪೆನಿಗಳು ಬಾಹ್ಯಾಕಾಶ ಉದ್ದಿಮೆಯಲ್ಲಿ ತೊಡಗಿಕೊಂಡಿವೆ.

ಸ್ವಿಟ್ಜರ್ಲೆಂಡ್‌‌ ಮತ್ತು ಐರೋಪ್ಯ ಒಕ್ಕೂಟ

[ಬದಲಾಯಿಸಿ]

ಡಿಸೆಂಬರ್ 1992ರಲ್ಲಿ ಸ್ವಿಟ್ಜರ್ಲೆಂಡ್‌‌, ಐರೋಪ್ಯ ಆರ್ಥಿಕ ವಲಯದ ಸದಸ್ಯತ್ವದ ವಿರುದ್ಧ ಮತ ಹಾಕಿತು, ಆದರೂ ಇದು ದ್ವಿಪಕ್ಷೀಯ ಒಪ್ಪಂದಗಳ ಮೂಲಕ ಐರೋಪ್ಯ ಒಕ್ಕೂಟ(EU) ಹಾಗೂ ಐರೋಪ್ಯ ರಾಷ್ಟ್ರಗಳ ಜೊತೆಗೆ ಒಳ್ಳೆಯ ಸಂಬಂಧವನ್ನು ಉಳಿಸಿಕೊಂಡು ಬಂದಿದೆ. ಮಾರ್ಚ್ 2001ರಲ್ಲಿ, EU[೫೮] ಜೊತೆಗೆ ಸೇರಲು ನಡೆಸಿದ ಮಾತುಕತೆಗೆ ವಿರುದ್ಧವಾಗಿ ಸ್ವಿಸ್ ಜನರು ಮತ ಹಾಕಿದರು. ಇತ್ತೀಚಿನ ವರ್ಷಗಳಲ್ಲಿ, ಸ್ವಿಸ್ ತನ್ನ ಆರ್ಥಿಕ ಪದ್ಧತಿಗಳ ವಿಚಾರದಲ್ಲಿ ಬಹಳಷ್ಟು ರೀತಿಯಲ್ಲಿ EUನ ಅನುಕರಣೆ ಮಾಡುತ್ತಿದ್ದು ಅಂತರರಾಷ್ಟ್ರೀಯ ಪೈಪೋಟಿಯನ್ನು ಹೆಚ್ಚಿಸಲು ಪ್ರಯತ್ನ ನಡೆಸಿದೆ. ಇತ್ತೀಚಿನ ದಿನಗಳಲ್ಲಿ ಆರ್ಥಿಕ ಸ್ಥಿತಿಯು ವರ್ಷಕ್ಕೆ 3%ರಷ್ಟು ಬೆಳೆಯುತ್ತಿದೆ. ಸ್ವಿಸ್ ಸರ್ಕಾರದ ಕೆಲವು ದೀರ್ಘಾವಧಿಯ ಉದ್ದೇಶಗಳಲ್ಲಿ ಸಂಪೂರ್ಣ EU ಸದಸ್ಯತ್ವವೂ ಕೂಡ ಒಂದಾಗಿದೆ, ಆದರೂ ಸಂಪ್ರದಾಯವಾದಿಗಳು SVP ಇದರ ವಿರುದ್ದ ಧ್ವನಿಯೆತ್ತಿದ್ದಾರೆ. ದಕ್ಷಿಣದ ಫ್ರೆಂಚ್-ಭಾಷಿಕ ವಲಯಗಳು ಹಾಗೂ ದೇಶದ ಕೆಲವು ನಗರ ವಲಯಗಳು EU ಕಡೆಗೆ ಹೆಚ್ಚು ಒಲವು ತೋರಿದಂತೆ ಕಂಡರೂ, ಒಟ್ಟು ಜನಸಂಖ್ಯೆಗೆ ಹೋಲಿಸಿದಾಗ ಅದರ ಪ್ರಮಾಣ ನಗಣ್ಯವಾಗಿದೆ.[೫೯][೬೦]

ಏಕೀಕರಣದ ಕಾರ್ಯಾಲಯವನ್ನು ಸರ್ಕಾರವು ವಿದೇಶಾಂಗ ಇಲಾಖೆ ಮತ್ತು ಆರ್ಥಿಕ ಇಲಾಖೆಗಳಡಿ ಬರುವಂತೆ ರಚಿಸಿದೆ. ಸ್ವಿಟ್ಜರ್ಲೆಂಡ್‌‌‌ನ ಪ್ರತ್ಯೇಕೀಕರಣದಿಂದಾಗುವ ಕೆಟ್ಟ ಪರಿಣಾಮಗಳನ್ನು ಕಡಿಮೆ ಮಾಡಿ ವ್ಯಾಪಾರವನ್ನು ಮತ್ತಷ್ಟು ಉದಾರೀಕರಣಗೊಳಿಸಲು ಯುರೋಪ್‌ನ ಉಳಿದ ಭಾಗ, ಬರ್ನ್‌ ಮತ್ತು ಬ್ರುಸೆಲ್ಸ್‌ನಲ್ಲಿ ಹಲವು ದ್ವಿಪಕ್ಷೀಯ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. 1999ರಲ್ಲೇ ಈ ಒಪ್ಪಂದಗಳಿಗೆ ಸಹಿ ಹಾಕಲಾಯಿತಾದರೂ 2001ರಿಂದೀಚೆಗೆ ಕಾರ್ಯಗತಗೊಳಿಸಲಾಯಿತು. ಪ್ರಥಮ ಸರಣಿಯ ದ್ವಿಪಕ್ಷೀಯ ಒಪ್ಪಂದಗಳಲ್ಲಿ ಮಾನವ ಸಂಪನ್ಮೂಲಗಳ ಮುಕ್ತ ಸಂಚಾರ ಮತ್ತು 2004ರಲ್ಲಿ ಎರಡನೆ ಸರಣಿಯಲ್ಲಿ ಒಂಬತ್ತು ಕ್ಷೇತ್ರಗಳಿಗೆ ಅನುಮೋದನೆ ನೀಡಿ ಸಹಿ ಹಾಕಲಾಯಿತು. ಎರಡನೆ ಸರಣಿಯು ಷೆಂಗೆನ್‌‌‌‌ ಸಂಧಾನ ಮತ್ತು ಡಬ್ಲಿನ್ ಅಧಿವೇಶನಗಳನ್ನು ಒಳಗೊಂಡಿದ್ದು, ಮತ್ತಷ್ಟು ಕ್ಷೇತ್ರಗಳಲ್ಲಿ ಸಹಕಾರಕ್ಕಾಗಿ ಮಾತುಕತೆಯನ್ನು ಮುಂದುವರಿಸಿದ್ದಾರೆ. 2006ರಲ್ಲಿ, ಸ್ವಿಟ್ಜರ್ಲೆಂಡ್‌‌ ಪೂರ್ವ ಯುರೋಪ್‌ನ ಬಡ ದೇಶಗಳ ಮತ್ತು ಸಮಗ್ರ EUನ ಬೆಳವಣಿಗೆಗೆ ಧನಾತ್ಮಕ ಒಪ್ಪಂದ ಹಾಗೂ ಸಹಕಾರಗಳ ಅಂಗವಾಗಿ ಒಂದು ಶತಕೋಟಿ ಫ್ರಾಂಕ್‍ಗಳ ಹೂಡಿಕೆಗೆ ಒಪ್ಪಿಕೊಂಡಿತು‌. ಇನ್ನಷ್ಟು ಜನಾಭಿಪ್ರಾಯ ದೊರೆತ ನಂತರ ರೊಮೇನಿಯಾ ಮತ್ತು ಬಲ್ಗೇರಿಯಾಗಳಿಗೆ 300 ದಶಲಕ್ಷ ಫ್ರಾಂಕ್‌ಗಳ ಸಹಕಾರ ನೀಡುವುದಾಗಿ ತಿಳಿಸಿದೆ. ಹಲವು ಬಾರಿ ಸ್ವಿಸ್‌, ತೆರಿಗೆ ದರಗಳನ್ನು ಹೆಚ್ಚಿಸಿ ಮತ್ತು ಬ್ಯಾಂಕಿಂಗ್ ದತ್ತದ ರಹಸ್ಯ ವ್ಯವಸ್ಥೆಯನ್ನು ಸಡಿಲಗೊಳಿಸಿ EUನಾದ್ಯಂತ ಸಮಾನತೆ ಕಾಯ್ದುಕೊಳ್ಳುವಂತೆ EU ಮತ್ತು ಅಂತರರಾಷ್ಟ್ರೀಯ ಸಮುದಾಯಗಳು ಒತ್ತಡ ಹೇರಿವೆ. ವಿದ್ಯುಚ್ಛಕ್ತಿ ಮಾರುಕಟ್ಟೆಯನ್ನು ಮುಕ್ತವಾಗಿಸುವುದು, ಐರೋಪ್ಯ GNSS ಗೆಲಿಲಿಯೋ ಯೋಜನೆಗಳಲ್ಲಿ ಭಾಗಿಯಾಗುವುದು, ಐರೋಪ್ಯ ರೋಗ ನಿಯಂತ್ರಣ ಮತ್ತು ಆಹಾರೋತ್ಪನ್ನಗಳ ಮಾನ್ಯತೆ ದೃಢೀಕರಣ ಕೇಂದ್ರಕ್ಕೆ ಸಹಕಾರ ನೀಡುವುದೂ ಸೇರಿದಂತೆ ನಾಲ್ಕು ವಲಯಗಳಲ್ಲಿ ಪ್ರಸಕ್ತವಾಗಿ ಪೂರ್ವಭಾವಿ ಮಾತುಕತೆಗಳು ನಡೆಯುತ್ತಿವೆ.

ಐರೋಪ್ಯ ಒಕ್ಕೂಟದ ಗೃಹ ಖಾತೆ ಸಚಿವಾಲಯ ಡಿಸೆಂಬರ್ 12 2008ರಿಂದ, ಸ್ವಿಟ್ಜರ್ಲೆಂಡ್‌‌‌ಗೆ ಷೆಂಗೆನ್‌‌ ಪಾಸ್‌ಪೋರ್ಟ್ ಮುಕ್ತ ವಲಯದ ಪ್ರವೇಶಾನುಮತಿ ನೀಡಲಾಗಿದೆ ಎಂದು ಬ್ರುಸೆಲ್ಸ್‌ನಲ್ಲಿ ನವಂಬರ್ 27 2008ರಂದು ಪ್ರಕಟಿಸಿತು. ಭೂ-ಗಡಿಯ ತಪಾಸಣಾ ಶಿಬಿರಗಳಲ್ಲಿನ ನಿಯಂತ್ರಣವು ಸರಕು ಸಾಗಾಟಗಳಿಗೆ ಮಾತ್ರ ಸೀಮಿತವಾಗಿದ್ದು ಜನರ ಓಡಾಟಕ್ಕೆ ಯಾವುದೇ ನಿಯಂತ್ರಣವಿರುವುದಿಲ್ಲ, ಆದರೆ 29 ಮಾರ್ಚ್ 2009ರ ತನಕ ಷೆಂಗೆನ್‌‌ ದೇಶದ ಪ್ರಜೆಗಳನ್ನು ಪಾಸ್‌ಪೋರ್ಟ್ ಹೊಂದಿರುವುದರ ಬಗ್ಗೆ ತಪಾಸಣೆಗೊಳಪಡಿಸಲಾಗುತ್ತದೆ.

ಮೂಲಭೂತ ವ್ಯವಸ್ಥೆ ಮತ್ತು ಪರಿಸರ

[ಬದಲಾಯಿಸಿ]
ಚಿತ್ರ:KKG-SW-Flight.jpg
ಗಸ್‌ಜೆನ್‌ ಪರಮಾಣು ಶಕ್ತಿ ಸ್ಥಾವರವು ಸ್ವಿಟ್ಜರ್ಲೆಂಡ್‌‌‌ನ ನಾಲ್ಕು ಸ್ಥಾವರಗಳಲ್ಲಿ ಒಂದಾಗಿದೆ.

ಸ್ವಿಟ್ಜರ್ಲೆಂಡ್‌‌‌ನಲ್ಲಿ 56% ಜಲವಿದ್ಯುಚ್ಛಕ್ತಿಯಿಂದ 39% ಪರಮಾಣು ವಿದ್ಯುಚ್ಛಕ್ತಿಯಿಂದ, ಮತ್ತು 5%ರಷ್ಟು ಸಾಂಪ್ರದಾಯಿಕ ಶಕ್ತಿ ಮೂಲಗಳಿಂದ ವಿದ್ಯುಚ್ಛಕ್ತಿ ಉತ್ಪಾದನೆಯಾಗುತ್ತಿರುವುದರಿಂದ ಬಹುಪಾಲು ಇದು CO2-ಮುಕ್ತ ವಿದ್ಯುಚ್ಛಕ್ತಿ-ಉತ್ಪಾದನಾ ಜಾಲವಾಗಿದೆ.

18 ಮೇ 2003ರಲ್ಲಿ, ಮೊರಾಟೋರಿಯಂ ಪ್ಲಸ್‌ ಎಂಬ ಸಂಘಟನೆಯು ಉದ್ದೇಶಿಸಿದಂತೆ ಹೊಸ ಪರಮಾಣು ಶಕ್ತಿ ಸ್ಥಾವರ(41.6% ಬೆಂಬಲ ಮತ್ತು 58.4% ವಿರೋಧದೊಂದಿಗೆ)[೬೧] ಗಳ ನಿರ್ಮಾಣದ ಮೇಲೆ ನಿಷೇಧ ಮತ್ತು ಪರಮಾಣು ಬಳಕೆಯಿಲ್ಲದ ವಿದ್ಯುಚ್ಛಕ್ತಿ ಉತ್ಪಾದನೆ (33.7% ಬೆಂಬಲ ಮತ್ತು 66.3% ವಿರೋಧದೊಂದಿಗೆ) ಇವೆರಡೂ ಪರಮಾಣು ವಿರೋಧಿ ಚಟುವಟಿಕೆಗಳು ಸ್ಥಗಿತಗೊಂಡವು.[೬೨] ಹೊಸ ಪರಮಾಣು ಶಕ್ತಿ ಸ್ಥಾವರಗಳ ನಿರ್ಮಾಣಕ್ಕೆ ಹೇರಿದ್ದ ತಾತ್ಕಾಲಿಕ ನಿಷೇಧವು 1990ರಲ್ಲಿ ನಡೆದ ಹತ್ತು ವರ್ಷಗಳ ಹಿಂದಿನ ಸಾರ್ವಜನಿಕರ ಸ್ವಪ್ರೇರಣೆಯ ಫಲವಾಗಿ 54.5% ಸಕಾರಾತ್ಮಕ ಹಾಗೂ 45.5% ನಕಾರಾತ್ಮಕ ಪ್ರತಿಕ್ರಿಯೆ ಪಡೆದ ಜನಾಭಿಪ್ರಾಯದಂತೆ ಆಗಿದೆ. ಹೊಸ ಪರಮಾಣು ಸ್ಥಾವರವನ್ನು ಬರ್ನ್‌‌‌‌‌‌‌‌ನ ಕ್ಯಾಂಟನ್‌ನಲ್ಲಿ ನಿರ್ಮಿಸಲು ಯೋಜಿಸಲಾಗಿದೆ. ಪರಿಸರ, ಸಾರಿಗೆ, ಇಂಧನ ಮತ್ತು ಸಂಪರ್ಕ ಸಂಯುಕ್ತ ಇಲಾಖೆಗಳಲ್ಲಿನ (DETEC) ಇಂಧನ ಸರಬರಾಜು ಮತ್ತು ಇಂಧನ ಬಳಕೆಗೆ ಸಂಬಂಧಿಸಿದಂತೆ ಎಲ್ಲದಕ್ಕೂ ದಿ ಸ್ವಿಸ್ ಫೆಡರಲ್ ಆಫೀಸ್ ಆಫ್ ಎನರ್ಜಿ(SFOE) ಜವಾಬ್ದಾರಿಯಾಗಿದೆ. ಈ ನಿಯೋಗವು 2050ರೊಳಗೆ ದೇಶದ ಇಂಧನ ಬಳಕೆಯನ್ನು ಅರ್ಧಕ್ಕೆ ಇಳಿಸಲು 2000-ವ್ಯಾಟ್‌ ಸಮುದಾಯ ಯೋಜನೆಗೆ ಬೆಂಬಲ ನೀಡುತ್ತಿದೆ.[೬೩]

ಲಾಟ್ಷ್‌ಬರ್ಗ್ ರೈಲ್ವೆ ಹಳಿಯ ಕೆಳಗಿರುವ, ವಿಶ್ವದಲ್ಲೇ ಮೂರನೇ ಅತಿ ಉದ್ದದ ರೈಲ್ವೆ ಸುರಂಗ ಮಾರ್ಗವಾದ, ಹೊಸ ಲಾಟ್ಷ್‌ಬರ್ಗ್ ಮೂಲ ಸುರಂಗ ಮಾರ್ಗದ ಪ್ರವೇಶದ್ವಾರ. ಆಲ್ಪ್ಸ್‌ ಟ್ರಾನ್ಸಿಟ್‌ ಯೋಜನೆಯ ಪ್ರಥಮ ಸುರಂಗ ಮಾರ್ಗ ನಿರ್ಮಾಣ

ಸ್ವಿಸ್ ಖಾಸಗಿ-ಸಾರ್ವಜನಿಕ ಸಹಭಾಗಿತ್ವದ ಭೂ ಸಂಚಾರ ಮಾರ್ಗಗಳು ರಸ್ತೆ ಸುಂಕ ಮತ್ತು ವಾಹನಗಳ ತೆರಿಗೆಗಳಿಂದ ಆದಾಯ ಪಡೆಯುತ್ತಿವೆ. ಸ್ವಿಸ್‌ನ ಜರ್ಮನಿ /ಫ್ರಾನ್ಸ್‌ ಮಾದರಿಯ ಮೋಟಾರು ಹೆದ್ದಾರಿ ವ್ಯವಸ್ಥೆ ಬಳಸಲು ಕಾರು ಮತ್ತು ಸರಕು ಸಾಗಣೆ ವಾಹನಗಳೆರಡಕ್ಕೂ ಸೇರಿ—ವಾರ್ಷಿಕ 40 ಸ್ವಿಸ್ ಫ್ರಾಂಕ್‌ ಕೊಟ್ಟು ವಿಗ್ನೆಟ್ಟೆಗಳನ್ನು (ಸುಂಕದ ಚೀಟಿಗಳು) ಖರೀದಿಸಬೇಕಾಗುತ್ತದೆ. ಸ್ವಿಸ್‌ನ ಜರ್ಮನಿ ಮಾದರಿಯ ಮೋಟಾರು ಹೆದ್ದಾರಿ ವ್ಯವಸ್ಥೆಯ ಒಟ್ಟು ಉದ್ದ 1,638 km(2000ರ ಗಣನೆಯಂತೆ) ಮತ್ತು, ವಿಸ್ತೀರ್ಣ 41,290 km² ಇದ್ದು, ಪ್ರಪಂಚದ ಅತಿ ಹೆಚ್ಚು ಸಾಂದ್ರತೆಯುಳ್ಳ ಮೋಟಾರು ಹೆದ್ದಾರಿಗಳಲ್ಲಿ ಇದೂ ಒಂದಾಗಿದೆ. ಜ್ಯೂರಿಚ್‌ ವಿಮಾನ ನಿಲ್ದಾಣ ಸ್ವಿಟ್ಜರ್ಲೆಂಡ್‌‌‌ನ ಅತಿ ದೊಡ್ಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಾಗಿದ್ದು, 2007ರಲ್ಲಿ 20.7 ದಶಲಕ್ಷ ಪ್ರಯಾಣಿಕರನ್ನು ನಿರ್ವಹಿಸಿದೆ. ಜಿನೀವಾ ಕಾಯಿಂಟ್ರಿನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಎರಡನೇ ಅತಿದೊಡ್ಡ ವಿಮಾನ ನಿಲ್ದಾಣವಾಗಿದ್ದು 10.8 ದಶಲಕ್ಷ ಪ್ರಯಾಣಿಕರನ್ನು ನಿರ್ವಹಿಸಿದೆ ಮತ್ತು ಯುರೋ ವಿಮಾನ ನಿಲ್ದಾಣ ಬಸೆಲ್-ಮ್ಯೂಲ್‌ಹೌಸ್-ಫೈರ್‌ಬರ್ಗ್ ಮೂರನೇ ಅತಿದೊಡ್ಡ ವಿಮಾನ ನಿಲ್ದಾಣವಾಗಿದ್ದು 4.3 ದಶಲಕ್ಷ ಪ್ರಯಾಣಿಕರನ್ನು ನಿರ್ವಹಿಸಿತ್ತು. ಇವೆರಡೂ ವಿಮಾನ ನಿಲ್ದಾಣಗಳನ್ನು ಫ್ರಾನ್ಸ್‌‌ನೊಂದಿಗೆ ಹಂಚಿಕೊಂಡಿದೆ.

ಸ್ವಿಟ್ಜರ್ಲೆಂಡ್‌‌‌‌‌‌‌‌‌‌‌‌‌‌ನ ರೈಲ್ವೆ ಮಾರ್ಗವು 5,063 km ಉದ್ದವಿದ್ದು ವಾರ್ಷಿಕ 350 ದಶಲಕ್ಷಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ಯುತ್ತವೆ.[೬೪] 2007ರಲ್ಲಿ, ಪ್ರತಿ ಸ್ವಿಸ್ ಪ್ರಜೆ ರೈಲಿನಲ್ಲಿ ಸರಾಸರಿ 2,103 kmಗಳಷ್ಟು ಪ್ರಯಾಣಿಸಿ, ಅತ್ಯಂತ ಉತ್ಸುಕ ರೈಲ್ವೇ ಬಳಕೆದಾರರು ಎನಿಸಿಕೊಂಡಿದ್ದಾರೆ.[೬೫] 366 km ಉದ್ದದ ನ್ಯಾರೋ ಗೇಜಿನ ರೈಲ್ವೆ ಸೇರಿದಂತೆ ಪ್ರಪಂಚದ ಕೆಲವು ಪಾರಂಪರಿಕ ಮಾರ್ಗಗಳು ಮತ್ತು ಗ್ರಾವುಬುಂಡೆನ್‌ ರೈಲ್ವೆ ಮಾರ್ಗವನ್ನು ರೇಟಿಯನ್ ರೈಲ್ವೇಸ್‌‌ನವರು ನಡೆಸಿಕೊಂಡು ಬರುತ್ತಿದ್ದರೆ, ಉಳಿದೆಲ್ಲ ಮಾರ್ಗಗಳನ್ನು ಒಕ್ಕೂಟ ರೈಲ್ವೇಸ್‌‌ನವರು ನಡೆಸಿಕೊಂಡು ಬರುತ್ತಿದ್ದಾರೆ.[೬೬] ಆಲ್ಪ್ಸ್‌ನಲ್ಲಿ ನಿರ್ಮಾಣವಾಗುತ್ತಿರುವ ಹೊಸ ರೈಲ್ವೆ ಸುರಂಗ ಮಾರ್ಗವು ಉತ್ತರದಿಂದ ದಕ್ಷಿಣಕ್ಕೆ ತೆಗೆದುಕೊಳ್ಳುವ ಪ್ರಯಾಣ ಸಮಯವನ್ನು ಉಳಿತಾಯ ಮಾಡುತ್ತದೆ.

ಸ್ವಿಟ್ಜರ್ಲೆಂಡ್‌‌‌ ತ್ಯಾಜ್ಯ ಸಂಸ್ಕರಣೆ ಹಾಗೂ ಪುನರ್ಬಳಕೆ ನಿಯಮಾವಳಿಗಳನ್ನು ರಚಿಸಿ, ತ್ಯಾಜ್ಯ ಸಂಸ್ಕರಣೆ ಹಾಗೂ ಪುನರ್ಬಳಕೆಯಲ್ಲಿ ಹೆಚ್ಚು ಸಕ್ರಿಯವಾಗಿ, ಅಂದರೆ 66% ರಿಂದ 96% ನಷ್ಟು ಪುನರ್ಬಳಸಹುದಾದ ವಸ್ತುಗಳನ್ನು ಸಂಸ್ಕರಿಸಿ ಪುನರ್ಬಳಕೆ ಮಾಡಲಾಗುತ್ತದೆ. ತ್ಯಾಜ್ಯ ಪುನರ್ಬಳಸುವ ರಾಷ್ಟ್ರಗಳಲ್ಲಿ ಇದು ಮುಂಚೂಣಿಯಲ್ಲಿದೆ.[೬೭] ಸ್ವಿಟ್ಜರ್ಲೆಂಡ್‌‌‌ನ ಕೆಲವು ಪ್ರದೇಶಗಳಲ್ಲಿ, ಗೃಹ ತ್ಯಾಜ್ಯಗಳ ವಿಲೇವಾರಿಗೆ ಹಣ ಕೊಡಬೇಕಾಗುತ್ತದೆ. ಕಸವನ್ನು (ಬ್ಯಾಟರಿಯಂತಹ ಹಾನಿಕಾರಕ ವಸ್ತುಗಳನ್ನು ಬಿಟ್ಟು) ರಸೀದಿ ಚೀಟಿಯನ್ನು ಅಂಟಿಸಿರುವ, ಅಥವಾ ಅಧಿಕೃತವಾಗಿ ಹಣಕೊಟ್ಟು ಖರೀದಿಸಿರುವ ಚೀಲಗಳಲ್ಲಿದ್ದರೆ ಮಾತ್ರ ಸಂಗ್ರಹಿಸಲಾಗುತ್ತದೆ.[೬೮] ಪುನರ್ಬಳಕೆ ಉಚಿತವಾಗಿ ನಡೆಯುವುದರಿಂದ, ಈ ರೀತಿಯ ಸಂಗ್ರಹಣೆಯಿಂದ ಪುನರ್ಬಳಕೆಯ ಕೆಲಸಕ್ಕೆ ವಿನಿಯೋಗವಾಗುವಂತೆ ಹಣ ಸಂಗ್ರಹಣೆಯಾಗುತ್ತದೆ.[೬೯] ಹಣ ಕೊಟ್ಟು ಖರೀದಿಸದಿದ್ದ ಚೀಲಗಳೇನಾದರೂ ಸಿಕ್ಕರೆ, ಸ್ವಿಸ್ ಆರೋಗ್ಯ ಅಧಿಕಾರಿಗಳು ಮತ್ತು ಪೋಲೀಸರು ಅವುಗಳು ಎಲ್ಲಿಂದ ಬಂದಿದೆಯೆಂದು ತಿಳಿಯಲು ಸುಳಿವುಗಳು ಅಂದರೆ ಹಳೆ ರಶೀದಿಗಳನ್ನು ಹುಡುಕಿ ಪತ್ತೆ ಹಚ್ಚಿ, ಅಂತಹವರಿಗೆ ಸುಮಾರು 200 ರಿಂದ 500 CHFಗಳನ್ನು ದಂಡವಾಗಿ ವಿಧಿಸುತ್ತಾರೆ.[೭೦]

ಜನಗಣತಿ

[ಬದಲಾಯಿಸಿ]
ಸ್ವಿಟ್ಜರ್ಲೆಂಡ್‌‌‌ನ ಅಧಿಕೃತ ಭಾಷೆಗಳು

ಹಲವು ಪ್ರಮುಖ ಯುರೋಪಿನ ಸಂಸ್ಕೃತಿಗಳು ಸ್ವಿಟ್ಜರ್ಲೆಂಡ್‌‌‌ನ ಸಂಸ್ಕೃತಿ ಮತ್ತು ಭಾಷೆಗಳ ಮೇಲೆ ಪ್ರಭಾವ ಬೀರಿವೆ. ಸ್ವಿಟ್ಜರ್ಲೆಂಡ್‌‌‌ನಲ್ಲಿ ನಾಲ್ಕು ಅಧಿಕೃತ ಭಾಷೆಗಳಿವೆ: ಜರ್ಮನ್ (ಒಟ್ಟು ಜನ ಸಂಖ್ಯೆಯಲ್ಲಿ 63.7%, ಜೊತೆಗೆ ವಿದೇಶೀ ವಲಸಿಗರು; ಅದರಲ್ಲಿ 72.5% ಸ್ವಿಸ್ ಪೌರತ್ವ ಹೊಂದಿದ ವಲಸಿಗರು, 2000ನೇ ಇಸವಿಯಂತೆ) ಉತ್ತರಕ್ಕೆ, ಪೂರ್ವ ಮತ್ತು ಮಧ್ಯ ಭಾಗದಲ್ಲಿ; ಪಶ್ಚಿಮಕ್ಕೆ ಫ್ರೆಂಚ್ (20.4%; 21.0%); ದಕ್ಷಿಣಕ್ಕೆ ಇಟಾಲಿಯನ್ (6.5%; 4.3%).[೭೧] ರೋಮಾಂಶ್‌ , ರೋಮನ್ ಭಾಷೆಯಾಗಿದ್ದು ಅಲ್ಪ ಸಂಖ್ಯಾತರು ಆಗ್ನೇಯ ಕ್ಯಾಂಟನ್‌ನ ಗ್ರಾವುಬುಂಡೆನ್‌ನಲ್ಲಿ ಸ್ಥಳೀಯವಾಗಿ ಮಾತನಾಡಲು ಬಳಸುತ್ತಾರೆ(0.5%; 0.6%), ಸಂಯುಕ್ತ ರಾಷ್ಟ್ರೀಯ ಶಾಸನವು ಜರ್ಮನ್, ಫ್ರೆಂಚ್‌ ಮತ್ತು ಇಟಾಲಿಯನ್ ಭಾಷೆಗಳ ಜೊತೆಗೆ (ಶಾಸನದ 4ನೇ ಕಲಮು) ರೋಮಾಂಶ್‌ ಭಾಷೆ (70ನೇ ಕಲಮು)ಯನ್ನು ಅಧಿಕೃತ ಭಾಷೆ ಎಂದಿದೆ, ಆದರೆ ಒಕ್ಕೂಟ ಕಾನೂನುಗಳು ಮತ್ತು ಬೇರೆ ಅಧಿಕೃತ ಕಾಯಿದೆಗಳು ಈ ಭಾಷೆಗಳಲ್ಲಿ ಆಗಬೇಕೆಂದೇನೂ ಇಲ್ಲ. ಒಕ್ಕೂಟ ಸರಕಾರವು ತನ್ನ ಅಧಿಕೃತ ಭಾಷೆಗಳಲ್ಲಿ ಆಡಳಿತ ನಡೆಸಲು ತೀರ್ಮಾನಿಸಿದೆ, ಮತ್ತು ಒಕ್ಕೂಟ ಸಂವಿಧಾನದಲ್ಲಿ ಜರ್ಮನ್, ಫ್ರೆಂಚ್‌ ಮತ್ತು ಇಟಾಲಿಯನ್‌ಗಳಿಗೆ ಏಕಕಾಲಿಕ ಭಾಷಾಂತರ ನಡೆಸಲಾಗುತ್ತದೆ. ಸ್ವಿಟ್ಜರ್ಲೆಂಡ್‌‌‌ನಲ್ಲಿ ಬಳಸುವ ಸ್ವಿಸ್‌ ಜರ್ಮನ್‌ ಎಂದು ಕರೆಯಲಾಗುವ ಭಾಷೆಯು ಅಲೆಮಾನ್ನಿಕ್‌ ಪ್ರಾಂತ್ಯಭಾಷೆಗಳ ಗುಂಪಿನ ಮುಂದಾಳು ಭಾಷೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಪತ್ರ ವ್ಯವಹಾರದಿಂದ ಹಿಡಿದು ರೇಡಿಯೋ ಮತ್ತು ಟಿವಿ ವಾಹಿನಿಗಳೂ ಸ್ವಿಸ್ ದರ್ಜೆಯ ಜರ್ಮನ್‌‌ಅನ್ನು ಬಳಸುತ್ತವೆ. ಅಂತೆಯೇ, ಫ್ರೆಂಚ್‌‌ಅನ್ನು ಕೆಲವು ಹಳ್ಳಿಗಳು ಪ್ರಾಂತ್ಯ ಭಾಷೆಯನ್ನಾಗಿಸಿಕೊಂಡಿರುವ ಫ್ರಾಂಕೊ-ಪ್ರಾಂತ್ಯಗಳಿದ್ದು ಅವುಗಳನ್ನು"ಸ್ಯೂಸ್ಸಿ ರೋಮ್ಯಾಂಡೆ" ಎನ್ನುತ್ತಾರೆ, ಅವುಗಳೆಂದರೆ ವಾಡೋಯಿಸ್, ಗ್ರೂಎರಿಯನ್, ಜುರಾಸ್ಸಿಯನ್, ಎಂಪ್ರೊ, ಫ್ರೆಬರ್ಗಿಸ್, ನ್ಯೂಚಾಟೆಲೋಯಿಸ್, ಮತ್ತು ಇಟಾಲಿಯನ್ ಮಾತನಾಡುವಲ್ಲಿ, ಟಿಕಿನೀಸ್ (ಲಂಬಾರ್ಡ್‌ನ ಪ್ರಾಂತ್ಯ ಭಾಷೆ). ಅಧಿಕೃತ ಭಾಷೆಗಳು (ಜರ್ಮನ್, ಫ್ರೆಂಚ್‌ ಮತ್ತು ಇಟಾಲಿಯನ್) ಕೆಲವು ಪದಗಳನ್ನು ಸೇರಿಸಿಕೊಂಡಿವೆ. ಅವುಗಳು ಸ್ವಿಟ್ಜರ್ಲೆಂಡ್‌‌‌ನ ಹೊರಗೆ ಅರ್ಥವಾಗುವುದಿಲ್ಲ, ಉದಾ., ಪದಗಳ ಭಾಷೆಯಿಂದ (ಫ್ರೆಂಚ್‌‌ನಿಂದ ಜರ್ಮನ್ ಬಿಲೆಟ್ಟೆ [೭೨] ), ಅದೇ ರೀತಿಯ ಕೆಲವು ಪದಗಳು ಬೇರೆ ಭಾಷೆಗಳಿಂದ (ಇಟಾಲಿಯನ್‌‌ನಲ್ಲಿ ಅಜಿಯಾನೆ ಯನ್ನು ಆಕ್ಟ್ ಬದಲು ಜರ್ಮನ್‌ನ ಅಕಿಟೋನ್ ನಂತೆ ಡಿಸ್ಕೌಂಟ್ ಗೆ ಬಳಸುತ್ತಾರೆ). ಸ್ವಿಸ್ ಪ್ರಜೆಗಳಿಗೆ ಬೇರೆ ರಾಷ್ಟ್ರೀಯ ಭಾಷೆಗಳಲ್ಲಿ ಒಂದನ್ನು ಶಾಲಾ ಹಂತದಲ್ಲಿ ಕಲಿಯುವುದು ಕಡ್ಡಾಯವಾಗಿರುವುದರಿಂದ, ಅವರು ಕನಿಷ್ಟ ಪಕ್ಷ ಎರಡು ಭಾಷೆಗಳನ್ನಾದರೂ ಬಲ್ಲವರಾಗಿರುತ್ತಾರೆ. ವಿದೇಶಿ ನಾಗರೀಕರು ಮತ್ತು ತಾತ್ಕಾಲಿಕ ವಿದೇಶಿ ಕೆಲಸಗಾರರು ಜನಸಂಖ್ಯೆ 22%ನಷ್ಟಿದ್ದು,[೭೩] ಇವರೆಲ್ಲರೂ (60%) ಐರೋಪ್ಯ ಒಕ್ಕೂಟ ಅಥವಾ EFTA ದೇಶಗಳಿಂದ ಬಂದವರಾಗಿರುತ್ತಾರೆ.[೭೪] ಒಟ್ಟು ವಿದೇಶೀಯರಲ್ಲಿ ಅತಿ ದೊಡ್ಡ ಸಂಖ್ಯೆಯಲ್ಲಿ ಇಟಲಿಯವರು 17,3%ರಷ್ಟು ಇದ್ದು, ನಂತರದ ಸ್ಥಾನದಲ್ಲಿ ಜರ್ಮನ್‌‌ರು (13,2%), ಸೈಬೀರಿಯಾ ಮತ್ತು ಮಾಂಟೆನಿಗ್ರೋ (11,5%) ಮತ್ತು ಪೊರ್ಚುಗಲ್ (11,3%) ಗಳಿಂದ ಬಂದ ವಲಸಿಗರು ಇದ್ದಾರೆ.[೭೪] ಏಷಿಯನ್‌ ಮೂಲದವರಲ್ಲಿ ಹೆಚ್ಚಾಗಿ ಶ್ರೀಲಂಕಾದಿಂದ ಬಂದ ವಲಸೆ ಬಂದ ತಮಿಳು ಸಂತ್ರಸ್ತರು ಕಂಡುಬರುತ್ತಾರೆ.[೭೫] 2000ರಲ್ಲಿ, ಕೆಲವು ದೇಶೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ಅದರಲ್ಲೂ ಹೆಚ್ಚಾಗಿ ರಾಜಕೀಯ ಚಟುವಟಿಕೆಗಳು ಹೆಚ್ಚುತ್ತಿರುವ ವಲಸಿಗರು ಕಂಡು ಕ್ಸೆನೋಫೋಬಿಯಾ ಬಂದವರಂತೆ ಆತಂಕ ವ್ಯಕ್ತಪಡಿಸಿದ್ದಾರೆ. ದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ವಿದೇಶೀ ಪ್ರಜೆಗಳು, ಸಾಮಾನ್ಯವಾಗಿ ಸಮಸ್ಯೆಯಿಲ್ಲದೆ ಹೊಂದಿಕೊಳ್ಳುವ ವಿದೇಶೀಯರು, ಸ್ವಿಟ್ಜರ್ಲೆಂಡ್‌ನ ಮುಕ್ತ ಜೀವನಶೈಲಿಯನ್ನು ಎತ್ತಿ ಹಿಡಿದಿದೆ.[೭೬]

ಆರೋಗ್ಯ

[ಬದಲಾಯಿಸಿ]

2006ರ ಅಂದಾಜಿನಂತೆ ಜನ್ಮಸಮಯದಲ್ಲಿನ ಜೀವಿತಾವಧಿ ಗಂಡಿಗೆ 79 ವರ್ಷಗಳಾದರೆ, ಹೆಣ್ಣಿಗೆ 84 ವರ್ಷಗಳಿದ್ದು,[೭೭] ಇದು ಪ್ರಪಂಚದಲ್ಲೇ ಅತಿ ಹೆಚ್ಚಾಗಿದೆ.[೭೮][೭೯] ಸ್ವಿಸ್ ಪ್ರಜೆಗಳು ಕಡ್ಡಾಯ ಸಾರ್ವತ್ರಿಕ ಆರೋಗ್ಯ ವಿಮೆಗೆ ಒಳಪಟ್ಟಿರುವುದರಿಂದ, ಅದನ್ನು ಬಳಸಿಕೊಂಡು ಅವರಿಗೆ ಅನೇಕ ವಿಧದ ಆಧುನಿಕ ವೈದ್ಯಕೀಯ ಸೇವೆಗಳನ್ನು ಪಡೆಯುವುದಕ್ಕೆ ಅವಕಾಶ ಕಲ್ಪಿಸಲಾಗಿದೆ. ಇಲ್ಲಿನ ಆರೋಗ್ಯಸೇವಾ ವ್ಯವಸ್ಥೆಯನ್ನು ಬೇರೆ ಮುಂದುವರಿದ ಐರೋಪ್ಯ ರಾಷ್ಟ್ರಗಳೊಂದಿಗೆ ಹೋಲಿಸಬಹುದಾಗಿದ್ದು ಸೇವಾಕಾಂಕ್ಷಿಗಳು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. 1990ರಿಂದ ನಿರಂತರವಾಗಿ ಏರಿಕೆಯಾಗುತ್ತಿದ್ದು 2003ರಲ್ಲಿ ಒಟ್ಟು GDPಯ 11.5%ಯಷ್ಟಿತ್ತು ಮತ್ತು, ನೀಡಲಾಗುತ್ತಿರುವ ಆರೋಗ್ಯ ಸೇವೆಗಳ[೮೦] ಶುಲ್ಕ ಹೆಚ್ಚುತ್ತಿರುವುದರಿಂದ ಆರೋಗ್ಯಕ್ಕಾಗಿ ಜಾಸ್ತಿ ಖರ್ಚು ಮಾಡಲಾಗುತ್ತಿದ್ದು , ನಾಗರೀಕರ ವಯೋಗುಣಗಳಿಗನುಗುಣವಾಗಿ ಮತ್ತು ಹೊಸ ಆರೋಗ್ಯಸೇವಾ ತಂತ್ರಜ್ಞಾನಗಳು ಬಂದಂತೆ, ಆರೋಗ್ಯ ಸೇವೆಗಳ ವೆಚ್ಚ ಮತ್ತಷ್ಟು ಜಾಸ್ತಿಯಾಗುತ್ತವೆ.[೮೦]

ನಗರೀಕರಣ

[ಬದಲಾಯಿಸಿ]

ಮುಕ್ಕಾಲು ಭಾಗದಷ್ಟು ಜನರು ನಗರಗಳಲ್ಲಿ ವಾಸಿಸುತ್ತಿದ್ದಾರೆ[೮೧][೮೨] ಕೇವಲ 70 ವರ್ಷಗಳಲ್ಲಿ ಸ್ವಿಟ್ಜರ್ಲೆಂಡ್‌‌ನಲ್ಲಿದ್ದ ಹಳ್ಳಿಗಳೆಲ್ಲ ನಗರಗಳಾಗಿ ಮಾರ್ಪಟ್ಟಿವೆ. ಸ್ವಿಸ್‌ನಲ್ಲಿ ಕಳೆದ 2,000 ವರ್ಷಗಳಲ್ಲಾಗಿದ್ದಷ್ಟು ಭೂ ಪ್ರದೇಶದ ಮಾರ್ಪಾಟುಗಳು 1935ರಿಂದೀಚೆಗೆ ನಗರೀಕರಣಗೊಳ್ಳಲು ನಡೆದಿವೆ. ನಗರಗಳ ಅವ್ಯವಸ್ಥಿತ-ಬೆಳವಣಿಗೆಯು ಪ್ರಸ್ಥಭೂಮಿ, ಜ್ಯೂರಾ ಮತ್ತು ಆಲ್ಪೈನ್ ಬೆಟ್ಟಗಳ ಮೇಲೆ ಪರಿಣಾಮ ಬೀರಿದೆಯಲ್ಲದೆ [೮೩] ಭೂ-ಬಳಕೆಯ ವಿಚಾರಗಳಿಗೆ ಸಾಕಷ್ಟು ಭಿನ್ನಾಭಿಪ್ರಾಯಗಳಿವೆ ಹಾಗೂ ಚರ್ಚೆ ನಡೆದಿದೆ.[೮೪] 21ನೇ ಶತಮಾನದ ಆರಂಭದಿಂದಲೂ, ಹಳ್ಳಿಗಾಡಿಗಿಂತ ನಗರಗಳಲ್ಲಿನ ಜನಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ.[೮೨]

ಸ್ವಿಟ್ಜರ್ಲೆಂಡ್‌‌ನಲ್ಲಿ ನಗರಗಳ ಸಾಂದ್ರತೆ ಹೆಚ್ಚಾಗಿದ್ದು, ದೊಡ್ಡ, ಮಧ್ಯಮ ಹಾಗೂ ಸಣ್ಣ ನಗರಗಳು ಒಂದಕ್ಕೊಂದು ಪೂರಕವಾಗಿವೆ.[೮೨] ಪ್ರಸ್ಥಭೂಮಿಯು ಹೆಚ್ಚು ಜನ ಸಾಂದ್ರಿತ ಅಂದರೆ ಪ್ರತಿ km2ಗೆ 450 ಜನರಿದ್ದು ಎಲ್ಲ ತರಹದ ಭೂ ಪ್ರದೇಶಗಳಲ್ಲಿಯೂ ಮನುಷ್ಯನ ಇರುವಿಕೆಯನ್ನು ತೋರಿಸುತ್ತದೆ.[೮೫] ಅತಿ ಹೆಚ್ಚು ಜನಸಂದಣಿಯಿರುವ ಮೆಟ್ರೊಪೋಲಿಟನ್ ನಗರಗಳು ಕ್ರಮವಾಗಿ, ಜ್ಯೂರಿಚ್‌ , ಜಿನೀವಾ -ಲಾಸನ್ನೆ, ಬಸೆಲ್ ಮತ್ತು ಬರ್ನ್ ಇನ್ನೂ ಹೆಚ್ಚುತ್ತಿವೆ.[೮೨] ಅಂತರರಾಷ್ಟ್ರೀಯ ಹೋಲಿಕೆಯಲ್ಲಿ ಈ ನಗರ ಪ್ರದೇಶಗಳು ಅವುಗಳ ಜನಸಂಖ್ಯೆಗಿಂತ ಹೆಚ್ಚು ಪ್ರಾಮುಖ್ಯತೆ ಹೊಂದಿವೆ.[೮೨] ಇದರ ಜೊತೆಗೆ ಎರಡು ನಗರಗಳಾದ ಜ್ಯೂರಿಚ್‌ ಮತ್ತು ಜಿನೀವಾ, ಉನ್ನತ ಮಟ್ಟದ ಜೀವನ ಶೈಲಿಗೆ ಹೆಸರುವಾಸಿಯಾಗಿವೆ.[೮೬]

ಸಿಯಾನ್‌ನ ಬಸಿಲಿಕೆ ಡಿ ವಲೆರೆ (12ನೇ ಶತಮಾನ)

ಸ್ವಿಟ್ಜರ್ಲೆಂಡ್‌‌ಗೆ‌ ಯಾವುದೇ ಅಧಿಕೃತವಾದ ರಾಷ್ಟ್ರೀಯ ಧರ್ಮವಿಲ್ಲ, ಆದರೂ ಕೆಲವು ಕ್ಯಾಂಟನ್‌ಗಳು (ಜಿನೀವಾ ಮತ್ತು ನ್ಯೂಚಾಟೆಲ್‌ಗಳನ್ನು ಹೊರತುಪಡಿಸಿ) ಎಲ್ಲ ಸಂದರ್ಭಗಳಲ್ಲಿಯೂ ಕ್ಯಾಥೊಲಿಕ್‌ ಚರ್ಚು ಮತ್ತು ಸ್ವಿಸ್‌ನ ಸುಧಾರಿತ ಚರ್ಚುಗಳು ಸೇರಿದಂತೆ ಅಧಿಕೃತವಾಗಿ ಚರ್ಚುಗಳೊಂದಿಗೆ ಗುರುತಿಸಿಕೊಂಡಿವೆ. ಈ ಚರ್ಚುಗಳು, ಮತ್ತು ಕೆಲವು ಕ್ಯಾಂಟನ್‌ಗಳಲ್ಲಿ ಹಳೆಯ ಕ್ಯಾಥೊಲಿಕ್‌ ಚರ್ಚುಗಳು ಮತ್ತು ಯಹೂದ್ಯ ಸಮುದಾಯಗಳು, ಮತಾನುಯಾಯಿಗಳಿಂದ ಸಂಗ್ರಹಿಸಿದ ಹಣದಿಂದ ನಡೆಯುತ್ತವೆ.[೮೭] ಸ್ವಿಟ್ಜರ್ಲೆಂಡ್‌‌‌ನಲ್ಲಿ ಕ್ರೈಸ್ತ ಧರ್ಮವು ಪ್ರಧಾನ ಧರ್ಮವಾಗಿದ್ದು, ಕ್ಯಾಥೊಲಿಕ್‌ ಚರ್ಚ್‌ (ಒಟ್ಟು ಜನಸಂಖ್ಯೆಯಲ್ಲಿ 41.8% ) ಮತ್ತು ಹಲವು ಪ್ರೊಟೆಸ್ಟೆಂಟ್‌ (35.3%) ಪಂಥಗಳಾಗಿ ವಿಂಗಡಣೆಯಾಗಿದೆ. ವಲಸೆ ಬಂದಿರುವ ಇಸ್ಲಾಮ್ (4.3%, ಪ್ರಧಾನವಾಗಿ ಕಸೊವರ್ಸ್ ಮತ್ತು ತುರ್ಕರು) ಮತ್ತು ಪೂರ್ವದ ಸಂಪ್ರದಾಯವಾದಿ (1.8%) ಅಲ್ಪಸಂಖ್ಯಾತ ಧರ್ಮಗಳು ತಕ್ಕಷ್ಟು ಮಟ್ಟಿಗೆ ಇವೆ.[೮೮] 2005ರ ಯುರೊಬಾರೊಮೀಟರ್ ಸಮೀಕ್ಷೆಯಿಂದ [೮೯] 48% ಆಸ್ತಿಕರು, 39% "ಆತ್ಮ ಅಥವಾ ಪ್ರೇರಣಾ ಶಕ್ತಿಯನ್ನು" ನಂಬುವುದಾಗಿ ಹೇಳಿಕೊಂಡರೆ , 9% ನಾಸ್ತಿಕರು ಮತ್ತು 4% ಆಜ್ಞೇಯತಾವಾದಿಗಳಿರುವುದಾಗಿ ತಿಳಿದು ಬಂದಿದೆ.

ಇತಿಹಾಸದುದ್ದಕ್ಕೂ ಪ್ರೊಟೆಸ್ಟೆಂಟ್‌ಗಳು ಹಾಗೂ ದೇಶದ ಬಹುಭಾಗಗಳಲ್ಲಿ ಬಿಡಿಬಿಡಿಯಾಗಿ ಹರಡಿ ಹೋಗಿರುವ ಬಹುಸಂಖ್ಯಾತ ಕ್ಯಾಥೊಲಿಕ್‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌ಗಳ ನಡುವೆ ಸರಿಯಾದ ಸಮತೋಲನ ಕಾಯ್ದುಕೊಂಡು ಬಂದಿದೆ. ಅಪ್ಪೆನ್ಜೆಲ್‌‌ ‌‌‌ಎಂಬ ಒಂದು ಕ್ಯಾಂಟನ್, 1597ರಲ್ಲಿ ಅಧಿಕೃತವಾಗಿ ಕ್ಯಾಥೊಲಿಕ್‌ ಮತ್ತು ಪ್ರೊಟೆಸ್ಟೆಂಟ್‌ ಭಾಗ‌ಗಳೆಂದು ವಿಭಜಿತವಾಯಿತು.[೯೦] ದೊಡ್ಡ ನಗರಗಳಲ್ಲಿ (ಬರ್ನ್, ಜ್ಯೂರಿಚ್‌ ಮತ್ತು ಬಸೆಲ್) ಪ್ರೊಟೆಸ್ಟೆಂಟ್‌ ಪ್ರಬಲವಾದರೆ, ಮಧ್ಯ ಸ್ವಿಟ್ಜರ್ಲೆಂಡ್‌‌ ಹಾಗೂ ಟಿಕಿನೊ, ಸಾಂಪ್ರದಾಯಿಕವಾಗಿ ಕ್ಯಾಥೊಲಿಕ್‌‌ಗಳಾಗಿವೆ. ಸಾಂಡರ್‌ಬಂಡ್ಸ್‌ಕ್ರೀಗ್‌ ಕ್ಯಾಂಟನ್‌ನಲ್ಲಿ ನಡೆದ ಕ್ಯಾಥೊಲಿಕ್‌ ಮತ್ತು ಪ್ರೊಟೆಸ್ಟೆಂಟ್‌‌ಗಳ ಘರ್ಷಣೆಗಳಿಂದ ಎಚ್ಚೆತ್ತ ಸರ್ಕಾರವು 1848ರ ಸ್ವಿಸ್ ಸಂವಿಧಾನದಲ್ಲಿ, ಸಹಭಾಗಿತ್ವ ರಾಷ್ಟ್ರದ ಕಲ್ಪನೆಯನ್ನು ಇಟ್ಟುಕೊಂಡು, ಕ್ಯಾಥೊಲಿಕ್‌‌ ಮತ್ತು ಪ್ರೊಟೆಸ್ಟೆಂಟ್‌‌ಗಳ ಶಾಂತಿಯುತ ಸಹಬಾಳ್ವೆಗೆ ಅನುಕೂಲವಾಗುವಂತೆ ಬದಲಾವಣೆಗಳನ್ನು ಮಾಡಿದೆ. 1980ರಲ್ಲಿ ಪ್ರೇರಿತವಾದ ಸಂಪೂರ್ಣ ಚರ್ಚುಗಳ ಮತ್ತು ರಾಷ್ಟ್ರದ ವಿಂಗಡಣೆಯು, ಕೇವಲ 21.1% ಮತ ಬೆಂಬಲದೊಂದಿಗೆ ಸ್ಪಷ್ಟವಾಗಿ ತಿರಸ್ಕರಿಸಲ್ಪಟ್ಟಿತು.

ಸಂಸ್ಕೃತಿ

[ಬದಲಾಯಿಸಿ]
ವಾಲ್ಸ್‌‌ನ ಆಲ್ಫೋರ್ನ್‌ ಕಛೇರಿ

ಸ್ವಿಟ್ಜರ್ಲೆಂಡ್‌‌‌ನ ಸಂಸ್ಕೃತಿಯು ಮೇಲೆ ನೆರೆಯ ಪರಿಣಾಮ ಬೀರಿದ್ದು, ವರ್ಷ ಕಳೆದಂತೆ ಕೆಲವು ಪ್ರಾಂತೀಯ ವ್ಯತ್ಯಾಸಗಳೊಂದಿಗೆ ಆ ಸಂಸ್ಕೃತಿಯು ವೈಶಿಷ್ಟ್ಯವಾಗಿ ಮತ್ತು ಸ್ವತಂತ್ರ ಪರಂಪರೆಯಾಗಿ ಬೆಳೆದುಬಂದಿದೆ. ವಿಶೇಷವಾಗಿ, ಫ್ರೆಂಚ್‌ -ಭಾಷಿಕ ವಲಯಗಳು ಫ್ರೆಂಚ್‌ ಸಂಸ್ಕೃತಿಯತ್ತ ಹೆಚ್ಚು ವಾಲಿದ್ದು EU ಪರವಾಗಿದ್ದಾರೆ. ಸ್ವಿಸ್ ಹಿಂದಿನಿಂದಲೂ ಮಾನವಿಕ ಪರಂಪರೆಯಾಗಿದೆ, ಕಾರಣ ಸ್ವಿಟ್ಜರ್ಲೆಂಡ್‌‌‌ ರೆಡ್ ಕ್ರಾಸ್‍‌ ಚಳುವಳಿಯ ಮತ್ತು ಒಕ್ಕೂಟ ರಾಷ್ಟ್ರಗಳ ಮಾನವ ಹಕ್ಕುಗಳ ಸಮಿತಿಯ ತವರು. ಸ್ವಿಸ್ ಜರ್ಮನ್‌ ಭಾಷಿಕ ವಲಯಗಳು ಜರ್ಮನ್ ಸಂಸ್ಕೃತಿಯತ್ತ ವಾಲಿದರೂ, ಪ್ರಾಂತ್ಯ ಭಾಷೆಗಳಾದ ಉನ್ನತ ಜರ್ಮನ್‌ ಮತ್ತು ಸ್ವಿಸ್ ಜರ್ಮನ್‌‌‌‌‌‌‌‌ಗಳಲ್ಲಿ ಭಿನ್ನತೆ ಇರುವುದರಿಂದ ಜರ್ಮನ್-ಭಾಷಿಕ ಸ್ವಿಸ್ ಪ್ರಜೆಗಳು ತಮ್ಮನ್ನು ಸ್ವಿಸ್‌ಗಳೆಂದೇ ಗುರುತಿಸಿಕೊಳ್ಳುತ್ತಾರೆ. ಇಟಾಲಿಯನ್‌-ಭಾಷಿಕ ವಲಯಗಳು ಹೆಚ್ಚಾಗಿ ಇಟಾಲಿಯನ್‌ ಸಂಸ್ಕೃತಿಯನ್ನು ಹೊಂದಿವೆ. ಒಂದು ಪ್ರಾಂತ್ಯವು ತನ್ನ ಭಾಷೆಯನ್ನು ಮಾತನಾಡುವ ನೆರೆಯ ರಾಷ್ಟ್ರದೊಂದಿಗೆ ಸಾಂಸ್ಕೃತಿಕವಾಗಿಯೂ ಸಹ ಸಂಬಂಧವಿರಿಸಿಕೊಳ್ಳುತ್ತದೆ. ಸ್ವಿಟ್ಜರ್ಲೆಂಡ್‌‌ನ ಪೂರ್ವ ಬೆಟ್ಟಗಳಲ್ಲಿ ಭಾಷಾವಾರು ಪ್ರತ್ಯೇಕವಾಗಿರುವ ರೋಮಾಂಶ್‌‌ ‌ ಸಂಸ್ಕೃತಿಯು ದೃಢವಾಗಿದ್ದು, ತನ್ನ ಅಪರೂಪದ ಭಾಷಾ ಪರಂಪರೆಯನ್ನು ಉಳಿಸಲು ಪ್ರಯತ್ನಿಸುತ್ತಿದೆ.

ಅನೇಕ ಬೆಟ್ಟ ಪ್ರದೇಶಗಳು ಚಳಿಗಾಲದಲ್ಲಿ ಸ್ಕೀ ರೆಸಾರ್ಟ್ ಸಂಸ್ಕೃತಿ, ಮತ್ತು ಬೇಸಿಗೆಯಲ್ಲಿ ಹೈಕಿಂಗ್‌ (ಪರ್ಯಟನ) ಸಂಸ್ಕೃತಿಯ ಚಟುವಟಿಕೆಗಳನ್ನು ಮೈಗೂಡಿಸಿಕೊಂಡಿವೆ. ಕೆಲವು ಪ್ರದೇಶಗಳಲ್ಲಿ ವರ್ಷಪೂರ್ತಿ ಮನರಂಜನಾ ಸಂಸ್ಕೃತಿಯಿದ್ದು ಪ್ರವಾಸೋದ್ಯಮಕ್ಕೆ ಒಂದು ಆಕರ್ಷಣೆಯಾಗಿದೆ, ವಸಂತ ಕಾಲ ಮತ್ತು ಶರತ್ಕಾಲದಲ್ಲಿ ಕೆಲವೇ ಪ್ರವಾಸಿಗರಿದ್ದರೂ ಸ್ವಿಸ್‌‌ಗಳು ಹೆಚ್ಚಾಗಿ ಬರುತ್ತಾರೆ. ಅನೇಕ ಪ್ರದೇಶಗಳಲ್ಲಿ ಪಾರಂಪರಿಕ ರೈತಾಪಿ ವರ್ಗ ಮತ್ತು ದನಗಾಹಿಗಳು ಅಧಿಕವಾಗಿ ಕಂಡು ಬರುತ್ತಾರೆ ಮತ್ತು ಸಣ್ಣ ತೋಟಗಳು ನಗರಗಳ ಹೊರ ವಲಯಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಚಿತ್ರೋದ್ಯಮದಲ್ಲಿ, ಅನೇಕ ಅಮೆರಿಕನ್‌ ನಿರ್ಮಿತ ಕಾರ್ಯಕ್ರಮಗಳು ಬರುತ್ತಿದ್ದರೂ, ಇತ್ತೀಚಿನ ದಿನಗಳಲ್ಲಿ ಸ್ವಿಸ್ ಚಿತ್ರಗಳು ಲಾಭಗಳಿಸುತ್ತಿವೆ. ದೇಶದ ಎಲ್ಲಾ ಸಂಸ್ಥೆಗಳಲ್ಲಿಯೂ ಜಾನಪದ ಕಲೆ ಜೀವಂತವಾಗಿದೆ. ಸ್ವಿಟ್ಜರ್ಲೆಂಡ್‌‌ ಸಂಗೀತ, ನೃತ್ಯ, ಕಾವ್ಯ, ಮರಗೆಲಸ ಮತ್ತು ಕಸೂತಿಗಳಿಗೆ ಪ್ರಸಿದ್ದವಾಗಿದೆ. ಆಲ್ಫೋರ್ನ್, ಮರದಿಂದ ಮಾಡಲ್ಪಟ್ಟ ಕಹಳೆ-ಮಾದರಿಯ ಸಂಗೀತ ಸಾಧನವು, ಸಂಗೀತಕ್ಕೆ ಸ್ವಾಭಾವಿಕತೆ ನೀಡಲು ಮತ್ತು ಪಾರಂಪರಿಕ ಅಕಾರ್ಡಿಯನ್‌‌ನ ಸಾಕಾರರೂಪವಾಗಿದ್ದು ಸ್ವಿಸ್ ಸಂಗೀತಕ್ಕೆ ಮೆರುಗು ನೀಡುತ್ತದೆ.

ಸಾಹಿತ್ಯ

[ಬದಲಾಯಿಸಿ]
ಜೀನ್‌-ಜಾಕ್ವೆಸ್‌ ರವ್‌ಸ್ಸಾವ್‌ ಬರಹಗಾರರಷ್ಟೇ ಅಲ್ಲದೆ, ಪ್ರಮುಖ ಹದಿನೆಂಟನೇ-ಶತಮಾನದ ತತ್ವಜ್ಞಾನಿಯೂ ಆಗಿದ್ದರು (ಜಿನೀವಾದಲ್ಲಿ ಅವರ ಮೂರ್ತಿ ಇದೆ)

ಪ್ರಮುಖವಾಗಿ 1291ರಲ್ಲಿ ಸ್ಥಾಪಿತವಾದ ಈ ಒಕ್ಕೂಟವು ಆಗಿನಿಂದ ಜರ್ಮನ್‌-ಭಾಷಿಕ ವಲಯಗಳನ್ನು ಒಳಗೊಂಡಿದ್ದು ಸಾಹಿತ್ಯ ಪ್ರಕಾರದ ಪ್ರಾಚೀನ ರೂಪಗಳು ಕೂಡ ಜರ್ಮನ್‌ನಲ್ಲಿವೆ. 18ನೇ ಶತಮಾನದಲ್ಲಿ ಫ್ರೆಂಚ್‌ ಭಾಷೆ ಬರ್ನ್ ಹಾಗೂ ಉಳಿದ ಕಡೆಗಳಲ್ಲಿ‌ ಜನಪ್ರಿಯವಾದ್ದರಿಂದ, ಫ್ರೆಂಚ್‌ -ಭಾಷಿಕ ಮಿತ್ರ ದೇಶಗಳು ಮತ್ತು ಸಾಮಂತ ಪ್ರದೇಶಗಳು ಹಿಂದೆಂದಿಗಿಂತ ಹೆಚ್ಚು ಗುರುತಿಸಲ್ಪಟ್ಟವು.

ಸ್ವಿಸ್ ಜರ್ಮನ್‌ ಸಾಹಿತ್ಯ ಕ್ಷೇತ್ರದಲ್ಲಿ ಪ್ರಸಿದ್ದವಾದವರು ಜರೇಮಿಯಾಸ್ ಗಥೆಲ್ಫ್‌ (1797-1854) ಮತ್ತು ಗಾಟ್‌ಫ್ರೆಡ್‌ ಕೆಲ್ಲರ್‌ (1819-1890). 20ನೇ ಶತಮಾನದ ಸ್ವಿಸ್ ಸಾಹಿತ್ಯದಲ್ಲಿ ನಿಸ್ಸಂಶಯವಾದ ದೈತ್ಯಕೃತಿಗಳೆಂದರೆ ಮ್ಯಾಕ್ಸ್‌ ಫ್ರಿಷ್‌‌ (1911-91) ಮತ್ತು ಫ್ರೆಡ್ರಿಕ್ ಡ್ಯುರೆನ್‌ಮ್ಯಾಟ್ (1921-90), ಕೃತಿಗಳಾದ ದೈ ಫಿಸಿಕೆರ್‌(ದಿ ಫಿಸಿಸಿಸ್ಟ್) ಮತ್ತು ದಾಸ್ ವರ್ಸ್‌ಪ್ರಚೆನ್‌ (ದ ಪ್ಲೆಡ್ಜ್), 2001ರಲ್ಲಿ ಹಾಲಿವುಡ್ ಚಿತ್ರವಾಗಿ ಬಿಡುಗಡೆಯಾದವು.[೯೧]

ಪ್ರಸಿದ್ದ ಫ್ರೆಂಚ್‌ -ಭಾಷಿಕ ಬರಹಗಾರರೆಂದರೆ ಜೀನ್‌-ಜಾಕ್ವೆಸ್‌ ರವ್‌ಸ್ಸಾವ್‌ (1712-1778) ಮತ್ತು ಜರ್ಮೈನೇ ಡಿ ಸ್ಟೀಲ್‌ (1766-1817). ಇತ್ತೀಚಿನ ಬರಹಗಾರರಾದ ಚಾರ್ಲ್ಸ್‌ ಫರ್ಡಿನೆಂಡ್‌ ರಾಮುಜ್‌ (1878-1947) ಕಾದಂಬರಿಗಳಲ್ಲಿ , ರೈತಾಪಿ ಮತ್ತು ಗುಡ್ಡಗಾಡುಗಳಲ್ಲಿ ವಾಸಿಸುವ ಜನಗಳು ನಡೆಸುವ ಕಷ್ಟಕರ ವಾತಾವರಣದಲ್ಲಿನ ಜೀವನದ ಬಗ್ಗೆ ಹೇಳಲಾಗಿದೆ ಮತ್ತು ಬ್ಲೇಸ್‌ ಸೆಂಡ್ರಾರ್ಸ್ (ಮೊದಲು ಫ್ರೆಡ್ರಿಕ್‌ ಸ್ಹಾಸರ್‌, 1887-1961).[೯೧] ಇಟಾಲಿಯನ್‌ ಮತ್ತು ರೋಮಾಂಶ್‌-ಭಾಷಿಕ ಲೇಖಕರು ಒಳ್ಳೆಯ ಕೊಡುಗೆ ನೀಡಿದ್ದಾರೆ ಆದರೆ ಅವುಗಳು ಕಡಿಮೆ ಸಂಖ್ಯೆಯಲ್ಲಿವೆ.

ಸುಪ್ರಸಿದ್ದವಾದ ಸ್ವಿಸ್ ಸಾಹಿತ್ಯ ರಚನೆಯೆಂದರೆ, ಹೈಡಿ , ತನ್ನ ತಾತನ ಜೊತೆ ಆಲ್ಪ್ಸ್‌ನಲ್ಲಿ ವಾಸಿಸುತ್ತಿದ್ದ ಒಂದು ಅನಾಥ ಹುಡುಗಿಯ ಕಥೆ, ಅತಿ ಹೆಚ್ಚು ಜನಪ್ರಿಯವಾದ ಮಕ್ಕಳ ಕೃತಿಗಳಲ್ಲಿ ಇದೂ ಒಂದಾಗಿದ್ದು, ಸ್ವಿಟ್ಜರ್ಲೆಂಡ್‌‌ನ ಸಂಕೇತವಾಗಿ ಹೊರಹೊಮ್ಮಿದೆ. ಅದರ ಲೇಖಕಿಯಾದ, ಜೊಹಾನ ಸ್ಪೈರಿ (1827-1901), ಅದೇ ರೀತಿಯ ಹಲವು ಪುಸ್ತಕಗಳನ್ನು ಬರೆದಿದ್ದಾರೆ.[೯೧]

ಮಾಧ್ಯಮ

[ಬದಲಾಯಿಸಿ]

ಪತ್ರಿಕಾ ಸ್ವಾತಂತ್ರ್ಯ ಮತ್ತು ಮುಕ್ತ ಅಭಿವ್ಯಕ್ತಿಯ ಹಕ್ಕು ಭರವಸೆಯನ್ನು ಸ್ವಿಟ್ಜರ್ಲೆಂಡ್‌‌ನ ಒಕ್ಕೂಟ ಸಂವಿಧಾನವು ಕೊಟ್ಟಿದೆ‌.[೯೨] ಸ್ವಿಸ್ ವಾರ್ತಾ ಸಂಸ್ಥೆ (SNA) ಮೂರು ರಾಷ್ಟ್ರೀಯ ಭಾಷೆಗಳಲ್ಲಿ—ರಾಜಕೀಯ, ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ವಿಷಯಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ದಿನದ ಎಲ್ಲ ಸಮಯದಲ್ಲಿಯೂ ಪ್ರಸಾರ ಮಾಡುತ್ತದೆ. SNAಯು ಎಲ್ಲ ಸ್ವಿಸ್ ಮಾಧ್ಯಮ ಹಾಗೂ ಹಲವು ವಿದೇಶೀ ಮಾಧ್ಯಮ ಸೇವೆಗಳಿಗೆ ಅನೇಕ ತರಹದ ಸುದ್ದಿಯನ್ನು ಒದಗಿಸುತ್ತಿದೆ.[೯೨]

ಸ್ವಿಟ್ಜರ್ಲೆಂಡ್‌‌ ಐತಿಹಾಸಿಕವಾಗಿ ಸುದ್ದಿ ಪತ್ರಿಕೆಗಳ ಸಂಖ್ಯೆಯನ್ನು ತನ್ನ ಗಾತ್ರ ಮತ್ತು ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚಿಸುತ್ತಾ ಬಂದಿದೆ.[೯೩] ಬಹಳ ಬೇಡಿಕೆಯಿರುವ ಪತ್ರಿಕೆಗಳೆಂದರೆ ಜರ್ಮನ್‌-ಭಾಷೆಯ ತಜಸ್‌-ಅನ್ಸಿಜರ್‌ ಮತ್ತು ನ್ಯೂಯೆ ಜ್ಯುಚೆರ್‌‌ ಗ್ಸೈಟುಂಗ್ NZZ, ಮತ್ತು ಫ್ರೆಂಚ್‌ -ಭಾಷೆಯ ಲಿ ಟೆಂಪ್ಸ್‌, ಇದಲ್ಲದೇ ಎಲ್ಲ ನಗರಗಳೂ ತನ್ನದೇ ಆದ ಸ್ಥಳೀಯ ಸುದ್ದಿ ಪತ್ರಿಕೆಗಳನ್ನು ಹೊಂದಿವೆ. ಸಾಂಸ್ಕೃತಿಕ ವೈವಿಧ್ಯತೆಯು ದೊಡ್ಡ ಸಂಖ್ಯೆಯ ಸುದ್ದಿ ಪತ್ರಿಕೆಗಳಿಗೆ ಕಾರಣವಾಗಿದೆ.[೯೩]

ಪತ್ರಿಕಾ ಮಾಧ್ಯಮಗಳಿಗೆ ಹೋಲಿಸಿದಾಗ, ಪ್ರಸರಣಾ ಮಾಧ್ಯಮಗಳು ಹೆಚ್ಚಾಗಿ ಸರ್ಕಾರದ ಅಧೀನಕ್ಕೆ ಒಳಪಡುತ್ತವೆ.[೯೩] ಸ್ವಿಸ್ ಪ್ರಸರಣಾ ಸಂಸ್ಥೆಯು, ಇತ್ತೀಚೆಗೆ ತನ್ನ ಹೆಸರನ್ನು SRG SSR ಇದೀ ಸ್ಯುಸ್ಸೆ ಎಂದು ಬದಲಾಯಿಸಿಕೊಂಡಿದ್ದು, ರೇಡಿಯೋ ಮತ್ತು ದೂರದರ್ಶನದ ಕಾರ್ಯಕ್ರಮಗಳ ನಿರ್ಮಾಣ ಮತ್ತು ಪ್ರಸಾರವನ್ನು ನೋಡಿಕೊಳ್ಳುತ್ತದೆ. SRG SSR ಕಾರ್ಯಾಗಾರ ಘಟಕವು ಅನೇಕ ಭಾಷಾ ಪ್ರದೇಶಗಳಲ್ಲಿ ವಿಂಗಡಣೆಯಾಗಿವೆ. ರೇಡಿಯೋ ಕಾರ್ಯಕ್ರಮಗಳು ಆರು ಕೇಂದ್ರೀಯ ಮತ್ತು ನಾಲ್ಕು ಸ್ಥಳೀಯ ಕಾರ್ಯಾಗಾರಗಳಲ್ಲಿ ಹಾಗೂ ದೂರದರ್ಶನದ ಕಾರ್ಯಕ್ರಮಗಳು ಜಿನೀವಾ , ಜ್ಯೂರಿಚ್‌ ಮತ್ತು ಲುಗಾನೊಗಳಲ್ಲಿ ನಿರ್ಮಾಣವಾಗುತ್ತವೆ. ವ್ಯಾಪಕ ಕೇಬಲ್ ಜಾಲವಿರುವುದರಿಂದ ಸ್ವಿಸ್‌ ಪ್ರಜೆಗಳಿಗೆ ನೆರೆ ರಾಷ್ಟ್ರಗಳ ಕಾರ್ಯಕ್ರಮಗಳನ್ನು ವೀಕ್ಷಿಸಲು ಅನುವಾಗಿದೆ.[೯೩]

ಕ್ರೀಡೆ

[ಬದಲಾಯಿಸಿ]
ಲಟ್ಷೆನ್‌ತಲ್‌ ಹಿಮನದಿಯ ಮೇಲಿನ ಸ್ಕೀ ಪ್ರದೇಶ

ಸ್ಕೀಯಿಂಗ್ ಮತ್ತು ಪರ್ವತಾರೋಹಣವನ್ನು ಹೆಚ್ಚಾಗಿ ಸ್ವಿಸ್ ಪ್ರಜೆಗಳು ಮತ್ತು ವಿದೇಶೀಯರು ಇಷ್ಟಪಡುತ್ತಾರೆ, ಎತ್ತರದ ಶಿಖರಗಳು ಪರ್ವತಾರೋಹಿಗಳನ್ನು ಪ್ರಪಂಚದ ಎಲ್ಲ ಭಾಗಗಳಿಂದ ಆಕರ್ಷಿಸುತ್ತವೆ. ಹಾಟ್ ರೂಟ್ ಅಥವಾ ಪಟ್ರೌಲಿ ಡೆಸ್ ಹಿಮನದಿಯಲ್ಲಿನ ಸ್ಕೀಯಿಂಗ್‌ ಸ್ಪರ್ಧೆಯು ಅಂತರರಾಷ್ಟೀಯ ಪ್ರಖ್ಯಾತಿ ಹೊಂದಿದೆ.

ಯುರೋಪಿನಲ್ಲಿರುವಂತೆಯೇ, ಅನೇಕ ಸ್ವಿಸ್‌ಗಳು ಫುಟ್‌ಬಾಲ್ ಪಂದ್ಯಕ್ಕೆ ಅಭಿಮಾನಿಗಳಾಗಿದ್ದು, ರಾಷ್ಟ್ರೀಯ ತಂಡ ಅಥವಾ 'Nati'ಗೆ ಹೆಚ್ಚು ಬೆಂಬಲ ವ್ಯಕ್ತಪಡಿಸುತ್ತಾರೆ. ಸ್ವಿಸ್ ತಂಡ ಕ್ವಾರ್ಟರ್‌ ಫೈನಲ್ಸ್‌‌ಗೂ ಮುನ್ನವೇ ಸೋತರೂ ಸ್ವಿಟ್ಜರ್ಲೆಂಡ್‌,‌ ಆಸ್ಟ್ರಿಯಾದೊಂದಿಗೆ ಯುರೊ 2008ರ ಫುಟ್‌ಬಾಲ್ ಸ್ಪರ್ಧೆಗಳಿಗೆ ಆತಿಥ್ಯ ವಹಿಸಿಕೊಂಡಿತ್ತು. ಮತ್ತೊಂದು ಕಡೆ ಸ್ವಿಸ್ ತಂಡವು 2005ರಲ್ಲಿ ನಡೆದ ಬೀಚ್ ಫುಟ್‌ಬಾಲ್‌ನಲ್ಲಿ ಯುರೊ ಬೀಚ್ ಸಾಕರ್‌ ಕಪ್ಅನ್ನು ಗೆದ್ದರೆ, 2008ರಲ್ಲಿ ನಡೆದ ಬೀಚ್ ಸಾಕರ್‌‌ ಪಂದ್ಯದಲ್ಲಿ ರನ್ನರ್‌-ಅಪ್‌ ಆದರು.

ರೋಜರ್ ಫೆಡರರ್ ಟೆನ್ನಿಸ್‌ ಚರಿತ್ರೆ ಕಂಡ ಅತ್ಯದ್ಭುತ ಆಟಗಾರರಾಗಿದ್ದಾರೆ, ಮತ್ತು ವಿಶ್ವದ ಈಗಿನ ATP ಟೆನ್ನಿಸ್‌‌ನ ಒಂದನೇ ಶ್ರೆಯಾಂಕದ ಆಟಗಾರನೆನಿಸಿಕೊಂಡಿದ್ದಾರೆ

ಅನೇಕ ಸ್ವಿಸ್‌ಗಳು ಐಸ್ ಹಾಕಿಯನ್ನು ಇಷ್ಟಪಡುತ್ತಾರೆ ಮತ್ತು 12 ಕ್ಲಬ್‌ಗಳಲ್ಲಿ ಯಾವುದಾದರೂ ಒಂದನ್ನು ಲೀಗ್ Aನಲ್ಲಿ ಬೆಂಬಲಿಸುತ್ತಾರೆ. ಏಪ್ರಿಲ್ 2009ರಲ್ಲಿ, ಸ್ವಿಟ್ಜರ್ಲೆಂಡ್‌‌ 2009ರ IIHF ವಿಶ್ವ ಚಾಂಪಿಯನ್‌ಶಿಪ್‌ ಅನ್ನು ಸತತ 10ನೇ ಬಾರಿಗೆ ನಡೆಸಿಕೊಟ್ಟಿದೆ.[೯೪] ಸ್ವಿಸ್ ತಂಡದ ಇತ್ತೀಚಿನ ಸಾಧನೆಯೆಂದರೆ 1953ರಲ್ಲಿ ನಡೆದ ಐಸ್ ಹಾಕಿಯಲ್ಲಿ, ಕಂಚಿನ ಪದಕವನ್ನು ಗೆದ್ದಿದ್ದು. ಸ್ವಿಟ್ಜರ್ಲೆಂಡ್‌‌ಅಲಿಂಗಿ ಎಂಬ ದೋಣಿ ನಡೆಸುವ ತಂಡ ಹೊಂದಿದ್ದು, ಅದು 2003ರಲ್ಲಿ ಅಮೆರಿಕನ್ ಕಪ್‌ಅನ್ನು ಗೆದ್ದು, 2007ರಲ್ಲಿಯೂ ದಾಖಲೆಯನ್ನು ಉಳಿಸಿಕೊಂಡಿದೆ.

ಕಳೆದ 30 ವರ್ಷಗಳಿಂದ ಕರ್ಲಿಂಗ್‌ ಜನಪ್ರಿಯ ಚಳಿಗಾಲದ ಪಂದ್ಯವಾಗಿದ್ದು, ಸ್ವಿಸ್ ತಂಡಗಳು 2 ಮಹಿಳೆಯರ ಮತ್ತು 3 ವಿಶ್ವ ಪುರುಷರ ಕರ್ಲಿಂಗ್ ಚಾಂಪಿಯನ್‌ಶಿಪ್‌ಅನ್ನು ತನ್ನದಾಗಿಸಿಕೊಂಡಿದೆ. 1998ರಲ್ಲಿ ನಡೆದ ನಗಾನೊ ಚಳಿಗಾಲದ ಓಲಂಪಿಕ್ಸ್‌ನಲ್ಲಿ ಸ್ವಿಸ್ ಪುರುಷರ ತಂಡವು ಡೊಮಿನಿಕ್ ಆಂಡ್ರೆಸ್‌ ತಂಡವನ್ನು ಸೋಲಿಸಿ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿತು.

ಇತ್ತೀಚೆಗೆ ಗಾಲ್ಫ್‌ ಕ್ರೀಡೆಯು ಜನಪ್ರಿಯವಾಗುತ್ತಿದ್ದು, 35ಕ್ಕೂ ಹೆಚ್ಚು ಗಾಲ್ಫ್ ಮೈದಾನಗಳು ಈಗಾಗಲೇ ಬಳಕೆಯಲ್ಲಿದ್ದು, ಇನ್ನೂ ಹೆಚ್ಚಿಸಲು ಉದ್ದೇಶಿಸಲಾಗಿದೆ.

ಕಳೆದ ಕೆಲ ವರ್ಷಗಳಲ್ಲಿ ಸ್ವಿಸ್‌ನ ಟೆನ್ನಿಸ್ ಆಟಗಾರರಾದ ರೋಜರ್ ಫೆಡರರ್ ಮತ್ತು ಮಾರ್ಟಿನಾ ಹಿಂಗಿಸ್‌‌, ಗ್ರ್ಯಾಂಡ್‌ ಸ್ಲಾಮ್‌ ಸಿಂಗಲ್ಸ್‌‌ನಲ್ಲಿ ಹೆಚ್ಚು ಬಾರಿ ಚಾಂಪಿಯನ್‌‌ಶಿಪ್‌‌ ಗಳಿಸಿದ್ದಾರೆ. ಈಗಿನ ಐಸ್ ಸ್ಕೇಟರ್‌ಗಳಲ್ಲಿ ಸ್ವಿಸ್‌ನ ಸ್ಟೀಫನ್ ಲಾಂಬಿಯೆಲ್‌ ಪ್ರಪಂಚದ ಅತ್ಯುತ್ತಮ ಆಟಗಾರರಾಗಿದ್ದಾರೆ. ಸ್ವಿಸ್‌ನ ಆಂಡ್ರೆ ಬಸ್ಸರ್ಟ್‌ ಯಶಸ್ವಿ ವೃತ್ತಿಪರ ಗಾಲ್ಫ್‌ ಆಟಗಾರರಾಗಿದ್ದಾರೆ.

ದಾವೋಸ್‌ನ ಸ್ಪನ್‌ಗ್ಲೆರ್ ಕಪ್‌

ಇಷ್ಟಲ್ಲದೆ ಸ್ವಿಸ್ ಇನ್ನೂ ಕೆಲವು ಪಂದ್ಯಗಳಾದ ಫೆನ್ಸಿಂಗ್‌‌ (ಮಾರ್ಸೆಲ್‌ ಫಿಶರ್), ಸೈಕ್ಲಿಂಗ್‌ (ಫ್ಯಾಬಿಯನ್ ಕೆನ್ಸೆಲ್ಲಾರ), ವ್ಹೈಟ್‌ವಾಟರ್ ಸ್ಲಾಲಮ್‌ (ರೊನ್ನಿಯೇ ದುರೆನ್ಮತ್—ಕೆನೋಯೆ, ಮ್ಯಾಥಿಯಸ್ ರಾತೆನ್ಮಂಡ್—ಕಾಯಕ್), ಐಸ್ ಹಾಕಿ (ಸ್ವಿಸ್ ರಾಷ್ಟ್ರೀಯ ಲೀಗ್), ಬೀಚ್ ವಾಲಿಬಾಲ್‌ (ಸಾಶ ಹ್ಯೇಯರ್, ಮಾರ್ಕಸ್‌ ಎಗ್ಗೆರ್, ಪಾವೆಲ್ ಮತ್ತು ಮಾರ್ಟಿನ್ ಲಸಿಗ), ಮತ್ತು ಸ್ಕೀಯಿಂಗ್‌, (ಬರ್ನಾರ್ಡ್ ರಸ್ಸಿ, ಪಿರ್ಮಿನ್ ಜರ್‍‌‌ಬ್ರಿಗೆನ್ನ್, ಡಿಡಿಯರ್ ಕ್ಯುಷೆ)ಗಳಲ್ಲಿ ಯಶಸ್ವಿಯಾಯಿತು.

1955ರ ಲೀ ಮಾನ್ಸ್ ದುರ್ಘಟನೆಯ ನಂತರ ಪರ್ವತಾರೋಹಣ ಪಂದ್ಯಗಳನ್ನು ಬಿಟ್ಟು ಉಳಿದ ಮೋಟರ್‌ಸ್ಪೋರ್ಟ್ಸ್‌ ಆಟದ ಮೈದಾನಗಳು ಮತ್ತು ಪಂದ್ಯಗಳನ್ನು ಸ್ವಿಟ್ಜರ್ಲೆಂಡ್‌‌‌ನಲ್ಲಿ ನಿಷೇಧಿಸಲಾಗಿದೆ. ಆದರೆ ಈ ನಿಷೇಧವನ್ನು ಜೂನ್‌ 2007ರಲ್ಲಿ ರದ್ದುಮಾಡಲಾಯಿತು.[೯೫] ಈ ಸಂದರ್ಭದಲ್ಲಿಯೂ, ದೇಶವು ಯಶಸ್ವೀ ಸ್ಪರ್ಧಾ ಚಾಲಕರುಗಳಾದ ಕ್ಲೆ ರೆಗ್ಗಾಜೋನಿ, ಜೊ ಸಿಫರ್ಟ್‌ ಮತ್ತು ವಿಶ್ವ ಟೂರಿಂಗ್ ಕಾರ್ ಚಾಂಪಿಯನ್‌ಶಿಪ್‌ನ ಯಶಸ್ವೀ ಚಾಲಕ ಅಲೆನ್ ಮೆನುರನ್ನು ಹೊಂದಿದೆ. ಸ್ವಿಟ್ಜರ್ಲೆಂಡ್‌ನ ಚಾಲಕ ನೀಲ್ ಜಾನಿಯವರು 2007-08ರಲ್ಲಿ ನಡೆದ A1GP ವಿಶ್ವ ಮೋಟಾರ್‌ಸ್ಪೋರ್ಟ್ ಕಪ್‌ ಅನ್ನು ತನ್ನದಾಗಿಸಿಕೊಂಡಿದ್ದಾರೆ. ಸ್ವಿಸ್‌ನ ಮೋಟಾರ್‌ ಸೈಕಲ್ ರೇಸರ್‌ ಥಾಮಸ್‌ ಲೂಥಿ 2005ರಲ್ಲಿ ನಡೆದ MotoGP 125cc ವಿಭಾಗದಲ್ಲಿ ವಿಶ್ವ ಚಾಂಪಿಯನ್‌ಶಿಪ್‌‍‌ ಪಟ್ಟವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಫಾರ್ಮುಲಾ ಒನ್‌ ಮತ್ತು ವಿಶ್ವ ರ್ಯಾಲಿ ಚಾಂಪಿಯನ್‌ಶಿಪ್‌ನ ವಿಖ್ಯಾತ ಚಾಲಕರಾದ ಮೈಕೆಲ್‌ ಷೂಮೇಕರ್, ನಿಕ್‌ ಹೇಯ್ಡ್‌ಫೆಲ್ಡ್ಡ್, ಕಿಮಿ ರಾಯ್ಕೊನೆನ್‌, ಫರ್ನ್ಯಾಂಡೊ ಅಲನ್ಸೊ, ಲ್ಯೂಯಿಸ್‌ ಹ್ಯಾಮಿಲ್ಟನ್‌ ಮತ್ತು ಸೆಬಾಸ್ಟಿಯನ್‌ ಲೋಬ್‌ ಎಲ್ಲರೂ ಸ್ವಿಟ್ಜರ್ಲೆಂಡ್‌‌‌[೯೬] ನಲ್ಲಿ ಮನೆಗಳನ್ನು, ಕೆಲ ಬಾರಿ ತೆರಿಗೆ ಕಾರಣಗಳಿಗಾಗಿಯಾದರೂ ಖರೀದಿಸಿದ್ದಾರೆ.[೯೭][೯೮]

ಪುರಾತನ ಕುಸ್ತಿ

ಪುರಾತನ ಪಂದ್ಯಗಳಲ್ಲಿ ಸ್ವಿಸ್ ಕುಸ್ತಿ ಅಥವಾ "ಶ್ವಿನ್‌ಜೆನ್‌" ಕೂಡ ಒಂದಾಗಿದೆ. ಇದು ಒಂದು ಹಳೆಯ ಸಂಪ್ರದಾಯವಾಗಿದ್ದು ಮಧ್ಯ ಹಳ್ಳಿಗಾಡಿನ ಕ್ಯಾಂಟನ್‌ಗಳು ಮತ್ತು ಕೆಲವು ಕಡೆಗಳಲ್ಲಿ ಇದನ್ನು ರಾಷ್ಟ್ರೀಯ ಪಂದ್ಯವೆಂದು ಪರಿಗಣಿಸಲಾಗಿದೆ. ಹಾರ್ನುಸ್ಸೆನ್‌ ಸ್ವಿಸ್‌ನ ಮತ್ತೊಂದು ದೇಶೀಯ ಪಂದ್ಯವಾಗಿದ್ದು, ಬೇಸ್‌ಬಾಲ್ ಮತ್ತು ಗಾಲ್ಫ್‌ನ ಮಿಶ್ರಣದಂತಿದೆ. ಸ್ವಿಸ್‌ನ ಸ್ಟೇಯ್ನ್‌ಸ್ಟಾಸ್ಸೆನ್‌ಗುಂಡು ಎಸೆತ ಪಂದ್ಯದಂತೆಯೇ ಇದ್ದು, ಭಾರದ ಕಲ್ಲುಗಳನ್ನು ಎಸೆಯುವ ಸ್ಪರ್ಧೆಯಾಗಿದ್ದು, ಸ್ಟೇಯ್ನ್‌ಸ್ಟಾಸ್ಸೆನ್‌ ಪುರಾತನ ಕಾಲದಿಂದಲೂ ಕೇವಲ ಆಲ್ಪೈನ್‌ ಜನಾಂಗದವರು ಮಾತ್ರ ನಡೆಸುತ್ತಾ ಬಂದಿದ್ದು, 13ನೇ ಶತಮಾನದಲ್ಲಿ ಬಸೆಲ್‌ನಲ್ಲಿ ನಡೆಸಿದ್ದ ಬಗ್ಗೆ ಉಲ್ಲೇಖಿಸಲಾಗಿದೆ. 1805ರಲ್ಲಿ ಪ್ರಥಮ ಬಾರಿಗೆ ಉನ್‌ಸ್ಪನ್ನೆನ್‌ಫೆಸ್ಟ್‌‌ನಲ್ಲಿ ನಡೆಸಲಾಗಿದ್ದು, 83.5 kg ಭಾರದ ಕಲ್ಲಿಗೆ ಉನ್‌ಸ್ಪನ್ನೆನ್‌‌ಸ್ಟೆನ್‌ ಎಂದು ಹೇಳಲಾಗಿದೆ.

ಸ್ವಿಟ್ಜರ್ಲೆಂಡ್‌‌ನ ಬಹು-ಪಾಕ ಪದ್ದತಿಯನ್ನು ಹೊಂದಿದೆ. ಭಕ್ಷ್ಯಗಳಾದ ಫಂಡ್ಯು, ರಾಕ್ಲೆಟ್ಟೆ ಅಥವಾ ರೊಸ್ಟಿ ದೇಶದ ಎಲ್ಲ ಕಡೆಗಳಲ್ಲಿಯೂ ಲಭ್ಯವಾಗುತ್ತವೆ, ಕೆಲವು ಪ್ರದೇಶವು ಹವಾಗುಣ ಮತ್ತು ಭಾಷೆಗಳ ಭಿನ್ನತೆಯಂತೆ ತನ್ನದೇ ಆದ ಭೋಜನ ಕಲೆ ಮತ್ತು ಶಾಸ್ತ್ರವನ್ನು ರೂಢಿ ಮಾಡಿಕೊಂಡಿದೆ.[೯೯] ಸಾಂಪ್ರದಾಯಿಕ ಸ್ವಿಸ್ ಆಹಾರ ಪದ್ಧತಿಯಲ್ಲಿ, ಇತರೆ ಐರೋಪ್ಯ ರಾಷ್ಟ್ರಗಳಲ್ಲಿ ಬಳಸುವ ರೀತಿಯ ಪದಾರ್ಥಗಳನ್ನೇ ಬಳಸಲಾಗುತ್ತದೆ , ಅವುಗಳೆಂದರೆ ಡೈರಿ ಉತ್ಪನ್ನಗಳು ಹಾಗೂ ಬೆಣ್ಣೆಯಂತಹ ಗ್ರುಯರೆ ಅಥವಾ ಎಮೆಂಟಲ್‌ಅನ್ನು, ಗ್ರುಯರೆ ಮತ್ತು ಎಮೆಂಟಲ್ ಕಣಿವೆಗಳಲ್ಲಿ ಉತ್ಪಾದಿಸಲಾಗುತ್ತದೆ.

ಸ್ವಿಟ್ಜರ್ಲೆಂಡ್‌‌ ‌ನಲ್ಲಿ 18ನೇ ಶತಮಾನದಲ್ಲೇ ಚಾಕೋಲೆಟ್ ಉತ್ಪಾದಿಸಲಾಯಿತಾದರೂ ಖ್ಯಾತಿ ಗಳಿಸಿದ್ದು ಮಾತ್ರ 19ನೇ ಶತಮಾನದ ಅಂತ್ಯದಲ್ಲಿ, ಆಧುನಿಕ ಪದ್ಧತಿಗಳಾದ ಕಂಚಿಂಗ್‌ ಮತ್ತು ಟೆಂಪರಿಂಗ್ ಕಂಡುಹಿಡಿದು ಉತ್ಪಾದನಾ ಗುಣಮಟ್ಟವನ್ನು ಹೆಚ್ಚಿಸಿದ ನಂತರವಷ್ಟೇ. 1875ರಲ್ಲಿ ಡೇನಿಯಲ್‌ ಪೀಟರ್‌ ಹಾಲಿನ ಚಾಕೋಲೆಟ್‌ಅನ್ನು ಕಂಡುಹಿಡಿದ ನಂತರ ಅದು ಉತ್ತುಂಗಕ್ಕೇರಿತು.[೧೦೦]

ಸ್ವಿಸ್ ವೈನ್‌ ಮುಖ್ಯವಾಗಿ ವಲಾಯಿಸ್‌, ವಾಡ್‌ (ಲಾವಾಕ್ಸ್‌), ಜಿನೀವಾ ಮತ್ತು ಟಿಕಿನೊಗಳಲ್ಲಿ ಉತ್ಪಾದಿಸಲಾಗುತ್ತದೆ, ಇದರಲ್ಲಿ ಬಿಳಿ ವೈನ್‌ ಕೂಡ ಸ್ವಲ್ಪ ಮಟ್ಟಿಗೆ ಸೇರಿದೆ. ದ್ರಾಕ್ಷಿ ತೋಟಗಳನ್ನು ಸ್ವಿಟ್ಜರ್ಲೆಂಡ್‌‌ನಲ್ಲಿ‌ ರೋಮ್‌ನ ಕಾಲದಿಂದರೂ ಬೆಳೆಸಲಾಗುತ್ತಿದ್ದು, ತುಂಬಾ ಹಳೆಯ ಕಾಲದ ಕುರುಹುಗಳನ್ನು ಕಾಣಬಹುದಾಗಿದೆ. ಸುಪ್ರಸಿದ್ಧವಾದ ವಿಧಗಳೆಂದರೆ ಚಾಸ್ಸೆಲಾಸ್ (ವಲಾಯಿಸ್‌ನಲ್ಲಿ ಫೆನ್‌ಡೆಂಟ್ ಎನ್ನಲಾಗುತ್ತದೆ) ಮತ್ತು ಪಿನೋಟ್ ನಾಯಿರ್‌. ಇವುಗಳಲ್ಲಿ ಟಿಕಿನೊದಲ್ಲಿ ಉತ್ಪಾದಿಸಲಾಗುವ ಮೆರ್ಲೊಟ್‌ ಪ್ರಮುಖ ವಿಧವಾಗಿದೆ.[೧೦೧]

ಇದನ್ನು ನೋಡಿರಿ

[ಬದಲಾಯಿಸಿ]

ಆಕರಗಳು

[ಬದಲಾಯಿಸಿ]
  1. De jure "federal city"; de facto capital. Because of historical federalist sensibilities, Swiss law does not designate a formal capital, and some federal institutions such as courts are located in other cities.
  2. Federal Constitution Archived 1 November 2009[Date mismatch] ವೇಬ್ಯಾಕ್ ಮೆಷಿನ್ ನಲ್ಲಿ., article 4, "National languages" : National languages are German, French, Italian and Romansh; Federal Constitution Archived 19 September 2008[Date mismatch] ವೇಬ್ಯಾಕ್ ಮೆಷಿನ್ ನಲ್ಲಿ., article 70, "Languages", paragraph 1: The official languages of the Confederation are German, French and Italian. Romansh shall be an official language for communicating with persons of Romansh language.
  3. Traditional. The Federal Charter only mentions "early August" and the treaty is a renewal of an older one, now lost.
  4. A solemn declaration of the Tagsatzung Archived 14 July 2016[Date mismatch] ವೇಬ್ಯಾಕ್ ಮೆಷಿನ್ ನಲ್ಲಿ. declared the Federal Constitution adopted on 12 September 1848. A resolution of the Tagsatzung Archived 14 July 2016[Date mismatch] ವೇಬ್ಯಾಕ್ ಮೆಷಿನ್ ನಲ್ಲಿ. of 14 September 1848 specified that the powers of the institutions provided for by the 1815 Federal Treaty would expire at the time of the constitution of the Federal Council, which took place on 16 November 1848.
  5. "Bevölkerungsstand und -entwicklung". Statistik Schweiz (in German). Bundesamt für Statistik, Neuchâtel. 2009. Retrieved 25 ಜೂನ್ 2009.{{cite web}}: CS1 maint: unrecognized language (link)
  6. ೬.೦ ೬.೧ ೬.೨ ೬.೩ ೬.೪ "Switzerland". International Monetary Fund. Retrieved 22 ಏಪ್ರಿಲ್ 2009.
  7. HDI of Switzerland. Retrieved 10 July 2009.
  8. ಸ್ವಿಸ್ ಜರ್ಮನ್‌ ಹೆಸರನ್ನು ಕೆಲವು ಬಾರಿ ಸ್ಕ್ವೆಜ್‌ ಅಥವಾ ಸ್ಕ್ವಿಜ್ ಎಂದು ಉಚ್ಛರಿಸಲಾಗುತ್ತದೆ. ಸ್ಕ್ವಿಜ್‌ ಜರ್ಮನ್‌ (ಮತ್ತು ಅಂತರರಾಷ್ಟ್ರೀಯ) ಕೂಡ ಉತ್ತಮವಾಗಿದ್ದು, ಒಂದು ಸ್ವಿಸ್ ಕ್ಯಾಂಟನ್‌ನ ಹೆಸರಾಗಿದೆ.
  9. ಸ್ವಿಸ್ ಮತ್ತು ಜರ್ಮನ್‌ ನಗರಗಳು ಪ್ರಪಂಚದಲ್ಲೇ ಅತ್ಯುತ್ತಮ ನಗರಗಳೆಂದು ಹೆಸರುವಾಸಿಯಾಗಿವೆ
  10. OED ಆನ್‌ಲೈನ್ ವ್ಯುತ್ಪತ್ತಿಶಾಸ್ತ್ರದ ಶಬ್ಧಕೋಶ ವನ್ನು etymonline.com.ಗೆ 2009-06-25ರಂದು ಪಡೆಯಲಾಯಿತು
  11. ರೂಮ್‌‌‌, ಆಡ್ರಿಯಾನ್‌. ಪ್ಲೇಸ್‌ ನೇಮ್ಸ್‌ ಆಫ್ ದ ವರ್ಲ್ಡ್‌‌ . ಲಂಡನ್‌: ಮ್ಯಾಕ್‌ಫಾರ್ಲ್ಯಾಂಡ್‌ ಮತ್ತು ಕಂ., ಇಂಕ್‌., 1997.
  12. R.C. ದಿ ಮರಿನಿಸ್‌‌ನಲ್ಲಿ ಪುನರುತ್ಪಾದನೆ, ಗ್ಲಿ ಎಟ್ರುಷಿ ಅ ನಾರ್ಡ್‌ ದೆಲ್‌ ಪೊ , ಮನ್ಟೋವ, 1986.
  13. ೧೩.೦ ೧೩.೧ ೧೩.೨ ೧೩.೩ ೧೩.೪ ೧೩.೫ ೧೩.೬ ೧೩.೭ swissworld.orgನಲ್ಲಿ ಚರಿತ್ರೆ 2009-06-27ರಂದು ಪಡೆಯಲಾಯಿತು
  14. ಶ್ವಬೆ ಅಂಡ್ ಕಂ.: ಗೆಷಿಛೆ ದರ್ ಸ್ಕ್ವಿಜ್‌‌‌ ಅಂಡ್ ದರ್ ಷ್ವಿಜೆರ್‌ , ಶ್ವಬೆ ಅಂಡ್ ಕಂ 1986/2004. ಪದ್ಧತಿ ISBN 3-7965-2067-7 (German)
  15. ೧೫.೦೦ ೧೫.೦೧ ೧೫.೦೨ ೧೫.೦೩ ೧೫.೦೪ ೧೫.೦೫ ೧೫.೦೬ ೧೫.೦೭ ೧೫.೦೮ ೧೫.೦೯ ೧೫.೧೦ ೧೫.೧೧ ೧೫.೧೨ ೧೫.೧೩ ೧೫.೧೪ ೧೫.೧೫ 2009-06-22ರಂದುಸ್ವಿಸ್ ಚರಿತ್ರೆಯ ಸಂಕ್ಷಿಪ್ತ ಸಮೀಕ್ಷೆ admin.chನಲ್ಲಿ, ಪಡೆಯಲಾಯಿತು
  16. Bundesstadt in German, French and Italian in the online Historical Dictionary of Switzerland.
  17. ಹಿಸ್ಟೋರಿಯೆ ದೆ ಲಾ ಸ್ಯುಸ್ಸೆ , ಆವೃತ್ತಿಗಳು ಫ್ರಗ್ನಿರೆ, ಫ್ರೈಬೋರ್ಗ್‌ , ಸ್ವಿಟ್ಜರ್ಲೆಂಡ್‌‌
  18. ನೋಡಿರಿ ವ್ಲಾದಿಮಿರ್‌ ಲೆನಿನ್‌
  19. ಲೆಟ್ಸ್‌ ಸ್ವಾಲೊ ಸ್ವಿಟ್ಜರ್ಲೆಂಡ್‌‌ ಕ್ಲಾಸ್‌ ಯು‌ರ್ನರ್‌ (ಲೆಕ್ಸಿಂಗ್ಟನ್ ಬುಕ್ಸ್, 2002).
  20. ಬರ್ಗಿಯರ್‌ ಮಂಡಳಿಯ ಅಂತಿಮ ವರದಿ, ಪುಟ 117.
  21. ೨೧.೦ ೨೧.೧ ೨೧.೨ ೨೧.೩ ೨೧.೪ ೨೧.೫ ^ ರಾಜಕೀಯ ವ್ಯವಸ್ಥೆ admin.chನಲ್ಲಿ, 2009-06-22ರಂದು ಪಡೆಯಲಾಯಿತು
  22. "Political System". Federal Department of Foreign Affairs.
  23. SVP/UDC, ಸ್ವಿಟ್ಜರ್ಲೆಂಡ್‌‌ನ‌ ಕನ್ಸರ್ವೇಟಿವ್ ಡೆಮಾಕ್ರಟಿಕ್ ಪಾರ್ಟಿ (BDP/PBD) ಎಲ್ಲ ಸಭಾಸದಸ್ಯರುಗಳಿಂದ ತೊಂದರೆಗೀಡಾಗಿ ಚುನಾವಣೆಯ ನಂತರ ಒಡಕನ್ನು ಅನುಭವಿಸಿದೆ. 2009ರಂತೆ, ಯೂಲಿ ಮಾರೆರ್‌ನಲ್ಲಿ ನಡೆದ ಚುನಾವಣೆಯಲ್ಲಿ, SVP/UDC ಮತ್ತು BDP/PBD ತಲಾ ಒಂದೊಂದು ಸೀಟನ್ನು ತಮ್ಮದಾಗಿಸಿಕೊಂಡಿವೆ.
  24. 1999ರಿಂದ,ಸಾರ್ವಜನಿಕ ಸ್ವಪ್ರೇರಣೆಯ ಮಾದರಿಯೊಂದು ಸಾಮಾನ್ಯ ಪ್ರಸ್ತಾಪದ ರೂಪದಲ್ಲಿದ್ದು ಸಂಸತ್ತಿನ ಮೇಲ್ವಿಚಾರಣೆಯಲ್ಲಿ ವಿಸ್ತೃತ ರೂಪ ಪಡೆಯುವ ಸ್ವರೂಪದಲ್ಲಿತ್ತು. ಆದರೆ ಬೇರೆ ಬೇರೆ ಕಾರಣಗಳಿಗಾಗಿ ತಿರಸ್ಕರಿಸಲ್ಪಟ್ಟು, ಈ ಮಾದರಿಯ ಸಾರ್ವಜನಿಕ ಸ್ವಪ್ರೇರಣೆಯೂ ಇನ್ನೂ ಬಳಕೆಗೆ ಬಂದಿಲ್ಲ.
  25. ಪ್ರಮುಖ ಮತ ಆರು ಸಾಂಪ್ರದಾಯಿಕ ಅರೆ-ಕ್ಯಾಂಟನ್‌ಗಳ ಮತಗಳು ಪ್ರತಿಯೊಂದು ಬೇರೆ ಕ್ಯಾಂಟನ್‌ಗಳ ಅರ್ಧದಷ್ಟು ಮತಗಳಿಗೆ ಸಮಾನವಾಗಿದ್ದು ಪರಿಣಾಮ 23 ಕಂಟೋನಲ್‌ಗಳಷ್ಟು ಅತ್ಯಧಿಕ ಮತಗಳು ದೊರೆತವು.
  26. ಟ್ರೆಮ್‌‌‌‌‌‌‌‌‌‌‌‌‌ಬ್ಲೆ; ಲೆಕೋರ್ಸ್‌; ಎಟ್‌ ಆಲ್‌. (2004) ರಾಜಕೀಯ ಭೂಪ್ರದೇಶಗಳನ್ನು ಗುರುತಿಸಲು. ಟೊರಂಟೊ: ನೆಲ್ಸನ್‌.
  27. ಟರ್ನರ್‌‌; ಬರ್ರಿ (2001). ಹೇಳಿಕೆಗಳ ವಾರ್ಷಿಕ ಪುಸ್ತಕ. ನ್ಯೂ ಯಾರ್ಕ್‌: ಮ್ಯಾಕ್‌ ಮಿಲನ್‌ ಮುದ್ರಣ ಲಿಮಿಟೆಡ್‌.
  28. ಬ್ಯಾಂಕ್ಸ್, ಆರ್ಥರ್‌ (2006). ಪೊಲಿಟಿಕಲ್ ಹ್ಯಾಂಡ್‌ಬುಕ್ ಆಫ್‌ ದ ವರ್ಲ್ಡ್‌ 2005-2006. ವಾಷಿಂಗ್ಟನ್‌: Cq ಪ್ರೆಸ್‌.
  29. "unige.ch - ವಿಶ್ವದ ನೇರ ಪ್ರಜಾಪ್ರಭುತ್ವ". Archived from the original on 5 ಜನವರಿ 2009. Retrieved 24 ಆಗಸ್ಟ್ 2021.
  30. ೩೦.೦ ೩೦.೧ ೩೦.೨ ೩೦.೩ ೩೦.೪ ಅಲಿಪ್ತ ನೀತಿ ಮತ್ತು ಪ್ರತ್ಯೇಕತಾನೀತಿ ಯನ್ನು swissworld.orgನಲ್ಲಿ, 2009-06-23ರಂದು ಪಡೆಯಲಾಯಿತು.
  31. ಈ ಪದ್ಧತಿಗಳನ್ನು ಸಾರ್ವಜನಿಕ ಸ್ವಪ್ರೇರಣೆಯಿಂದ ತ್ಯಜಿಸಲು 4 ಸೆಪ್ಟೆಂಬರ್‌ 2007ರ, ಮತ್ತು ಇದಕ್ಕೆ ಪೂರಕವಾಗಿ GSoA, ಸ್ವಿಟ್ಜರ್ಲೆಂಡ್‌‌ನ‌ ಗ್ರೀನ್‌ ಪಾರ್ಟಿ ಮತ್ತು ಸ್ವಿಟ್ಜರ್ಲೆಂಡ್‌ನ ಸೋಷಿಯಲ್ ಡೆಮೊಕ್ರಟಿಕ್‌ ಪಾರ್ಟಿ ಇಲ್ಲಿ Archived 30 April 2011[Date mismatch] ವೇಬ್ಯಾಕ್ ಮೆಷಿನ್ ನಲ್ಲಿ. ಪಟ್ಟಿ ಮಾಡಿರುವಂತೆ ಬೇರೆ ಸಂಸ್ಥೆಗಳು ಸಹಕರಿಸಿದವು.
  32. "Zwei Drittel der Rekruten diensttauglich (Schweiz, NZZ Online)". Retrieved 23 ಫೆಬ್ರವರಿ 2009.
  33. ಅರ್ಮಿಜಹೆಲ್ನ್ www.vbs.admin.ch Archived 9 September 2009[Date mismatch] ವೇಬ್ಯಾಕ್ ಮೆಷಿನ್ ನಲ್ಲಿ. (ಜರ್ಮನ್‌)
  34. ಲ್‌'ಎವಲ್ಯೂಷನ್‌ ದೆ ಲಾ ಪೊಲಿಟಿಕೆ ದೆ ಸೆಕ್ಯೂರಿಟೈ ದೆ ಲಾ ಸ್ಯುಸ್ಸೆ ("ಎವಲ್ಯೂಷನ್‌ ಆಫ್‌ ಸ್ವಿಸ್ ಸೆಕ್ಯೂರಿಟಿ ಪಾಲಿಸೀಸ್") ಮ್ಯಾನ್‌ಫ್ರೆಡ್‌ ರಾಷ್‌ http://www.nato.int/docu/revue/1993/9306-05.htm
  35. ೩೫.೦ ೩೫.೧ ೩೫.೨ ೩೫.೩ ೩೫.೪ ೩೫.೫ ಪ್ರಾದೇಶಿಕ ಭೂಗೋಳ ವನ್ನು swissworld.org, 2009-06-23ರಂದು ಪಡೆಯಲಾಯಿತು.
  36. "Landscape and Living Space". Federal Department of Foreign Affairs. Federal Administration admin.ch. 31 ಜುಲೈ 2007. Retrieved 25 ಜೂನ್ 2009.
  37. ಸ್ವಿಟ್ಜರ್ಲೆಂಡ್‌‌ನ‌ ವಿಸ್ತರಿಸಬಲ್ಲ ಸ್ವಯಂಚಲಿ‌ ಭೂಪಟವು swissinfo-geo.org ಅಥವಾ swissgeo.ch ನಲ್ಲಿ ಲಭ್ಯವಿದೆ; ವಿಸ್ತರಿಸಬಲ್ಲ ಸ್ವಯಂಚಲಿ‌ ಉಪಗ್ರಹ ಚಿತ್ರವು map.search.ch ನಲ್ಲಿ ಲಭ್ಯವಿದೆ.
  38. Swiss Alps Jungfrau-Aletsch unesco.org
  39. ೩೯.೦ ೩೯.೧ Herbermann, Charles George (1913). The Catholic Encyclopedia. Encyclopedia Press. p. 358. {{cite book}}: Cite has empty unknown parameter: |coauthors= (help)
  40. ೪೦.೦ ೪೦.೧ ೪೦.೨ ೪೦.೩ ೪೦.೪ [118] ^ ಸ್ವಿಟ್ಜರ್ಲೆಂಡ್‌‌ನ‌ ಹವಾಗುಣ about.ch, 2009-06-23ರಂದು ಪಡೆಯಲಾಯಿತು.
  41. -factbook/rankorder/2004rank.html CIA World Factbook[ಶಾಶ್ವತವಾಗಿ ಮಡಿದ ಕೊಂಡಿ]
  42. ವಿಶ್ವ ಆರ್ಥಿಕ ಪ್ರತಿಷ್ಠಾನ- ಜಾಗತಿಕ ಸ್ಪರ್ಧಾತ್ಮಕ ವರದಿ
  43. ೪೩.೦ ೪೩.೧ Taylor & Francis Group (2002). Western Europe. Routledge. pp. 645–646. ISBN 1857431529. {{cite book}}: Cite has empty unknown parameter: |coauthors= (help)
  44. ಕುಟುಂಬ ಆದಾಯ
  45. "Six Swiss companies make European Top 100". swissinfo.ch. 18 ಅಕ್ಟೋಬರ್ 2008. Retrieved 22 ಜುಲೈ 2008.
  46. ೪೬.೦ ೪೬.೧ ೪೬.೨ ೪೬.೩ ೪೬.೪ ಸ್ವಿಸ್ ಅಂಕಿಅಂಶಗಳ ವಾರ್ಷಿಕಪುಸ್ತಕ 2008 ಸ್ವಿಸ್ ಒಕ್ಕೂಟ ಅಂಕಿಅಂಶಗಳ ಕಛೇರಿ
  47. ೪೭.೦ ೪೭.೧ ಸಂಕ್ಷಿಪ್ತ ನಿಯಮಗಳು: ಸ್ವಿಟ್ಜರ್ಲೆಂಡ್‌‌ನ‌ ಆರ್ಥಿಕ ಸಮೀಕ್ಷೆ, 2007 (326 KiB), OECD
  48. ಆರ್ಥಿಕ ನಿಯಮಗಳ ಸುಧಾರಣೆಗಳು: 2008ರಲ್ಲಿ - ಸ್ವಿಟ್ಜರ್ಲೆಂಡ್‌‌ ದೇಶದ ಟಿಪ್ಪಣಿ (45 KiB)
  49. .ch/internet/osec/en/home/invest/factors/infrastructure/live/costs.-RelatedBoxSlot-47301-ItemList-89920-File.File.pdf/C:%5CDokumente%20und%20Einstellungen%5Cfum%5CDesktop%5CInvestieren%5C3%20Erfolgsfaktoren%5C6%20Infrastruktur%20&%20Lebensqualit??t\Domestic%20purchasing%20power%20of%20wages%20E.pdf Domestic purchasing power of wages[ಶಾಶ್ವತವಾಗಿ ಮಡಿದ ಕೊಂಡಿ] (68 KiB)
  50. ೫೦.೦ ೫೦.೧ ೫೦.೨ ೫೦.೩ [146] ^ ಸ್ವಿಸ್ ಶಿಕ್ಷಣ ವ್ಯವಸ್ಥೆ swissworld.orgನಲ್ಲಿ, 2009-06-23ರಂದು ಪಡೆಯಲಾಯಿತು.
  51. ಶಾಂಘೈ ಶ್ರೇಯಾಂಕವು 2008ರಲ್ಲಿ ಸಾಮಾನ್ಯ ವಿಜ್ಞಾನ ಮತ್ತು ಗಣಿತ Archived 12 January 2016[Date mismatch] ವೇಬ್ಯಾಕ್ ಮೆಷಿನ್ ನಲ್ಲಿ. ವಿಷಯಗಳಲ್ಲಿ ಪ್ರಪಂಚದ 100 ಅತ್ಯುತ್ತಮ ವಿಶ್ವವಿದ್ಯಾನಿಲಯಗಳನ್ನು ಪಟ್ಟಿ ಮಾಡಿತು.
  52. ಶಿಕ್ಷಣದತ್ತ ದೃಷ್ಟಿ ಹಾಯಿಸಿದರೆ 2005 Archived 23 July 2013[Date mismatch] ವೇಬ್ಯಾಕ್ ಮೆಷಿನ್ ನಲ್ಲಿ. OECD: ವಿಶ್ವವಿದ್ಯಾನಿಲಯ ಶಿಕ್ಷಣದಲ್ಲಿ ವಿದೇಶೀ ವಿದ್ಯಾರ್ಥಿಗಳ ಶೇಕಡಾವಾರು.
  53. ನೋಬೆಲ್‌ ಪ್ರಶಸ್ತಿಗಳು ವಿಜ್ಞಾನವಲ್ಲದ ವರ್ಗಗಳಲ್ಲಿ ಸೇರಿಸಲಾಗಿದೆ.
  54. "Mueller Science - Spezialitaeten: Schweizer Nobelpreisträger". Retrieved 31 ಜುಲೈ 2008.
  55. "CERN - ಪ್ರಪಂಚದ ಅತ್ಯಂತ ದೊಡ್ಡ ಪ್ರಯೋಗಶಾಲೆ www.swissworld.org". Archived from the original on 29 ಏಪ್ರಿಲ್ 2010. Retrieved 26 ಅಕ್ಟೋಬರ್ 2009.
  56. "ಸಂಸ್ಥೆಗಳ ಸ್ಥೂಲ ಸಮೀಕ್ಷೆ". Archived from the original on 27 ನವೆಂಬರ್ 2009. Retrieved 26 ಅಕ್ಟೋಬರ್ 2009. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  57. "ಮಾಧ್ಯಮಗಳ ಸುದ್ದಿ ಬಿತ್ತರಗಳು maxonmotor.ch". Archived from the original on 30 ಏಪ್ರಿಲ್ 2011. Retrieved 26 ಅಕ್ಟೋಬರ್ 2009.
  58. Prof Clive Church (2003). "The contexts of Swiss opposition to Europe" (PDF). Sussex European Institute. pp. p. 12. Archived from the original (PDF, 124 KiB) on 24 ಜೂನ್ 2008. Retrieved 13 ಜೂನ್ 2008. {{cite web}}: |pages= has extra text (help); Unknown parameter |month= ignored (help)
  59. "Volksinitiative «Ja zu Europa!» (Initiative «Yes to Europe!»)" (PDF, 1.1 MiB) (in German). BFS/OFS/UST. 13 ಫೆಬ್ರವರಿ 2003. Retrieved 15 ಜೂನ್ 2008.{{cite web}}: CS1 maint: unrecognized language (link)
  60. "Volksinitiative "Ja zu Europa!", nach Kantonen. (Initiative "Yes to Europe!" by Canton)" (XLS) (in German). BFS/OFS/UST. 16 ಜನವರಿ 2003. Retrieved 15 ಜೂನ್ 2008.{{cite web}}: CS1 maint: unrecognized language (link)
  61. "Vote No. 502 – Summary" (in German). 18 ಮೇ 2003.{{cite web}}: CS1 maint: unrecognized language (link)
  62. "Vote No. 501 – Summary" (in German). 18 ಮೇ 2003.{{cite web}}: CS1 maint: unrecognized language (link)
  63. "Federal government energy research". 16 ಜನವರಿ 2008.
  64. ವೆರ್ಖೆರ್ಸ್ಲೆತ್ಸುನ್ಜೆನ್‌– ದತೆನ್‌, Indikatoren admin.ch (ಜರ್ಮನ್‌)
  65. ಷೆನ್ವೆರ್ಖೆರ್‌ admin.ch (ಜರ್ಮನ್‌)
  66. ರೇಟಿಯನ್ ರೈಲ್ವೆ ಅಲ್ಬುಲ/ಬರ್ನಿನ ಭೂಪ್ರದೇಶಗಳು unesco.org
  67. "ಸ್ವಿಸ್ ಪುನರ್‌ಬಳಕೆ". Archived from the original on 23 ಏಪ್ರಿಲ್ 2010. Retrieved 26 ಅಕ್ಟೋಬರ್ 2009. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  68. ಬಸೆಲ್‌ -ನಗರದ ಸ್ವಚ್ಛತೆ Archived 1 July 2007[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.—ಬೆಲೆಪಟ್ಟಿ ಚೀಲಗಳು ಮತ್ತು ಚೀಟಿಗಳು
  69. "Recycling around the world". BBC. 25 ಜೂನ್ 2005. Retrieved 24 ಏಪ್ರಿಲ್ 2006.
  70. ಸರಿಯಾದ ರೀತಿಯಲ್ಲಿ(ಬಸೆಲ್‌ -ನಗರದ ಕಾಂಟನ್‌‌ನಲ್ಲಿ ) (1.6 MiB)—ಕಾಡಿನಲ್ಲಿ ಭರ್ತಿಮಾಡುವುದನ್ನು ನಿಷೇಧಿಸಲಾಗಿದ್ದು ... ಕಾನೂನುಬಾಹಿರವಾಗಿ ಸಂಗ್ರಹವಾದ ಕಸವನ್ನು ತೆಗೆದುಹಾಕಲು ಕೂಡ ಉಮ್ಟ್ರೈಬ್ಸಗೆಬರ್ಗ್‌ ಫ್ರಾಂಕ್‌ 200ಗಳಷ್ಟು - ದಂಡ ವಿಧಿಸಲಾಗುತ್ತದೆ (ಪುಟ 90)
  71. ಉಲ್ಲೇಖ ದೋಷ: Invalid <ref> tag; no text was provided for refs named federalstatistics
  72. SBB: ಬಿಲ್ಲಿಟ್ಟೆ - ಆನ್‌‌ಲೈನ್ ಚೀಟಿಗಳು
  73. ಸ್ಕ್ವಿಜ್‌‌ನಲ್ಲಿನ ವಿದೇಶೀಯರು - 2008ರ ಪ್ರಕಟಣೆ (ಜರ್ಮನ್‌) (1196 KiB), ಸ್ವಿಸ್ ಒಕ್ಕೂಟ ಅಂಕಿಅಂಶಗಳ ಕಛೇರಿ, ಪುಟ 12.
  74. ೭೪.೦ ೭೪.೧ ಸ್ಕ್ವಿಜ್‌‌ನಲ್ಲಿನ ವಿದೇಶೀಯರು - 2008ರ ಪ್ರಕಟಣೆ (ಜರ್ಮನ್‌) (1196 KiB), ಸ್ವಿಸ್ ಒಕ್ಕೂಟ ಅಂಕಿಅಂಶಗಳ ಕಛೇರಿ, ಪುಟ 72.
  75. ಸ್ವಿಟ್ಜರ್ಲೆಂಡ್‌‌‌ನಲ್ಲಿರುವ ವಿದೇಶಿ ಪ್ರಜೆಗಳನ್ನು ರಾಷ್ಟೀಯತೆಯ ಆಧಾರದಲ್ಲಿ ಗುರುತಿಸಲಾಗುತ್ತದೆ, 1980–2006 (ಜರ್ಮನ್‌), ಸ್ವಿಸ್ ಒಕ್ಕೂಟ ಅಂಕಿಅಂಶಗಳ ಕಛೇರಿ.
  76. UN ನಿಪುಣರಿಂದ ಸ್ವಿಟ್ಜರ್ಲೆಂಡ್‌‌‌ನಲ್ಲಿ ವರ್ಣಭೇದ ನೀತಿಯು ನಿರ್ಧಾರಕ ವರದಿ humanrights.ch
  77. ಸ್ವಿಟ್ಜರ್ಲೆಂಡ್‌‌ ಅನ್ನು who.int.ನಲ್ಲಿ 2009-06-29ರಂದು ಪಡೆಯಲಾಗಿದೆ.
  78. ಜನ್ಮ ಸಮಯದಲ್ಲಿನ ಜೀವಿತಾವಧಿ, 2006 ರಂತೆ who.int. 2009-06-29ರಂದು ಪಡೆಯಲಾಗಿದೆ
  79. OECD ಆರೋಗ್ಯ ದತ್ತವನ್ನು 2006 oecd.org.ನಲ್ಲಿ 2009-06-29ರಂದು ಪಡೆಯಲಾಗಿದೆ
  80. ೮೦.೦ ೮೦.೧ ಸ್ವಿಟ್ಜರ್ಲೆಂಡ್‌‌‌ನ ಆರೋಗ್ಯ ವ್ಯವಸ್ಥೆಯ OECD ಮತ್ತು WHO ಸಮೀಕ್ಷೆ oecd.org.ನಲ್ಲಿ 2009-06-29ರಂದು ಪಡೆಯಲಾಗಿದೆ.
  81. ಜನರು ವಾಸಿಸುವ ಸ್ಥಳ swissworld.org.ನಿಂದ 2009-06-29ರಂದು ಪಡೆಯಲಾಗಿದೆ
  82. ೮೨.೦ ೮೨.೧ ೮೨.೨ ೮೨.೩ ೮೨.೪ ನಗರ ಮತ್ತು ಪಟ್ಟಣ ಪ್ರದೇಶಗಳು ಸೂಕ್ಷ್ಮದರ್ಶಕದಲ್ಲಿ ಕಾಣುವಂತೆ Archived 15 August 2010[Date mismatch] ವೇಬ್ಯಾಕ್ ಮೆಷಿನ್ ನಲ್ಲಿ. admin.ch.ನಿಂದ 2009-06-29ರಂದು ಪಡೆಯಲಾಗಿದೆ
  83. ಸ್ವಿಸ್‌ನ ಹಳ್ಳಿಗಳು ಅವ್ಯವಸ್ಥಿತ ನಗರಗಳಾಗುತ್ತಿವೆ Archived 16 March 2012[Date mismatch] ವೇಬ್ಯಾಕ್ ಮೆಷಿನ್ ನಲ್ಲಿ. swissinfo.ch. 2009-06-29ರಂದು ಪಡೆಯಲಾಗಿದೆ
  84. ಸ್ವಿಟ್ಜರ್ಲೆಂಡ್‌ನ ನಗರೀಕರಣ ಪ್ರತಿನಿಧಿಸುವ ಸಮೀಕ್ಷೆ (ಪ್ರೋನ್ಯಾಚುರಾ) Archived 30 April 2011[Date mismatch] ವೇಬ್ಯಾಕ್ ಮೆಷಿನ್ ನಲ್ಲಿ. gfs-zh.ch.ನಿಂದ 2009-06-30ರಂದು ಪಡೆಯಲಾಗಿದೆ
  85. ^ ಸ್ವಿಸ್ ಪ್ರಸ್ಥಭೂಮಿ Archived 25 December 2007[Date mismatch] ವೇಬ್ಯಾಕ್ ಮೆಷಿನ್ ನಲ್ಲಿ. swissworld.org.ನಿಂದ 2009-06-29ರಂದು ಪಡೆಯಲಾಗಿದೆ
  86. ಜೀವನ ಮಟ್ಟ ವನ್ನು mercer.com.ನಿಂದ 2009-06-29ರಂದು ಪಡೆಯಲಾಗಿದೆ
  87. ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ವರದಿ 2004 – ಸ್ವಿಟ್ಜರ್ಲೆಂಡ್‌‌, U.S. ರಾಜ್ಯ ಇಲಾಖೆ.
  88. -factbook/geos/sz.html#People CIA World Factbook section on Switzerland[ಶಾಶ್ವತವಾಗಿ ಮಡಿದ ಕೊಂಡಿ]
  89. [216], ಯುರೊಬಾರೋಮೀಟರ್‌, ಜೂನ್‌ 2005.
  90. Reclus, Élisée (1881). The Earth and Its Inhabitants. D. Appleton and Company. p. 478. {{cite book}}: Cite has empty unknown parameter: |coauthors= (help)
  91. ೯೧.೦ ೯೧.೧ ೯೧.೨ ಸಾಹಿತ್ಯ ವನ್ನು swissworld .orgನಿಂದ, 2009-06-29ರಂದು ಪಡೆಯಲಾಗಿದೆ
  92. ೯೨.೦ ೯೨.೧ ಪತ್ರಿಕೆ ಮತ್ತು ಮಾಧ್ಯಮ Archived 4 December 2008[Date mismatch] ವೇಬ್ಯಾಕ್ ಮೆಷಿನ್ ನಲ್ಲಿ. ch.ch.ನಿಂದ 2009-06-29ರಂದು ಪಡೆಯಲಾಗಿದೆ
  93. ೯೩.೦ ೯೩.೧ ೯೩.೨ ೯೩.೩ ಸ್ವಿಟ್ಜರ್ಲೆಂಡ್‌‌ನ ಪತ್ರಿಕೆ‌ ಗಳನ್ನು pressreference.com.ನಿಂದ 2009-06-29ರಂದು ಪಡೆಯಲಾಗಿದೆ
  94. "IIHF ವಿಶ್ವ ಚಾಂಪಿಯನ್‌ಶಿಪ್ 2009 ಅಧಿಕೃತ ಜಾಲತಾಣ". Archived from the original on 16 ಮೇ 2008. Retrieved 26 ಅಕ್ಟೋಬರ್ 2009.
  95. "Switzerland lifts ban on motor racing". GrandPrix.com & DueMotori.com. 6 ಜೂನ್ 2007. Retrieved 23 ಸೆಪ್ಟೆಂಬರ್ 2008.
  96. "ಸೆಬ್ಯಾಸ್ಟಿಯನ್‌‌ ಲೋಬ್‌‌ ಗುರುತು ಚೀಟಿ". Archived from the original on 16 ಜುಲೈ 2011. Retrieved 1 ಜುಲೈ 2024.
  97. BBC ಹ್ಯಾಮಿಲ್ಟನ್‌ ಬ್ರಿಟನ್‌ ಬಿಡಲು ನಿರ್ಧರಿಸಿದರು
  98. [239] ^ ಸ್ವಿಟ್ಜರ್ಲೆಂಡ್‌‌‌ನಲ್ಲಿ ಹೆಸರಾಂತ ವ್ಯಕ್ತಿಗಳು - ಟೀನಾ ಟರ್ನರ್‌ ಮತ್ತು ಕಂ. ಇದ್ದ ಸ್ಥಳ Archived 27 August 2013[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.
  99. ಫ್ಲೇವರ್ಸ್‌ ಆಫ್‌ ಸ್ವಿಟ್ಜರ್ಲೆಂಡ್‌‌ Archived 20 July 2009[Date mismatch] ವೇಬ್ಯಾಕ್ ಮೆಷಿನ್ ನಲ್ಲಿ. theworld widegourmet.com.ನಿಂದ 2009-06-29ರಂದು ಪಡೆಯಲಾಗಿದೆ
  100. ಚಾಕೋಲೆಟ್ ಅನ್ನು swissworld .org.ನಿಂದ 2009-06-29ರಂದು ಪಡೆಯಲಾಗಿದೆ
  101. ವೈನ್‌-ಉತ್ಪಾದಕ ಸ್ವಿಟ್ಜರ್ಲೆಂಡ್‌‌ ಅನ್ನು ಚಿಕ್ಕದಾಗಿ Archived 9 April 2009[Date mismatch] ವೇಬ್ಯಾಕ್ ಮೆಷಿನ್ ನಲ್ಲಿ. swisswine.ch.ನಿಂದ 2009-06-29ರಂದು ಪಡೆಯಲಾಗಿದೆ
  • ಚರ್ಚ್‌‌‌, ಕ್ಲೈವ್‌‌‌‌‌‌‌‌‌ H. (2004) ' ಮತ್ತು ದ ಪೊಲಿಟಿಕ್ಸ್ ಆಂಡ್ ಗವರ್ನಮೆಂಟ್ ಆಫ್ ಸ್ವಿಟ್ಜರ್ಲೆಂಡ್‌‌‌.ಪಾಲ್‌ಗ್ರೇವ್‌ ಮ್ಯಾಕ್‌ಮಿಲನ್‌‌‌ ISBN 0-333-69277-2.
  • ಡಾಲ್ಟನ್‌, O.M. (1927) ದ ಹಿಸ್ಟರಿ ಆಫ್‌‌ ದ ಫ್ರಾಂಕ್ಸ್, ಬೈ ಗ್ರೆಗರಿ ಆಫ್ ಟೂರ್ಸ್ . ಆಕ್ಸ್‌ಫರ್ಡ್: ಕ್ಯಾಲೆಂಡರ್ ಮುದ್ರಣಾಲಯ.
  • ಫಹ್‌ರ್ನಿ, ಡೈಯೆಟರ್‌‍‌‍‌. (2003) ಆನ್ ಔಟ್‌ಲೈನ್ ಹಿಸ್ಟರಿ ಆಫ್‌ ಸ್ವಿಟ್ಜರ್ಲೆಂಡ್‌‌. ಫ್ರಮ್‌ ದ ಆರಿಜಿನ್ಸ್‌ ಟು ದ ಪ್ರಸೆಂಟ್‌ ಡೇ . 8ನೇ ವಿಸ್ತೃತ ಆವೃತ್ತಿ. ಪ್ರೊ ಹೆಲ್ವೇಶಿಯಾ, ಜ್ಯೂರಿಚ್‌ . ISBN 3-908102-61-8
  • ಹಿಸ್ಟಾರಿಕಲ್ ಡಿಕ್ಷನರಿ ಆಫ್‌ ಸ್ವಿಟ್ಜರ್ಲೆಂಡ್‌‌ (2002–). ಸ್ವಿಟ್ಜರ್ಲೆಂಡ್‌‌ನ ಮೂರು ರಾಷ್ಟೀಯ ಭಾಷೆಗಳಲ್ಲಿ ಒಂದೇ ಬಾರಿಗೆ ವಿದ್ಯುನ್ಮಾನ ಮತ್ತು ಮುದ್ರಣ ರೂಪಗಳಲ್ಲಿ‌ ಪ್ರಕಟಿಸಲಾಯಿತು.

ಹೊರಗಿನ ಕೊಂಡಿಗಳು

[ಬದಲಾಯಿಸಿ]

ಸರ್ಕಾರ

Reference
ಭೂಗೋಳ
ಇತಿಹಾಸ
ಸುದ್ದಿ ಮಾಧ್ಯಮ
ಶಿಕ್ಷಣ
ವಿಜ್ಞಾನ, ಸಂಶೋಧನೆ ಮತ್ತು ತಾಂತ್ರಿಕತೆ
Templates

46°50′00″N 8°20′00″E / 46.83333°N 8.33333°E / 46.83333; 8.33333