ನೆಸ್ಲೆ

ವಿಕಿಪೀಡಿಯ ಇಂದ
Jump to navigation Jump to search
ನೆಸ್ಲೆ ಕಂಪನಿಯ ಕೇಂದ್ರ ಕಾರ್ಯಾಲಯ

ನೆಸ್ಲೆ ವವೆಯಲ್ಲಿ ಕೇಂದ್ರ ಕಾರ್ಯಾಲಯವನ್ನು ಹೊಂದಿರುವ ಸ್ವಿಟ್ಸರ್ಲೆಂಡ್‍ನ ಒಂದು ಬಹುರಾಷ್ಟ್ರೀಯ ಆಹಾರ ಮತ್ತು ಪೇಯ ಕಂಪನಿ. ಆದಾಯದಿಂದ ಅಳೆದಾಗ ಅದು ವಿಶ್ವದ ಅತ್ಯಂತ ದೊಡ್ಡ ಆಹಾರ ಕಂಪನಿಯೆನಿಸಿಕೊಂಡಿದೆ. ನೆಸ್ಲೆಯ ಉತ್ಪನ್ನಗಳು ಶಿಶು ಆಹಾರ, ಬಾಟಲೀಕೃತ ನೀರು, ಉಪಾಹಾರ ಧಾನ್ಯಗಳು, ಕಾಫಿ ಹಾಗು ಚಹಾ, ಸಿಹಿತಿಂಡಿಗಳು, ಕ್ಷೀರೋತ್ಪನ್ನಗಳು, ಐಸ್ ಕ್ರೀಂ, ಶೈತ್ಯೀಕೃತ ಆಹಾರ, ಸಾಕುಪ್ರಾಣಿ ಆಹಾರಗಳು, ಮತ್ತು ಲಘು ಆಹಾರಗಳನ್ನು ಒಳಗೊಂಡಿವೆ.

ನೆಸ್ಲೆಯ ಉತ್ಪನ್ನಗಳಲ್ಲಿ ಕೆಲವು ಸಣ್ಣ ಮಕ್ಕಳ ಆಹಾರ, ವೈದ್ಯಕೀಯ ಆಹಾರ, ಬಾಟಲ್ ನೀರು, ಉಪಹಾರ ಧಾನ್ಯಗಳು, ಕಾಫಿ ಮತ್ತು ಚಹಾ, ಮಿಠಾಯಿ, ಡೈರಿ ಉತ್ಪನ್ನಗಳು, ಐಸ್ ಕ್ರೀಮ್, ಹೆಪ್ಪುಗಟ್ಟಿದ ಆಹಾರ, ಪ್ರಾಣಿಗಳ ಆಹಾರಗಳು, ಮತ್ತು ತಿಂಡಿಗಳು ಸೇರಿವೆ. ಇಪ್ಪತ್ತೊಂಬತ್ತು ನೆಸ್ಲೆ ಬ್ರಾಂಡ್‍ಗಳು ಸಿಎಚ್‍ಎಫ಼್೧ ಬಿಲಿಯನ್ (ಸುಮಾರು US $ ೧.೧ ಶತಕೋಟಿ) ವಾರ್ಷಿಕ ಮಾರಾಟವನ್ನು ಹೊಂದಿದೆ. ಇವುಗಳಲ್ಲಿ ಕೆಲವು ನೆಸ್ಪ್ರೆಸ್ಸೊ, ನೆಸ್ಕಫ಼ೆ, ಕಿಟ್ ಕ್ಯಾಟ್, ಸ್ಮಾರ್ಟಿಸ್, ನೆಸ್ಕ್ವಿಕ್, ಸ್ಟೊಫರ್‍'ಸ್, ವಿಟ್ಟೆಲ್, ಮತ್ತು ಮ್ಯಾಗಿ.

"https://kn.wikipedia.org/w/index.php?title=ನೆಸ್ಲೆ&oldid=719674" ಇಂದ ಪಡೆಯಲ್ಪಟ್ಟಿದೆ