ವಿಷಯಕ್ಕೆ ಹೋಗು

ಆರೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಇರಾನ್‍ನ ರಾಷ್ಟ್ರೀಯ ಸಂಗ್ರಹಾಲಯದಲ್ಲಿ ಆರೆಗಳುಳ್ಳ ಚಕ್ರ

ಆರೆ ಚಕ್ರದ ಮಧ್ಯದಿಂದ (ಅಚ್ಚುಗಂಬಿ ಜೋಡಣೆಯಾಗುವ ಗುಂಬ) ಹೊರಗೆ ಹರಡುವ ಕೆಲವು ಸಂಖ್ಯೆಯ ದಂಡಗಳಲ್ಲೊಂದು, ಮತ್ತು ಗುಂಬವನ್ನು ದುಂಡನೆಯ ಎಳೆತದ ಮೇಲ್ಮೈಗೆ ಜೋಡಿಸುತ್ತದೆ.

ಆರೆಗಳುಳ್ಳ ಚಕ್ರವನ್ನು ಹೆಚ್ಚು ಹಗುರ ಮತ್ತು ಹೆಚ್ಚು ವೇಗದ ವಾಹನಗಳ ನಿರ್ಮಾಣವನ್ನು ಸಾಧ್ಯವಾಗಿಸಲು ಆವಿಷ್ಕರಿಸಲಾಯಿತು. ಪರಿಚಿತವಿರುವ ಅತ್ಯಂತ ಮುಂಚಿನ ಉದಾಹರಣೆಗಳು ಕ್ರಿ.ಪೂ. ೨೦೦೦ಕ್ಕೆ ಕಾಲನಿರ್ದೇಶ ಮಾಡಿದ ಶಿಂತಸ್ತ ಸಂಸ್ಕೃತಿಯ ಸಂದರ್ಭದಲ್ಲಿವೆ. ಇದಾದ ಶೀಘ್ರದಲ್ಲೇ, ಕಾಕಸಸ್ ಪ್ರದೇಶದ ಕುದುರೆ ಸಂಸ್ಕೃತಿಗಳು ಕುದುರೆಯಿಂದ ಎಳೆಯಲ್ಪಡುವ ಆರೆಗಳುಳ್ಳ ಚಕ್ರದ ಯುದ್ಧ ರಥಗಳನ್ನು ಮೂರು ಶತಮಾನಗಳ ಹೆಚ್ಚಿನ ಭಾಗದಲ್ಲಿ ಬಳಸಿದವು. ಇವು ಆಳವಾಗಿ ಗ್ರೀಕ್ ದ್ವೀಪಕಲ್ಪದಲ್ಲಿ ಚಲಿಸಿದವು. ಸೆಲ್ಟಿಕ್ ರಥಗಳು ಕ್ರಿ.ಪೂ. ೧ನೇ ಸಹಸ್ರಮಾನದಲ್ಲಿ ಚಕ್ರದ ಸುತ್ತ ಕಬ್ಬಿಣದ ನೇಮಿಯನ್ನು ಪರಿಚಯಿಸಿದವು. ಆರೆಯುಳ್ಳ ಚಕ್ರವು ಯಾವುದೇ ಪ್ರಮುಖ ಮಾರ್ಪಾಡಿಲ್ಲದೇ ೧೮೭೦ರ ದಶಕದವರೆಗೆ ನಿರಂತರ ಬಳಕೆಯಲ್ಲಿತ್ತು. ಆ ದಶಕದಲ್ಲಿ ತಂತಿ ಚಕ್ರಗಳು ಮತ್ತು ರಬ್ಬರ್ ಟಯರುಗಳನ್ನು ಆವಿಷ್ಕರಿಸಲಾಯಿತು.[೧]

ಆರೆಗಳನ್ನು ಕಟ್ಟಿಗೆ, ಲೋಹ, ಅಥವಾ ಕೃತಕ ನಾರಿನಿಂದ ತಯಾರಿಸಬಹುದು ಮತ್ತು ಆರೆಗಳು ಒತ್ತಡದಲ್ಲಿರುತ್ತವೆಯೇ ಅಥವಾ ಸಂಕೋಚನದಲ್ಲಿರುತ್ತವೆಯೇ ಎಂಬುದನ್ನು ಅವಲಂಬಿಸಿರುತ್ತದೆ.

ಸಂಕೋಚನ ಆರೆಗಳು ಮೂಲ ಪ್ರಕಾರದ ಆರೆಯುಳ್ಳ ಚಕ್ರದಲ್ಲಿ ಮೊದಲು ಬಳಸಲ್ಪಟ್ಟವು. ಕಟ್ಟಿಗೆಯ ಆರೆಗಳಿರುವ ಚಕ್ರಗಳನ್ನು ಕುದುರೆಯಿಂದ ಎಳೆಯಲ್ಪಟ್ಟ ಸಾರೋಟುಗಳು ಮತ್ತು ಬಂಡಿಗಳಿಗೆ ಬಳಸಲಾಯಿತು. ಮುಂಚಿನ ಮೋಟಾರು ಕಾರುಗಳಲ್ಲಿ, ಫಿರಂಗಿ ಪ್ರಕಾರದ ಕಟ್ಟಿಗೆಯ ಆರೆಗಳಿರುವ ಚಕ್ರಗಳನ್ನು ಸಾಮಾನ್ಯವಾಗಿ ಬಳಸಲಾಗುತ್ತಿತ್ತು. ಕಟ್ಟಿಗೆಯ ಸರಳ ಚಕ್ರದಲ್ಲಿ, ಗುಂಬದ ಮೇಲಿನ ಭಾರದಿಂದ ಚಕ್ರದ ನೇಮಿ ನೆಲದ ವಿರುದ್ಧವಾಗಿ ಸ್ವಲ್ಪ ಚಪ್ಪಟೆಗೊಳ್ಳುತ್ತದೆ, ಏಕೆಂದರೆ ಅತ್ಯಂತ ಕೆಳಗಿನ ಕಟ್ಟಿಗೆಯ ಆರೆ ಚಿಕ್ಕದಾಗುತ್ತದೆ ಮತ್ತು ಸಂಕೋಚನಗೊಳ್ಳುತ್ತದೆ. ಇತರ ಆರೆಗಳು ಯಾವುದೇ ಗಮನಾರ್ಹ ಬದಲಾವಣೆಯನ್ನು ತೋರಿಸುವುದಿಲ್ಲ. ಕಟ್ಟಿಗೆಯ ಆರೆಗಳನ್ನು ಕೆಂದ್ರಾಪಸರಣವಾಗಿ ಕೂರಿಸಲಾಗುತ್ತದೆ. ಅವುಗಳನ್ನು ಸಾಮಾನ್ಯವಾಗಿ ವಾಹನದ ಹೊರಗಡೆಗೆ ಒಳಬಾಗು ಇರುವಂತೆ ಕೂಡಿಸಲಾಗುತ್ತದೆ, ಇದು ಅಲುಗಾಟವನ್ನು ತಡೆಯುತ್ತದೆ. ಜೊತೆಗೆ, ಒಳಬಾಗಿಸುವಿಕೆಯು ಚಕ್ರಕ್ಕೆ ಆರೆಗಳ ವಿಸ್ತರಣೆಯನ್ನು ಸರಿದೂಗಿಸಲು ಸಾಧ್ಯವಾಗಿಸುತ್ತದೆ.

ಒತ್ತಡ ಆರೆಗಳನ್ನು ಸೈಕಲ್‍ಗಳಲ್ಲಿ ಬಳಸಲಾಗುತ್ತದೆ. ಸೈಕಲ್‍ಗಳಲ್ಲಿ, ಭಾರದ ಕಟ್ಟಿಗೆಯ ಆರೆಗಳಿರುವ ಚಕ್ರಗಳ ಬದಲಾಗಿ ಒತ್ತಡ ಹೊಂದಿರುವ, ಸರಿಹೊಂದಿಸಬಲ್ಲ ಲೋಹದ ತಂತಿಗಳಿಂದ ತಯಾರಿಸಲಾದ ಆರೆಗಳಿರುವ ಹೆಚ್ಚು ಹಗುರ ಚಕ್ರಗಳನ್ನು ಬಳಸಲಾಯಿತು. ಇವಕ್ಕೆ ತಂತಿ ಚಕ್ರಗಳು ಎಂದು ಹೆಸರು. ಇವನ್ನು ಗಾಲಿಕುರ್ಚಿಗಳು, ಮೋಟರ್‍ಬೈಕ್‍ಗಳು ಮತ್ತು ಮೋಟಾರು ವಾಹನಗಳಲ್ಲಿಯೂ ಬಳಸಲಾಗುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. Herlihy, David (2004). Bicycle: the History. Yale University Press. p. 141. ISBN 0-300-10418-9. Retrieved 2009-09-29.
"https://kn.wikipedia.org/w/index.php?title=ಆರೆ&oldid=799310" ಇಂದ ಪಡೆಯಲ್ಪಟ್ಟಿದೆ