ದಕ್ಷಿಣ ಒಸ್ಸೆಟಿಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜಾರ್ಜಿಯ ಮತ್ತು ರಷ್ಯಾಗಳ ನಡುವಣ ದಕ್ಷಿಣ ಒಸ್ಸೆಟಿಯ
ವಿವರವಾದ ನಕ್ಷೆ

ದಕ್ಷಿಣ ಒಸ್ಸೇಟಿಯ (Хуссар Ирыстон, ಕುಸ್ಸಾರ್ ಇರಿಸ್ಟನ್; სამხრეთი ოსეთი, ಸಮ್ಕ್ರೇತಿ ಒಸೆಟಿ; Южная Осетия, ಯುಜ್ನಾಯ ಒಸೆಟಿಯ ) ದಕ್ಷಿಣ ಕೌಕಸಸ್ ಪ್ರದೇಶದ ಒಂದು ಭಾಗ. ಸೋವಿಯೆಟ್ ಒಕ್ಕೂಟದ ಕಾಲದಲ್ಲಿ ಜಾರ್ಜಿಯದ ಭಾಗವಾಗಿದ್ದ ಈ ಪ್ರದೇಶ, ಒಕ್ಕೂಟವು ಒಡೆದ ಮೇಲೆ ಜಾರ್ಜಿಯದಿಂದ ಸ್ವಾತಂತ್ರ್ಯ ಘೋಷಿಸಿಕೊಂಡಿತು. ಈ ಪ್ರದೇಶದ ರಾಜಧಾನಿ ತ್ಸ್ಕಿನ್ವಾಲಿ.