ಪರ್ವತಾರೋಹಣ
ಪರ್ವತಾರೋಹಣ ಅಥವಾ ಪರ್ವತದ ಚಾರಣ ವು ಕ್ರೀಡೆ , ಹವ್ಯಾಸ ಅಥವಾ ಕಾಲ್ನಡುಗೆಯಿಂದ ಏರುವಿಕೆ, ನೀರ್ಗಲ್ಲ ಮೇಲೆ ಜಾರುವಿಕೆ ಮತ್ತು ಪರ್ವತ ಚಾರಣಗಳ ವೃತ್ತಿಯಾಗಿರುತ್ತದೆ. ಪರ್ವತಾರೋಹಣವು ಮೊದಲಿಗೆ ಅದುವರೆಗೆ ಏರಿರದ ಪರ್ವತಗಳ ಅತಿ ಎತ್ತರದ ಸ್ಥಳವನ್ನು ತಲುಪುವ ಪ್ರಯತ್ನಗಳಾಗಿ ಆರಂಭಗೊಂಡಿತ್ತಾದರೂ, ಪರ್ವತಕ್ಕೆ ಸಂಬಂಧಿಸಿದ ವಿವಿಧ ಮಗ್ಗಲುಗಳಲ್ಲಿ ವಿಶೇಷ ಅಧ್ಯಯನ ಕ್ಷೇತ್ರಗಳಾಗಿ ಪರಿಣಮಿಸಿರುವುದಲ್ಲದೇ, ಮೂರು ವಲಯಗಳನ್ನು ಹೊಂದಿದೆ : ಇದು ಒಳಗೊಂಡಿರುವ ಪಥವು ಬಂಡೆಗಳನ್ನು, ಹಿಮಪದರವನ್ನು ಅಥವಾ ನೀರ್ಗಲ್ಲುಗಳನ್ನು ಹೊಂದಿರುವುದೋ ಎಂಬುದರ ಮೇಲೆ ಅವುಗಳನ್ನು ಬಂಡೆ ಏರುವಿಕೆಯ-ಕೌಶಲ್ಯ, ಹಿಮಪದರ ಏರುವಿಕೆಯ ಕೌಶಲ್ಯ ಮತ್ತು ನೀರ್ಗಲ್ಲ ಮೇಲೆ ಜಾರುವಿಕೆ ಎಂದು ಪರಿಗಣಿಸಲಾಗುತ್ತದೆ. ಇವೆಲ್ಲಾ ವಿಧಗಳು ಅನುಭವ, ಹೆಚ್ಚಿನ ದೈಹಿಕ ಸಾಮರ್ಥ್ಯ ಹಾಗೂ ಸುರಕ್ಷತೆಯನ್ನು ನೋಡಿಕೊಳ್ಳಲು ಅಗತ್ಯವಾದ ತಾಂತ್ರಿಕ ಜ್ಞಾನವನ್ನು ಬೇಡುತ್ತವೆ.[೧] UIAA ಅಥವಾ ಯೂನಿಯನ್ ಇಂಟರ್‌ನ್ಯಾಷನಲೆ ಡೆಸ್ ಅಸೋಸಿಯೇಷನ್ಸ್ ಡಿ'ಅಲ್ಪಿನಿಸ್ಮೆ ಎಂಬ ಸಂಸ್ಥೆಯು ಪರ್ವತಾರೋಹಣ ಹಾಗೂ ಚಾರಣಗಳಿಗೆ ಸಂಬಂಧಿಸಿದಂತೆ ಅವಕಾಶ, ವೈದ್ಯಕೀಯ, ಪರ್ವತ ರಕ್ಷಣೆ, ಸುರಕ್ಷತೆ, ಯುವಸಮೂಹ ಹಾಗೂ ನೀರ್ಗಲ್ಲುಗಳ ಮೇಲೆ ಚಾರಣದಂತಹಾ ವಿಚಾರಗಳಲ್ಲಿ ನಿಯಂತ್ರಣ ಹೊಂದಿರುವ ವಿಶ್ವ ಮಟ್ಟದ ನಿಯಂತ್ರಣ ಸಂಸ್ಥೆಯಾಗಿದೆ.[೨]
ತಂತ್ರ
[ಬದಲಾಯಿಸಿ]ಹಿಮಪದರ
[ಬದಲಾಯಿಸಿ]ಅಡಕವಾಗಿ ಕೂಡಿಸಿದಂತೆ ರಚಿತವಾದ ಹಿಮದ ಪರಿಸ್ಥಿತಿಗಳು ಪರ್ವತಾರೋಹಿಗಳು ಕಾಲ್ನಡಿಗೆಯಲ್ಲಿಯೇ ಮುಂದುವರೆಯಲು ಅವಕಾಶ ಮಾಡಿಕೊಡುತ್ತವೆ. ಹಿಮಪದರಗಳು ಹಾಗೂ ನೀರ್ಗಲ್ಲುಗಳ ಮೂಲಕ ಸಮರ್ಥವಾಗಿ ಸಂಚರಿಸಲು ಆಗ್ಗಾಗ್ಗೆ ಮುಳ್ಳಟ್ಟೆಗಳ ಬಳಕೆ ಅಗತ್ಯವಾಗಿರುತ್ತವೆ. ಮುಳ್ಳಟ್ಟೆಗಳು ೮-೧೪ ಮೊನಚು ಕಡ್ಡಿಗಳನ್ನು ಹೊಂದಿದ್ದು ಅವುಗಳನ್ನು ಪರ್ವತಾರೋಹಿಯ ಬೂಟು/ಮೋಜಾಗಳಿಗೆ ಅಳವಡಿಸಿರಲಾಗುತ್ತದೆ. ಅವುಗಳನ್ನು ಗಡಸು ಹಿಮಪದರ (ಹಿಮಕಣರಾಶಿ) ಹಾಗೂ ನೀರ್ಗಲ್ಲುಗಳ ಮೇಲೆ ಹೆಚ್ಚುವರಿ ಕರ್ಷಣೆಯನ್ನು ಪಡೆಯಲು ಹಾಗೂ ತೀರಾ ಕಡಿದಾದ ಆರೋಹಣಗಳು ಹಾಗೂ ಅವರೋಹಣಗಳನ್ನು ಸಾಧಿಸಲು ಬಳಸಲಾಗುತ್ತದೆ. ಮಂಜಿನಿಂದ ಆವೃತವಾದ ಹಿಮನದಿಗಳ ಮೇಲೆ ನಡೆಯುವ ಉದ್ದೇಶದಿಂದ ನಿರ್ಮಿಸಲಾದ ಹಗುರವಾದ ಅಲ್ಯೂಮಿನಿಯಂ ಮಾದರಿಯಿಂದ ಲಂಬವಾಗಿ ಮೇಲಿನಿಂದ ಇಳಿಬಿದ್ದ ಮಂಜುಗೆಡ್ಡೆ ಮತ್ತು ಹಿಮಪದರಗಳ ಮೇಲೆ ನಡೆಯುವ ಉದ್ದೇಶದಿಂದ ನಿರ್ಮಿಸಲಾದ ಕಠಿಣ ಉಕ್ಕಿನಿಂದ ತಯಾರಾದ ಮಾದರಿಗಳವರೆಗೆ ಇವುಗಳ ವೈವಿಧ್ಯತೆಗಳು ಸೇರಿವೆ. ಹಿಮಜೋಡು/ಷೂಗಳನ್ನು ದಟ್ಟವಾದ ಹಿಮಪದರಗಳ ಮೇಲೆ ನಡೆದುಕೊಂಡು ಹೋಗಲು ಬಳಸಬಹುದಾಗಿರುತ್ತದೆ. ಹಿಮಜೋಡು/ಷೂಗಳನ್ನು ಬಳಸಬಹುದಾದ ಎಲ್ಲಾ ಕಡೆಗಳಲ್ಲಿಯೂ ಹಿಮಹಾವುಗೆಗಳನ್ನು ಬಳಸಬಹುದಾಗಿರುತ್ತದಲ್ಲದೇ ಕಡಿದಾದ ಭೂಪ್ರದೇಶಗಳಲ್ಲಿ ಸಂಚರಿಸಲು ಬೇಕಾದ ಸದೃಢ ಕೌಶಲ್ಯಗಳನ್ನು ಗಳಿಸಿಕೊಳ್ಳಲು ಗಮನಾರ್ಹ ಮಟ್ಟದ ಅಭ್ಯಾಸವು ಅತ್ಯಗತ್ಯವಾದರೂ ಇನ್ನೂ ಕಡಿದಾದ, ಹೆಚ್ಚು ಪರ್ವತಗಳಿಂದ ಕೂಡಿದ ಪ್ರದೇಶಗಳಲ್ಲಿ ಕೂಡಾ ಬಳಸಬಹುದಾಗಿರುತ್ತದೆ. ಪರ್ವತಪ್ರದೇಶದ ನೀರ್ಗಲ್ಲ ಮೇಲೆ ಜಾರುವಿಕೆ ಮತ್ತು ಪರ್ವತಾರೋಹಣಗಳ ತಂತ್ರಗಳನ್ನು ಸಂಯೋಜಿಸಿ ರೂಪಿಸಿದ ಪರ್ವತವೊಂದನ್ನು ಹತ್ತುವ ಹಾಗೂ ಇಳಿಯುವ ಕ್ರೀಡೆಯ ಒಂದು ರೂಪವನ್ನೇ ಹಿಮ/ಸ್ಕೀ ಪರ್ವತಾರೋಹಣ ಎನ್ನಲಾಗುತ್ತದೆ. ಹಿಮಪದರ ಇಳಿಜಾರೊಂದರ ಸುರಕ್ಷಿತ ಆರೋಹಣ ಮತ್ತು ಅವರೋಹಣಗಳು ಹಿಮ ಕೊಡಲಿಯ ಬಳಕೆ ಹಾಗೂ ಇನ್ನೂ ಅನೇಕ ಕಾಲ್ನಡುಗೆಯ ಚತುರ ಕೌಶಲ್ಯಗಳ ಹಾಗೂ ಇನ್ನೂ ಅನೇಕ ಪ್ರಧಾನವಾಗಿ ಯುರೋಪ್‌ನಲ್ಲಿ ಕಳೆದ ಶತಮಾನದ ಅವಧಿಯಲ್ಲಿ ಹಂತಹಂತವಾಗಿ ರೂಪುಗೊಂಡ ಕೌಶಲ್ಯಗಳ ಅಗತ್ಯತೆಯಿರುತ್ತದೆ. ಕಡಿಮೆ ಕೋನದ ಇಳಿಜಾರುಗಳಿಂದ ಹಿಡಿದು ತೀರ ಕಡಿದಾದ ಭೂಪ್ರದೇಶಗಳವರೆಗೆ ಸಂಚರಿಸುವ ಕಾಲ್ನಡುಗೆಯ ಚತುರ ಕೌಶಲ್ಯಗಳ ಮುನ್ನಡೆಯ ರೀತಿಯು ಏರುಮುಖವಾಗಿ ಪಕ್ಕಚಲನೆಯಿಂದ, ಚೈತನ್ಯಪೂರಿತ ಚಲನೆಗಳು ಸೇರಿದಂತೆ ಮುಳ್ಳಟ್ಟೆಗಳ ಸಹಾಯದಿಂದ ಕಾಲುಗಳನ್ನು ಮುನ್ನಡೆಸುವಂತೆ ಪ್ರೇರೇಪಿಸುತ್ತದೆ. ಕಡಿಮೆ ಕೋನದ ಇಳಿಜಾರುಗಳಿಂದ ಹಿಡಿದು ತೀರ ಕಡಿದಾದ ಭೂಪ್ರದೇಶಗಳವರೆಗೆ ಸಂಚರಿಸುವ ಹಿಮ ಕೊಡಲಿ ತಂತ್ರದ ಗತಿವಿಧಾನವು ಮೊದಲಿಗೆ ಹಿಮ ಕೊಡಲಿಯನ್ನು ಊರುಗೋಲನ್ನಾಗಿ ಬಳಸುವಿಕೆ, ನಂತರ ಕಂಬವನ್ನಾಗಿ ಹಾಗೂ ತದನಂತರ ಅದರ ಮುಂಭಾಗದ ಕವಲುಗಳನ್ನು ಕಠಾರಿಯನ್ನಾಗಿ ಭುಜಗಳ ಮೇಲೆ ಅಥವಾ ಕೆಳಗೆ ಬಳಸಿಕೊಳ್ಳುವುದು ಹಾಗೂ ಅಂತಿಮವಾಗಿ ತಲೆಯ ಮೇಲಿನಿಂದ ಇಳಿಜಾರಿನಲ್ಲಿ ಕವಲುಗಳನ್ನು ಹಿಡಿಯುವಂತೆ ಕಚ್ಚಿಸಿಡುವಿಕೆಗಳನ್ನು ಒಳಗೊಂಡಿರುತ್ತದೆ. ಈ ತರಹದ ವೈವಿಧ್ಯಮಯ ತಂತ್ರಗಳನ್ನು ಬಳಸುವುದಕ್ಕೆ ಸಂಬಂಧಿಸಿದಂತೆ ಹಿಮ ಕೊಡಲಿ ವಿನ್ಯಾಸಗಳಲ್ಲಿನ ಭಿನ್ನತೆಗಳು, ಭೂಪ್ರದೇಶಗಳಲ್ಲಿನ ವ್ಯತ್ಯಾಸಗಳಿಗನುಗುಣವಾಗಿ ಬೇಕಾದ ಮಾರ್ಪಾಟುಗಳು ಹಾಗೂ ಪರ್ವತಾರೋಹಿಯು ಒಂದು ಅಥವಾ ಎರಡು ಹಿಮ ಕೊಡಲಿಗಳನ್ನು ಬಳಸುತ್ತಿದ್ದಾನೆಯೇ ಎಂಬುದರ ಮೇಲೆ ಕೂಡಾ ಪ್ರಶ್ನೆಗಳೇಳುವ ಸಾಧ್ಯತೆಗಳಿರುತ್ತವೆ. ಹಿಮಪದರಗಳಲ್ಲಿ ಕಚ್ಚಿಕೊಳ್ಳುವಂತೆ ಬಳಸುವ ಹಗ್ಗಗಳಿಗೆ ಬಳಸುವ ಲಂಗರುಗಳು ಸಾಧಾರಣವಾಗಿ ವಿಶ್ವಾಸಾರ್ಹವಾಗಿರುವುದಿಲ್ಲ, ಅಲ್ಯೂಮಿನಿಯಂನಿಂದ ರೂಪಿಸಿರುವಂತಹಾ ಅಥವಾ ಮೊನೆಯ ಗೂಟಗಳೆಂದು ಕರೆಯಲ್ಪಡುವ ಹಿಮ ಕವಲುಗಳನ್ನು, ಈಟಿಮೊನೆಗಳೆಂದು ಕರೆಯಲ್ಪಡುವ ಒತ್ತುಹಿಡಿಕೆ ಸಾಧನಗಳು ಹಿಮ ಕೊಡಲಿ , ಹಿಮಹಾವುಗೆಗಳು, ಬಂಡೆಗಳು ಅಥವಾ ಇತರೆ ವಸ್ತುಗಳಿಂದ ರೂಪಿಸಿದ ಹುಗಿಸುವ ವಸ್ತುಗಳನ್ನು ಕೂಡಾ ಹೊಂದಿರುತ್ತದೆ. ಒಟ್ಟುಗೂಡಿಸಿದ ಹಿಮ ಅಥವಾ ಮಂಜುಗೆಡ್ಡೆಗಳಿಂದ ಸರಳವಾಗಿ ರೂಪುಗೊಳಿಸಿದಂತಹಾ ಬಿಗಿಗಂಬಗಳು ಕೂಡಾ ಕೆಲವೊಮ್ಮೆ ಲಂಗರುಗಳಾಗಿ ಕಾರ್ಯನಿರ್ವಹಿಸುತ್ತವೆ.
ಹಿಮನದಿಗಳು
[ಬದಲಾಯಿಸಿ]ಹಿಮನದಿಗಳ ಮೇಲೆ ಸಂಚರಿಸುವಾಗ ಕೊರಕಲುಗಳು ಪ್ರಾಣಾಂತಿಕವಾದಂತಹಾ ಅಪಾಯಗಳನ್ನು ತಂದೊಡ್ಡುತ್ತವೆ. ಹಿಮಸೇತುವೆ ಯಂತೆ ಅಂತಹಾ ಬಿರುಕುಗಳ ಮೇಲ್ಭಾಗವನ್ನು ಬೀಸಿಕೊಂಡು ಬಂದಂತಹಾ ಹಿಮಪದರಗಳು ಆವರಿಸಿ ಹೆಪ್ಪುಗಟ್ಟುವುದರಿಂದ ಹಿಮಗಡ್ಡೆಗಳಲ್ಲಿನ ಇಂತಹಾ ದೈತ್ಯ ಬಿರುಕುಗಳು ಯಾವಾಗಲೂ ಕಾಣಿಸುವಂತೆಯೇನೂ ಇರುವುದಿಲ್ಲ. ಕೆಲವೊಮ್ಮೆ ಇಂತಹಾ ಹಿಮಸೇತುವೆಗಳು ಕೆಲವೇ ಅಂಗುಲಗಳಷ್ಟು ಮಾತ್ರವಿದ್ದು ತೀರಾ ತೆಳ್ಳಗಿರುತ್ತವೆ. ಇವುಗಳನ್ನು ಹತ್ತುವವರು ಅಂತಹಾ ಅಪಘಾತಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಹಗ್ಗಗಳ ಜೋಡಿಕೆಯ ವ್ಯವಸ್ಥೆಯೊಂದನ್ನು ಮಾಡಿಕೊಂಡಿರುತ್ತಾರೆ. ಹಿಮನದಿ ಸಂಚಾರಕ್ಕೆ ಅಗತ್ಯವಾಗಿ ಬೇಕಾದ ಮೂಲಭೂತ ಸಾಧನಸಾಮಗ್ರಿಗಳಲ್ಲಿ ಮುಳ್ಳಟ್ಟೆಗಳು ಮತ್ತು ಹಿಮ ಕೊಡಲಿಗಳು ಸೇರಿರುತ್ತವೆ. ಇಬ್ಬರಿಂದ ಐವರು ಸದಸ್ಯರುಗಳನ್ನೊಳಗೊಂಡ ತಂಡಗಳು ಸಮಾನ ಅಂತರ ಕಾಪಿಟ್ಟುಕೊಂಡು ಒಂದು ಹಗ್ಗದಲ್ಲಿ ಬಿಗಿದುಕೊಂಡು ಇವುಗಳಲ್ಲಿ ಪಾಲ್ಗೊಳ್ಳುತ್ತಾರೆ. ಅಕಸ್ಮಾತ್ ಒಬ್ಬ ಆರೋಹಿಯು ಬೀಳಲಾರಂಭಿಸಿದರೆ ತಂಡದ ಇತರ ಸದಸ್ಯರುಗಳು ಸೇರಿಕೊಂಡು ಸ್ವಯಂ ಪ್ರತಿಬಂಧವನ್ನು ಏರ್ಪಡಿಸಿಕೊಂಡು ಅದನ್ನು ತಡೆಯಲು ಪ್ರಯತ್ನಿಸುತ್ತಾರೆ. ತಂಡದ ಇತರೆ ಸದಸ್ಯರು ಕೊರಕಲುಗಳಿಂದ ರಕ್ಷಣೆ ಕಾರ್ಯಾಚರಣೆಯನ್ನು ಕೆಳಗೆ ಬಿದ್ದ ಆರೋಹಿಯನ್ನು ಕೊರಕಲಿನಿಂದ ಮೇಲೆಳೆಯಲು ಕೈಗೊಳ್ಳುತ್ತಾರೆ.
ನೀರ್ಗಲ್ಲುಗಳು
[ಬದಲಾಯಿಸಿ]ನೀರ್ಗಲ್ಲುಗಳ ಮೇಲೆ ಸುರಕ್ಷಿತವಾಗಿ ಸಂಚರಿಸಲು ಹಲವು ವಿಧಾನಗಳನ್ನು ಬಳಸಲಾಗುತ್ತದೆ. ಭೂಪ್ರದೇಶವೊಂದು ಕಡಿದಾಗಿದ್ದರೂ ಲಂಬವಾಗಿಲ್ಲದಿದ್ದರೆ ಪ್ರಮುಖ ಆರೋಹಿಯು ನೀರ್ಗಲ್ಲಿನಲ್ಲಿ ಮಂಜು ತಿರುಪುಗಳನ್ನು ಅಳವಡಿಸಿ ರಕ್ಷಣೆಗಾಗಿ ಹಗ್ಗವನ್ನು ಅದಕ್ಕೆ ಸಿಕ್ಕಿಸಿರುತ್ತಾರೆ. ತಂಡದ ಪ್ರತಿಯೋರ್ವ ಆರೋಹಿಯು ಕೂಡಾ ಲಂಗರನ್ನು ಬಲವಾಗಿ ಆಧರಿಸಿಯೇ ಹಾದುಹೋಗಬೇಕಿದ್ದು ಕೊನೆಯ ಆರೋಹಿಯು ಲಂಗರನ್ನೇ ತೆಗೆದಿಟ್ಟುಕೊಳ್ಳಬೇಕಿರುತ್ತದೆ. ಆಗೊಮ್ಮೆ ಈಗೊಮ್ಮೆ ತೂಗುವ ಹಿಮಬಿಳಲುಗಳು ಅಥವಾ ಬಿಗಿಕಂಬಗಳನ್ನು ಕೂಡಾ ಬಳಸಲಾಗುತ್ತದೆ. ಇಡೀ ತಂಡವು ಏನಾದರೂ ಕಾಲೂರಿ ನಿಲ್ಲಲಾರದಂತಹಾ ಪರಿಸ್ಥಿತಿಯು ಉಂಟಾದರೆ ಇದು ಸುರಕ್ಷತೆಯನ್ನು ಕಾಪಾಡಿಕೊಳ್ಳಲು ಅವಕಾಶ ನೀಡುತ್ತದೆ. ಈ ತಂತ್ರವನ್ನು ಸೈಮಲ್-ಚಾರಣ ಎಂದು ಕರೆಯಲಾಗುತ್ತದಲ್ಲದೇ ಇದನ್ನು ಕೆಲವೊಮ್ಮೆ ಕಡಿದಾದ ಹಿಮಪದರಗಳ ಮೇಲೆ ಹಾಗೂ ಸುಲಭವಾಗಿ ಹತ್ತಲು ಸಾಧ್ಯವಾಗುವ ಬಂಡೆಗಳ ಮೇಲೆ ಕೂಡಾ ಬಳಸಲಾಗುತ್ತದೆ.
ಭೂಪ್ರದೇಶವು ತೀರಾ ಕಡಿದಾದುದುದೆಂಬಂತೆ ಕಂಡುಬಂದರೆ ಪ್ರತಿಯೋರ್ವ ಆರೋಹಿಯನ್ನು ಕೂಡಾ ಹಗ್ಗಕ್ಕೆ ಬಿಗಿಸಿ ಒಮ್ಮೆ ಒಬ್ಬರು ಮಾತ್ರ ಹೋಗಬಹುದಾದಂತಹಾ ಮಾನಕ ನೀರ್ಗಲ್ಲು ಚಾರಣ ತಂತ್ರಗಳನ್ನು ಬಳಸಲಾಗುತ್ತದೆ.
ಆಶ್ರಯಸ್ಥಾನ
[ಬದಲಾಯಿಸಿ]ಸನ್ನಿವೇಶ ಹಾಗೂ ಸಂದರ್ಭ/ಪರಿಸ್ಥಿತಿಗಳಿಗನುಸಾರವಾಗಿ ಆರೋಹಿಗಳು ಕೆಲವು ಬೇರೆ ಬೇರೆ ರೂಪದ ಆಶ್ರಯವ್ಯವಸ್ಥೆಗಳನ್ನು ಬಳಸುತ್ತಾರೆ. ಆರೋಹಿಗಳಿಗೆ ಆಶ್ರಯವೆನ್ನುವುದು ಪರ್ವತಗಳ ಮೇಲಿನ ಹವೆಯು ತೀರಾ ಊಹಿಸಲಾರದ್ದಂತಾಗಿರಬಹುದಾದ್ದರಿಂದ ಸುರಕ್ಷತೆಯ ತೀರಾ ಪ್ರಮುಖವಾದ ಅಂಶವಾಗಿರುತ್ತದೆ. ಎತ್ತರವಾಗಿರುವಂತಹಾ ಪರ್ವತಗಳ ಮೇಲಿನ ಸಂಚಾರ ಪ್ರಕ್ರಿಯೆಯು ಪರ್ವತದ ಮೇಲೆ ಅನೇಕ ದಿನಗಳ ಕಾಲ ಮೊಕ್ಕಾಂ ಹೂಡುವುದನ್ನು ಅಗತ್ಯವಾಗಿಸಬಹುದು.
ಪ್ರಧಾನ ಶಿಬಿರ
[ಬದಲಾಯಿಸಿ]ಪರ್ವತವೊಂದರ "ಪ್ರಧಾನ ಶಿಬಿರ" ಎಂಬುದು ಅದರ ಶಿಖರವನ್ನೇರಲು ಮಾಡುವ ಪ್ರಯತ್ನದಲ್ಲಿ ಬಳಸುವ ಒಂದು ಪ್ರದೇಶ. ಪ್ರಧಾನ ಶಿಬಿರಗಳನ್ನು ಮೇಲೆ ವಿವರಿಸಿದ ಕಠಿಣ ಪರಿಸ್ಥಿತಿಗಳುಂಟಾಗದಿರುವ ಪ್ರದೇಶಗಳಲ್ಲಿ ಏರ್ಪಡಿಸಲಾಗುತ್ತದೆ. ಅನೇಕ ಜನಪ್ರಿಯ ಅಥವಾ ಅಪಾಯಕರ ಪರ್ವತಗಳಲ್ಲಿ ಇಂತಹಾ ಪ್ರಧಾನ ಶಿಬಿರಗಳು ಅಸ್ತಿತ್ವದಲ್ಲಿವೆ. ಪ್ರಧಾನ ಶಿಬಿರವೊಂದರಿಂದ ಒಂದೇ ದಿನದ ಅವಧಿಯಲ್ಲಿ ಶಿಖರವನ್ನೇರಲು ಸಾಧ್ಯವಾಗದಾಗ ಪರ್ವತವೊಂದು ಪ್ರಧಾನ ಶಿಬಿರಕ್ಕಿಂತ ಎತ್ತರದ ಪ್ರದೇಶಗಳಲ್ಲಿ ಹೆಚ್ಚುವರಿ ಶಿಬಿರಗಳನ್ನು ಹೊಂದಿರುತ್ತದೆ. ಉದಾಹರಣೆಗೆ ಮೌಂಟ್ ಎವರೆಸ್ಟ್‌ನ ಆಗ್ನೇಯ ಪರ್ವತಶ್ರೇಣಿಯ ಮಾರ್ಗವು ಒಂದು ಪ್ರಧಾನ ಶಿಬಿರವನ್ನು ಜೊತೆಗೆ (ಸಾಧಾರಣವಾಗಿ) I ರಿಂದ IVರವರೆಗೆ ಶಿಬಿರಗಳನ್ನು ಹೊಂದಿದೆ.
ಗುಡಿಸಲು
[ಬದಲಾಯಿಸಿ]ಐರೋಪ್ಯ ಪರ್ವತಪ್ರದೇಶಗಳು ನಿರ್ದಿಷ್ಟವಾಗಿ ಪರ್ವತ ಗುಡಿಸಲುಗಳ ಜಾಲವನ್ನು ಹೊಂದಿವೆ (ಫ್ರಾನ್ಸ್‌ನಲ್ಲಿ "ರೆಫ್ಯೂಜೆಸ್", ಇಟಲಿಯಲ್ಲಿ "ರಿಫ್ಯೂಜಿ", ಸ್ವಿಟ್ಜರ್ಲೆಂಡ್‌ನಲ್ಲಿ "ಕ್ಯಾಬಾನೆಸ್", ಜರ್ಮನಿ ಹಾಗೂ ಆಸ್ಟ್ರಿಯಾಗಳಲ್ಲಿ "ಹಟ್ಟೆನ್", ಸ್ಲೊವೇನಿಯಾದಲ್ಲಿ "ಕೋಕಾ", ಸ್ಪೇನ್‌ನಲ್ಲಿ "ರೆಫ್ಯೂಜಿಯೋಸ್" ಹಾಗೂ ನಾರ್ವೆಯಲ್ಲಿ "ಹೈಟ್ಟೆ" ಎಂದು ಅವುಗಳನ್ನು ಕರೆಯಲಾಗುತ್ತದೆ). ಅಂತಹಾ ಗುಡಿಸಲುಗಳು ಎತ್ತರದ ಪರ್ವತಗಳೂ ಸೇರಿದಂತೆ ಹಲವು ಬೇರೆ ಬೇರೆ ಎತ್ತರಗಳಲ್ಲಿ ಅಸ್ತಿತ್ವದಲ್ಲಿರುತ್ತವೆ – ವಿಪರೀತ ದೂರದ ಪ್ರದೇಶಗಳಲ್ಲಿ ಮತ್ತಷ್ಟು ಸಾಧಾರಣವಾದ ಆಶ್ರಯಸ್ಥಾನಗಳು ಕಂಡುಬರುತ್ತವೆ.. ಪರ್ವತ ಗುಡಿಸಲುಗಳು ವ್ಯತ್ಯಾಸಗೊಳ್ಳುವ ಗಾತ್ರ ಹಾಗೂ ಗುಣಮಟ್ಟದವಾಗಿದ್ದರೂ, ಪ್ರತಿಯೊಂದೂ ಲಾಕ್ಷಣಿಕವಾಗಿ ಸಾಮುದಾಯಿಕ ಭೋಜನಶಾಲೆಯನ್ನು ಕೇಂದ್ರದಲ್ಲಿ ಹೊಂದಿದ್ದು ಸುಪ್ಪತ್ತಿಗೆಗಳು, ಕಂಬಳಿಗಳು ಅಥವಾ ತುಪ್ಪುಳಮೆತ್ತೆಗಳು ಹಾಗೂ ತಲೆದಿಂಬುಗಳೊಂದಿಗೆ ಸುಸಜ್ಜಿತವಾದ ಶಯನಶಾಲೆಗಳನ್ನು ಹೊಂದಿರುತ್ತವೆ ; ಅತಿಥಿಗಳು ತಮ್ಮ ಸ್ವಂತದ ಮಲಗುವ ಚೀಲದ ಅಸ್ತರಿಗಳನ್ನು ತಂದು ಬಳಸಬೇಕಾಗಿರುತ್ತದೆ. ಇವುಗಳಲ್ಲಿನ ಸೌಲಭ್ಯಗಳು ವಾಡಿಕೆಯಾಗಿ ಸಾಧಾರಣ ಮಟ್ಟದವಾಗಿದ್ದು, ಅವುಗಳಿರುವ ಸ್ಥಳಗಳಿಂದಾಗಿ, ಗುಡಿಸಲುಗಳು ಅತ್ಯಗತ್ಯವಾದ ಆಸರೆಗಳನ್ನು ಹಾಗೂ ಮಾರ್ಗಗಳನ್ನು ಮತ್ತಷ್ಟು ವ್ಯಾಪಕವಾಗಿ ಪ್ರವೇಶಾರ್ಹವನ್ನಾಗಿಸಿರುತ್ತವೆ (ಪ್ರಯಾಣಗಳನ್ನು ಮೊಟಕುಗೊಳಿಸುವ ಹಾಗೂ ಆ ಮೂಲಕ ಹೊತ್ತುಕೊಂಡು ಹೋಗಬೇಕಾದ ವಸ್ತುಗಳ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದಾದ ಅವಕಾಶಗಳನ್ನು ನೀಡುವ ಮೂಲಕ), ಹಾಗೂ ಉತ್ತಮ ಮೌಲ್ಯವನ್ನು ತಂದುಕೊಡುತ್ತವೆ. ಯುರೋಪ್‌ನಲ್ಲಿ ಎಲ್ಲಾ ಗುಡಿಸಲುಗಳಲ್ಲಿ ಬೇಸಿಗೆ ಕಾಲದ ಅವಧಿಯಲ್ಲಿ ಸಿಬ್ಬಂದಿ ಸೌಲಭ್ಯಗಳನ್ನು ಒದಗಿಸಲಾಗುವುದಾದರೆ (ಜೂನ್ ಮಧ್ಯಭಾಗದಿಂದ ಸೆಪ್ಟೆಂಬರ್ ಮಧ್ಯಭಾಗದವರೆಗೆ) ಇನ್ನೂ ಕೆಲವುಗಳಲ್ಲಿ ವಸಂತ ಕಾಲದ ಅವಧಿಯಲ್ಲಿ (ಮಾರ್ಚ್ ಮಧ್ಯಭಾಗದಿಂದ ಮೇ ಮಧ್ಯಭಾಗದವರೆಗೆ) ಸಿಬ್ಬಂದಿ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಬೇರೆಡೆಗಳಲ್ಲಿ ಗುಡಿಸಲುಗಳು ಮಾಗಿಕಾಲಗಳಲ್ಲಿಯೂ ಕೂಡಾ ತೆರೆದಿರಬಹುದಾಗಿರುತ್ತದೆ. ಗುಡಿಸಲುಗಳು ಯಾವಾಗಲೂ ಲಭ್ಯವಿರುವ ಚಳಿಗಾಲ ಗುಡಿಸಲು ಎಂದು ಕರೆಯಲ್ಪಡುವ ಆದರೆ ಮಾನವರಹಿತವಾದ ವಿಭಾಗವೊಂದನ್ನು ಹೊಂದಿರಬಹುದಾಗಿರುತ್ತದೆ. ಗುಡಿಸಲುಗಳಿಗೆ ಪ್ರವೇಶ ಲಭ್ಯವಿದ್ದು ಸಿಬ್ಬಂದಿ ಸೌಲಭ್ಯಸಹಿತವಾಗಿದ್ದರೆ ಅಂತಹವುಗಳಲ್ಲಿ ಸಾಧಾರಣವಾಗಿ ಪೂರ್ಣಕಾಲಿಕ ಸಿಬ್ಬಂದಿಗಳಿರುತ್ತಾರೆ, ಆದರೆ ಕೆಲವು ಗುಡಿಸಲುಗಳಲ್ಲಿ ಸ್ವಯಂಪ್ರೇರಿತ ವ್ಯವಸ್ಥೆಯಡಿಯಲ್ಲಿ ಆಲ್ಪೈನ್ ಕ್ಲಬ್‌ಗಳ ಸದಸ್ಯರುಗಳಿಂದ ಸಿಬ್ಬಂದಿ ಸೌಲಭ್ಯ ನೀಡಲಾಗುತ್ತದೆ (ಸ್ವಿಸ್ ಆಲ್ಪೈನ್ ಕ್ಲಬ್ ಮತ್ತು ಕ್ಲಬ್ ಆಲ್ಪಿನ್ ಫ್ರಾಂಕಾಯಿಸ್‌ನಂತಹವು). ಯುರೋಪ್‌ನಲ್ಲಿ ಪಾಲಕ ಅಥವಾ ಮೇಲ್ವಿಚಾರಕನೆಂದು ಕರೆಯಲ್ಪಡುವ ಗುಡಿಸಲಿನ ನಿರ್ವಾಹಕರು ವಾಡಿಕೆಯಾಗಿ ಲಘು ಉಪಹಾರಗಳು ಹಾಗೂ ಭೋಜನಗಳನ್ನೂ ಕೂಡಾ ಆಯಾ ದಿನದ ಮಟ್ಟಿಗೆ ಭೇಟಿಗೆ ಬಂದವರು ಹಾಗೂ ರಾತ್ರಿಯಲ್ಲಿ ತಂಗುವವರಿಗೆ ಕೂಡಾ ಮಾರಾಟ ಮಾಡುತ್ತವೆ. ಇವುಗಳು ನೀಡುವ ಸೌಲಭ್ಯಗಳು ಆಶ್ಚರ್ಯಕರವೆಂಬಂತೆ ವ್ಯಾಪಕವಾಗಿದ್ದು, ಅನೇಕವೇಳೆ ಶುದ್ಧ ನೀರೂ ಸೇರಿದಂತೆ ಬಹುತೇಕ ವಸ್ತುಗಳ ಸರಬರಾಜು ಹೆಲಿಕಾಪ್ಟರ್‌ನ ಮೂಲಕವೇ ಬರಬೇಕಾಗಿದ್ದು, ಇವುಗಳಲ್ಲಿ ಆರೋಹಿಗಳು ಹಾಗೂ ಪಾದಚಾರಿ/ಯಾತ್ರಿಗಳು ಸಂಗ್ರಹಿಸಿಟ್ಟುಕೊಳ್ಳಲು ಬಯಸುವ ಗ್ಲೂಕೋಸ್ ಆಧಾರಿತ ಉಪಹಾರಗಳು ಸೇರಿರುತ್ತವೆ (ಮಾರ್ಸ್ ಹಾಗೂ ಸ್ನಿಕರ್ಸ್ ಬಾರ್‌ಗಳಂತಹವು), ಗುಡಿಸಲಿನಲ್ಲಿ ತಯಾರು ಮಾಡಿದ ಕೇಕ್‌ಗಳು ಹಾಗೂ ಪಿಷ್ಟಭಕ್ಷ್ಯಗಳು, ವೈವಿಧ್ಯಮಯ ಬಿಸಿಯಾದ ಹಾಗೂ ತಂಪು ಪಾನೀಯಗಳನ್ನು (ಬಿಯರ್ ಹಾಗೂ ದ್ರಾಕ್ಷಾರಸಗಳೂ ಸೇರಿದಂತೆ), ಸಂಜೆಯ ವೇಳೆಯಲ್ಲಿ ಹೆಚ್ಚಿನ ಕಾರ್ಬೋಹೈಡ್ರೇಟ್‌ಗಳಿಂದ ಕೂಡಿದ ರಾತ್ರಿಭೋಜನಗಳನ್ನು ನೀಡುತ್ತವೆ. ಎಲ್ಲಾ ಗುಡಿಸಲುಗಳು ಆಹಾರ ಸರಬರಾಜು ವ್ಯವಸ್ಥೆಯನ್ನು ನೀಡುತ್ತವೆ ಎಂದೇನಿಲ್ಲವಾದ್ದರಿಂದ, ಸಂದರ್ಶಕರು ತಮ್ಮ ಆಹಾರದ ವ್ಯವಸ್ಥೆಯನ್ನು ತಾವೇ ಮಾಡಿಕೊಳ್ಳುವ ಅವಶ್ಯಕತೆ ಬರಬಹುದಾಗಿರುತ್ತದೆ. ಕೆಲವು ಗುಡಿಸಲುಗಳು ಎರಡೂ ರೀತಿಯ ಸೌಲಭ್ಯಗಳನ್ನೂ ನೀಡುತ್ತವಾಗಿ ಸಂದರ್ಶಕರಿಗೆ ತಮ್ಮ ಆಹಾರವನ್ನು ತಾವೇ ತರುವ ಹಾಗೂ ಅಡಿಗೆ ಸಲಕರಣೆಗಳು ಹಾಗೂ ಇತರೆ ಸೌಲಭ್ಯಗಳನ್ನು ಬಳಸಿಕೊಳ್ಳಲು ಅವಕಾಶ ನೀಡುವ ಮೂಲಕ ಖರ್ಚನ್ನು ಕಡಿಮೆ ಮಾಡಿಕೊಳ್ಳುವ ಅವಕಾಶವಿರುತ್ತದೆ. ಗುಡಿಸಲುಗಳಲ್ಲಿ ರಾತ್ರಿ ವೇಳೆ ಉಳಿದುಕೊಳ್ಳಲು ಕಾದಿರಿಸುವಿಕೆಗಳು ಅನಿವಾರ್ಯವೆಂದೇ ಪರಿಗಣಿತವಾಗುತ್ತವೆ, ಹಾಗೂ ಬಹುತೇಕ ಸಂದರ್ಭಗಳಲ್ಲಿ ಇದು ಅತ್ಯಗತ್ಯವಾಗಿರುತ್ತದೆ ಏಕೆಂದರೆ ; ಉತ್ತಮ ಹವಾಮಾನದ ಸಂದರ್ಭಗಳಲ್ಲಿ ಹಾಗೂ ವಾರಾಂತ್ಯಗಳಲ್ಲಿ ಕೆಲ ಜನಪ್ರಿಯ ಗುಡಿಸಲುಗಳಲ್ಲಿ ೧೦೦ಕ್ಕಿಂತಲೂ ಹೆಚ್ಚಿನ ಹಾಸಿಗೆಗಳ ಸಾಮರ್ಥ್ಯವಿರುವ ಕಡೆಗಳಲ್ಲಿಯೂ ಸಂಪೂರ್ಣವಾಗಿ ಜನ ತುಂಬಿರುತ್ತಾರೆ. ಒಮ್ಮೆ ಹಾಗೆ ಕಾದಿರಿಸಿದ ನಂತರ ಕಾದಿರಿಸಿರುವಿಕೆಯನ್ನು ರದ್ದುಪಡಿಸುವುದನ್ನು ಸೌಜನ್ಯತೆಯ ವಿಚಾರವೆಂದು ಸೂಚಿಸಲಾಗುತ್ತದೆ – ಹಾಗೂ ವಾಸ್ತವಿಕವಾಗಿ ಸುರಕ್ಷತೆಯ ವಿಚಾರವಾಗಿ ಹಲವು ಗುಡಿಸಲುಗಳು ಆರೋಹಿಗಳು ಹಾಗೂ ಪಾದಚಾರಿ/ಯಾತ್ರಿಗಳು ತಾವು ಮುಂದೆ ಎಲ್ಲಿಗೆ ಹೋಗುತ್ತೇವೆಂದು ತಿಳಿಸಿದ್ದ ವಿವರಗಳ ದಾಖಲೆಯನ್ನು ಇಟ್ಟುಕೊಂಡಿರುತ್ತವೆ. ಬಹುತೇಕ ಗುಡಿಸಲುಗಳನ್ನು ದೂರವಾಣಿಯ ಮೂಲಕ ಸಂಪರ್ಕಿಸಬಹುದಾಗಿರುತ್ತದೆ ಮತ್ತು ಬಹುತೇಕವು ಕ್ರೆಡಿಟ್ ಕಾರ್ಡ್‌ಗಳನ್ನು ಪಾವತಿಯ ಸೌಲಭ್ಯದ ಒಂದು ಮಾರ್ಗವನ್ನಾಗಿ ಪರಿಗಣಿಸುತ್ತವೆ.
ಹಂಗಾಮಿ ಶಿಬಿರ (ಬಿವಿ ಅಥವಾ ಸಣ್ಣ ಗುಡಾರ/ಡೇರೆ)
[ಬದಲಾಯಿಸಿ]ಪರ್ವತಾರೋಹಣದ ಸಂದರ್ಭದಲ್ಲಿ ಒಂದು ಹಂಗಾಮಿ ಶಿಬಿರ ಅಥವಾ "ಸಣ್ಣ ಗುಡಾರ(ಡೇರೆ)"ಯು ತಾತ್ಕಾಲಿಕವಾದ ವಿಶ್ರಾಂತಿ ಪಡೆಯುವ ಅಥವಾ ಶಯನ ವ್ಯವಸ್ಥೆಗಳಾಗಿದ್ದು, ಅವುಗಳಲ್ಲಿ ವಾಡಿಕೆ ಶಿಬಿರದಾಣಗಳಲ್ಲಿ ಸಾಧಾರಣವಾಗಿ ಲಭ್ಯವಿರುತ್ತಿದ್ದುದಕ್ಕಿಂತ ಕಡಿಮೆ ಪ್ರಮಾಣದಲ್ಲಿ ಆರೋಹಿಗಳು ಆಶ್ರಯ, ಆಹಾರ ಹಾಗೂ ಪರಿಕರಗಳ ಪೂರಕ ಸಾಮಗ್ರಿಗಳನ್ನು ಹೊಂದಿರುತ್ತಾರೆ. ಇದು ಸರಳವಾಗಿ ಮಲಗುವ ಚೀಲವೊಂದನ್ನು ಹಾಗೂ ಸಣ್ಣ ಗುಡಾರ/ಡೇರೆಯ ಮೂಟೆಯೊಂದನ್ನು ಪಡೆದು ಮಲಗುವುದಷ್ಟನ್ನೇ ಒಳಗೊಂಡಿರಬಹುದು. ಹಲವು ಸಂದರ್ಭಗಳಲ್ಲಿ ಹಿಮನದಿ ಬಿರುಕು, ಬಂಡೆಗಳಲ್ಲಿನ ಬಿರುಕುಗಳು ಅಥವಾ ಹಿಮಪದರದಲ್ಲಿ ಅಗೆಯಲಾದ ಕಂದಕಗಳಂತಹಾ ಸಣ್ಣದಾದ ಭಾಗಶಃ ಆಸರೆಗಳನ್ನು ಹೊಂದಿರುವಂತಹಾ ಪ್ರದೇಶಗಳನ್ನು ಶೀತಗಾಳಿಯಿಂದ ಹೆಚ್ಚುವರಿ ರಕ್ಷಣೆ ಪಡೆಯಲು ಬಳಸಲಾಗುತ್ತದೆ. ಇಂತಹಾ ತಂತ್ರಗಳನ್ನು ಮೂಲತಃ ಕೇವಲ ತುರ್ತು ಸಂದರ್ಭಗಳಲ್ಲಿ ಮಾತ್ರವೇ ಬಳಸಲಾಗುತ್ತಿತ್ತು ; ಆದಾಗ್ಯೂ ಪರ್ವತಪ್ರದೇಶಗಳ ಶೈಲಿಯ ಚಾರಣಗಳಿಗೆ ದೃಢಸಂಕಲ್ಪದಿಂದ ಬದ್ಧರಾದ ಕೆಲ ಆರೋಹಿಗಳು ನಿರ್ದಿಷ್ಟವಾಗಿ ಹಿಮಪದರ ಗುಹೆಯನ್ನು ಕಟ್ಟಲು ಅಗತ್ಯವಾದ ಸಮಯವಿಲ್ಲದಾಗ ಅಥವಾ ಅದಕ್ಕೆ ಸೂಕ್ತವಾದ ಹಿಮಪದರ ಪರಿಸ್ಥಿತಿಗಳು ಇಲ್ಲದಾಗ ಗುಡಾರ/ಡೇರೆಯ ತೂಕವನ್ನು ತಗ್ಗಿಸಲು ಸಣ್ಣ ಗುಡಾರ/ಡೇರೆಗಳನ್ನು ಕಟ್ಟಿಕೊಳ್ಳಲು ಯೋಜಿಸುತ್ತಾರೆ. ಹಂಗಾಮಿ ಶಿಬಿರಗಳಿಗೆ ಸಂಬಂಧಿಸಿದ ಪ್ರಧಾನ ಅಪಾಯವೆಂದರೆ ಶೀತ ಹಾಗೂ ವಸ್ತುಗಳಿಗೆ ನೇರ ಒಡ್ಡಲ್ಪಡುವಿಕೆ.
ಡೇರೆ
[ಬದಲಾಯಿಸಿ]ಗುಡಾರ/ಡೇರೆಗಳು ಪರ್ವತಗಳ ಮೇಲೆ ಬಳಸಲಾಗುವ ತೀರಾ ಸರ್ವೇಸಾಮಾನ್ಯವಾದ ಆಶ್ರಯ ಸ್ಥಾನದ ರೂಪವಾಗಿವೆ. ಸರಳವಾದ ತಾಡಪಾಲುಗಳಿಂದ ಹಿಡಿದು ಕಠಿಣತಮ ಪರ್ವತ ಪರಿಸ್ಥಿತಿಗಳನ್ನು ತಡೆದುಕೊಳ್ಳುವ ಉದ್ದೇಶದಿಂದ ರೂಪಿತವಾದ ಬಹಳಷ್ಟು ತೂಕ/ಭಾರವಿರುವ ವಿನ್ಯಾಸಗಳವರೆಗೆ ಇವು ವೈವಿಧ್ಯತೆಯನ್ನು ಹೊಂದಿರುತ್ತವೆ. ಹೊರಗೊಡ್ಡಿದಂತಹಾ ಸ್ಥಾನಗಳಲ್ಲಿ ಗುಡಾರ/ಡೇರೆಗೆ ಆಶ್ರಯ ಒದಗಿಸಲು ಹಿಮಪದರ ಅಥವಾ ಬಂಡೆಗಳ ಹಿಮತಡೆಗಳು ಅವಶ್ಯಕವಾಗಬಹುದು. ಗುಡಾರ/ಡೇರೆ ಹಾಕುವಿಕೆ ಪ್ರಕ್ರಿಯೆಯ ದೋಷಗಳಲ್ಲಿ ಒಂದನ್ನು ಹೇಳುವುದಾದರೆ ಭಾರೀ ಮಾರುತಗಳು ಹಾಗೂ ಹಿಮಪದರಗಳ ಒತ್ತಡಗಳು ಅಪಾಯಕಾರಿಯಾಗಬಹುದಾಗಿದ್ದು ಅಂತಿಮವಾಗಿ ಗುಡಾರ/ಡೇರೆಯ ವೈಫಲ್ಯಗಳಿಗೆ ಹಾಗೂ ಕುಸಿತಗಳಿಗೆ ಕಾರಣವಾಗಬಹುದಾಗಿರುತ್ತದೆ. ಇಷ್ಟು ಮಾತ್ರವಲ್ಲದೇ ಗುಡಾರ/ಡೇರೆಯ ಹೆಣಿಗೆಯ ಬಂಧವು ಸತತವಾಗಿ ಜೋಲಾಡುವುದು ನಿದ್ದೆ ಮಾಡಲು ತೊಂದರೆಯನ್ನುಂಟು ಮಾಡಬಹುದು ಹಾಗೂ ಆಶ್ರಯಸ್ಥಾನದ ಸುರಕ್ಷತೆ ಬಗ್ಗೆ ಅನುಮಾನಗಳನ್ನು ಉಂಟುಮಾಡಬಹುದು. ಗುಡಾರ/ಡೇರೆಯೊಂದನ್ನು ಆಯ್ಕೆ ಮಾಡುವಾಗ, ಪರ್ವತಾರೋಹಿಗಳು ಭಾರೀ ಮಾರುತಗಳು ಹಾಗೂ ಮಧ್ಯಮ ಪ್ರಮಾಣದಿಂದ ಭಾರೀ ಪ್ರಮಾಣದ ಹಿಮಪದರ ಒತ್ತಡಗಳನ್ನು ತಡೆದುಕೊಳ್ಳಬಲ್ಲಂತಹಾ ಪರ್ವತಾರೋಹಣಕ್ಕೆಂದು ವಿಶಿಷ್ಟವಾಗಿ ರೂಪಿಸಲಾದ ಗುಡಾರ/ಡೇರೆಗಳ ಮೇಲೆ ಅವಲಂಬಿಸುವ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಗುಡಾರ/ಡೇರೆಗಳ ಗೂಟಗಳನ್ನು ಹಿಮಪದರದಲ್ಲಿ ("ಡೆಡ್‌ಮ್ಯಾನ್") ಹೆಚ್ಚಿನ ಸುರಕ್ಷತೆಗಾಗಿ ಹುಗಿದಿಡಬಹುದಾಗಿರುತ್ತದೆ.
ಹಿಮಪದರ ಗುಹೆಗಳು
[ಬದಲಾಯಿಸಿ]ಸೂಕ್ತವಾದ ಪರಿಸ್ಥಿತಿಗಳು ಅವಕಾಶ ನೀಡಿದಾಗ ಹಿಮಪದರ ಗುಹೆಗಳು ಕೂಡಾ ಪರ್ವತಗಳ ಎತ್ತರದ ಸ್ಥಳಗಳಲ್ಲಿ ಆಶ್ರಯಪಡೆಯುವ ಮತ್ತೊಂದು ಮಾರ್ಗವಾಗಬಲ್ಲದು. ಕೆಲ ಆರೋಹಿಗಳು ಹಿಮಪದರಗಳ ಪರಿಸ್ಥಿತಿಗಳು ಹಿಮಪದರ ಗುಹೆ ನಿರ್ಮಾಣಕ್ಕೆ ಅವಕಾಶ ನೀಡದ ಸ್ಥಿತಿಯಲ್ಲಿ ಇರುವುದರ ಹೊರತು ಎತ್ತರದ ಸ್ಥಳಗಳಲ್ಲಿ ಗುಡಾರ/ಡೇರೆಗಳನ್ನು ಬಳಸುವುದಿಲ್ಲ ಏಕೆಂದರೆ ಹಿಮಪದರ ಗುಹೆಗಳು ನಿಶ್ಶಬ್ದವಾಗಿದ್ದು ಗುಡಾರ/ಡೇರೆಗಳಿಗಿಂತ ಹೆಚ್ಚು ಬೆಚ್ಚಗಿರುತ್ತವೆ. ಸಾಕಷ್ಟು ಸಮಯವಿದ್ದರೆ ಹಿಮಪದರ ಗೋರು ಸಲಿಕೆಯನ್ನು ಬಳಸಿಕೊಂಡು ಅವುಗಳನ್ನು ಸಾಪೇಕ್ಷವಾಗಿ ಸುಲಭವಾಗಿಯೇ ನಿರ್ಮಿಸಬಹುದಾಗಿರುತ್ತದೆ. ದೋಷರಹಿತವಾಗಿ ನಿರ್ಮಿಸಲಾದ ಹಿಮಪದರ ಗುಹೆಯು ಕೊರೆಯುವ ಚಳಿಯವರೆಗೆ ಹೊಯ್ದಾಟದ ತಾಪಮಾನಗಳನ್ನು ಹೊಂದಿರುತ್ತದೆ, ಇದು ಹೊರಗಿನ ತಾಪಮಾನಕ್ಕೆ ಹೋಲಿಸಿದರೆ ಸಾಕಷ್ಟು ಬೆಚ್ಚಗಿರುತ್ತದೆ. ಕನಿಷ್ಟ ನಾಲ್ಕು ಅಡಿಗಳಷ್ಟು ಹಿಮಪದರವಿರುವ ಯಾವುದೇ ಸ್ಥಳದಲ್ಲಿ ಕೂಡಾ ಅವುಗಳನ್ನು ನಿರ್ಮಿಸಬಹುದಾಗಿರುತ್ತದೆ. ಇದೇ ತರಹದ ಚೆನ್ನಾಗಿ ಕಾರ್ಯನಿರ್ವಹಿಸುವ ಮತ್ತೊಂದು ಆಶ್ರಯಸ್ಥಾನವೆಂದರೆ ಕ್ವಿನ್‌ಜೀಯಾಗಿದೆ (ವಾಡಿಕೆಯಾಗಿ ಕಾಲಿನಿಂದ ಜೋರಾಗಿ ತುಳಿದು) ಗಡ್ಡೆಗಟ್ಟಿಸಿದ ಅಥವಾ ಹೆಪ್ಪುಗಟ್ಟಿಸಿದ ಹಿಮಪದರದ ಗುಡ್ಡೆಯನ್ನು ಅಗೆಯುವುದರ ಮೂಲಕ ಇದನ್ನು ನಿರ್ಮಿಸಲಾಗಿರುತ್ತದೆ. ಕೆಲವರು ಆರೋಹಿಗಳು ನಿರ್ಮಾಣ ಸರಳವೆಂದು ಕಂಡುಬರುವ ಮಂಜುಗುಡಿಸಲು/ಇಗ್ಲೂಗಳನ್ನು ಬಳಸುವರಾದರೂ ಅದು ಅಷ್ಟು ಸುಲಭವಾದದ್ದಲ್ಲ ಹಾಗೂ ನಿರ್ದಿಷ್ಟ ಹಿಮಪದರ ಪರಿಸ್ಥಿತಿಗಳನ್ನು ಬೇಡುತ್ತದೆ.
ಅವಘಡಗಳು
[ಬದಲಾಯಿಸಿ]ಪರ್ವತಾರೋಹಣದಲ್ಲಿನ ಅಪಾಯಗಳನ್ನು ಕೆಲವು ಬಾರಿ ಎರಡು ವಿಧಗಳಾಗಿ ವಿಂಗಡಿಸಲಾಗುತ್ತದೆ : ಅವುಗಳೆಂದರೆ ಸಹಜವಾದ ಅವಘಡಗಳು ಎಂದರೆ ಆರೋಹಿಗಳ ಉಪಸ್ಥಿತಿಗೆ ಸಂಬಂಧಿಸದೇ ಉಂಟಾಗುವ ಬಂಡೆಕುಸಿತ, ಹಿಮಕುಸಿತಗಳು ಹಾಗೂ ತೀರಾ ತಂಪಾದ ಹವಾಮಾನಗಳು ಹಾಗೂ ಆರೋಹಿಗಳ ಚಟುವಟಿಕೆಗಳ ಪರಿಣಾಮವಾಗಿ ಉಂಟಾಗುವ ವ್ಯಕ್ತಿಕೃತ ಅವಘಡಗಳು. ಉಪಕರಣಗಳ ವೈಫಲ್ಯ ಮತ್ತು ನಿರ್ಲಕ್ಷ್ಯ , ಬಳಲಿಕೆ ಅಥವಾ ಅಸಮರ್ಪಕ ತಂತ್ರಗಳಿಂದಾದ ಕುಸಿತಗಳು ವ್ಯಕ್ತಿಕೃತ ಅವಘಡಗಳಿಗೆ ಉದಾಹರಣೆಗಳಾಗಿವೆ. ಸತತವಾಗಿ ಹಿಮಕುಸಿತಗಳು ಮತ್ತು ತುಫಾನುಗಳಿಂದ ಪೀಡಿತವಾಗುತ್ತಿರುವ ಮಾರ್ಗವೊಂದನ್ನು ಸಹಜವಾದ ಅಪಾಯದ ಹೆಚ್ಚಿನ ಸಾಧ್ಯತೆಯನ್ನು ಹೊಂದಿದೆ ಎಂದು ಹೇಳಲಾದರೆ ತಾಂತ್ರಿಕವಾಗಿ ಹೆಚ್ಚು ಕಷ್ಟಕರವಾದ ಆದರೆ ಇಂತಹಾ ಅಪಾಯಗಳಿಂದ ಸಾಪೇಕ್ಷವಾಗಿ ಸುರಕ್ಷಿತವಾಗಿರುವ ಮಾರ್ಗವನ್ನು ಸಹಜವಾಗಿಯೇ ಹೆಚ್ಚು ಸುರಕ್ಷಿತವೆಂದು ಭಾವಿಸಲಾಗುತ್ತದೆ.
ಎಂತಹುದೇ ಪರಿಸ್ಥಿತಿಗಳಲ್ಲೂ ಪರ್ವತಾರೋಹಿಗಳು ಅಪಾಯಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಸಿದ್ಧವಿರಬೇಕಾಗುತ್ತದೆ : ಇವುಗಳಲ್ಲಿ ಕುಸಿಯುವ ಬಂಡೆಗಳು, ಕುಸಿಯುವ ನೀರ್ಗಲ್ಲು, ಹಿಮಪದರ ಕುಸಿತಗಳು, ಆರೋಹಿ ಕುಸಿಯುವಿಕೆ, ನೀರ್ಗಲ್ಲು ಇಳಿಜಾರುಗಳಿಂದ ಕೆಳಕ್ಕೆ ಬೀಳುವಿಕೆ , ಹಿಮಪದರ ಇಳಿಜಾರುಗಳಿಂದ ಕೆಳಕ್ಕೆ ಬೀಳುವಿಕೆ, ಕೊರಕಲುಗಳಲ್ಲಿ ಕೆಳಕ್ಕೆ ಬೀಳುವಿಕೆ ಹಾಗೂ ಎತ್ತರದ ಪರಿಸ್ಥಿತಿ ಹಾಗೂ ಹವಾಮಾನಗಳಿಂದಾಗಬಹುದಾದ ಅಪಾಯಗಳು ಸೇರಿವೆ.[೩] ಓರ್ವ ವ್ಯಕ್ತಿಯ ಕೌಶಲ್ಯಗಳು ಹಾಗೂ ಅನುಭವವನ್ನು ಬಳಸಿಕೊಂಡು ಇಂತಹಾ ಅಪಾಯಗಳನ್ನು ತಗ್ಗಿಸಿಕೊಳ್ಳುವಂತೆ ಮಾರ್ಗವೊಂದನ್ನು ಆಯ್ಕೆ ಮಾಡಿ ಅದನ್ನು ಅನುಸರಿಸಲು ಬೇಕಾಗುವುದೇನೆಂದರೆ ಆರೋಹಿಯ ಕೌಶಲ್ಯಮಾರ್ಗಗಳನ್ನು ಅನುಸರಿಸುವುದು.
ಕುಸಿಯುವ ಬಂಡೆಗಳು
[ಬದಲಾಯಿಸಿ]ಪ್ರತಿಯೊಂದು ಶಿಲಾ ಪರ್ವತವೂ ಕೂಡಾ ಸವಕಳಿಯಿಂದಾಗಿ ನಿಧಾನವಾಗಿ ಸ್ವರೂಪವನ್ನು ಕಳೆದುಕೊಳ್ಳುತ್ತಿರುತ್ತದೆ, ಈ ಪ್ರಕ್ರಿಯೆಯು ಹಿಮಪರ್ವತ ಶ್ರೇಣಿಯ ಮೇಲೆ ವಿಶೇಷತಃ ಹೆಚ್ಚು ವೇಗವನ್ನು ಕಂಡುಕೊಂಡಿರುತ್ತದೆ. ಬಂಡೆಗಳ ಮೇಲ್ಮೈಗಳನ್ನು ಸತತವಾಗಿ ಕುಸಿಯುವ ಕಲ್ಲುಗಳು ಹೊಡೆದುಕೊಂಡು ಹೋಗುತ್ತಿರುತ್ತವಾದರೂ ಅದರಿಂದ ಬಹುಶಃ ನುಣುಚಿಕೊಳ್ಳಲೂ ಕೂಡಾ ಸಾಧ್ಯವಾಗಿರುತ್ತದೆ. ಕುಸಿಯುತ್ತಿರುವ ಬಂಡೆಗಳು ಸಾಧಾರಣವಾಗಿ ಪರ್ವತದ ಮೇಲ್ಮೈನ ಮೇಲೆ ಆಳವಾದ ಮಡಿಕೆಗಳನ್ನು ಉಂಟುಮಾಡುವ ಪ್ರವೃತ್ತಿ ಹೊಂದಿರುತ್ತದೆ ಹಾಗೂ ಈ ಆಳವಾದ ಮಡಿಕೆಗಳ (ಕೊರಕಲುಗಳು) ಮೇಲೆ ಎಚ್ಚರಿಕೆಯಿಂದಲೇ ಹತ್ತಬೇಕಾಗಿರುತ್ತದೆ, ಮಧ್ಯಭಾಗವು ಜಾಡಿನ ರೂಪವನ್ನು ಹೊಂದಿದ್ದರೆ ಅದರ ಬದಿಗಳು ಸಾಧಾರಣವಾಗಿ ಸುರಕ್ಷಿತವಾಗಿರುತ್ತದೆ. ಬಂಡೆಗಳು ಇತರೆ ದಿನಗಳಿಗಿಂತಲೂ ಹೆಚ್ಚಿನ ಮಟ್ಟಿಗೆ ಕೆಲವು ನಿರ್ದಿಷ್ಟ ದಿನಗಳಲ್ಲಿ ಪದೇ ಪದೇ ಬೀಳುವ ಸಾಧ್ಯತೆಗಳನ್ನು ಹೊಂದಿರುತ್ತದೆ, ಇದು ಸಾಧಾರಣವಾಗಿ ಆಯಾಕಾಲದ ಹವಾಮಾನಕ್ಕೆ ಅನುಗುಣವಾಗಿರುತ್ತದೆ. ರಾತ್ರಿಯ ವೇಳೆ ರೂಪುಗೊಂಡ ನೀರ್ಗಲ್ಲು ತಾತ್ಕಾಲಿಕವಾಗಿ ಬಂಡೆಗಳ ಮೇಲ್ಭಾಗವನ್ನು ಕೂಡಿಕೊಳ್ಳುವಂತೆ ಮಾಡಿರಬಹುದು, ಆದರೆ ಹಗಲಿನ ಉಷ್ಣತೆಯು ಅಥವಾ ಕರಗುತ್ತಿರುವ ಹಿಮಪದರದಿಂದ ಇಳಿದುಕೊಂಡು ಬರುವ ನೀರು ಅಥವಾ ಮಳೆಯು ಸುಲಭವಾಗಿಯೇ ಇಂತಹಾ ಬಂಡೆಗಳನ್ನು ಬೇರ್ಪಡಿಸಬಹುದು. ಅಂತಹಾ ಮಾರ್ಗಗಳಲ್ಲಿನ ಲಾಕ್ಷಣಿಕ ಬಂಡೆ ಕುಸಿತಗಳ ಸಾಧ್ಯತೆಗಳನ್ನು ನಿರ್ಣಯಿಸುವುದಕ್ಕೆ ಸಂಬಂಧಿಸಿದಂತೆ ಸ್ಥಳೀಯರ ಅನುಭವಗಳು ಬಹು ಪ್ರಯೋಜನಕಾರಿಯಾಗಿರುತ್ತದೆ.
ಶಿಲಾ ಸ್ತರಶ್ರೇಣಿಯ ಅವಪಾತದ ದಿಕ್ಕು ಕೂಡಾ ಕೆಲವೊಮ್ಮೆ ನಿರ್ದಿಷ್ಟ ಮೇಲ್ಮೈನ ಸಂಭಾವ್ಯ ಅಪಾಯದ ಮಟ್ಟವನ್ನು ನಿರ್ಧರಿಸುತ್ತದೆ ; ಇದಕ್ಕೆ ಸಂಬಂಧಿಸಿದಂತೆ ಆಯಾ ಬಂಡೆಯ ಗುಣಲಕ್ಷಣಗಳನ್ನು ಕೂಡಾ ಪರಿಗಣಿಸಬೇಕಾಗಿರುತ್ತದೆ. ಕಲ್ಲುಗಳು ಪದೇ ಪದೇ ಬೀಳುತ್ತಲೇ ಇರುವಲ್ಲಿ ಕೆಳಭಾಗದಲ್ಲಿ ಕಲ್ಲುಚೂರು ಗುಪ್ಪೆಗಳು ಕಂಡುಬರುತ್ತವಾದರೆ, ಹಿಮಪದರ ಇಳಿಜಾರುಗಳ ಮೇಲೆ ಕುಸಿಯುವ ಕಲ್ಲುಗಳು ಸಾಕಷ್ಟು ದೂರದಿಂದಲೇ ಎದ್ದು ಕಾಣುವಷ್ಟು ಮಟ್ಟಿಗೆ ಆಳವಾದ ಜಾಡುಗಳನ್ನು ಮೂಡಿಸಿರುತ್ತವೆ. ಹೊಸದಾದ ಶಿಖರವೊಂದನ್ನು ಏರಲು ಅಥವಾ ಪರಿಚಯವಿಲ್ಲದ ಮಾರ್ಗವೊಂದರ ಮೂಲಕ ಹಾದುಹೋಗುವಾಗ, ಪರ್ವತಾರೋಹಿಗಳು ಇಂತಹಾ ಕುರುಹುಗಳು ಕಾಣಿಸುತ್ತವೆಯೇ ಎಂದು ಖಂಡಿತಾ ಗಮನ ಹರಿಸಬೇಕು. ಕುಸಿಯುತ್ತಿರುವ ಕಲ್ಲುಗಳು ಗಮನಾರ್ಹ ಪ್ರಮಾಣದಲ್ಲಿ ಕರಗುತ್ತಿರುವ ಹಿಮಪದರ ಅಥವಾ ನೀರಿನ ಪ್ರವಾಹದೊಂದಿಗೆ ಮಿಶ್ರಿತವಾದಾಗ ಕೆಸರಿನ ಪ್ರವಾಹವು ರೂಪುಗೊಳ್ಳುತ್ತದೆ (ಹಿಮಾಲಯ ಪರ್ವತಗಳಲ್ಲಿ ಇದು ಸರ್ವೇಸಾಮಾನ್ಯ). ಇಂತಹಾ ಆಪಾತಗಳ ಬೀಳುವಿಕೆಯ ಸಂಭಾವ್ಯ ಪ್ರದೇಶಗಳಲ್ಲಿ ಮೊಕ್ಕಾಂ ಹೂಡದಿರುವುದು ಅತಿ ಅಗತ್ಯವಾಗಿರುತ್ತದೆ.
ಕುಸಿಯುವ ನೀರ್ಗಲ್ಲು
[ಬದಲಾಯಿಸಿ]ನೀರ್ಗಲ್ಲುಗಳು ಬೀಳಬಹುದಾದ ಸಾಧ್ಯತೆಯಿರುವ ಪ್ರದೇಶಗಳನ್ನು ಸಾಕಷ್ಟು ಮುಂಚಿತವಾಗಿಯೇ ನಿರ್ಣಯಿಸಬಹುದಾಗಿರುತ್ತದೆ. ಇವುಗಳು ಹಿಮನದಿಗಳ ವಿಭಜಿತ ಭಾಗಗಳಿಂದ (ಹಿಮಗೋಪುರಗಳು) ಹಾಗೂ ಕಿರಿದಾದ ಗುಡ್ಡಗಳ ಏಣುಗಳ ತುದಿಯಮೇಲಿನಿಂದ ಇಳಿಬಿದ್ದ ಚಾಚು ಹಿಮಗಡ್ಡೆಗಳಿಂದ ಕೆಳಕ್ಕೆ ಬೀಳುತ್ತಿರುತ್ತವೆ. ದೊಡ್ಡದಾದ ಹಿಮಬಿಳಲುಗಳು ಅನೇಕವೇಳೆ ಕಡಿದಾದ ಬಂಡೆಗಳ ಮೇಲ್ಮೈಗಳ ಮೇಲೆ ರೂಪುಗೊಳ್ಳುತ್ತವಲ್ಲದೇ, ತೀರಾ ಶೈತ್ಯದಿಂದ ಹಾಗೂ ತುಫಾನುಗಳಿಂದ ಕೂಡಿದ ದಿನಗಳ ನಂತರದ ಶುಭ್ರ ಹವಾಮಾನಗಳಲ್ಲಿ ಆಗ್ಗಾಗ್ಗೆ ಬೀಳುತ್ತವೆ. ಕುಸಿಯುವ ಕಲ್ಲುಬಂಡೆಗಳಿಂದ ದೂರವಿರಲು ಪ್ರಯತ್ನಿಸುವ ಹಾಗೆಯೇ ಇವುಗಳಿಂದಲೂ ದೂರವಿರಬೇಕು. ಹಿಮಗೋಪುರಗಳು ರೂಪುಗೊಳ್ಳುವುದು ತೀರಾ ನಿಧಾನ ಹಾಗೂ (ಹಿಮನದಿ ಚಲನೆಯಿಂದಾಗಿ) ಅಸ್ಥಿರ ಸಮಸ್ಥಿತಿಗೆ ಬರಲು ಕೂಡಾ ಅಷ್ಟೇ ನಿಧಾನತೆಯನ್ನು ತೋರುತ್ತದೆ. ಅವು ಸಾಧಾರಣವಾಗಿ ದಿನದ ತೀರಾ ಶಾಖದಿಂದ ಕೂಡಿದ ಸಮಯದಲ್ಲಿ ಅಥವಾ ಅದಾದ ಕೆಲವೇ ಸಮಯದಲ್ಲಿ ಕೆಳಗೆ ಬೀಳುತ್ತವೆ. ಓರ್ವ ಕೌಶಲ್ಯಪೂರಿತ ಹಾಗೂ ಅನುಭವದಿಂದ ಕೂಡಿದ ನೀರ್ಗಲ್ಲು -ತಜ್ಞ ವ್ಯಕ್ತಿಯು ವಾಡಿಕೆಯಾಗಿ ತೀರಾ ಸಂಕೀರ್ಣವಾದ ನೀರ್ಗಲ್ಲು -ಪತನದ ಮೂಲಕ ಕೂಡಾ ಸುರಕ್ಷಿತ ಮಾರ್ಗವನ್ನು ಕಂಡುಕೊಳ್ಳಬಹುದಾದರೂ, ಅಂತಹಾ ಸ್ಥಳಗಳಿಗೆ ಹೆಚ್ಚಿನ ತಾಪಮಾನದಿಂದ ಕೂಡಿದ ದಿನದ ಮಧ್ಯಾಹ್ನದ ಸಮಯದಲ್ಲಿ ಹೋಗದಿರುವುದು ಒಳಿತು. ಅವನತ/ಇಳಿಬೀಳುವ ಹಿಮನದಿಗಳು (i.e. ಕಡಿದಾದ ಇಳಿಜಾರುಗಳ ಮೇಲಿರುವ ಹಿಮನದಿಗಳು) ಅನೇಕವೇಳೆ ಕಡಿದಾದ ಬಂಡೆಗಳ ಮೇಲ್ಮೈಗಳ ಮೂಲಕ ನಿರ್ದಿಷ್ಟ ಅವಧಿಗಳಿಗೊಮ್ಮೆ ಇವುಗಳ ಮೊನಚಾದ ಮುಂಭಾಗವನ್ನು ಭೇದಿಸುತ್ತಾ ತಾವೇ ಕರಗುತ್ತಾ ಹೋಗುತ್ತಿರುತ್ತವೆ. ಇವುಗಳನ್ನು ಅವುಗಳ ಕೆಳಗೆ ಬಿದ್ದಿರುವ ಬಂಡೆಕಲ್ಲುಗಳ ರಾಶಿಯಿಂದ ಯಾವಾಗಲೂ ಪತ್ತೆಹಚ್ಚಬಹುದಾಗಿರುತ್ತದೆ. ಇವುಗಳಿರುವ ಮಾರ್ಗಗಳನ್ನು ಕೂಡಾ ಹೊರತುಪಡಿಸಿಕೊಂಡಿರಬೇಕು.
ಬಂಡೆಗಳಿಂದ ಪತನಗೊಳ್ಳುವಿಕೆ
[ಬದಲಾಯಿಸಿ]ಓರ್ವ ಬಂಡೆಗಳ ಆರೋಹಿಯ ಕೌಶಲ್ಯತೆಯನ್ನು ಅವರು ಆಯ್ಕೆ ಮಾಡುವ ಕೈಹಿಡಿಕೆಯ ಸ್ಥಳಗಳು ಹಾಗೂ ಕಾಲುಹಿಡಿಕೆಯ ಸ್ಥಳಗಳು ಮತ್ತು ಒಮ್ಮೆ ಹಾಗೆ ಆಯ್ಕೆ ಮಾಡಿದ ಮೇಲೆ ಅವರು ಅದಕ್ಕೆ ಎಷ್ಟರಮಟ್ಟಿಗೆ ಆತುಕೊಂಡಿರುತ್ತಾರೆ ಎಂಬುದರ ಮೇಲೆ ಪತ್ತೆಹಚ್ಚಬಹುದಾಗಿದೆ. ಇದರಲ್ಲಿ ಬಹುಪಾಲು ಬಂಡೆಯ ಭಾಗದ ಮೇಲೆ ಹೇರಲಾಗುವ ತೂಕವನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಅಂದಾಜು ಮಾಡುವ ಸಾಮರ್ಥ್ಯದ ಮೇಲೆಯೇ ಅವಲಂಬಿತವಾಗಿರುತ್ತದೆ. ಹಲವು ಬಿಡಿ ಬಂಡೆಗಳು ಓರ್ವ ವ್ಯಕ್ತಿಯ ತೂಕವನ್ನು ತಡೆದುಕೊಳ್ಳುವ ಮಟ್ಟಿಗೆ ಸಾಕಷ್ಟು ದೃಢತೆಯನ್ನು ಹೊಂದಿರುತ್ತವಾದರೂ, ಯಾವುದನ್ನು ನೆಚ್ಚಿಕೊಳ್ಳಬಹುದು ಎಂದು ತಿಳಿದುಕೊಳ್ಳಲು ಅನುಭವ ಅಗತ್ಯವಾಗಿರುತ್ತದೆ ಹಾಗೂ ಸೆಳೆತವನ್ನುಂಟು ಮಾಡದೆಯೇ ತೂಕವನ್ನು ಅದರ ಮೇಲೆ ಹೇರಲು ಕೌಶಲ್ಯತೆಯು ಅಗತ್ಯವಿರುತ್ತದೆ. ಸವೆದು ಹೋದ ಬಂಡೆಗಳ ಮೇಲೆ ಹಗ್ಗಗಳನ್ನು ಸಾಕಷ್ಟು ಎಚ್ಚರಿಕೆಯಿಂದಲೇ ಬಳಸಬೇಕಿದ್ದು, ಆ ಬಳಕೆಯಿಂದ ಬಿಡಿಬಂಡೆಗಳು ಕೆಳಗಿರುವ ಬಂಡೆಗಳಿಂದ ಬೇರ್ಪಡದೇ ಇರುವ ಹಾಗೆ ಎಚ್ಚರ ವಹಿಸಬೇಕಿರುತ್ತದೆ. ಇದೇ ತರಹದ ಎಚ್ಚರಿಕೆಯನ್ನು ಕೈಹಿಡಿಕೆ ಹಾಗೂ ಕಾಲ್ನೆಲೆ/ಪಾದಾಧಾರಗಳ ವಿಚಾರದಲ್ಲಿಯೂ ಅದೇ ಕಾರಣಕ್ಕಾಗಿಯೇ ವಹಿಸಬೇಕಿರುತ್ತದೆ. ತೀರ ಕಷ್ಟಕರವಾದ ಬಂಡೆಗಳ ಆಸುಪಾಸಿನಲ್ಲಿ ಸಮತಲವಾಗಿ ಅಡ್ಡಚಲನೆಗಳನ್ನು ಕೈಗೊಳ್ಳಬೇಕಾದಲ್ಲಿ , ಅಡ್ಡಚಲನೆಯ ಎರಡೂ ತುದಿಗಳಲ್ಲಿ ಭದ್ರವಾದ ಆಸರೆಗಳಿರದ ಹೊರತು ಅಪಾಯಕರ ಸನ್ನಿವೇಶವು ಉದ್ಭವಿಸಬಹುದಾಗಿರುತ್ತದೆ. ಕಷ್ಟಕರವಾದ ಬಂಡೆಗಳ ಮೇಲೆ ಹತ್ತುವಾಗ ಬೇಕಾಗಬಹುದಾದ ಪರಸ್ಪರ ಸಹಕಾರಗಳು ಎಲ್ಲಾ ಸ್ವರೂಪಗಳನ್ನು ಕೂಡಾ ಒಳಗೊಳ್ಳಬಹುದಾಗಿರುತ್ತದೆ : ಇಬ್ಬರು ಅಥವಾ ಇನ್ನೂ ಮೂರು ಜನರು ಒಬ್ಬರು ಮತ್ತೊಬ್ಬರ ಹೆಗಲ ಮೇಲೆ ಹತ್ತುವ ಇಲ್ಲವೇ ಇತರರು ಆನಿಸಿಟ್ಟುಕೊಂಡಿರುವ ಹಿಮ ಕೊಡಲಿಯೊಂದನ್ನು ಕಾಲ್ನೆಲೆ/ಪಾದಾಧಾರವಾಗಿ ಬಳಸುವುದೂ ಸೇರಿರುತ್ತದೆ. ಇದಕ್ಕೆ ಅಗತ್ಯವಾದ ಮಹತ್ವದ ಮೂಲತತ್ವವೆಂದರೆ ಪರಸ್ಪರ ಸಹಕಾರದ್ದು, ತಂಡದ ಎಲ್ಲಾ ಸದಸ್ಯರು ಸ್ವತಂತ್ರ ಘಟಕವನ್ನಾಗಿ ಪರಿಗಣಿಸದೇ ಚಾರಣದಲ್ಲಿ ಪರಸ್ಪರ ತೋರಬೇಕಾದ ಸಹಕಾರದ್ದಾಗಿದೆ ; ಪ್ರತಿಯೋರ್ವರೂ ತಮ್ಮ ಮುಂದಿರುವ ಹಾಗೂ ಹಿಂದಿರುವ ಆರೋಹಿಯು ಏನು ಮಾಡುತ್ತಿರುವರೆಂದು ತಿಳಿದುಕೊಳ್ಳುವುದು ತೀರಾ ಅಗತ್ಯವಾಗಿರುತ್ತದೆ. ಕಷ್ಟಕರವಾದ ಹವಾಮಾನದ ನಂತರ ಕಡಿದಾದ ಬಂಡೆಗಳ ಮೇಲೆ ಅನೇಕವೇಳೆ ನೀರ್ಗಲ್ಲಿನ ಲೇಪ/ಪದರವು (ಹಿಮದ ತೆಳು ಪದರ) ರೂಪುಗೊಂಡಿದ್ದು, ಅದು ಕೆಲವೊಮ್ಮೆ ಅವುಗಳನ್ನು ಹತ್ತಲಾರದಂತೆ ಮಾಡಬಲ್ಲದಾಗಿರುತ್ತದೆ. ಮುಳ್ಳಟ್ಟೆಗಳು ಅಂತಹಾ ಸನ್ನಿವೇಶಗಳಲ್ಲಿ ಉಪಯುಕ್ತವಾಗಿ ಪರಿಣಮಿಸುತ್ತಿರುತ್ತವೆ.
ಹಿಮಕುಸಿತಗಳು
[ಬದಲಾಯಿಸಿ]ಹಿಮಕುಸಿತವು ಪರ್ವತಗಳಲ್ಲಿ ಬಹುತೇಕ ಕಡಿಮೆ ಅಂದಾಜಿಗೆ ಒಳಪಡುವ ಅಪಾಯವಾಗಿದೆ. ಜನರು ಸಾಧಾರಣವಾಗಿ ಅಪಘಾತಗಳು ಸಂಭವಿಸುವುದನ್ನೂ ಮುನ್ನಂದಾಜು ಮಾಡಬಹುದೆಂದು ಹಾಗೂ ಅದರಿಂದ ಸುಲಭವಾಗಿ ಪಾರಾಗಬಹುದೆಂದು ಭಾವಿಸಿರುತ್ತಾರೆ. ಆದರೆ ವಸ್ತುಸ್ಥಿತಿಯು ಸ್ವಲ್ಪಮಟ್ಟಿಗೆ ಬೇರೆಯದೇ ಆಗಿದೆ. ಪ್ರತಿ ವರ್ಷವೂ ೧೨೦ರಿಂದ ೧೫೦ ಜನರು ಎತ್ತರದ ಪರ್ವತಗಳ ಸಣ್ಣ ಪ್ರಮಾಣದ ಹಿಮಕುಸಿತಗಳೊಂದರಲ್ಲೇ ಸಾವನ್ನಪ್ಪುತ್ತಾರೆ. ಇಂತಹವರುಗಳಲ್ಲಿ ಬಹುಪಾಲು ಜನರು ಸಾಕಷ್ಟು ಮಟ್ಟಿನ ಅನುಭವ ಹೊಂದಿದ ೨೦–೩೫ ವರ್ಷಗಳ ವಯೋಮಾನದ ಪುರುಷ ಹಿಮಜಾರಾಟಗಾರರಾಗಿದ್ದು ಇವರಲ್ಲಿ ಹಿಮಜಾರಾಟದ ತರಬೇತುದಾರರು ಹಾಗೂ ಮಾರ್ಗದರ್ಶಿಗಳೂ ಸೇರಿದ್ದಾರೆ.[ಸೂಕ್ತ ಉಲ್ಲೇಖನ ಬೇಕು] ಹಿಮಪದರಗಳ ಅಡ್ಡಹಾಯುವಿಕೆಯ ಅಪಾಯಕ್ಕೆ ಒಡ್ಡಿಕೊಳ್ಳದಿರಲು ಯಾವಾಗಲೂ ಅತೀವ ಒತ್ತಡವಿರುತ್ತದೆ. ಅಲ್ಲಿಂದ ಹಿಂದಿರುಗುವುದು ಬಹಳ ಹೆಚ್ಚುವರಿ ಸಮಯ ಅತ್ಯುನ್ನತ ನಾಯಕತ್ವ ಹಾಗೂ ಪ್ರಯತ್ನಗಳನ್ನು ಬೇಡುವುದಾಗಿದ್ದು, ಹಾಗೂ ಅತ್ಯಂತ ಪ್ರಮುಖವಾದುದೆಂದರೆ ಎಲ್ಲೋ ಕೆಲವೊಮ್ಮೆ ಮಾತ್ರವೇ ಹಿಮಕುಸಿತವಾಗಿ ತೆಗೆದುಕೊಂಡಿದ್ದ ನಿರ್ಧಾರ ಸರಿಯೆನ್ನಿಸಬಹುದಾಗಿರುತ್ತದೆ. ವಿರುದ್ಧ ದಿಕ್ಕಿನಲ್ಲಿ ಹಿಂದಿರುಗುವ ನಿರ್ಧಾರವನ್ನು ತೆಗೆದುಕೊಳ್ಳುವುದು ಕಷ್ಟಕರವಾಗಿದ್ದು ವಿಶೇಷತಃ ಇತರರು ಇಳಿಜಾರನ್ನು ಹಾದುಹೋಗುತ್ತಿರುವಾಗ, ಯಾವುದೇ ಮುಂದಿನ ವ್ಯಕ್ತಿಯು ಕುಸಿತದ ಪ್ರಚೋದನೆಗೆ ಕಾರಣವಾಗಬಹುದು.
ಹಿಮಕುಸಿತಗಳಲ್ಲಿ ಅನೇಕ ವಿಧಗಳಿದ್ದು, ಕೇವಲ ಎರಡು ವಿಧಗಳು ಮಾತ್ರವೇ ಬಹುತೇಕ ಆತಂಕಕ್ಕೆ ಕಾರಣವಾಗಬಲ್ಲವು:
- ಚಪ್ಪಡಿ ಹಿಮಕುಸಿತ
- ಈ ವಿಧದ ಹಿಮಕುಸಿತವು ಹಿಮಪದರವೊಂದರ ಪದರವು ಬಿಡಿಯಾಗಿ ಪ್ರತ್ಯೇಕಗೊಂಡು ನಿಧಾನವಾಗಿ ಬೆಟ್ಟದ ಕೆಳಗಿನ ಕಡೆಗೆ ಜಾರಿಕೊಂಡು ಹೋಗುತ್ತಿರುವಾಗ ಸಂಭವಿಸುತ್ತದೆ ; ಇಂತಹವುಗಳು ತೀರ ದೊಡ್ಡವಾಗಿದ್ದು ಅತೀವ ಅಪಾಯಕರವಾದಂತಹವು.
- ಗಡಸು ಚಪ್ಪಡಿ ಹಿಮಕುಸಿತ
-
- ಈ ವಿಧದ ಹಿಮಕುಸಿತವು ಕೂಡಿಸುವ ಚಪ್ಪಡಿಗಳಲ್ಲಿ ಗಟ್ಟಿಯಾಗಿ ಒತ್ತೊತ್ತಾಗಿ ಅಡಕಾಗಿರುವ ಹಿಮಪದರಗಳಲ್ಲಿ ರೂಪುಗೊಳ್ಳುತ್ತದೆ. ಬೆಟ್ಟದಿಂದ ಕೆಳಗೆ ಜಾರಿಕೊಂಡು ಹೋಗುತ್ತಿರುವಾಗ ಈ ಚಪ್ಪಡಿಯು ಸುಲಭವಾಗಿ ಭಿನ್ನಗೊಳ್ಳದೇ ಪರ್ವತದ ಕೆಳಭಾಗಕ್ಕೆ ಉರುಳಿಕೊಂಡು ಹೋಗುವ ದೊಡ್ಡ ದಿಮ್ಮಿಗಳಾಗಿ ಪರಿಣಮಿಸುತ್ತದೆ.
- ಮೆದು ಚಪ್ಪಡಿ ಹಿಮಕುಸಿತ
-
- ಈ ವಿಧದ ಹಿಮಕುಸಿತವು ಕೂಡಾ ಒತ್ತೊತ್ತಾಗಿ ಅಡಕವಾಗಿರುವ ಹಿಮಪದರಗಳ ಸ್ತರಗಳಿಂದಾಗಿ ಏರ್ಪಡುತ್ತದಲ್ಲದೇ, ಇವುಗಳ ಚಪ್ಪಡಿಗಳು ಹೆಚ್ಚು ಸುಲಭವಾಗಿ ಭಿನ್ನಗೊಳ್ಳುವ ಪ್ರವೃತ್ತಿಯನ್ನು ತೋರ್ಪಡಿಸುತ್ತವೆ.
- ಬಿಡಿಯಾದ ಹಿಮಪದರ ಹಿಮಕುಸಿತ
- ಈ ವಿಧದ ಹಿಮಕುಸಿತವು ಸಣ್ಣ ಪ್ರಮಾಣದಲ್ಲಿ ಚಲಿಸಿಕೊಂಡು ಹೋಗುತ್ತಿರುವ ಹಿಮಪದರಗಳು ಒಟ್ಟುಗೂಡಿ ದೊಡ್ಡದೊಂದು ಚಪ್ಪಡಿಯಾಗಿ ಪರಿಣಮಿಸುವುದರಿಂದ ಏರ್ಪಡುತ್ತದೆ. ಇದು "ಸ್ನಿಗ್ಧ ಚಪ್ಪಡಿ ಅಥವಾ ಬಿಂದು ವಿಮೋಚನೆ" ಹಿಮಕುಸಿತ ಎಂದು ಇದನ್ನು ಕರೆಯಲಾಗುತ್ತದೆ. ಈ ವಿಧದ ಕುಸಿತವೂ ಕೂಡಾ ಆರೋಹಿಯ ಅಥವಾ ಹಿಮಜಾರಾಟಗಾರರ ಕಾಲಿನ ಆಧಾರವನ್ನು ಕಳೆದುಕೊಳ್ಳುವಂತೆ ಮಾಡಿ ಅವರನ್ನು ಹಿಮದಲ್ಲಿ ಹೂತುಹೋಗುವಂತೆ ಅಥವಾ ಪ್ರಪಾತದ ಹಾದಿಯ ಮೂಲಕ ಆಳ ಭೂಪ್ರದೇಶಗಳೆಡೆಗೆ ರಭಸದಿಂದ ಜಾರಿಹೋಗುವ ಹಾಗೆ ಮಾಡುವ ಸಾಧ್ಯತೆ ಇರುತ್ತದಾದ್ದರಿಂದ ವಂಚನಾತ್ಮಕವಾಗಿ ಅಪಾಯಕರವೆಂದು ಪರಿಗಣಿಸಲಾಗುತ್ತದೆ.
ಅಪಾಯಕರ ಕುಸಿತಗಳು ಹಲವು ಹಿಮಜಾರಾಟಗಾರರು ಬಳಸಲು ಆದ್ಯತೆ ನೀಡುವ ಅದೇ ಇಳಿಜಾರುಗಳಲ್ಲಿಯೇ ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ : ದೀರ್ಘವಾಗಿರುವ ಹಾಗೂ ಅಗಲವಾದ ತೆರಪನ್ನು ಹೊಂದಿರುವ ಹಾಗೂ ಕೆಲವೇ ಮರಗಳು ಅಥವಾ ಬೃಹತ್ ಬಂಡೆಗಳನ್ನು ಹೊಂದಿರುವ, ೩೦ರಿಂದ ೪೫ ಡಿಗ್ರಿಗಳ ಕೋನದಲ್ಲಿ ವಾಲಿರುವ ತಾಜಾ ಹಿಮಪದರದ ಭಾರೀ ಸ್ತರವನ್ನು, ಭಾರೀ ತುಫಾನು ಕಂಡುಬಂದ ಕೊಂಚವೇ ಸಮಯದಲ್ಲಿ, "ತುಫಾನಿಗೆ ಇಂಬು ಕೊಡುವ ರೀತಿಯ" ಇಳಿಜಾರಿನಲ್ಲಿರುವ ತರಹದ ಲಕ್ಷಣಗಳನ್ನು ಅಂತಹವು ಹೊಂದಿರುತ್ತವೆ. ಸೂರ್ಯನ ಬಿಸಿಲು ಕೂಡಾ ಕುಸಿತಗಳಾಗಲು ಪ್ರಚೋದನೆಯನ್ನು ನೀಡಲು ಸಾಧ್ಯ. ಇಂತಹವು ಸಾಧಾರಣವಾಗಿ ಬಿಂದು ವಿಮೋಚನಾ ಅಥವಾ ಸ್ನಿಗ್ಧ ಕುಸಿತ ರೀತಿಯ ಹಿಮಕುಸಿತಗಳಾಗಿರುತ್ತವೆ. ಸ್ನಿಗ್ದ ಹಿಮಕುಸಿತದ ಹೆಚ್ಚುವರಿ ತೂಕವು ಚಪ್ಪಡಿ ಹಿಮಕುಸಿತಕ್ಕೆ ಪ್ರಚೋದನೆ ನೀಡಬಹುದಾಗಿರುತ್ತದೆ. ಹಿಮಕುಸಿತಕ್ಕೆ ಬಲಿಯಾದರೆಂದು ವರದಿಯಾದವರಲ್ಲಿ ತೊಂಬತ್ತು ಪ್ರತಿಶತ ಜನರು ಸ್ವತಃ ತಾವೇ ಅಥವಾ ತಮ್ಮ ತಂಡದಲ್ಲಿನ ಇತರರು ಪ್ರಚೋದನೆ ನೀಡಿದ್ದಿದುದರಿಂದ ಹಿಮಕುಸಿತಗಳಲ್ಲಿ ಸಿಕ್ಕಿಹಾಕಿಕೊಂಡಿದ್ದರು.[ಸೂಕ್ತ ಉಲ್ಲೇಖನ ಬೇಕು]
ಹಿಮದ ಜಾರುಹಾದಿಯ ಆಚೆ ಹೋಗುವಾಗ ಅಥವಾ ಪರ್ವತಪ್ರದೇಶದ ಭೂಪ್ರದೇಶದಲ್ಲಿ ಸಂಚರಿಸುವಾಗ, ಸಂಚಾರಿಗಳಿಗೆ ಕೆಳಕಂಡವನ್ನು ತಮ್ಮೊಂದಿಗೆ ಒಯ್ಯಲು ಸೂಚನೆ ನೀಡಿರಲಾಗುತ್ತದೆ:
- ಹಿಮಕುಸಿತ ಸಂಕೇತ ದೀಪ
- ಅನ್ವೇಷಕ/ಶೋಧಕ
- ಗೋರು ಸಲಿಕೆ (ಕುಸಿತಕ್ಕೀಡಾದವರನ್ನು ಹೊರಕ್ಕೆಳೆಯುವುದರಲ್ಲಿ ಕೈಗಳ ಬದಲು ಗೋರು ಸಲಿಕೆಯ ಬಳಕೆಯಿಂದ ಐದು ಪಟ್ಟು ವೇಗವಾಗಿರುತ್ತದೆ )[ಸೂಕ್ತ ಉಲ್ಲೇಖನ ಬೇಕು]
ಅವರುಗಳಿಗೆ ಹಿಮಕುಸಿತದಿಂದ ಪಾರಾಗುವ ತರಬೇತಿಯನ್ನು ಪಡೆದಿರಲು ಕೂಡಾ ಸಲಹೆ ನೀಡಿರಲಾಗುತ್ತದೆ. ಪರಿಸ್ಥಿತಿಯ ವ್ಯಂಗ್ಯವೆಂದರೆ ಹಿಮಕುಸಿತಗಳಿಂದ ಪಾರಾಗುವ ತರಬೇತಿ ಪಡೆದಿರುವ ನಿಪುಣ ಹಿಮಜಾರಾಟಗಾರರೇ ಹಿಮಕುಸಿತದ ಅಪಾಯಕ್ಕೀಡಾದವರಲ್ಲಿ ಅತ್ಯಧಿಕ ಪ್ರಮಾಣದಲ್ಲಿದ್ದಾರೆ ; ಹಿಮಕುಸಿತಗಳು ಉಂಟಾಗುವ ಪ್ರದೇಶಗಳಲ್ಲಿ ಜಾರಾಟ ನಡೆಸುವವರಲ್ಲಿ ಅವರೇ ಹೆಚ್ಚಿನ ಪ್ರಮಾಣದಲ್ಲಿರುವುದು ಬಹುಶಃ ಇದಕ್ಕೆ ಕಾರಣವಾಗಿರಬಹುದು ಹಾಗೂ ಖಂಡಿತವಾಗಿ ಇನ್ನೊಂದು ಕಾರಣ ಜನರು ತಮ್ಮ ಉಪಕರಣಗಳನ್ನು ಬಳಸುವ ರೀತಿಯನ್ನು ನಿಜವಾಗಿಯೂ ವೇಗವಾಗಿ ಹಾಗೂ ಸಮರ್ಥ ಸಂರಕ್ಷಕರಾಗುವ ಮಟ್ಟಿಗೆ ಬೇಕಾಗುವಷ್ಟು ಅಭ್ಯಾಸಗಳನ್ನು ನಡೆಸಿರುವುದಿಲ್ಲ.[ಸೂಕ್ತ ಉಲ್ಲೇಖನ ಬೇಕು]
ಸೂಕ್ತವಾದ ಸಂರಕ್ಷಣಾ ಉಪಕರಣಗಳು ಇದ್ದು ಅಗತ್ಯ ತರಬೇತಿಯನ್ನು ಪಡೆದಿದ್ದಾಗ್ಯೂ ಗಮನಾರ್ಹ ಹಿಮಕುಸಿತದಲ್ಲಿ ಸಿಕ್ಕಿಹಾಕಿಕೊಂಡಿದ್ದರೆ ಐವರಲ್ಲಿ ಒಬ್ಬರು ಸಾವನ್ನಪ್ಪುವ ಸಾಧ್ಯತೆಯು ಇರುತ್ತದೆ ಹಾಗೂ ಕೆಲವೇ ನಿಮಿಷಗಳಿಗಿಂತ ಹೆಚ್ಚಿನ ಕಾಲ ಹೂತುಹೋದ ಪರಿಸ್ಥಿತಿಯಲ್ಲಿದ್ದರೆ ಜೀವಂತವಾಗಿ ಪತ್ತೆಯಾಗುವ ಸಾಧ್ಯತೆಯು ಕೇವಲ ೫೦/೫೦ರಷ್ಟಿರುತ್ತದೆ. ಇದಕ್ಕೆ ಅತ್ಯುತ್ತಮ ಪರಿಹಾರವೆಂದರೆ ಅಪಾಯಕರ ಸಂದರ್ಭಗಳಿಗೆ ಈಡಾಗುವುದನ್ನು ಹೇಗೆ ತಪ್ಪಿಸಿಕೊಳ್ಳಬಹುದು ಎಂಬುದನ್ನು ಕಲಿಯುವುದಾಗಿರುತ್ತದೆ.[ಸೂಕ್ತ ಉಲ್ಲೇಖನ ಬೇಕು]
ನೀರ್ಗಲ್ಲು ಇಳಿಜಾರುಗಳು
[ಬದಲಾಯಿಸಿ]ನೀರ್ಗಲ್ಲು ಅಥವಾ ಗಡಸು ಹಿಮವನ್ನು ಹೊಂದಿರುವ ಇಳಿಜಾರುಗಳ ಮೇಲೆ ಸಂಚಾರ ನಡೆಸಲು, ಮುಳ್ಳಟ್ಟೆಗಳು ಪರ್ವತಾರೋಹಿಯ ಪರಿಕರಗಳ ಪ್ರಧಾನ ಭಾಗವಾಗಿರುತ್ತವೆ. ಹಂತ ಹಂತವಾಗಿ ಕತ್ತರಿಸುವಿಕೆಯು ಕೆಲವೊಮ್ಮೆ ಮಧ್ಯಮ ಕೋನವನ್ನು ಹೊಂದಿರುವ ಹಿಮಪದರ ಇಳಿಜಾರುಗಳ ಮೇಲೆ ಬಳಸಬಹುದಾದರೂ, ಇದು ತೀರಾ ನಿಧಾನವಾದ ಹಾಗೂ ದಣಿವನ್ನುಂಟು ಮಾಡುವ ಪ್ರಕ್ರಿಯೆಯಾಗಿದ್ದರೂ ಮುಳ್ಳಟ್ಟೆಗಳಷ್ಟು ಹೆಚ್ಚಿನ ಮಟ್ಟದ ಸುರಕ್ಷತೆಯನ್ನು ನೀಡುವುದಿಲ್ಲ. ಆದಾಗ್ಯೂ ಮೆದುವಾದ ಹಿಮಪದರ ಅಥವಾ ಹಿಮದಹುಡಿಗಳಲ್ಲಿ , ಹಿಮಪದರವು ಉಂಡೆಗಳಾಗಿ ರೂಪುಗೊಳ್ಳುವುದರ ಮೂಲಕ ಮುಳ್ಳಟ್ಟೆಗಳಿಗೆ ಸುಲಭವಾಗಿ ಅಡೆತಡೆಗಳನ್ನುಂಟು ಮಾಡಬಹುದಾಗಿದ್ದು, ಈ ವಿಚಾರವು ಅವುಗಳ ಪರಿಣಾಮಕಾರಿತ್ವವನ್ನು ಕಡಿಮೆ ಮಾಡುತ್ತವೆ. ಯಾವುದೇ ಸಂದರ್ಭವಾಗಲಿ ಹಿಮ ಕೊಡಲಿಯು ಕೇವಲ ಸಮತೋಲನವನ್ನು ಕಾಪಿಟ್ಟುಕೊಳ್ಳಲು ಸಹಾಯ ಮಾಡುವುದು ಮಾತ್ರವಲ್ಲದೇ ಜಾರಿಹೋಗಬಹುದಾದ ಅಥವಾ ಬೀಳುವ ಸಂದರ್ಭಗಳಲ್ಲಿ ಇವು ಆರೋಹಿಗೆ ಸ್ವಯಂ-ಪ್ರತಿಬಂಧ ಮಾಡಿಕೊಳ್ಳಲು ಕೂಡಾ ಸಹಾಯ ಮಾಡುತ್ತದೆ. ಆದಾಗ್ಯೂ ನಿಜವಾದ ನೀರ್ಗಲ್ಲುಗಳ ಇಳಿಜಾರಿನಲ್ಲಿ , ಹಿಮ ಕೊಡಲಿಯು ಸ್ವಯಂ-ಪ್ರತಿಬಂಧನವನ್ನು ಮಾಡಿಕೊಳ್ಳುವ ಅವಕಾಶವು ಅಪರೂಪವಾಗಿ ಮಾತ್ರವೇ ಪರಿಣಮಿಸುತ್ತದೆ. ಕಡಿದಾದ ನೀರ್ಗಲ್ಲು ಇಳಿಜಾರುಗಳ ಮೇಲೆ ಹೆಚ್ಚುವರಿ ಸುರಕ್ಷತೆಯ ಕ್ರಮವಾಗಿ, ಚಾರಣದ ಹಗ್ಗವನ್ನು ನೀರ್ಗಲ್ಲುಗಳೊಳಗೆ ಹೂತುಹಾಕಲಾಗಿರುವ ನೀರ್ಗಲ್ಲು ತಿರುಪುಮೊಳೆಗಳಿಗೆ ಸಿಕ್ಕಿಸಲಾಗಿರುತ್ತದೆ.
ಹೊಸದಾಗಿ ಪತನವಾದ ಹಿಮಪದರವು ಮುಂದಿನ ರಾತ್ರಿ ಪತನವಾಗುವ ಹಿಮವು ಇಡೀ ರಾಶಿಯನ್ನು ಅರೆ-ಹೆಪ್ಪುಗಟ್ಟಿದ ನೀರ್ಗಲ್ಲಿನ ಪದರವನ್ನಾಗಿ ಮಾರ್ಪಡಿಸುವ ಮಟ್ಟಿಗೆ ತ್ವರಿತವಾಗಿ ಮೇಲ್ಮೈನಲ್ಲಿ ಕರಗಿಹೋಗುತ್ತಾ ಕೆಳಭಾಗವನ್ನು ನೆನೆದುಹೋಗುವಂತೆ ಮಾಡುವ ಪ್ರಕ್ರಿಯೆಯು ಉಷ್ಣವಲಯದ ಪರ್ವತಗಳಲ್ಲಿ ಕಂಡುಬರುವುದು ಸರ್ವೇಸಾಮಾನ್ಯವಾದರೂ ನಿಜವಾದ ನೀರ್ಗಲ್ಲು ಇಳಿಜಾರುಗಳು ಯುರೋಪ್‌ನಲ್ಲಿ ಅಪರೂಪವಾಗಿರುತ್ತವೆ.
ಹಿಮಪದರದ ಇಳಿಜಾರುಗಳು
[ಬದಲಾಯಿಸಿ]ಹಿಮಪದರ ಇಳಿಜಾರುಗಳು ಕಂಡುಬರುವುದು ಸರ್ವೇಸಾಮಾನ್ಯವಾಗಿದ್ದು, ವಾಡಿಕೆಯಾಗಿ ಇವುಗಳನ್ನು ಏರುವುದು ಕೂಡಾ ಅಷ್ಟೇ ಸರಳವಾಗಿರುತ್ತದೆ. ಹಿಮಪದರ ಅಥವಾ ನೀರ್ಗಲ್ಲು ಇಳಿಜಾರಿನ ತಳಭಾಗದಲ್ಲಿ ಸಾಧಾರಣವಾಗಿ ಹಿಮನದಿ ಬಿರುಕು ಎಂದು ಕರೆಯಲ್ಪಡುವ ದೊಡ್ಡ ಕೊರಕಲು ಇರುತ್ತದೆ ಇಲ್ಲಿಂದಲೇ ಪರ್ವತದ ಕೊನೆಮಟ್ಟದ ಇಳಿಜಾರು ಹಿಮಪದರದಿಂದ ಕೂಡಿದ ಬಯಲು ಅಥವಾ ಹಿಮನದಿಯಿಂದ ಮೇಲೆದ್ದಿರುತ್ತದೆ. ಅಂತಹಾ ಹಿಮನದಿ ಬಿರುಕುಗಳು ಸಾಧಾರಣವಾಗಿ ಹೆಜ್ಜೆ ಹಾಕಿ ದಾಟಲಾಗದಷ್ಟು ಅಗಲವಾಗಿರುತ್ತದೆ ಹಾಗೂ ಹಿಮಪದರ ಸೇತುವೆಯ ಮೂಲಕವೇ ಅವುಗಳನ್ನು ದಾಟಬೇಕಾಗಿದ್ದು , ಅದನ್ನು ಎಚ್ಚರಿಕೆಯಿಂದ ಪರೀಕ್ಷಿಸಲಾಗಿರಬೇಕು ಹಾಗೂ ಅದು ಹಗ್ಗದ ಯಾತನಾದಾಯಕ ಬಳಕೆಯನ್ನು ಒಳಗೊಂಡಿರುತ್ತದೆ. ಹಿಮಪದರದ ಇಡೀ ರಾಶಿಯು ಹಿಮಕುಸಿತವಾಗಿ ರೂಪುಗೊಳ್ಳುವ ಸಾಧ್ಯತೆಯಿರುವುದರಿಂದ ಅಹಿತಕರವಾದ ಪರಿಸ್ಥಿತಿಯಲ್ಲಿರುವ ಕಡಿದಾದ ಹಿಮಪದರದ ಇಳಿಜಾರು ಅಪಾಯಕರವಾಗಿ ಪರಿಣಮಿಸಬಹುದಾಗಿರುತ್ತದೆ. ಅಂತಹಾ ಇಳಿಜಾರುಗಳನ್ನು ಓರೆಯಾಗಿ ಹತ್ತುವುದರ ಬದಲಿಗೆ ಲಂಬವಾಗಿ ಹತ್ತಲುಹೋದಲ್ಲಿ , ಓರೆಯಾದ ಅಥವಾ ಸಮತಲವಾದ ಮಾರ್ಗವು ಅವುಗಳನ್ನು ಮಧ್ಯದಲ್ಲಿ ಬೇರ್ಪಡಿಸಿ ರಾಶಿಯ ಚಲನೆಗೆ ಅವಕಾಶವನ್ನು ನೀಡುತ್ತದಾದ್ದರಿಂದ ಕಡಿಮೆ ಅಪಾಯಕರವಾಗಿರುತ್ತದೆ. ನೀರ್ಗಲ್ಲುಗಳ ಮೇಲೆ ಹರಡಿರುವ ಆಗತಾನೆ ಏರ್ಪಟ್ಟ ಹಿಮಪದರವು ವಿಶೇಷವಾಗಿ ಅಪಾಯಕರವಾಗಿರುತ್ತದೆ. ಅನಿಶ್ಚಿತ ಪರಿಸ್ಥಿತಿಗಳಲ್ಲಿ ಹಿಮಪದರದ ಮೇಲಿನ ಮುಂಚಲನೆಯ ಕಾರ್ಯಸಾಧ್ಯತೆಯನ್ನು ನಿರ್ಧರಿಸುವುದಕ್ಕೆ ಅನುಭವವು ಅತ್ಯಗತ್ಯ. ಬಂಡೆಗಳ ಮೇಲಿನ ಹಿಮಪದರವು ದಪ್ಪವಾಗಿರದ ಹೊರತು ವಾಡಿಕೆಯಾಗಿ ತೀರ ಶಿಥಿಲವಾಗಿರುತ್ತದೆ; ಹಿಮಪದರಗಳ ಮೇಲೆ ಹಿಮಪದರವಿದ್ದರೆ ಅದು ಮಜಬೂತಾಗಿರುವ ಸಂಭಾವ್ಯತೆ ಹೆಚ್ಚಿರುತ್ತದೆ. ಒಂದು ಅಥವಾ ಎರಡು ದಿನಗಳ ಕಾಲದ ಪ್ರಶಸ್ತ ಹವೆಯು ವಾಡಿಕೆಯಾಗಿ ಆಗತಾನೆ ರೂಪುಗೊಂಡ ಹಿಮಪದರವನ್ನು ದೃಢವಾದ ಸ್ಥಿತಿಗೆ ತರಬಲ್ಲದು. ಹಿಮಪದರವು ಅನೇಕವೇಳೆ ಅದು ಕಣ್ಣಿಗೆ ತನ್ನ ಇಳಿಜಾರು ಎಂದು ವಂಚಿಸುವಂತೆ ಕಂಡುಬಂದರೂ ತೀರಾ ಕಡಿದಾದ ಕೋನಗಳಲ್ಲಿ ಉಳಿದುಕೊಳ್ಳಲಾರದು. ಹಿಮಪದರ ಇಳಿಜಾರುಗಳು ಅಪರೂಪವಾಗಿಯಷ್ಟೇ ೪೦°ಯನ್ನು ಮೀರಿದ ಉಷ್ಣತೆಯನ್ನು ತಲುಪಬಲ್ಲವು. ನೀರ್ಗಲ್ಲ ಇಳಿಜಾರುಗಳು ಮತ್ತಷ್ಟು ಕಡಿದಾದುದಾಗಿರಬಹುದು. ಮುಂಜಾವಿನ ಹೊತ್ತಿನಲ್ಲಿ ಹಿಮಪದರ ಇಳಿಜಾರುಗಳು ವಾಡಿಕೆಯಾಗಿ ದೃಢವಾಗಿದ್ದು ಸುರಕ್ಷಿತವಾಗಿರುತ್ತವೆ, ಆದರೆ ಅದೇ ಪದರಗಳು ಮಧ್ಯಾಹ್ನದಲ್ಲಿ ಸಾಕಷ್ಟು ಮೆದುವಾಗಿದ್ದು ಅಪಾಯಕರವಾಗಿ ಪರಿಣಮಿಸಬಹುದಾಗಿರುತ್ತವೆ ; ಆದ್ದರಿಂದಲೇ ಮುಂಚೆಯೇ ಎದ್ದು ಹೊರಟರೇ ಕ್ಷೇಮ.
ಕೊರಕಲುಗಳು
[ಬದಲಾಯಿಸಿ]ಕೊರಕಲುಗಳು ಎಂದರೆ ಅಸಮವಾದ ಹಾದಿಯ ಮೇಲೆ ಸಾಗುವಾಗ ಹಿಮನದಿಯ ಮೂಲದ್ರವ್ಯದಲ್ಲಿ ರೂಪುಗೊಳ್ಳುವ ಸೀಳುಗಳು ಅಥವಾ ಆಳವಾದ ಬಿರುಕುಗಳಾಗಿರುತ್ತವೆ. ಅವುಗಳು ಎದ್ದು ತೆರೆದುಕೊಂಡಿರಬಹುದು ಅಥವಾ ಮರೆಯಾಗಿರಲೂಬಹುದು. ಹಿಮನದಿಯ ಕೆಳಭಾಗದ ಪಾತ್ರದಲ್ಲಿ ಕೊರಕಲುಗಳು ತೆರೆದುಕೊಂಡಿರುತ್ತವೆ. ಹಿಮಪದರ ಮಟ್ಟಕ್ಕಿಂತ ಮೇಲಿನ ಪ್ರದೇಶದಲ್ಲಿ ಅವುಗಳು ಯಾವಾಗಲೂ ಚಳಿಗಾಲ ಹಿಮಪದರದ ಸಂಚಯಗಳಿಂದ ಬಾಗಿದ ರಚನೆಗಳಿಂದಾಗಿ ಮುಚ್ಚಲ್ಪಟ್ಟಿರುತ್ತವೆ. ಹಾಗೆ ಮರೆಯಾಗಿರುವ ಕೊರಕಲುಗಳನ್ನು ಪತ್ತೆ ಹಚ್ಚುವ ಕಾರ್ಯವು ಎಚ್ಚರಿಕೆ ಹಾಗೂ ಅನುಭವವನ್ನು ಅಪೇಕ್ಷಿಸುತ್ತದೆ. ಹಿಮಪದರವೊಂದು ಆಗತಾನೆ ಪತನವಾಗಿರುವಾಗ ಅವುಗಳನ್ನು ಹಿಮ ಕೊಡಲಿಯ ತುದಿಯಿಂದ ಎಚ್ಚರದ ತನಿಖೆ ಮಾಡುವ ಮೂಲಕ ಅಥವಾ ಅದರ ಎಡ ಬಲಗಳಲ್ಲಿ ಭಾಗಶಃ ಮರೆಯಾಗಿರುವ ಕೊರಕಲಿನ ತೆರೆದಿರುವ ವಿಸ್ತರಣೆಯು ಕಂಡುಬರುತ್ತದೆಯೇ ಎಂಬುದನ್ನು ಗಮನಿಸುವ ಮೂಲಕ ಮಾತ್ರವೇ ಸಾಧ್ಯ. ಅಪಘಾತವಾಗದಿರುವಂತೆ ತಡೆಗಟ್ಟುವ ಏಕೈಕ ಮಾರ್ಗವೆಂದರೆ ಹಗ್ಗದ ಬಳಕೆ, ಆದ್ದರಿಂದಲೇ ಹಿಮಪದರದಿಂದ -ಆವೃತವಾದ ಹಿಮನದಿಯನ್ನು ಒಬ್ಬರಿಗೆ ಅಥವಾ ಇನ್ನೂ ಉತ್ತಮ ಪರಿಸ್ಥಿತಿಯಲ್ಲಿ ಇಬ್ಬರು ಸಂಗಡಿಗರಿಗೆ ಹಗ್ಗದ ಮೂಲಕ ಕಟ್ಟಿಕೊಳ್ಳದೇ ದಾಟುವ ಪ್ರಯತ್ನವನ್ನು ಯಾರೂ ಮಾಡಬಾರದು. ಕೊರಕಲುಗಳಿರುವ ಪ್ರದೇಶಕ್ಕೆ ಚಾರಣ ಹೊರಡುವವರು ಕೊರಕಲುಗಳಿಂದ ಪಾರುಮಾಡುವಿಕೆಯಲ್ಲಿ ತರಬೇತಿ ಪಡೆದಿರಲೇಬೇಕು.
ಹವಾಮಾನ
[ಬದಲಾಯಿಸಿ]ಅಹಿತ ಹವಾಮಾನದಿಂದ ಸಂಭವಿಸಬಹುದಾದ ಪ್ರಧಾನ ಅಪಾಯಗಳು ಹಿಮಪದರ ಮತ್ತು ಬಂಡೆಗಳ ಪರಿಸ್ಥಿತಿಯಲ್ಲಿ ಇದು ತರಬಹುದಾದ ಬದಲಾವಣೆಯನ್ನೇ ಆಧರಿಸಿದ್ದು, ಇದ್ದಕ್ಕಿದ್ದಂತೆ ಚಲನವಲನವನ್ನು ಸಾಮಾನ್ಯ ಪರಿಸ್ಥಿತಿಗಳಿಗಿಂತ ಹೆಚ್ಚಿನ ಕಷ್ಟದಾಯಕ ಹಾಗೂ ಅಪಾಯಕಾರಿಯನ್ನಾಗಿ ಮಾರ್ಪಡಿಸುತ್ತದೆ.
ಒಣದಾದ ಪರಿಸ್ಥಿತಿಗಳಲ್ಲಿ ತೀರಾ ಸುಲಭವಾದುದೆಂದೇ ಭಾವಿಸಲಾದ ಮಾರ್ಗದಲ್ಲಿ ಸಾಗಲು ಮಳೆಯು ಅಡ್ಡಿಯನ್ನುಂಟು ಮಾಡಬಹುದಾಗಿದ್ದರೆ ಬಿರುಹಿಮಮಳೆಗಳು ಮಾರ್ಗದ ಜಾಡನ್ನು ಮತ್ತೆ ಪಡೆಯುವುದನ್ನು ಕಷ್ಟಕರಗೊಳಿಸಬಲ್ಲವು. ಬಿರುಗಾಳಿ ಬೀಸುವ ಸಂದರ್ಭದಲ್ಲಿ ಕೇವಲ ವೀಕ್ಷಕವನ್ನು ಬಳಸುವ ಪ್ರಯೋಗವಾದಿಗಿಂತ ಮಾರ್ಗದರ್ಶನಕ್ಕಾಗಿ ದಿಕ್ಸೂಚಿಯನ್ನು ಹೊಂದಿರುವ ಪರ್ವತಾರೋಹಿಯು ಹೆಚ್ಚು ಅನುಕೂಲಗಳನ್ನು ಹೊಂದಿರುತ್ತಾನೆ. ಅಗಾಧ ವ್ಯಾಪ್ತಿಯ ಹಿಮಪದರವಿರುವ ಬಯಲುಗಳಲ್ಲಿ ಬಂಡೆಗಳ ಮೇಲಿಗಿಂತ ಹೆಚ್ಚಿನ ಪ್ರಮಾಣದಲ್ಲಿ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆಗಳು ಹೆಚ್ಚಿದ್ದರೂ, ಸಹಜವಾದ ಅಪಘಾತ ಪರಿಸ್ಥಿತಿಗಳನ್ನು ದಾಟಿ ಸುರಕ್ಷಿತವಾಗಿ ಮುಂದುವರೆಯಲು ಜಾಣ್ಮೆ ಹಾಗೂ ಅನುಭವಗಳೇ ಅತ್ಯುತ್ತಮ ಮಾರ್ಗದರ್ಶಿಗಳಾಗಿರುತ್ತವೆ.
ಬೇಸಿಗೆ ಕಾಲದಲ್ಲಿನ ಚಂಡಮಾರುತ ಮಳೆಗಳು ತೀವ್ರವಾದ ಮಿಂಚುಗಳನ್ನುಂಟು ಮಾಡಬಹುದು.[೩] ಯಾವುದೇ ಆರೋಹಿಯು ಅಕಸ್ಮಾತ್ ಶಿಖರದ ಮೇಲೆ ಅಥವಾ ಅದರ ಸಮೀಪದಲ್ಲಿ ನಿಂತಿದ್ದರೆ ಅವರು ಅದಕ್ಕೆ ಸಿಡಿಲಿಗೆ ಈಡಾಗುವ ಅಪಾಯವನ್ನು ಹೊಂದಿರುತ್ತಾರೆ. ಪರ್ವತಗಳನ್ನು ಏರುತ್ತಿರುವಾಗ ಸಿಡಿಲಿಗೆ ಜನರು ತುತ್ತಾಗಿರುವ ಹಲವು ಸಂದರ್ಭಗಳಿವೆ. ಬಹುತೇಕ ಪರ್ವತಗಳಿಂದ ಕೂಡಿದ ಪ್ರದೇಶಗಳಲ್ಲಿ ಅಲ್ಲಿನ ಬಿರುಗಾಳಿಗಳು ಬೆಳಗ್ಗೆ ಸಾಕಷ್ಟು ಹೊತ್ತಾದ ನಂತರ ಅಥವಾ ಮಧ್ಯಾಹ್ನ ಮುಂಚೆಯ ಅವಧಿಯಲ್ಲಿ ರೂಪುಗೊಳ್ಳುತ್ತವೆ. ಅನೇಕ ಆರೋಹಿಗಳು "ಪರ್ವತಪ್ರದೇಶದ ಉಪಕ್ರಮ"ವನ್ನು ಪಾಲಿಸುತ್ತಾರೆ ; ಅಂದರೆ ಬೆಳಕು ಹರಿಯುವ ಮುನ್ನವೇ ಅಥವಾ ತೀರಾ ಬೆಳಗ್ಗೆಯೇ ಪರ್ವತಗಳ ದಾರಿಯಲ್ಲಿ ಹೊರಟುಬಿಟ್ಟಿರುತ್ತಾರೆ ಬಿರುಗಾಳಿಗಳು ಹೆಚ್ಚಿನ ಚಟುವಟಿಕೆಗಳಲ್ಲಿ ತೀವ್ರತೆಯನ್ನು ಹೊಂದುವ ಹಾಗೂ ಮಿಂಚು ಹೊಡೆಯುವಿಕೆ ಹಾಗೂ ಇತರೆ ಹವಾಮಾನದ ಅಪಘಾತಗಳು ಸುರಕ್ಷತೆಗೆ ನಿರ್ದಿಷ್ಟ ಬೆದರಿಕೆಯಾಗಿ ಪರಿಣಮಿಸುವುದಕ್ಕೆ ಮುನ್ನಾ ಹೀಗೆ ಮಾಡಿರುತ್ತಾರೆ. ತೀರಾ ಜೋರಾಗಿ ಬೀಸುವ ಗಾಳಿಯು ಲಘೂಷ್ಣತೆಗೆ ಈಡಾಗುವ ಸಾಧ್ಯತೆಯನ್ನು ತ್ವರಿತಗೊಳಿಸುತ್ತದಲ್ಲದೇ, ಆಸರೆಗೆ ಬಳಸಲಾಗುವ ಗುಡಾರಗಳಂತಹಾ ಪರಿಕರಗಳಿಗೆ ಹಾನಿ ಉಂಟು ಮಾಡುತ್ತದೆ.[೩][೪] ನಿರ್ದಿಷ್ಟ ಪರಿಸ್ಥಿತಿಗಳಲ್ಲಿ, ಬಿರುಗಾಳಿಗಳು ಚಾರಣದ ಚಟುವಟಿಕೆಗಳನ್ನು ನಿಧಾನಗೊಳಿಸುವ ಅಥವಾ ನಿಲ್ಲಿಸುವಂತೆ ಮಾಡುವ ಹಾಗೆ ಜಲಪಾತಗಳನ್ನು ಕೂಡಾ ಸೃಷ್ಟಿಸಬಲ್ಲವು. ಇದಕ್ಕೆ ಗಮನಾರ್ಹವಾದ ಉದಾಹರಣೆಯೆಂದರೆ ಐಗರ್‌ನ ಮೇಲೆ ಪರಿಣಾಮ ಬೀರುವ ತೆಂಕಣ ಬಿಸಿಗಾಳಿ.
ಔನ್ನತ್ಯ
[ಬದಲಾಯಿಸಿ]ತ್ವರಿತ ಗತಿಯಿಂದ ಪರ್ವತಗಳನ್ನು ಹತ್ತುವುದು ಎತ್ತರಪ್ರದೇಶದ ಕಾಯಿಲೆ ಉಂಟಾಗಲು ದಾರಿಯಾಗಬಲ್ಲದು.[೩][೫] ಇದಕ್ಕೆ ಅತ್ಯುತ್ತಮ ಚಿಕಿತ್ಸೆ ಎಂದರೆ ತಕ್ಷಣವೇ ಅಲ್ಲಿಂದ ಇಳಿದುಬಿಡುವುದು. ಎತ್ತರದ ಪ್ರದೇಶಗಳಲ್ಲಿನ ಆರೋಹಿಯ ಧ್ಯೇಯವಾಕ್ಯವೆಂದರೆ "ಎತ್ತರಕ್ಕೆ ಏರು, ನಿದ್ದೆಯನ್ನು ಕೆಳಗೆ ಇಳಿದು ಮಾಡು" ಉನ್ನತ ಪ್ರದೇಶಗಳಿಗೆ ಹತ್ತಿಹೋಗುವುದಕ್ಕೆ ಸಂಬಂಧಿಸಿದಂತೆ ಅಲ್ಲಿಗೆ ಹೊಂದಿಕೊಳ್ಳುವಂತಹಾ ಜೀವನಕ್ರಮವನ್ನು ಪಾಲಿಸುವುದು ಆದರೆ ಮಲಗಿಕೊಳ್ಳುವುದನ್ನು ಕೆಳಗೆ ಹಿಂತಿರುಗಿಯೇ ಮಾಡಬೇಕೆಂದು ಸೂಚಿತವಾಗಿರುತ್ತದೆ. ದಕ್ಷಿಣ ಅಮೇರಿಕಾದ ಆಂಡಿಸ್ ಪರ್ವತಶ್ರೇಣಿಯ ಪ್ರದೇಶಗಳಲ್ಲಿ ಎತ್ತರದ ಪ್ರದೇಶದ ಕಾಯಿಲೆಯ ಲಕ್ಷಣಗಳನ್ನು ಗುಣಪಡಿಸಲು ಸಾಂಪ್ರದಾಯಿಕವಾಗಿ ಕೋಕಾ ಎಲೆಗಳನ್ನು ಜಗಿದು ತಿನ್ನುವ ಪ್ರಕ್ರಿಯೆಯನ್ನು ಪಾಲಿಸಲಾಗುತ್ತದೆ.
ಎತ್ತರಪ್ರದೇಶದ ಕಾಯಿಲೆಯ ಸಾಧಾರಣ ರೋಗಲಕ್ಷಣಗಳಲ್ಲಿ ತೀವ್ರತರವಾದ ತಲೆನೋವು, ನಿದ್ರಾಹೀನತೆಯ ಸಮಸ್ಯೆ, ಪಿತ್ತೋದ್ರೇಕ, ಹಸಿವಿಲ್ಲದಿರುವಿಕೆ, ನಿದ್ರಾಲಸ್ಯ ಹಾಗೂ ಮೈಕೈನೋವುಗಳ ಸಮಸ್ಯೆಗಳು ಸೇರಿವೆ. ಪರ್ವತಾಗ್ರದ ಕಾಯಿಲೆಯು HACE (ಎತ್ತರ ಪ್ರದೇಶದಲ್ಲಿ ಉಂಟಾಗುವ ಮೆದುಳಿನ ಬಾವು/ಊತ) ಹಾಗೂ HAPE (ಎತ್ತರ ಪ್ರದೇಶದಲ್ಲಿ ಉಂಟಾಗುವ ಶ್ವಾಸಕೋಶಗಳಲ್ಲಿ ಉಂಟಾಗುವ ಬಾವು) ಕಾಯಿಲೆಗಳಾಗಿ ವಿಸ್ತರಿಸುವ ಅಪಾಯವಿದ್ದು ಇವೆರಡೂ ಕಾಯಿಲೆಗಳು ೨೪ ಗಂಟೆಗಳೊಳಗಾಗಿ ಮಾರಣಾಂತಿಕವಾಗಬಲ್ಲವು.[೩][೫][೬]
ಪರ್ವತಗಳ ಎತ್ತರ ಪ್ರದೇಶದಲ್ಲಿ ವಾತಾವರಣದ ಒತ್ತಡವು ಕಡಿಮೆಯಿರುತ್ತದೆ ಆದ್ದರಿಂದ ಉಸಿರಾಡಲು ಆಮ್ಲಜನಕದ ಲಭ್ಯತೆಯು ಕಡಿಮೆಯಿರುತ್ತದೆ.[೩] ಎತ್ತರಪ್ರದೇಶದ ಕಾಯಿಲೆಗೆ ಮೂಲ ಕಾರಣ ಇದೇ ಆಗಿರುತ್ತದೆ. ಪ್ರತಿಯೊಬ್ಬರೂ ಈ ಪರಿಸ್ಥಿತಿಗೆ ಒಗ್ಗಿಕೊಳ್ಳಲೇ ಬೇಕಾಗಿರುತ್ತದೆ, ಈ ಮುಂಚೆಯೇ ಎತ್ತರದ ಪ್ರದೇಶಗಳಿಗೆ ಹೋಗಿಬಂದಿರುವ ಅತ್ಯುತ್ತಮ ಪರ್ವತಾರೋಹಿಗಳು ಕೂಡಾ ಇದಕ್ಕೆ ಹೊರತಲ್ಲ.[೭] ಸಾಧಾರಣವಾಗಿ ಹೇಳುವುದಾದರೆ ಪರ್ವತಾರೋಹಿಗಳು ೭,೦೦೦ mಗಿಂತ ಎತ್ತರದ ಪ್ರದೇಶಗಳಿಗೆ ಏರಲು ಹೋಗುವಾಗ ಆಮ್ಲಜನಕ ಕೋಶಗಳನ್ನು ಬಳಸುವುದನ್ನು ಆರಂಭಿಸುತ್ತಾರೆ . ೮೦೦೦-ಮೀಟರ್‌ಗಳಷ್ಟು ಎತ್ತರದ ಶಿಖರಗಳನ್ನು ಆಮ್ಲಜನಕದ ಹೆಚ್ಚುವರಿ ಸೌಲಭ್ಯವಿಲ್ಲದೇ ಈಗಾಗಲೇ ಏರಿರುವ ಅಪವಾದಾತ್ಮಕ ಪರ್ವತಾರೋಹಿಗಳು (ಎವರೆಸ್ಟ್ ಶಿಖರ ಸೇರಿದಂತೆ) ಬಹುಮಟ್ಟಿಗೆ ಎಚ್ಚರಿಕೆಯಿಂದ ಆಯೋಜಿಸಿಕೊಂಡಿರುವ ಹೊಂದಿಕೊಳ್ಳುವ ವ್ಯವಸ್ಥೆಯನ್ನು ಮಾಡಿಕೊಂಡಿರುತ್ತಾರೆ.
ಸೌರ ಕಿರಣ ಪ್ರಸರಣ
[ಬದಲಾಯಿಸಿ]ಔನ್ನತ್ಯವು ಹೆಚ್ಚುತ್ತಾ ಹೋದ ಹಾಗೆ ವಾತಾವರಣದ ಪದರವು ತೆಳುವಾಗುತ್ತಾ ಹೋಗಿ ಪರಿಣಾಮವಾಗಿ ನೇರಳಾತೀತ ಪ್ರಸರಣದ ತಡೆಹಿಡಿಯುವಿಕೆಯು ಕಡಿಮೆಯಾಗುತ್ತಾ ಹೋಗುವುದರಿಂದ ಸೌರ ಕಿರಣ ಪ್ರಸರಣವು ಗಮನಾರ್ಹ ಪ್ರಮಾಣದಲ್ಲಿ ಹೆಚ್ಚುತ್ತಾ ಹೋಗುತ್ತದೆ.[೩][೪] ಸೌರಕಿರಣ ಪ್ರಸರಣವನ್ನು ಪ್ರತಿಫಲಿಸುವ ಹಿಮಪದರದ ಆವರಣವು ಹಿಮ ಕುರುಡುತನ ಹಾಗೂ ಬಿಸಿಲು ಕಂದುಗಳಿಂದ ಪೀಡಿತರಾಗುವ ಅಪಾಯದ ಪರಿಣಾಮಗಳನ್ನು ೭೫%ವರೆಗೆ ವರ್ಧಿಸಬಲ್ಲದಾಗಿರುತ್ತದೆ.[೪]
೨೦೦೫ರಲ್ಲಿ ಸಂಶೋಧಕ ಹಾಗೂ ಪರ್ವತಾರೋಹಿ ಜಾನ್ ಸೆಂಪಲ್‌ರು ಟಿಬೆಟ್‌ನ ಪ್ರಸ್ಥಭೂಮಿಯಲ್ಲಿನ ಸರಾಸರಿಗಿಂತ ಮೇಲ್ಮಟ್ಟದ ಓಝೋನ್ ಸಂಗ್ರಹಗಳು ಆರೋಹಿಗಳಿಗೆ ಹೆಚ್ಚುವರಿ ಅಪಾಯಗಳನ್ನುಂಟು ಮಾಡಬಹುದಾಗಿದೆ ಎಂಬ ಅಂಶವನ್ನು ಸಾಧಿಸಿ ತೋರಿಸಿದರು.[೮]
ಜ್ವಾಲಾಮುಖೀಯ ಚಟುವಟಿಕೆ
[ಬದಲಾಯಿಸಿ]ಹಲವು ಪರ್ವತಗಳು ದ್ವೀಪಗಳಲ್ಲಿನ ಬಾಗುಗಳಲ್ಲಿ ಹಾಗೂ ಆಂಡೀಸ್ ಪರ್ವತಶ್ರೇಣಿಯ ಕೆಲ ಭಾಗಗಳಲ್ಲಿ ಕಂಡುಬರುವ ಉನ್ನತ ಶಿಖರಗಳಾಗಿ ರೂಪುಗೊಳ್ಳುವ ಅನೇಕ ಸ್ತರೀಕೃತ ಜ್ವಾಲಾಮುಖಿಗಳ ವಿಚಾರದಲ್ಲಿರುವ ಹಾಗೆಯೇ ಸಕ್ರಿಯ ಅಗ್ನಿಪರ್ವತಗಳಾಗಿರುತ್ತವೆ. ಇಂತಹಾ ಜ್ವಾಲಾಮುಖಿ ಪರ್ವತಗಳಲ್ಲಿ ಕೆಲವು ಅಗ್ನಿ ಕಾರಿದರೆ ಜ್ವಾಲಾಮುಖಿಯ ಮಣ್ಣಿನ ಹರಿವು, ಉಷ್ಣರೂಪಿತ ಶಿಲಾಪ್ರವಾಹ, ಬಂಡೆಗಳ ಕುಸಿತ, ಶಿಲಾರಸ ಲಾವಾದ ಹರಿವು, ಭಾರೀ ಪ್ರಮಾಣದ ಬಂಡೆಯ ಚೂರುಗಳ ಹರಿವು, ಜ್ವಾಲಾಮುಖೀಯ ಸಿಡಿತಗಳನ್ನು ಹೊರಹಾಕುವಿಕೆ ಹಾಗೂ ವಿಷಕಾರಕ ಅನಿಲಗಳ ಹೊರಹಾಕುವಿಕೆಯಂತಹಾ ಅಪಘಾತಗಳನ್ನು ಉಂಟುಮಾಡಬಲ್ಲವು.
ಪರ್ವತಾರೋಹಣದ ಶೈಲಿಗಳು
[ಬದಲಾಯಿಸಿ]ಪರ್ವತಾರೋಹಣದಲ್ಲಿ ಎರಡು ಪ್ರಧಾನ ಶೈಲಿಗಳು ಕಂಡುಬರುತ್ತವೆ: ಸಾಹಸಪೂರ್ವಕ ಚಾರಣ ಹಾಗೂ ಪರ್ವತಾರೋಹಣ .
ಯುರೋಪ್‌ನಲ್ಲಿ ಪರ್ವತಗಳ ಆರೋಹಣವನ್ನು ಪರ್ವತಾರೋಹಣವೆಂದು ಕರೆಯಲಾಗುತ್ತದೆ. ಅಮೇರಿಕಾ ರಾಷ್ಟ್ರಗಳಲ್ಲಿ ಈ ಪದಕ್ಕೆ ನೀರ್ಗಲ್ಲುಗಳ ಏರುವಿಕೆ , ಬಂಡೆಗಳ ಏರುವಿಕೆಗಳ ಮಿಶ್ರವಿಧ ಹಾಗೂ ಆರೋಹಿಗಳು ಎಲ್ಲಾ ಸಮಯದಲ್ಲೂ ತಮ್ಮ ಸಂಪೂರ್ಣ ಹೊರೆಗಳನ್ನು ಹೊತ್ತುಕೊಂಡು ಹೋಗುವ ಮಿಶ್ರ ಏರುವಿಕೆಗಳನ್ನು ಒಳಗೊಂಡ ಪರ್ವತ ಚಾರಣದ ಒಂದು ನಿರ್ದಿಷ್ಟ ಶೈಲಿಯನ್ನು ಸೂಚಿಸುತ್ತದೆ. ಅಮೇರಿಕಾ ರಾಷ್ಟ್ರಗಳಲ್ಲಿ ಬಳಸುವ ವಿಶೇಷ ಪದ ಪರ್ವತಾರೋಹಣದ ಅರ್ಥವು ತಮ್ಮ ಹೊರೆಗಳನ್ನು ಹೊರಲು ಹಾಗೂ ಭೋಜನವನ್ನು ತಯಾರಿಸಲು ಆರೋಹಿಗಳು ಹಮಾಲಿಗಳನ್ನು, ಹೊರೆ ಹೊರುವ ಪ್ರಾಣಿಗಳನ್ನು, ಅಡಿಗೆಯವರು, etc. ಮುಂತಾದವರನ್ನು ಬಳಸುವ (ಹಿಮಾಲಯ ಪ್ರದೇಶಗಳಲ್ಲಿ ವಾಡಿಕೆಯಾಗಿ ಬಳಸುವ ಅರ್ಥದಲ್ಲಿ) ಸಾಹಸಯಾತ್ರೆ ಶೈಲಿಯ ಚಾರಣದ ವಿರುದ್ಧಾರ್ಥವನ್ನು ಧ್ವನಿಸುತ್ತದೆ. ಹಿಮಾಲಯ ಪ್ರದೇಶದಲ್ಲಿನ ಸಾಹಸಪೂರ್ವಕ ಚಾರಣ ಶೈಲಿಯ ಚಾರಣದ ವ್ಯಾಪನೆಯು ಬಹುಮಟ್ಟಿಗೆ ಆ ಪ್ರದೇಶದಲ್ಲಿನ ಪರ್ವತಗಳ ಪರಿಸರದ ಸ್ವರೂಪದ ಮೇಲೆ ಅವಲಂಬಿತ ಅಂಶವಾಗಿರುತ್ತದೆ. ಏಕೆಂದರೆ ಹಿಮಾಲಯದ ಪ್ರಧಾನ ಶಿಬಿರಗಳ ಚಾರಣವನ್ನು ಕೈಗೊಳ್ಳಲಿಕ್ಕೆ ದಿನಗಳು ಅಥವಾ ವಾರಗಳ ಅವಧಿ ಬೇಕಾಗಿರುತ್ತದೆ ಹಾಗೂ ಹಿಮಾಲಯದ ಪರ್ವತಗಳು ವಾರಗಳು ಅಥವಾ ಬಹುಶಃ ತಿಂಗಳುಗಳ ಕಾಲ ಸಹಾ ಹತ್ತಲು ತೆಗೆದುಕೊಳ್ಳಬಹುದಾಗಿದ್ದು ಭಾರೀ ಸಂಖ್ಯೆಯ ಸಿಬ್ಬಂದಿಗಳು ಹಾಗೂ ಅಪಾರ ಆಹಾರ ಸರಬರಾಜುಗಳ ಅಗತ್ಯವಿರುತ್ತದೆ. ಇದರಿಂದಾಗಿಯೇ ಸಾಹಸಪೂರ್ವಕ ಶೈಲಿಯ ಚಾರಣವನ್ನು ಆಗ್ಗಾಗ್ಗೆ ಹಿಮಾಲಯದಲ್ಲಿರುವ ಅಗಾಧವಾದ ಹಾಗೂ ಪ್ರತ್ಯೇಕವಾಗಿರುವ ಶಿಖರಗಳಿಗೆ ಕೈಗೊಳ್ಳಲಾಗುತ್ತದೆ. ಯುರೋಪ್ ಹಾಗೂ ಉತ್ತರ ಅಮೇರಿಕಾಗಳಲ್ಲಿ ಸಾಹಸಪೂರ್ವಕ ಚಾರಣಗಳ ಅಗತ್ಯವು ಕಡಿಮೆಯಿರುತ್ತದೆ ಏಕೆಂದರೆ ಅಲ್ಲಿರುವ ಪರ್ವತಗಳನ್ನು ಸುಲಭವಾಗಿ ಕಾರುಗಳು ಅಥವಾ ವಾಯುಮಾರ್ಗದ ಮೂಲಕ ತಲುಪಬಹುದಾಗಿದ್ದು ಅವುಗಳಿರುವ ಕಡಿಮೆ ಎತ್ತರವನ್ನು ಒಂದು ಅಥವಾ ಎರಡು ದಿನಗಳಲ್ಲಿ ಚಾರಣ ಮಾಡಬಹುದಾಗಿರುತ್ತದೆ.
ಚಾರಣಗಳ ಎರಡು ವಿಧಗಳ ನಡುವಿನ ವ್ಯತ್ಯಾಸಗಳು ಮತ್ತು ಅನುಕೂಲಗಳು ಹಾಗೂ ಅನನುಕೂಲಗಳು ಈ ಕೆಳಕಂಡಂತಿವೆ:[೧]
ಸಾಹಸಪೂರ್ವಕ ಚಾರಣ
[ಬದಲಾಯಿಸಿ]- ಎತ್ತರದಲ್ಲಿರುವ ಶಿಬಿರಗಳಿಗೆ ಅಗತ್ಯ ಸರಬರಾಜುಗಳನ್ನು ನೀಡಲು ಶಿಬಿರಗಳ ನಡುವೆ ಹಲವು ಬಾರಿ ಸಾಗಾಟಗಳನ್ನು ಕೈಗೊಳ್ಳಬೇಕಾಗಿರುತ್ತದೆ
- ಶಿಬಿರಗಳ ನಡುವೆ ಹೆಚ್ಚಿನ ಸರಬರಾಜು ಅಗತ್ಯವಾಗಿರುವ ಕಾರಣ ತಂಡದ ಗಾತ್ರಗಳು ಕೂಡಾ ಪರ್ವತಪ್ರದೇಶ ಶೈಲಿಯ ಚಾರಣಗಳಿಗಿಂತ ಸಾಕಷ್ಟು ದೊಡ್ಡದಾಗಿರುತ್ತದೆ
- ಶಿಬಿರಗಳ ನಡುವೆ ಸತತವಾಗಿ ಓಡಾಡುವುದರಿಂದ ಆಗುವ ಅಪಾಯಗಳನ್ನು ಕಡಿಮೆಗೊಳಿಸಲು ಸ್ಥಿರವಾದ ಮಾರ್ಗಗಳನ್ನು ಹಲವು ವೇಳೆ ಬಳಸಲಾಗುತ್ತದೆ
- ಪರ್ವತದ ಮೇಲೆ ಸಾಕಷ್ಟು ಸಮಯವನ್ನು ಕಳೆಯಲಾಗುತ್ತದೆ ಹಾಗೂ ಅದರಿಂದಾಗಿಯೇ ಆರೋಹಿಗಳು ಹೆಚ್ಚಿನ ಅವಧಿಯ ಮಟ್ಟಿಗೆ ಸಹಜವಾದ ಅಪಘಾತಗಳ ಸಾಧ್ಯತೆಗೆ ಒಳಪಟ್ಟಿರುತ್ತಾರೆ
- ಆಗ್ಗಾಗ್ಗೆ ಪೂರಕ ಆಮ್ಲಜನಕವನ್ನು ಬಳಸಲಾಗುತ್ತಿರುತ್ತದೆ
ಪರ್ವತಾರೋಹಣ
[ಬದಲಾಯಿಸಿ]- ಆರೋಹಿಗಳು ಕೇವಲ ಒಮ್ಮೆ ಮಾತ್ರವೇ ಮಾರ್ಗವನ್ನು ಆರೋಹಿಸುತ್ತಾರೆ ಏಕೆಂದರೆ ಅವರು ಶಿಬಿರಗಳ ನಡುವೆ ಸತತವಾಗಿ ಆಹಾರ ಸರಬರಾಜುಗಳನ್ನು ಒದಗಿಸುವ ಅಗತ್ವವಿರುವುದಿಲ್ಲ
- ಚಾರಣದ ಸಮಯದಲ್ಲಿ ಅಲ್ಪ ಪ್ರಮಾಣದ ಸರಬರಾಜನ್ನು ಮಾತ್ರವೇ ಕೈಗೊಳ್ಳಬೇಕಾಗಿರುವುದರಿಂದ ಅಗತ್ಯ ಸಿಬ್ಬಂದಿಗಳ ಪ್ರಮಾಣವೂ ಕಡಿಮೆಯಿರುತ್ತದೆ
- ಪರ್ವತಾರೋಹಣವು ಆರೋಹಿಯನ್ನು ಸಾಹಸಪೂರ್ವಕ ಚಾರಣಗಳಷ್ಟು ದೀರ್ಘಕಾಲ ಸಹಜವಾದ ಅಪಘಾತಗಳಿಗೆ ಒಡ್ಡಿಕೊಳ್ಳುವಂತೆ ಮಾಡುವುದಿಲ್ಲ ; ಆದಾಗ್ಯೂ ಸಾಹಸಪೂರ್ವಕ ಚಾರಣಗಳಿಗೆ ಸಾಪೇಕ್ಷವಾಗಿ ಇವುಗಳಲ್ಲಿ ಚಾರಣದ ವೇಗವು ಹೆಚ್ಚಿರುವುದರಿಂದ ವಾತಾವರಣಕ್ಕೆ ಒಗ್ಗಿಕೊಳ್ಳಲು ಸಮಯಾವಕಾಶ ಕಡಿಮೆಯಿರುತ್ತದೆ
- ಇವುಗಳಲ್ಲಿ ಪೂರಕ ಆಮ್ಲಜನಕವನ್ನು ಬಳಸಲಾಗುವುದಿಲ್ಲ
ತಾಣಗಳು
[ಬದಲಾಯಿಸಿ]ಪರ್ವತಾರೋಹಣವು ವಿಶ್ವದಾದ್ಯಂತ ಜನಪ್ರಿಯ ಕ್ರೀಡೆಯಾಗಿ ಮಾರ್ಪಟ್ಟಿದೆ. ಯುರೋಪ್‌ನಲ್ಲಿ ಈ ಕ್ರೀಡೆಯು ಬಹುಮಟ್ಟಿಗೆ ಆಲ್ಪ್‌ಸ್ ಪರ್ವತ ಶ್ರೇಣಿಯಲ್ಲಿ ಆರಂಭಗೊಂಡಿದ್ದು, ಈಗಲೂ ಅಲ್ಲಿಯೇ ವಿಪರೀತ ಜನಪ್ರಿಯತೆಯನ್ನು ಹೊಂದಿದೆ. ಆರೋಹಿಗಳು ಪದೇಪದೇ ಏರಲು ಇಷ್ಟಪಡುವ ಇತರೆ ಗಮನಾರ್ಹ ಪರ್ವತ ಶ್ರೇಣಿಗಳಲ್ಲಿ ಕಾಕಾಸಸ್, ಪೈರಿನೀಸ್ , ರಿಲಾ ಪರ್ವತಗಳು, ಟಟ್ರಾ ಪರ್ವತಗಳು ಮತ್ತು ಕಾರ್ಪಾಥಿಯನ್ ಪರ್ವತಗಳು ಸೇರಿವೆ. ಉತ್ತರ ಅಮೇರಿಕಾದಲ್ಲಿ ಆರೋಹಿಗಳು ರಾಕಿ ಪರ್ವತಗಳು, ಕ್ಯಾಲಿಫೋರ್ನಿಯಾದ ಸಿಯೆರ್ರಾ ನೆವಡಾ, ಶಾಂತ ಮಹಾಸಾಗರದ ವಾಯುವ್ಯ ದಿಕ್ಕಿನ ಜಲಪಾತಗಳು ಹಾಗೂ ಅಲಾಸ್ಕಾದ ಉನ್ನತ ಶ್ರೇಣಿಗಳಿಗೆ ಚಾರಣವನ್ನು ಪದೇ ಪದೇ ಮಾಡಲು ಇಚ್ಛಿಸುತ್ತಾರೆ. ಹಿಮಾಲಯ, ಕರಕೋರಮ್ , ಪಾಮಿರ್ಸ್ ಮತ್ತು ಟಿಯೆನ್ ಷಾನ್‌ಗಳೂ ಸೇರಿದಂತೆ ಏಷ್ಯಾದ ಹಾಗೂ ಆಂಡೀಸ್ ಪರ್ವತಶ್ರೇಣಿಗಳಲ್ಲಿ ಕೈಗೊಳ್ಳಲಾಗುವ ಚಾರಣಗಳಿಗೆ ಸಾಧಾರಣವಾಗಿ ಬಳಸುವ ಪದಪುಂಜವಾದ ಶ್ರೇಷ್ಠ ಪರ್ವತಶ್ರೇಣಿಗಳು/ಗ್ರೇಟರ್ ರೇಂಜಸ್‌ಗಳಿಗೆ ಆರೋಹಿಗಳು ಸಾಹಸಪೂರ್ವಕ ಚಾರಣಗಳನ್ನು ಕೈಗೊಳ್ಳುವ ಬಹಳ ಹಿಂದಿನಿಂದಲೇ ಇರುವ ಸಂಪ್ರದಾಯವಿದೆ. ಹಿಂದಿನ ಕಾಲದಲ್ಲಿ ಇವುಗಳು ಪರಿಶೋಧನಾತ್ಮಕ ಯಾನಗಳು ಅಥವಾ ಪ್ರಪ್ರಥಮ ಚಾರಣದ ಪ್ರಯತ್ನಗಳಾಗಿರುತ್ತಿದ್ದವು. ಅಗ್ಗವಾದ ಸುದೀರ್ಘವಾದ ವಾಯುಯಾನಗಳ ಉದಯವಾಗುತ್ತಿದ್ದ ಹಾಗೆ, ಶ್ರೇಷ್ಠ ಪರ್ವತಶ್ರೇಣಿಗಳು/ಗ್ರೇಟರ್ ರೇಂಜಸ್‌ಗಳಲ್ಲಿ ರಜಾದಿನಗಳನ್ನು ಪರ್ವತಾರೋಹಣದಲ್ಲಿ ಕಳೆಯುವ ಯೋಜನೆಗಳನ್ನು ಹಾಕಿಕೊಳ್ಳುವುದು ಇನ್ನಷ್ಟು ಸರ್ವೇಸಾಮಾನ್ಯವಾಗಿದ್ದು ಎವರೆಸ್ಟ್ ಹಾಗೂ ವಿನ್ಸನ್ ಮಾಸ್ಸಿಫ್‌ಗಳ ಚಾರಣ ಯಾತ್ರೆಯನ್ನು (ಅಂಟಾರ್ಟಿಕಾದಲ್ಲಿರುವ ಅತಿ ಎತ್ತರದ ಪರ್ವತ) "ರಜಾದಿನ ಪ್ಯಾಕೇಜ್‌ಗಳಾಗಿ " ಪ್ರಸ್ತುತಪಡಿಸಲಾಗುತ್ತಿದೆ. ಇತರೆ ಆಸಕ್ತಿಯನ್ನುಂಟು ಮಾಡಬಹುದಾದ ಪರ್ವತಾರೋಹಣ ಪ್ರದೇಶಗಳಲ್ಲಿ ನ್ಯೂಜಿಲೆಂಡ್‌ನ ದಕ್ಷಿಣ ಆಲ್ಪ್‌ಸ್ ಪರ್ವತ ಶ್ರೇಣಿಗಳು, ಜಪಾನಿನ ಪರ್ವತ ಶ್ರೇಣಿಗಳು, ದಕ್ಷಿಣ ಕೊರಿಯಾದ ಪರ್ವತಗಳು, ಬ್ರಿಟಿಷ್ ಕೊಲಂಬಿಯಾದ ಕರಾವಳಿ ಪರ್ವತಗಳು, ಸ್ಕಾಟಿಷ್ ಹೈಲೆಂಡ್ಸ್ ಪರ್ವತಪ್ರದೇಶಗಳು ಹಾಗೂ ಸ್ಕ್ಯಾಂಡಿನೇವಿಯಾದ ವಿಶೇಷತಃ ನಾರ್ವೆಯ ಪರ್ವತಗಳು ಸೇರಿವೆ.
ಇತಿಹಾಸ
[ಬದಲಾಯಿಸಿ]- ಆತನ ಉದ್ದೇಶವು ಶಿಖರವನ್ನೇರುವುದೇ ಆಗಿತ್ತೆಯೇ ಎಂಬುದು ಸ್ಪಷ್ಟವಾಗಿ ತಿಳಿದುಬರದೇ ಇದ್ದರೂ "ಓಟ್ಜಿಯು" ಆಲ್ಫ್‌ಸ್ ಪರ್ವತದ ಕನಿಷ್ಠ ಸುಮಾರು 3,000 metres (9,800 ft)ರಷ್ಟು ಎತ್ತರವನ್ನು ೫,೩೦೦ ವರ್ಷಗಳ ಹಿಂದೆಯೇ ಏರಿದ್ದನು. ಆತನ ಅವಶೇಷಗಳು ಅಷ್ಟು ಎತ್ತರದಲ್ಲಿ ಹಿಮನದಿಯೊಂದರಲ್ಲಿ ಸಂರಕ್ಷಿತವಾಗಿದೆ.
- ಕ್ರಿಸ್ತ ಶಕದಲ್ಲಿನ ಮೊತ್ತ ಮೊದಲು ದಾಖಲಿತವಾದ ಪರ್ವತ ಚಾರಣವು ರೋಮನ್ ಚಕ್ರವರ್ತಿ ಹಡ್ರಿಯನ್‌ರು ೧೨೧ನೇ ಇಸವಿಯಲ್ಲಿ ಸೂರ್ಯೋದಯವನ್ನು ನೋಡಲೆಂದು ಎಟ್ನಾ ಶಿಖರವನ್ನು (೩,೩೫೦ m) ಏರಿದ್ದಾಗಿದೆ.
- ಅರಗಾನ್‌ನ ಪೀಟರ್ III ಎಂಬಾತನು ೧೩ನೆಯ ಶತಮಾನದ ಅಂತಿಮ ತ್ರೈಮಾಸಿಕದಲ್ಲಿ ಪೈರಿನೀಸ್ ಪರ್ವತಶ್ರೇಣಿಯ ಕ್ಯಾನಿಗೌ ಶಿಖರವನ್ನು ಏರಿದ್ದನು.
- ಪೊಪೋಕ್ಯಾಟೆಪೆಟ್ಲ್ ಶಿಖರದ ಪ್ರಪ್ರಥಮ ಆರೋಹಣವು (ಮೆಕ್ಸಿಕೋದಲ್ಲಿದ್ದು ೫,೪೨೬ mನಷ್ಟು ಎತ್ತರವಿದೆ) ಸ್ಥಳೀಯ ಬುಡಕಟ್ಟಿನ (ಟೆಕಾನುವಾಪಾಸ್) ಸದಸ್ಯರುಗಳಿಂದ ೧೨೮೯ರಲ್ಲಿ ನಡೆಸಲ್ಪಟ್ಟಿತ್ತು[ಸೂಕ್ತ ಉಲ್ಲೇಖನ ಬೇಕು]
- ಜೀನ್ ಬುರಿಡಾನ್‌ನವರು ೧೩೧೬ರ ಸುಮಾರಿಗೆ ಮಾಂಟ್ ವೆಂಟೌಕ್ಸ್‌ನ ಮೇಲೆ ಚಾರಣ ನಡೆಸಿದರು.[೯]
- ಏಪ್ರಿಲ್ ೨೬, ೧೩೩೬ರಂದು ಇಟಾಲಿಯನ್ ಕವಿ ಪೆಟ್ರಾರ್ಚ್ ತಾನು ತಮ್ಮ ಸಹೋದರ ಹಾಗೂ ಇಬ್ಬರು ಸೇವಕರೊಂದಿಗೆ ಮಾಂಟ್ ವೆಂಟೌಕ್ಸ್‌ನ (೧,೯೦೯ m) ಶೃಂಗವನ್ನು ಏರಿದೆವು ಎಂದು ಬರೆದಿದ್ದನು. ಆತನ ಈ ಸಾಹಸಯಾನದ ಕಥನವನ್ನು ನಂತರ ಆತನ ಸ್ನೇಹಿತ ಡಿಯೊನಿಗಿ ಡಿ ಬಾರ್ಗೋ ಸ್ಯಾನ್ ಸೆಪೋಲ್‌ಕ್ರೋ ಎಂಬಾತನಿಗೆ ಬರೆದ ಪತ್ರದ ರೂಪದಲ್ಲಿ ನಂತರ ನಿರೂಪಿಸಲಾಗಿತ್ತು.[೧೦]
- ಇಟಲಿಯ ಪರ್ವತಶಿಖರವಾದ ರಾಕೆಮೆಲನ್ (೩,೫೩೮ m) ಅನ್ನು ೧೩೫೮ರಲ್ಲಿ ಏರಲಾಗಿತ್ತು.
- ೧೫ನೇ ಶತಮಾನದ ಕೊನೆಗೆ ಹಾಗೂ ೧೬ನೆಯ ಶತಮಾನದ ಆದಿಯಲ್ಲಿ ಆಂಡಿಸ್ ಪರ್ವತಶ್ರೇಣಿಯಲ್ಲಿನ ಅನೇಕ ಶಿಖರಗಳ ಮೇಲೆ ಇಂಕಾ ಸಾಮ್ರಾಜ್ಯದ ನಾಗರಿಕರು ಹಾಗೂ ಅಲ್ಲಿನ ಪ್ರಜೆಗಳಿಂದ ಧಾರ್ಮಿಕ ಉದ್ದೇಶಗಳಿಗಾಗಿ ಚಾರಣಗಳನ್ನು ನಡೆಸಲಾಗಿತ್ತು. ಹಲವು ಶಿಖರಗಳ ಮೇಲೆ ಅವರು ವೇದಿಕೆಗಳು, ಗೃಹಗಳು ಹಾಗೂ ಬಲಿಪೀಠಗಳನ್ನು ನಿರ್ಮಿಸಿದ್ದರಲ್ಲದೇ ಮಾನವ ಬಲಿಗಳೂ ಸೇರಿದಂತೆ ಹಲವು ಬಲಿಗಳನ್ನು ಕೈಗೊಂಡಿದ್ದರು. ಅವರು ಚಾರಣ ಕೈಗೊಂಡಿದ್ದರೆಂದು ಖಚಿತಗೊಂಡಿರುವ ಅತ್ಯಂತ ಎತ್ತರದ ಶೃಂಗವು ಲ್ಲೂಲ್ಲಾಯ್‌ಲ್ಲಾಕೋ ಎಂಬುದಾಗಿದೆ (೬,೭೩೯ m). ಅವರು ಆಂಡಿಸ್ ಪರ್ವತಶ್ರೇಣಿಯ ಅತ್ಯುನ್ನತ ಶೃಂಗ ಆಕಾನ್‌ಕಾಗುವಾವನ್ನು (೬,೯೬೨ m) ಕೂಡಾ ಏರಿದ್ದಿರಬಹುದಾಗಿದೆ, ೫,೦೦೦ mಗೂ ಹೆಚ್ಚಿನ ಎತ್ತರದ ಈ ಶಿಖರದಲ್ಲಿ ಬಲಿಯಾಗಿದ್ದ ಬಲಿಪಶುವನ್ನು ಕೂಡಾ ಪತ್ತೆಹಚ್ಚಲಾಗಿದೆ.[೧೧]
- ಮಾಂಟ್ ಐಗೈ/ಗಿಲ್ಲೆ ಪರ್ವತದ ಚಾರಣವನ್ನು ಫ್ರಾನ್ಸ್‌ನ ಚಾರ್ಲ್ಸ್ VIIIನ ಆದೇಶದ ಪ್ರಕಾರ ೧೪೯೨ರಲ್ಲಿ ಕೈಗೊಳ್ಳಲಾಗಿತ್ತು. ೧೬ನೆಯ ಶತಮಾನದ ಮಾನವತಾವಾದಿಗಳು ಪರ್ವತಗಳ ಬಗ್ಗೆ ನವೀನವಾದ ಅಭಿಪ್ರಾಯವನ್ನು ರೂಪಿಸಿಕೊಂಡಿದ್ದರು, ಆದರೆ ಜ್ಯೂರಿಚ್ ಪಂಥದ ಆಗತಾನೇ ರೂಪುಗೊಳ್ಳುತ್ತಿದ್ದ ಪರ್ವತಾರೋಹಣದ ಕಲೆಯನ್ನು ಪ್ರಕ್ಷುಬ್ಧ ಸ್ಥಿತಿಯಲ್ಲಿದ್ದ ಯುರೋಪ್‌ನ ರಾಜ್ಯಗಳು ಮೊಳಕೆಯಲ್ಲಿಯೇ ಚಿವುಟಿ ಹಾಕಿಬಿಟ್ಟವು.
- ಮಾಂಟೆ ರೋಸಾದ ನೆರೆಯಲ್ಲಿರುವ ಹಿಮಪದರ ಆವೃತ ಬಯಲಿಗೆ ಚಾರಣ ಕೈಗೊಂಡು ಅಲ್ಲಿ ವೈಜ್ಞಾನಿಕ ಅವಲೋಕನಗಳನ್ನು ಲಿಯೋನಾರ್ಡೋ ಡಾ ವಿನ್ಸಿ ಕೈಗೊಂಡನು.
- ೧೫೭೩ರಲ್ಲಿ , ಫ್ರಾನ್ಸಿಸ್ಕೋ ಡೆ ಮಾರ್ಚಿಯು ಇಟಲಿಯ ಮಧ್ಯಭಾಗದಲ್ಲಿರುವ ಗ್ರಾನ್ ಸಾಸ್ಸೋದ (೨೯೧೨m) ಶಿಖರದ ಶೃಂಗವನ್ನು ತಲುಪಿದ್ದ.
- ೧೬೪೨ರಲ್ಲಿ ಡಾರ್ಬಿ ಫೀಲ್ಡ್‌ರು ನ್ಯೂ ಹ್ಯಾಂಪ್‌ಷೈರ್‌ನಲ್ಲಿನ ಆಗ ಆಗಿಯೋಕಾಕ್‌ಹುಕ್ ಎಂದು ಕರೆಯಲಾಗುತ್ತಿದ್ದ ಮೌಂಟ್ ವಾಷಿಂಗ್ಟನ್‌ನ ಮೊತ್ತಮೊದಲ ದಾಖಲಿತ ಚಾರಣವನ್ನು ನಡೆಸಿದ್ದರು.
- ಜ್ಯೂರಿಚ್‌ನ ಕಾನ್ರಾಡ್ ಗೆಸ್ನರ್ ಮತ್ತು ಜೋಸಿಯಾಸ್ ಸಿಮ್ಲರ್‌ರವರು ಪರ್ವತಗಳಿಗೆ ಭೇಟಿ ನೀಡಿದ್ದರಲ್ಲದೇ ಅವುಗಳನ್ನು ವರ್ಣಿಸಿದ್ದರು ಮಾತ್ರವಲ್ಲ ನಿಯತವಾಗಿ ಆರೋಹಣಗಳನ್ನು ಕೈಗೊಂಡಿದ್ದರು. ಹಿಮ ಕೊಡಲಿ ಹಾಗೂ ಹಗ್ಗಗಳ ಬಳಕೆಯನ್ನು ಇದೇ ಅವಧಿಯಲ್ಲಿ ಸ್ಥಳೀಯವಾಗಿ ಕಂಡುಕೊಳ್ಳಲಾಯಿತು. ೧೭ನೆಯ ಶತಮಾನದಲ್ಲಿ ಗಮನ ಸೆಳೆಯುವಂತಹಾ ಯಾವುದೇ ಪರ್ವತ ಚಾರಣಗಳು ದಾಖಲಾಗಿಲ್ಲ.
- ೧೭೪೧ರಲ್ಲಿ ರಿಚರ್ಡ್ ಪೊಕಾಕ್ಕೆ ಹಾಗೂ ವಿಲಿಯಮ್ ವಿಂಡ್ಯಾಮ್‌ರು ಛಾಮೋನಿಕ್ಸ್ ಗೆ ಐತಿಹಾಸಿಕ ಭೇಟಿ ನೀಡಿದ್ದರು ಹಾಗೂ ಹಿಮನದಿಗಳಿಗೆ ಭೇಟಿ ನೀಡುವ ಪ್ರವೃತ್ತಿಯನ್ನು ಹುಟ್ಟುಹಾಕಿದ್ದರು.
- ೧೭೪೪ರಲ್ಲಿ ಹಿಮಪದರ ಪರ್ವತದ ನಿಜವಾದ ಚಾರಣವಾದ ಟೈಟಸ್ ಅನ್ನು ಏರಲಾಯಿತು.
- ಸ್ಥಳೀಯರ ತಂಡವೊಂದು ೧೭೭೫ರಲ್ಲಿ ಮಾಂಟ್ ಬ್ಲಾಂಕ್ ಪರ್ವತವನ್ನೇರುವ ಪ್ರಥಮ ಪ್ರಯತ್ನವನ್ನು ಮಾಡಿತು. ೧೭೮೬ರಲ್ಲಿ Dr ಮೈಕೆಲ್ ಪಾಕ್ಕರ್ಡ್ ಹಾಗೂ ಜ್ಯಾಕ್ವೆಸ್ ಬಾಲ್ಮಟ್‌ರು ಪ್ರಥಮ ಬಾರಿಗೆ ಯಶಸ್ವಿಯಾಗಿ ಶೃಂಗವನ್ನೇರಿದರು. ಮೊತ್ತಮೊದಲಿನ ಚಾರಣದ ಪ್ರವರ್ತಕರಾಗಿದ್ದ ಹಾರೇಸ್-ಬೆನೆಡಿಕ್ಟ್ ಡೆ ಸಾಷರ್/ಸಾಷ್ಯೂರ್‌ರು ಅದರ ನಂತರದ ವರ್ಷದಲ್ಲಿ ಚಾರಣವನ್ನು ಕೈಗೊಂಡರು.
- ೧೭೯೮ರಲ್ಲಿ ನಾರ್ವೆ ರಾಷ್ಟ್ರದ ಪರ್ವತ ಆರೋಹಿ , ಜೆನ್ಸ್ ಎಸ್ಮಾರ್ಕ್ ದಕ್ಷಿಣ ನಾರ್ವೆಯ ಡಾವ್ರೆಫ್‌ಜೆಲ್ ಪರ್ವತಶ್ರೇಣಿಯ ಭಾಗವಾದ ಸ್ನೋಹೆಟ್ಟಾಗೆ ಚಾರಣ ನಡೆಸಿದ ಪ್ರಥಮ ವ್ಯಕ್ತಿ ಎನಿಸಿದರು. ಅದೇ ವರ್ಷ, ನಾರ್ವೆಯ ಜೋಟೆನ್‌ಹೇಮೆನ್‌ನ ತೀರ ದಕ್ಷಿಣಕ್ಕಿರುವ ಹೊರವಲಯದಲ್ಲಿರುವ ಸಣ್ಣ ಪರ್ವತವಾದ ಬಿಟಿಹಾರ್ನ್‌ನ ಚಾರಣದ ನೇತೃತ್ವವನ್ನು ಆತ ವಹಿಸಿದ್ದನು. ೧೮೧೦ರಲ್ಲಿ ಆತನು ನಾರ್ವೆಯ ಟೆಲಿಮಾರ್ಕ್ ಎಂಬಲ್ಲಿಯ ಪರ್ವತ ಮೌಂಟ್ ಗೌಸ್ಟಾಟಾಪ್ಪೆನ್ ಅನ್ನು ಏರಿದ ಪ್ರಥಮ ವ್ಯಕ್ತಿ ಕೂಡಾ ಆಗಿದ್ದನು.
- ೧೮೦೦ರಲ್ಲಿ ಗ್ರಾಸ್‌ಗ್ಲಾಕನರ್ ಪರ್ವತವನ್ನು, ೧೮೦೪ರಲ್ಲಿ ಆರ್ಟಲರ್‌ಅನ್ನು, ೧೮೧೧ರಲ್ಲಿ ಜಂಗ್‌ಫ್ರಾವುವನ್ನು, ೧೮೧೨ರಲ್ಲಿ ಫಿನ್ಸ್‌ಟೆರಾರ್‌ಹಾರ್ನ್‌ಅನ್ನು ಮತ್ತು ೧೮೧೩ರಲ್ಲಿ ಬ್ರೀಟ್‌ಹಾರ್ನ್‌ಅನ್ನು ಏರಲಾಯಿತು. ಇದಾದ ನಂತರ ಪ್ರವಾಸಿಗರು ಚಾರಣಗಳನ್ನು ಕೈಗೊಳ್ಳುವ ಪ್ರವೃತ್ತಿಯನ್ನು ಪ್ರದರ್ಶಿಸಿದ ಪರಿಣಾಮವಾಗಿ ಪರ್ವತಪ್ರದೇಶದ ಮಾರ್ಗದರ್ಶಕರ ಸಂಸ್ಥೆಯು ಅಸ್ತಿತ್ವಕ್ಕೆ ಬಂದಿತು.
- ಸರ್ ಜಾನ್ ಹರ್ಷೆಲ್ ಎಂಬ ಬ್ರಿಟಿಷ್ ವಿಜ್ಞಾನಿಯು, ೧೮೨೪ರಲ್ಲಿ ಚಾರಣವನ್ನು ಕೈಗೊಂಡನು ಮಾತ್ರವಲ್ಲದೇ ಅದೇ ವರ್ಷದ ಜುಲೈ ೨೩ರಂದು ಮೌಂಟ್ ಎಟ್ನಾ ಪರ್ವತದ ಎತ್ತರವನ್ನು ಬಾರೋಮೀಟರ್ ಮಾಪಕದ ಮುಖಾಂತರ ಅಳೆದನು.
- ೧೮೯೭ರಲ್ಲಿ ಆಂಡಿಸ್ ಪರ್ವತ ಶ್ರೇಣಿಯ ಅತ್ಯುನ್ನತ ಶಿಖರ ಅಕಾನ್‌ಕಾಗುವಾದ (೨೨,೮೩೧ ಅಡಿಗಳು) ಚಾರಣವನ್ನು ಮೊತ್ತಮೊದಲ ಬಾರಿಗೆ ಕೈಗೊಳ್ಳಲಾಯಿತು ಹಾಗೂ ೧೮೯೮ರಲ್ಲಿ ಉತ್ತರ ಅಮೇರಿಕಾದ ರಾಕಿ ಪರ್ವತಶ್ರೇಣಿಯ ಗ್ರಾಂಡ್ ಟೆಟನ್ ಶಿಖರವನ್ನು (೧೩,೭೪೭ ಅಡಿಗಳು) ಏರಲಾಯಿತು.
- ೧೮೯೭ರಲ್ಲಿ ಇಟಲಿಯಲ್ಲಿ ಡ್ಯೂಕ್ ಆಗಿದ್ದ ಅಬ್ರುಜ್ಜಿ ಎಂಬಾತನು ಅಲಾಸ್ಕಾ ಮತ್ತು ಕೆನಡಾಗಳ ನಡುವಿನ ಗಡಿಯಲ್ಲಿರುವ ಮೌಂಟ್ St.ಎಲಿಯಾಸ್/ಇಲಿಯಾಸ್ ಶಿಖರದ(೧೮,೦೦೯ ಅಡಿಗಳು ) ಪ್ರಥಮ ಆರೋಹಣವನ್ನು ಕೈಗೊಂಡನು ಹಾಗೂ ೧೯೦೬ರಲ್ಲಿ ಪೂರ್ವ ಆಫ್ರಿಕಾದಲ್ಲಿನ ರುವೆನ್‌ಝೋರಿ ಪರ್ವತಶ್ರೇಣಿಯ ಮಾರ್ಘೆರಿಟಾ ಎಂಬ ಶಿಖರವನ್ನು (೧೬,೭೯೫ ಅಡಿಗಳು) ಕೈಗೊಂಡನು. ೧೯೧೩ರಲ್ಲಿ ಓರ್ವ ಅಮೇರಿಕನ್ ಪ್ರಜೆ ಹಡ್ಸನ್ ಸ್ಟಕ್ ಎಂಬಾತ ಉತ್ತರ ಅಮೇರಿಕಾದಲ್ಲಿನ ಅತ್ಯುನ್ನತ ಶೃಂಗವಾದ ಅಲಾಸ್ಕಾದಲ್ಲಿನ ಮೌಂಟ್ ಮೆಕಿನ್ಲೇ (೨೦,೩೨೦ ಅಡಿಗಳು) ಶಿಖರವನ್ನೇರಿದನು.
- ಸಿಟ್ಲಾಲ್‌ಟೆಪೆಟ್ಲ್ (ಮೆಕ್ಸಿಕೋದಲ್ಲಿ ೫೭೨೦ m ಎತ್ತರ) ಶಿಖರವನ್ನು ಮೊತ್ತಮೊದಲಿಗೆ ೧೮೪೮ರಲ್ಲಿ F. ಮೇನಾರ್ಡ್ & G. ರೆನಾಲ್ಡ್‌ಸ್‌ರವರು ಏರಿದ್ದರು.
- ಕ್ರೀಡೆಯಾಗಿ ವ್ಯವಸ್ಥಿತವಾದ ಪರ್ವತಾರೋಹಣವು ೧೮೫೪ರಲ್ಲಿ ವೆಟ್ಟರ್‌ಹಾರ್ನ್ ಶಿಖರವನ್ನು ಸರ್ ಆಲ್‌ಫ್ರೆಡ್ ವಿಲ್ಸ್‌ರ ಚಾರಣದಿಂದ ವಾಡಿಕೆಯಾಗಿ ಆರಂಭವಾಯಿತು. ೧೮೫೫ರಲ್ಲಿ ಮಾಂಟೆ ರೋಸಾ ಶಿಖರದ ಪ್ರಥಮ ಚಾರಣವನ್ನು ಕೈಗೊಳ್ಳಲಾಗಿತ್ತು.
- ಆಲ್ಪೈನ್ ಕ್ಲಬ್ ಅನ್ನು ೧೮೫೭ರಲ್ಲಿ ಲಂಡನ್‌ನಲ್ಲಿ ಸ್ಥಾಪಿಸಲಾಯಿತು, ಹಾಗೂ ಕೆಲವೇ ಸಮಯದಲ್ಲಿ ಇತರೆ ಐರೋಪ್ಯ ರಾಷ್ಟ್ರಗಳಲ್ಲಿಯೂ ಇದನ್ನೇ ಅನುಸರಿಸಲಾಯಿತು. ೧೮೬೫ರಲ್ಲಿ ಎಡ್ವರ್ಡ್ ವೈಂಪರ್‌ರ ಮ್ಯಾಟ್ಟರ್‌ಹಾರ್ನ್ ಶಿಖರದ ಚಾರಣವು ಪರ್ವತಪ್ರದೇಶ ವಿಜಯೋತ್ಸವದ ಪ್ರಮುಖ ಅವಧಿಯಾದ ಪರ್ವತಾರೋಹಣದ ಸುವರ್ಣಯುಗದ ಅಂತ್ಯವನ್ನು ದಾಖಲಿಸಿತು, ಇದೇ ಅವಧಿಯಲ್ಲಿ ಚಾರಣದ ಕಲೆಯನ್ನು ಕಂಡುಹಿಡಿಯಲಾಗಿತ್ತು ಹಾಗೂ "ಪರಿಪೂರ್ಣಗೊಳಿಸಲಾಗಿತ್ತು", ವೃತ್ತಿಪರ ಮಾರ್ಗದರ್ಶಕರ ಸಂಸ್ಥೆಯು ರೂಪುಗೊಂಡಿತ್ತು ಹಾಗೂ ಅವರ ಕರ್ತವ್ಯಗಳನ್ನು ನಿಗದಿಪಡಿಸಲಾಗಿತ್ತು.
- ಇತರೆ ಶಿಖರಗಳೆಡೆಗೆ ವ್ಯಾಪಿಸುತ್ತಾ ಹೋದ ಪೈರೆನೀಸ್ ಪರ್ವತಶ್ರೇಣಿಯ ಪರಿಶೋಧನೆಯು ಆಲ್ಪ್‌ಸ್ ಪರ್ವತ ಶ್ರೇಣಿಯ ಪರಿಶೋಧನೆಗಳಿಗೆ ಸಮಕಾಲೀನವಾಗಿತ್ತು. ಇದಾದ ನಂತರ ಕಾಕಾಸಸ್‌ನ ಚಾರಣವನ್ನು ಕೈಗೊಳ್ಳಲಾಯಿತು ಇದಕ್ಕೆ ಪ್ರಮುಖ ಪ್ರೇರಕರೆಂದರೆ D. W. ಫ್ರೆಷ್‌ಫೀಲ್ಡ್‌ರಾಗಿದ್ದರು; ೧೮೬೮ರಲ್ಲಿ ಮೊತ್ತಮೊದಲು ಇದಕ್ಕೆ ಪರಿಶೋಧನೆ ನಡೆಸುತ್ತಿದ್ದ ಆರೋಹಿಗಳು ಭೇಟಿ ನೀಡಿದ್ದರು ನಂತರ ೧೮೮೮ರ ವೇಳೆಗೆ ಅದರಲ್ಲಿನ ಬಹುತೇಕ ಎಲ್ಲಾ ಶಿಖರಗಳ ಚಾರಣಗಳನ್ನು ನಡೆಸಲಾಗಿತ್ತು.
- ಎಡೆಲ್‌ವಿಯೆಸ್ ಕ್ಲಬ್ ಸಾಲ್ಜ್‌ಬರ್ಗ್‌ಅನ್ನು ಸಾಲ್ಜ್‌ಬರ್ಗ್‌ನಲ್ಲಿ ೧೮೮೧ನೇ ಇಸವಿಯಲ್ಲಿ ಸ್ಥಾಪಿಸಲಾಯಿತು ಹಾಗೂ ಇದರಲ್ಲಿ ೩ ಸದಸ್ಯರಿದ್ದರು, ಅವರು ಎರಡು ಎಂಟು-ಸಾವಿರ ಮೀಟರ್‌ಗಳೆತ್ತರದ ಶಿಖರಗಳಾದ ಬ್ರಾಡ್‌ಪೀಕ್ (೧೯೫೭) ಮತ್ತು ಧೌಲಾಗಿರಿ (೧೯೬೦)ಗಳಲ್ಲಿ ಚಾರಣ ಕೈಗೊಂಡಿದ್ದ ಪ್ರಥಮರಾಗಿದ್ದರು.
- Rev. W. S. ಗ್ರೀನ್‌ರು ಸೆಲ್‌ಕಿರ್ಕ್ ಪರ್ವತಗಳ ಸಾಹಸಪೂರ್ವಕ ಚಾರಣ ನಡೆಸಿದಾಗ ತರಬೇತಿ ಪಡೆದ ಆರೋಹಿಗಳು ೧೮೮೮ರಲ್ಲಿ ಉತ್ತರ ಅಮೇರಿಕಾದಲ್ಲಿನ ಪರ್ವತಗಳ ಕಡೆಗೆ ತಮ್ಮ ಗಮನವನ್ನು ಹರಿಸಿದರು. ಆಗಿನಿಂದ ಶೋಧನೆಯು ತ್ವರಿತವಾಗಿ ಸಾಗಲು ಆರಂಭಿಸಿತು ಹಾಗೂ ಅನೇಕ ಆಂಗ್ಲ ಮತ್ತು ಅಮೇರಿಕನ್ ಚಾರಣ ತಂಡಗಳು ಉನ್ನತವಾದ ಶಿಖರಗಳಲ್ಲಿ ಬಹುತೇಕವುಗಳ ಸರ್ವೇಕ್ಷಣೆ ಕೈಗೊಂಡಿದ್ದಾರೆ; ಪೈಕ್ಸ್ ಪೀಕ್ ಶೃಂಗ (೧೪,೧೧೦ ft) ೧೮೨೦ರಲ್ಲಿ Mr. E. ಜೇಮ್ಸ್ ಮತ್ತು ತಂಡದವರಿಂದ ಏರಲ್ಪಟ್ಟಿದ್ದರೆ, Mt. ಸೇಂಟ್ ಎಲಿಯಾಸ್/ಇಲಿಯಾಸ್ ಶೃಂಗವು (೧೮,೦೦೮ ft) ೧೮೯೭ರಲ್ಲಿ ಅಬ್ರುಜ್ಜಿಯ ಡ್ಯೂಕ್ ಹಾಗೂ ಆತನ ತಂಡದವರಿಂದ ಏರಲ್ಪಟ್ಟಿತ್ತು. ಚಿಂಬೊರಾಜೋ ಶಿಖರವನ್ನು ಏರಿದಾಗ ಹಾಗೂ ಈಕ್ವೆಡಾರ್‌ನ ಪರ್ವತಶ್ರೇಣಿಯನ್ನು ವೈಂಪರ್ ಅನ್ವೇಷಿಸಿದಾಗ ೧೮೭೯-೧೮೮೦ರವರೆಗಿನ ಅವಧಿಯಲ್ಲಿ ಆಂಡೀಸ್ ಪರ್ವತಶ್ರೇಣಿಯ ಅತ್ಯುನ್ನತ ಶಿಖರದ ಪರಿಶೋಧನೆಯು ಆರಂಭವಾಯಿತು. ಚಿಲಿ ಮತ್ತು ಅರ್ಜೆಂಟಿನಾಗಳ ಮಧ್ಯೆ ಇರುವ ಕಾರ್ಡಿಲ್ಲೆರಾ ಶಿಖರಕ್ಕೆ ೧೮೮೩ರಲ್ಲಿ Dr. ಗಸ್ಸ್‌ಫೆಲ್ಡ್‌ಟ್‌ರು ಭೇಟಿಯಿತ್ತಿದ್ದರು, ಇವರು ಮೈಪೋವನ್ನು(೧೭,೨೭೦ ft) ಏರಿದ್ದರು ಹಾಗೂ ಅಕಾನ್‌ಕಾಗುವಾವನ್ನು (೨೨,೮೪೧ ft) ಏರಲು ಪ್ರಯತ್ನಿಸಿದ್ದರು. ಆ ಶಿಖರವನ್ನು ಮೊತ್ತಮೊದಲಿಗೆ ೧೮೯೭ರಲ್ಲಿ ಫಿಟ್ಜ್‌ಗೆರಾಲ್ಡ್ ಸಾಹಸಚಾರಣಿಗರು ಏರಿದ್ದರು.
- ಬೊಲಿವಿಯಾದ ಭಾಗದಲ್ಲಿರುವ ಆಂಡೀಸ್ ಪರ್ವತಶ್ರೇಣಿಯನ್ನು ಮೊತ್ತಮೊದಲಿಗೆ ಸರ್ ವಿಲಿಯಮ್ ಮಾರ್ಟಿನ್ ಕಾನ್ವೇ ಎಂಬುವವರು ೧೮೯೮ರಲ್ಲಿ ಕೈಗೊಂಡಿದ್ದರು. ಚಿಲಿಯವರ ಹಾಗೂ ಅರ್ಜೆಂಟೀನಾದವರ ಚಾರಣಯಾತ್ರೆಗಳು ೧೮೮೫-೧೮೯೮ರ ಅವಧಿಯಲ್ಲಿ ಕಾರ್ಡಿಲ್ಲೆರಾದ ದಕ್ಷಿಣ ಭಾಗದ ಸಂರಚನೆಯನ್ನು ಶ್ರುತಪಡಿಸಿದ್ದವು. ಟಿಯೆರ್ರಾ ಡೆಲ್ ಫ್ಯೂಗೋ ಪರ್ವತಗಳಿಗೆ ಕಾನ್ವೇ ಭೇಟಿ ನೀಡಿದ್ದರು.
- ನ್ಯೂಜಿಲೆಂಡ್‌ನ ದಕ್ಷಿಣದ ಪರ್ವತಶ್ರೇಣಿಗೆ ಮೊತ್ತಮೊದಲಿಗೆ ೧೮೮೨ರಲ್ಲಿ Rev. W. S. ಗ್ರೀನ್‌ರು ಭೇಟಿ ನೀಡಿದ್ದರು, ಹಾಗೂ ಅದಾದ ಕೆಲವೇ ಸಮಯದಲ್ಲಿ ನ್ಯೂಜಿಲೆಂಡ್ ಆಲ್ಪೈನ್ ಕ್ಲಬ್ ಅನ್ನು ಸ್ಥಾಪಿಸಲಾಯಿತು ಹಾಗೂ ಅವರುಗಳ ಚಟುವಟಿಕೆಗಳಿಂದಾಗಿ ಆ ಪರ್ವತಶ್ರೇಣಿಯ ಶೋಧನೆಗಳು ಮುಂದುವರೆದವು. ೧೮೯೫ರಲ್ಲಿ ಮೇಜರ್ ಎಡ್ವರ್ಡ್ ಆರ್ಥರ್ ಫಿಟ್ಜ್‌ಗೆರಾಲ್ಡ್‌ರು ಈ ಪರ್ವತಶ್ರೇಣಿಯಲ್ಲಿ ಒಂದು ಪ್ರಮುಖ ಯಾನವನ್ನು ಕೈಗೊಂಡಿದ್ದರು. ಟಾಮ್ ಫೈಫೆ ಮತ್ತವರ ತಂಡವು ೧೮೯೪ರ ಕ್ರಿಸ್‌ಮಸ್ ದಿನದಂದು ಔರಾಕಿ/ಮೌಂಟ್ ಕುಕ್ ಶಿಖರವನ್ನು ಏರಿದ್ದರು, ಇದು ಫಿಟ್ಜ್‌ಗೆರಾಲ್ಡ್‌ರು ಮೊತ್ತಮೊದಲ ಚಾರಣಿಗರಲ್ಲವೆಂಬುದನ್ನು ಸಾಬೀತುಪಡಿಸಿದೆ. ಫಿಟ್ಜ್‌ಗೆರಾಲ್ಡ್‌ರು ಸ್ವಿಸ್ ರಾಷ್ಟ್ರದ ತಮ್ಮ ಮಾರ್ಗದರ್ಶಿ ಮ್ಯಾಟ್‌ಥಿಯಾಸ್ ಝರ್‌ಬ್ರಿಗೆನ್‌ರೊಡನೆ ಬ್ರಿಟನ್ ಮಾರ್ಗವಾಗಿ ಶಿಖರವನ್ನೇರಲು ಬಂದಿದ್ದರು. ಮೌಂಟ್ ಕುಕ್ ಶಿಖರದ ಶೃಂಗವನ್ನು ಮುಟ್ಟಲಾಗದ ತಮ್ಮ ಪರಾಭವದಿಂದ ಅಸಮಾಧಾನಗೊಂಡಿದ್ದ ಅವರು ಅದನ್ನು ಏರಲು ನಿರಾಕರಿಸಿ ಅದೇ ಪ್ರದೇಶದಲ್ಲಿನ ಇತರ ಶಿಖರಗಳೆಡೆಗೆ ಗಮನ ಹರಿಸಿದರು. ನಂತರ ಮುಂದುವರೆಸಿದ ಚಾರಣದಲ್ಲಿ ಝುಬ್ರಿಗೆನ್ ಮೌಂಟ್ ಕುಕ್ ಶಿಖರವನ್ನು ಏಕಾಂಗಿಯಾಗಿ ಏರಿ ಈಗ ತಮ್ಮ ಹೆಸರನ್ನು ಹೊತ್ತಿರುವ ದಿಬ್ಬದವರೆಗೆ ತಲುಪಿದ್ದರು.
- ಉತ್ತರ ಧೃವ ಪ್ರದೇಶಗಳಲ್ಲಿ ಪರಿಶೋಧನೆಗೊಳಪಟ್ಟ ಮೊದಲಿನ ಪರ್ವತಗಳಲ್ಲಿ ೧೮೯೬ ಮತ್ತು ೧೮೯೭ರಲ್ಲಿ ಸರ್ W. M. ಕಾನ್ವೇಯವರು ಕೈಗೊಂಡ ಸ್ಪಿಟ್ಸ್‌ಬರ್ಗೆನ್ ಚಾರಣವು ಸೇರಿದೆ.
- ಆಫ್ರಿಕಾದ ಅತ್ಯುನ್ನತ ಶಿಖರಗಳಲ್ಲಿ ಖಿಲಿಮಾಂಜರೋವನ್ನು Dr. ಹಾನ್ಸ್ ಮೇಯರ್‌ರು ೧೮೮೯ರಲ್ಲಿ ಏರಿದ್ದರು, Mt. ಕೀನ್ಯಾ ಶಿಖರವನ್ನು ೧೮೯೯ರಲ್ಲಿ ಹಾಲ್‌ಫರ್ಡ್ ಜಾನ್ ಮ್ಯಾಕಿಂಡರ್ [೧೨] ಏರಿದ್ದರು ಹಾಗೂ ೧೯೦೦ರಲ್ಲಿ H. J. ಮೂರ್ ಎಂಬುವವರು ರುವೆನ್‌ಝೋರಿಯ ಶಿಖರವೊಂದನ್ನು ಏರಿದ್ದರು.
- ಏಷ್ಯಾದ ಪರ್ವತಗಳನ್ನು ಮೊತ್ತಮೊದಲಿಗೆ ಬ್ರಿಟಿಷ್ ಸಾಮ್ರಾಜ್ಯದ ಆದೇಶದ ಮೇರೆಗೆ ಸಮೀಕ್ಷೆ ನಡೆಸಲಾಗಿತ್ತು. ೧೮೯೨ರಲ್ಲಿ ಸರ್ ವಿಲಿಯಂ ಮಾರ್ಟಿನ್ ಕಾನ್ವೇಯವರು ಹಿಮಾಲಯದ ಕಾರಾಕೋರಮ್ ಅನ್ನು ಶೋಧಿಸಿದರು ಹಾಗೂ ಅದರಲ್ಲಿ 23,000 ft (7,000 m) ರಷ್ಟು ಎತ್ತರಕ್ಕೆ ಏರಿದ್ದರು ೧೮೯೫ರಲ್ಲಿ ಆಲ್ಬರ್ಟ್ F. ಮಮ್ಮೆರಿಯವರು ನಂಗಾ ಪರ್ವತ ಶಿಖರವನ್ನು ಏರಲು ಪ್ರಯತ್ನಿಸುವಾಗ ಮರಣಿಸಿದ್ದರು, ೧೮೯೯ರಲ್ಲಿ D. W. ಫ್ರೆಷ್‌ಫೀಲ್ಡ್‌ರು ಸಿಕ್ಕಿಂನ ಹಿಮಪದರಗಳಿಂದ ಕೂಡಿದ ಪ್ರದೇಶಗಳಿಗೆ ಸಾಹಸಯಾನ ಕೈಗೊಂಡಿದ್ದರು. ೧೮೯೯, ೧೯೦೩, ೧೯೦೬ ಮತ್ತು ೧೯೦೮ನೇ ಇಸವಿಗಳಲ್ಲಿ Mrs ಫ್ಯಾನ್ನೀ ಬುಲ/ಲ್ಲಕ್ ವರ್ಕ್‌ಮನ್ ಎಂಬಾಕೆಯು ನನ್ ಕುನ್/ಕನ್ ಶಿಖರಗಳಲ್ಲಿ (೨೩,೩೦೦ ft) ಒಂದನ್ನೂ ಸೇರಿದಂತೆ ಹಿಮಾಲಯ ಪರ್ವತಶ್ರೇಣಿಗಳ ಚಾರಣವನ್ನು ಕೈಗೊಂಡಿದ್ದರು. ಮೇಜರ್ Hon. C. G. ಬ್ರೂಸ್‌ರು ಅನೇಕ ಗೂರ್ಖಾ ಸೈನಿಕರಿಗೆ ನಿಪುಣ ಪರ್ವತಾರೋಹಿಗಳಾಗುವಂತೆ ತರಬೇತಿ ನೀಡಿದ್ದರು ಹಾಗೂ ಅವರುಗಳಿಂದ ಸಾಕಷ್ಟು ಪ್ರಮಾಣದ ಪರಿಶೋಧನೆಗಳು ನಡೆದಿದ್ದವು.
- ಸಿಯೆರ್ರಾ ಕ್ಲಬ್‌ಅನ್ನು ಕ್ಯಾಲಿಫೋರ್ನಿಯಾದ ಸ್ಯಾನ್ ಫ್ರಾನ್ಸಿಸ್ಕೋನಲ್ಲಿ ೧೮೯೨ರಲ್ಲಿ ಜಾನ್ ಮುಯಿರ್ ಎಂಬುವವರು ಸ್ಥಾಪಿಸಿದ್ದರು.[೧೩]
- ೧೯೦೨ರಲ್ಲಿ ರಕ್‌ಸ್ಯಾಕ್ ಕ್ಲಬ್‌ಅನ್ನು ಇಂಗ್ಲೆಂಡ್‌ನ ಮ್ಯಾಂಚೆಸ್ಟರ್‌ನಲ್ಲಿ ಸ್ಥಾಪಿಸಲಾಗಿತ್ತು.
- ಅಮೇರಿಕನ್ ಆಲ್ಪೈನ್ ಕ್ಲಬ್‌ಅನ್ನು ೧೯೦೨ರಲ್ಲಿ ಸ್ಥಾಪಿಸಲಾಗಿತ್ತು.
- ೧೯೦೨ನೇ ಇಸವಿಯಲ್ಲಿ, ಪರ್ವತಾರೋಹಿ ಆಸ್ಕರ್ ಎಕೆನ್‌ಸ್ಟೀನ್ ಮತ್ತು ಲೇಖಕ ಹಾಗೂ ಐಂದ್ರಜಾಲಿಕ ಅಲೆಯಿಸ್ಟರ್ ಕ್ರೌಲೆಯವರುಗಳ ನೇತೃತ್ವದಲ್ಲಿ ಕೈಗೊಂಡಿದ್ದ ಎಕೆನ್‌ಸ್ಟೀನ್-ಕ್ರೌಲೆ ಸಾಹಸಚಾರಣವು ಚೋಗೋ ರಿ(ಪ್ರಸ್ತುತ ಪಶ್ಚಿಮ ರಾಷ್ಟ್ರಗಳಲ್ಲಿ K೨ ಎಂದು ಹೆಸರಾಗಿದೆ) ಶಿಖರವನ್ನೇರುವ ಪ್ರಥಮ ಪ್ರಯತ್ನವನ್ನು ಕೈಗೊಂಡಿತ್ತು. ಅವರು ಹವಾಮಾನದ ತೊಂದರೆ ಹಾಗೂ ಇತರೆ ಅಪಘಾತಗಳ ಕಾರಣದಿಂದಾಗಿ ಹಿಂದಿರುಗುವ ಮುನ್ನ 22,000 feet (6,700 m)ರಷ್ಟು ಎತ್ತರವನ್ನು ತಲುಪಿದ್ದರು.
- ೧೯೦೫ನೇ ಇಸವಿಯಲ್ಲಿ , ಅಲೆಯಿಸ್ಟರ್ ಕ್ರೌಲೆಯು ವಿಶ್ವದಲ್ಲಿಯೇ ಮೂರನೇ ಅತ್ಯುನ್ನತ ಶಿಖರವಾದ ಕಾಂಚೆನ್‌ಜುಂಗಾಗೆ ಕೈಗೊಂಡ ಪ್ರಥಮ ಚಾರಣ ಅಭಿಯಾನದ ನೇತೃತ್ವವನ್ನು ವಹಿಸಿದ್ದರು. ಆ ತಂಡದ ನಾಲ್ವರು ಸದಸ್ಯರು ಹಿಮಕುಸಿತವೊಂದರಲ್ಲಿ ಮರಣಿಸಿದರು. ಕೆಲವು ಹೇಳಿಕೆಗಳ ಪ್ರಕಾರ ಅವರು ಮರಳುವ ಮುನ್ನಾ ಸುಮಾರು 21,300 feet (6,500 m)ರ ಎತ್ತರವನ್ನು ತಲುಪಿದ್ದರು, ಆದಾಗ್ಯೂ ಕ್ರೌಲೆಯ ಆತ್ಮಚರಿತ್ರೆಯ ಪ್ರಕಾರ ಅವರು ಸುಮಾರು 25,000 feet (7,600 m)ರ ಎತ್ತರವನ್ನು ತಲುಪಿದ್ದರು.
- ೧೯೨೦ರ ದಶಕದಲ್ಲಿ ನಡೆದ ಕೆಲ ಒಲಿಂಪಿಕ್ ಪಂದ್ಯಾವಳಿಗಳಲ್ಲಿ ಪರ್ವತಾರೋಹಣಕ್ಕೆ ಕೂಡಾ ಪ್ರಶಸ್ತಿಗಳನ್ನು ನಿಗದಿಪಡಿಸಲಾಗಿತ್ತು, ಆದರೆ ವಿಶ್ವ ಸಮರ IIರ ನಂತರ ಇವುಗಳನ್ನು ನಿಲ್ಲಿಸಲಾಯಿತು.[೧೪]
- ೧೯೨೦ರ ದಶಕದಲ್ಲಿ ಬ್ರಿಟಿಷರು ಮೌಂಟ್ ಎವರೆಸ್ಟ್ ಶಿಖರವನ್ನು ಏರಲು ಅನೇಕ ಪ್ರಯತ್ನಗಳನ್ನು ಮಾಡಿದರು. ೧೯೨೧ರಲ್ಲಿ ಮೊದಲು ಕೈಗೊಂಡ ಚಾರಣವು ಬಹುತೇಕ ಪರಿಶೋಧನಾತ್ಮಕವಾಗಿತ್ತಾದರೆ ೧೯೨೨ರ ಸಾಹಸಚಾರಣವು ಮೂರನೇ ಶೃಂಗದಲ್ಲಿ ಹಿಮಕುಸಿತವೊಂದರಲ್ಲಿ ಏಳು ಜನ ಹಮಾಲಿಗಳು ಮರಣಿಸಿದುದರಿಂದಾಗಿ ರದ್ದುಗೊಳಿಸಿ ಮರಳುವ ಮುನ್ನಾ 8,320 metres (27,300 ft)ರಷ್ಟು ಎತ್ತರವನ್ನು ತಲುಪಿದ್ದರು. ೧೯೨೪ರ ಸಾಹಸಚಾರಣದಲ್ಲಿ ಮತ್ತೊಂದು ಎತ್ತರವನ್ನು ತಲುಪಿದ ದಾಖಲೆಯು ಸಾಧಿತವಾದರೂ ಜಾರ್ಜ್ ಮಲ್ಲೋರಿ ಹಾಗೂ ಆಂಡ್ರ್ಯೂ ಇರ್ವಿನ್‌ರವರುಗಳು ಅಂತಿಮ ಯತ್ನದಲ್ಲಿ ಕಣ್ಮರೆಯಾದುದರಿಂದ ಶಿಖರವನ್ನು ತಲುಪುವುದು ಸಾಧ್ಯವಾಗಲಿಲ್ಲ.
- ೧೯೩೮ರಲ್ಲಿ ಐಗರ್ ಶಿಖರದ ಉತ್ತರ ಮುಖವನ್ನು ಆಂಡ್ರಿಯಾಸ್ ಹೆಕ್‌ಮೇರ್, ವಿಗ್ಗೆರ್ಲ್ ವಾರ್ಗ್, ಫ್ರಿಟ್ಜ್ ಕಾಸ್ಪರೆಕ್ ಹಾಗೂ ಹೇಯ್ನ್‌ರಿಚ್ ಹ್ಯಾರರ್‌ರು ಪ್ರಪ್ರಥಮ ಬಾರಿಗೆ ಏರಿದರು. ಈ ಮಾರ್ಗವನ್ನು "ಆಲ್ಪ್‌ಸ್ ಪರ್ವತಶ್ರೇಣಿಯ ಕೊನೆಯ ಭಾರೀ ಸಮಸ್ಯೆ " (ಇರುವ ಅನೇಕವುಗಳಲ್ಲಿ ಒಂದು) ಎಂದು ಹೆಸರಿಸಲಾಗಿತ್ತು.
- ೧೯೫೦ರ ದಶಕದಲ್ಲಿ ಎರಡನ್ನು ಹೊರತುಪಡಿಸಿ ಎಂಟು ಸಾವಿರ ಮೀಟರ್‌ಗಳಷ್ಟು ಎತ್ತರವಿರುವ ಎಲ್ಲಾ ಶಿಖರಗಳ ಪ್ರಥಮ ಆರೋಹಣವನ್ನು ಸಾಧಿಸಲಾಯಿತು ಮಾರಿಸ್ ಹರ್ಜೋಗ್ ಮತ್ತು ಲೂಯಿಸ್ ಲ್ಯಾಚೆನಲ್‌ರು ೧೯೫೦ರಲ್ಲಿ ಕೈಗೊಂಡ ಅನ್ನಪೂರ್ಣ ಶಿಖರದ ಚಾರಣದೊಂದಿಗೆ ಇದನ್ನು ಆರಂಭಿಸಲಾಯಿತು. ವಿಶ್ವದ ಅತ್ಯುನ್ನತ ಪರ್ವತ (ಸರಾಸರಿ ಸಮುದ್ರ ಮಟ್ಟಕ್ಕಿಂತ ಮೇಲೆ ), ಮೌಂಟ್ ಎವರೆಸ್ಟ್ (೮,೮೪೮ m)ಅನ್ನು ಮೊತ್ತಮೊದಲಿಗೆ ಮೇ ೨೯, ೧೯೫೩ರಂದು ಸರ್ ಎಡ್ಮಂಡ್ ಹಿಲೇರಿ ಮತ್ತು ತೇನ್‌ಸಿಂಗ್ ನೋರ್ಗೆ ನೇಪಾಳದ ದಕ್ಷಿಣ ಭಾಗದಿಂದ ಚಾರಣವನ್ನು ಮಾಡಿದರು. ಕೆಲವೇ ತಿಂಗಳುಗಳ ನಂತರ ಹರ್ಮನ್ ಬಹ್ಲ್‌ರವರು ನಂಗಾ ಪರ್ವತ ಶಿಖರದ ಮೊದಲ ಚಾರಣವನ್ನು (೮,೧೨೫ m), ಮುತ್ತಿಗೆ ಶೈಲಿಯ ಚಾರಣದಲ್ಲಿ ಶೃಂಗದೆಡೆಗೆ ಗಮನಾರ್ಹ ಮಟ್ಟದ ಏಕಾಂಗಿ ಪ್ರಯತ್ನವಾಗಿ ಇದು ಸಂಪೂರ್ಣಗೊಂಡಿತ್ತು, ಮೊತ್ತಮೊದಲ ಏರಿಕೆಯಲ್ಲಿಯೇ ಏಕಾಂಗಿಯಾಗಿ ಶೃಂಗವನ್ನು ಮುಟ್ಟಲು ಸಾಧ್ಯವಾದ ಎಂಟು ಸಾವಿರ ಮೀಟರ್‌ಗಳನ್ನು ಮೀರಿದೆತ್ತರದ ಏಕೈಕ ಶಿಖರವಿದು. ವಿಶ್ವದ ಎರಡನೇ ಅತ್ಯುನ್ನತ ಶೃಂಗವಾದ K೨ವಿನ (೮,೬೧೧ m), ಚಾರಣವನ್ನು ಮೊತ್ತಮೊದಲಿಗೆ ೧೯೫೪ರಲ್ಲಿ ಲಿನೋ ಲಾಸೆಡೆಲ್ಲಿ ಮತ್ತು ಆಚಿಲ್ಲೆ ಕಂಪಾಗ್ನೊನಿರವರುಗಳು ಸಾಧಿಸಿದರು. ೧೯೬೪ರಲ್ಲಿ ಅಂತಿಮ ಎಂಟು ಸಾವಿರ ಮೀಟರ್‌ಗಳನ್ನು ಮೀರಿದೆತ್ತರದ ಶಿಖರವೆಂದರೆ ಶೀಶಾ/ಷೀಷಾಪಾಂಗ್ಮಾ (೮,೦೧೩ m) ಆಗಿದ್ದು ಇದು ೮,೦೦೦ ಮೀಟರ್‌ಗಳಿಗೆ ಮೀರಿದ ಶಿಖರಗಳಲ್ಲಿ ಇದೇ ಕಡಿಮೆ ಎತ್ತರದ್ದಾಗಿದೆ.
ಹೆಚ್ಚಿನ ಓದಿಗಾಗಿ
[ಬದಲಾಯಿಸಿ]- ಷೆರ್ರಿ B. ಆರ್ಟನರ್, ಲೈಫ್ & ಡೆತ್ ಆನ್ Mt. ಎವರೆಸ್ಟ್ : ಷೆರ್ಪಾಸ್ & ಹಿಮಾಲಯನ್ ಮೌಂಟೆನೀರ್ (ಪ್ರಿನ್ಸ್‌ಟನ್ ಯೂನಿವರ್ಸಿಟಿ ಪ್ರೆಸ್ , ೧೯೯೯).
- ಮೌರೀಸ್ ಇಸ್ಸರ್‌ಮನ್ ಮತ್ತು ಸ್ಟೀವರ್ಟ್ ವೀವರ್ , ಫಾಲನ್ ಜಯಂಟ್ಸ್ : ದ ಹಿಸ್ಟರಿ ಆಫ್ ಹಿಮಾಲಯನ್ ಮೌಂಟೆನೀರಿಂಗ್ ಫ್ರಮ್ ದ ಏಜ್ ಆಫ್ ಎಂಪೈರ್ ಟು ದ ಏಜ್ ಆಫ್ ಎಕ್ಸ್‌ಟ್ರೀಮ್ಸ್ (ಯಾಲೆ ಯೂನಿವರ್ಸಿಟಿ ಪ್ರೆಸ್ , ೨೦೦೮). ISBN ೯೭೮-೦-೩೦೦-೧೧೫೦೧-೭
ಇವನ್ನೂ ಗಮನಿಸಿ
[ಬದಲಾಯಿಸಿ]- ಆರೋಹಿಗಳ ಪಟ್ಟಿ
- ಹಿಮಜಾರಾಟ ಪರ್ವತಾರೋಹಣ
- ಚಾರಣ ಪದಪುಂಜಗಳ ಪದಕೋಶ
- ಚಾರಣ ಸಂಗತಿಗಳ ಪಟ್ಟಿ
- ಪರ್ವತಗಳ ಸಂರಕ್ಷಣೆ
- ಶಿಖರಗಳ ಸರಂಜಾಮು/ಸರಕುಗಳು
- ಏರಲಾಗದಿರುವ ಅತ್ಯುನ್ನತ ಪರ್ವತ
- ಪರ್ವತ ಜೋಪಡಿ
- ಪರ್ವತಾರೋಹಿಗಳು (ಪೆಸಿಫಿಕ್ NW)
- ಹೊರಾಂಗಣ ಶಿಕ್ಷಣ
- ಚಾರಣದ ನಾಯಕ
- ಚಾರಣ ಹಗ್ಗದ ಸುಲಭಗಮ್ಯತೆ
- UIAA - ಇಂಟರ್‌ನ್ಯಾಷನಲ್ ಫೆಡರೇಷನ್ ಆಫ್ ಮೌಂಟೆನೀರಿಂಗ್ ಅಂಡ್ ಕ್ಲೈಂಬಿಂಗ್ ಸಂಸ್ಥೆ
- ಕ್ಯಾಲಿಫೋರ್ನಿಯಾ ಪರ್ವತಾರೋಹಣ ಸಮೂಹ
- ಪರ್ವತಕ್ಕೆ ಸಂಬಂಧಿಸಿದ ಸಾಕ್ಷ್ಯಚಿತ್ರ
- ಪರ್ವತಾರೋಹಣದ ಸುವರ್ಣಯುಗ
ಉಲ್ಲೇಖಗಳು
[ಬದಲಾಯಿಸಿ]- ↑ ೧.೦ ೧.೧ Lua error in ಮಾಡ್ಯೂಲ್:Citation/CS1/Date_validation at line 632: attempt to compare nil with number.
- ↑ "UIAA Activities". UIAA. Archived from the original on 2011-05-11. Retrieved 2011-03-27
{{cite journal}}
: Cite journal requires|journal=
(help)CS1 maint: postscript (link) - ↑ ೩.೦ ೩.೧ ೩.೨ ೩.೩ ೩.೪ ೩.೫ ೩.೬ Cymerman, A; Rock, PB. "Medical Problems in High Mountain Environments. A Handbook for Medical Officers". USARIEM-TN94-2. US Army Research Inst. of Environmental Medicine Thermal and Mountain Medicine Division Technical Report. Archived from the original on 2009-04-23. Retrieved 2009-03-05.
{{cite journal}}
: Cite journal requires|journal=
(help)CS1 maint: multiple names: authors list (link) - ↑ ೪.೦ ೪.೧ ೪.೨ Hamilton, AJ. "Biomedical Aspects of Military Operations at High Altitude". USARIEM-M-30/88. US Army Research Inst. of Environmental Medicine Thermal and Mountain Medicine Division Technical Report. Archived from the original on 2009-06-29. Retrieved 2009-03-05.
{{cite journal}}
: Cite journal requires|journal=
(help) - ↑ ೫.೦ ೫.೧ Roach, Robert; Stepanek, Jan; and Hackett, Peter. (2002). "24". Acute Mountain Sickness and High-Altitude Cerebral Edema. In: Medical Aspects of Harsh Environments. Vol. 2. Washington, DC. Archived from the original on 2009-01-11. Retrieved 2009-01-05.
{{cite book}}
: More than one of|location=
and|place=
specified (help)CS1 maint: location missing publisher (link) CS1 maint: multiple names: authors list (link) - ↑ Roach, James M. and Schoene, Robert B. (2002). "25". High-Altitude Pulmonary Edema. In: Medical Aspects of Harsh Environments. Vol. 2. Washington, DC. Archived from the original on 2009-01-11. Retrieved 2009-01-05.
{{cite book}}
: More than one of|location=
and|place=
specified (help)CS1 maint: location missing publisher (link) CS1 maint: multiple names: authors list (link) - ↑ Muza, SR; Fulco, CS; Cymerman, A (2004). "Altitude Acclimatization Guide". US Army Research Inst. of Environmental Medicine Thermal and Mountain Medicine Division Technical Report (USARIEM-TN-04-05). Archived from the original on 2009-04-23. Retrieved 2009-03-05.
{{cite journal}}
: CS1 maint: multiple names: authors list (link) - ↑ ಪರ್ವತಗಳಿಂದ ಕೂಡಿದ ಪ್ರಸ್ಥಭೂಮಿಯು ಟಿಬೆಟ್‌ನ ಸುತ್ತಲೂ ಓಜೋನ್ ಮಂಡಲವನ್ನು ರೂಪಿಸುತ್ತಲಿದೆ
- ↑ ಲಿನ್ ಥಾರ್ನ್‌ಡೈಕ್ , ರೆನಾಸ್ಯಾನ್ಸ್ ಆರ್ ಪ್ರಿರೆನಾಸ್ಯಾನ್ಸ್, ಜರ್ನಲ್ ಆಫ್ ದ ಹಿಸ್ಟರಿ ಆಫ್ ಐಡಿಯಾಸ್ , Vol. ೪, No. ೧. (Jan., ೧೯೪೩), pp. ೬೯-೭೪.
- ↑ ದ ಆಸೆಂಟ್ ಆಫ್ ಮೌಂಟ್ ವೆಂಟೌಕ್ಸ್ http://www.idehist.uu.se/distans/ilmh/Ren/ren-pet-ventoux.htm Archived 2011-09-30 ವೇಬ್ಯಾಕ್ ಮೆಷಿನ್ ನಲ್ಲಿ. http://www.fordham.edu/halsall/source/petrarch-ventoux.html Archived 2011-05-12 ವೇಬ್ಯಾಕ್ ಮೆಷಿನ್ ನಲ್ಲಿ. http://petrarch.petersadlon.com/read_letters.html?s=pet೧೭.html Archived 2020-08-08 ವೇಬ್ಯಾಕ್ ಮೆಷಿನ್ ನಲ್ಲಿ.
- ↑ Cameron, Ian (1990). Kingdom of the Sun God: a history of the Andes and their people. New York: Facts on File. pp. 174–175. ISBN 0-8160-2581-9.
- ↑ Mackinder, Halford John (1900). "A Journey to the Summit of Mount Kenya, British East Africa". The Geographical Journal. 15 (5): 453–476. doi:10.2307/1774261. Retrieved 2007-05-28.
{{cite journal}}
: Unknown parameter|month=
ignored (help) - ↑ ಕೋಹೆನ್ , ಮೈಕೆಲ್ P., ದ ಹಿಸ್ಟರಿ ಆಫ್ ದ ಸಿಯೆರ್ರಾ ಕ್ಲಬ್ ೧೮೯೨-೧೯೭೦ (ಸಿಯೆರ್ರಾ ಕ್ಲಬ್ ಬುಕ್ಸ್ , ಸ್ಯಾನ್ ಫ್ರಾನ್ಸಿಸ್ಕೋ , ೧೯೮೮) ISBN ೦-೮೭೧೫೬-೭೩೨-೬
- ↑ ಯಾವ ಸಂಗತಿಗಳು ಒಲಿಂಪಿಕ್ ಪಂದ್ಯಗಳಿಗೆ ಸಂಬಂಧಿಸಿವೆ? Archived 2011-05-11 ವೇಬ್ಯಾಕ್ ಮೆಷಿನ್ ನಲ್ಲಿ. Sports Reference.com,ನಲ್ಲಿ ಒಲಿಂಪಿಕ್ಸ್ ೨೦೦೮
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಆರೋಹಿಯ ಪದಕೋಶ
- ಇಂಟರ್‌ನ್ಯಾಷನಲ್ ಮೌಂಟೆನೇರಿಂಗ್ ಅಂಡ್ ಕ್ಲೈಂಬಿಂಗ್ ಫೆಡರೇಷನ್ (UIAA) - ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ - IOC ಇಂದ ಮಾನ್ಯತೆ ಪಡೆದ ಪರ್ವತಾರೋಹಣ ಮತ್ತು ಚಾರಣಕ್ಕೆ ಸಂಬಂಧಿಸಿದ ಅಧಿಕೃತ ಸಂಸ್ಥೆ
- ಬ್ರಿಟಿಷ್ ಪರ್ವತಾರೋಹಣ ಸಮಿತಿ
- ಸ್ಕಾಟ್ಲೆಂಡ್ನ ಪರ್ವತಾರೋಹಣ ಸಮಿತಿ
- Pages with script errors
- Articles with inconsistent citation formats
- CS1 errors: missing periodical
- CS1 maint: postscript
- CS1 maint: multiple names: authors list
- CS1: long volume value
- CS1 errors: redundant parameter
- CS1 maint: location missing publisher
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- CS1 errors: unsupported parameter
- Articles with hatnote templates targeting a nonexistent page
- Articles with unsourced statements from February 2007
- Articles with invalid date parameter in template
- Articles with unsourced statements from April 2010
- Articles with unsourced statements from May 2009
- Commons link is on Wikidata
- ಪರ್ವತಾರೋಹಣ
- ಚಾರಣ ತಂತ್ರಗಳು
- ಕ್ರೀಡೆ