ಲಿಯನಾರ್ಡೊ ಡ ವಿಂಚಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಲಿಯನಾರ್ಡೊ ಡ ವಿಂಚಿ
Portrait of Leonardo by Francesco Melzi
ಜನನ
ಲಿಯನಾರ್ಡೊ ಡಿ ಸೆರ್ ಪಿಯೆರೋ ಡ ವಿಂಚಿ

ಏಪ್ರಿಲ್ ೧೫, ೧೪೫೨
ಇಟಲಿಯ ವಿಂಚಿ, ಅಂದಿನ ಫ್ಲಾರೆನ್ಸ್ ಗಣರಾಜ್ಯ
ಮರಣಮೇ ೨, ೧೫೧೯
ಆಮ್ಬೋಯಿಸ್, ಫ್ರಾನ್ಸ್
ರಾಷ್ಟ್ರೀಯತೆಇಟಾಲಿಯನ್
ಚಳುವಳಿಪುನರುತ್ಥಾನಡ ಪರ್ವ ಕಾಲ
Signature
೧೫೧೨-೧೫೧೫ ಅವಧಿಯಲ್ಲಿ ಲಿಯನಾರ್ಡೊ ಡ ವಿಂಚಿ ರಚಿಸಿದ ಸ್ವಚಿತ್ರ

ಲಿಯನಾರ್ಡೊ ಡ ವಿಂಚಿ (ಏಪ್ರಿಲ್ ೧೫, ೧೪೫೨-ಮೇ ೨, ೧೫೧೯) ಇಟ್ಯಾಲಿಯನ್ ನವೋದಯ ವಾಸ್ತುಶಿಲ್ಪಿ, ಸಂಗೀತಗಾರ, ಶರೀರ ರಚನಾ ಶಾಸ್ತ್ರಜ್ಞ, ಸಂಶೋಧಕ, ಶಿಲ್ಪಿ, ರೇಖಾಗಣಿತ ಶಾಸ್ತ್ರಜ್ಞ, ಯಂತ್ರಶಿಲ್ಪಿ ಮತ್ತು ವರ್ಣಚಿತ್ರಗಾರ. ಇವರನ್ನು ಆದರ್ಶ "ನವೋದಯ ಮನುಷ್ಯ" ಮತ್ತು ಹಲವಾರು ವಿಷಗಳಲ್ಲಿ ಇವರು ತೋರಿರುವ ಅಮಿತ ಕುತೂಹಲ, ಆಸಕ್ತಿ ಮತ್ತು ಸೃಜನಶೀಲತೆಯಿಂದಾಗಿ ಸಾರ್ವತ್ರಿಕವಾಗಿ ಮೇಧಾವಿ ಎಂದು ಪರಿಗಣಿಸಲಾಗಿದೆ. ಇವರನ್ನು ಈ ಜಗತ್ತು ಕಂಡ ಅತಿ ಶ್ರೇಷ್ಠ ವರ್ಣಚಿತ್ರಗಾರ ಎಂದು ಕೂಡ ಸಾಮಾನ್ಯವಾಗಿ ಪರಿಗಣಿಸಲಾಗುತ್ತದೆ. ಇವರು ವಿಶ್ವವಿಖ್ಯಾತ ಮೋನಾಲಿಸಾ ಮತ್ತು ಲಾಸ್ಟ್ ಸಪ್ಪರ್ ವರ್ಣಚಿತ್ರಗಳು ರಚಿಸಿದಲ್ಲದೆ ಹೆಲಿಕಾಪ್ಟರ್, ಯುದ್ದ ಟ್ಯಾಂಕ್‌, ಸೌರಶಕ್ತಿ ಬಳಕೆ ಇತ್ಯಾದಿ ಈ ಕಾಲದ ಸಂಶೋಧನೆಗಳ ಕುರಿತು ಶತಮಾನಗಳ ಹಿಂದೆಯೇ ವಿನ್ಯಾಸಗಳನ್ನು ರಚಿಸಿದ್ದರು. ಇವರ ವೈಯಕ್ತಿಕ ಪುಸ್ತಕಗಳಲ್ಲಿ, ಶರೀರ ರಚನಾ ಶಾಸ್ತ್ರ, ಖಗೋಳಶಾಸ್ತ್ರ , ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯಗಳ ಕುರಿತು ಅನೇಕ ವಿಚಾರಗಳು, ಟಿಪ್ಪಣಿಗಳು ಮತ್ತು ಚಿತ್ರಗಳಿವೆ.

ಅಪ್ರತಿಮ ಪ್ರಾಜ್ಞತೆ[ಬದಲಾಯಿಸಿ]

ಮೊನಾಲೀಸಾಳ ಆ ತೇಜಃಪೂರ್ಣ ನಗೆಗೆ ಮಾರುಹೋಗದಿರುವರುಂಟೆ? ಕ್ರಿಸ್ತನ ಲಾಸ್ಟ್ ಸಪ್ಪರ್ ತಿಳಿಯದಿರುವವರೇ ಇಲ್ಲ. ಈ ಮೇರು ಕೃತಿಗಳ ಮಹಾನ್ ಸೃಷ್ಟಿಕರ್ತರಾದ ಲಿಯನಾರ್ಡೋ ಡ ವಿಂಚಿ ಈ ವಿಶ್ವ ಕಂಡ ಅಮೋಘ ಪ್ರತಿಭೆ. ಅಂತಹ ವೈವಿಧ್ಯಪೂರ್ಣ ಬಹುಮುಖ ಪ್ರತಿಭಾಪೂರ್ಣತೆ ಒಂದು ರೀತಿಯಲ್ಲಿ ಅದ್ವೀತಯವಾದದ್ದು ಎಂದರೂ ಸರಿಯೇ. ನವೋದಯದ ಹರಿಕಾರರೆಂಬ ಪ್ರಸಿದ್ಧಿಯ ಇವರು ತಿಳಿಯದೆ ಇದ್ದುದೇ ಇಲ್ಲ ಎಂಬಷ್ಟು ಪ್ರಾಜ್ಞರು. ಪ್ರತಿವಿಚಾರವನ್ನೂ ಆಳವಾಗಿ ಅರಿಯಬೇಕು ಎಂಬ ವೈಚಾರಿಕ ದಾಹ ಮತ್ತು ಕುತೂಹಲ ಇವರ ಬದುಕಿನ ಪ್ರಧಾನ ಅಂಶಗಳಾಗಿವೆ.

ಜೀವನ[ಬದಲಾಯಿಸಿ]

ಲಿಯನಾರ್ಡೋ ಡ ವಿಂಚಿ ಇಟಲಿಯ ವಿಂಚಿ ಎಂಬಲ್ಲಿ ಏಪ್ರಿಲ್ 15, 1452ರ ವರ್ಷದಲ್ಲಿ ಜನಿಸಿದರು. ಆತನ ತಂದೆ ಪಿಯೇರೋ ಡಾ ವಿಂಚಿ ಆ ಕಾಲದ ನ್ಯಾಯಪಂಡಿತರಾಗಿದ್ದರು. ತಾಯಿ ಕ್ಯಾಟರಿನ್ಸ್. ಲಿಯನಾರ್ಡೋ 1469ರ ವರ್ಷದಲ್ಲಿ ಫ್ಲಾರೆನ್ಸ್ ನಗರಕ್ಕೆ ಹೋಗಿ ತನ್ನ ಚಿಕ್ಕಪ್ಪನ ಆಶ್ರಯದಲ್ಲಿದ್ದರು.

ಕಲೆಯಲ್ಲಿ ಅಭ್ಯಾಸ ಮತ್ತು ದೂರದೃಷ್ಟಿ[ಬದಲಾಯಿಸಿ]

ಮೊದಲಿಗೆ ಆಂಡ್ರಿ ಡೆಲ್ ವೆರಾಶಿಯೊ ಎಂಬ ಶಿಲ್ಪಿಯ ಬಳಿ ಕಲೆಯನ್ನು ಅಭ್ಯಾಸ ಮಾಡಿ, ನಂತರ ಮಿಲಿಟರಿ ಇಂಜಿನಿಯರಾಗಿ ನೇಮಕಗೊಂಡರು. ತಮ್ಮ ಬಿಡುವಿನ ವೇಳೆಯಲ್ಲಿ ವಿಜ್ಞಾನ ಸಂಶೋಧಕನಾಗಿ ನೂರಾರು ಉಪಕರಣಗಳನ್ನು ರೂಪಿಸಿದ ಅವರು ರಸ್ತೆ, ಕಾಲುವೆ, ಲಾಯ,ಚರ್ಚು ಮುಂತಾದುವುಗಳ ವಿನ್ಯಾಸ ರೂಪಿಸಿದ್ದಲ್ಲದೆ, ಒಂದು ಜಲಗಡಿಯಾರವನ್ನೂ ರಚಿಸಿದ್ದರು. ಇಂದು ಬಳಸುವ ಬಾಲ್‌ಬೇರಿಂಗ್‌ಗಳ ಕಲ್ಪನೆಕೂಡಾ ಅವರಿಗಿತ್ತು. ಇಷ್ಟೇ ಅಲ್ಲದೆ ಆಧುನಿಕ ಯುಗದ ಅನ್ವೇಷಣೆಗಳೆನಿಸಿರುವ ಹೆಲಿಕಾಪ್ಟರ್, ಯುದ್ದ ಟ್ಯಾಂಕ್‌, ಸೌರಶಕ್ತಿ ಬಳಕೆ ಮುಂತಾದ ಸಂಶೋಧನೆಗಳ ಕುರಿತಾಗಿ ಅಂದಿನಷ್ಟು ಹಿಂದೆಯೇ ವಿನ್ಯಾಸಗಳನ್ನು ರೂಪಿಸಿದ್ದರು.

ಭವ್ಯ ಸೃಷ್ಟಿಗಳು[ಬದಲಾಯಿಸಿ]

ಮೋನ ಲೀಸ or La Gioconda (1503–1505/1507)—Louvre, Paris, France

ಬಹುಮುಖ ಪ್ರತಿಭೆಯಾಗಿದ್ದ ಲಿಯನಾರ್ಡೊ ಡ ವಿಂಚಿ ಇಟ್ಯಾಲಿಯನ್ ನವೋದಯ ವಾಸ್ತುಶಿಲ್ಪಿ, ಸಂಗೀತಗಾರ, ಶರೀರ ರಚನಾ ಶಾಸ್ತ್ರಜ್ಞ, ಸಂಶೋಧಕ, ಶಿಲ್ಪಿ, ರೇಖಾಗಣಿತ ಶಾಸ್ತ್ರಜ್ಞ, ಯಂತ್ರಶಿಲ್ಪಿ ಮತ್ತು ವರ್ಣಚಿತ್ರಗಾರ ಹೀಗೆ ಏನೇನೋ. ಇವರನ್ನು ಆದರ್ಶ "ನವೋದಯ ಮಾನವ" ಮತ್ತು ಹಲವಾರು ವಿಷಗಳಲ್ಲಿ ಇವರು ತೋರಿರುವ ಅಮಿತ ವೈಜ್ಞಾನಿಕ ಕುತೂಹಲ, ಆಸಕ್ತಿ ಮತ್ತು ಸೃಜನಶೀಲತೆಯಿಂದಾಗಿ ಸಾರ್ವತ್ರಿಕವಾಗಿ ಮೇಧಾವಿ ಎಂದು ಪರಿಗಣಿಸಲಾಗಿದೆ. ಈ ಜಗತ್ತು ಕಂಡ ಅತಿ ಶ್ರೇಷ್ಠ ವರ್ಣಚಿತ್ರಗಾರಲ್ಲೋರ್ವರು ಎಂದು ಪರಿಗಣಿಸಲ್ಪಟ್ಟಿರುವ ಲಿಯನಾರ್ಡೋ ಡ ವಿಂಚಿ ವಿಶ್ವವಿಖ್ಯಾತ 'ಮೋನಾಲಿಸಾ', 'ಲಾಸ್ಟ್ ಸಪ್ಪರ್', , ‘ವಿಟ್ರೂವಿಯನ್ ಮ್ಯಾನ್ – ದಿ ಪ್ರೊಪೋರ್ಶಂಸ್ ಆಫ್ ಹ್ಯುಮನ್ ಫಿಗರ್’, ‘ಮಗುವಿನೊಂದಿಗೆ ಕನ್ಯೆ’, ‘ಸಂತ ಆನ್’ ಮುಂತಾದ ಅದ್ಭುತ ವರ್ಣಚಿತ್ರಗಳನ್ನು ರಚಿಸಿದ್ದರು. ಬಹುಶಃ ಅವರ ಸಮಕಾಲೀನರಾದ ಮೈಕೆಲ್ ಎಂಜೆಲೋ ಹೊರತಾಗಿ ಮತ್ಯಾರ ಚಿತ್ರಗಳೂ ಇವರ ಚಿತ್ರಗಳಷ್ಟು ಮರುಮುದ್ರಣಗಳನ್ನು ಕಂಡಿದ್ದೇ ಇಲ್ಲ. ಇವರು ತಮ್ಮ ಸ್ವಯಂ ಟಿಪ್ಪಣಿ ಬರಹಗಳಲ್ಲಿ , ಶರೀರ ರಚನಾ ಶಾಸ್ತ್ರ, ಖಗೋಳಶಾಸ್ತ್ರ , ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯಗಳ ಕುರಿತು ಅನೇಕ ವಿಚಾರಗಳು, ಚಿತ್ರಗಳು ಮತ್ತು ನಕ್ಷೆಗಳನ್ನು ಅಭಿವ್ಯಕ್ತಿಸಿದ್ದಾರೆ.

ಅವರ ಕಲಾತ್ಮಕತೆಯಲ್ಲಿ ಎಷ್ಟೊಂದು ಸೂಕ್ಷ್ಮತೆಯಿದೆ ಎಂದರೆ ನರನರಗಳೂ ಹೊರಗಿನಿಂದ ಅಭಿವ್ಯಕ್ತಿಸುವಷ್ಟು ಭವ್ಯತೆಯದ್ದು. ಬಹುಶಃ ಅವರಿಗೆ ಮಾನವ ದೇಹರಚನೆಯ ಕುರಿತಾಗಿದ್ದ ಅಸಾಮಾನ್ಯ ಜ್ಞಾನ ಕೂಡಾ ಈ ನಿಟ್ಟಿನಲ್ಲಿ ಅಪಾರವಾಗಿ ದುಡಿದಿದೆ ಎಂಬುದು ಪ್ರಾಜ್ಞರ ಅಂಬೋಣ. ಅಂದಿನ ಕಾಲದಲ್ಲಿ ಬಹುತೇಕ ಕಲಾವಿದರು ಸ್ಥಬ್ಧ ಚಿತ್ರಗಳನ್ನು ಬಿಡಿಸುತ್ತಿದ್ದರೆ ಲಿಯನಾರ್ಡೋ ಅವರ ಚಿತ್ರಗಳಲ್ಲಿ ಸಂಚಲನೆ ಭಾವುಕತೆಗಳೂ ಕಳೆಗಟ್ಟಿವೆ. ಅವರ ಹಲವಾರು ಭವ್ಯ ಚಿತ್ರಗಳು ಪ್ಯಾರಿಸ್ ಮತ್ತು ಮಿಲನ್ ನಗರಗಳಲ್ಲಿ ಇಂದೂ ಶೋಭಿಸುತ್ತಿವೆ.

ಗೌರವದಷ್ಟೇ ಬೆಂಬತ್ತಿದ್ದ ಅಪಮಾನ ಬಹಿಷ್ಕಾರಗಳು[ಬದಲಾಯಿಸಿ]

ಲಿಯನಾರ್ಡೋ ಡ ವಿಂಚಿ ತಮ್ಮ ಪ್ರತಿಭೆಗಾಗಿ ಪ್ರಾಜ್ಞರಿಂದ ಎಷ್ಟು ಗೌರವಿಸಲ್ಪಡುತ್ತಿದ್ದರೋ ಅದೇ ರೀತಿಯಲ್ಲಿ ಮತಾಂಧ ಮೂಡರಿಂದ ಮತ್ತು ಅಧಿಕಾರಶಾಹಿ ಅಹಂಕಾರಿಗಳಿಂದ ಅಪಮಾನ ಬಹಿಷ್ಕಾರಗಳನ್ನೂ ಎದುರಿಸಿದರು. ಹೀಗಾಗಿ ಅತ್ತಿಂದಿತ್ತ ಪಲಾಯನ ಹೇಳಬೇಕಾದ ಅವರ ಬದುಕಿನಲ್ಲಿ ಅನೇಕ ಭವ್ಯ ಕೃತಿಗಳು ಅಪೂರ್ಣವಾಗಿ ನಿಲ್ಲುವಂತಾಯಿತು.

ವಿದಾಯ[ಬದಲಾಯಿಸಿ]

ಈ ಮಹಾನುಭಾವರು ಮೇ ೨, ೧೫೧೯ರಂದು ಈ ಲೋಕವನ್ನಗಲಿದರು. ಅವರ ಕೃತಿಗಳು, ಅವರ ಸಾಧನೆ ಮತ್ತು ಹೆಸರು, ಕಾಲದ ಎಲ್ಲ ಎಲ್ಲೆಗಳನ್ನೂ ಮೀರಿ ಅಜರಾಮರವೆನಿಸಿದೆ.