ಸಾನ್ ಮರಿನೊ
| ಧ್ಯೇಯ: ಲಿಬರ್ಟಾಸ್ (Latin) "ಲಿಬರ್ಟಿ" |
|
| ರಾಷ್ಟ್ರಗೀತೆ: "ಇನ್ನೋ ನ್ಯಾಷನಲ್ ಡೆಲ್ಲ ರಿಪಬ್ಲಿಕಾ" | |
| ರಾಜಧಾನಿ | ಸಾನ್ ಮರಿನೊ |
| ಅತ್ಯಂತ ದೊಡ್ಡ ನಗರ | ಸೆರ್ರವಲ್ಲೆ |
| ಅಧಿಕೃತ ಭಾಷೆ(ಗಳು) | ಇಟಾಲಿಯನ್1 |
| ಸರಕಾರ | ಗಣರಾಜ್ಯ |
| - ಕ್ಯಾಪ್ಟನ್ಸ್ ರೀಜೆಂಟ್ | ಅಲೆಸ್ಸಾಂಡ್ರೊ ಮ್ಯಾನ್ಸೀನಿ ಅಲೆಸ್ಸಾಂಡ್ರೊ ರಾಸ್ಸಿ |
| ಸ್ಥಾಪನೆ | |
| - ದಿನಾಂಕ | ೩೧ ಸೆಪ್ಟೆಂಬರ್ 301 |
| ವಿಸ್ತೀರ್ಣ | |
| - ಒಟ್ಟು ವಿಸ್ತೀರ್ಣ | 61 ಚದರ ಕಿಮಿ ; (223ನೆಯದು) |
| 23.5 ಚದರ ಮೈಲಿ | |
| - ನೀರು (%) | ಅಗಣನೀಯ |
| ಜನಸಂಖ್ಯೆ | |
| - ಜುಲೈ 2007ರ ಅಂದಾಜು | 29,615 (212ನೆಯದು) |
| - ಸಾಂದ್ರತೆ | 481 /ಚದರ ಕಿಮಿ ; (20ನೆಯದು) 1,225 /ಚದರ ಮೈಲಿ |
| ರಾಷ್ಟ್ರೀಯ ಉತ್ಪನ್ನ (PPP) | 2001ರ ಅಂದಾಜು |
| - ಒಟ್ಟು | $904 ಮಿಲಿಯನ್ (195ನೆಯದು) |
| - ತಲಾ | $34,600 (12ನೆಯದು) |
| ಮಾನವ ಅಭಿವೃದ್ಧಿ ಸೂಚಿಕ (2003) |
ಮಾಹಿತಿ ಇಲ್ಲ (ಮಾಹಿತಿ ಇಲ್ಲ) – unranked |
| ಕರೆನ್ಸಿ | ಯೂರೋ (€) (EUR) |
| ಕಾಲಮಾನ | CET (UTC+1) |
| - ಬೇಸಿಗೆ (DST) | CEST (UTC+2) |
| ಅಂತರ್ಜಾಲ TLD | .sm |
| ದೂರವಾಣಿ ಕೋಡ್ | +378 |
| 1 "SAN MARINO" (PDF). UNECE. | |
ಸಾನ್ ಮರಿನೊ (ಸ್ಯಾನ್ ಮರಿನೊ) ಗಣರಾಜ್ಯವು ವಿಶ್ವದ ಅತಿ ಪುಟ್ಟ ಸ್ವತಂತ್ರ ರಾಷ್ಟ್ರಗಳಲ್ಲಿ ಒಂದು. ಇದು ಸಂಪೂರ್ಣವಾಗಿ ಇಟಲಿಯ ಒಳಗೆ ಹುದುಗಿಕೊಂಡಿರುವ ದೇಶ. ಸಾನ್ ಮರಿನೊ ವಿಶ್ವದ ಅತಿ ಪುರಾತನ ಗಣರಾಜ್ಯವೆಂದು ಹೇಳಲಾಗುತ್ತದೆ. ೬೧ ಚ.ಕಿ.ಮೀ. ವಿಸ್ತೀರ್ಣವುಳ್ಳ ಈ ರಾಷ್ಟ್ರದ ಜನಸಂಖ್ಯೆ ಸುಮಾರು ೨೮ ಸಾವಿರ. ಸಾನ್ ಮರಿನೊ ನಗರವು ದೇಶದ ರಾಜಧಾನಿ. ಅಪೆನ್ನೈನ್ ಪರ್ವತಗಳ ನಡುವೆ ಇರುವ ಈ ದೇಶವು ಪೂರ್ಣವಾಗಿ ಬೆಟ್ಟಗುಡ್ಡಗಳ ನಾಡು. ಯಾವುದೇ ನದಿ ಅಥವಾ ಸರಸ್ಸುಗಳು ಇಲ್ಲಿಲ್ಲ. ವರ್ಷದ ಸದಾಕಾಲವೂ ಸಹನೀಯವಾದ ಮೆಡಿಟರೇನಿಯನ್ ಹವಾಮಾನವಿರುತ್ತದೆ. ಸಾನ್ ಮರಿನೊ ಸಂಸದೀಯ ಪ್ರಜಾಸತ್ತೆಯನ್ನು ಅಳವಡಿಸಿಕೊಂಡಿದೆ. ವೈಶಿಷ್ಟ್ಯವೆಂದರೆ ಈ ಸಂಸತ್ತು ಪ್ರತಿ ೬ ತಿಂಗಳಿಗೊಮ್ಮೆ ಇಬ್ಬರು ಕ್ಯಾಪ್ಟನ್ ರೀಜೆಂಟ್ ರನ್ನು ಆರಿಸುತ್ತದೆ. ಈ ಇಬ್ಬರೂ ರಾಷ್ಟ್ರದ ಆಡಳಿತದ ಮುಖ್ಯಸ್ಥರಾಗಿರುತ್ತಾರೆ. ಹೀಗೆ ಏಕಕಾಲಕ್ಕೆ ಇಬ್ಬರು ಮುಖ್ಯಸ್ಥರನ್ನು ಹೊಂದಿರುವ ದೇಶ ಪ್ರಾಯಶ: ಇನ್ನೊಂದಿಲ್ಲ. ಇಟಾಲಿಯನ್ ಭಾಷೆ ದೇಶದ ಪ್ರಮುಖ ನುಡಿ. ಬಹುಸಂಖ್ಯಾತರು ರೋಮನ್ ಕ್ಯಾಥೊಲಿಕ್ ಪಂಗಡದವರು. ಪ್ರವಾಸೋದ್ಯಮ ದೇಶದ ಪ್ರಮುಖ ಆರ್ಥಿಕ ಚಟುವಟಿಕೆ. ಉಳಿದಂತೆ ಎಲೆಕ್ಟ್ರಾನಿಕ್ಸ್ , ಬ್ಯಾಂಕಿಂಗ್ ಹಾಗೂ ಸೆರಾಮಿಕ್ಸ್ ಉದ್ಯಮಗಳೂ ನಡೆಯುತ್ತಿವೆ. ದ್ರಾಕ್ಷಿ ಮತ್ತು ಗಿಣ್ಣು ಪ್ರಮುಖ ಕೃಷ್ಯುತ್ಪನ್ನಗಳು. ಸಾನ್ ಮರಿನೊ ತನ್ನ ವಿಶಿಷ್ಟ ಅಂಚೆಚೀಟಿಗಳಿಗೆ ಹೆಸರಾಗಿದೆ. ಇದು ಕೂಡ ಸಾಕಷ್ಟು ವಿದೇಶಿ ವಿನಿಮಯವನ್ನು ರಾಷ್ಟ್ರಕ್ಕೆ ತರುತ್ತಿದೆ. ಸಾನ್ ಮರಿನೊ ನಲ್ಲಿ ಎಫ್-೧ ಕಾರು ಓಟದ ಸ್ಪರ್ಧೆ ಪ್ರತಿವರ್ಷ ನಡೆಯುತ್ತದೆ.