ಚಾಡ್
ಧ್ಯೇಯ: "ಏಕತೆ, ದುಡಿಮೆ, ಪ್ರಗತಿ" | |
ರಾಷ್ಟ್ರಗೀತೆ: "ಲಾ ಚಾದಿಯನ್" | |
ರಾಜಧಾನಿ | ಎನ್‍ಜಮೇನ |
ಅತ್ಯಂತ ದೊಡ್ಡ ನಗರ | ರಾಜಧಾನಿ |
ಅಧಿಕೃತ ಭಾಷೆ(ಗಳು) | ಫ್ರೆಂಚ್, ಅರಾಬಿಕ್ |
ಸರಕಾರ | ಗಣರಾಜ್ಯ |
- ರಾಷ್ಟ್ರಾಧ್ಯಕ್ಷ | ಇಡ್ರಿಸ್ ದೆಬೀ |
- ಪ್ರಧಾನಿ | ಡೆಲ್ವಾ ಕಾಸ್ಸಿರೆ ಕೌಮಕೋಯೆ |
ಸ್ವಾತಂತ್ರ್ಯ | ಫ್ರಾನ್ಸ್ ನಿಂದ |
- ದಿನಾಂಕ | ಆಗಸ್ಟ್ 11 1960 |
ವಿಸ್ತೀರ್ಣ | |
- ಒಟ್ಟು ವಿಸ್ತೀರ್ಣ | 1,284,000 ಚದರ ಕಿಮಿ ; (21ನೆಯದು) |
495,753 ಚದರ ಮೈಲಿ | |
- ನೀರು (%) | 1.9 |
ಜನಸಂಖ್ಯೆ | |
- 2005ರ ಅಂದಾಜು | 10,146,000 (75ನೆಯದು) |
- 1993ರ ಜನಗಣತಿ | 6,279,921 |
- ಸಾಂದ್ರತೆ | 7.9 /ಚದರ ಕಿಮಿ ; (212ನೆಯದು) 20.4 /ಚದರ ಮೈಲಿ |
ರಾಷ್ಟ್ರೀಯ ಉತ್ಪನ್ನ (PPP) | 2005ರ ಅಂದಾಜು |
- ಒಟ್ಟು | $15.260 billion (128ನೆಯದು) |
- ತಲಾ | $1,519 (163ನೆಯದು) |
ಮಾನವ ಅಭಿವೃದ್ಧಿ ಸೂಚಿಕ (2004) |
![]() |
ಚಲಾವಣಾ ನಾಣ್ಯ/ನೋಟು | CFA ಫ್ರಾಂಕ್ (XAF )
|
ಸಮಯ ವಲಯ | WAT (UTC+1) |
- ಬೇಸಿಗೆ (DST) | ಪರಿಗಣನೆಯಲ್ಲಿಲ್ಲ (UTC+1) |
ಅಂತರಜಾಲ ಸಂಕೇತ | .td |
ದೂರವಾಣಿ ಸಂಕೇತ | +235
|
ಚಾಡ್ ( ಅಧಿಕೃತವಾಗಿ ಚಾಡ್ ಗಣರಾಜ್ಯ) ಮಧ್ಯ ಆಫ್ರಿಕಾದ ಒಂದು ಸಾರ್ವಭೌಮ ರಾಷ್ಟ್ರ. ಸುತ್ತಲೂ ಭೂಪ್ರದೇಘಗಳಿಂದ ಆವೃತವಾಗಿರುವ ಚಾಡ್‌ನ ಉತ್ತರದಲ್ಲಿ ಲಿಬ್ಯಾ, ಪೂರ್ವಕ್ಕೆ ಸುಡಾನ್, ದಕ್ಷಿಣದಲ್ಲಿ ಮಧ್ಯ ಆಫ್ರಿಕನ್ ಗಣರಾಜ್ಯ, ನೈಋತ್ಯದಲ್ಲಿ ಕೆಮೆರೂನ್ ಮತ್ತು ನೈಜೀರಿಯ ಹಾಗೂ ಪಶ್ಚಿಮದಲ್ಲಿ ನೈಜರ್ ರಾಷ್ಟ್ರಗಳಿವೆ. ಯಾವುದೇ ಸಾಗರತೀರ/ಸಮುದ್ರತೀರದಿಂದ ಬಲುದೂರದಲ್ಲಿದ್ದು ಹೆಚ್ಚಿನಂಶ ಮರುಭೂಮಿಯ ವಾತಾವರಣವನ್ನು ಹೊಂದಿರುವ ಚಾಡ್ ದೇಶವನ್ನು ಕೆಲವೊಮ್ಮೆ ಆಫ್ರಿಕಾದ ಮೃತ ಹೃದಯವೆಂದು ಕರೆಯಲಾಗುತ್ತದೆ. ಚಾಡ್ ದೇಶವನ್ನು ಭೌಗೋಳಿಕವಾಗಿ ಮೂರು ಭಾಗಗಳಾಗಿ ವಿಂಗಡಿಸಬಹುದು. ನಾಡಿನ ಉತ್ತರಭಾಗದ ಮರುಭೂಮಿ ಪ್ರದೇಶ, ಮಧ್ಯಭಾಗದ ಪೂರ್ಣ ಒಣ ಪ್ರದೇಶ ಮತ್ತು ದಕ್ಷಿಣಭಾಗದ ಫಲವತ್ತಾದ ಸವಾನ್ನಾ ಪ್ರದೇಶ.ಚಾಡ್ ಸರೋವರವು ನಾಡಿನ ಅತಿ ದೊಡ್ಡ ಜಲಮೂಲವಾಗಿದ್ದು ದಕ್ಷಿಣ ಭಾಗದ ಪ್ರದೇಶಗಳಿಗೆ ನೀರುಣಿಸುವುದು. ಚಾಡ್‌ನಲ್ಲಿ ೨೦೦ಕ್ಕೂ ಹೆಚ್ಚು ಬುಡಕಟ್ಟುಗಳ ಜನರಿರುವರು. ಫ್ರೆಂಚ್ ಮತ್ತು ಅರಾಬಿಕ್ ನಾಡಿನ ಅಧಿಕೃತ ಭಾಷೆಗಳು. ಬಹುಸಂಖ್ಯಾಕ ಜನತೆ ಇಸ್ಲಾಂ ಧರ್ಮದ ಅನುಯಾಯಿಗಳು.