ಆರ್ಮೇನಿಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆರ್ಮೇನಿಯ ಗಣರಾಜ್ಯ
Հայաստանի Հանրապետություն
ಹಯಸ್ತಾನಿ ಹನ್ರಪೆತುತ್ಯುನ್
Flag of ಆರ್ಮೇನಿಯ
Flag
Coat of arms of ಆರ್ಮೇನಿಯ
Coat of arms
Motto: 
Մեկ Ազգ, Մեկ Մշակույթ  
(ಅರ್ಮೇನಿಯದ ಭಾಷೆಯಲ್ಲಿ: "ಒಂದು ದೇಶ, ಒಂದು ಸಂಸ್ಕೃತಿ")
Anthem: Mer Hayrenik
ನಮ್ಮ ಪಿತೃಭೂಮಿ
Location of ಆರ್ಮೇನಿಯ
Capitalಯೆರೆವಾನ್1
Largest cityರಾಜಧಾನಿ
Official languagesಅರ್ಮೇನಿಯದ ಭಾಷೆ
Demonym(s)Armenian
Governmentಕೇಂದ್ರಾಡಳಿತ ಗಣರಾಜ್ಯ
• ರಾಷ್ಟ್ರಪತಿ
ರಾಬರ್ಟ್ ಕೊಚರಿಯನ್
• ಪ್ರಧಾನ ಮಂತ್ರಿ
ಸೆರ್ಜ್ ಸರ್ಗಸ್ಯಾನ್
ಸ್ಥಾಪನೆ ಮತ್ತು ಸ್ವಾತಂತ್ರ್ಯ
• ಸಾಂಪ್ರದಾಯಕವಾಗಿ
ಆಗಸ್ಟ್ ೧೧ ಕ್ರಿ.ಪೂ. ೨೪೯೨
• ಉರಾರ್ಟು ರಾಷ್ಟ್ರವಾಗಿ
ಸುಮಾರು ಕ್ರಿ.ಪೂ. ೮೪೦
• ಅರ್ಮೇನಿಯ ರಾಜ್ಯ ಸ್ಥಾಪನೆ
ಕ್ರಿ.ಪೂ. ೧೯೦
೩೦೧
ಮೇ ೨೮ ೧೯೧೮
ಆಗಸ್ಟ್ ೨೩ ೧೯೯೦
• Water (%)
4.71
Population
• ೨೦೦೫ estimate
3,215,8002 (136th3)
• ೨೦೦೧ census
3,002,594
GDP (PPP)೨೦೦೫ estimate
• Total
$14.17 billion (127th)
• Per capita
$4,270 (115th)
Gini (೨೦೦೩)33.8
medium
HDI (೨೦೦೪)0.768
Error: Invalid HDI value · 80th
Currencyಡ್ರಾಮ್ (AMD)
Time zoneUTC+4 (UTC)
• Summer (DST)
UTC+5 (DST)
Calling code374
Internet TLD.am
  1. Alternatively spelled "Erevan", "Jerevan", or "Erivan".
  2. De jure population estimate by the National Statistics Service.
  3. Rank based on 2005 UN estimate of de facto population.

ಆರ್ಮೇನಿಯ (Հայաստան ಹಯಾಸ್ಥಾನ್), ಅಧಿಕೃತವಾಗಿ ಆರ್ಮೇನಿಯ ಗಣರಾಜ್ಯ, ಕಪ್ಪು ಸಮುದ್ರ ಮತ್ತು ಕ್ಯಾಸ್ಪಿಯನ್ ಸಮುದ್ರಗಳ ಮಧ್ಯದ ಯುರೇಷ್ಯಾದಲ್ಲಿರುವ ಒಂದು ಭೂಆವೃತ ರಾಷ್ಟ್ರ.ಇದು ೧೯೯೧ರಲ್ಲಿ ಸ್ವಾತಂತ್ರ್ಯ ಪಡೆಯಿತು. ಸೋವಿಯತ್ ಗಣರಾಜ್ಯಗಳಲ್ಲೊಂದಾಗಿದ್ದ ಹಳೆಯ ಆರ್ಮೇನಿಯ ದೇಶದ ವಿಸ್ತಾರ ೧೦೩,೬೦೦ ಚ.ಕಿಮೀ. ಈ ರಾಜ್ಯ ಪ್ರ.ಶ.ಪು. ೬ನೆಯ ಶತಮಾನದಲ್ಲಿ ಸ್ವತಂತ್ರ್ಯ ರಾಜ್ಯವಾಗಿತ್ತು. ಕೆಲವು ಕಾಲದ ಮೇಲೆ ಇದು ರೋಮ್ ಸಾಮ್ರಾಜ್ಯದ ಒಂದು ಅಂಗವಾಯಿತು. ಮಧ್ಯಯುಗದಲ್ಲಿ ಮತ್ತೆ ಸ್ವತಂತ್ರ್ಯವಾದ ಈ ರಾಜ್ಯದಲ್ಲಿ ಅಲ್ಲಿಯ ಅರಸರು ಆಳುತ್ತಿದ್ದರು. ೧೪೦೦ರಿಂದ ಮುಂದೆ ಇದನ್ನು ತುರುಕರು ಮತ್ತು ಪಾರ್ಸಿಗಳು ತಮ್ಮ ತಮ್ಮೊಳಗೆ ಹಂಚಿಕೊಂಡರು. ೧೯ನೆಯ ಶತಮಾನದ ಆರಂಭದ ಇದರ ಬಹಳ ಭಾಗವನ್ನು ರಷ್ಯದವರು ಗೆದ್ದುಕೊಂಡರು. ಒಂದನೆಯ ಮಹಾಯುದ್ಧದ ಕಾಲದವರೆಗೆ ಇದರಲ್ಲಿ ತುರುಕರು, ಪಾರ್ಸಿಗಳು ಮತ್ತು ರಷ್ಯನ್ನರಿಗೆ ಸೇರಿದ ಮೂರು ಭಾಗಗಳಿದ್ದುವು.

1199–1375 ರಲ್ಲಿ ಆರ್ಮೇನಿಯ ಸಾಮ್ರಾಜ್ಯ.

೧೯ನೆಯ ಶತಮಾನದ ಅಂತ್ಯಕ್ಕೆ ತುರುಕರು ಆರ್ಮೇನಿಯರ ಕೊಲೆ ಮಾಡತೊಡಗಿದರು. ಆದುದರಿಂದ ಯುರೋಪಿನಲ್ಲಿ ಆರ್ಮೇನಿಯನ್ನರ ಬಗೆಗೆ ಸಹಾನುಭೂತಿ ಮತ್ತು ಆತ್ಮೀಯ ಭಾವಗಳು ಹುಟ್ಟಿದುವು. ೧೯೦೮ರಲ್ಲಿ ತುರುಕ ಯುವಕರು ಹೆಚ್ಚಾದ ವ್ಯವಸ್ಥಿತ ರೀತಿಯಲ್ಲಿ ಆರ್ಮೇನಿಯರ ಕೊಲೆಯ ಕಾರ್ಯವನ್ನು ಕೈಗೊಂಡರು. ಆಗ ಸು. ೮೦,೦೦೦ ಆರ್ಮೇನಿಯನ್ನರು ಕೊಲ್ಲಲ್ಪಟ್ಟರೆಂದು ತಿಳಿದುಬಂದಿದೆ.

ಆರ್ಮೇನಿಯನ್ ನರಮೇಧದ ಬಲಿಪಶುಗಳು-1915

ಆ ರೀತಿಯಲ್ಲಿ ಆರ್ಮೇನಿಯ ಗಣರಾಜ್ಯ ೧೯೧೮ರಲ್ಲಿ ತಲೆಯೆತ್ತಿತು. ಯುರೋಪಿನ ಶಕ್ತಿಕೂಟದವರು ಇದನ್ನು ೧೯೨೦ರಲ್ಲಿ ಮನ್ನಿಸಿದರು. ಆದರೆ ಇದರ ಬಾಳ್ವೆ ನಾನಾ ಬಗೆಯಾಗಿ ಕೆಲವೇ ವರ್ಷಗಳಲ್ಲಿ ಕೊನೆಗೊಂಡಿತು. ಆಗ ಇಲ್ಲಿ ಬೋಲ್ಷೆವಿಸ್ಟರ ಪ್ರಭಾವ ಬೆಳೆಯುತ್ತಿದ್ದುದರಿಂದ ೧೯೨೧ರಲ್ಲಿ ಸೋವಿಯತ್ ಮಾದರಿಯ ಗಣರಾಜ್ಯ ರೂಪುಗೊಂಡಿತು. ಕ್ರೈಸ್ತಪಂಥ ೩ನೆಯ ಶತಮಾನದಲ್ಲಿ ಮೊದಲು ಇಲ್ಲಿ ತಳವೂರಿತು. ಆಡಳಿತ ಮತ್ತು ನಿಯಮಾಚರಣೆಗಳಲ್ಲಿ ಇದು ಗ್ರೀಕರ ಕ್ರೈಸ್ತಪಂಥವನ್ನು ಹೋಲುತ್ತದೆಯಾದರೂ ತಮ್ಮ ಧರ್ಮದ ಹಿರಿಯರ ಅಧಿಕಾರದಲ್ಲಿ ಇದು ಬೇರೆಯಾಗಿಯೇ ಇದೆ. ಜಗತ್ತಿನಲ್ಲಿ ಇದೇ ಅತಿ ಪ್ರಾಚೀನವಾದ ಕ್ರೈಸ್ತಪಂಥವೆಂದು ಪ್ರತೀತಿ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

General information
  • Armenia entry at The World Factbook
  • Armenia Archived 2010-06-11 ವೇಬ್ಯಾಕ್ ಮೆಷಿನ್ ನಲ್ಲಿ. at UCB Libraries GovPubs
  • ಆರ್ಮೇನಿಯ ಓಪನ್ ಡೈರೆಕ್ಟರಿ ಪ್ರಾಜೆಕ್ಟ್
  • Armenia profile from the BBC News
  • Wikimedia Atlas of Armenia
  •  Chisholm, Hugh, ed. (1911). "Armenia" . Encyclopædia Britannica (11th ed.). Cambridge University Press. {{cite encyclopedia}}: Cite has empty unknown parameters: |separator= and |HIDE_PARAMETER= (help)
  • Key Development Forecasts for Armenia from International Futures