ವನುವಾಟು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರಿಪಬ್ಲಿಕ್ ಬ್ಲಾಂಗ್ ವನುವಾಟು
ರಿಪಬ್ಲಿಕ್ ದಿ ವನುವಾಟು

ವನುವಾಟು ಗಣರಾಜ್ಯ
ವನುವಾಟು ದೇಶದ ಧ್ವಜ ವನುವಾಟು ದೇಶದ Coat of arms
ಧ್ವಜ Coat of arms
ಧ್ಯೇಯ: "ಲಾಂಗ್ ಗಾಡ್ ಯುಮಿ ಸ್ಟನಪ್" (ನಾವು ದೇವರಲ್ಲಿ)
ರಾಷ್ಟ್ರಗೀತೆ: ಯುಮಿ, ಯುಮಿ, ಯುಮಿ

Location of ವನುವಾಟು

ರಾಜಧಾನಿ ಪೋರ್ಟ್ ವಿಲಾ
17°45′S 168°18′E
ಅತ್ಯಂತ ದೊಡ್ಡ ನಗರ ಪೋರ್ಟ್ ವಿಲಾ
ಅಧಿಕೃತ ಭಾಷೆ(ಗಳು) ಬಿಸ್ಲಾಮಾ, ಇಂಗ್ಲಿಷ್, ಫ್ರೆಂಚ್
ಸರಕಾರ ಗಣರಾಜ್ಯ
 - ರಾಷ್ಟ್ರಾಧ್ಯಕ್ಷ ಕಲ್ಕೋಟ್ ಮಟಸ್ಕೆಲೆಕೇಲೆ
 - ಪ್ರಧಾನಿ ಹಾಮ್ ಲಿನಿ
ಸ್ವಾತಂತ್ರ್ಯ ಫ್ರಾನ್ಸ್ ಮತ್ತು ಯು.ಕೆ.ಯಿಂದ 
 - ದಿನಾಂಕ ಜುಲೈ ೩೦ 1980 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ 12,189 ಚದರ ಕಿಮಿ ;  (161ನೆಯದು)
  4,706 ಚದರ ಮೈಲಿ 
 - ನೀರು (%) ಅಗಣನೀಯ
ಜನಸಂಖ್ಯೆ  
 - July 2006ರ ಅಂದಾಜು 209,000 (183ನೆಯದು)
 - ಸಾಂದ್ರತೆ 17 /ಚದರ ಕಿಮಿ ;  (188ನೆಯದು)
44 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) 2005ರ ಅಂದಾಜು
 - ಒಟ್ಟು $726 ಮಿಲಿಯನ್ (175ನೆಯದು)
 - ತಲಾ $3,346 (121ನೆಯದು)
ಮಾನವ ಅಭಿವೃದ್ಧಿ
ಸೂಚಿಕ
(2004)
Green Arrow Up.svg0.670 (119ನೆಯದು) – medium
ಚಲಾವಣಾ ನಾಣ್ಯ/ನೋಟು ವನುವಾಟು ವಾಟು (VUV)
ಸಮಯ ವಲಯ (UTC+11)
ಅಂತರಜಾಲ ಸಂಕೇತ .vu
ದೂರವಾಣಿ ಸಂಕೇತ +678

ವನುವಾಟು ಗಣರಾಜ್ಯವು ದಕ್ಷಿಣ ಶಾಂತಸಾಗರದಲ್ಲಿರುವ ಒಂದು ದ್ವೀಪರಾಷ್ಟ್ರ. ಈ ದ್ವೀಪಗುಚ್ಛವು ಆಸ್ಟ್ರೇಲಿಯಾದ ಈಶಾನ್ಯಕ್ಕೆ ೧೭೫೦ ಕಿ.ಮೀ. ದೂರದಲ್ಲಿದೆ. ೧೨೧೮೯ ಚ.ಕಿ.ಮೀ. ವಿಸ್ತೀರ್ಣವುಳ್ಳ ವನುವಾಟುವಿನ ಜನಸಂಖ್ಯೆ ಸುಮಾರು ೨೨೧೦೦೦. ರಾಷ್ಟ್ರದ ರಾಜಧಾನಿ ಪೋರ್ಟ್ ವಿಲಾ. ೧೮ನೆಯ ಶತಮಾನದ ಕೊನೆಯಲ್ಲಿ ವನುವಾಟುವಿನಲ್ಲಿ ಬ್ರಿಟಿಷರು ನೆಲೆಸತೊಡಗಿದರು. ೧೮೮೭ರಲ್ಲಿ ವನುವಾಟು ಆಂಗ್ಲರ ಹಾಗೂ ಫ್ರೆಂಚರ ಜಂಟಿ ನೌಕಾಪಡೆಗಳ ಆಡಳಿತಕ್ಕೆ ಒಳಪಟ್ಟಿತು. ೧೯೮೦ರಲ್ಲಿ ಪೂರ್ಣ ಸ್ವಾತಂತ್ರ್ಯ ಪಡೆದ ವನುವಾಟು ಗಣರಾಜ್ಯವಾಯಿತು. ವನುವಾಟು ೮೩ ದ್ವೀಪಗಳ ಸಮೂಹ. ಇವುಗಳ ಪೈಕಿ ೨ರ ಮೇಲೆ ಫ್ರಾನ್ಸ್ ಸ್ವಾಮಿತ್ವದ ದಾವೆ ಹೂಡಿದೆ. ಹೆಚ್ಚಿನ ಎಲ್ಲಾ ದ್ವೀಪಗಳೂ ಪರ್ವತಪ್ರಾಂತ್ಯ. ಉಷ್ಣವಲಯದ ಅಥವಾ ಸಮಶೀತೋಷ್ಣವಲಯದ ಹವಾಮಾನವನ್ನು ವನುವಾಟು ಹೊಂದಿದೆ. ದೇಶದಲ್ಲಿ ಲೊಪೇವಿ ಸೇರಿದಂತೆ ಹಲವಾರು ಸಕ್ರಿಯ ಜ್ವಾಲಾಮುಖಿಗಳಿವೆ. ಜ್ವಾಲಾಮುಖಿಗಳ ಸ್ಫೋಟಗಳು ವನುವಾಟುವಿಗೆ ನಿರಂತರ ಆತಂಕದ ವಿಷಯ. ಇತ್ತೀಚಿನ ಸ್ಫೋಟ ೧೯೪೫ರಲ್ಲಿ ಸಂಭವಿಸಿತು. ವನುವಾಟು ಹೆಚ್ಚು ಮಳೆ ಬೀಳುವ ವಲಯದಲ್ಲಿದೆ. ಕೃಷಿ ರಾಷ್ಟ್ರದ ಪ್ರಮುಖ ಉದ್ಯೋಗ. ನಾಡಿನ ೬೫% ಜನತೆ ವ್ಯವಸಾಯವನ್ನೇ ಅವಲಂಬಿಸಿದ್ದಾರೆ. ಉಳಿದಂತೆ ಮೀನುಗಾರಿಕೆಯೂ ವ್ಯಾಪಕ. ರಫ್ತಾಗುವ ಸರಕುಗಳು ಬಹಳ ಕಡಿಮೆ. ರಾಷ್ಟ್ರವು ಜ್ವಾಲಾಮುಖಿಸ್ಫೋಟ, ಭೂಕಂಪ ಮತ್ತು ಸುನಾಮಿಗಳಂತಹ ನೈಸರ್ಗಿಕ ಪ್ರಕೋಪಗಳಿಗೆ ತುತ್ತಾಗುತ್ತಲೇ ಇದೆ. ದ್ವೀಪಗಳ ನಡುವೆ ಅಗಾಧ ಅಂತರವಿರುವುದು. ಈ ಕಾರಣಗಳಿಂದಾಗಿ ಆರ್ಥಿಕ ಪ್ರಗತಿ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ. ಮೆಲಾನೇಷ್ಯನ್ ಜನಾಂಗದವರು ಹೆಚ್ಚಿರುವ ವನುವಾಟುವಿನ ಮುಖ್ಯ ಭಾಷೆಗಳು ಇಂಗ್ಲಿಷ್, ಫ್ರೆಂಚ್ ಮತ್ತು ಬಿಸ್ಲಾಮಾ. ಇವಲ್ಲದೆ ನೂರಕ್ಕೂ ಹೆಚ್ಚು ಬುಡಕಟ್ಟು ಭಾಷೆಗಳೂ ನುಡಿಯಲ್ಪಡುತ್ತಿವೆ. ಬಹುಸಂಖ್ಯಾಕರು ಕ್ರಿಶ್ಚಿಯನ್ ಮತಾವಲಂಬಿಗಳು.

"https://kn.wikipedia.org/w/index.php?title=ವನುವಾಟು&oldid=1080828" ಇಂದ ಪಡೆಯಲ್ಪಟ್ಟಿದೆ