ಧರ್ಮ (ಭಾರತೀಯ ಪರಿಕಲ್ಪನೆ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

Dharma  (ಸಂಸ್ಕೃತ: धर्म ಧರ್ಮ, ಪಾಳಿ ಧಮ್ಮಾ ) ಇದು ವಿಭಿನ್ನ ಪದಗಳನ್ನು ಭಾರತೀಯ ತತ್ವಶಾಸ್ತ್ರ ಮತ್ತು ಧರ್ಮಗಳಲ್ಲಿ ಬಳಸಿಕೊಂಡು ತನ್ನ ವ್ಯಾಪ್ತಿಯ ಮಹತ್ವದ ವಿಶಾಲತೆಗೆ ಹೆಸರಾಗಿದೆ. ಇದನ್ನು ಹಿಂದುತ್ವ,ದ ದೃಷ್ಟಿಯಲ್ಲಿ ಇದರ ಆಚರಣೆಯು ಪ್ರತಿಯೊಬ್ಬರ ನ್ಯಾಯಯುತ ಕರ್ತವ್ಯವಾಗಿದೆ.[೧] ಅದಲ್ಲದೇ ಹಿಂದುಒಬ್ಬನ ಧರ್ಮವು ವ್ಯಕ್ತಿಯ ವಯಸ್ಸು,ವರ್ಗ,ಶ್ರೇಣಿ,ವೃತ್ತಿ ಮತ್ತು ಲಿಂಗ ಇತ್ಯಾದಿ ಅಂಶಗಳ ಮೇಲೆ ಧಾರ್ಮಿಕ ಆಚರಣೆಗಳು ನಿಂತಿವೆ.[೨] ಆಧುನಿಕ ಭಾರತೀಯ ಭಾಷೆಗಳು ಆಯಾ ಧರ್ಮಾಚರಣೆಯ ಸಮನಾದ, ಸರಳ ಧಾರ್ಮಿಕ , ನಿಯಮಾವಳಿಗಳ ಅಂಶಗಳ ಮೇಲೆ ಸದಾ ಬೆಳಕು ಚೆಲ್ಲುತ್ತವೆ ಇದರ ಒಟ್ಟಾರೆ ಅಳವಡಿಕೆಯು ವ್ಯಕ್ತಿಯ ಮೇಲೆ ಅವಲಂಬಿತವಾಗಿದೆ. ಇಲ್ಲಿ ಧರ್ಮ ಎಂಬ ಪದದ ಅನುವಾದದ ಸರಣಿಯು ಯಾವುದು ಬದುಕನ್ನು ಎತ್ತಿ ಹಿಡಿಯುತ್ತದೆಯೋ ಅಥವಾ ಬೆಂಬಲಿಸುತ್ತದೆಯೋ ,ಅದೇ ಮಾನವನ ಆಚರಣೀಯ ಮತ್ತು ಆದರಣೀಯ ಧರ್ಮವಾಗಿದೆ.ಇದು ಸಾಮಾನ್ಯವಾಗಿ ಇಂಗ್ಲಿಷ್ ನಲ್ಲಿ ಅನುವಾದಿಸಿದಾಗ ಕಾನೂನು,ನಿಯಮಾವಳಿ ಎಂಬ ಧ್ವನಿ ಹೊರಡುತ್ತದೆ.

ಹಲವಾರು ಭಾರತೀಯ ಧರ್ಮಗಳಾದ , ಹಿಂದುತ್ವ ಬೌದ್ದಧರ್ಮ,ಜೈನ ಧರ್ಮ ಮತ್ತು ಸಿಖ್ ಧರ್ಮ ಇವುಗಳೆಲ್ಲ ಒಂದು ತಾತ್ವಿಕ ತಳಹದಿ ಮೇಲೆ ತಮ್ಮ ಧರ್ಮಾಚರಣೆಯನ್ನು ಜೀವಂತವಾಗಿಟ್ಟಿರುತ್ತವೆ.ಅಂದರೆ ಧರ್ಮ(ಸಂತೋಷದ ಪರಾಕಾಷ್ಟೆ)ಯುಕಮ್ ,ಮೋಕ್ಷ ಅಥವಾ ನಿರ್ವಾಣ (ಭೌತಿಕ ವಿಮೋಚನೆ ) ಇತ್ಯಾದಿಗಳ ಮಾರ್ಗಸೂಚಿಗಳನ್ನು ಅನುಸರಿಸುತ್ತವೆ. ಧರ್ಮದ ವಿರೋಧ ಶಬ್ದವೆಂದರೆ ಅಧರ್ಮ ; ಅಂದರೆ ಅನೈಸರ್ಗಿಕ ಅಥವಾ ಅನೈತಿಕ ಎಂದು ವ್ಯಾಖ್ಯಾನಿಸಬಹುದು.

ಸಾಂಪ್ರದಾಯಿಕ ಹಿಂದು ಸಮಾಜದಲ್ಲಿ ಧರ್ಮವು ಐತಿಹಾಸಿಕವಾಗಿ ಹಲವಾರು ತತ್ವಗಳ ಬೀಡಾಗಿದೆ,ಇದು ಈ ಮೂಲಕ ವೇದಶಾಸ್ತ್ರೀಯ ಆಚರಣೆ, ಸಭ್ಯ ನಡವಳಿಕೆ, ಜಾತಿ ನೀತಿ-ನಿಯಮಗಳು ಮತ್ತು ನಾಗರಿಕ ಮತ್ತು ಅಪರಾಧಿ ಕಾನೂನನ್ನು ಅವು ಅಳವಡಿಸಿಕೊಂಡಿರುತ್ತವೆ. ಇದರಲ್ಲಿ ಅತ್ಯಂತ ಸಾಮಾನ್ಯ ಅರ್ಥ ಒಳಗೊಂಡಿದ್ದೆಂದರೆ ಅದರಲ್ಲಿ ಎರಡು ತತ್ವಗಳು-ಆದರ್ಶಗಳು ವಿವರಿಸಲ್ಪಟ್ಟಿವೆ:ಅಂದರೆ ಸಾಮಾಜಿಕ ಬದುಕು ಉತ್ತಮ ರೀತಿಯಲ್ಲಿ ನಿರ್ಮಾಣಗೊಂಡು,ಇದು ಅತ್ಯತ್ತಮ-ವ್ಯಾಖ್ಯಾನಿಸಿದ ಮತ್ತು ಉತ್ತಮ ನಿಯಂತ್ರಣದ ವರ್ಗಗಳು ಇದರಲ್ಲಿ ವಿಭಜಿತಗೊಂಡಿವೆ.ಅವುಗಳನ್ನು ವರ್ಣದ ಮೂಲಕ ವಿಶ್ಲೇಷಿಸಲಾಗಿದೆ. ಆದರೆ ವ್ಯಕ್ತಿಯ ಬದುಕನ್ನು ವಿವಿಧ ಆಶ್ರಮ ಹಂತಗಳಲ್ಲಿ ವಿಂಗಡಿಸಲಾಗಿದೆ. (ನೋಡಿ: ಧರ್ಮಶಾಸ್ತ್ರ ).[೩]

ಧರ್ಮದಲ್ಲಿ ಬೌದ್ದ ಮತ್ತು ಜೈನ ತತ್ವಗಳನ್ನು ಅಲ್ಲದೇ ಅವುಗಳ ಸಂಸ್ಥಾಪಕರಾದ ಬುದ್ದ ಮತ್ತು ಋಷಭದೇವ ಅವರ ಭೋಧನೆಗಳಿವೆ. ಈ ಬೌದ್ದ ತತ್ವಜ್ಞಾನದಲ್ಲಿ ಧಮ್ಮಾ/ಧರ್ಮಾ ಎಂಬ ಪದಗಳನ್ನ ಅವುಗಳು ವಿವರಿಸುವ "ಪಾರಮಾರ್ಥಿಕ ವಿದ್ಯಮಾನಗಳಿಗೆ". ಅನುಸಾರವಾಗಿ ವಿವರಿಸಲಾಗಿದೆ[೪]

ವ್ಯುತ್ಪತ್ತಿಶಾಸ್ತ್ರ[ಬದಲಾಯಿಸಿ]

ಅದು [[ಋಗ್ವೇದ|ಋಗ್ವೇದದಲ್ಲಿ,ಈ ಪದವು ಒಂದು ಸಂಖ್ಯಾಸೂಚಕ ಎನ್ -ಕಾಂಡ,(ಅದರ ಅಧ್ಯಾಯವಾಗಿದೆ).ಅದರ ಮಧ್ಯ ಭಾಗವೆನ್ನುವಂತೆ ಗೋಚರಿಸುತ್ತದೆ.dhárman- ,ಇದರರ್ಥ ಒಂದು ಅರ್ಥದ ಶ್ರೇಣಿಯು"ಒಂದು ಸಂಸ್ಥಾಪಿತ ಅಥವಾ ಧೃಢ "ಎಂದು ತನ್ನ ಆವರಿಸುವಿಕೆಯನ್ನು ಸೂಚಿಸುತ್ತವೆ.(ಇವುಗಳ ಅಕ್ಷರಶಃ ಅರ್ಥವೆಂದರೆ ಪ್ರಚೋದನೆಗಳು ಅಥವಾ ಅದರ ಒಂದುಗೂಡುವಿಕೆಯ ಸ್ಥಿರಬಿಂದುಗಳು), ಅವುಗಳ ರೂಪಾಂತರವೇ "ಸ್ಥಿರಸ್ಥಾಯಿಗಳು, ಶ್ರದ್ದಾವಂತ" ಎನ್ನುವ ವಿವರವಿದೆ. (ದೇವತಾ ಸ್ವರೂಪಿಗಳ ),ಅದಲ್ಲದೇ ಗ್ರೀಕ್ಧಾರ್ಮಿಕ ತತ್ವಗಳಿಗೆ ]]("ನಿಶ್ಚಿತ ಪ್ರಮಾಣ, ಕಟ್ಟಪ್ಪಣೆ,ನಿರ್ಭಂದದ ಕಾನೂನು" ಕಟ್ಟಳೆಗಳಿಗೆ ಸಮರೂಪಿಯಾಗಿವೆ. ಇಲ್ಲಿಆದರ್ಶಪ್ರಾಯ,ಶ್ರೇಷ್ಠ ಸಂಸ್ಕೃತ,ದಲ್ಲಿ ನಾಮಪದವು ಆಧ್ಯಾತ್ಮಿಕ ವಿಷಯಾಧಾರಿತವಾಗಿರುತ್ತದೆdharma- .

ಇದನ್ನು ಸಾಮಾನ್ಯವಾಗಿ ಮೂಲ-ಇಂಡೊ-ಇರಾನಿಯನ್ ಬೇರಾಗಿ ಕಾಣಿಸಲಾಗಿದೆ.*ಧಾರ್- ಎಂಬ ಪದದ ಮೂಲಾಧಾರದಿಂದ ಪಡೆಯಲಾಗಿದೆ. ("ಇದು ತೀವ್ರಗೊಳಿಸು , ಬೆಂಬಲಿಸು, ಎತ್ತಿಹಿಡಿ"),ಎಂಬರ್ಥ ನೀಡುತ್ತದೆ.ಇದನ್ನು ಪ್ರತಿಬಿಂಬಿಸುವಂತೆ ಮೂಲ-ಇಂಡೊ-ಯುರೊಪಿಯನ್ ಬೇರಾಗಿದೆ.ಅದೇ ಬೇರನ್ನು*dʰer- ("ಎತ್ತಿ ಹಿಡಿ")[೫],ಇದೇ ಮೂಲಾಧಾರದ ಬೇರು ಸಂಸ್ಕೃತದಲ್ಲಿ ಶ್ರೇಷ್ಠ-1 ಮೂಲ ಬೇರಾಗಿ ಅದು √dhṛ ಎಂಬರ್ಥದಲ್ಲಿ ಪ್ರತಿಬಿಂಬಿತವಾಗಿದೆ. ವ್ಯುತ್ಪತ್ತಿಶಾಸ್ತ್ರದನುಗುಣವಾಗಿ ಇದು ಅವೆಸ್ತಾನ್ ಭಾಷೆಯ √dar- ಎಂಬುದಾಗಿದೆ. ("ಎತ್ತಿಹಿಡಿ "),ಎಂಬರ್ಥ ನೀಡುತ್ತದೆ. ಪುರಾತನ ಪರ್ಸಿಯನ್ ನ√dar- ನಲ್ಲಿ ("ಎತ್ತಿಹಿಡಿ,ಹೊಂದು"), ಲ್ಯಾಟಿನ್ ನಲ್ಲಿಫ್ರೆನ್ಯುಮ್ ("ನಿಯಂತ್ರಣ ಸಾಧನ, ಕುದುರೆ ಲಗಾಮು "), ಎಂದಾದರೆ ಲಿಥಿಯುನಿಯನ್ ನಲ್ಲಿ ಡೆರೆ ಟಿ ಡೆರೆ ಟಿ ("ಸೂಕ್ತವಾದ,ಯೋಗ್ಯತೆಗೆ ಹೊಂದುವ,"),ಲಿಥಿಯುನಿಯನ್ ಡೆರ್ಮೆ(dermė) (ಒಪ್ಪಂದ)[೬],ದೃಢ ("ಸಾಮರಸ್ಯ") ಮತ್ತು OCS drъžati ("ಎತ್ತಿ ಹಿಡಿ, ಹೊಂದು"). ಶ್ರೇಷ್ಠವಾದ ಆದರ್ಶಪ್ರಾಯವಾದ ಸಂಸ್ಕೃತ ಶಬ್ದವೆಂದರೆ ಧರ್ಮಾಸ್ ಇವುಗಳು ಸಾಮಾನ್ಯವಾಗಿ ಈ ಹಿಂದಿನ ಶಬ್ದಗಳಿಗೆ ಹೊಂದಾಣಿಕೆಯಾಗುವ ಲ್ಯಾಟಿನ್ ಒ-ಸ್ಟೆಮ್ಫರ್ಮುಸ್ < *PIE *dʰer-mo-s (ಡೆರ್ -ಮೊ- ಎಸ್ ಅಂದರೆ "ಅದಕ್ಕೆ ಅಂಟಿಕೊಂಡಿರುವ", ಎಂಬ ಅದರ ಒಳಾರ್ಥವನ್ನು ತೋರಿಸುತ್ತದೆ.ಆದರೆ ಇದು ತನ್ನ ಐತಿಹಾಸಿಕ ಅಭಿವೃದ್ಧಿಯ ಮೂಲಕ ಈ ವ್ಯುತ್ಪತ್ತಿ ಪಡೆದಿದೆಯೇ ವಿನಹ ಆದರೆ ಋಗ್ವೇದದ ಮೂಲಕ್ಕೆ ಸಂಬಂಧಿಸಿದಲ್ಲ

ಆದರೆ ಅಥರ್ವವೇದ ಮತ್ತು ಶ್ರೇಷ್ಠ ಭಾಷೆ ಸಂಸ್ಕೃತ, ಇದರ ಬೇರು ವಿಷಯಾನುಕ್ರಮ ಸೂಚಿಸುತ್ತದೆ.ಇದರ ಮೂಲ ಲಿಪಿಯು,dhárma- (ದೇವನಾಗರಿ: धर्म), ಮತ್ತು ಪಾಲಿ,ಯ ಭಾಷೆಯಲ್ಲಿ ಇದು ಧಮ್ಮಾ ಎಂಬ ರೂಪ ಪಡೆದಿದೆ. ಆದರೆ ಇದನ್ನು ಸಾಮಾನ್ಯವಾಗಿ ಆಗಾಗ್ಗೆ ಧರಮ್ ಎಂದು ಭಾರತೀಯ ಸಮಕಾಲೀನ ಭಾಷೆಗಳಲ್ಲಿ ಮತ್ತು ಅನುಸಂಧಾನಗಳಲ್ಲಿ ಬಳಸಲಾಗಿದೆ. ಈ ಶಬ್ದವನ್ನು ಬಹುತೇಕ ಎಲ್ಲಾ ಕಡೆಯ ತತ್ವಶಾಸ್ತ್ರೀಯ ಸಂಬಂಧಗಳಲ್ಲಿ ಬಳಸಲಾಗುತ್ತದೆ.ಅದಲ್ಲದೇ ಭಾರತೀಯ ಮೂಲದ ಎಲ್ಲಾ ಧರ್ಮಗಳಲ್ಲಿ—ಕೆಲವೊಮ್ಮೆ ಅದನ್ನು ಧಾರ್ಮಿಕ ನಂಬಿಕೆಗಳು —ಅವುಗಳೆಂದರೆ ಹಿಂದುತ್ವ, ಬೌದ್ದ,ಜೈನ್ ತತ್ವ,ಮತ್ತುಸಿಖ್ಖಎಂದು ವಿಂಗಡಿಸಲಾಗಿದೆ. ಆದರೆ ಇದಕ್ಕೆ ಪ್ರತ್ಯೇಕವಾಗಿ ಒಂದೇ ಚೌಕಟ್ಟಿಗೆ ಹೊಂದುವ ಒಂದೇ ಒಂದು ಪರಿಪೂರ್ಣ ವ್ಯಾಖ್ಯಾನವನ್ನು ಧರ್ಮ ,ಕ್ಕಾಗಿ ಒದಗಿಸುವುದು ಅತ್ಯಂತ ಕಠಿಣ ಕೆಲಸವಾಗಿದೆ.ಯಾಕೆಂದರೆ ಈ ಶಬ್ದಕ್ಕೆ ವಿಶಾಲ ಮತ್ತು ಸುದೀರ್ಘ ಇತಿಹಾಸವಿದೆ.ಹೀಗಾಗಿ ಈ ಶಬ್ದಕ್ಕೆ ಅರ್ಥ ವ್ಯಾಖ್ಯಾನದಲ್ಲಿ ಒಂದು ಅನಿಶ್ಚಿತತೆ ಕಂಡು ಬರುವುದಲ್ಲದೇ ಸಂಕೀರ್ಣವಾದ ಅರ್ಥದ ಮತ್ತು ಅರ್ಥವಿವರಣೆಯ ಪದಗುಚ್ಛವಿದೆ.

ಹಿಂದುತ್ವ, ಬೌದ್ದ, ಜೈನ ಮತ್ತು ಸಿಖ್ಖ ಇವುಗಳನ್ನೆಲ್ಲಾಹಿಂದು ಧರ್ಮ ,ಬೌದ್ದ ಧರ್ಮ , ಜೈನ ಧರ್ಮ ಮತ್ತು ಸಿಖ್ಖ ಧರ್ಮ ,ಎಂದು ಅನುಕ್ರಮವಾಗಿ ಕರೆಯಲಾಗುತ್ತದೆ.

ಹಿಂದುತ್ವದಲ್ಲಿ[ಬದಲಾಯಿಸಿ]

ಧರ್ಮ
ಧರ್ಮದ ಬಗೆಗೆ ಇರುವ ಪ್ರಸಿದ್ಧ ಸುಭಾಷಿತ
ಸತ್ಯಂ ಬ್ರೂಯಾತ್ ಪ್ರಿಯಂ ಬ್ರೂಯಾತ್ |
ನ ಬ್ರೂಯಾತ್ ಸತ್ಯಮಪ್ರಿಯಂ ||
ಪ್ರಿಯಂಚ ನಾನೃತಂ ಬ್ರೂಯಾತ್ |
ಏಷ ಧರ್ಮಃ ಸನಾತನಃ ||
ಸತ್ಯವನ್ನು ಹೇಳಬೇಕು , ಪ್ರಿಯವಾದುದನ್ನು (ಹಿತವಾದುದನ್ನು )ಹೇಳ ಬೇಕು ;
ಅಪ್ರಿಯವಾದ (ನೋವುಂಟುಮಾಡುವ) ಸತ್ಯವನ್ನು ಹೇಳಬಾರದು ;ಪ್ರಿಯವಾದುದೆಂದು ಅಸತ್ಯವನ್ನು ಹೇಳಬಾರದು; ಇದು ಸನಾತನ ಎಂದರೆ ಶಾಶ್ವತವಾದ ಧರ್ಮ.
ಧರ್ಮಕ್ಕೆ ಅನೇಕ ಬಗೆ ಅರ್ಥ , ವ್ಯಾಖ್ಯಾನಗಳಿದ್ದು ಬೇರೆ ಬೇರೆ ಸಂದರ್ಭಗಳಲ್ಲಿ ಬೇರೆ ಬೇರೆ ಅರ್ಥಗಳಲ್ಲಿ ಉಪಯೋಗಿಸಲ್ಪಡುತ್ತದೆ.
ಧರ್ಮ ಎಂದರೆ ,ಸ್ವಭಾವ, ಕರ್ತವ್ಯ, ನಡವಳಿಕೆ , ನಿಯಮ/ ನಿಯಮಗಳು ಇತ್ಯಾದಿ ಬಹು ಅರ್ಥದಲ್ಲಿ ಉಪಯೋಗಿಸುವ ಪದ.: ರಾಜ ಧರ್ಮ , ಕ್ಷತ್ರಿಯ ಧರ್ಮ, ಗೃಹಸ್ತ ಧರ್ಮ, ಸಂನ್ಯಾಸ ಧರ್ಮ, ಸ್ತ್ರೀಧರ್ಮ , ಪತಿ ಧರ್ಮ, ಎಂದು ಬಗೆ ಬಗೆಯ ನಿಯಮಗಳಿವೆ . ಇದು ಕಾಲ, ದೇಶ (ಫ್ರದೇಶ), ಗಳಿಗೆ ಬದಲಾವಣೆಗೊಳಪಡುತ್ತದೆ. (ಧಾರ್ಮಿಕ)ಮತ ಗಳಲ್ಲಿ ಬೇರೆ ಬೇರೆ ನಡವಳಿಕೆಗೆ , ಅದರಲ್ಲೂ ಪಂಗಡಗಳಿಗೆ ಬೇರೆ ಬೇರೆಯಾಗಿ ಅನ್ವಯವಗುತ್ತವೆ .
ಇಂದು ಜಗತ್ತಿನಲ್ಲಿ ಮಾನವ ಧರ್ಮ ಅತ್ಯಂತ ಪ್ರಾಮುಖ್ಯವಾದುದಾಗಿದೆ , ಮಾನವನ/ರಾಜ್ಯಗಳ ಯಾವದೇ ನಡವಳಿಕೆ ಸತ್ಯವೂ ,ಅಹಿಂಸಾತ್ಮಕವೂ, ಜೀವ ವಿರೋಧಿಯಲ್ಲದ್ದೂ , ಸರ್ವಹಿತ ಬಯಸುವುದೂ ಆಗಿರಬೇಕೆಂದು ಜಗತ್ತಿನ ಬಹುತೇಕ ದೇಶ/ ರಾಷ್ಟ್ರ ಗಳ ಬಯಕೆಯಾಗಿದೆ.
ಈ ಬಗೆಯ ಧರ್ಮಗಳ್ಲದೆ ವಿಶೇಷವಾದ ಆಪದ್ಧರ್ಮವೊಂದಿದೆ . ಅದು ಆಪತ್ತನ್ನು ಎದುರಿಸಲು ಅಥವಾ ಆಪತ್ತಿನಿಂದ ಪಾರಾಗಲು ಅನುಸರಿಸಬೇಕಾದ ಧರ್ಮ . ಆಗ ಆ ಕ್ರಮ ಅಥವಾ ಕ್ರಿಯೆಯೇ ಮುಖ್ಯ ಧರ್ಮವಾಗಿ ಉಳಿದ ಧರ್ಮ ನಿಯಮಗಳೆಲ್ಲಾ ಗೌಣವಾಗುತ್ತದೆ. ಇದನ್ನು ಇಂಗ್ಲಿಷ್ ನಲ್ಲಿ 'ಎಕ್ಷೆಪ್ಶನ್'(Exceptions) ಎಂದು ಹೇಳಬಹುದು .
ಕೆಲವೊಮ್ಮೆ ಅನುಸರಿಸಬೇಕಾದ ಧರ್ಮ ಯಾವುದೆಂದು ನಿರ್ಣಯಿಸಲು ಸಾಧ್ಯವಾಗದೇ ಹೋಗಬಹುದು . ಅದನ್ನು ಧರ್ಮ ಸಂಕಟವೆಂದು ಹೇಳುತ್ತಾರೆ. ಆಗ ಸಾಮಾನ್ಯವಾಗಿ ಹಿರಿಯರನ್ನೂ ಪ್ರಾಜ್ಞರನ್ನೂ ಕೇಳಿ/ ಸಲಹೆ ಪಡೆದು ಅನುಸರಿಸಬೇಕಾಗಬಹುದು. ಅದೂ ಅಸಾಧ್ಯವಾದರೆ ಹಿಂದಿನವರು ಆ ಬಗೆಯ ಸಂದರ್ಭದಲ್ಲಿ ಅನುಸರಿಸಿದ ಮಾರ್ಗ ಕ್ಷೇಮತರವಾದುದು.
ಧಾರಯತಿ ಇತ್ಯೇತಿ ಧರ್ಮಃ- ಎನ್ನುವುದು ಸಾಮಾನ್ಯ ವ್ಯಾಖ್ಯಾನ -ಮಾನವ ಸಮಾಜವನ್ನು ಶಾಂತಿಯುತವಾಗಿ, ನ್ಯಾಯಬದ್ಧವಾಗಿ ಎತ್ತಿ ಹಿಡಿಯುವಂತ ನಿಯಮಗಳು ಧರ್ಮ. ಇತ್ಯಾದಿ. ಚರ್ಚೆ
ಹಿಂದೂ ಧರ್ಮದ
ಮೇಲಿನ ಒಂದು ಸರಣಿಯ ಭಾಗ
ಹಿಂದೂ ಧರ್ಮ

ಓಂಬ್ರಹ್ಮಈಶ್ವರ
ಹಿಂದೂಹಿಂದೂ ಧರ್ಮದ ಇತಿಹಾಸ


ಬೆಳವಣಿಗೆ[ಬದಲಾಯಿಸಿ]

ಇದರ ನಂಬಿಕೆಯ ಆಧಾರದಲ್ಲಿ (ಅಥವಾ ನಿರೀಕ್ಷಣಾಧಾರದಲ್ಲಿ) ಸರ್ವೆ ಸಾಮಾನ್ಯವಾದ ನ್ಯಾಯಯುತ ನಡತೆ ಮತ್ತು ಸೌಹಾರ್ದತೆ ಎಲ್ಲೆಡೆಯೂ ವ್ಯಾಪಿಸಿದೆ.ಇಲ್ಲಿ (ವೃತ)rtaಎಂಬುದು ಸಾರ್ವಕಾಲಿಕ ಮತ್ತು ಸಾರ್ವತ್ರಿಕವಾಗಿದ್ದು,ಇದು 'ಪ್ರಕೃತಿಯ ಮಾರ್ಗಸೂಚಿ' ಮತ್ತು ಅದು ನಿಸರ್ಗದ ಪ್ರಕೃತಿಯ ಆಣತಿಗನುಗುಣವಾಗಿ ನಡೆಯುವುದು ಅದರ ಪ್ರಮುಖ ಕಾರ್ಯಗಳಲ್ಲಿಯೊಂದಾಗಿದೆ. ಹೀಗೆ ಈ (ವೃತ) rta ಎಂಬ ಪರಿಕಲ್ಪನೆಯು ಪುರಾತನ ಚೀನಾದ ಪರಿಕಲ್ಪನೆಯಾದ (ತಾವೊ)tao ಮತ್ತು (ಗ್ರೀಕ್ ತತ್ವಜ್ಞಾನಿಯ ಆರಂಭಿಕ ಕಾಲದ ವಿಚಾರವಾದ)ಹೆರಾಕ್ಲಿಟಿಯನ್, ಸದ್ಗುಣಶೀಲತೆ ಅಥವಾ ಕ್ರಿಶ್ಚಿಯನ್ ಆಚರಣೆ ಹೆಗ್ಗುರುತುಗಳ ಆಚರಣೆ ಅಂಶವನ್ನು ಎತ್ತಿ ಹಿಡಿಯುವ ಪರಿಕಲ್ಪನಾ ಪದ್ದತಿಯಾಗಿದೆ.

ಹೀಗೆ ಈ ಅಗೋಚರ "ಶಕ್ತಿ"ಯು ಈ ನಿಸರ್ಗದ ಹಿಂದೆ ಅಡಗಿದೆ.ಅದು ಈ ನಿಸರ್ಗದ ಎಲ್ಲಾ ರೀತಿಗಳನ್ನು ಸಮತೋಲನಗೊಳಿಸುತ್ತದೆ.ಇಂತಹ ನೈಸರ್ಗಿಕ ವಿಚಾರಧಾರೆಯೇ ಧರ್ಮ ಎನಿಸಿಕೊಳ್ಳುತ್ತದೆ. ಇಲ್ಲಿವೃತದ rta ವಿಚಾರಧಾರೆಯೇ ಧರ್ಮದ ಮೂಲ ಅಡಿಗಲ್ಲು-ಇಡಿಗಲ್ಲಾಗಿ "ಅಂತಿಮ ಸತ್ಯ ದರ್ಶನ" ಮಾಡಿಸಿ ಸಾರ್ವತ್ರಿಕವಾಗಿ ಎಲ್ಲೆಡೆ ಪಸರಿಸಿದೆ.ಅದಲ್ಲದೇ ಆದರ್ಶಪ್ರಾಯವಾದ ಶ್ರೇಷ್ಠ ವೇದಿಕ್ ಹಿಂದುತ್ವ ದಲ್ಲಿ ಇದರ ಸವಿವರ ಪ್ರಸ್ತಾಪವಿದೆ.ಈ ಕೆಳಗಿನ ಉಕ್ತಿಯು ಋಗ್ವೇದದಲ್ಲಿ ಪ್ರಸ್ತುತವಿದೆ.ಅದಕ್ಕೆ ಉದಾಹರಣೆ ವೃತ rta ಅದರ ಪ್ರಮುಖವಾದ ಅಂಗವೆನ್ನಲಾಗಿದೆ:

O Indra, lead us on the path of Rta, on the right path over all evils

— (RV 10.133.6)

ಈ ಶಬ್ದದ ಅನುವಾದವು ವೃತ rta ಆಧುನಿಕ ವಿಚಾರ ಏನೆಂಬುದನ್ನು ವಿವರಿಸುತ್ತದೆ.ಧರ್ಮವು ಬೃಹದರನಾಯಕ ಉಪನಿಷಿದ್ ನಲ್ಲಿ ಸಂಪೂರ್ಣ ವಿವರಕ್ಕಾಗಿ ನೋಡಬಹುದಾಗಿದೆ. ಧರ್ಮವು ಸಾರ್ವತ್ರಿಕ ಕಾನೂನಿನ ತತ್ವವೆಂದು ಉಪನಿಷದ್ದಗಳು ಭೋದಿಸುತ್ತಿವೆ.ಎಲ್ಲಾ ಸತ್ಯಗಳೂ ಅಲ್ಲಿ ಅಡಗಿವೆ.ಅದೂ ಕೂಡ (ಬ್ರಾಹ್ಮಣ್ )ಬ್ರಹ್ಮನಿಂದ ಬಂದದ್ದೆಂದು ಹೇಳಲಾಗಿದೆ. ಇದು ಬ್ರಹ್ಮಾಂಡದ ತತ್ವಗಳ ನಿಯಂತ್ರಣಕ್ಕಾಗಿ ನೈತಿಕ ತತ್ವಗಳಾಚರಣೆಗೆ ಪ್ರತಿಕ್ರಿಯಾತ್ಮಕವಾಗಿದೆ. ಇಲ್ಲಿಸತ್ sat , ಸತ್ಯ, ಎಂಬ ತತ್ವದ ಮೇಲೆ ಹಿಂದು ಧರ್ಮ ನಿಂತಿದೆ,ಅದರ ಪ್ರಮುಖ ಮತ ಸಿದ್ದಾಂತದ ಅಂಶವೂ ಇದಾಗಿದೆ. ಈ ಮತತತ್ವದ ಪರಿಕಲ್ಪನೆಯ ಶಬ್ದ ಬಹು ಹಿಂದೆಯೇ ಕೇಳಿ ಬಂದಿದೆ,ಇದನ್ನು ಋಗ್ವೇದ ದಲ್ಲಿ "ಏಕಮ್ ಸತ್,"(ಸತ್ಯವೊಂದೇ ಒಂದು),ಇದನ್ನು ಬ್ರಾಹ್ಮಣ ರೂಪಿಯಾದ ಎಂಬ ವಿಚಾರವನ್ನು "ಸಚ್ಚಿದಾನಂದ "(ಸತ್ಯ-ಮನಸ್ಥಿತಿ-ಆನಂದ) ಎಂದು ವ್ಯಾಖ್ಯಾನಿಸಲಾಗಿದೆ. ಧರ್ಮವೆಂದರೆ ಕೇವಲ ಒಂದು ಕಾನೂನಲ್ಲ ಅಥವಾ ಕೇವಲ ಸೌಹಾರ್ದತೆಯಲ್ಲ;ಇದು ಒಂದು ಸತ್ಯದರ್ಶನವಾಗಿದೆ. ಬೃಹದರನಾಯಕದಲ್ಲಿ ಪ್ರಸ್ತಾಪಿಸಿದ ಅದರದೇ ಆದ ಶಬ್ದಗಳನ್ನು ಹೇಳಲಾಗಿದೆ:

Verily, that which is Dharma is truth.

Therefore they say of a man who speaks truth, "He speaks the Dharma,"
or of a man who speaks the Dharma, "He speaks the Truth."

Verily, both these things are the same.

— (Brh. Upanishad, 1.4.14) (2)

ಇಲ್ಲಿ ಮಹಾಭಾರತ,ದ ಸಂದರ್ಭದಲ್ಲಿ ಕೃಷ್ಣಧರ್ಮವನ್ನು ಹೀಗೆ ವ್ಯಾಖ್ಯಾನಿಸಿದ್ದಾನೆ: "ಧಾರಾನಾದ ಧರ್ಮ ಇತ್ಯ ಆಹುರ್ ಧರ್ಮೇನ್ ವಿಧಾರ್ಥಾಹ್ ಪ್ರಜಾಹ,ಯತ್ ಸ್ಯಾದ್ ಧಾರಣಾ ಸಂಯುಕ್ತಮ್ ಸ ಧರ್ಮ ಇತಿ ನಿಶ್ಚಯಾಹ,"ಅಥವಾ,"ಧರ್ಮವು ಈ ಲೌಕಿಕ ಮತ್ತು ಲೌಕಿಕದಾಚೆಯ ವ್ಯವಹಾರಗಳ ಜಗತ್ತನ್ನು ಎತ್ತಿಹಿಡಿಯುವ, ನಿಯಂತ್ರಿಸುವ ಸತ್ ಸಂಪ್ರದಾಯವನ್ನು ಹೊಂದಿದೆ." (Mbh 12.110.11).

"ಪುರುಷಾರ್ಥ" ದಂತೆ[ಬದಲಾಯಿಸಿ]

ಮನುಷ್ಯ ತನ್ನ ನಾಲ್ಕು ಆಶ್ರಮಗಳನ್ನು,ಅಥವಾ ಬದುಕಿನ ಹಂತಗಳ ದಾಟಬೇಕಾಗುತ್ತದೆ, ಅವುಗಳೆಂದರೆ: ಬ್ರಹ್ಮಚರ್ಯೆ,ಗೃಹಸ್ಥ, ವಾನಪ್ರಸ್ಥ,ಸನ್ಯಾಸ,ಹೀಗೆ ಮನುಷ್ಯ ತನ್ನ ಈ ಹಂತಗಳ ಪಾರಾಗಲು ನಾಲ್ಕು ಅವಶ್ಯಕತೆಗಳನ್ನು ಪೂರೈಸಬೇಕಾಗುತ್ತದೆ.ಕಾಮದ(ಪುರುಷಾರ್ಥ)(ಐಹಿಕ-ಭೌತಿಕ-ಇಂದ್ರಿಯ ಸುಖಗಳು), ಅರ್ಥ(ಸಂಪತ್ತಿನ ಗಳಿಕೆ )ಧರ್ಮ ಮತ್ತು ಮೋಕ್ಷ ಮರುಅವತಾರಅಥವಾ ಮರುಜನ್ಮದಿಂದ ವಿಮೋಚನೆ ಪಡೆಯುವುದು). ಮೋಕ್ಷವನ್ನು ಬದುಕಿನ ಅಂತಿಮ ಗುರಿ ಎನ್ನಲಾಗುತ್ತದೆ;ಆದರೆ ಕೊನೆಯ ಇನ್ನೆರಡು ಹಂತಗಳಾದ ಅರ್ಥ ಮತ್ತು ಕಾಮಗಳನ್ನು ಪ್ರಾಥಮಿಕವಾಗಿ ಬದುಕಿನ ಗೃಹಸ್ಥ ಆಶ್ರಮಕ್ಕಾಗಿ ಹೆಚ್ಚು ಹೊಂದಿಕೆಯಾಗುತ್ತವೆ. ಆದರೆ ಧರ್ಮವು ಬದುಕಿನ ಎಲ್ಲಾ ಹಂತಗಳಲ್ಲಿ ಅತ್ಯವಶ್ಯಕವಾಗಿದೆ. ಪುರುಷಾರ್ಥ (ಮಾನವ ಗುರಿ ಸಾಧನೆ) ಯಲ್ಲಿ,ಧರ್ಮವು ಒಂದು ಪಾರದರ್ಶಕ (ಕನ್ನಡಕ)ಗಾಜಾಗಿ ಅದರ ಮೂಲಕ ಮಾನವ ಜಗತ್ತಿನೊಂದಿಗೆ ತನ್ನ ಯೋಜನೆ ಮತ್ತು ಕಾರ್ಯಗಳಿಗೆ ಪ್ರತಿಕ್ರಿಯಾತ್ಮಕವಾಗಿರಬೇಕಾಗುತ್ತದೆ. ಧಾರ್ಮಿಕ ಕನ್ನಡಕ ಧರಿಸಿಯೇ ಮಾನವ ಯಾವುದು ಸರಿ ಯಾವುದು ತಪ್ಪು ಎನ್ನುವುದನ್ನು ಪ್ರತಿಬಿಂಬಿಸಬೇಕಾಗುತ್ತದೆ,ಇಲ್ಲಿ ಕಾಮ ಎಂಬ ವಿಷಯಾಸಕ್ತ ಮನಸು ಯಾವುದು ಸುಖಕರ ಎಂಬುದನ್ನು ಮಾತ್ರ ಮಾಡಲು ತೊಡಗುತ್ತದೆ.(ಹಲವಾರು ಬಾರಿ ಇದನ್ನು ಕೇವಲ ಭೋಗ ಎನ್ನುವುದು ಅಥವಾ ಲೈಂಗಿಕ ಕ್ರಿಯೆ ಎಂದು ಭಾವಿಸುವುದು ತಪ್ಪು).ಸಾಮಾನ್ಯವಾಗಿ ಇದರ್ಥವೆಂದರೆ ನೋವನ್ನು ದೂರ ಇಡುವುದೆಂಬ ಅರ್ಥ ಮಾತ್ರ ಇರುತ್ತದೆ.ಅದೇ ರೀತಿ ಅರ್ಥವೆಂದರೆ ಯಾವುದು ಲಾಭದಾಯಕ ಎಂಬುದರ ಮೇಲೆ ಗಮನವಿಟ್ಟು(ಅಂದರೆ ಬರೀ ಹಣಗಳಿಕೆ ಮಾತ್ರವಲ್ಲ)ನಷ್ಟವನ್ನು ದೂರ ಮಾಡುವುದೇ ಇದರ ಉದ್ದೇಶವಾಗಿದೆ.

ಧರ್ಮವನ್ನು ದೇವತೆಯಾಗಿ ಹೆಸರಿಸಿದ್ದು[ಬದಲಾಯಿಸಿ]

ಧರ್ಮ ಕೂಡ ಒಂದು ದೇವತೆಯ ಹೆಸರಾಗಿ ಹೆಸರಿಸಲಾಗಿದೆ.ಅದನ್ನು "ದೇವ" ಎಂಬಾತನೇ ಅದರ ಮೇಲ್ವಿಚಾರಕ ಎಂದೂ ಸಾಮಾನ್ಯವಾಗಿ ಹೇಳಲಾಗುತ್ತದೆ. ಪೌರಾಣಿಕವಾಗಿ, ಧರ್ಮ ಎಂಬಾತನು ಬ್ರಹ್ಮ,ನ ಬಲ ಸ್ತನದಿಂದ ಜನ್ಮತಾಳಿದ ಎಂಬ ಹೇಳಲಾಗುತ್ತದೆ.ನಂತರ ಆತ ದಕ್ಷ ನ ಹತ್ತು ಹೆಣ್ಣುಮಕ್ಕಳೊಂದಿಗೆ ಮದುವೆಯಾಗಿ ಶಮಾ,ಕಾಮ ಮತ್ತು ಹರಹಸಾ ಅವರುಗಳಿಗೆ ತಂದೆಯಾದ ಎಂಬ ಖ್ಯಾತಿಯೂ ಇದೆ. ಅಷ್ಟೇ ಅಲ್ಲದೇ ಆತ ಖ್ಯಾತನಾಮರಾದ ಋಷಿಸ್ ಹರಿ,ಕೃಷ್ಣನರ-ನಾರಾಯಣ ರಿಗೂ ತಂದೆಯಾಗಿದ್ದ.

ಹಿಂದುಗಳ ಮಹಾಗ್ರಂಥ ಮಹಾಭಾರತ,ದಲ್ಲಿ ಆತ ವಿದುರ ನಾಗಿ ಅವತಾರವೆತ್ತಿದ್ದಾನೆ.[೭] ಅದಲ್ಲದೇ, ಧರ್ಮವನ್ನು ಆಹ್ವಾನಿಸಿ ಪ್ರಾರ್ಥಿಸಿದ ಕುಂತಿಯು ಆತನಿಂದ ತನ್ನ ಹಿರಿಯ ಪುತ್ರ ಯುಧಿಷ್ಠರನನ್ನು ಪಡೆಯುತ್ತಾಳೆ. ಆದ್ದರಿಂದಲೇ ಯುಧಿಷ್ಠರ ನನ್ನು ಧರ್ಮಪುತ್ರ ಎಂದು ಕರೆಯಲಾಗುತ್ತದೆ. ಆದ್ದರಿಂದ ಧರ್ಮದೇವರು ಮತ್ತು ಯಮನ ನಡುವೆ ಒಂದು ಸಾದೃಶ್ಯವಿದೆ.ಯಮ ಸಾವಿಗೆ ಕಾರಣನಾಗುವ ದೇವರು ಎನ್ನಲಾಗುತ್ತದೆ.[೮]

ತಾಂತ್ರಿಕ ಸಾಹಿತ್ಯದಲ್ಲಿ[ಬದಲಾಯಿಸಿ]

ತಾಂತ್ರಿಕ ಸಾಹಿತ್ಯದಲ್ಲಿ, ಉದಾಹರಣೆಗಾಗಿ, ಸಂಸ್ಕೃತ ವ್ಯಾಕರಣ ದಲ್ಲಿ, ಧರ್ಮ ಎಂದರೆ "ಆಸ್ತಿ" ಮತ್ತು ಧರ್ಮಿನ್ ಅಂದರೆ "ಆಸ್ತಿ-ಒಡೆಯ-ಹೊಂದಿದವ" ಎಂದೂ ಹೇಳಲಾಗುತ್ತದೆ. ಸಂಸ್ಕೃತದ ವಾಕ್ಯವೊಂದರಂತೆ shabdo 'nityaḥ , "ಸಂಪತ್ತು ನಶ್ವರ ", "ಸೌಂಡ್" ಎಂದರೆ ಇಲ್ಲಿ ಅದು ಆಸ್ತಿ ಹೊಂದಿದವನೂ ಕೂಡ "ಶಾಶ್ವತವಲ್ಲ" ಆತನೂ ನಶ್ವರ ಎಂದೂ ಹೇಳಲಾಗಿದೆ. ಅದರಂತೆ ಈ ವಾಕ್ಯಾರ್ಥದಲ್ಲಿ iha ghataḥ ,"ಇಲ್ಲಿ, ಮಡಕೆಯೊಂದಿದೆ ", "ಇಲ್ಲಿ" ಎಂದರೆ ಇದರ ಒಡೆತನ ಹೊಂದಿರುವವ "ಮಡಕೆಯ-ಅಸ್ತಿತ್ವ"–ತೋರಿಸುತ್ತದೆ.ಆಗ ಸಂಪತ್ತು ಮತ್ತು ಅದನ್ನು ಹೊಂದಿದವನು ಯಾವಾಗಲೂ ಪರಸ್ಪರ ಅಶಾಶ್ವತರು ಎಂದು ಶ್ರೇಣಿಕರಣಗೊಳಿಸಲಾಗಿದೆ.ಇಲ್ಲಿ ತಾರ್ಕಿಕ ವಿಷಯ ವಸ್ತು ಮತ್ತು ಕರ್ತೃ ಅಂದರೆ ನಿಜವೆಂದು ನಂಬಿರುವಾತ ಇಲ್ಲಿ ವ್ಯಾಕರಣದ ಪರಿಕಲ್ಪನೆ ಇಲ್ಲ ಆದರೆ ತಾರ್ಕಿಕವಾಗಿ ಅಶಾಶ್ವತ ವಸ್ತುಗಳ ಮೇಲೆ ಮನುಷ್ಯನ ಕಣ್ಣು ಎಂಬುದನ್ನು ವಿವರಿಸುತ್ತದೆ.

ಬೌದ್ದತತ್ವದಲ್ಲಿನ ಸತ್ಯದರ್ಶನ[ಬದಲಾಯಿಸಿ]

ಹಲವಾರು ಬುದ್ದನ ಅನುಯಾಯಿಗಳಲ್ಲಿ, ಧರ್ಮವೆಂದರೆ ಗೌತಮ ಬುದ್ದ ನ ಭೋದನೆಗಳಲ್ಲಿನ ತತ್ವ ನಿರೂಪಣೆಗಳ ಮೇಲೆ ಹೆಚ್ಚಿನ ಅರ್ಥವ್ಯಾಖ್ಯಾನ ಮಾಡಲಾಗುತ್ತದೆ. ಈ ಪದವನ್ನು ಬೌದ್ದ ಮತದಲ್ಲಿ ಪಾರಮಾರ್ಥಿಕ ತತ್ವಶಾಸ್ತ್ರ ಅಥವಾ ಇದೇ ಅರ್ಥ ಸ್ಪುರಿಸುವ ಇನ್ನೊಂದು ಪದ ಪಾರಮಾರ್ಥಿಕ ವಿದ್ಯಮಾನ,ವು ಧರ್ಮವನ್ನು ಮೂಲದಲ್ಲಿ ಅದರ ಅಥವಾ ಆ ವಸ್ತುವಿನ ಅಸ್ತಿತ್ವವನ್ನು/ಅನುಭವಸಾರವನ್ನು ತೋರಿಸುತ್ತದೆ.

ಪೂರ್ವ ಏಷಿಯಾದಲ್ಲಿ, ಧರ್ಮದ ಅನುವಾದವೆಂದರೆ , ಇದನ್ನು (ಫಾ)ಎಂದು ಮಂಡಾರಿನ್,ನಲ್ಲಿ ಬಿಯೊಪ್ ಎಂದು ಕೊರಿಯನ್ ನಲ್ಲಿ, ಅದೇ ರೀತಿ (ಹೊ)ಎಂದು ಜಪಾನ್ ನಲ್ಲಿ, ಅಲ್ಲದೇ pháp (ಫಾಪ್ )ಎಂದು ವಿಯೆಟ್ನಾಮನಲ್ಲಿ ಅದರ ಭಾಷಾನುವಾದಕ್ಕೆ ತಕ್ಕಂತೆ ಸರಿಯಾಗಿ ಉಚ್ಚರಿಸುತ್ತಾರೆ. ಹೇಗೆಯಾದರೂ ಧರ್ಮವನ್ನು ಅದರ ಮೂಲ ಅರ್ಥವಾದ ತತ್ವಶಾಸ್ತ್ರೀಯತೆಯಿಂದ ಅನುವಾದ ಮಾಡಲಾಗಿದೆ.

ಬುದ್ದನ ಭೋಧನೆಗಳು[ಬದಲಾಯಿಸಿ]

ಬೌದ್ದ ಮತದ ಅನುಯಾಯಿಗಳು, "ಧರ್ಮ" ಅಥವಾಧಮ್ಮಾ ಎಂದು ಪಾಲಿ ಭಾಷೆಯಲ್ಲಿ ಕರೆಯುತ್ತಾರೆ.ಇದರ ಉಲ್ಲೇಖವನ್ನು ವಿಶೇಷವಾಗಿ, "ಈ" ಧರ್ಮ, ಎಂದರೆ ಬುದ್ದನ ಭೋದನೆಗಳು ಎಂದರ್ಥ. ಇವುಗಳನ್ನು ಪೂರ್ವ ಭಾಗದಾದ್ಯಂತ ಸಾಮಾನ್ಯವಾಗಿ ಬುದ್ದ-ಧ್ರಮ ಎಂದು ವ್ಯಾಖ್ಯಾನಿಸಲಾಗುತ್ತಿದೆ.

ಧರ್ಮದ ರಚನೆ-ಸ್ಥಾನಮಾನದ ಬಗ್ಗೆ ಬೌದ್ದ ಸಂಪ್ರದಾಯದಲ್ಲಿ ವಿಶೇಷ ವಿಭಿನ್ನತೆಗಳಿವೆ. ಕೆಲವರು ಇದನ್ನು ಅಂತಿಮ ಸತ್ಯವೆನ್ನುತ್ತಾರೆ, ಅಥವಾ ಎಲ್ಲಾ ವಸ್ತುಗಳಿಗಿಂತಲೂ ಮುಂಚೂಣಿಯಲ್ಲಿರುವ 'ಮೂರು ಕಾವ್ಯಲೋಕಗಳು'ಮೀರಿ ಇದು ವಿವರಿಸಲ್ಪಟ್ಟಿದೆ. (ಸಂಸ್ಕೃತ: ಮೂರು ಲೋಕ,ತ್ರಿಧಾತು ) ಅಲ್ಲದೇ 'ಚಕ್ರದ ಆವರ್ತನ (ಸಂಸ್ಕೃತ:ಭಾವಚಕ್ರ ),ಇದು ಕೆಲಮಟ್ಟಿಗೆ ಕ್ರಿಶ್ಚಿಯನ್ ಧರ್ಮಚಿನ್ಹೆಗಳ ಹೋಲುತ್ತದೆ: ಅದನ್ನೇ ನಾವು ಬೌದ್ದ ಮತದ ಧರ್ಮಕಾಯ ಎಂದು (ಸಂಸ್ಕೃತ )ದಲ್ಲಿ ಹೇಳುತ್ತೇವೆ. ಇನ್ನುಳಿದವರು ಬುದ್ದನನ್ನು ಕೇವಲ ಜ್ಞಾನವಂತ ಜ್ಞಾನೋದಯದವಾದ ಮಾನವನಾಗಿ ಕಾಣುವವರು ಧರ್ಮವನ್ನು ಸುಮಾರು ೮೪೦೦೦ ವಿಭಿನ್ನ ಭೋಧನೆಗಳ ಪ್ರಕಾರವೆಂದು ಅರ್ಥೈಸುತ್ತಾರೆ.' (ಟಿಬೆಟಿಯನ್:ಚೊಸ್-ಸ್ಗೊ ಬ್ರಿಗ್ಯಾಡ್-ಖ್ರಿ ಬ್ಜಿ ಸ್ಟ್ರಾಂಗ್ ) ಎನ್ನುತ್ತಾರೆ.ಅಂದರೆ ಬುದ್ದನು ಸಮಾಜದಲ್ಲಿನ ವಿವಿಧ ಸ್ತರದ ಜನರ ವೈಯಕ್ತಿಕ ಸಾಮರ್ಥ್ಯ,ದಕ್ಷತೆಗಳ ಮೇಲೆ ತನ್ನ ಭೋದನಾ ವಿವರವನ್ನು ನೀಡಿದ್ದಾನೆ.

"ಧರ್ಮ" ವನ್ನು ಕೇವಲ ಬುದ್ದನ ಹೇಳಿಕೆ ಸೂತ್ರಗಳ ಮೇಲೆಯೇ ಅರ್ಥೈಸಿಲ್ಲ.ವಿವಿಧ ನಂತರದ ಸಾಂಪ್ರದಾಯಿಕತೆಗಳ ಅರ್ಥವಿವರಣೆ ಮತ್ತು ವಿವಿಧ ಸ್ತರಗಳಲ್ಲಿನ ಬುದ್ದ ತತ್ವ ಭೋದನಾ ಪಾಠಶಾಲೆಗಳಲ್ಲಿನ ಕಲಿಕೆಯೂ ಇದರಲ್ಲಿದೆ.ಅಲ್ಲದೇ ವಿಭಿನ್ನ ಬುದ್ದನ ಭೋದನೆಯ ಪೂರ್ಣ ಪಾಠ ಮತ್ತು ಆತನ ಪ್ರವಚನದಂತಹ ತಿಳಿವಳಿಕೆಗಳ ಮನವರಿಕೆಗೆ ಸಂಸ್ಥೆಗಳು ಮುಂದಾದವು.ಇವುಗಳ ಉಲ್ಲೇಖನೀಯ ಕಾರ್ಯಚಟುವಟಿಕೆಗಳಿಂದಾಗಿ ಅದು ತನ್ನ ಪ್ರವರ್ಧಮಾನಕ್ಕೆ ತಲುಪುವಲ್ಲಿ ಯಶಸ್ವಿಯಾಯಿತು. ಉಳಿದವರು ಎನಿಸುವಂತೆ ಧರ್ಮವನ್ನು ಇಂದೂ ಕೂಡಾ "ಸತ್ಯ" ಅಥವಾ ಅಂತಿಮ ಸತ್ಯದರ್ಶನ ತೋರಿಸುವ ವಸ್ತುಗಳ ನೈಜತೆ ಬಗ್ಗೆ ಅದು ವಿವರಿಸುತ್ತದೆ."(Tib. ಚೊ).

ಧರ್ಮವನ್ನು ಬೌದ್ದ ಮತದ ಮೂರು ಮಣಿಖಚಿತ ರತ್ನಾಭರಣಗಳು ಎಂದು ಹೇಳಲಾಗುತ್ತದೆ.ಬೌದ್ದ ತತ್ವ ಅನುಯಾಯಿಗಳು ಮತ್ತು ಅದರ ಆಶ್ರಯ ಪಡೆಯುವವರು ಸಂತೋಷ ಅಥವಾ ಆನಂದದ ಪರಾಕಾಷ್ಠೆ ತಲುಪುವ ಗುರಿ ಹೊಂದಿರುತ್ತಾರೆ. ಬೌದ್ದಧರ್ಮದ ಮೂರು ಮಣಿ ಖಚಿತ ಮೂರು ರತ್ನಾಭರಣಗಳೆಂದರೆ ಬುದ್ದ, ಅಂದರೆ ಮನಸ್ಸಿನ ಜ್ಞಾನೋದಯದ ಮೂಲಕ ಪರಿಪೂರ್ಣತೆಗೆ ತಲುಪುವುದು,ಧರ್ಮ,ಎಂದರೆ ಬುದ್ದನ ಜಾಗೃತಿಗೊಳಿಸುವ ವಿಧಾನದ,ಪದ್ದತಿಯಂತೆ ಆತನ ಸತ್ವಯುತ ಭೋಧನೆಗಳು; ಮತ್ತು ಸಂಘ,ಇದು ಬುದ್ದ ಅನುಯಾಯಿಗಳ ಜಾಗೃತಿ ಮತ್ತು ಮಾರ್ಗದರ್ಶನಕ್ಕೆ ಅನುಕೂಲ ಕಲ್ಪಿಸುತ್ತದೆ.

ಬೌದ್ದ ಧರ್ಮದ ಗುಣಲಕ್ಷಣಗಳು[ಬದಲಾಯಿಸಿ]

ಬುದ್ದನ ಭೋಧನೆಗಳು ಆರು ಅತ್ಯುನ್ನತ ಗುಣಲಕ್ಷಣಗಳನ್ನು ಹೊಂದಿವೆ:

  1. ಸವಖ್ಖತೊ (ಭಾಗವತದ ಧರ್ಮದಲ್ಲಿ) (ಪಾಲಿ ಭಾಷೆಯಲ್ಲಿ)ಇದು ಕೇವಲ ಕಾಲ್ಪನಿಕ ತತ್ವಶಾಸ್ತ್ರವಲ್ಲ, ಇದು ಒಪ್ಪಿತ ಸಾರ್ವತ್ರಿಕ ಕಾನೂನು,ಇದನ್ನು ಜ್ಞಾನೋದಯ ಮತ್ತು ಉತ್ತಮ ಭೋಧನೆ ಮೂಲಕ ಪಸರಿಸಬಹುದಾಗಿದೆ, ಆದ್ದರಿಂದ ಇದು ಆರಂಭದಲ್ಲಿ ಅತ್ಯುನ್ನತ ಮೌಲ್ಯಯುಳ್ಳದ್ದಾಗಿದೆ.(ಶೀಲ— ನೈತಿಕ ತತ್ವಗಳು ),ಮಧ್ಯದ ಉತ್ತಮ ಸ್ತರದ ಉನ್ನತಿಯ (ಸಮಾಧಿ— ಮನಸ್ಸು ಕೇಂದ್ರೀಕರಣ) ಅಲ್ಲದೇ ಅಂತಿಮವಾಗಿ ಅತ್ಯುನ್ನತ ದೈವದ ಮಾರ್ಗಸೂಚಿಯಾಗಿದೆ. (ಪಾಣ್ಣಾ— ಜಾಣ್ಮೆ).
  2. ಸಾದಿತ್ತಿಕೊ (ಪಾಲಿ) ಧರ್ಮವನ್ನು ಆಚರಣೆ ಮೂಲಕ ಪರೀಕ್ಷೆಗೆ ಒಳಪಡಿಸಬೇಕಾಗುತ್ತದೆ.ಯಾರು ಇದನ್ನು ಅಳವಡಿಸಿಕೊಳ್ಳುತ್ತಾರೋ ಅವರ ಅನುಭವವೇ ಅದರ ಫಲಿತಾಂಶವಾಗುತ್ತದೆ.
  3. ಅಕಾಲಿಕೊ (ಪಾಲಿ) ಧರ್ಮವು ಯಾವಾಗಲೂ ವೇಳೆಯ ಮಹತ್ವದೊಂದಿಗೆ ತತ್ ಕ್ಷಣದ ಪರಿಹಾರ ಒದಗಿಸುತ್ತದೆ.ಆಗಾಗ ಮಾಡುವ ಕಾರ್ಯಗಳ ಮೇಲೆ ನಿಗಾ ವಹಿಸುತ್ತದೆ.ಇದು ಮುಂದಿನ ಭವಿಷ್ಯ ಅಥವಾ ಅದರ ಮುಂದಿನ ಅಸ್ತಿತ್ವದ ಪಯಣಕ್ಕಾಗಿ ಕಾಯಬೇಕಿಲ್ಲ.ಅವನ್ನು ಅದು ಸೂಚಿಸುತ್ತದೆ.
  4. ಎಹಿಪಾಸ್ಸಿಕೊ (ಪಾಲಿ) ಧರ್ಮವು ಎಲ್ಲಾ ಮಾನವ ಜೀವಿಗಳನ್ನು ತನ್ನೆಡೆಗೆ ಆಕರ್ಷಿಸುತ್ತದೆ,ಅಲ್ಲದೇ ಅದನ್ನು ತನ್ನಷ್ಟಕ್ಕೆ ತಾನೇ ಅನುಭವವನ್ನು ಪಡೆಯುವಂತೆ ಮಾಡುತ್ತದೆ.
  5. ಒಪಾನೆಯಿಕೊ (ಪಾಲಿ)ಧರ್ಮವು ಎಲ್ಲೆಡೆಗೂ ತನ್ನ ಪ್ರವೇಶವನ್ನು ಮುಕ್ತವಾಗಿರಿಸುತ್ತದೆ.ಆದ್ದರಿಂದ ಇದು ಮೌಲ್ಯಯುತ ಗುಣಗಳಿಂದಾಗಿ ನಮ್ಮ ಬದುಕಿನ ಭಾಗವಾಗಿ ನಮ್ಮೊಂದಿಗೆ ಇರುತ್ತದೆ.
  6. ಪಕ್ಕಾತ್ತಮ್ ವೆದಿತ್ಯಾಬ್ಬೊ ವಿನ್ನುಹಿ (ಪಾಲಿ) ಧರ್ಮವನ್ನು ಉದಾತ್ತ ಗುಣಗಳನ್ನು ಅಳವಡಿಸುವುದರೊಂದಿಗೆ ಅದರ ಉದಾಹರಣೆ ಒದಗಿಸುತ್ತದೆ.ಅದರ ಉದಾತ್ತ ಅನುಯಾಯಿಗಳು ಅಥವಾ ಶೃದ್ದಾಳುಗಳು ಮಾತ್ರ ಇದನ್ನು ಆಚರಿಸಲು ಶಕ್ಯರಾಗಿರುತ್ತಾರೆ.(ಪಾಲಿ: ಆರಿಯಾಸ್ ) ಯಾರು ತಮ್ಮ ಸಾಧನೆ,ತಪಸ್ಸಿನಲ್ಲಿ ಜ್ಞಾನೋದಯದ ಮಟ್ಟಕ್ಕೇರಿ ಪ್ರಬುದ್ದತೆ ಪಡೆದು ತನ್ನ ಸರ್ವೋಚ್ಚತೆಯನ್ನು ಪ್ರದರ್ಶಿಸುತ್ತದೆ.

ಇದನ್ನರಿತ ಬುದ್ದ ಮತದ ಅನುಯಾಯಿಗಳು ಶಾಂತಿ ಮತ್ತು ಸಂತೋಷದ ತುತ್ತತುದಿಗೆ ತಲುಪಲು ಧರ್ಮದ ಆಚರಣೆ ಅವಶ್ಯವಾಗಿದೆ ಎಂದು ನಂಬುತ್ತಾರೆ. ಪ್ರತಿಯೊಬ್ಬರೂ ತಮ್ಮ ಆಚರಣೆ ಮತ್ತು ಬದ್ದತೆಗಳಿಗೆ ಸಂಪೂರ್ಣ ಜವಾಬ್ದಾರಿಯಾಗಿರುತ್ತಾನೆ.

ಬೌದ್ದತತ್ವ ಮತದ ಪಾರಮಾರ್ಥಿಕ ವಿದ್ಯಮಾನ[ಬದಲಾಯಿಸಿ]

ಇನ್ನುಳಿದ ಧರ್ಮ ,ದ ಅರ್ಥವ್ಯಾಪ್ತಿಗಳೆಂದರೆ ಅದರ ಪದದ ಮೊದಲ ಹೃಸ್ವ ಅಕ್ಷರ "ದ್"(ವ್ಯತ್ಯಾಸಗೊಳಿಸುವ), ಅಂದರೆಪಾರಾಮಾರ್ಥಿಕ ವಿದ್ಯಮಾನ ಉಲ್ಲೇಖಿಸಲಪ್ಪಟ್ಟಿದ್ದು ಅಥವಾ ಅದರೊಳಗಿನ ಪೂರ್ಣಾಂಶ ವು ಮಾನವನ ಪಾರಮಾರ್ಥಿಕ ಅನುಭವದ ಪೂರಕ ಲಕ್ಷಣವೆನಿಸಿದೆ. ಇದು ನಿಧಾನವಾಗಿ ಇಡೀ ಭೌತಿಕ ಮತ್ತು ಮಾನಸಿಕ ಜಗತ್ತಿನ ವರ್ಗೀಕರಣ ಒಳಗೊಂಡಿದ್ದು ಎಲ್ಲಾ ಅದರಲ್ಲಿನ ಅಂಶಗಳನ್ನು ಜೊತೆಗೂಡಿಸಲು ಯತ್ನಿಸಲಾಗುತ್ತದೆ. ಆದರೆ ಅದು ಲೌಕಿಕ ಜಗತ್ತಿನ ಅಸ್ತಿತ್ವವನ್ನು ಅದರ ಇರುವಿಕೆಯ ಆಸ್ತಿಗಳ ಸಮಸ್ತ ವಸ್ತು ಜಗತ್ತನ್ನು ಅದು ನಿರಾಕರಿಸುತ್ತದೆ.ಇದು ಒಮ್ಮೊಮ್ಮೆ ಗುಣಲಕ್ಷಣಗಳ ಬದಲಾವಣೆ ಮಾಡಲಾಗುವ ಸಾಧ್ಯತೆ ತರುತ್ತದೆ.ಹೀಗೆ ಬೌದ್ದ ಧರ್ಮದ ಅಭಿಧರ್ಮ ತತ್ವಜ್ಞಾನಿಗಳು ಧರ್ಮಗಳ ವಿವಿಧ ಮುಖಗಳ ಮತ್ತು ಅವು ಶಾಲಾಪಾಠದಲ್ಲಿರುವ ವಿಭಿನ್ನತೆಯನ್ನು ಅವರು ವಿಶ್ಲೇಷಿಸಿದ್ದಾರೆ. ಇದರ ಒಟ್ಟಾರೆ ಒಳಗೊಂಡ ಅಂಶಗಳು ಅದರ ಅಸ್ತಿತ್ವ ನಿಜವಾಗಿಯೂ ಇದೆಯೇ ಎಂಬುದನ್ನು ಸತ್ಯದ ಪರಿಧಿಯ ಮೇಲೆ ಅವಲಂಬಿಸುತ್ತದೆ.(ಕೆಲವೇ ಕೆಲವು ವಿಚಾರವಾದಿಗಳು ಧರ್ಮಗಳ ಅಸ್ತಿತ್ವದ ಮೇಲೆ ತಮ್ಮ ವ್ಯಾಖ್ಯಾನ ನೀಡಿದ್ದಾರೆ.) ಇಂತಹ ಟಿಪ್ಪಣಿಯು ಮಾನವ ಅನುಭವದ ವಿಶ್ಲೇಷಣೆಯ ಮಹತ್ವವನ್ನು ಪಡೆದಿದೆ:ಹೆಚ್ಚಾಗಿ ಇದರ ಬಗ್ಗೆ ಗಮನ ಹರಿಸುವುದಕ್ಕಿಂತ ಕಲ್ಪನೆಯ ಮಾಡುವುದನ್ನು ಅದು ನಂಬುವುದಿಲ್ಲ,ಆತ್ಮ-ಪರಮಾತ್ಮನ ಸಾಕ್ಷಿಭೂತದ ಪರಿಕಲ್ಪನೆಗೆ ಇದು ಸಹಕಾರಿಯಾಗಿದೆ.ಆದರೆ ಬೌದ್ದ ಮತದ ತತ್ವಜ್ಞಾನಿಗಳು ಈ ಮಾನಸಿಕ ಸ್ಥಿತಿಯನ್ನು "ತಾತ್ಕಾಲಿಕ ಸಮಯದ ಪ್ರಜ್ಞೆಯ" ಅಂಶಗಳ ಒಳಗೊಂಡಿದೆ ಎಂದಿದ್ದಾರೆ.

ಬೌದ್ದ ಧರ್ಮದ ಮತಸೂತ್ರದ ಅಥವಾ ಸಿದ್ದಾಂತದ ಪ್ರಕಾರ ಪ್ರತ್ಯೇಕ ಶಾಶ್ವತ "ನಾನು" ಎಂಬ ಸೂತ್ರವನ್ನು ಅದು ನಿರಾಕರಿಸುತ್ತದೆ.ಈ ಹಿನ್ನೆಲೆಯಲ್ಲಿ ಮೂರು ಅಂಕಗಳ ಅಸ್ತಿತ್ವವನ್ನು ಅದು ನಿರೊಪಿಸುತ್ತದೆ. ಮೂರು ಸಂಕೇತಗಳು:

  1. ದುಃಖ-ನೋವು(ಅಂತ್ಯದ ಹಾದಿ) (ಪಾಲಿ:ದುಃಖ),
  2. ಅನಿತ್ಯ - ಬದಲಾವಣೆ/ಅಶಾಶ್ವತ(ಪಾಲಿ:ಅನಿಕ್ಕಾ),
  3. ಅನಾತ್ಮನ್-ಸ್ವಂತ-ರಹಿತ-ಅಲ್ಲದ(ಪಾಲಿ: ಅನ್ನತ್ತಾ).

ಬೌದ್ದ ಧರ್ಮದ ಹೃದಯಾಂತರಾಳದಲ್ಲಿ ಎಲ್ಲಾ ಪಾರಮಾರ್ಥಿಕ ಸತ್ಯಗಳನ್ನು ಅರಿಯುವ ವಿದ್ಯಮಾನಗಳಿವೆ,ಉದಾಹರಣೆಗೆಸ್ವತಂತ್ರ ಮೂಲದಿಂದಲೇ ಇದರ ಗ್ರಹಿಕೆ ಸಾಧ್ಯವಿದೆ.

ನಂತರದಲ್ಲಿ, ಬೌದ್ದ ಧರ್ಮದ ತತ್ವಶಾಸ್ತ್ರಜ್ಞ್ಜರಾದ ನಾಗಾರ್ಜುನ ಧರ್ಮಗಳ ಅಸ್ತಿತ್ವದ ಬಗ್ಗೆ ಪ್ರಶ್ನೆಗಳನ್ನೆತ್ತಿದರು.(ಪ್ರಜ್ಞಾವಂತಿಕೆಯ ಆ ಕ್ಷಣದ ಅಂಶಗಳ ಪರಿಗಣನೆ) ನಿಜವಾಗಿಯೂ ಅವು ಪ್ರತ್ಯೇಕ ತಮ್ಮದೇ ಆದ ಸ್ವಂತದ ಅಸ್ತಿತ್ವವನ್ನು ಪಡೆದ ಬಗ್ಗೆಯೂ ನಾಗಾರ್ಜುನರಿಗೆ ಸವಾಲುಗಳಿದ್ದವು. (ಅಂದರೆ ಅವು ಇನ್ನಿತರ ಹೊರತಾಗಿ ತಮ್ಮ ಅಸ್ತಿತ್ವ ತೋರಿವೆಯೇ?)ಎಂದು ಅವರ ಅನುಮಾನವಾಗಿತ್ತು. ಧರ್ಮಗಳಲ್ಲಿ ಯಾವುದೇ ಗುಣವಿಶೇಷಗಳು ಅದರ ಆನುವಂಶಿಕತೆಯಿಂದ ಬಂದಿವೆಯೇ ಎಂದು ಅವರು ಭಾವೋತ್ತೇಜಕವಾಗಿಯೇ ಪ್ರಶ್ನಿಸಿದರು.(ಭಾವೋತ್ತೇಜಿಕವಾಗಿ):

śūnyeṣu sarvadharmeṣu kim anantaṁ kimantavat
kim anantam antavac ca nānantaṁ nāntavacca kiṁ
kiṁ tad eva kim anyat kiṁ śāśvataṁ kim aśāśvataṁ
aśāśvataṁ śāśvataṁ ca kiṁ vā nobhayam apyataḥ 'tha
sarvopalambhpaśamaḥ prapañcopaśamaḥ śivaḥ
na kvacit kasyacit kaścid dharmo buddhena deśitaḥ|

ಯಾವಾಗ ಎಲ್ಲಾ ಧರ್ಮಗಳು ಖಾಲಿಯಾದರೆ,ಯಾವುದಕ್ಕೆ ಕೊನೆ ಇದೆ? ಕೊನೆಯೆಂದರೇನು?
ಕೊನೆಯೆಂದರೆ ಏನು ಮತ್ತು ಅಂತ್ಯದ ಕ್ಷಣ? ಆದರೆ ಯಾವುದು ಅಂತ್ಯವಿಲ್ಲದ್ದು ಮತ್ತು ಅಂತ್ಯವಿಲ್ಲದೆ ಅಂತ್ಯರಹಿತವಾದುದು?
ಅದೆಂದರೆ (ಅದು)ಇದು ? ಅದೆಂದರೆ ಪ್ರತ್ಯೇಕವೆ ? ಯಾವುದು ಶಾಶ್ವತ? ಯಾವುದು ಅಶಾಶ್ವತ?
ಯಾವುದು ಅಶಾಶ್ವತ ಮತ್ತು ಶಾಶ್ವತ? ಯಾವುದು (ರಹಿತ)ಅದಿಲ್ಲದಿರುವುದು? ಅಥವಾ ಹೊರತಾಗಿದೆ?

ಯಾವುದೇ ಒಂದು ಸುಸಂದರ್ಭಕ್ಕಿಂತ ಒಂದು ದುಃಖದ ಜೀವಕ್ಕೆ ಸಾಂತ್ವನ ನೀಡುವುದು ಪರಿವರ್ತನೆಯ ವಿಷಯವಾಗಿದೆ,ಧೈರ್ಯ ನೀಡುವುದರಿಂದ ಆ ಜೀವಿಯ ಮರುಬದುಕಿಗೆ ಆಸರೆಯಾಗಬಹುದು;
ಬುದ್ದ ಯಾವುದೇ ಸಂದರ್ಭದಲ್ಲಿ ಯಾರಿಗೆಯಾಗಲೀ ಎಲ್ಲೇ ಆಗಲಿ ಭೋಧಿಸಿದ್ದರಲ್ಲಿ ಧರ್ಮವಿಲ್ಲ.
--ಮೂಲಮಧ್ಯಮಕಾರಿಕಾ,nirvṇānaparīkṣā, 25:22-24

ಧರ್ಮಶೀಲತೆ[ಬದಲಾಯಿಸಿ]

ಆದರಿಲ್ಲಿ ಎಸ್. ಎನ್. ಗೊಯಂಕಾ,ಅವರ ಅಭಿಪ್ರಾಯದಂತೆ ಅವರಿಲ್ಲಿವಿಪಾಸನಾ ಧ್ಯಾನ,ಭೋಧಿಸುವ ಶಿಕ್ಷಕರಾಗಿದ್ದಾರೆ. ಅವರ ಪ್ರಕಾರ ಧರ್ಮದ ಮೂಲ ವ್ಯಾಖ್ಯಾನವೆಂದರೆ "ಧರೇತಿ ಇತಿ ಧರ್ಮಾ", ಅಥವಾ "ಅದನ್ನೊಳಗೊಂಡ ಮತಸೂತ್ರದ ಸಿದ್ದಾಂತ ಇದಾಗಿದೆ". ಬೌದ್ದ ಧರ್ಮದ ತತ್ವಗಳ ವಿವರಿಸಿದ ಲಿಪಿ ಸಿದ್ದಾಂತದ ಬರೆಹಗಳಲ್ಲಿ ಧರ್ಮಕ್ಕೆ ವಿಭಿನ್ನ ಅರ್ಥಗಳ ವ್ಯಾಖ್ಯಾನವಿದೆ,ಅದರಲ್ಲಿ"ವಿದ್ಯಮಾನ" ಮತ್ತು"ನಿಸರ್ಗ" ಅಥವಾ"ಗುಣಲಕ್ಷಣದ" ಎಂಬ ಅರ್ಥವಿವರಣೆಗಳಿವೆ.

ಧರ್ಮವು "ಸ್ಮೃತಿ ಅಂಶಗಳ ಮಾನಸಿಕತೆ" ಎಂಬುದನ್ನು ವಿವರಿಸಿ ಇದನ್ನು ಚಿತ್ತ,ಅಂದರೆ ಹೃದಯ-ಮನಸ್ಸು-ಬುದ್ದಿ ಎಂದೂ ಜೋಡಿಯಾಗಿ ವಿವರಿಸಬಹುದು.

ಇಲ್ಲಿನ ಜೊತೆಗಾರಿಕೆಯು ಕಾಯ (ದೇಹ)ದೇಹದೊಂದಿಗೆ ಒಂದುಗೂಡಬೇಕಾಗುತ್ತದೆ.ಅಲ್ಲದೇ ವೇದನಾ (ದೇಹದೊಳಗಣದ ಭಾವನಾತ್ಮಕ ಅಥವಾ ಉತ್ತೇಜನಾತ್ಮಕ ವಿಚಾರಗಳು ಎದ್ದರೂ ಅವು ಮನಸ್ಸಿನ ಮೂಲಕ ಅವುಗಳನ್ನು ಅನುಭವಿಸಬೇಕಾಗುತ್ತದೆ.),ಪ್ರಮುಖ ಸೂತ್ರಗಳಾದ ಮಹಾಸತಿಪಥನ ಸೂತ್ರ ಇಂದು ಅದರಲ್ಲಿ ಪ್ರಮುಖವಾದುದಾಗಿದೆ.

ಧರ್ಮವನ್ನು ಬುದ್ದನ ಭೋಧನೆಗಳನ್ನು ಸಹ ಉಲ್ಲೇಖಿಸಲು ಸಹ ಬಳಸಲಾಗುತ್ತದೆ.ಅಥವಾ ಪರಿಗಣಿಸಲಾಗುತ್ತದೆ.ಮುಖ್ಯವಾಗಿ ಮೂಲಭೂತ ತತ್ವಗಳ ಬಗೆಗಿನ ಪ್ರವಚನಗಳ ನೀಡಿದ ಆತನ ಪ್ರವಚನಗಳು ಧರ್ಮದ ಸಾಲಿಅನ್ಲ್ಲಿ ಬರುತ್ತವೆ.(ಉದಾಹರಣೆಗೆ ನಾಲ್ಕು ಉದಾತ್ತ ಸತ್ಯಗಳು ಫೋರ್ ನೋಬಲ್ ಟ್ರುಥ್ಸ್ ಮತ್ತು ದಿ (ಉದಾತ್ತ ವಲಯದ ಎಂಟು ಹಾದಿಗಳು)ನೋಬಲ್ ಏಟ್ ಫೋಲ್ಡ್ ಪಾತ್ ,ಆದರೆ ದೃಷ್ಟಾಂತ ಕಥೆಗಳು ಮತ್ತು ಕವಿತೆಗಳ ಬಗ್ಗೆ ವಿರೋಧ ಕಾಣಿಸಿತು.

ಚಾ'ನ್ ನಲ್ಲಿ[ಬದಲಾಯಿಸಿ]

ಧರ್ಮವು ಚಾ'ನ್ ನಲ್ಲಿ ಸೇರ್ಪಡೆಗೊಂಡಿದೆ,ಒಂದು ವಿಶಿಷ್ಟ ಸಂದರ್ಭದಲ್ಲಿ ಒಂದು ಅಧಿಕೃತ ತತ್ವದ ಮೂಲಕ ಬದಲಾವಣೆ ಕಾಣುವುದೇ ಧರ್ಮದ ಮೂಲವಾಗಿದೆ.ಅದೆಂದರೆ ಜ್ಞಾನದ ಭೋದಿ ಮತ್ತು ಜಾಗೃತಿ ತತ್ವಗಳ ಮೇಲೆ ಅದು ನಿಂತಿದೆ.ಅದನ್ನೇ ಧರ್ಮದ ಸಂವಹನ ಪ್ರಕ್ರಿಯೆ ಮೂಲಕ ಅದನ್ನು ಪ್ರಸಾರ ಮಾಡುವ ಒಂದು ವಿಧಾನವೂ ಆಗಿದೆ.

ಜರುತುಷ್ಟ್ರನ ಆಚರಣೆಯಲ್ಲಿ[ಬದಲಾಯಿಸಿ]

ಡೇನಾ[ಬದಲಾಯಿಸಿ]

ಡೇನಾ ಅಂದರೆ(ದಿನ್ ಎಂದು ಆಧುನಿಕ ಪರ್ಸಿಯನ್) ಭಾಷೆಯಲ್ಲಿ ಇದನ್ನು ಚಿರಂತನದ ಕಾನೂನು ಎನ್ನಲಾಗುತ್ತದೆ.ಇದರ ಅನುಕ್ರಮಣವನ್ನು ಮಾನವೀಯತೆ ಎಂಬುದನ್ನು ಮಾಥ್ರ-ಸ್ಪೆಂಟಾ ("ಪವಿತ್ರ ಶಬ್ದಗಳು ") ಎಂದು ವಿವರಿಸಲಾಗಿದೆ. ಡೇನಾ ವನ್ನು ಧರ್ಮದ ಅರ್ಥೈಸುವಿಕೆಯಲ್ಲಿ ಬಳಸಲಾಗುತ್ತದೆ,ಅದೆಂದರೆ ನಂಬಿಕೆ,ಕಾನೂನು ಅದಲ್ಲದೇ ಇದು ಹಿಂದು ಮತ್ತು ಬೌದ್ದರಿಗೆ ಒಂದು ಧರ್ಮದ ಪರಿವರ್ತನಾ ವ್ಯಾಖ್ಯಾನ.ಆದರೆ ಇದನ್ನು ಬಹುತೇಕವಾಗಿ "ಕರ್ತವ್ಯ" ಅಥವಾ ಸಮಾಜದ ಸ್ತರ,ಉತ್ತಮ ಗುಣ ಅಥವಾ ಸದಾಚಾರದ ನಡತೆಗಳೆಂದೂ ಅರ್ಥೈಸಲಾಗುತ್ತದೆ. ಇಲ್ಲಿ'ದಾರಿ'ಗೆ ರೂಪಕಲಾಂಕಾರವಾಗಿರುವ,ವ್ಯಕ್ತಿಕ್ ಅಂದರೆ ಡೇನಾ ವನ್ನು ಜರುಷ್ಟ್ರುಯಿನ್ ನನ್ನು ಪ್ರತಿನಿಧಿಸುತ್ತಾನೆ.ಇದನ್ನು ಮಸ್ಲಿನ್ ಉಡುಪು ಧರಿಸಿದ ಸುದ್ರಾ , ಎಂತಲೂ'ಒಳ್ಳೆಯ/ಪವಿತ್ರ ಹಾದಿ ', ಮತ್ತು 72-ದಾರಗಳ ಸುರಳಿ ಸುತ್ತು ಕುಷ್ಟಿ ಸುತ್ತುವರೆದ,ಭಾಗವೆನಿಸಿದೆ.ಇದನ್ನೇ "ದಾರಿಸಂಶೋಧಕ".ಎಂದು ಕರೆಯಲಾಗುತ್ತದೆ.

ಆಶಾ[ಬದಲಾಯಿಸಿ]

ಆದರೆ ಡೇನಾ ವನ್ನು ಈ ಸಂದರ್ಭದಲ್ಲಿ ಮೂಲಭೂತ ತತ್ವಗಳ ಧಾರಕ ಆಶಾ ದೊಂದಿಗೆ ಹೋಲಿಕೆಯ ಗೊಂದಲ ಮಾಡಿಕೊಳ್ಳಬಾರದು. (ವೇದಿಕ್ ವೃತ rta ), ಅಂದರೆ ಬ್ರಹ್ಮಾಂಡದ ಸಮಾನ ಪರಿಧಿಯ ಕಾನೂನು,ಇದು ಪ್ರಾಚೀನ ಇಂಡೊ-ಇರಾನಿಯನ್ ರ ಬದುಕನ್ನು ನಿಯಂತ್ರಿಸುತಿತ್ತು. ಇವುಗಳಿಗೆ,ಆಶಾ ವು ಎಲ್ಲವನ್ನು ತಿಳಿದುಕೊಳ್ಳುವ ಒಂದು ನಿರೀಕ್ಷಣಾ ತರಬೇತಾಗಿದೆ,ಗ್ರಹಗತಿ ಮತ್ತುತಾರಾಲೋಕದ ವಸ್ತುಗಳು,ಋತುಗಳ ಬೆಳವಣಿಗೆ,ಪ್ರತಿನಿತ್ಯದ ದನಗಾಹಿಗಳ ಅಲೆಮಾರಿಗಳ ಬದುಕು ಇತ್ಯಾದಿಗಳು ಸೌರ್ಯವ್ಯೂಹದ ಸೂರ್ಯೋದಯ ಮತ್ತು ಸೂರ್ಯಾಸ್ತದ ಅವಧಿಯನ್ನು ಅವಲಂಬಿಸಿದೆ. ಎಲ್ಲಾ ಭೌತಿಕ ನಿರ್ಮಾಣಗಳು (ಗೆತಿ ) ಎಂಬರ್ಥದಲ್ಲಿ ನಿರ್ಧರಿಸಲ್ಪಡುತ್ತವೆ.ಇವುಗಳು ಪ್ರಧಾನ ಯೋಜಿತ ಕಾರ್ಯಕ್ರಮಗಳಾಗಿ ನಡೆಯುತ್ತವೆ.-ಅಂದರೆ ಇದು ಅಹುರಾ ಮಜದಾ ಒಳಗೊಂಡ ಆನುವಂಶಿಕ ಎನ್ನುವಂತೆ ಇದನ್ನು (ದೃಜಾ )ದ ಆದೇಶ ಉಲ್ಲಂಘನೆ ಎಂದೂ ಹೇಳಲಾಗುತ್ತದೆ.ಇಲ್ಲಿ ನಿರ್ಮಾಣದ ವಿರುದ್ದವೇ ಆದೇಶ ಉಲ್ಲಂಘಿಸಲಾಗುತ್ತದೆ.ಹೀಗೆಯೇ ಅದರ ನಿರ್ಮಾಣದ ವಿರುದ್ದ ಇದು ಇದರ ನಿರ್ಮಾಣದ ವಿರುದ್ದ ಇದು ಹಾಗೆಯೇ ಸಾಗುತ್ತದೆ. ಈ ಪರಿಕಲ್ಪನೆಯು ಆಶಾ ಪ್ರತಿಯಾಗಿ ದೃಜಾ ಇವೆರಡನ್ನೂ ಉತ್ತಮದ-ವಿರುದ್ದ-ಕೆಟ್ಟದೆಂದು ಆಧುನಿಕ ಪಾಶ್ಚಿಮಾತ್ಯ ಧರ್ಮಗಳ ಕದನವನ್ನು ಇದರಲ್ಲಿ ಸೇರಿಸಿ ಗೊಂದಲಕ್ಕೀಡಾಗಬಾರದು.ಹೀಗೆ ಇವೆರಡೂ ರೂಪಗಳು ನೈತಿಕ ಘರ್ಷಣೆಗೆ ಮುಂದಾಗುತ್ತವೆ. ಅಂದರೆ ಇಲ್ಲಿ ಆಶಾ ಪ್ರತಿಯಾಗಿ ದೃಜಾ ಪರಿಕಲ್ಪನೆಯು ಒಂದು ಹೆಚ್ಚು ಶಿಸ್ತಿನ ಮತ್ತು ಕಡಿಮೆ ವ್ಯಕ್ತಿಗತ ಹಿತಾಸಕ್ತಿಯದಾಗಿದೆ.ಇದು ದಿನನಿತ್ಯದ ಕಾರ್ಯಚಟುವಟಿಕೆಗಳನ್ನು ಪ್ರತಿನಿಧಿಸುತ್ತದೆ.ಉದಾಹರಣೆಗೆ ಸಣ್ಣ ಕೆಲಸಗಳ ಅನುಕರಣೆ (ಇದು ಅನುಕ್ರಮವನ್ನು ವಿರೋಧಿಸುತ್ತದೆ.); ಅಥವಾ "ಅನಿರ್ಮಾಣ ಪ್ರಕ್ರಿಯೆ", ಇದನ್ನು ನೈಸರ್ಗಿಕ ಕೊಳೆ ಎನ್ನಲಾಗುತ್ತದೆ.(ಇದು ನಿರ್ಮಾಣವನ್ನು ವಿರೋಧಿಸುತ್ತದೆ ); ಅಥವಾ ಹೆಚ್ಚು ಸರಳವಾಗಿ ಎಂದರೆ "ಸುಳ್ಳು" (ಇದು ಸತ್ಯವನ್ನು ಮತ್ತು ಉತ್ತಮ ಆದರ್ಶವನ್ನು ವಿರೋಧಿಸುತ್ತದೆ.). ಹೆಚ್ಚೆಂದರೆ, ಆತನ ಈ ಪಾತ್ರದಲ್ಲಿ ನಿರ್ಮಾಣ ಮಾಡಲಾಗದ ಎಲ್ಲದರ ಸೃಷ್ಟಿಕರ್ತ ಅಹುರಾ ಮಜ್ದಾ ಈತ ದೃಜಾ ದ ಸೃಷ್ಟಿಕರ್ತನಲ್ಲ.ಅದೆಂದರೆ "ಏನೂ ಇಲ್ಲ",ನಿರ್ಮಾಣ-ವಿರೋಧಿ, ಅದರಂತೆಯೇ (ಅದೇ ರೀತಿ) ನಿರ್ಮಿಸಲಾಗದ್ದು ಎಂದೂ ವ್ಯಾಖ್ಯಾನಿಸಲಾಗುತ್ತದೆ. ಹೀಗೆ, ಜುರುತುಷ್ಟುರ್ ಬಹಿರಂಗಪಡಿಸಿದಂತೆ ಅಹುರಾ ಮಜ್ದಾವು ಕೇವಲ ಒಳ್ಳೆಯದರ ಸೃಷ್ಟಿಕರ್ತ,ನಿರ್ಮಾಪಕವಾಗಿದೆ. (ಯಾಸ್ನಾ31.4), ಅಂದರೆ"ಸರ್ವೋಚ್ಚ ಉದಾತ್ತಗಳ ಒದಗಿಸುವವ "(ಯಾಸ್ನಾ43.11,ಇದು ಅಂತಿಮವಾಗಿ ಜಯ ಸಾಧಿಸುತ್ತದೆ.(ಯಾಸ್ನಾ48.1).

ಈ ತೆರನಾದ ಸಾರಾಂಶದಲ್ಲಿ ಅಂದರೆ ಆಶಾ ಪ್ರತಿರೋಧ ದೃಜಾ ,ಗಳಲ್ಲಿ ವಿವರಿಸಿದಂತೆ ನಶ್ವರ ಜೀವಿಗಳು (ಮನುಷ್ಯರು ಮತ್ತು ಪ್ರಾಣಿಗಳೆರಡೂ)ತಮ್ಮ ಸೃಷ್ಟಿಗೆ ಪೂರಕವಾಗಿ ವಿವಾದಾತ್ಮಕ ಪಾತ್ರವಹಿಸುತ್ತವೆ. ಇಲ್ಲಿ,ಅವು ತಮ್ಮ ಬದುಕಿನಲ್ಲಿ ನಡೆಯುವ ಘರ್ಷಣೆಯಲ್ಲಿ ಸಕ್ರಿಯಾತ್ಮಕವಾಗಿ ಪಾಲುಗೊಳ್ಳುತ್ತವೆ,ಅಲ್ಲದೇ ಇದು ಅವುಗಳಕರ್ತವ್ಯವೂ ಹೌದು.ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಅಗತ್ಯವಿರುವ ಅವುಗಳು ಹಾಗೆ ಉಳಿದರೆ ಪ್ರತಿಯಾದ ಪ್ರತಿಕ್ರಿಯೆ ಇಲ್ಲವಾಗಿ ನಶಿಸಿ ಹೋಗಬಹುದು. ಗಾಥಾಗಳ,ಆದ್ಯಂತ ಜುರುತುಷ್ಟ್ರುರ್ ಒಪ್ಪಂದಗಳು ಮತ್ತು ಕ್ರಿಯೆಗಳು ಅಲ್ಲದೇ ಅದಕ್ಕನುಗುಣವಾದ ವೈರಾಗ್ಯ ವು ಜುರುಷ್ಟ್ರುವಿನ ವಿಧಾನದಲ್ಲಿ ಬಹುತೇಕ ತನ್ನ ಪರಿಣಾಮ ಬೀರಿರುತ್ತದೆ. ನಂತರದ ಜುರುಷ್ಟ್ರುವಿನ ಸಿದ್ದಾಂತದಲ್ಲಿ ಬದುಕಿನ ಅನುಭವದಿಂದ ಓಡಿ ಹೋಗುವ ಅಂದರೆ ಉರ್ವಾನ್ (ಇದನ್ನು ಸಾಮಾನ್ಯವಾಗಿ 'ಆತ್ಮ' ಎಂಬರ್ಥದಲ್ಲಿ ಅನುವಾದ ಮಾಡಲಾಗುತ್ತದೆ.)ಹೀಗೆ ಈ ಆತ್ಮವು ನಶ್ವರ ಜಗತ್ತಿನಲ್ಲಿ ತನ್ನದನ್ನು ಹುಡುಕಲು,ಸಂಗ್ರಹಿಸಲು ತೆರಳುತ್ತದೆ. ಬದುಕಿನ ಪ್ರಮುಖ ಭಾಗವನ್ನು ನಿರಾಕರಿಸುವುದು,ಇದರಲ್ಲಿ ಬದುಕಿನ ಸಂತೋಷದ ತಿರಸ್ಕಾರವೂ ಒಳಗೊಂಡಿದೆ,ಆದರೆ ಇದನ್ನು ಸಾಮಾಜಿಕ ಬದುಕಿನಲ್ಲಿ ಜವಾಬ್ದಾರಿಯನ್ನು ನಿರ್ಲಕ್ಷಿಸುವ ಅಥವಾ ಕರ್ತವ್ಯ ಲೋಪವೆಸಗುವ ಒಬ್ಬನ ಉರ್ವಾನ್ ,ಅಂದರೆ ಆತ್ಮವಂಚನೆಗೆ ಸಮಾನವಾದ ಕ್ರಿಯೆ ಎಂದು ಹೇಳಲಾಗುತ್ತದೆ.

ಹೀಗೆ ಜುರುತುಷ್ಟ್ರುವಿನ್ ತತ್ವ ಸಿದ್ದಾಂತವು ನೈತಿಕತೆಯೆಡೆಗೆ ಹೆಚ್ಚು ಒತ್ತು ಕೊಡುತ್ತದೆ.ಇಲ್ಲಿ ಜವಾಬ್ದಾರಿ ಮತ್ತು ಕರ್ತವ್ಯದ ನಡುವಿನ ಆಯ್ಕೆ ಎದುರು ನಿಲ್ಲುತ್ತದೆ.ಈ ನಶ್ವರ ಜಗತ್ತಿನಲ್ಲಿದ್ದರೂ ತನಗೆ ಕೊಡ ಮಾಡಿದ ಕರ್ತವ್ಯ ಮತ್ತು ಜವಾಬ್ದಾರಿ ಪಾಲನೆ ಬಹಳ ಮುಖ್ಯವಾಗಿದೆ.ಹೀಗೆ ದೃಜಾ ನ ಕಾರ್ಯವನ್ನು ಅದರ ಕಟ್ಟಪಾಡುಗಳಂತೆ ನಿರ್ವಹಿಸಬೇಕಾಗುತ್ತದೆ. ಅದೇ ರೀತಿಯಾಗಿ,ದೈವ ಸಂಕಲ್ಪ,ಅದೃಷ್ಟ ಎಂಬುದನ್ನು ಜುರುತುಷ್ಟ್ರುವಿನ ಭೋದನಾ ಸಿದ್ದಾಂತದಲ್ಲಿ ನಿರಾಕರಿಸಲಾಗುತ್ತದೆ. ಮಾನವರು ತಾವಿರುವ ಸನ್ನಿವೇಶ ಸಂದರ್ಭಗಳಿಗೆ ಜವಾಬ್ದಾರರಾಗಿರುತ್ತಾರೆ;ಅಲ್ಲದೇ ಅದೇ ವೇಳೆಗೆ ಅವರು ಒಬ್ಬರಿಗೊಬ್ಬರು ಪರಸ್ಪರ ಸಹಕರಿಸುತ್ತಾರೆ. ಪ್ರತಿಫಲ,ಶಿಕ್ಷೆ,ಸಂತೋಷ ಮತ್ತು ದುಃಖ ಇವೆಲ್ಲವುಗಳು ಹೇಗೆ ವ್ಯಕ್ತಿ ತನ್ನ ಜೀವನದಲ್ಲಿ ಸನ್ನಿವೇಶಗಳ ಎದುರಿಸುತ್ತಾನೆ ಎಂಬುದರ ಮೇಲೆ ಅವಲಂಬಿತವಾಗಿದೆ.

ಜುರುಷ್ಟ್ರುವಿನ ಸಿದ್ದಾಂತದಲ್ಲಿ ಧರ್ಮಶೀಲರಿಗೆ ಒಳ್ಳೆಯವರಿಗೆ ಉತ್ತಮ ಪ್ರತಿಫಲ ದೊರಕುತ್ತದೆ. ಯಾರು ಕೆಟ್ಟದ್ದನ್ನು ಮಾಡುತ್ತಾರೋ ಅವರು ತಮ್ಮ ಕೆಡಕಿಗೆ ತಾವೇ ಹೊಣೆಗಾರರಾಗುತ್ತಾರೆ.ಹೀಗೆ ಜುರುಷ್ಟ್ರುವಿನ ತತ್ವದ ಶೀಲದ ಸಿದ್ದಾಂತವನ್ನು ಒಂದು ಪದಗುಚ್ಛದಲ್ಲಿ ಹೇಳಬಹುದು. "ಒಳ್ಳೆಯ ವಿಚಾರಗಳು, ಒಳ್ಳೆ ಶಬ್ದಗಳು, ಒಳ್ಳೆ ಕಾರ್ಯಗಳು" ಎಂದು ಸರಳವಾಗಿ ತಿಳಿಸಬಹುದು.(ಹುಮಾತಾ , ಹುಖಾತಾ , ಹೃಷ್ಟ ಇರುವುದುಅವೆಸ್ತಾನ್) ದಲ್ಲಿ,ಹೀಗೆ ಅದರ ಚಟುವಟಿಕೆ ಮೂಲಕ ಆಶಾ ಈ ತತ್ವವನ್ನು ಅನುಸರಿಸಿ ಮತ್ತು ದೃಜಾ ವನ್ನು ಆಗಾಗ ಧರ್ಮಶೀಲತೆಯೊಂದಿಗೆ ಪರೀಕ್ಷೆಗೆ ಒಳಪಡಿಸಬಹುದು.(ಅಂದರೆ ಮಾನವತೆ,ಪ್ರಾಣಿಗಳ ಬಗೆಗಿನ ಕರುಣೆ ಮತ್ತು ಸಮಷ್ಟಿ ಬಗೆಗಿನ ಸಮಗ್ರತೆ ಎಂಬುದು ಇದರ್ಥ.)

ಇದರಲ್ಲಿ ಹಲವಾರು ಶೃದ್ದಾನಂಬಿಕೆಗಳನ್ನು ತುರುಕಲಾಗಿದೆ.ಆದರೆ ಈ ಧಾರ್ಮಿಕ ಸಿದ್ದಾಂತವು ತನ್ನ ಅಸ್ತಿತ್ವದ ಸ್ಪಷ್ಟ ನಿಲುವನ್ನು ಗಾಥಾದಲ್ಲಿ ಪ್ರಮಾಣೀಕರಿಸಿದೆ. ನಂತರದ 19 ನೆಯ ಶತಮಾನದ ಕೊನೆಯಲ್ಲಿ ನೈತಿಕ ಮತ್ತು ಅನೈತಿಕ ಶಕ್ತಿ-ಹಿತಾಸಕ್ತಿಗಳು ಒಳಪ್ರವೇಶಿಸಿ ಇವುಗಳಿಂದ ಸ್ಪೆಂಟ ಮೈನ್ಯು ಮತ್ತು ಅದರ ಪೈಶಾಚಿಕವಿರೋಧಲಂಕಾರ ಅಂಗ್ರಾ ಮೈನ್ಯು , 'ಒಳ್ಳೆಯ ಆತ್ಮ' (ಪರಮಾತ್ಮ)ಮತ್ತು'ದುರಾತ್ಮ' ಹೀಗೆ ಅದು ಅಹುರಾ ಮಜ್ದಾದ ಉದ್ಭವಕ್ಕೆ ಕಾರಣವಾಗಿ ಅವುಗಳ ಪ್ರತಿನಿಧಿಯಂತೆ ವರ್ತಿಸುತ್ತವೆ. ಇದಕ್ಕಾಗಿ ಇರುವ ಹೆಸರುಗಳು ಹಳೆಯದಾದವು,ಇದು ಆಧುನಿಕ ಪಾಶ್ಚಿಮಾತ್ಯದ ಅಭಿವೃದ್ದಿ ಪ್ರಭಾವವು ಮಾರ್ಟಿನ್ ಹ್ಯುಗ್ ಇವರುಗಳಿಂದ ೧೮೮೦ ರಲ್ಲಿ ಜನಪ್ರಿಯಗೊಳಿಸಲ್ಪಟ್ಟಿತು. ಅಲ್ಲದೇಜುರ್ವಾನಿಸಮ್ ನಿಂದ ಅದರ ನೀತಿ ಬೋಧೆಯಿಂದ ಜನಪ್ರಿಯವಾಯಿತು.(ಜುರ್ವನೈಟ್ ಜುರುಷ್ಟ್ರುವಿನನ ತತ್ವ ), ಅದು ಮೂರನೆಯ ದೈವ ಮೂರ್ತಿ, ಜುರ್ವಾನ್ ,ನನ್ನು ಪ್ರತಿಷ್ಟಾಪಿಸಿ ಅದರ ಧರ್ಮದ ಆಣತಿಯಂತೆ ಅವಳಿತನದ(ಯಾಸ್ನಾ 30.3) ವನ್ನು ಪರಿಚಯಿಸಲಾಯಿತು.ಇದು ನೈತಿಕತೆ ಮತ್ತು ಅನೈತಿಕೆ ಬಗ್ಗೆ ವಿಭಿನ್ನತೆ,ವ್ಯತ್ಯಾಸದ ಪತ್ತೆಗೆ ಕಾರಣವಾಯಿತು. ಇಷ್ಟು ನೈತಿಕ ಕಟ್ಟಳೆಗಳನ್ನು ಹೊಂದಿದ್ದರೂ ಜುರುತುಷ್ಟ್ರುವಿನ್ ಸಿದ್ದಾಂತದ ಧರ್ಮ ಪಂಥ ೧೦ ನೆಯ ಶತಮಾನದಲ್ಲಿ ಅಂತ್ಯಕಂಡಿತು.ಅದು ಆವಾಗ ವಿವಾದಾತ್ಮಕ "ಅವಳಿ ಸಹೋದರರು " ಎಂದು ಹೇಳಿದ್ದು ಸವಾಲಾಗಿ ಪರಿಣಮಿಸಿತು.ಯಾಸ್ನಾ 30.3 ದಲ್ಲಿ ಸೂಚಿಸಿದ ಯಾವುದೇ ಅಂಶ ವಿವರವಾಗಿ ಬರಲಿಲ್ಲ.ಆದರೆ ಹ್ಯುಗ್ ನ ವಿವರಣೆಯು ಕ್ರಿಶ್ಚಿಯನ್ ಮಿಶನರಿಗಳು ಪಾರ್ಸಿಗಳು ಅಂದರೆ(ಭಾರತೀಯ ಜುರುಷ್ಟ್ರುವಿನ್ ಗಳು) ಅವರನ್ನು ಅವರ "ಇಬ್ಬಗೆತನ"ದಿಂದಾಗಿ ಅವರನ್ನು ಅಗೌರವದಿಂದ ಕಾಣಲಾರಂಭಿಸಿದರು. ಹೀಗೆ ಹ್ಯುಗ್ ನ ಈ ಪರಿಕಲ್ಪನೆಯು ಬರಬರುತ್ತಾ ಪಾರ್ಸಿಯಾಗಿ ಅದರ ತತ್ವಗಳನ್ನು ಅರ್ಥೈಸಲಾಗಿದೆ.ಹೀಗೆ ಅದು ಹ್ಯುಗ್ ನ ಈ ತತ್ವಗಳ ವಿವರವು ಜನಪ್ರಿಯಗೊಂಡು ಸದ್ಯ ಸಾರ್ವತ್ರಿಕವಾಗಿ ಒಪ್ಪಿತಗೊಂಡಿದೆ.

ಅಕಿಮಿನಿಡಿ ಯುಗ[ಬದಲಾಯಿಸಿ]

ಅಕಿಮಿನಿಡಿ ಯುಗದಲ್ಲಿ(648–330 BCE) ಜುರುತುಷ್ಟ್ರುವಿನನ ಸಿದ್ದಾಂತ ಅಭಿವೃದ್ಧಿ ಹೊಂದಿತು,ಇದರಲ್ಲಿ ಸ್ವರ್ಗ ಲೋಕದ ಪರಿಕಲ್ಪನೆಯು ಸ್ಪಷ್ಟವಾಗಿದೆ,ನರಕ,ವೈಯಕ್ತಿಕ ಮತ್ತು ಅಂತಿಮ ನ್ಯಾಯ ನಿರ್ಣಯ ಇವೆಲ್ಲ ಶ್ರೇಷ್ಠತೆಗಳು ಗಾಥಾಸ ನಲ್ಲಿ ಒಟ್ಟುಗೂಡಿಸಲಾಗಿದೆ. ಯಾಸ್ನಾ 19, ಈ ಪಂಥವು (ಇದು ಕೇವಲ ಸಸ್ಸನಿಡ್ ಯುಗ(226–650 CE)ದಲ್ಲಿ ಬದುಕಿತ್ತು.ಇದರ ಬಗೆಗಿನ ಝೆಂಡ್ ವಿಮರ್ಶೆಯು ಅಹುನಾ ವೈರ್ಯ ದ ಪ್ರಾರ್ಥನೆಯನ್ನು),ಮೂಲವಾಗಿಸಿದೆ.ಇದು ನ್ಯಾಯ ನಿರ್ಣಯದ ಹಾದಿ ಚಿನ್ವತ್ ಪೆರೆಟುಮ್ ಅಥವಾ ಚಿನ್ವತ್ ಬ್ರಿಜ್ (cf: ಎಂದು ವಿವರಿಸಲಾಗಿದೆ. ಆಸ್-ಸಿರಾತ್ ಎಂದು ಇಸ್ಲಾಮ್ ನಲ್ಲಿ ಹೇಳಲಾಗುತ್ತದೆ ),ಇವುಗಳು ಬದುಕಿನಲ್ಲಿ ಮಾರ್ಗದರ್ಶಿಯಾಗಿಸುತ್ತದೆ.ಹೀಗೆ ಎಲ್ಲಾ ಆತ್ಮಗಳು ಈ ನ್ಯಾಯದಂಡವನ್ನು ದಾಟಿ ಹೋಗಲು ಶ್ರದ್ದೆ ಬೇಕಾಗುತ್ತದೆ. (ಅಲೋಚನೆಗಳ ಮೇಲೆ,ಬಳಸಿದ ಶಬ್ದಗಳು, ಬದುಕಿನುದ್ದಕ್ಕೂ ನಿರ್ವಹಿಸಿದ ಕಾರ್ಯಗಳು)ಇಲ್ಲಿ ಪರಿಗಣಿತವಾಗುತ್ತವೆ.ಇವು ಮೋಕ್ಷ ಮಾರ್ಗದ ಸಂವಹನಗಳಾಗಿವೆ. ಹೇಗೆಯಾದರೂ ಜುರುತುಷ್ಟ್ರಿಯನ್ ವೈಯಕ್ತಿಕ ತೀರ್ಪು ಅಂತಿಮವಲ್ಲ. ಅಂತ್ಯದ ವೇಳೆಗೆ ದುಷ್ಟಶಕ್ತಿಯು ಸೋಲಿಸಲ್ಪಟ್ಟು ಎಲ್ಲಾ ಜೀವಾತ್ಮಗಳು ತಮ್ಮ ಒಟ್ಟು ಫ್ರಾವಾಶಿ(ಅಂತಿಮ ಮೋಕ್ಷ)ಯಲ್ಲಿ ಒಂದುಗೂಡುತ್ತವೆ, ಹೀಗೆ ಜುರುತುಷ್ಟ್ರುವಿನ್ ತತ್ವ ಸಿದ್ದಾಂತವು ಮೋಕ್ಷದ ದೃಷ್ಟಿಯಿಂದ ವಿಶ್ವಮಾನ್ಯ, ಸಾರ್ವತ್ರಿಕ ಧಾರ್ಮಿಕ ಪದ್ದತಿಯಾಗಿದೆ.

ಅದಲ್ಲದೇ ಬೆಬೊಲಿಯನ್ ಮತ್ತು ಅಕಾಡಿಯನ್ ಆಚರಣೆಗಳನ್ನು ಅಕಾಮೆನಿಡ್ಸ್ ಯುಗದವರು ಜನಪ್ರಿಯಗೊಳಿಸಿದರು.ಅವರ ಕಾಲದಲ್ಲಿ ಪ್ರಾರ್ಥನಾ ಮಂದಿರಗಳು ಮತ್ತು ದೇವಾಲಯಗಳು ಅಲ್ಲದೇ ಇನ್ನುಳಿದ ಪೂಜಾ ವಿಧಾನಗಳು ಜನಪ್ರಿಯಗೊಂಡವು. ಅಕಾಮಿನಿಡ್ ಯುಗದ ವಿಸ್ತರಣೆಗಳು ಸಾಮ್ರಾಜ್ಯದಾದ್ಯಂತ ಪ್ರಾರ್ಥನಾ ದೇಗುಲಗಳನ್ನು ನಿರ್ಮಿಸುವ ಪ್ರಮುಖ ಕೆಲಸಗಳಾಗಿದ್ದವು.ಬಹು ಮುಖ್ಯವಾಗಿ ಇವುಗಳಿಂದ ಮಿಥ್ರಾ, ಅರೆದ್ವಿ ಸುರಾ ಅನಾಹಿತಾ, ವೆರೆಥ್ರೆಗ್ನಾ ಮತ್ತುತಿಷ್ಟತ್ರಯಾ,ಸೂತ್ರಗಳು ಪ್ರಭಾವಿತಗೊಂಡವು.ಇವೆಲ್ಲವೂ ಅವರ ಮೂಲದ ರಚನೆ-ನಿರ್ಮಾಣಕ್ಕೆ ಅಧಿಕತೆ ತೋರಿದವು,(ಪ್ರೊಟೊ) ಅಂದರೆ ಇವು ಇಂಡೊ-ಇರಾನಿಯನ್ ಕಾರ್ಯಚಟುವಟಿಕೆಗಳನ್ನು ಮೂಲಾಧಾರವಾಗಿಸಿವೆ.ಅಲ್ಲದೇ ಇವುಗಳು ಪರ್ಸೊ-ಬೆಬೆಲೊನಿಯನ್ಸ್ ಕಾರ್ಯಾಚರಣೆ ಚಟುವಟಿಕೆಗಳನ್ನೂ ಒಳಗೊಂಡಿವೆ.

ಬರಬರುತ್ತಾ ವಿಗ್ರಹಗಳ ಪೂಜೆಯು ಹಿನ್ನಡೆ ಪಡೆಯಿತು. (ಅಲ್ಲದೇ ವಿಗ್ರಹಗಳ ಭಂಜಕದ ಪ್ರವೃತ್ತಿ ಬೆಳೆಯಿತು.ಅಗ್ನಿದೇವತಾ ದೇವಾಲಯಗಳು),ಆದರೆ ಆಗ ಪ್ರಚಲಿತವಿದ್ದ ಅಕೆಮೆನಿಡ್ಸ್ ವಿಶಾಲ ವ್ಯಾಪ್ತಿ ಪಡೆದಿತ್ತು.ಅಲ್ಲದೇ ಸಂಕೀರ್ಣವಾದ ರಚನೆ ಹೊಂದಿದ್ದ ಯಾಜತಾಸ್ (ಆಧುನಿಕ ಜುರುತುಷ್ಟ್ರುವಿನಿಯನ್'ದೃಷ್ಟಿಕೋನದಂತೆ) ಅವುಗಳನ್ನೀಗ ಧಾರ್ಮಿಕ ಆಚರಣೆಯಲ್ಲಿ ಸಾಕ್ಷಿಭೂತದಂತೆ ಕಾಣಬಹುದು.ಇದು ಈ ಸಂದರ್ಭದಲ್ಲಿ ಗಟ್ಟಿಯಾಗಿ ತನ್ನ ನೆಲೆ ಭದ್ರಪಡಿಸಿಕೊಂಡಿದೆ.ಅದರ ದೈವತ್ವದ ನಿಷ್ಠಾವಂತರು ಜುರುತುಷ್ಟ್ರುವಿನ್ ಕ್ಯಾಲಂಡರ್ ,ನಲ್ಲಿ ಕಾಣಿಸಿಕೊಂಡಿದ್ದಾರೆ.ನಿರಂತರವಾಗಿ ಧ್ಯಾನ,ಪ್ರಾರ್ಥನೆ ಮತ್ತು ಜಪತಪಗಳ ಆಚರಣೆ ಆಗಿನ ಭಕ್ತಸಮೂಹಕ್ಕೆ ರೂಢಿಗತವಾಗಿತ್ತು. ಇದಕ್ಕೂ ಅಧಿಕವೆಂದರೆ, ಅಮೆಶಾ ಸ್ಪಂಟಾ ,ಅಂದರೆ ಇವು ಆರು ನೇರವಾಗಿ ಉದ್ಭವಿಸಿದ ಧಾರ್ಮಿಕ ಸಂಜಾತ ಪದಗಳು. ಮೂಲದಲ್ಲಿ ಇವುಗಳನ್ನು ಅದರ ವಿಭಾಗಗಳು ಅಥವಾ "ದೈವತ್ವದ ಮಿಂಚುಗಳು"ಅಹುರಾ ಮಜ್ದಾದಿಂದ ಮೇಲಿನಿಂದ ಕೆಳಗಿಳಿದಿದ್ದು ಎನ್ನಲಾಗುತ್ತದೆ.ಇದರಿಂದ ಮಾನವ ಕುಲಕೋಟಿಯು ತನ್ನ ಸಾರ್ಥಕ ಬದುಕಿನೆಡೆಗೆ ಹೋಗಬಹುದಾಗಿದೆ.

ಸಿಖ್ಖ ಧರ್ಮದಲ್ಲಿ[ಬದಲಾಯಿಸಿ]

ಸಿಖ್ಖ ಸನಾತನಿಗಳಿಗೆ, "ಧರಮ್" ಎಂಬ ಪದ ಎಂದರೆ ಅದೊಂದು"ಸದಾಚಾರ ನಿಷ್ಟೆಗೆ ಮಾರ್ಗ"ಎಂದು ಪರಿಗಣಿಸಲಾಗುತ್ತದೆ. ಯಾವುದು "ಸದಾಚಾರ ನಿಷ್ಠೆಯ ಮಾರ್ಗ "? ಇದರ ಬಗ್ಗೆ ಸಿಖ್ಖ ಪುರಾತನ ಧರ್ಮಗ್ರಂಥದ ಬರೆಹಗಳು ಉತ್ತರ ಹುಡುಕಲು ಆರಂಭಿಸಿವೆ. ಸಿಖ್ಖರ ಪ್ರಮುಖ ಪವಿತ್ರ ಗ್ರಂಥವನ್ನುಗುರು ಗ್ರಂಥ ಸಾಹಿಬ್(SGGS.)ಎಂದು ಕರೆಯಲಾಗುತ್ತದೆ. ಇದನ್ನುಸಿಖ್ಖಶ್ರದ್ದಾಳುಗಳ ಇನ್ನಿತರ ಪವಿತ್ರ ಬರೆಹ ಗ್ರಂಥಗಳಿಗಿಂತ ಹೆಚ್ಚಿನದೆಂದು ಪರಿಗಣಿಸಲಾಗುತ್ತದೆ. ಸಿಖ್ಖ ಅನುಯಾಯಿಗಳು ಇದನ್ನುಗ್ರಂಥ(ಪವಿತ್ರ ಗ್ರಂಥ ),ಅಷ್ಟೇ ಅಲ್ಲದೇ ತಮ್ಮಬದುಕನ್ನು ಮುನ್ನಡೆಸುವ ಜೀವಂತ ಗುರು ಎಂದು ಭಾವಿಸುತ್ತಾರೆ. ಈ ಪವಿತ್ರ ಪಠ್ಯದಲ್ಲಿ ಒಟ್ಟು ೧೪೩೦ ಪುಟಗಳಿವೆ.ಅಲ್ಲದೇ ಧಾರ್ಮಿಕ ನಾಯಕರಾದ ಸಿಖ್ಖ ಗುರುಗಳು ಮುಖವಾಣಿಯಿಂದ ಬಂದ ದೈವದ ಉಕ್ತಿಗಳಾಗಿವೆ.ಇನ್ನುಳಿದ ಸಂತರು ಅಂದರೆ ಇತರೆ ಧರ್ಮಗಳಾದ ಹಿಂದು ಮತ್ತು ಇಸ್ಲಾಮ್ ನ ಪ್ರಮುಖ ಧರ್ಮಗುರುಗಳ ಉಕ್ತಿಗಳೂ ಇದರಲ್ಲಿವೆ.

ಸಿಖ್ಖ ಧರ್ಮವು ವಿಶಿಷ್ಟ ಧರ್ಮವೆನಿಸಿದ್ದು ಅದರ ಹತ್ತು ಗುರುಗಳು ತಮ್ಮ ಭೋದನೆಗಳನ್ನು ಸರ್ವರೂ ಸಾರ್ವಕಾಲಿಕವಾಗಿ ಒಪ್ಪಿತವಾಗುವಂತೆ ಭೋದಿಸಿದ್ದಾರೆ.ಆಧ್ಯಾತ್ಮಿಕವಾಗಿ ಇದನ್ನು ಅವರ ಅನುಯಾಯಿಗಳು ಅನುಸರಿಸುತ್ತಾರೆ. ಇಂತಹ ಗುರುಗಳನ್ನು"ದೈವಾಂಶದ ಬೆಳಕು,ಪ್ರಕಾಶ" ಎನ್ನಲಾಗುತ್ತದೆ.ಅವರಿಗೆ ಗುರ್ಬಾನಿಯನ್ನು ಭೋದಿಸಲಾಗಿರುತ್ತದೆ.(ಅಂದರೆ ದೇವವಚನ)ಇದನ್ನು ಗುರು ಗ್ರಂಥ ಸಾಹಿಬ್ ರೂಪದಲ್ಲಿ ಜಗತ್ತಿಗೆ ತೋರಿಸಲಾಗುವುದು. ಈ ಮತದ ಶ್ರದ್ದಾವಂತರಲ್ಲಿ ದೇವರೆಂದರೆ ಎರಡೂ ರೂಪದಲ್ಲಿದ್ದಾನೆ ಎಂದು ವರ್ಣಿಸಲಾಗಿದೆ.ನಿರ್ಗುಣ್(ಅತಿ ಶ್ರೇಷ್ಠ) ಮತ್ತುಸರ್ವಗುಣ್(ಸರ್ವಾಂತರಯಾಮಿ). ಅಷ್ಟೇ ಅಲ್ಲದೇ ದೇವರು ತನ್ನೆಲ್ಲ ರಚನೆಗಳಲ್ಲಿ ಹರಡಿಕೊಂಡಿದ್ದಾನೆ,ಸಮೃದ್ಧಿಯನ್ನು ನೀಡುತ್ತಾನೆ.ಆದರೆ ಆತ ಅವತಾರವೆತ್ತುವುದು ಮಾತ್ರ ಇಲ್ಲಿಲ್ಲ. ಆದರೆ ಈ ಧರ್ಮದ ಶ್ರದ್ದಾವಂತಿಕೆ,ನಂಬಿಕೆಗಳು ಆತ ಮಾಡುವ ಕೆಲಸಗಳು ಮತ್ತು ಉಪಕಾರಗಳ ಮೇಲೆ ಅವಲಂಬಿತವಾಗಿದೆ.ಇನ್ನುಳಿದ ಧರ್ಮದ ಬಾಹ್ಯ ಆಚರಣೆ ಅಥವಾ ಸಂಕೇತಗಳ ಮೇಲೆ ನಿರ್ಭರವಾಗಿಲ್ಲ.

ಹಿನ್ನೆಲೆ[ಬದಲಾಯಿಸಿ]

ಸಿಖ್ಖ ಜೀವನದ ಪ್ರಥಮ ಗುರಿ ಎಂದರೆ ದೇವರೊಂದಿಗೆ ಮಿಳಿತಗೊಳ್ಳುವುದು;ಬದುಕಿನ ಜೀವನ್ಮರಣಗಳ ಚಕ್ರದಿಂದ ವಿಮೋಚನೆ ಪಡೆಯುವುದಾಗಿದೆ.ಬದುಕಿನಲ್ಲಿ ಆತ ಮಾಡುವ ಪುಣ್ಯಕಾರ್ಯಗಳು ಆತನಿಗೆ ಮುಕ್ತಿ ನೀಡುತ್ತವಲ್ಲದೇ ಅವನನ್ನು ಮರುಹುಟ್ಟಿನಿಂದ ಪಾರು ಮಾಡುತ್ತವೆ.(ಮರುಜನ್ಮದ ಮರು-ಅವತಾರ) ಈ ವಿಮೋಚನೆಯು ದೇವರ ಧ್ಯಾನ,ಸತ್ಯವಂತಿಕೆಯ ಬದುಕು ಮತ್ತು ತನ್ನ ಅಧಿಕ ಸಂಪತ್ತನ್ನು ಲೋಕೋಪಕಾರಕ್ಕೆ ಮೀಸಲಿಟ್ಟು ದೇವರ ದಯೆದೊಂದಿಗೆ ಸರಳ ಜೀವನ ನಡೆಸುವುದಾಗಿದೆ. ಅಮೃತ ಪಾಹುಲ್ – ಈ ದೀಕ್ಷೆ ಮೂಲಕ ಸಿಖ್ಖರಿಗೆ ತಮ್ಮ ಮತದ ಸಂಪೂರ್ಣ ತತ್ವ ಪಾಲನೆಗೆ ಸಂಸ್ಕಾರ ನೀಡಲಾಗುತ್ತದೆ.ಪುರುಷರು-ಮಹಿಳೆಯರಿಗೆ ನೀಡುವ ಈ ಸಂಸ್ಕಾರದ ಧಾರ್ಮಿಕ ಕ್ರಿಯೆಯನ್ನು 1699 ರಲ್ಲಿ ಸಿಖ್ಖರ ಹತ್ತನೆಯ ಗುರುಗುರು ಗೊಬಿಂದ್ ಸಿಂಗ್,ಈ ಪರಂಪರೆಯನ್ನು ನಡೆಸಿಕೊಂಡು ಬಂದರು. ಹೀಗೆ ಎಲ್ಲಾ ಸಿಖ್ಖರು ಈ ಅಮೃತ, ಸ್ವೀಕರಿಸಿ ತಮ್ಮ ನೈಜವಾದ "ಸಂತ-ಸೈನಿಕ" ರೂಪದ ಧಾರ್ಮಿಕ ನೀತಿ-ಸಂಹಿತೆಯ ಶಿಸ್ತಿನ ಜೀವನ ನಡೆಸುವರು. ಸುಮಾರು ೧೭೦೮,ರಲ್ಲಿ ಗುರು ಗೊಬಿಂದ್ ಸಿಂಗ್ ಅವರು ಗುರು ಗ್ರಂಥ ಸಾಹಿಬ್ನಲ್ಲಿ ದೈವೀ ಅಂಶವನ್ನು ತುಂಬಿ ಅದಕ್ಕೆ ಪಾವಿತ್ರ್ಯ ಸಿಂಚನ ಮಾಡಿದರು. (ಸಿಖ್ಖ ಗ್ರಂಥ ಲಿಪಿಗಳು )ಇದು ಅನಂತ ಪಾರಮಾರ್ಥಿಕ ಗುರುವಾಗಿ ಪರಿಣಮಿಸಿತು,ಮಾನವ ಗುರು ಸ್ಥಾನ ಪಡೆಯುವುದನ್ನು ಅವರು ಶಾಶ್ವತವಾಗಿ ಸ್ಥಗಿತಗೊಳಿಸಿದರು. ಇದರ ಐಹಿಕ, ಲೌಕಿಕ ಪಾರಮಾರ್ಥಿಕ ಅಧಿಕೃತೆಯು ಖಾಲ್ಸಾ ಪಂಥಕ್ಕೆ ಸೇರಿದೆ.(ಅಂದರೆ ಅಮೃತವನ್ನು ಪಡೆದ ಈ ಸಮುದಾಯ)

ಸಿಖ್ಖ ಧರ್ಮದ ಇನ್ನುಳಿದ ಮಹತ್ವದ ಬದುಕಿನ ಅಂಶವೆಂದರೆ ಸೇವಾ (ದೇವರ ಸೇವಾಕಾರ್ಯಕ್ಕೆ,ಸೃಷ್ಟಿಕರ್ತನ ಪಾದಕ್ಕೆ ಸೇವೆ-ಭಕ್ತಿ) ಇದನ್ನು ಸಾಮಾನ್ಯವಾಗಿ ದೈಹಿಕ ಕೆಲಸದ ಮೂಲಕ ಸೇವೆಗೆ ಅನುಕೂಲ ಮಾಡಲಾಗುತ್ತದೆ.ಬೇರೆ ಧರ್ಮಗಳ ಶ್ರದ್ದಾವಂತರ ಕಷ್ಟಗಳಿಗೂ ಅವರ ನ್ಯಾಯಕ್ಕಾಗಿ ಇವರು ತಮ್ಮ ಸೇವಾ ಕಾರ್ಯವನ್ನು ಅಥವಾ ಕರಸೇವೆಯನ್ನು ಬೇಡುತ್ತಾರೆ. ಇನ್ನುಳಿದ ಧರ್ಮ ಶ್ರದ್ದೆಗಳಂತೆ ಈ ಧರ್ಮದಲ್ಲೂ ಎಲ್ಲಾ ಉಪಾಯಗಳೂ ಮುಗಿದ ನಂತರ ಅಂತಿಮದಲ್ಲಿ ಖಡ್ಗ ಝಳಿಪಿಸುವುದೇ ಆಗಿದ.

ಕ್ರೈಸ್ತಧರ್ಮೀಯರ ಸಭಾಪರಿಷತ್ ಇವನ್ನೊಳಗೊಂಡಿದೆ:

  1. ಪಾಥ್-(ಮಾರ್ಗ) ಪವಿತ್ರ ಗ್ರಂಥ ವಾಚನ
  2. ಕೀರ್ತನ್-ಭಕ್ತಿ ಗಾಯನಶಬಾದ್(ದೇವರನಾಮಾವಳಿ).
  3. ಲಾಂಗರ್-ಇದು ಸಾಮೂಹಿಕ ಸಮೂದಾಯದ ಸಸ್ಯಾಹಾರಿ ಆಹಾರ,ಅವರ ಅಡುಗೆ ಮನೆ ಅವರ ಬದುಕಿನ ಮಹತ್ವದ ಅಂಶ.ಸಿಖ್ಖ ಸೇವಾಕಾರ್ಯದ ನಂತರ ಎಲ್ಲರಿಗೂ ಆಹಾರ ಪೂರೈಕೆ ಮಾಡಲಾಗುತ್ತದೆ.
  4. ಅರ್ದಾಸ್- ಸಿಖ್ಖರು ತಮ್ಮ ದೇವ ಪ್ರಾರ್ಥನೆಯಲ್ಲಿ ಕೇವಲ ತಮ್ಮ ಧರ್ಮದವರನ್ನಷ್ಟೇ ಕಾಣಿಸುವುದಿಲ್ಲ.ಎಲ್ಲಾ ಧರ್ಮೀಯರಿಗೆ ದೇವರ ಅರ್ದಾಸ್ ,ಆಶೀರ್ವಾದ ಕೇಳುತ್ತಾರೆ.

ಗ್ರಂಥಗಳು ಮತ್ತು ಧರ್ಮ[ಬದಲಾಯಿಸಿ]

ಪವಿತ್ರ ಗ್ರಂಥ "ಗುರು ಗ್ರಂಥ ಸಾಹಿಬ್ "ಧರ್ಮಶೀಲತೆಯ ತತ್ವಗಳ ಮೂಲಕ "ಉತ್ತಮ ಮೋಕ್ಷ ಮಾರ್ಗವನ್ನು" ತೋರಿಸುತ್ತದೆ.ಅದಲ್ಲದೇ ಇನ್ನೂ ಅನೇಕ ಭಾಗಗಳೂ ಇದರಲ್ಲಿವೆ.

  1. ಸಿಖ್ಖ ಧರ್ಮದ ಗಡಿಯೊಳಗೆ ಬಂಧಿಸಲ್ಪಟ್ಟಿದ್ದಾನೆ  : ಇದರ ಅನುಯಾಯಿಗಳು ತಮ್ಮ ಧರ್ಮದ ನಂಬಿಕೆಗಳಿಗೆ ಬದ್ದರಾಗಿರುತ್ತಾರೆ.ಇದು ಅವರ ಪವಿತ್ರ ಗ್ರಂಥದ ಆಣತಿಯ ಉಕ್ತಿಯಾಗಿದೆ. ಓರ್ವ ಬದ್ದತೆಯುಳ್ಳ ಸಿಖ್ಖ ಈ ಎಲ್ಲಾ ಮಾರ್ಗಗಳನ್ನು ಅನುಸರಿಸಲು ಪ್ರೊತ್ಸಾಹಿಸಲಾಗುತ್ತದೆ. ಗುರು ಗ್ರಂಥ ಸಾಹಿಬ್ ನ ಮೊದಲ ಪಠಣವನ್ನು ಜಪ್ಜಿಎಂದು ಕರೆಯುತ್ತಾರೆ.ಸಾಹಿಬ್ ನಲ್ಲಿ ಹೀಗೆ ಹೇಳಲಾಗಿದೆ: "ಶ್ರದ್ದಾಳುಗಳ ಮಾರ್ಗವು ಎಂದಿಗೂ ತಡೆಯೊಡ್ಡದಂತಿರಬೇಕು. ಶ್ರದ್ದಾಳು ಗೌರವ-ಪ್ರಶಸ್ತಿ-ಪ್ರಸಿದ್ದಿಯಿಂದ ದೂರವಿರಬೇಕು. ಶ್ರದ್ದಾಳುಗಳು ಟೊಳ್ಳು ಧಾರ್ಮಿಕ ಆಚರಣೆಗಳಿಗೆ ಬಲಿಯಾಗಬಾರದು. ಧರ್ಮದಲ್ಲಿ ನಂಬಿಕೆ ಇರುವ ಜನರು ಧರ್ಮ ಏನು ಹೇಳುತ್ತದೆಯೋ ಅದನ್ನು ಮಾಡುತ್ತಾರೆ. ಇಂಥ ಪರಿಶುದ್ದತೆಯು ನಿಮ್ಮನ್ನು ದೇವರೆಡೆಗೆ ಒಯ್ಯುತ್ತದೆ.ಕೇವಲ ಇಂತಹ ಮನಸ್ಸುಗಳು ನಿರ್ಮಲವಾಗಿರುತ್ತವೆ." (14)(ಗುರು ಗ್ರಂಥ ಸಾಹಿಬ್ ಜಪ್ಜಿಪುಟ 3.)
  2. ನಿಮ್ಮ ಕೆಲಸಗಳು ದಾಖಲಾಗುತ್ತವೆ: ನಂಬಿಕಸ್ಥ ಭಕ್ತರು ಮಾಡುವ ಕೆಲಸ,ಆಲೋಚನೆಗಳನ್ನು "ಧಾರ್ಮಿಕತೆ ದೇವರ-ಅಧಿಪತಿಯ" ಆದೇಶಕ್ಕನುಗುಣವಾಗಿ ನೋಡಬೇಕು. ನಮ್ಮ ಹಣೆಬರೆಹ ಬರೆಯುವವರು "ಚಿತ್ರ ಮತ್ತು ಗುಪ್ತ" 1</ಸಪ್>,ದೇವಧೂತ-ದೇವಕನ್ಯೆಯವರು ತಮ್ಮ ಮನಸ್ಸಿನ ಅಗಾಧತೆಯನ್ನು ಭಾವನಾತ್ಮಕತೆಯನ್ನು ಸ್ಪುರಿಸುತ್ತದೆ.ಆಲೋಚನಾ ಲಹರಿ ಮತ್ತು ಉತ್ತಮ ಕಾರ್ಯಗಳು ಇಲ್ಲಿ ಪರಿಗಣಿತವಾಗುತ್ತವೆ. ವ್ಯಕ್ತಿಯ ಮರಣಾನಂತರ ಆತ್ಮವನ್ನು "ಧರ್ಮದ ಅಧಿಪತಿ" ಎದುರು ತರಲಾಗುತ್ತದೆ.ಆತ ಮಾಡಿದ ಕಾರ್ಯಗಳ ಬಗ್ಗೆ ಅಲ್ಲಿ ಓದಲಾಗುತ್ತದೆ.ಅದನ್ನು ಹೀಗೆ: "ಹಗಲು ಮತ್ತು ರಾತ್ರಿ ಎಂಬಿಬ್ಬರು ದಾದಿಯರು,ಇವರ ತೊಡೆಗಳ ಮೇಲೆ ಜಗತ್ತು ನಿದ್ರಿಸಿ ನರ್ತಿಸಿ ಆಟ ಆಡುತ್ತದೆ. ಎಂದು ವಾಚನ ಮಾಡಲಾಗುತ್ತದೆ.ಒಳ್ಳೆಯ ಕರ್ಮಗಳು-ಕೆಟ್ಟ ಕರ್ಮಗಳು-ಇವುಗಳನ್ನೆಲ್ಲಾ ಧರ್ಮದ ಅಧಿಪತಿಯೆದುರು ಪ್ರಸ್ತುತಪಡಿಸಬೇಕಾಗುತ್ತದೆ. ತಮ್ಮ ಕೆಲಸ-ಕಾರ್ಯಗಳಿಂದಾಗಿ ದೇವರ ಹತ್ತಿರವಾದರೆ ಇನ್ನೂ ಕೆಲವರನ್ನು ದೂರಾಚೆ ತಳ್ಳಲಾಗುತ್ತದೆ." (ಗುರು ಗ್ರಂಥ ಸಾಹಿಬ್ಜಪ್ಜಿ ಪುಟ8,ಶ್ಲೋಕ.) 2
  3. ದೇವರಿಂದ ನಿರ್ವಹಿಸಲ್ಪಡುವ,ನಿಯಂತ್ರಿಸಲ್ಪಡುವ ಧರ್ಮ: ಭೂಮಿ ಮೇಲೆ ಯಾವ ರೀತಿಯಲ್ಲಿ ಪ್ರಾಪಂಚಿಕ ವ್ಯವಸ್ಥೆಗೆ ಹೇಗೆ ಸ್ಪಂದಿಸಬೇಕೆಂಬುದನ್ನು ಅದುನ್ ತಿಳಿಸುತ್ತದೆ. ಆತ್ಮವು ತನ್ನ ದಾರಿಯಲ್ಲಿ"ಶುದ್ದಗೊಳಿಸಿದ" ಅಥವಾ" ದೇವರ ಆಣತಿಗಾಗಿ ಕಾಯುತ್ತದೆ,ಇದು ವ್ಯಕ್ತಿಯ ಇತಿಹಾಸವನ್ನು ಅವಲಂಬಿಸಿದೆ. ಪವಿತ್ರ ಪಠ್ಯ ಹೇಳುವುದೆಂದರೆ:"ಉತ್ತಮ ಧರ್ಮಶೀಲತೆಯ ಕಾರ್ಯವು ದೇವರ ಆಜ್ಞೆ ಮೇರೆಗೆ ನಡೆದು ಸತ್ಯವಾದ ನ್ಯಾಯನಿಷ್ಠೆ ಒದಗಿಸುತ್ತದೆ". (ಗುರು ಗ್ರಂಥ ಸಾಹಿಬ್ಪುಟ 38) (4) ಯಾರು ದೇವರ "ನಾಮಸ್ಮರಣೆ ಮಾಡುತ್ತಾರೋ"ಅವರನ್ನು ಈ ಬಂಧನದಿಂದ ಮುಕ್ತಿಗೊಳಿಸಲು:"ಆಕೆ ತನ್ನ ಕರ್ಮಗಳ ಕಳೆದುಕೊಳ್ಳಲು ಧರ್ಮದ ನೀತಿ-ನಿಯಾಮಕ ಅಧಿಪತಿ ಹರ,ಹರ ಎಂದು ಜಪಿಸಿದರೆ ಧರ್ಮನ್ಯಾಯನಿಷ್ಟ ದೇವರು ತಮ್ಮನ್ನು ಹರಿಸುತ್ತಾನೆ". (ಗುರು ಗ್ರಂಥ ಸಾಹಿಬ್ಪುಟ 78) 5

ಜೈನಧರ್ಮದಲ್ಲಿ[ಬದಲಾಯಿಸಿ]

ಧರ್ಮವು ನೈಸರ್ಗಿಕವಾದುದು. ಜೈನ ಆಚಾರ್ಯ ಸಮಂತಭದ್ರ ಬರೆಯುತ್ತಾರೆ: "ವಾತ್ತು ಸಹಾವೊ ಧಮ್ಮೊ" ಧರ್ಮವು ಒಂದು ವಸ್ತುವಿನ ನೈಜರೂಪ. ಹೀಗೆ ಆತ್ಮದ ಮೂಲಗುಣವೆಂದರೆ ಮುಕ್ತತೆ;ಹೀಗೆ ಅದು ಧರ್ಮಾ ಇವಾ ಪರಲೌಕಿಕ,ವಿಶ್ವದ ದಿಗಂತದಾಚೆಗೆ ತನ್ನ ಬಾಹುಗಳ ವ್ಯಾಪಿಸಿದೆ. ಆದರೆ ದೇಹದ ಮುಖ್ಯ ಗುಣಲಕ್ಷಣವೆಂದರೆ ಸ್ವಯಂ-ರಕ್ಷಣೆ ಮತ್ತು ಸಂತೋಷದ ಹುಡುಕಾಟದಲ್ಲಿರುವುದು.

ಹೀಗೆ ಇದರಲ್ಲಿ ಎರಡು ಧರ್ಮಗಳಿವೆ.

ಎರಡು ಧರ್ಮಗಳು[ಬದಲಾಯಿಸಿ]

ಆಚಾರ್ಯ ಹರಿಭದ್ರ(ಗರಿಷ್ಟ. 6-7 ನೆಯ ಶತಕ.) ಧರ್ಮವು ಧರ್ಮ-ಬಿಂದುವಿನಲ್ಲಿರುವಿಕೆಯ ಚರ್ಚೆ. ಅವರು ಬರೆಯುತ್ತಾರೆ:(ಅನುವಾದ ವೈ. ಮಲೈಯರಿಂದ):

soayam-anuṣṭhātṛ-bhedāt dvi-vidho
gṛhastha-dharmo yati-dharmaś ca |

ಆಚರಣೆಯಲ್ಲಿನ ವಿಭಿನ್ನತೆಯಿಂದಾಗಿ ಧರ್ಮವನ್ನು ಎರಡು ಪ್ರಕಾರಗಳಲ್ಲಿ ವಿಂಗಡಿಸಬಹುದು. ಸಂಸಾರಸ್ಥರಿಗೆ ಮತ್ತು ಸಂತರಿಗೆ.

tatra gṛhastha-dharmo api dvi-vidhaḥ
sāmanyato viśeṣataś ca |

ಸಂಸಾರಸ್ಥರ ಧರ್ಮದಲ್ಲಿ ಎರಡು ವಿಧ,"ಸಾಮಾನ್ಯ" ಮತ್ತು"ವಿಶಿಷ್ಟ"

tatra sāmanayato gṛhastha-dharmaḥ kula-krama-agatam-anindyaṃ
vibhavady-apekshayā nyāto anuṣṭhānaṃ |

ಸಂಸಾರಿಗಳ ಆಚರಣೆಗಳ ಮೂಲಕ ಧರ್ಮದ ಪಾಲನೆಯೇ ಸಾಮಾನ್ಯ ಧರ್ಮವೆನಿಸಿದೆ.ಇದು ಆಕ್ಷೇಪಕರವಾದುದಲ್ಲ.ನ್ಯಾಯಯುತವಾಗಿ ಗಳಿಸಿದ ಸಂಪತ್ತು ಅಂದರೆ ಅದು ಸಮಪಾಲನೆಯ ತತ್ವವಾಗಿದೆ.(ಪ್ರತಿಯೊಬ್ಬರದೂ ನ್ಯಾಯಯುತವಾಗಿ ಕಾನೂನು-ನೀತಿಯುತವಾಗಿ ನಡೆಯುತ್ತಾರೆ.)

ಸೋಮದೇವಾ ಸೂರಿ(10th c.)ಪದಗಳು "ಸಾಮಾನ್ಯ"ಮತ್ತು"ವಿಶಿಷ್ಟ" ಧರ್ಮಗಳುಲೌಕಿಕ ("ಪ್ರಾಪಂಚಿಕ") ಮತ್ತುಪ್ರಲೌಕಿಕ ("ಬಾಹ್ಯ-ಪ್ರಾಪಂಚಿಕ") ಅನುಕ್ರಮವಾಗಿ:

dvau hi dharmau gṛhasthāṇam, laukikaḥ, pāralaukikaḥ |
lokāśrayo bhavedādyah, parah syād-āgama-āśrayaḥ ||

ಸಂಸಾರಿಯೊಬ್ಬ ಎರಡನ್ನೂ ಲೌಕಿಕ ಮತ್ತು ಪರಲೌಕಿಕವನ್ನು ಪಾಲಿಸುತ್ತಾನೆ. ಅದೇ ವೇಳೆಗೆ.

ಇವನ್ನೂ ಗಮನಿಸಿ[ಬದಲಾಯಿಸಿ]

  • ತಾವೊ(ಚೀನೀಸ್)
  • ಪೆರೆನ್ನಿಯಲ್ ಫಿಲಾಸಫಿ
  • ಅನುಭಾವ
  • ವೃತ
  • ಹಿಂದೂ ತತ್ವಶಾಸ್ತ್ರ
  • ಬುದ್ಧಿಸ್ಟ್ ಫಿಲಾಸಫಿ
  • ಕರ್ಮ
  • ಧಮ್ಮಪದ
  • ಧರ್ಮಕಾಕ್ರ
  • ಧರ್ಮ ಮಹಾರಾಜ
  • ಧರ್ಮಸಂಕಟ್
  • ಧರ್ಮ ಟ್ರಾನ್ಸಮಿಷನ್ (ಸ್ಧಳಾಂತರಮಾಡು)
  • ಯುಗ ಧರ್ಮ
  • ಮಿತ್ವ್ಜ(ಜೆವಿಶ್)
  • ಫಾರ್ದ್(ಇಸ್ಲಾಮಿಕ್ )
  • ಧೆಮಿಸ್ ಧೆಮಿಸ್ (ಗ್ರೀಕ್)
  • ಸತ್ವ
  • ಮಾ'ಅತ್ (ಈಜಿಪ್ಟಿಯನ್)
  • ಸ್ಪಾಂಟೇನಿಯಸ್ ಆರ್ಡರ್

ಹೆಚ್ಚಿನ ಓದಿಗಾಗಿ[ಬದಲಾಯಿಸಿ]

  1. ಮೂರ್ತಿ,ಕೆ ಕೃಷ್ಣ. "ಧರ್ಮ - ಇದರ ಪದದ ವ್ಯುತ್ಪತ್ತಿ "ಧರ್ಮ ದಿ ಟಿಬೆಟ್ ಜರ್ನಲ್ ,Vol.XXI,ಸಂ, 1, ಸ್ಪ್ರಿಂಗ್ 1966,pp.84–87.ದಿ ಸಂ.
  2. (ರಾಧಾ ಕೃಷ್ಣನ,ಎಸ್.1923): "ಇಂಡಿಯನ್ ಫಿಲಾಸಫಿ ಸಂ.1 " (2 ನೆಯ ಸಂ. ). ನ್ಯೂ ಡೆಲ್ಲಿ:ಆಕ್ಸಫರ್ಡ್ ಇಂಡಿಯಾ ಪೇಪರ್ ಬ್ಯಾಕ್ಸ್ (ಆಕ್ಸಫರ್ಡ್ ಯೂನಿವರ್ಸಿಟಿ ಪ್ರೆಸ್)
  3. ಹ್ಯುಮೆ,ಆರ್.ಇ.: (1921:"ದಿ ಥರ್ಟೀನ್ ಪ್ರಿನ್ಸಿಪಲ್ ಉಪನಿಷತ್ಸ್ " (2 ನೆಯ ಸಂಪುಟ, ಪರಿಷ್ಕೃರಿಸಿದ್ದು ). ಆಕ್ಸ್‌ಫರ್ಡ್‌:ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯ ಮುದ್ರಣಾಲಯ.
  4. ಈಶ್ವರನ್,ಇ.1987):"ದಿ ಉಪನಿಷಿತ್ಸ್ "(ಏಳನೆಯ ಮುದ್ರಣ ). ಟೊಮೇಲ್ಸ್,CA:ನೀಲಗಿರಿ ಪ್ರೆಸ್
  5. ಶ್ರೀ ಚಂದ್ರಶೇಖರೇಂದ್ರ ಸರಸ್ವತಿ:"ಹಿಂದು ಧರ್ಮ:ದಿ ಯೂನಿವರ್ಸಲ್ ವೇ ಆಫ್ ಲೈಫ್ " ಭಾರತೀಯ ವಿದ್ಯಾ ಭವನ ಪ್ರೆಸ್.
  6. ಸಾಧುಗಳು,ಕಟ್ಟಳೆಗಳ ದಾಟಿ ಹೋಗುತ್ತಿರುವುದು (ಗೋಯಿಂಗ ಬಿಯಾಂಡ್ ದಿ ಡೆಡ್ ಲಾಕ್ಸ್)ಪ್ಯಾಟ್ರಿಕ್ ಲೆವಿ ಅವರಿಂದ,ಪ್ರಕಾಶನ ಪ್ರಕಾಶ ಬುಕ್ಸ್,ದೆಲ್ಹಿ, ೨೦೧೦.

ಬಾಹ್ಯ ಕೊಂಡಿಗಳು[ಬದಲಾಯಿಸಿ]

Wikiquote
Wikiquote
ವಿಕಿಕೋಟ್ ತಾಣದಲ್ಲಿ ಈ ವಿಷಯಕ್ಕೆ ಸಂಭಂಧಪಟ್ಟ ನುಡಿಗಳು ಇವೆ:
[[wikiquote:kn:{{{1}}}|ಧರ್ಮ (ಭಾರತೀಯ ಪರಿಕಲ್ಪನೆ)]]
  1. REDIRECT Template:Hinduism (compact)

ಉಲ್ಲೇಖಗಳು[ಬದಲಾಯಿಸಿ]

  1. ಕರೊಲ್ ಹೆಂಡರ್ರ್ಸನ್ ಗಾರ್ಸಿಯಕಲ್ಚರ್ ಮತ್ತು ಕಸ್ಟಮ್ಸ್ ಆಫ್ ಇಂಡಿಯ .2002,page 312002,ಪೇಜ್ 31
  2. Brodd, Jefferey (2003). World Religions. Winona, MN: Saint Mary's Press. ISBN 978-0-88489-725-5. {{cite book}}: Cite has empty unknown parameter: |coauthors= (help)
  3. ಐನ್ಸ್ಲೀ ಥಾಮಸ್ ಎಂಬ್ರೀ,ಸ್ಟೆಫೆನ್ ಎನ್. ಹಾಯ್, ವಿಲಿಯಮ್ ದಿಯಿಧರೆ ಡೆ ಬ್ಯಾರಿ,ಸೌರ್ಸ್ ಆಫ್ ಇಂಡಿಯನ್ ಟ್ರೆಡಿಶನ್: ಮಾಡೆರ್ನ್ ಇಂಡಿಯಾ ಅಂಡ್ ಪಾಕಿಸ್ತಾನ್. ಕೊಲೋಂಬಿಯ ಯುನಿವರ್ಸಿಟಿ ಪ್ರೆಸ್, 1988,ಪುಟ 215.
  4. ಡೇವಿಡ್ ಕಲುಪಹನ . ಮಧ್ಯ ಯುಗದ ತತ್ವಜ್ಞಾನ. ಸನಿ ಪ್ರೆಸ್,1986, ಪುಟಗಳು 15-16:"ದಿ ಓಲ್ಡ್ ಇಂಡಿಯನ್ ಟರ್ಮ್ಧರ್ಮ ಇದನ್ನು ಪಾರಮಾರ್ಥಿಕ ವಿದ್ಯಮಾನಗಳಿಗಾಗಿ ಉಳಿಸಿಕೊಳ್ಳುತ್ತದೆ. ಹೇಗೆಯಾದರೂ,ಆತ ಇದರ ವ್ಯಾಖ್ಯಾನ ಮಾಡುವಾಗ ತುಂಬಾ ಎಚ್ಚರಿಕೆ ವಹಿಸಿದ,ಧರ್ಮಾ ಒಂದು "ಸ್ವತಂತ್ರವಾಗಿ ಬೆಳೆದ ಪಾರಮಾರ್ಥಿಕ ವಿದ್ಯಮಾನ"(ಪಾತಿಕ್ಕಾ-ಸಮುಪನ್ನಾ-ಧಮ್ಮಾ . ಇದರಲ್ಲಿನ ವಿಶಿಷ್ಟ ಅಂತರದಿಂದ ಧಮ್ಮಾ ಎಂಬುದು ಭಾರತೀಯ ಪರಿಕಲ್ಪನೆಯ ಪದ; ಧರ್ಮಾ ಅಂದರೆ ನಿಜಾರ್ಥದಲ್ಲಿ (ಆತ್ಮನ್ ), ಒಂದು ಮೂಲತತ್ವಶಾಸ್ತ್ರದ ಒಂದು ಅಂಗವೆನಿಸಿದೆ.ಹೀಗೆ ಬುದ್ದ ಕೂಡಾ ಇದರಲ್ಲಿರುವ ತೊಂದರೆಗಳು ಅಥವಾ ಫಲ-ಫಲಿತಾಂಶಕ್ಕೆ (ಅತಾಹ , Sk. ಅರ್ಥ ) ವನ್ನು ಒಳಗೊಂಡ ಒಂದು ಸಮುಚ್ಚಯ ಧಮ್ಮಾ ."ಎಂದು ಗುರುತಿಸಲಾಯಿತು.ಧರ್ಮ ಎಂದರೆ ಕ್ರಿಶ್ಚಿಯನ್, ಇಸ್ಲಾಂ ಅಥವಾ ಇತರೆ ಪಂಗಡಗಳು ಎಂದೆನಿಸುವುದಿಲ್ಲ. ಧರ್ಮ ಎಂದರೆ ಅದೊಂದು ಸತ್ಯದರ್ಶನ ಅಥವಾ ಶ್ರೇಷ್ಠ ಆದರ್ಶ ಎಂದರ್ಥ ಆದ್ದರಿಂದ ಧರ್ಮ ಎಂಬ ಪದವನ್ನು ಯಾವುದೇ ಮತ ಪಂಥಗಳ ಹೆಸರಿನ ಜೊತೆ ಸೇರಿಸಬಾರದು
  5. Rix, Helmut, ed. (2001). Lexikon der indogermanischen Verben (in German) (2nd ed.). Wiesbaden: Dr. Ludwig Reichert Verlag. p. 145.{{cite book}}: CS1 maint: unrecognized language (link)
  6. ಕಾರ್ಲ್ ಬ್ರುಗ್ ಮನ್, ಎಲೆಮೆಂಟ್ಸ್ಆಫ್ ದಿ ಕಂಪೇರೇಟಿವ್ ಗ್ರಾಮರ್ ಆಫ್ ದಿ ಇಂಡೊ-ಜರ್ಮನಿಕ್ ಲ್ಯಾಂಗ್ವೇಜಿಸ್,ಸಂ.III, B.ವೆಸ್ಟರ್ ಮ್ಯಾನ್&Co., ನ್ಯುಯಾರ್ಕ್,1892, p 100
  7. ಮಹಾಭಾರತ:ಬುಕ್:11ದಿ ಬುಕ್ ಆಫ್ ದಿ ವೆನುಸ್ ಬುಕ್ 12:ದಿ ಬುಕ್ ಆಫ್ ಪೀಸ್,ಪಾರ್ಟ್ 1 ಬೈ ಜೊಹನ್ಸ್ ಅದ್ರಿಯನ್ಸ್ ಬೆರ್ನಾರ್ಡ್ಸ್ ಬಿಲ್ಟನೆನ್,ಜೇಮ್ಸ್ ಎಲ.ಫಿಟ್ಜಗೆರಾಲ್ಡ.pg.124
  8. ಮಹಾಭಾರತ:ಬುಕ್:11 ದಿ ಬುಕ್ ಆಫ್ ದಿ ವೆನುಸ್ ಬುಕ್ 12:ದಿ ಬುಕ್ ಆಫ್ ಪೀಸ್,ಪಾರ್ಟ್ 1 ಬೈ ಜೊಹನ್ಸ್ ಅದ್ರಿಯನ್ಸ್ ಬೆರ್ನಾರ್ಡ್ಸ್ ಬಿಲ್ಟನೆನ್,ಜೇಮ್ಸ್ ಎಲ.ಫಿಟ್ಜಗೆರಾಲ್ಡ್.pg.124