ಹಿಂದೂ ರಾಷ್ಟ್ರೀಯತೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹಿಂದೂ ರಾಷ್ಟ್ರೀಯತೆಯನ್ನು ಒಟ್ಟಾರೆಯಾಗಿ ಐತಿಹಾಸಿಕ ಭಾರತದ ಸ್ಥಳೀಯ ಆಧ್ಯಾತ್ಮಿಕ ಹಾಗು ಸಾಂಸ್ಕೃತಿಕ ಸಂಪ್ರದಾಯಗಳನ್ನು ಆಧರಿಸಿ, ಸಾಮಾಜಿಕ ಹಾಗು ರಾಜಕೀಯ ಚಿಂತನೆಯ ಅಭಿವ್ಯಕ್ತಿಗಳು ಎಂದು ನಿರ್ದೇಶಿಸಲಾಗಿದೆ. ಸ್ಥಳೀಯ ಚಿಂತನಾ ವಾಹಿನಿಗಳು ಭಾರತೀಯ ರಾಜ್ಯ ವ್ಯವಸ್ಥೆಗೆ ಸಂಬಂಧಿಸಿದಂತೆ ಒಂದು ವಿಶಿಷ್ಟ ಗುರುತನ್ನು ರೂಪಿಸಲು ಸಹಾಯ ಮಾಡಿದಾಗ ಮತ್ತು ವಸಾಹತುಶಾಹಿಯನ್ನು ಪ್ರಶ್ನಿಸಲು ಒಂದು ಆಧಾರವನ್ನು ಒದಗಿಸಿದಾಗ ಅವುಗಳು ಭಾರತೀಯ ಇತಿಹಾಸದಲ್ಲಿ ಅತ್ಯಂತ ಪ್ರಸ್ತುತವೆನಿಸಿದವು. ಅವು ಬ್ರಿಟಿಷ್ ರಾಜ್ ವಿರುದ್ಧದ ಸಶಸ್ತ್ರ ಹೋರಾಟ, ಒತ್ತಾಯದ ರಾಜಕೀಯ ಹಾಗು ಅಹಿಂಸಾ ಪ್ರತಿಭಟನೆಗಳನ್ನು ಆಧರಿಸಿದ ಸ್ವಾತಂತ್ರ್ಯ ಚಳುವಳಿಗಳನ್ನು ಪ್ರೇರೇಪಿಸಿದವು.