ವಿಷಯಕ್ಕೆ ಹೋಗು

ಪದ್ಮ ಪುರಾಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹಿಂದೂ ಧರ್ಮಗ್ರಂಥಗಳು

Aum

ಋಗ್ವೇದ · ಯಜುರ್ವೇದ · ಸಾಮವೇದ · ಅಥರ್ವವೇದ

ಐತರೇಯ · ಬೃಹದಾರಣ್ಯಕ · ಈಶಾವಾಸ್ಯ · ತೈತ್ತಿರೀಯ · ಛಾಂದೋಗ್ಯ · ಕೇನ · ಮುಂಡಕ · ಮಾಂಡೂಕ್ಯ · ಕಠ · ಪ್ರಶ್ನ · ಶ್ವೇತಾಶ್ವತರ

ಗರುಡ · ಅಗ್ನಿ . ನಾರದ . ಪದ್ಮ . ಸ್ಕಾಂದ . ಭವಿಷ್ಯ . ಬ್ರಹ್ಮ . ಭಾಗವತ . ಬ್ರಹ್ಮವೈವರ್ತ . ಬ್ರಹ್ಮಾಂಡ . ವಾಯು . ಲಿಂಗ . ವಿಷ್ಣು . ವಾಮನ . ಮಾರ್ಕಂಡೇಯ . ವರಾಹ . ಕೂರ್ಮ . ಮತ್ಸ್ಯ

ಮಹಾಭಾರತ · ರಾಮಾಯಣ

ಭಗವದ್ಗೀತೆ · ಆಗಮ· ಶೂನ್ಯ ಸಂಪಾದನ· ಶ್ರೀ ಸಿದ್ಧಾಂತ ಶಿಖಾಮಣಿ · ವೀರಶೈವ ಪುರಾಣ · ವಿಷ್ಣು ಸಹಸ್ರನಾಮ . ಬಸವರಾಜ ವಿಜಯಂ

ಹದಿನೆಂಟು ಪ್ರಮುಖ ಪುರಾಣಗಳಲ್ಲಿ ಪದ್ಮ ಪುರಾಣವೂ ಒಂದು. ಪದ್ಮ ಪುರಾಣಇದರಲ್ಲಿ ಐದು ಕಾಂಡಗಳಿವೆ. ಪ್ರಥಮ ಸೃಷ್ಟಿ ಕಾಂಡದಲ್ಲಿ ಭೀಷ್ಮ ಹಾಗೂ ಮುನಿ ಪುಲಸ್ಯರ ನಡುವಿನ ಸಂಭಾಷಣೆ ಇದೆ.ಇದರಲ್ಲಿ ಗ್ರಹಗಳ ಬಗ್ಗೆ,ಪುಷ್ಕರದ ಬಗ್ಗೆ ವಿವರಗಳಿವೆ. ಎರಡನೆಯ ಭೂಮಿ ಕಾಂಡದಲ್ಲಿ ಪೃಥ್ವಿಯ ಬಗ್ಗೆ ವಿವರಗಳಿವೆ. ಇದು ಆ ಕಾಲದ ಭೂಗೋಳದ ಬಗ್ಗೆ ಮಾಹಿತಿ ನೀಡುತ್ತವೆ ಎಂದು ಕೆಲವು ವಿದ್ವಾಂಸರುಗಳ ಅಭಿಪ್ರಾಯ.ಮೂರನೆಯ ಸ್ವರ್ಗ ಕಾಂಡದಲ್ಲಿ ಅಂತರಿಕ್ಷ ಹಾಗೂ ಜಂಬೂದ್ವೀಪದ ಬಗ್ಗೆ ವಿವರಗಳಿವೆ.ನಾಲ್ಕನೆಯ ಪಾತಾಳ ಕಾಂಡದಲ್ಲಿ ರಾಮ ಹಾಗೂ ಕೃಷ್ಣರ ಬಗ್ಗೆ ವಿವರಗಳಿವೆ.ಕೊನೆಯ ಉತ್ತರಕಾಂಡದಲ್ಲಿ ಶಿವ ಹಾಗೂ ಪಾರ್ವತಿಯವರ ನಡುವಿನ ಸಂಭಾಷಣೆಯ ರೂಪದಲ್ಲಿ ಧರ್ಮದ ವಿವಿಧ ವಿಷಯಗಳ ಬಗ್ಗೆ ಮಾಹಿತಿಗಳಿವೆ.[]

ಸ್ವರೂಪ

[ಬದಲಾಯಿಸಿ]

ಇದಕ್ಕೆ ಸುಪ್ರಸಿದ್ಧವಾದ ಎರಡು ಪಾಠ ಸಂಪ್ರದಾಯಗಳಿವೆ. ಅವುಗಳಲ್ಲಿ ಆದಿ, ಭೂಮಿ, ಬ್ರಹ್ಮ, ಪಾತಾಳ, ಸೃಷ್ಟಿ, ಉತ್ತರಖಂಡಗಳೆಂಬ ಆರು ಭಾಗಗಳುಳ್ಳದ್ದು ಹೆಚ್ಚು ಅರ್ವಾಚೀನ; ಸೃಷ್ಟಿ, ಭೂಮಿ, ಸ್ವರ್ಗ, ಪಾತಾಳ, ಉತ್ತರ ಖಂಡಗಳೆಂಬ ಐದು ಭಾಗಗಳಿರುವ ಬಂಗಾಲಿ ಹಸ್ತಪ್ರತಿಯ ಪಾಠಸಂಪ್ರದಾಯ ಹೆಚ್ಚು ಪ್ರಾಚೀನ. ಈ ಖಂಡಗಳೆಲ್ಲವೂ ಬಹುಶಃ ಬೇರೆ ಬೇರೆ ಕಾಲಾವಧಿಗಳಲ್ಲಿ ಬರೆದ ಪ್ರತ್ಯೇಕ ಕೃತಿಗಳು. ಅನಂತರ ಯಾರೋ ಅವೆಲ್ಲವನ್ನೂ ಸಂಕಲಿಸಿ ಪದ್ಮಪುರಾಣವೆಂಬ ಹೆಸರನ್ನು ಕೊಟ್ಟಿರಬೇಕು. ಏಕೆಂದರೆ, ಅತ್ಯಂತ ಅರ್ವಾಚೀನವೆನ್ನಬಹುದಾದ ಭಾಗವತ ಪುರಾಣದಲ್ಲಿರುವ ಕೆಲ ಅಂಶಗಳಿಗೂ ಇತ್ತೀಚಿನವೆನ್ನಿಸುವ ಅಂಶಗಳಿದರಲ್ಲಿವೆ. ಸೃಷ್ಟಿಕ್ರಮ, ಸೂರ್ಯ ವಂಶದ ರಾಜರ ಅನುಚರಿತ, ಶ್ರಾದ್ಧವಿಚಾರ, ಚಂದ್ರವಂಶದ ರಾಜರ ವೃತ್ತಾಂತ, ದೇವಾಸುರಸಮರ, ಪುಷ್ಕರ ಸರಸ್ಸಿನ ವರ್ಣನೆ, ದುರ್ಗಾರಾಧನೆಯ ವ್ರತ ಮತ್ತು ಹಬ್ಬಗಳು, ಸೃಷ್ಟಿಯ ಪುನರ್ ವಿವರಣೆ, ವಿಷ್ಣು ಅಸುರಾಂತಕನಾದುದು, ಸ್ಕಂದನ ಜನನ ಮತ್ತು ಸ್ಕಂದವಿವಾಹ, ಸೋಮಶರ್ಮ ಪ್ರಹ್ಲಾದನಾಗಿ ಹುಟ್ಟಿದ ಕತೆ; ಪವಿತ್ರಸ್ಥಳಗಳಲ್ಲದೆ ತಂದೆ, ಗುರು, ಅಥವಾ ಹೆಂಡತಿಯರು ತೀರ್ಥ ಸ್ವರೂಪವಾದುದರ ನಿದರ್ಶನ; ದೇವಲೋಕದ ವರ್ಣನೆ, ಶಕುಂತಲಾವೃತ್ತಾಂತ, ಊರ್ವಶೀ ಪುರೂರವರ ಕಥೆ, ವರ್ಣಾಶ್ರಮಧರ್ಮ, ವಿಷ್ಣುಪೂಜೆ ನಾಗಲೋಕದ ವಿಸ್ತಾರ, ರಾಮೋಪಾಖ್ಯಾನ, ಋಷ್ಯಶೃಂಗಚರಿತ ತೀರ್ಥಮಾಹಾತ್ಮ್ಯ, ರಾಧಾಕೃಷ್ಣ ಲೀಲೆ, ಸಾಲಿಗ್ರಾಮಪಾವಿತ್ರ್ಯ, ವಿಷ್ಣುವ್ರತ, ವಿಷ್ಣುನಿಯಮ, ವಿಷ್ಣೋತ್ಸವಗಳು, ಭಗವದ್ಗೀತಾಪ್ರಾಶಸ್ತ್ಯ, ವಿಷ್ಣುಸಹಸ್ರನಾಮ ಮೊದಲಾದ ವಿಷಯಗಳಲ್ಲದೆ, ಉತ್ತರ ಖಂಡದ ಬಳಿಕ ಬರುವ ಕ್ರಿಯಾಯೋಗಸಾರವೆಂಬ ಅನುಬಂಧ ವಿಷ್ಣುವಿನ ನಿಜವಾದ ಆರಾಧನೆಗೆ ಧ್ಯಾನಯೋಗಕ್ಕಿಂತ ಕರ್ಮಯೋಗವೇ ಹೆಚ್ಚು ಪ್ರಶಸ್ತವೆಂದು ಬೋಧಿಸಿದೆ.

ಗಾತ್ರ

[ಬದಲಾಯಿಸಿ]

ಇದರ ಪಂಚಖಂಡಗಳ ಒಟ್ಟು ಶ್ಲೋಕಸಂಖ್ಯೆ 48,452.

ಇದರ ಇಂದಿನ ರೂಪದ ಕಾಲ ಸು. ಕ್ರಿ.ಶ. 12ನೆಯ ಶತಮಾನವೆನ್ನಬಹುದು.


ಬಾಹ್ಯ ಸಂಪರ್ಕಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]

ಟೆಂಪ್ಲೇಟು:Resflis

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
  1. http://www.udayavani.com/tags/%E0%B2%AA%E0%B2%A6%E0%B3%8D%E0%B2%AE-%E0%B2%AA%E0%B3%81%E0%B2%B0%E0%B2%BE%E0%B2%A3