ಸಿದ್ದಾಂತ ಶಿಖಾಮಣಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಶ್ರೀ ಸಿದ್ಧಾಂತ ಶಿಖಾಮಣಿ ಇಂದ ಪುನರ್ನಿರ್ದೇಶಿತ)

ಹಿಂದೂ ಧರ್ಮಗ್ರಂಥಗಳು

Aum

ಋಗ್ವೇದ · ಯಜುರ್ವೇದ · ಸಾಮವೇದ · ಅಥರ್ವವೇದ

ಐತರೇಯ · ಬೃಹದಾರಣ್ಯಕ · ಈಶಾವಾಸ್ಯ · ತೈತ್ತಿರೀಯ · ಛಾಂದೋಗ್ಯ · ಕೇನ · ಮುಂಡಕ · ಮಾಂಡೂಕ್ಯ · ಕಠ · ಪ್ರಶ್ನ · ಶ್ವೇತಾಶ್ವತರ

ಗರುಡ · ಅಗ್ನಿ . ನಾರದ . ಪದ್ಮ . ಸ್ಕಾಂದ . ಭವಿಷ್ಯ . ಬ್ರಹ್ಮ . ಭಾಗವತ . ಬ್ರಹ್ಮವೈವರ್ತ . ಬ್ರಹ್ಮಾಂಡ . ವಾಯು . ಲಿಂಗ . ವಿಷ್ಣು . ವಾಮನ . ಮಾರ್ಕಂಡೇಯ . ವರಾಹ . ಕೂರ್ಮ . ಮತ್ಸ್ಯ

ಮಹಾಭಾರತ · ರಾಮಾಯಣ

ಭಗವದ್ಗೀತೆ · ಆಗಮ· ಶೂನ್ಯ ಸಂಪಾದನ· ಶ್ರೀ ಸಿದ್ಧಾಂತ ಶಿಖಾಮಣಿ · ವೀರಶೈವ ಪುರಾಣ · ವಿಷ್ಣು ಸಹಸ್ರನಾಮ . ಬಸವರಾಜ ವಿಜಯಂ

ಸಿದ್ದಾಂತ ಶಿಖಾಮಣಿ ವೀರಶೈವ ಮತದ ಧರ್ಮ ಗ್ರಂಥ. ಇದನ್ನು ಶಿವಯೋಗಿ ಶಿವಾಚಾರ್ಯ ರು ೮ನೆಯ ಶತಮಾನದಲ್ಲಿ ಬರೆದರು.

ಹಿನ್ನಲೆ[ಬದಲಾಯಿಸಿ]

ಶ್ರೀ ಸಿದಾಂತ ಶಿಖಾಮಣಿ ಯಲ್ಲಿ ಪ್ರತಿಪಾದಿತವಾದ ಏಕೋತ್ತರಶತಸ್ಥಲಾತ್ಮಕವಾದ ಈ ಸಿದ್ದಾಂತವು ಮೊಟ್ಟಮೊದಲು ಶಿವನು ಪಾರ್ವತಿಗೆ ಮತ್ತು ತನ್ನ ಶಿವಗಣರಿಗೆ ಉಪದೇಶಿಸಿದ್ದನು. ಶಿವನಿಂದ ಉಪದೇಶ ಪಡೆದ ಶಿವ ಪ್ರಮುಖರಾದ ರೇಣುಕ, ದಾರುಕ, ಘಂಟಾಕರ್ಣ, ಧೇನುಕರ್ಣ, ಮತ್ತು ವಿಶ್ವಕರ್ಣ ರೆಂಬ ಗಣೇಶ್ವರರು ಭೂಲೋಕದಲ್ಲಿ ಕ್ರಮಾವಾಗಿ ಅಗಸ್ತ್ಯ, ದಧೀಚಿ, ವ್ಯಾಸ, ಸಾನಂದ, ಮತ್ತು ದೂರ್ವಾಸ ರೆಂಬ ಮಹರ್ಷಿಗಳಿಗೆ ಶಿವಾದ್ವೈತ ಸಿದ್ದಾಂತವನ್ನು ಉಪದೇಶಿಸಿರುತ್ತಾರೆ. ಈ ಶಿವಗಣರಲ್ಲೊಬ್ಬರಾದ ಶ್ರೀ ರೇಣುಕಗಣೇಶ್ವರನು ಅಗಸ್ತ್ಯ ಮಹರ್ಷಿಗೆ ಉಪದೇಶಿಸಿದ ಶಿವಾದ್ವೈತ ಸಿದ್ದಂತವನ್ನೇ ಶ್ರೀ ಶಿವಯೋಗಿ ಶಿವಾಚಾರ್ಯರು ಈ ಸಿದ್ದಾಂತ ಶಿಖಾಮಣಿಯಲ್ಲಿ ರೇಣುಕಾಗಸ್ತ್ಯರ ಸಂವಾದ ರೂಪದಲ್ಲಿ ವಿವರಿಸಿದ್ದಾರೆ.

ಈ ಕೃತಿಯನ್ನು ಮೊಟ್ಟಮೊದಲಿಗೆ ಶ್ರೀ ಶಿವಯೋಗಿ ಶಿವಾಚಾರ್ಯರು ಸಂಪಾದಿಸಿಕೊಟ್ಟಿದ್ದಾರೆ. ಶ್ರೀ ರೇಣುಕಾಚಾರ್ಯರು ಮಹಾಮುನಿ ಅಗಸ್ತ್ಯರಿಗೆ ಭೋದಿಸಿದ ಸಾರವನ್ನು ಈ ಸಿದ್ದಾಂತಶಿಖಾಮಣಿ ಒಳಗೊಂಡಿದೆ. ಇದು "ರೇಣುಕಾಗಸ್ತ್ಯ ಸಂವಾದ" ರೂಪವಾಗಿದೆ.

ಸಾರ:[ಬದಲಾಯಿಸಿ]

ಈ ಗ್ರಂಥದ ಸಾರ ಶಿವಜೀವರ ಐಕ್ಯ. ವೀರಶೈವ ಸಿದ್ದಾಂತದ ಷಟ್ ಸ್ಥಲ ಗಳನ್ನು ನೂರೊಂದು ಸ್ಥಲಗಳಲ್ಲಿ ವಿಭಾಗಿಸಿ ವಿವರಿಸಲಾಗಿದೆ. ಈ ನೂರೊಂದು ಸ್ಥಲಗಳು ಸಾಧಕನ ಮನಸ್ಸಿನ ವಿಕಾಸದ ಉನ್ನತೋನ್ನತ ಸೋಪಾನಗಳಾಗಿವೆ. ಸಕಲ ಶಿವಾಗಮಗಳ ಸಾರವನ್ನೇ ಈ ಪುಸ್ತಕ ಓಳಗೊಂಡಿದೆ. ಈ ಗ್ರಂಥದಲ್ಲಿನ ಸಿದ್ದಾಂತದವು ದ್ವೈತಾದ್ವೈತಗಳ ಸಮನ್ವಯಾತ್ಮಕವಾದುದು. ಮೂಲತ ಸಂಸ್ಕೃತ ಭಾಷೆಯಲ್ಲಿರುವ ಈ ಪುಸ್ತಕವನ್ನು ಶ್ರೀ ೧೦೦೮ ಕಾಶೀ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಕನ್ನಡಿಗರಿಗೂ ಲಭ್ಯವಾಗಿಸಿದ್ದಾರೆ. ಈ ಪುಸ್ತಕ ರೇಣುಕ ಗೀತೆ ಅಂತಲೂ, ರೇಣುಕಾಗಸ್ತ್ಯ ಸಂವಾದ ಗ್ರಂಥವೆಂದೂ ಕರೆಯಲ್ಪಡುತ್ತದೆ.