ವೇದಾಂತ ದೇಶಿಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವೇದಾಂತ ದೇಶಿಕ (೧೨೬೯-೧೩೭೦) ಒಬ್ಬ ಶ್ರೀ ವೈಷ್ಣವ ಗುರುಗಳಾಗಿದ್ದರು. ಅವರು ಒಬ್ಬ ಕವಿ, ಭಕ್ತ, ತತ್ವಶಾಸ್ತ್ರಜ್ಞ ಮತ್ತು ಮಹಾಶಿಕ್ಷಕರಾಗಿದ್ದರು. ಅವರು ಶ್ರೀ ಕುರುಗೇಶರ್, ಶ್ರೀ ಕಿಡಾಂಬಿ ಆಚನ್, ಶ್ರೀ ಆತ್ರೆಯ ರಾಮಾನುಜರ್, ಶ್ರೀ ಆತ್ರೇಯ ರಂಗರಾಜಚಾರಿಯರ್ ಮತ್ತು ಆ ಕ್ರಮದಲ್ಲಿ ಅನೇಕರ ವಂಶಾವಳಿಯಲ್ಲಿ ಬರುವ ಸ್ವಾಮಿ ಶ್ರೀ ಕಿಡಾಂಬಿ ಅಪ್ಪುಲ್ಲರ್ ಯಾನೆ ಶ್ರೀ ಆತ್ರೇಯ ರಾಮಾನುಜಚಾರಿಯರ್‌ರ ಶಿಷ್ಯರಾಗಿದ್ದರು.