ಚೂಡಾಕರಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಚೂಡಾಕರಣ (ಅಕ್ಷರಶಃ, ಕೇಶ ಶಿಖೆಯ ವಿನ್ಯಾಸ) ಅಥವಾ ಮುಂಡನ ಮಗುವು ಅವನ/ಅವಳ ಮೊದಲ ಕ್ಷೌರವನ್ನು ಸ್ವೀಕರಿಸುವ ಹದಿನಾರು ಸಂಸ್ಕಾರಗಳ ಪೈಕಿ ಎಂಟನೆಯದು. ಗೃಹ್ಯ ಸೂತ್ರಗಳ ಪ್ರಕಾರ, ಈ ಸಂಸ್ಕಾರವು ಮೊದಲ ವರ್ಷದ ಕೊನೆಗೆ ಅಥವಾ ಮೂರನೇ ವರ್ಷದ ಮುಕ್ತಾಯದ ಮುಂಚೆ ನಡೆಯಬೇಕು, ಆದರೆ ನಂತರದ ವಿದ್ವಾಂಸರು ವಯಸ್ಸನ್ನು ಏಳನೇ ವರ್ಷದವರೆಗೆ ವಿಸ್ತರಿಸುತ್ತಾರೆ. ಮಗುವಿನ ಕೂದಲನ್ನು ಕತ್ತರಿಸಲಾಗುತ್ತದೆ, ಹೆಚ್ಚಾಗಿ ಕೇವಲ ಶಿಖೆ ಅಥವಾ ಚೂಡಾವನ್ನು ಬಿಡಲಾಗುತ್ತದೆ, ತಲೆಯ ಮುಡಿಯಲ್ಲಿ.

"https://kn.wikipedia.org/w/index.php?title=ಚೂಡಾಕರಣ&oldid=406481" ಇಂದ ಪಡೆಯಲ್ಪಟ್ಟಿದೆ