ಶಿಖೆ

ವಿಕಿಪೀಡಿಯ ಇಂದ
Jump to navigation Jump to search
Swastik on head.jpg

ಶಿಖೆ ಒಂದು ಹಿಂದೂ / ಭಾರತೀಯ ಮೂಲದ ಹೆಸರು. ಇದು ಒಂದು ಸಂಸ್ಕೃತ ಪದವಾಗಿದೆ. ಇದರರ್ಥ ಪುರುಷ ಸಂಪ್ರದಾಯಸ್ಥ ಹಿಂದುವಿನ ಬೋಳಿಸಿದ ತಲೆಯ ಮೇಲೆ ಅಥವಾ ಹಿಂದೆ ಬಿಡಲಾದ ಕೂದಲಿನ ಉದ್ದನೆಯ ಜುಟ್ಟು ಅಥವಾ ಚಂಡಿಕೆ. ಸಾಂಪ್ರದಾಯಿಕವಾಗಿ ಎಲ್ಲ ಹಿಂದೂಗಳು ಶಿಖೆಯನ್ನು ಹೊಂದಿರಬೇಕೆಂದು ಇತ್ತಾದರೂ, ಇಂದು ಇದನ್ನು ಮುಖ್ಯವಾಗಿ ಬ್ರಾಹ್ಮಣರು ಮತ್ತು ದೇವಸ್ಥಾನದ ಅರ್ಚಕರಲ್ಲಿ ಕಾಣಲಾಗುತ್ತದೆ.

ಸಾಂಪ್ರದಾಯಿಕವಾಗಿ, ಹಿಂದೂ ಪುರುಷರು ಮಕ್ಕಳಾಗಿದ್ದಾಗ ಚೂಡಾಕರಣ ಎಂದು ಕರೆಯಲ್ಪಡುವ ಸಂಸ್ಕಾರದಲ್ಲಿ ತಮ್ಮ ಎಲ್ಲ ಕೂದಲನ್ನು ಬೋಳಿಸಿಕೊಳ್ಳಿತ್ತಾರೆ. ನೆತ್ತಿಯ ಮೇಲೆ ಕೂದಲಿನ ಜುಟ್ಟನ್ನು ಹಾಗೆಯೇ ಬಿಡಲಾಗುತ್ತದೆ (ಸಹಸ್ರಾರ).[೧] ಭಾರತದಲ್ಲಿ ಈ ಪ್ರೌಢಾವಸ್ಥೆಗೆ ಪೂರ್ವದ ಕೇಶಶೈಲಿಯನ್ನು ಪುರುಷನ ಜೀವನದಾದ್ಯಂತ ಬೆಳೆಯಲು ಬಿಡಲಾಗುತ್ತದೆ, ಆದರೆ ಸಾಮಾನ್ಯವಾಗಿ ಕೇವಲ ಅತಿ ಸಂಪ್ರದಾಯಸ್ಥ ಧಾರ್ಮಿಕ ಪುರುಷರು ಈ ಕೇಶಶೈಲಿಯನ್ನು ಮುಂದುವರಿಸುವರು.

ಧಾರ್ಮಿಕ ಕ್ರಿಯಾವಿಧಿಗಳನ್ನು ಮಾಡಲು ಶಿಖೆಯನ್ನು ಹಿಂದೆ ಕಟ್ಟಲಾಗುತ್ತದೆ ಅಥವಾ ಗಂಟು ಹಾಕಲಾಗುತ್ತದೆ. ಕೇವಲ ಶವಸಂಸ್ಕಾರಗಳು ಮತ್ತು ಪುಣ್ಯತಿಥಿಗಳನ್ನು ಮಾಡುವಾಗ ಶಿಖೆಯನ್ನು ಬಿಚ್ಚಲಾಗುತ್ತದೆ ಅಥವಾ ಕೂದಲು ಕೆದರಿರುತ್ತದೆ. ಕೆದರಿದ ಕೂದಲನ್ನು ಅಮಂಗಳಕರವೆಂದು ಪರಿಗಣಿಸಲಾಗುತ್ತದೆ, ಮತ್ತು ಭಾರೀ ದುಃಖ ಅಥವಾ ವಿಪತ್ತಿನ ಸಮಯವನ್ನು ಪ್ರತಿನಿಧಿಸುತ್ತದೆ. ಹಿಂದೂ ಧರ್ಮಗ್ರಂಥಗಳಲ್ಲಿ, ದುಶ್ಶಾಸನನು ಅವಳೊಂದಿಗೆ ಅಸಭ್ಯವಾಗಿ ವರ್ತಿಸಿದಾಗ, ಶತ್ರುಗಳ ಮೇಲೆ ಸರಿಯಾಗಿ ಸೇಡು ತೀರಿಸಿಕೊಳ್ಳದವರೆಗೆ ತಾನು ತನ್ನ ಕೂದಲನ್ನು ಕಟ್ಟುವುದಿಲ್ಲ ಎಂದು ದ್ರೌಪದಿ ಕುರುಗಳ ಸಭೆಯಲ್ಲಿ ಪ್ರತಿಜ್ಞೆ ಮಾಡುತ್ತಾಳೆ. ಹಾಗೆಯೇ, ಚಾಣಕ್ಯನು ಅವನನ್ನು ಅವಮಾನಿಸಿದ ನಂದ ರಾಜರ ಗರ್ವಭಂಗ ಮಾಡುವವರೆಗೆ ತನ್ನ ಶಿಖೆಯನ್ನು ಕಟ್ಟದೇ ಹಾಗೇಯೇ ಬಿಡುತ್ತೇನೆ ಎಂದು ಪ್ರತಿಜ್ಞೆ ಮಾಡಿದನು ಎಂದು ಹೇಳಲಾಗಿದೆ.

ವರದಿಯ ಪ್ರಕಾರ, ಶಿಖೆಯು ಒಂದು ಆಧ್ಯಾತ್ಮಿಕ ಗುರಿಯ ಮೇಲೆ ಏಕನಿಷ್ಠ ಗಮನ, ಮತ್ತು ದೇವರ ಪ್ರತಿ ಭಕ್ತಿಯನ್ನು ಸೂಚಿಸುತ್ತದೆ. ಇದು ಸ್ವಚ್ಛತೆ, ಜೊತೆಗೆ ದೇವರಿಗೆ ವೈಯಕ್ತಿಕ ತ್ಯಾಗದ ಸೂಚಕ ಕೂಡ ಆಗಿದೆ. ಸ್ಮೃತಿ ಶಾಸ್ತ್ರಗಳ ಪ್ರಕಾರ, ಎಲ್ಲ ಹಿಂದೂಗಳು ಶಿಖೆಯನ್ನು ಬಿಡುವುದು ಕಡ್ಡಾಯವಾಗಿದೆ ಮತ್ತು ಮೊದಲ ಮೂರು ದ್ವಿಜ ವರ್ಣಗಳಾದ ಬ್ರಾಹ್ಮಣರು, ಕ್ಷತ್ರಿಯರು ಹಾಗೂ ವೈಶ್ಯರು ಯಜ್ಞೋಪವೀತವನ್ನು ಧರಿಸುವುದು ಕಡ್ಡಾಯ. ದೇವರು ಶಿಖೆಯ ಮೂಲಕ ಒಬ್ಬರನ್ನು ಸ್ವರ್ಗಕ್ಕೆ ಎಳೆಯಲು ಅವಕಾಶವಾಗುತ್ತದೆ, ಅಥವಾ ಕನಿಷ್ಠಪಕ್ಷ ಮಾಯೆಯ ಈ ಭೌತಿಕ ಪ್ರಪಂಚದಿಂದ ಎಂದು ಹೇಳಲಾಗಿದೆ. ಜಾತಿ, ಭಾಷೆ ಅಥವಾ ಪ್ರಾದೇಶಿಕ ಅಡೆತಡೆಗಳನ್ನು ಮೀರಿದ ಹಿಂದೂಗಳ ಕೆಲವು ಸಂಕೇತಗಳಲ್ಲಿ ಶಿಖೆಯು ಒಂದಾಗಿದೆ. ಸಮುದಾಯಗಳೊಳಗೆ ಶಿಖೆಯ ಶೈಲಿಯಲ್ಲಿ ಬದಲಾವಣೆಗಳು ಇದ್ದವಾದರೂ, ಅದು ಎಲ್ಲ ಪುರುಷರಿಗೆ ಕಡ್ಡಾಯವಾಗಿತ್ತು.

ಉಲ್ಲೇಖಗಳು[ಬದಲಾಯಿಸಿ]

  1. Daily Life In Ancient India, Jeannine Auboyer, ISBN 1-84212-591-5, P. 164-5
"https://kn.wikipedia.org/w/index.php?title=ಶಿಖೆ&oldid=886386" ಇಂದ ಪಡೆಯಲ್ಪಟ್ಟಿದೆ