ವಿಷಯಕ್ಕೆ ಹೋಗು

ಪುರುಷಾರ್ಥಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಾಲ್ಕು ಪುರುಷಾರ್ಥಗಳು.


ನಾಲ್ಕು ಪುರುಷಾರ್ಥಗಳ ಪೈಕಿ ಮೊದಲ ಮೂರರ ಆಚರಣೆಯ ಗುರಿಯೆ ನಾಲ್ಕನೆ ಪುರುಷಾರ್ಥವಾದ ಮೋಕ್ಷವನ್ನು ಪಡೆಯುವುದು.ಇಹಲೋಕದ ಸಂಬಂದಗಳಿಗೆ ನ್ಯಾಯಸಲ್ಲಿಸುವುದೆ ಧರ್ಮ. ಒಳ್ಳೆಯ ಮಗನಾಗಿ,ಒಳ್ಳೆಯ ತಮ್ಮ,ತಂಗಿ,ಗಂಡ,ಹೆಂಡತಿಯಾಗಿ ಎಲ್ಲಾ ಸಂಬಂದಗಳ ನಿಗದಿತ ಕರ್ತವ್ಯ ಪಾಲಿಸುವುದೆ ಧರ್ಮ.ಅಂತಹ ಧರ್ಮದ ಪಾಲನೆಗೆ ಸಂಪತ್ತು ಅತ್ಯಗತ್ಯ ಆದ್ದರಿಂದ ಹಣದ ಗಳಿಕೆ ಅನಿವಾರ್ಯ, ಅದುವೆ ಅರ್ಥ.ಜೀವನದ ಪ್ರತಿ ಹಂತದಲ್ಲಿಯೂ ವಿವಿದ ಆಸೆಗಳಿಗೆ ತೆರೆದುಕೊಳ್ಳುವ ಮನುಜ ಯವ್ವನದಲ್ಲಿ ಅತೀವವಾದ ಕಾಮವಾಂಚೆಗೆ ಸಿಲುಕುತ್ತಾನೆ. ಅದನ್ನು ಖಂಡಿತ ಪೂರೈಸಿಕೊಳ್ಳಲೆಬೇಕು ಇಲ್ಲವಾದರೆ ಆತನ ವ್ಯಕ್ತಿತ್ವ ಬೆಳೆಯಲಾರದು.ಕಾಮದಿಂದ ಮುಕ್ತಿ ಹೊಂದಲು ಅದನ್ನು ಅನುಭವಿಸುವುದೊಂದೆ ಮಾರ್ಗ ಇದುವೆ ಮುಕ್ತಿಯ ಕೀಲಿಕೈ ಸಹ ಆಗಿದೆ.