ಹಿಂದೂ ಪಂಥಗಳು
Jump to navigation
Jump to search
ಹಿಂದೂಗಳು ಒಳ್ಳೆ ಕರ್ಮ, ಭಕ್ತಿ, ಅಥವಾ ಜ್ಞಾನವನ್ನು ಆಚರಿಸಿ ಮೋಕ್ಷವನ್ನು ಪಡೆಯಬಹುದು (ಬ್ರಹ್ಮನ್‍ನೊಂದಿಗೆ ವಿಲೀನ) ಎಂದು ನಂಬುವ ಜನ. ವೈಷ್ಣವ ಪಂಥ, ಶೈವ ಪಂಥ, ಶಾಕ್ತ ಪಂಥ ಮತ್ತು ಸ್ಮಾರ್ತ ಸಂಪ್ರದಾಯ ಹಿಂದೂ ಧರ್ಮದ ಮುಖ್ಯ ಪಂಥಗಳು. ಈ ನಾಲ್ಕು ಪಂಥಗಳು ಕ್ರಿಯಾವಿಧಿಗಳು, ನಂಬಿಕೆಗಳು, ಮತ್ತು ಸಂಪ್ರದಾಯಗಳನ್ನು ಹಂಚಿಕೊಳ್ಳಬಹುದು, ಆದರೆ ಪ್ರತಿ ಪಂಥವು ಜೀವನದ ಪರಮ ಗುರಿಯಾದ ಆತ್ಮಜ್ಞಾನವನ್ನು (ಆತ್ಮ ಸಾಕ್ಷಾತ್ಕಾರ) ಹೇಗೆ ಸಾಧಿಸಬೇಕು ಎಂಬುದಕ್ಕೆ ಒಂದು ಬೇರೆ ಜೀವನಕ್ರಮವನ್ನು ಹೊಂದಿದೆ.