ಹಿಂದೂ ದೇವಾಲಯ ವಾಸ್ತುಶಿಲ್ಪ
ಗೋಚರ
(ಸ್ಥಾಪತ್ಯವೇದ ಇಂದ ಪುನರ್ನಿರ್ದೇಶಿತ)
ಭಾರತದ ಹಿಂದೂ ದೇವಾಲಯ ವಾಸ್ತುಶಿಲ್ಪವು ವಿಶ್ವಕರ್ಮ ಎಂದು ಕರೆಯಲಾಗುವ ಕುಶಲಕರ್ಮಿಗಳು ಹಾಗು ಕರಕುಶಲಿಗಳ ವಿಶಾಲ ಸಮುದಾಯಕ್ಕೆ ಸೇರಿದ ಸ್ಥಪತಿಗಳು ಮತ್ತು ಶಿಲ್ಪಿಗಳ ಸೃಜನಶೀಲತೆಯಿಂದ ವಿಕಸಿತಗೊಂಡಿದೆ. ಒಂದು ಚಿಕ್ಕ ಹಿಂದೂ ದೇವಸ್ಥಾನವು ಮೂರ್ತಿ ಅಥವಾ ದೇವತೆಯನ್ನು ಇರಿಸಲಾಗಿರುವ ಗರ್ಭಗೃಹ, ಪ್ರದಕ್ಷಿಣೆ ಸ್ಥಳ, ಸಭಾಂಗಣ, ಮತ್ತು ಕೆಲವೊಮ್ಮೆ ಹೊರಕೋಣೆ ಹಾಗು ಮುಖಮಂಟಪವನ್ನು ಹೊಂದಿರುತ್ತದೆ. ಗರ್ಭಗೃಹವು ನೆತ್ತಿಯ ಮೇಲೆ ಗೋಪುರದಂತಿರುವ ಶಿಖರವನ್ನು ಹೊಂದಿರುತ್ತದೆ.