ವಿಶ್ವಕರ್ಮ
ವಿಶ್ವಕರ್ಮನು (ಸಂಸ್ಕೃತದಲ್ಲಿ ಈ ಶಬ್ದದ ಅರ್ಥ - ಎಲ್ಲವನ್ನು ಸಾಧಿಸುವವನು, ಎಲ್ಲದರ ಕರ್ತೃ, ಎಲ್ಲವನ್ನು ಮಾಡುವವನು) ಸೃಷ್ಟಿಯ ವ್ಯಕ್ತೀಕರಣ ಮತ್ತು ಋಗ್ವೇದದ ಪ್ರಕಾರ ಸೃಷ್ಟಿ ದೇವತೆಯ ಅಮೂರ್ತ ರೂಪ. ಇವನು ವಿಶ್ವಕರ್ಮ ಜಾತಿಯವರ, ಅಭಿಯಂತರರ, ಕುಶಲಕರ್ಮಿಗಳ ಮತ್ತು ವಾಸ್ತುಶಿಲ್ಪಿಗಳ ಪ್ರಧಾನ ದೇವತೆಯಾಗಿದ್ದಾನೆ. ಇವನು "ಬ್ರಹ್ಮಾಂಡದ ಪ್ರಧಾನ ವಾಸ್ತುಶಿಲ್ಪಿ" ಮತ್ತು ಬ್ರಹ್ಮನ್ ಹಾಗೂ ಪುರುಷರ ಮೂಲ ಪರಿಕಲ್ಪನೆ ಎಂದು ನಂಬಲಾಗಿದೆ.
ವೈದಿಕ ಕಾಲದಲ್ಲಿ ಈ ಪದವು ಇಂದ್ರ, ಸೂರ್ಯ, ಮತ್ತು ಅಗ್ನಿಯರ ಗುಣವಾಚಕವಾಗಿ ಕಾಣಿಸಿಕೊಂಡಿತು. ಸೃಷ್ಟಿಕರ್ತನ ಬ್ರಹ್ಮನ ಪರಿಕಲ್ಪನೆಯನ್ನು ನಂತರ ಅಭಿವೃದ್ಧಿಪಡಿಸಲಾಯಿತು. ವೈದಿಕ ಯುಗದ ಕೊನೆಯ ಹಂತದಲ್ಲಿ ಮತ್ತು ಏಕೀಶ್ವರವಾದದ ಬೆಳವಣಿಗೆಯ ಅವಧಿಯಲ್ಲಿ, ಈ ವಾಸ್ತವಿಕ ದೇವರ ಪರಿಕಲ್ಪನೆ ಹೆಚ್ಚು ಅಮೂರ್ತವಾಯಿತು ಮತ್ತು (ಅಗೋಚರ ಸೃಷ್ಟಿ ಶಕ್ತಿಯಾದ) ವಿಶ್ವಕರ್ಮನು ಪರಬ್ರಹ್ಮನಾಗಿ ಹೊರಹೊಮ್ಮಿದನು.[೧] ಇವನನ್ನು ಹೋತಾರ, ಹುಟ್ಟದ ಸೃಷ್ಟಿಕರ್ತ ಮತ್ತು ಎಲ್ಲ ಇತರ ದೇವತೆಗಳಿಗೆ ಹೆಸರಿಡುವವನು ಎಂದು ಕಾಣಲಾಯಿತು; ಎಲ್ಲ ಸ್ವರ್ಗೀಯ, ಭೂ ಮತ್ತು ಇತರ ಬಾಹ್ಯಾಕಾಶ ಲೋಕಗಳನ್ನು ಉತ್ಪತ್ತಿ ಮಾಡುವಲ್ಲಿ ಇವನು ತ್ವಷ್ಟೃವಿಗೆ ನೆರವಾಗುತ್ತಾನೆ ಮತ್ತು ಇವನು ಅವುಗಳನ್ನು ಸಂರಕ್ಷಿಸುತ್ತಾನೆ. ಈ ಗೋಚರವಾದ ವಿಶ್ವದ ವಿಕಸನಕ್ಕಾಗಿ ತನ್ನನ್ನು ಬಲಿಕೊಟ್ಟನು (ಸರ್ವಮೇಧ), ಹಾಗಾಗಿ ಇವನು ಪುರುಷ ಅಥವಾ ನಾರಾಯಣ. ವಾಚಸ್ಪತಿಯಂತಹ ಇವನ ಗುಣಲಕ್ಷಣಗಳು ಇವನನ್ನು (ದೇವತೆಗಳ ಗುರು) ಬೃಹಸ್ಪತಿಯೊಂದಿಗೆ ಸಂಬಂಧಿಸುತ್ತವೆ. ಯಜುರ್ವೇದವು ಇವನನ್ನು ಪ್ರಜಾಪತಿಯಾಗಿ ಚಿತ್ರಿಸಿತು ಮತ್ತು ಅಥರ್ವವೇದದಲ್ಲಿ ಇವನನ್ನು ಪಶುಪತಿ ಎಂದು ಉಲ್ಲೇಖಿಸಲಾಗಿದೆ. ಶ್ವೇತಾಶ್ವತರೋಪನಿಷತ್ತು ಇವನನ್ನು ರುದ್ರಶಿವನೆಂದು ವರ್ಣಿಸಿತು, ಅಂದರೆ ಎಲ್ಲ ಜೀವಿಗಳಲ್ಲಿ ವಾಸಿಸುವವನು.
ಮೂಲಸ್ತಂಭ ಪುರಾಣದ ಒಂದು ಸೂಕ್ತದ ಪ್ರಕಾರ, ಭೂಮಿ, ಜಲ, ಬೆಳಕು, ಗಾಳಿ ಮತ್ತು ಆಕಾಶ, ತ್ರಿಮೂರ್ತಿಗಳು ಯಾವುದೂ ಇಲ್ಲದಿದ್ದಾಗ ಇವನು ತನ್ನನ್ನು ತನ್ನಿಂದಲೇ ಸೃಷ್ಟಿಸಿಕೊಂಡನು. ನಂತರ, ವೈದಿಕೋತ್ತರ ಮತ್ತು ಬ್ರಹ್ಮಣಗಳ ಅವಧಿಯಲ್ಲಿ, ವಿಶ್ವಕರ್ಮ ಪದವು ಋಷಿ ಮತ್ತು ಶಿಲ್ಪಿಯಾಗಿ ಕಾಣಿಸಿಕೊಂಡಿತು. ಯಜುರ್ವೇದದಲ್ಲಿ ಈ ಪದವು ಪಂಚಋಷಿಗಳ ಹೆಸರುಗಳಲ್ಲಿ ಒಂದಾಗಿ ಕಾಣಲಾಗುತ್ತದೆ. ಈ ಪದವು ಸೂರ್ಯನಾರಾಯಣನ ಗುಣವಾಚಕವಾಗಿದೆಯಾದರೂ, ಸೂರ್ಯನ ಏಳು ಕಿರಣಗಳಲ್ಲಿ ಒಂದಕ್ಕೆ ವಿಶ್ವಕರ್ಮನೆಂದು ಕರೆಯಲಾಗುತ್ತದೆ. ಭೌವನ ವಿಶ್ವಕರ್ಮನು (ಅಥರ್ವ/ಆಂಗಿರಸ ಗೋತ್ರ) ಒಬ್ಬ ವೈದಿಕ ಋಷಿ ಮತ್ತು ಋಗ್ವೇದದ ೧೦-೮೧,೮೨ ಸೂಕ್ತದ ಲೇಖಕನಾಗಿದ್ದನು. ಇವನು ಬಹುಶಃ ಶಿಲ್ಪಿಯಾಗಿದ್ದನು ಮತ್ತು ಪೌರಾಣಿಕವಾದ ಅಷ್ಟಮ ವಸುಗಳಲ್ಲಿ ಎಂಟನೇ ಸಂನ್ಯಾಸಿ ಪ್ರಭಾಸನ ಮಗನಾಗಿದ್ದನು. ಇವನು ಸ್ಥಾಪತ್ಯ ವೇದ / ವಾಸ್ತು ಶಾಸ್ತ್ರ ಅಥವಾ ನಾಲ್ಕನೇ ಉಪವೇದವನ್ನು ಬಹಿರಂಗಗೊಳಿಸಿದನು ಮತ್ತು ಅರವತ್ತುನಾಲ್ಕು ಕಲೆಗಳ ಅಧಿಪತಿಯಾಗಿದ್ದಾನೆ ಎಂದು ಹೇಳಲಾಗಿದೆ.
ಶ್ರೀ ಗುರುಭ್ಯೋ ನಮಃ ವಿಶ್ವಕರ್ಮೋಂ
ವಿಶ್ವಬ್ರಾಹ್ಮಣ ಜಾಗೃತಿ ತ್ವಷ್ಟೋಪನಿಷತ್ತು ವಿಶ್ವಕರ್ಮಣಃ ಪ್ರಾಣೋ ಜಾಯತೇ| ಮನಃ ಸರ್ವೇಂದ್ರಿಯಾಣ್ಯಭೂವನ್| ಖಂ ವಾಯುಃ ಜ್ಯೋತಿರಾಪಃ ಪೃಥ್ವಿ ವಿಶ್ವಸ್ಯ ಧಾರಿಣಂ| ವಿಶ್ವಕರ್ಮಣೋ ಬ್ರಹ್ಮಾ ಜಾಯತೆ| ವಿಶ್ವಕರ್ಮಣೋ ರುದ್ರೊ ಜಾಯತೆ| ವಿಶ್ವಕರ್ಮಣೋ ನಾರಾಯಣೋ ಜಾಯತೆ| ವಿಶ್ವಕರ್ಮಣಃ ಪ್ರಜಾಪತಯಃ ಪ್ರಜಾಯಂತೆ| ವಿಶ್ವಕರ್ಮಣೊ ದ್ವಾದಶಾದಾದಿತ್ಯಾ ರುದ್ರಾವ ಸರ್ವೇ ದೇವತಾಃ ಸರ್ವೇ ಋಷಯಸರ್ವಾಣಿ ಛಂಧಾಗಂಸಿ ಸರ್ವಾಣಿ ಭೂತಾನಿ ವಾರಸಮುತ್ಪದ್ಯಂತೆ ವಿಶ್ವಕರ್ಮಣಃ ಪ್ರವರ್ದಂತೆ ವಿಶ್ವಕರ್ಮಣಃ ಪ್ರಲೀಯಂತೆ |
ಓಂ ಅಥ ನಿತ್ಯ ದೇವ ಏಕೋ ವಿಶ್ವಕರ್ಮಾ
ಹೀಗೆ ಪ್ರಾಣ ಮನಸ್ಸು ಸರ್ವೇಂದ್ರಿಯಗಳು ಆಕಾಶಾದಿ ಪಂಚ ಮಹಾಭೂತಗಳು ಶಿವ ಬ್ರಹ್ಮ ಹರಿ ಇಂದ್ರ ಸೂರ್ಯಾದಿ ಸಮಸ್ತ ದೇವತೆಗಳು ದ್ವಾದಶಾದಿತ್ಯ ಏಕಾದಶ ರುದ್ರರು ಸರ್ವ ಋಷಿಗಳು ಮನುಷ್ಯಾದಿ ಸಕಲ ಪ್ರಾಣಿಗಳು ವಿಶ್ವಕರ್ಮನಿಂದಲೆ ಉತ್ಪತ್ತಿಯಾಗಿ ಆತನಿಂದ ಪ್ರವರ್ಧಮಾನಗೊಂಡು ಕೊನೆಗೆ ಆತನಲ್ಲಿಯೆ ಲೀನವಾಗುತ್ತದೆ ಎಂದು ಹೇಳದಾಗಿದೆ. ಹಾಗೆಯೆ ನಾವೆಲ್ಲರೂ ಅವನಿಂದಲೆ ಹುಟ್ಟಿ ಕೊನೆಗೆ ಅವನಲ್ಲಿಯೆ ಲೀನವಾಗುತ್ತೀವಿ ಪ್ರಕೃತಿ ಧರ್ಮ ವಿಶ್ವಕರ್ಮನ ತತ್ವ ಸಿದ್ಧಾಂತ ನಾವೆಲ್ಲರು ಅವನನ್ನ ಭಕ್ತಿಭಾವದಿಂದ ಊಪಾಸನೆ ಮಾಡಿ ಅಮೃತತ್ವವನ್ನ ಪಡೆಯುವಂತರಾಗೋಣ ಬಂಧುಗಳೆ........
ವೈಶ್ವಕರ್ಮಣ ಧರ್ಮವು ಸೃಷ್ಟಿಗೆ ಮೂಲಾಧಾರವಾದುದು. ಹೇಗೆ ವಿರಾಡ್ವಿಶ್ವಕರ್ಮನು ಸಕಲ ದೇವ ಗಣಗಳಿಗೆ ಒಡೆಯನೊ ಹಾಗೆಯೆ ಸಮಸ್ತ ಧರ್ಮಗಳಿಗೂ ಮೂಲಾಧಾರವು ವೈಶ್ವಕರ್ಮಣ ಧರ್ಮ. ವಿಶ್ವಕರ್ಮನ ಪದವು ಉಚ್ಛರಿಸುವಾಗಲೆ ಆತನ ಪರಮೋಚ್ಛ ತತ್ವವು ಗೋಚರವಾಗುತ್ತದೆ.
ವಿಶ್ವಂ ಕೃತ್ಸ್ನಂ ಕರ್ಮಕ್ರಿಯಾ ವ್ಯಾಪಾರೊ ಯಸ್ಯ ಸಃ ವಿಶ್ವಕರ್ಮ
- -ಪ್ರಪಂಚದ ಸೃಷ್ಟಿಕಾರ್ಯವನ್ನು ನಡೆಸುವವನು ಪರಬ್ರಹ್ಮ ವಿಶ್ವಕರ್ಮ ಎಂದು ಇದರ ಅರ್ಥ.
ಯಾ ಇಮಾ ವಿಶ್ವಾ ಭುವನಾನಿ ಜುಹ್ವದೃಷಿರ್ಹೋತಾ ನ್ಯಸೀದಾತ್ಪಿತಾನಃ
- ಇದು ಋಗ್ವೇದದ ವಿಶ್ವಕರ್ಮ ಸೂಕ್ತದ ಪ್ರಥಮ ಮಂತ್ರ ಅಂದರೆ ಇದರಲ್ಲಿ ಪ್ರಥಮದಲ್ಲಿ ಲಯವನ್ನೆ ವರ್ಣಿಸಲಾಗಿದೆ ಸೃಷ್ಟಿಯನ್ನ ಯಾವತ್ತು ಮೊದಲು ಲಯದಿಂದಲೆ ಪರಿಗಣಿಸಬೇಕು. ಈ ಮಂತ್ರದಲ್ಲಿ ವಿಶ್ವವು ಅಂಧಕಾರದಲ್ಲಿದ್ದು ಎಲ್ಲವು ಹೋಮಿಸಲ್ಪಟ್ಟಿದೆ *ಜುಹ್ವದೃಷಿರ್ಹೋತಾ* ಎಲ್ಲಿ ಹೋಮಿಸಲ್ಪಿಟಿದೆ ಅಂದರೆ ಅಖಿಲಾಂಡಕೋಟಿ ಬ್ರಹ್ಮಾಂಡ ನಾಯಕನಾದ ಪರಮ ಪುರುಷ ವಿರಾಡ್ವಿಶ್ವಕರ್ಮನು ನಮಗೆ ದೃಗ್ಗೋಚರವಾಗುವ ಭುವನ ಬ್ರಹ್ಮಾಂಡವನ್ನು ವಿಶ್ವ ವಿರಾಟ್ ಯಜ್ಞದ ಮೂಲಕ ತನ್ನಲ್ಲಿ ಆಹುತಿ ಮಾಡಿಕೊಂಡು ಪುನಹ ಅತೀಂದ್ರಿಯ ದ್ರಷ್ಟಾರನಾಗಿ *ಸ ಆಶಿಷಾ* ಮತ್ತೆ ಸೃಷ್ಟಿಸುವ ಅಸೆಯುಳ್ಳವನಾಗಿ ಈ ಪ್ರಪಂಚವನ್ನ ಏಕ ಮಾತ್ರ ಸಂಕಲ್ಪದಿಂದಾಗಿ ಸೃಷ್ಟಿಕಾರ್ಯವನ್ನ ನಡೆಸುತ್ತಾ ಸ್ರಷ್ಟಾರನಾಗಿದ್ದಾನೆ..............
ಪರಮಾತ್ಮ ವಿಶ್ವಕರ್ಮನನ್ನ ಅಂದರೆ ಈ ಭೂಮಿಯಲ್ಲಿ ಪ್ರಥಮವಾಗಿ ಭಗವಂತನನ್ನ ಸಾಕ್ಷಾತ್ಕರಿಸಿಕೊಂಡ ಜಗತ್ತಿನ ಮೊದಲ ವ್ಯಕ್ತಿ ಭೌವನ ವಿಶ್ವಕರ್ಮ ಋಷಿಗಳು ಅದು ನಾವು ಅವರ ಕುಲದಲ್ಲಿ ಹುಟ್ಟಿರೋದೆ ನಮ್ಮ ಭಾಗ್ಯ ಆಧಾರ ವಿಶ್ವಕರ್ಮ ಸೂಕ್ತ 【ಭಗವಂತ ನೀನು ಹೇಗಿದ್ಯ ಈ ಬ್ರಹ್ಮಾಂಡ ಹೇಗೆ ಸೃಷ್ಟಿ ಆಯ್ತು ದರುಶನ ಕೊಡು】ಎಂದು ಸಂಕಲ್ಪಿಸಿ ತಪಸ್ಸಿಗೆ ಕುಳಿತುಕೊಂಡರು ಆಗ ಅವರಿಗೆ ಕಗ್ಗತ್ತಲು ಆಯ್ತು ನಂತರ ಒಂದೊಂದೆ ಆ ಪರಮ ಪುರಷೋತ್ತಮ ವಿಶ್ವಕರ್ಮನ ಸೃಷ್ಟಿಯ ಮೂಲಕ ದರುಶನವನ್ನ ಕೊಟ್ಟನು. ಇದರಿಂದ ಬ್ರಹ್ಮರ್ಷಿ ಭೌವನರು ಭೌವನ ವಿಶ್ವಕರ್ಮ ಎಂದು ಪ್ರಖ್ಯಾತರಾದರು ಈ ತಪಸ್ಸಿನಿಂದ ದೇವಾನು ದೇವತೆಗಳು ಸಂಪ್ರೀತಗೊಂಡು ಋಷಿ ಭೌವನರಿಗೆ ಐಂದ್ರಾಭಿಶೇಕವನ್ನೆ ಮಾಡುತ್ತಾರೆ
ಟಿಪ್ಪಣಿಗಳು
[ಬದಲಾಯಿಸಿ]- ↑ Sam bahubhyam dhamathy sampatathrair dyavabhoomy janayanth Deva Eka [Rg 10 81, Indian nireeswaravadam by D.B.Chathopadyaya, p43, Hindu civilisation by Radakumar mukhargy p 89
ಉಲ್ಲೇಖಗಳು
[ಬದಲಾಯಿಸಿ]- VISHWAKARMA SAMAJ [೧]
- Achary, Subramanian Matathinkal (1995): Visvakarmajar Rigvedathil, Sawraj Printing and Publishing Company, Aluva.
- Coomaraswamy, Ananda K. (1979): Medieval Sinhalese Art, Pantheon Books Inc., New York.
- Monier-Williams (1899). [೨]
- Pattanaik, Devdutt (2009). 7 Secrets from Hindu Calendar Art. Westland, India. ISBN 978-81-89975-67-8978-81-89975-67-8.
- Indian philosophy and religion by Bibhu/Minakshi Padhi*. Mainly suthar cast prayer to lord Vishwakarma.Suthar cast which is famous and popular for interior and architectural work along with furniture decor in all over world. People of Suthar community is follower of lord Vishwakarma. Suthar community mainly live in Rajasthan, Gujarat and Maharashtra states of India. Some famous Sub castes of Suthar Community are Nagal, Kularia, Bardwa, Mandan, Chuyal, Dhamu etc. In Maharashtra 'Suthar' are called 'Sutar'. Famous business icon of interior industry Mr Narsi Kularia and Famous Vastu Expert Mr R. K. Sutar Archived 2016-11-15 ವೇಬ್ಯಾಕ್ ಮೆಷಿನ್ ನಲ್ಲಿ. (Kularia) belong to the Suthar community.