ಬ್ರಹ್ಮ (ಹಿಂದೂ ಪರಿಕಲ್ಪನೆ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

ಹಿಂದೂ ಧರ್ಮದಲ್ಲಿ, ಬ್ರಹ್ಮವು ನಿಖರವಾಗಿ ನಿರೂಪಿಸಲು ಸಾಧ್ಯವಿಲ್ಲದ ಜಗತ್ತಿನ ನಡುವೆ ಮತ್ತು ಆಚೆಗಿನ ಏಕಪ್ರಕಾರವಾದ ವಾಸ್ತವ. ಸಂಸ್ಕೃತದಲ್ಲಿ ಅದನ್ನು ಸಚ್ಚಿದಾನಂದ (ಅಸ್ತಿತ್ವ-ಪ್ರಜ್ಞೆ-ಪರಮಸುಖ) ಮತ್ತು ಅತ್ಯುನ್ನತ ವಾಸ್ತವ ಎಂದು ವಿವರಿಸಲಾಗಿದೆ. ತತ್ವಶಾಸ್ತ್ರೀಯ ಪರಂಪರೆಯ ಮೇಲೆ ಆಧರಿಸಿ ಬ್ರಹ್ಮವನ್ನು ಆತ್ಮ (ಪರಿಶುದ್ಧ ಅರಿವು - ನೈಜ ವ್ಯಕ್ತಿತ್ವದ ಗುರುತು), ವೈಯಕ್ತಿಕ (ಸಗುಣ ಬ್ರಹ್ಮ, ಗುಣಗಳುಳ್ಳ), ನಿರಾಕಾರ (ನಿರ್ಗುಣ ಬ್ರಹ್ಮ, ಗುಣಗಳಿರದ) ಮತ್ತು/ಅಥವಾ ಪರಬ್ರಹ್ಮ, ಎಂದು ಕಲ್ಪಿಸಿಕೊಳ್ಳಲಾಗಿದೆ.