ಪ್ರದಕ್ಷಿಣೆ
Jump to navigation
Jump to search
ಪ್ರದಕ್ಷಿಣೆ ಅಥವಾ ಪರಿಕ್ರಮ ಹಿಂದೂ ಅಥವಾ ಬೌದ್ಧ ವಿಷಯದಲ್ಲಿ ಪವಿತ್ರ ಸ್ಥಳಗಳ ಸುತ್ತುವಿಕೆಯನ್ನು ಸೂಚಿಸುತ್ತದೆ. ಸಂಸ್ಕೃತದಲ್ಲಿ ಪರಿಕ್ರಮ ಅಂದರೆ "ಯಾವುದನ್ನಾದರೂ ಸುತ್ತುವರೆದಿರುವ ದಾರಿ", ಮತ್ತು ಇದು ಪ್ರದಕ್ಷಿಣೆ ("ಬಲಕ್ಕೆ") ಎಂದೂ ಪರಿಚಿತವಾಗಿದೆ. ಎರಡೂ ಶಬ್ದಗಳನ್ನು ದೇವಸ್ಥಾನದಲ್ಲಿನ ಧಾರ್ಮಿಕ ದೇವತೆಗಳು, ಪವಿತ್ರ ನದಿಗಳು, ಪವಿತ್ರ ಗುಡ್ಡಗಳು ಮತ್ತು ನಿಕಟ ದೇವಾಲಯ ಸಮೂಹದ ಸಂದರ್ಭದಲ್ಲಿ ಬಳಸಲಾಗುತ್ತದೆ ಮತ್ತು ಪ್ರಾರ್ಥನೆಯ ಸಂಕೇತವಾಗಿ ಪರಿಕ್ರಮ ಮಾಡುವುದು ಹಿಂದೂ ಪೂಜೆಯ ಅವಿಭಾಜ್ಯ ಭಾಗವಾಗಿದೆ.