ವಾನಪ್ರಸ್ಥ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಾನಪ್ರಸ್ಥನು ಭಾಗಶಃ ಲೌಕಿಕ ಬಯಕೆಗಳನ್ನು ತ್ಯಜಿಸಿದ ನಂತರ ವಿರಕ್ತನಾಗಿ ವನದಲ್ಲಿ ಇರುತ್ತಿರುವ ವ್ಯಕ್ತಿ. ವಾನಪ್ರಸ್ಥಾಶ್ರಮ ವೈದಿಕ ಆಶ್ರಮ ವ್ಯವಸ್ಥೆಯಲ್ಲಿ ಜೀವನದ ಮೂರನೇ ಹಂತ, ಮತ್ತು ಇದರಲ್ಲಿ ಒಬ್ಬ ವ್ಯಕ್ತಿಯು ಕ್ರಮೇಣ ಪ್ರಪಂಚದಿಂದ ನಿಸ್ಸಂಗಿಯಾಗುತ್ತಾನೆ. ಈ ಹಂತವು ಎರಡನೇ ಆಶ್ರಮ ಹಂತವಾದ ಗೃಹಸ್ಥದಲ್ಲಿ ಮನೆಯ ಕರ್ತವ್ಯಗಳ ಮುಕ್ತಾಯದ ನಂತರ ಬರುತ್ತದೆ, ಆದರೆ ಇದರಲ್ಲಿ ಮೊದಲ ಹಂತವಾದ ಬ್ರಹ್ಮಚರ್ಯದಿಂದ ನೇರವಾಗಿ ಪ್ರವೇಶಿಸಬಹುದು.