ತಂತ್ರಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ತಂತ್ರಗಳು ಹಿಂದೂ ಹಾಗು ಬೌದ್ಧ ತತ್ವಶಾಸ್ತ್ರದಲ್ಲಿ ಮೂಲವಿರುವ ಹಲವಾರು ರಹಸ್ಯ ಸಂಪ್ರದಾಯಗಳಲ್ಲಿ ಯಾವುದಕ್ಕಾದರೂ ಸಂಬಂಧಿಸಿದ ಅನೇಕ ಮತ್ತು ವೈವಿಧ್ಯಮಯ ಧರ್ಮಗ್ರಂಥಗಳನ್ನು ಸೂಚಿಸುತ್ತವೆ. ಹೊರಗಿನಿಂದ ಬೌದ್ಧ ಮತ್ತು ಹಿಂದೂ ತಂತ್ರ ಅನೇಕ ಸಾಮ್ಯತೆಗಳನ್ನು ಹೊಂದಿವೆಯಾದರೂ, ಅವು ಕೆಲವು ಸ್ಪಷ್ಟ ಭಿನ್ನತೆಗಳನ್ನು ಹೊಂದಿವೆ. ತಂತ್ರ ಶಬ್ದ ಎರಡು ಸಂಸ್ಕೃತ ಶಬ್ದಗಳಾದ ತನೋತಿ (ವಿಸ್ತರಣೆ) ಮತ್ತು ತ್ರಯಾತಿಯ (ವಿಮೋಚನೆ) ಸಂಧಿಯಿಂದಾಗಿದೆ, ಇದರರ್ಥ ಅದರ ಸಮಗ್ರ ರೂಪದಿಂದ ಶಕ್ತಿಯ ವಿಮೋಚನೆ ಮತ್ತು ಪ್ರಜ್ಞೆಯ ವಿಸ್ತರಣೆ.