ಮಧುಸೂದನ ಸರಸ್ವತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
ಮಧುಸೂದನ ಸರಸ್ವತಿ
ಜನನಕ್ರಿ.ಶ.೧೫೪೦
ಬಂಗಾಳ, ಭಾರತ
ಮರಣಕ್ರಿ.ಶ ೧೬೪೦
ಬಂಗಾಳ,ಭಾರತ
ತತ್ವಶಾಸ್ತ್ರಅದ್ವೈತ ವೇದಾಂತ
ತತ್ವಶಾಸ್ತ್ರಜ್ಞ

ಮಧುಸೂದನ ಸರಸ್ವತಿ (ಸುಮಾರು ೧೫೪೦–೧೬೪೦) ಅದ್ವೈತ ವೇದಾಂತ ಸಂಪ್ರದಾಯದಲ್ಲಿ ಒಬ್ಬ ಭಾರತೀಯ ತತ್ವಶಾಸ್ತ್ರಜ್ಞನಾಗಿದ್ದನು. ಅವನು ವಿಶ್ವೇಶ್ವರ ಸರಸ್ವತಿ ಮತ್ತು ಮಾಧವ ಸರಸ್ವತಿಯರ ಶಿಷ್ಯನಾಗಿದ್ದನು, ಮತ್ತು ಮಹಾ ದ್ವೈತ-ಅದ್ವೈತ ಚರ್ಚೆಯ ಚಾರಿತ್ರಿಕ ದಾಖಲೆಗಳಲ್ಲಿ ಅತ್ಯಂತ ಪ್ರಸಿದ್ಧ ಹೆಸರಾಗಿದ್ದಾನೆ. ಅವನ ಅದ್ವೈತಸಿದ್ಧಿ ಒಂದು ಶ್ರೇಷ್ಠ ಕೃತಿಯಾಗಿದೆ, ಮತ್ತು ಆನಂದತೀರ್ಥನ ದ್ವೈತ ಪರಂಪರೆಯು ಎತ್ತಿದ ಎಲ್ಲ ತಾರ್ಕಿಕ ಸಮಸ್ಯೆಗಳಿಗೆ ಮಧುಸೂದನನು ಯೋಗ್ಯವಾಗಿ ಉತ್ತರಿಸಿದ್ದಾನೆ ಎಂದು ಬಹುತೇಕ ಅದ್ವೈತ ಶಿಕ್ಷಕರು ಸಮರ್ಥಿಸುತ್ತಾರೆ.ಇವರ ಜನ್ಮಸ್ಥಳ ಬಂಗಾಲ.ಇವರ ಮೂಲ ಹೆಸರು ಕಮಲನಯನ.ಇವರು ಸುಮಾರು ೨೧ ಪುಸ್ತಕಗಳನ್ನು ಬರೆದಿರುವರು.